೭೧. ಮಿಖೈಲ್ ಎಂ. ಶೊಮಕರ್

ಮಿಖೈಲ್ ರವರು ದಕ್ಷಿಣ ಭಾರದ ಮತ್ತು South East Asia ಗಳ ಕುರಿತು ೧೮೯೯ರಲ್ಲಿ ಕೃತಿಯೊಂದನ್ನು ಹೊರತಂದರು. ಇದೊಂದು ಪ್ರವಾಸ ವರದಿಯಾಗಿದ್ದು ಪ್ರತಿಯೊಂದು ಪ್ರದೇಶಗಳ ವೈಶಿಷ್ಟ್ಯಗಳ ಬಗ್ಗೆ ತಿಳಿಸಲಾಗಿದೆ. ಕೃತಿಯ ಹೆಸರು The Ancient Empire of Southern India And South East Asia ಎಂದಾಗಿದೆ.

ಕೃತಿಯಲ್ಲಿ ಪ್ರತಿಯೊಂದು ಪ್ರದೇಶದ ವಿವರಣೆ ಕಂಡುಬರುತ್ತದೆ. ರಾಮೇಶ್ವರಮ್ ಸ್ಥಳದ ಮಂದಿರ ದಂತಕಥೆಗಳು, ಪವಿತ್ರ ತೀರ್ಥಕುಂಡಗಳು, ಮೆರವಣೆಗೆ, ಮದುರೈನ ಶಿವನ ಉತ್ಸವ, ಗೋಪುರಗಳು, ಗಿಳಿಗಳು, ದಂತಕಥೆಗಳು, ಕಾಲರಾ ರೋಗ ಹರಡದಂತೆ ಪವಿತ್ರ ತೀರ್ಥದ ನಿರ್ವಹಣೆ ಮತ್ತು ತಂಜಾವೂರಿನಲ್ಲಿ ರೈತರು ಆನೆಗಳು, ವಾದ್ಯರಾರರು, ಶಿಲ್ಪಕಲೆ ಕಲ್ಲಿನ ನಂದಿ ವಿಗ್ರಹ ಇತ್ಯಾದಿಗಳನ್ನು ವಿವರಿಸಲಾಗಿದೆ. ಮದ್ರಾಸನಲ್ಲಿ ಬಂದರು, ಸರ್ಪಸಂತತಿ ಪ್ಲೇಗ್ ತಪಾಸಣೆ ಹಾಗೂ ಬಂಗಾಳಕೊಲ್ಲಿಯಲ್ಲಿ ಹಡಗಿನ ಜೀವನ, ಕಾಲರಾ, ಬರ್ಮಾದಲ್ಲಿನ ದೇವಸ್ವಾನ ರಂಗೊನ್ ಕ್ಲಬ್‌ಗಳು, ಉದ್ಯಾನವನಗಳು, ಆನೆಗಳ ಉಪಯೋಗ, ಚೈನಾದ ಜೊತೆ ವಾಣಿಜ್ಯ ಸಂಬಂಧ, ಬರ್ಮಾ ಮಹಿಳೆ, ಅವರ ವೇಷಭೂಷಣ, ರೂಢಿಗಳ ಅನವಶ್ಯಕ ಯಾತನೆಗಳು, ಹಚ್ಚೆ ಹಾಕಿಸುವ ಸಂಪ್ರದಾಯ, ಅಂಧಶ್ರದ್ಧೆಗಳು, ಮೊದಲಾದ ವಿವರಗಳು ಹಾಗೂ ಫಿಲಿಫೈನ್ಸ್‌ನ ಬುಡಕಟ್ಟುಗಳ ವಿವರಗಳು ಇಲ್ಲಿ ಒದಗಿಸಲಾಗಿದೆ.

೭೨. ಮುಂಡಸೇರಿ ಜೋಸೆಫ್

ಎಂ. ಜೋಸೆಫ್ ಮಲೆಯಾಳಮ್ ಭಾಷೆಯ ಪ್ರಸಿದ್ಧ ಬರಹಗಾರರು ಮತ್ತು ವಿಮರ್ಶಕರು, ಪಾಶ್ವಾಶ್ಯ ಆಧುನಿಕ ಸಂವೇದನೆಗಳಿಗೆ ಮಲಯಾಳಮ್ ಸಾಹಿತ್ಯಕ್ಕೆ ಪರಿಚಯಿಸಿದವರು. ಕೇರಳದ ಪ್ರಗತಿಪರ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ ಜೀವನದ ಅಳವಾದ ಅನುಭವಗಳು ಪ್ರಭುದ್ವ ಸಾಹಿತ್ಯ ರಚನೆಗೆ ಕಾರಣಿಭೂತವಾಗುತ್ತವೆ. ಮತ್ತು ಅನುಭವಗಳು ಇಡೀ ಸಮಾಜ ವ್ಯವಸ್ಥೆಯ ಸಾಕ್ಷಿಪ್ರಜ್ಞೆಗೆ ಅನುಗುಣವಾಗಿರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.Vayanasalayil ಎಂಬುದು ಪ್ರಾಯೋಗಿಕ ವಿಮರ್ಶೆ ಕೃತಿಯೆನಿಸಿದೆ.

೭೩. ಮೆಕೆಝಿ (೧೭೫೪೧೮೨೧)

ಮೆಕೆಂಝಿ ಅವರು ಭಾರತದ ಸರ್ವೆಯರ್‌ಜನರಲ್ ಆಗಿದ್ದರು. ಪ್ರಾಚ್ಯ ವಿಷಯತಜ್ಞರಾಗಿದ್ದರು. ಸರ್ವೆಯರ್‌ ಆಗಿದ್ದು ಭಾರತೀಯ ಜನಜೀವನ ಸಂಸ್ಕೃತಿಯನ್ನು ಕ್ಷೇತ್ರಾಧ್ಯಯನದಿಂದ ಆಳವಾಗಿ ಅಧ್ಯಯನ ಸಂಶೋಧನೆ ಮಾಡಿದರು. ಇವರ ಅಧ್ಯಯನಗಳು ಏಶಿಯನ್ ಅಧ್ಯಯನಕ್ಕೆ ಕಾಣಿಕೆ ನೀಡಿದೆ.

೧೭೫೪ರಲ್ಲಿ ಸ್ಕಾಟಲಂಡಿನ ಸ್ಟೊರ್ನೊವೇ (Stornoway) ನಲ್ಲಿ ಜನಿಸಿದರು. ತಮ್ಮ ೨೮ನೇ ವಯಸ್ಸಿಗೆ ಈಸ್ಟ್‌‌ ಇಂಡಿಯಾ ಕಂಪನಿಯಲ್ಲಿ ಅಧಿಕಾರಿಯಾಗಿ ಸೇರಿದರು. ೧೭೯೯ರ ಮೈಸೂರು ಯುದ್ಧದಲ್ಲಿ ಭಾಗಿಯಾಗಿದ್ದರು. ೧೮೦೦ ರಿಂದ ೧೮೧೦ ರವರೆಗೆ ಮೈಸೂರು ಸರ್ವೇಕಾರ್ಯದಲ್ಲಿ ನಿರತರಾಗಿ ನಕ್ಷೆ ಪ್ರಕೃತಿಯ ಇತಿಹಾಸ, ಭೂಗೋಳ ವಾಸ್ತು, ರೂಢಿ ಸಂಪ್ರದಾಯ, ಜನಪದ ಕಥೆಗಳನ್ನು ಸಂಗ್ರಹಿಸಿದರು ಭಾರತದ ಗಣಿತ ಮತ್ತು ಲೊಗ್ಯಾರಿಥಮ್ ಆಸಕ್ತಿಯಿಂದ ಅಧ್ಯಯನ ಮಾಡಿದರು.

ಅದರಲ್ಲೂ ದಕ್ಷಿಣ ಭಾರತದ ಶಾಸನ, ಹಸ್ತಪ್ರತಿ ಐತಿಹ್ಯ ಸ್ಥಳ ಪುರಾಣಗಳನ್ನು ಸಂಗ್ರಹಿಸಿದರು. ಮೈಸೂರಿನ ಸರ್ವೇಕಾಲದಲ್ಲಿ ೧೨೦೦ ಶಿಲಾಲೇಖ ಮತ್ತು ಶಾಸನಗಳನ್ನು ೬೦೦ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಮೊದಲ ಬಾರಿಗೆ ಜೈನ ಕಾವ್ಯ, ಶಾಸನಗಳ ಮೂಲಕ ಜೈನ ಮತ್ತು ಭೌದ್ಧ ಧರ್ಮಗಳು ಬೇರೆ ಎಂಬುದನ್ನು ತಿಳಿಸಿದರು. ದೇವಚಂದ್ರನ ರಾಜಾವಳಿ ಕಥೆಗೆ ಮೂಲಕಾರಣ ಇವರೇ. ಕರ್ನಾಟಕದ ಕೈಫಿಯತ್ತುಗಳು ಮೆಕೆಂಝಿಯ ಅತ್ಯುನ್ನತ ಕೃತಿಯಾಗಿದೆ.

ಅಯ್ಯರ್‍ರವರು ೧೮೫೫ರಲ್ಲಿ ಕುಂಬಕೋಣಂ ಸಮೀಪ ಸೂರಿಯಾಮೂಲೈ (Suriaymoolai) ನಲ್ಲಿ ಜನಿಸಿದರು. ಹಳ್ಳಿಯಲ್ಲಿಯೇ ಬಾಲ್ಯದ ಶಿಕ್ಷಣ ತಮಿಳಿನಲ್ಲಿಯೇ ನಡೆಯಿತು. ಕುಂಭಕೋಣಂನ ಸರಕಾರಿ ಕಾಲೇಜಿನಲ್ಲಿ ತಮಿಳು ವಿಭಾಗದ ಮುಖ್ಯಸ್ಥರಾಗಿದ್ದ ತ್ಯಾಗರಾಜ್ ಚೆಟ್ಟಯಾರ್ ನಂತರ ೧೮೮೦ರಲ್ಲಿ ಆ ಸ್ಥಾನಕ್ಕೆ ಬಂದರು. ರಾಮಸ್ವಾಮಿ ಮೊದಲಿಯಾರ್‌ಅವರ ಭೇಟಿ ಅವರಿಗೆ ಪ್ರಾಚೀನ ತಮಿಳು ಅಭಿಜಾತ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆಗೆ ಪ್ರೇರೇಪಿಸಿತು. ಅಲ್ಲಿಯ ತನಕ ಕೇವಲ ಮಧ್ಯಯುಗೀನ ಕಾಲದ ತಮಿಳು ಸಾಹಿತ್ಯದಲ್ಲಿ ಅವರು ತಲ್ಲೀನರಾಗಿದ್ದರು.

Civaka Cinitamani ಎಂಬ ಜೈನಕೃತಿಯ ಕುರಿತು ಸಂಶಯಗಳನ್ನು ನಿವಾರಿಸಲು ಕುಂಭಕೋಣಂ ಜೈನರ ಮನೆಗೆ ಹೋಗಿ ಬಂದರು. ಜೈನಕಾವ್ಯಗಳ ಹಸ್ತಪ್ರತಿ ಸಂಗ್ರಹಿಸಿದರು. ಎಸ್. ವಿ ದಾಮೋದರನ್ ಪಿಳ್ಳೈ ಅವರ ಜೊತೆ ಸತತವಾಗಿ ಹಳೆಯ ಸಾಹಿತ್ಯ ಕೃತಿಗಳ ಸಂಪಾದನೆಯ ಕಾರ್ಯ, ಮೂಲ ಪ್ರತಿಗಳ ಸಂಗ್ರಹಣಾ ಕಾರ್ಯ ನಿರಂತರ ನಡೆಯಿತು ಪ್ರತಿ ಹಳ್ಳಿ ಹಳ್ಳಿಗೆ ತಿರುಗಿದರು. ಹೀಗಾಗಿ ಪೆಟ್ಟಿಗೆ, ಹೊತ್ತಿಗೆ, ಕೋಣೆಗಳಲ್ಲಿ ಕೊಳೆಯುತ್ತಿದ್ದ ಹಸ್ತಪ್ರತಿಗಳು ಬೆಳಕು ಕಂಡವು. ಅವುಗಳಲ್ಲಿ Cilappatikaram Manimekalai Purananuru ಕೃತಿಗಳು ತಮಿಳರಿಗೆ ಪ್ರೀತಿ ಪಾತ್ರವಾದವು. ಇವೆಲ್ಲ ಸಂಗಮ್ ಕಾಲದ ತಮಿಳರ ಜನಜೀವನದ ಪಡಿಯಚ್ಚುಗಳಾಗಿದ್ದವು. ಇವು ವಿದ್ವಾಂಸರಿಗೆ ಆಕರ ಗ್ರಂಥಗಳಾದವು. ಇವರ ಇನ್ನೊಂದು ಕೊಡುಗೆ ಎಂಬ ತಮಿಳು ಸಂಗೀತ ಶೋಧ, ಶೋಧನದ ನಂತರ ತಮಿಳು ಸಂಗೀತ ಲಯ ದೊರೆತು ಅದರಲ್ಲಿ ಸಂಶೋಧನ ಪ್ರಾರಂಭವಾಯಿತು.

೭೫. ರಾಮಸ್ವಾಮಿ ನಾಯ್ಕರ್. .ವಿ. (೧೮೭೯೧೯೭೩)

ರಾಮಸ್ವಾಮಿಯವರು ಪೆರಿಯಾರ್‌ಎಂದು ಪ್ರಸಿದ್ಧರಾಗಿದ್ದಾರೆ. ಸಾಮಾಜಿಕ ತಾರತಮ್ಯತೆಯನ್ನು ತೊಡೆದು ಹಾಕಲು ಸಾಕಷ್ಟು ಶ್ರಮಿಸಿದವರು. ಪ್ರಖರ ವಿಚಾರವಾದಿ ಇವರು ಕಲಿತವರ ಹಕ್ಕುಗಳಿಗಾಗಿ ಹೋರಾಡಿದರು. ಶ್ರೇಣಿಕೃತ ಸಮಾಜವನ್ನು ವಿರೋಧಿಸಿದರು. ತಮ್ಮದೇ ಆದ ದ್ರಾವಿಡ ಕಳಗಮ್ ಪಕ್ಷ ಸ್ಥಾಪಿಸಿದರು. ಈ ಸಂಘಟನೆಯ ಮೂಲಕ ದ್ರಾವಿಡಿಯನ್ ಸಂಸ್ಕೃತಿಗೆ ತನ್ನದೇ ಆದ ಸ್ವತಂತ್ರತೆ ಇದೇ ಎಂಬುದನ್ನು ಸಾಧಿಸಿದರು. ಆರ್ಯರ ಕಾಲದಿಂದಲೂ ದ್ರಾವಿಡ ಸಂಸ್ಕೃತಿಯನ್ನು ನಾಶ ಮಾಡಲು ಮಾಡಿದ ಸಾಹಿತ್ಯಿಕ ದಾಖಲೆ ಎನ್ನುತ್ತಾರೆ. ಹಾಗಾಗಿ ಹಿಂದೂ ದೇವತೆಗಳನ್ನು ಬಹಿಷ್ಕರಿಸಲು ಚಳುವಳಿ ನಡೆಸಿದರು. ಚಳುವಳಿಯ ಮೂಲಕ ದ್ರಾವಿಡ ಪರಿಕಲ್ಪನೆಯಲ್ಲು ವಿಸ್ತರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

೭೬. ರಾಘವ ಆಯ್ಯಂಗಾರ್‌ .ಆರ್‍ (೧೮೭೦೧೯೪೬)

ಪ್ರಾಚೀನ ತಮಿಳು ಸಾಹಿತ್ಯದ ವಿಮರ್ಶಕರಾಗಿ ವ್ಯಾಖ್ಯಾನಕಾರರಾಗಿ ರಾಘವ ಅಯ್ಯಂಗಾರರವರು ಪ್ರಸಿದ್ಧರು. ತಮಿಳು ಹಸ್ತಪ್ರತಿಗಳನ್ನು ಶೋಧಿಸಿದವರು. Aintinai, Aimpatu, Akonanaru ಮತ್ತು Matkollayiram ಎಂಬ ಹಸ್ತಪ್ರತಿಗಳನ್ನುಶೋಧಿಸಿದರು. ತೊಲಕ್ಯಾಪ್ಪಿಯ ಮತ್ತು ಕುರುಂತೊಗೈಗಳನ್ನು ವ್ಯಾಖ್ಯಾನ ಸಹಿತ ಸಂಪಾದಿಸಿದರು, ತಮಿಳು ಭಾಷೆ ಸಾಹಿತ್ಯ, ಇತಿಹಾಸಕ್ಕೆ ಸಂಬಂಧಿಸಿದಂತೆ ಕೆಲವು ಕೃತಿಗಳನ್ನು ರಚಿಸಿದ್ದಾರೆ. ೧೯೨೪ರಲ್ಲಿ Setunatam Tamilam, 1932ರಲ್ಲಿ Vanci Manakar, 1933 ರಲ್ಲಿ Nalligal Palmai Melliyalarkal, Tamil Varalara ಇತ್ಯಾದಿ.

೭೭. ರಾಮಚಂದ್ರ ತಿರುಮಲ (೧೯೧೨)

ತೆಲಗು ಭಾಷಾ ವಿದ್ವಾಂಸರಾಗಿದ್ದರು. ಭಾಷಾಂತರಕಾರಾಗಿ ಪತ್ರಕರ್ತರಾಗಿ ಭಾಷಾತಜ್ಞರಾಗಿ, ಪ್ರಸಿದ್ಧರಾಗಿದ್ದಾರೆ, ಅವರಿಗೆ ತೆಲುಗಿನ ಜೊತೆಗೆ ಪ್ರಾಕೃತ, ತಮಿಳು, ಕನ್ನಡ ಹಿಂದಿ, ಸಂಸ್ಕೃತ ಭಾಷೆಗಳ ಬಗೆಗೆ ಅಪಾರವಾದ ಜ್ಞಾನವಿತ್ತು. ೧೯೫೭ರಲ್ಲಿ ತೆಲುಗು ಲಿಪಿಯ ಮೂಲ ಮತ್ತು ವಿಕಾಸವನ್ನು ಕುರಿತು ಕೃತಿಯನ್ನು ಹಾಗೂ ಗಾಥಾ ಸಪ್ತ ಶತಿ ಎಂಬ ಪ್ರಾಕೃತಿ ಕೃತಿಯಲ್ಲಿ ಬಂದಂಥಹ ತೆಲುಗು ಪದಗಳ ಬಗ್ಗೆ ಗಾಥಾ ಸಪ್ತಶತಿ ತೆಲುಗು ಪದಾಯಿ ಹಾಗೂ ೧೯೫೯ರಲ್ಲಿ ನುಡಿನಾನ್ನುಡಿ ದ್ರಾವಿಡಿಯನ್ ಭಾಷಾಶಾಸ್ತ್ರವನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ.

೭೮. ರಾಮಕೃಷ್ಣ ಕ.ವಿ. ಮನವಳ್ಳಿ (೧೮೮೬೧೯೫೭)

ರಾಮಕೃಷ್ಣ ಮನವಳ್ಳಿಯವರು ಹಸ್ತಪ್ರತಿ ಶಾಸ್ತ್ರಜ್ಞರಾಗಿದ್ದರು. ದಕ್ಷಿಣ ಭಾರತದಲ್ಲೆಲ್ಲಾ ತಿರುಗಿ ತೆಲುಗು, ಸಂಸ್ಕೃತ ಹಸ್ತಪ್ರತಿ, ಶಾಸನಗಳನ್ನು ಸಂಪಾದಿಸಿದರು, ದಕ್ಷಿಣ ಭಾರತದ ಮಾಲೆಯಲ್ಲಿ ಇವುಗಳನ್ನು ಪ್ರಕಟಿಸಿದರು. ಪ್ರಾಚೀನ ಕೃತಿಗಳ ಕುರಿತಾಗಿ ೪ ಸಂಪುಟಗಳನ್ನು ಪ್ರಕಟಿಸಿದರು. ಅಲ್ಲದೇ ವಿಸ್ಮೃತ ಕವುಲು ಕೃತಿಯಲ್ಲಿ ಭೈರವ ಕವಿಯ ಶೃಂಗಾರ ಮಹಾತ್ಮಯಮು, ಶ್ರೀನಾಥನ ಕೃದಭಿರಾಮಮು, ನೆನ್ನೆ ಚೋಡನ ಕುಮಾರ ಸಂಭವಮ್, ಭದ್ರಭೂಪಾಲನ ನೀತಿಶಾಸ್ತ್ರ ಮುಕ್ತಾವಳಿ, ಫಣಿಭಟ್ಟಿನ ಪರತತ್ವರಸಾಯನಮು, ತಿಪ್ಪರಾಜುವಿನ ತ್ರಿಪುರಾಂತಕೊಧರಾನಮು ಮತ್ತು ತಿಮ್ಮಭೂಪಾಲನ ಅನರ್ಘರಾಘವಮು ಎಂಬ ಪ್ರಾಚೀನ ಕೃತಿಗಳನ್ನು ಸಂಪಾದಿಸಿದರು, ಅವರಿಗೆ ಸಂಸ್ಕೃತ ತೆಲುಗು ಸೇರಿದರಂತೆ ೧೮ ಭಾಷೆಗಳ ಪರಿಣತಿ ಇತ್ತು.

೭೯. ರಾಮಪರತ್ತು ವಾರಿಯಾರ್‍ (೧೭೦೩೧೭೫೩)

ರಾಮಪರಿತ್ತು ವಾರಿಯರ್‌ಅವರು ಕುಚೇಲ ವೃತ್ತಮ್ ವಂಚಿಪಾಟ್ ಎಂಬ ಕಾವ್ಯ ರಚಿಸಿದರು, ವಂಚಿಪಾಟ್ ಎಂದರೆ ದೋಣಿ ಹಾಡು ಇದೊಂದು ಜನಪದ ಮೂಲದ್ದು ಇದು ದ್ರಾವಿಡಿಯನ್ ವೃತ್ತದಲ್ಲಿ ಬರೆದಿರುವುದು ವಿಶೇಷವಾಗಿದೆ. ಕೃಷ್ಣ ಕುಚೇಲನ ಮೈತ್ರಿ, ಕುಚೇಲನ ಭಕ್ತಿ ದಾರಿದ್ರ‍್ಯ, ಕೃಷ್ಣನ ಭೇಟಿ ಇತ್ಯಾದಿಗಳನ್ನು ಮಹಾರಾಜ ಮಾರ್ತಾಂಡ ವರ್ಮನನ್ನು ಅನುಲಕ್ಷಿಸಿ ಕಾವ್ಯವನ್ನು ರಚಿಸಿದ್ದಾರೆ. ವಾರಿಯರ್‌ ಗೀತಗೋವಿಂದ ಕೃತಿಯನ್ನು ಮಲಯಾಳಂಗೆ ಅನುವಾದಿಸಿದ್ದಾರೆ.

೮೦. ರಾಬರ್ಟ್ ಬಿಷಪ್ ಕಾಲ್ಡವೆಲ್ (೧೮೧೪೧೮೯೧)

ರಾಬರ್ಟ್ ಕಾಲ್ಡ್‌‌ವೆಲ್‌ ದ್ರಾವಿಡ ಭಾಷಾ ವಿಜ್ಞಾನದ ಪಿತಾಮಹಾರೆನಿಸಿದ್ದಾರೆ. ಒಬ್ಬ ಮಿಶನರಿಯಾಗಿ ಅವರ ಕರ್ತೃತ್ವ ಶಕ್ತಿ ಅಸಾಧ್ಯ ಇಂಡೋ-ಯುರೋಪಿಯನ್ ಆಗಲೀ ಭಾಷಾವಿಜ್ಞಾನವಾಗಲೀ ಹೆಚ್ಚು ವ್ಯಾಪಕತೆಯನ್ನು ಹೊಂದಿರದ ಕಾಲಕ್ಕೆ ದಕ್ಷಿಣ ಭಾರತದ ಭಾಷಕುಟುಂಬದ ತೌಲನಿಕ ವ್ಯಾಕರಣವೆಂಬ ಬೃಹತ್‌ ಗ್ರಂಥವನ್ನು ರಚಿಸಿದರು. ದ್ರಾವಿಡ ಚಿಂತನೆ ಎಂದರೆ ಮೊದಲು ನೆನಪಾಗುವದು ಕಾಲ್ಡ್ ವೆಲ್ ಅವರ ಹೆಸರು.

ಕಾಲ್ಡ್‌ವೆಲ್‌ ಅವರು ಉತ್ತರ ಐರ್‍ಲೆಂಡಿನಲ್ಲಿ ಮೇ ೭, ೧೮೧೪ರಲ್ಲಿ ಹುಟ್ಟಿದರು ಗ್ಲಾಸ್ಗೊ ವಿಶ್ವವಿದ್ಯಾಲಯದಲ್ಲಿ ೧೮೩೮ರಲ್ಲಿ ವಿದ್ಯಾಭಾಸ ನಡೆಸಿದರು. ಗ್ರೀಕ್ ಲ್ಯಾಟಿನ್ ಭಾಷೆಗಳನ್ನು ಕರಗತ ಮಾಡಿಕೊಂಡು ೧೮೩೮ರಲ್ಲಿ ಭಾರತಕ್ಕೆ ಬಂದರು ಮದರಾಸಿನಲ್ಲಿಯೇ ನೆಲೆಸಿದರು. ಇವರು ತಮಿಳು ಭಾಷೆಯನ್ನು ಸಂಸ್ಕೃತಿಯನ್ನು ಚೆನ್ನಾಗಿ ಅರ್ಥೈಸಿ ಕೊಂಡರು. ದೀರ್ಘ ಕಾಲ ದ್ರಾವಿಡ ಭಾಷೆಗಳ ಕುರಿತಾಗಿ ಅಧ್ಯಯನ ಮಾಡಿದ ಇವರು ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣ ಎಂಬ ಗ್ರಂಥವನ್ನು ೧೮೫೬ ರಲ್ಲಿ ಪ್ರಕಟಿಸಿದರು. ತಮಿಳರನ್ನು ಪೂರ್ವದ ಗ್ರೀಕರೆಂದು ಕರೆದರು. ಭಾರತಕ್ಕೆ ಬರುವಾಗಲೇ ಹಡಗಿನಲ್ಲಿ C.P. Brown ಅವರಿಂದ ತೆಲುಗು ಮತ್ತು ಸಂಸ್ಕೃತ ಭಾಷೆಗಳನ್ನು ಕಲಿತರು.

ಕಾಲ್ಡ್ ವೆಲ್ ತೌಲನಿಕ ಭಾಷಾ ವಿಜ್ಞಾನದ ಮೂಲಕ ದ್ರಾವಿಡ ಭಾಷೆಗಳು ಸ್ವಂತ ಭಾಷಾ ವರ್ಗಗಳಾಗಿ ಇತರ ಇಂಡೋ-ಯುರೋಪಿಯನ್ ಭಾಷಾವರ್ಗಗಳಿಗಿಂತ ಭಿನ್ನವಾಗಿವೆ. ವಾಂಶಿಕವಾಗಿ ಇವು ತಮ್ಮ ದೇ ಆದ ಸ್ವಂತ ರಚನೆಯನ್ನು ಒಳಗೊಳ್ಳುತ್ತವೆ. ಎಲ್ಲಿಸ್ ದ್ರಾವಿಡ ಭಾಷಾ ವಿಜ್ಞಾನದ ಜನಕರೆನಿಸಿದರೂ ದ್ರಾವಿಡ ಚಿಂತನೆಯನ್ನು ತನ್ನ ಕೃತಿಯ ಮೂಲಕ ವಿಸ್ತೃತಗೊಳಿಸಿದವರು ಕಾಲ್ಡ್‌ವೆಲ್‌ ೧೮೭೪ರಲ್ಲಿ ತೌಲನಿಕ ವ್ಯಾಕರಣ ಕೃತಿಯನ್ನು ಪರಿಷ್ಕರಿಸಿ ಪ್ರಕಟಿಸಿದರು. ೧೮೮೧ರಲ್ಲಿ History of Tirunelveli Dist ಎಂಬ ಕೃತಿಯನ್ನು ಪ್ರಕಟಿಸಿದರು. ದಕ್ಷಿಣ ಭಾರತ ಅಧ್ಯಯನಕ್ಕೆ ಇದು ಕೂಡ ತನ್ನದೇ ಆದ ಕೊಡುಗೆಯನ್ನು ನೀಡಿದೆ. ತಿರುನೆಲ್ವೇಲಿಯು ಇತಿಹಾಸವನ್ನು ಇದು ನಿರೂಪಿಸುತ್ತದೆ.

“A Comparative Grammar of Dravidian or South indian Family of Languages” ಎಂಬುದು ಅತ್ಯಂತ ಮಹತ್ವದ ಕೃತಿಯಾಗಿದೆ. ದ್ರಾವಿಡ ಭಾಷೆಗಳ ಸೋದರ ಸಂಬಂಧವನ್ನು ಇಂಡೋ- ಆರ್ಯನ ಭಾಷೆಯೊಂದಿಗಿನ ಸಂಬಂಧಗಳು ಶಬ್ದಶಾಸ್ತ್ರ, ಧ್ವನಿಶಾಸ್ತ್ರ ಮತ್ತು ವಾಕ್ಯರಚನೆ, ಇಂಡೋ ಆರ್ಯನ ಭಾಷೆಯಲ್ಲಿ ದ್ರಾವಿಡ ಪದಗಳ ಸ್ವೀಕರಣ ಇತ್ಯಾದಿ ವಿಷಯಗಳ ಬಗ್ಗೆ ಕೃತಿ ದೀರ್ಘವಾಗಿ ಚರ್ಚಿಸುತ್ತದೆ. ಅಲ್ಲದೇ ಅಂದು ಕಾಲ್ಡವೆಲ್ ರಿಂದ ಸ್ಫರ್ಶಗೊಂಡ ಅನೇಕ ತತ್ವಗಳು ಇಂದಿಗೂ ಅನ್ವಯವಾಗುತ್ತಿರುವುದ ಕಾಲ್ಡವೆಲ್ ರ ದೃಷ್ಟಿಕೋನದ ವೈಶಿಷ್ಟ್ಯತೆ. ಕಾಲ್ಡವೆಲ್ ಹೆಸರಿಸಿದ ದ್ರಾವಿಡ ಪದ ನಂತರವೂ ಶಾಶ್ವತವಾಗುಳಿಯಿತು. ಇದಕ್ಕೂ ಮೊದಲು ತಮಿಳು ಅಥವಾ ದಕ್ಷಿಣ ಭಾರತ ಭಾಷೆಗಳು ಎಂಬುದಾಗಿ ಕರೆಯಲ್ಪಡುತ್ತಿತ್ತು. ೬ ಸಂಸ್ಕೃತಿ ಭಾಷೆಗಳು ೬ ಬುಡಕಟ್ಟು ಭಾಷೆಗಳಾಗಿ ದ್ರಾವಿಡ ಭಾಷೆಗಳನ್ನು ವಿಭಾಗಿಸಿದ್ದರು. ತಮಿಳು, ಮಲಯಾಳಮ್, ಕನ್ನಡ, ತೆಲಗು, ತುಳು, ಕೊಡಗು ಸುಸಾಂಸ್ಕೃತ ಭಾಷೆಗಳೆಂದು ತೋಡ, ಕೋಡಿ, ಗೊಂಡ, ಖೊಂಡ ರಾಜಮಹಾಲ್ (ಮಾಲ್ತೋ) ಜಿರಾನ್ ಭಾಷೆಗಳು ಬುಡಕಟ್ಟು ಭಾಷೆಗಳಾಗಿ ಹೆಸರಿಸಿದ್ದರು. ಬ್ರಾಹೂಯಲ್ಲಿ ದ್ರಾವಿಡಿಯನ್ ಲಕ್ಷಣಗಳನ್ನು ಗುರುತಿಸಿದರೂ ಪಟ್ಟಿಯಲ್ಲಿ ಸೇರಿಸಲಿಲ್ಲ.