೮೧. ರಾಮಕೃಷ್ಣಯ್ಯ ಕೋರಾಡ (೧೮೯೧೧೯೬೧)

ಕೋರಾಡ ರಾಮಕೃಷ್ಣಯ್ಯನವರದು ಬಹುಮುಖಿ ಪ್ರತಿಭೆ, ವಿಮರ್ಶಕರಾಗಿ, ಭಾಷಾಶಾಸ್ತ್ರಜ್ಞರಾಗಿ ಶಾಸ್ತ್ರೀಯ ಕೃತಿಗಳ ಸಂಪಾದಕರಾಗಿ ಅವರು ಸಾಕಷ್ಟು ಕಾರ್ಯ ನಿರ್ವಹಿಸಿದ್ದಾರೆ. ಆಧುನಿಕ ತೆಲುಗು ವಿದ್ವಾಂಸರಲ್ಲಿ ರಾಮಕೃಷ್ಣಯ್ಯನವರದು ಬಹುಮುಖ ಸಾಧನೆ ಸಂಸ್ಕೃತ, ತೆಲುಗು ಹಾಗೂ ದ್ರಾವಿಡ ಭಾಷಾ ವಿಜ್ಞಾನದಲ್ಲಿ ಅವರು ಪ್ರಸಿದ್ಧರು.

೧೯೩೫ರಲ್ಲಿ Dravidian Philology ಮತ್ತು ೧೯೪೫ರಲ್ಲಿ Dravidian Cognates ಕೃತಿಗಳನ್ನು ರಚಿಸಿದ ಇವರು ದ್ರಾವಿಡ ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತೆ Dravidian Languages and Prakrits, Dravidian Phonetics Dravidian Infection And Antastas in Dravidian Languages ಎಂಬ ಲೇಖನಗಳನ್ನು ಬರೆದಿದ್ಧಾರೆ. ಕಾಲ್ಡವೆಲ್ ಭಾಷಾಶಾಸ್ತ್ರ ಜ್ಞಾನವನ್ನು ಹೆಚ್ಚು ವಿಸ್ತರಿಸಿದ ರೀತಿ ಬರಹಗಳಲ್ಲಿ ಕಾಣಬರುತ್ತದೆ ಎಂಬುದು ವಿದ್ವಾಂಸರ ಅಭಿಪ್ರಾಯ ಆಂಧ್ರ ಸರ್ಕಾರದ ಪ್ರಶಸ್ತಿ ಪಡೆದ ಅವರ Dakshina Desa Bhaasha Saraswathulu ೧೯೪೯ರಲ್ಲಿ ಪ್ರಕಟವಾಯಿತು, ತೌಲನಿಕ ದ್ರಾವಿಡ ಛಂದಸ್ಸು ಮತ್ತು ದಕ್ಷಿಣ ಭಾರತೀಯ ಭಾಷೆಗಳ ಭಾಷಿಕ ಮತ್ತು ಸಾಹಿತ್ಯಿಕ ಚರ್ಚೆಯನ್ನು ಕೃತಿ ತೆಲುಗು ಭಾಷೆಯಲ್ಲಿಯೇ ಅಭಿಜಾತ ಕರತಿ ಎಂದು ಪ್ರಸಿದ್ಧವಾಗಿದೆ. Dravidian Prosody Indigeneous Literatures of South india Literary & Linguistic traditions Common to Four South Indian Languages ಎಂಬ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

೮೨. ರಾಘವಯ್ಯರ್‌ ಎಂ. (೧೮೭೮)

ರಾಘವಯ್ಯರ್‌ ವಿದ್ವಾಂಸರಾಗಿ, ವಿಮರ್ಶಕರಾಗಿ, ವ್ಯಾಕರಣತಜ್ಞರಾಗಿ ಪ್ರಸಿದ್ದರಾಗಿದ್ದಾರೆ. ಮುತ್ತುಸ್ವಾಮಿ ರಾಘವ ಅಯ್ಯರ್‌ ಅವರು ರಾಮನಾಥಪುರಮ್‌ನ ಜೆಲ್ಲೆಯ ಅರೈಕುಡಿಯಲ್ಲಿ ೧೮೭೮ ಜುಲೈ ೨೬ರಲ್ಲಿ ಜನಿಸಿದರು. ಮುತ್ತು ಸ್ವಾಮಿ ಅಯ್ಯಂಗಾರರ ಮಗನಾಗಿದ್ದರು.

ತ್ರಾವಣಕೋರ್‌ ವಿ.ವಿ.ಯಲ್ಲಿ ಅಲಗಪ್ಪ ಚಟ್ಟಿಯಾರ್‌ ತಮಿಳು ಪೀಠಕ್ಕೆ ಆಯ್ಕೆಯಾದ ಮೊದಲ ವ್ಯಕ್ತಿ ತಿರುವನಂತಪುರದಲ್ಲಿ ತಮಿಳು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ತಮಿಳು ಮತ್ತು ಕೇರಳ ಅಂತರ್‌ ಸಂಬಂಧಗಳನ್ನು ಸಂಶೋಧನೆ ಮಾಡಿ ಕೃತಿಗಳನ್ನು ತ್ರಾವಣಕೋರ್‌ ವಿ.ವಿಯಿಂದ ಪ್ರಕಟಿಸಿದ್ದಾರೆ. Some Aspects Kerala and Tamil Culture Cera Ventar Ceyyutkovai ಎಂಬ ಕೃತಿಯನ್ನು ಎರಡು ಸಂಪುಟಗಳಲ್ಲಿ ವಿಮರ್ಶಾತ್ಮಕವಾದ ಟಿಪ್ಪಣಿಯೊಂದಿಗೆ ಸಂಪಾದಿಸಿದ್ದಾರೆ. Harichandra Venpa ಹಸ್ತಪ್ರತಿಯನ್ನು ವಿಮರ್ಶಾತ್ಮಕ ಟಿಪ್ಪಣಿಯೊಂದಿಗೆ ರಚಿಸಿದ್ದಾರೆ.

೮೩. ರಾಬರ್ಟ್ ಕಸ್ಟ್ (೧೮೨೧೧೯೦೯)

ರಾಬರ್ಟ್ ಕಸ್ಟ್ ಅವರು ಸಾರ್ವಜನಿಕ ಸೇವೆಯಲ್ಲಿದ್ದರು. ಅವರು ಭಾರತದ ಬಗೆಗಿನ ಹಾಗೂ ಅದರ ಭಾಷಾ ವಿಷಯಗಳ ವ್ಯಾಮೋಹದಿಂದ ಭಾರತಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ಮನಗಂಡು A Sketch of the modern languages of the East Indies ಎಂಬ ಕೃತಿ ರಚಿಸಿದರು. ಭಾರತದ ಕುರಿತ ಅವರ ತುಡಿತ ಗಮನೀಯವೆನಿಸುತ್ತದೆ ಅವರಿಗೆ ೧೨ ಭಾಷೆಗಳ ಪರಿಚಯವಿತ್ತು ಆವುಗಳಲ್ಲಿ ಆರು ಯುರೋಪಿಯನ್ ಮತ್ತು ಆರು ಏಶಿಯನ್.

ರಾಬರ್ಟ್ ಕಸ್ಟ್ ಬ್ರಿಟಿಷ್ ಅಧಿಕಾರ ಹಾಗೂ ಭಾಷಾ ವಿಜ್ಞಾನಿಯಾಗಿದ್ದರು. ಕೆಂಬ್ರಿಡ್ಜ್, ಟೆನ್ವಿಟಿಕಾಲೇಜ್, ಎಟನ್ ಕಾಲೇಜ್ ಹೆಲಿಬರ್‍ರಿಯಲ್ಲಿ ಹಾಗೂ ಕಲ್ಕತ್ತದ ಫೋರ್ಟ ವಿಲಿಯಮ್ ಕಾಲೇಜ್‌ನಲ್ಲಿ ಶಿಕ್ಷಣ ಪೂರೈಸಿದರು. ಭಾರತದಲ್ಲಿ ಹೊಶಿಯಾಪುರ ಮತ್ತು ಆಂಬಲಾದಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಆಧಿಕಾರಿಯಾಗಿದ್ದರು.

ಅವರು ತಮ್ಮ ಕೃತಿಯಲ್ಲಿ ಭಾಷಾ ವರ್ಗಗಳನ್ನು ಪ್ರಾಂತೀಯವಾಗಿ ೮ ಭಾಗಗಳಲ್ಲಿ ವಿಂಗಡಿಸುತ್ತಾರೆ. ೧ ಆರ್ಯನ್ ಇಂಡೋಯುರೋಪಿಯನ್ ೨. ದ್ರಾವಿಡಿಯನ್ ೨. ಕೊಲಾರಿಯನ್ ೪. ಟೆಬಿಟೋ ಬರ್ಮನ್ ೫. ಖಾಸಿ ೬. ತೈ ೭. (Mon-Anam) ಮಾನ್ ಅನಮ್ ೮. ಮಲಯಾಳಿನ್ ನಂತರ ಅವರು ದ್ರಾವಿಡಯನ್ ಭಾಷಾವರ್ಗದ ಕುರಿತು ವಿವರಿಸುತ್ತಾರೆ. ಕಾಲ್ಡ್‌ವೆಲ್ ಬಳಸಿದ ಪದ ದ್ರಾವಿಡಿಯನ್ ತಮಿಳಿಯನ್ ಅನ್ನುವುದಕ್ಕಿಂತ ಸರಿಯಾಗಿದೆ ಎಂದು ಪ್ರತಿಪಾದಿಸುತ್ತಾರೆ. ದ್ರಾವಿಡ ಭಾಷಾವರ್ಗಾವು ೧೪ ಭಾಷೆಗಳನ್ನು ಬಳಗೊಂಡಿದೆ ಅವುಗಳೆಂದರೆ ತಮಿಳು, ತೆಲುಗು ಕ್ಯಾನರೀಸ್, ಮಳೆಯಾಳಮ್, ತುಳು, ಕೊಡಗು, ತೊಡ ಕೋಟ, ಲೊಂಡ, ಗೊಂಡ ಬಿರಾನ್ ರಾಜಮಹಾಲಿ, ಕೈಕದಿ, ಯರುಕಲಾ (Yerukala) ಎಂಬುದಾಗಿ ಹೆಸರಿಸುತ್ತಾರೆ. ದ್ರಾವಿಡಿಯನ್ ಸಂಸ್ಕೃತಿ ತನ್ನದೇ ಆದ ಸ್ವರೂಪವನ್ನು ಪಡೆದಿದ್ದರೂ ವೈದಿಕ ಸಂಸ್ಕೃತಿಯ ಕೆಲವು ವಿಚಾರಗಳನ್ನು ಕೆಲವು ಭಾಷೆಗಳು ಅಳವಡಿಸಿಕೊಂಡಿರುವುದನ್ನು ನೋಡಿದರೆ ಅದು ಆರ್ಯನ್ ಭಾಷಾ ವರ್ಗದ್ದೋ ದ್ರಾವಿಡದ್ದೋ ಎಂಬ ಅಭಿಪ್ರಾಯ ಗೊಂದಲವಾಗುತ್ತದೆ. ೧೮೬೮ರಲ್ಲಿ Tamil Hand book ಮತ್ತು ೧೮೭೬ರಲ್ಲಿ Indian Autiuary ನಲ್ಲಿ ಪೋಪ್ ಅವರು ಪ್ರತಿಪಾದಿಸಿದಂತೆ ದ್ರಾವಿಡಿಯನ್ ಭಾಷೆಗಳನ್ನು ಹೆಚ್ಚು ಹೆಚ್ಚಾಗಿ ಆಳಕ್ಕೆ ಅಭ್ಯಾಸ ಮಾಡಿದಂತೆ ಅದು ಸಂಸ್ಕೃತಕ್ಕೆ ಹೆಚ್ಚು ನಿಕಟವಾಗುತ್ತ ಹೋಗುತ್ತದೆ ಎಂಬ ಮಾತನ್ನು ಪುನರುಚ್ಚರಿಸುತ್ತಾರೆ. ೧೮೬೭ರ ನಿವೃತ್ತಿಯ ನಂತರ ಭಾಷಾವಿಜ್ಞಾನದ ಬರಹಗಳಲ್ಲಿ ತೊಡಗಿಕೊಂಡರು. ಇವರು ರಚಿಸಿದ ಕೃತಿಗಳು ಈ ರೀತಿಯಾಗಿವೆ. “Draft bill of codes Regulating Right in Land and Land Revenue proceduce in Northern India” ಎಂಬುದನ್ನು (೧೮೭೦) ರಲ್ಲಿ Modern Languages of the East India- (1878)ರಲ್ಲಿ Pictures of Indian Life (1881) ರಲ್ಲಿ Modern Languages of Africa-1883 (two vols) Linguistic & Orietal Essays’ (7vols) ಇತ್ಯಾದಿ.

೮೪. ರೀಸ್.ಜೆ.ಡಿ.

ರೀಸ್ ಅವರು Duke of Clarence ಮತ್ತು Avondale ಅವರು ದಕ್ಷಿಣ ಭಾರತಕ್ಕೆ ಭೇಟಿ ಕೊಟ್ಟಿರುವುದನ್ನು ವಿವರಿಸಿ ೧೮೯೧ರಲ್ಲಿ The Duke of Clarence and Avondale in Southern India” ಕೃತಿ ರಚಿಸಿದ್ದಾರೆ. ಹೈದರಾಬಾದ್ ಭೇಟಿ ಮತ್ತು ಮೈಸೂರು ಮತ್ತು ತ್ರಾವಣಕೋರ ಪ್ರದೇಶಗಳಲ್ಲಿನ ಶಿಕಾರಿ ಅನುಭವಗಳನ್ನು ಕೊಡುತ್ತದೆ. ಆನೆಗಳನ್ನು ಖೆಡ್ಡಾಗಳಲ್ಲಿ ಕೆಡವಿ ಹೇಗೆ ಬಂಧಿಸಲಾಗುತ್ತದೆ ಎಂಬುದನ್ನು ಹಾಗೂ ದಕ್ಷಿಣ ಭಾರತದ ಜನಜೀವನವನ್ನು ಕೊಡುವ ಪ್ರಯತ್ನ ಮಾಡಲಾಗಿದೆ.

೮೫. ಲೂಯಿಸ್ ಡ್ಯೂವೊಂಟ್ (೧೯೧೧೧೯೯೯)

ಲೂಯಿಸ್ ಡ್ಯೂಮೊಂಟ್ ಒಬ್ಬ ಫ್ರೆಂಚ್ ಮಾನವಶಾಸ್ತ್ರಜ್ಞ ಮತ್ತು ಸಮಾಜಶಾಸ್ತ್ರಜ್ಞರಾಗಿದ್ದರು. ಭಾರತದ ಜಾತಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿದರು. ೧೯೭೦-೮೦ ದಶಕದಲ್ಲಿ ದಕ್ಷಿಣ ಏಶಿಯಾದಲ್ಲಿ ಮಾನವಶಾಸ್ತ್ರದಲ್ಲಿನ ವಾದ-ವಿವಾದಗಳಿಗೆ ಇವರ ಅಧ್ಯಯನ ಕಾರಣವೆನಿಸಿತ್ತು. ಅವರು ಜಾತಿ ಎನ್ನುವುದು ಧಾರ್ಮಿಕವಾಗಿ ಶುದ್ಧಸ್ವರೂಪದಿಂದ ಅಶುದ್ಧ ರೂಪದ ಭಿನ್ನತೆಯ ದ್ವೈತಸ್ವಭಾವವೇ ಕಾರಣ ಎಂದು ವಾದಿಸಿದರು. ಇದೇ ವಾದವನ್ನು ಮುಂದುವರೆಸುತ್ತಾ ಪೂರ್ವದ ಸ್ಥಿರ ಮತ್ತು ಆಧ್ಯಾತ್ಮಿಕ ಗುಣಗಳಿಗೂ ಹಾಗೂ ಪಶ್ವಿಮದ ಭೌತವಾದ ಹಾಗೂ ವ್ಯಕ್ತಿ ಸ್ಥಿರ ಮತ್ತು ಆಧ್ಯಾತ್ಮಿಕ ಗುಣಗಳಿಗೂ ಹಾಗೂ ಪಶ್ವಿಮದ ಭೌತವಾದ ಹಾಗೂ ವ್ಯಕ್ತಿ ಸಾಪೇಕ್ಷ ಮೌಲ್ಯಗಳಿಗೂ ಇರುವ ವೈರುದ್ಯದ ಕುರಿತು ಪ್ರತಿಪಾದಿಸಿದರು. ಜೊತೆಗೆ ರೈತರ ಹಬ್ಬಗಳು, ಬಂಧುತ್ವ ವ್ಯವಸ್ಥೆಯ ಬಗೆಗೂ ಅಧ್ಯಯನ ಮಾಡಿದರು, ಅವರ ಪ್ರಮುಖ ಕೃತಿಗಳು ಈ ರೀತಿಯಾಗಿವೆ.

  1. South Indian Sub- Caste (1975)
  2. Affinity as a Valur; Value, Marriage Alliance in South India, with Comparative essays on Australia (1983)
  3. Essays on Individualism: Modern Ideology in Anthropological Perspective (1983)

 

೮೬. ಲೆಪ್ಪಿನಂಟ್ ಕರ್ನಲ್ ವಾನ್ಸ್ ಕೆನಡಿ

ರಾಬರ್ಟ್ ಕಾಲ್ಡ್‌ವೆಲ್‌‌ಗಿಂತ ಪೂರ್ವದ ಸೂರಿಗಳಲ್ಲಿ ವಾನ್ಸ್ ಕೆನಡಿಯವರದು ದ್ರಾವಿಡ ಭಾಷಾಕ್ಷೇತ್ರದಲ್ಲಿ ಗಣನೀಯ ಸೇವೆ ಎನ್ನಬಹುದು. ಫಾನ್ಸಿಸ್ ವೈಟ್ ಎಲ್ಲಿಸ್ ತರುವಾಯದ ಪ್ರಮುಖ ವಿದ್ವಾಂಸರಾಗಿದ್ದಾರೆ.

ವಾನ್ಸ್ ಕೆನಡಿಯವರು ಭಾರತೀಯ ಭಾಷೆಗಳನ್ನು ಅರಿತುಕೊಳ್ಳಲು ಹಲವು ಭಾರಿ ಕ್ಷೇತ್ರಕಾರ್ಯಕ್ಕೆಗೊಂಡಿದ್ದಾರೆ. ಭಾರತೀಯ ಭಾಷೆಗಳಲ್ಲದೆ ಗ್ರೀಕ್ ಲ್ಯಾಟಿನ್, ಪಾರ್ಸಿ ಮುಂತಾದ ಭಾಷೆಗಳನ್ನು ಅರಿತವರು ಇವರ ಒಂದು ವಿಶಿಷ್ಟ ಶೋಧನೆಯೆಂದರೆ ಗ್ರೀಕ್ ಲ್ಯಾಟಿನ್, ಪಾರ್ಸಿ ಟ್ಯಾಟೋನಿಕ್ ಭಾಷೆಗಳಲ್ಲಿ ಸಂಸ್ಕೃತ ಶಬ್ದಗಳಿವೆ. ಹಾಗಾಗಿಯೇ ಈ ಎಲ್ಲ ಭಾಷೆಗಳು ಒಂದು ಮೂಲಭಾಷೆಯಿಂದ ನಿಷ್ಟನ್ನಗೊಂಡಿರಬಹುದೆಂಬ ನಿಯಮವನ್ನು ತಿಳಿಸಿಕೊಟ್ಟವರು. ಅಲ್ಲದೇ ದ್ರಾವಿಡ ಭಾಷೆಗಳಲ್ಲಿ ಬಗ್ಗೆ ಎಲ್ಲಿಸ್‌ನನ್ನು ಒಪ್ಪಿಕೊಳ್ಳುತ್ತಲೇ ದ್ರಾವಿಡ ಭಾಷೆಗಳು ಸಂಸ್ಕೃತದಿಂದ ನಿಷ್ಟನ್ನಗೊಂಡವುಗಳಲ್ಲಿ ಹಾಗೂ ಕೃಷ್ಣಾನದಿಯಿಂದ ದಕ್ಷಿಣದ ಭಾಷೆಗಳು ಬೇರೆ ಮೂಲದಿಂದ ಬಂದಿವೆಯೆಂದು ತಿಳಿಸಿದರು. ದಕ್ಷಿಣದ ಈ ಎಲ್ಲಾ ಭಾಷೆಗಳಿಗೂ ಆಂಧ್ರವೇ ಮೂಲವೆಂಬುದು ಇವರ ಅಭಿಪ್ರಾಯ ಮೂಲ. ತಾಯಿ ಭಾಷೆ ಲುಪ್ತ ಗೊಂಡಿದ್ದು ತಮಿಳು, ಮಲೆಯಾಳಂ ತೆಲಿಂಗ ಕೆನರ ತುಳುವ ಬಾಷೆಗಳು ಸೋದರ ಭಾಷೆಗಳೆಂದು ಇವರು ತಿಳಿಸಿದ್ದಾರೆ.

೮೭. ವಿಲಿಯಮ್ ರೀವ್

ವಿಲಿಯಮ್ ರೀವ್ ಅವರು ಕನ್ನಡ ಇಂಗ್ಲಿಷ್ ಭಾಷೆಗಳಲ್ಲೂ ನಿಘುಂಟುಗಳನ್ನು ರಚಿಸಿದ್ದಾರೆ. ೧೮೩೨ರಲ್ಲಿ A Dictionary, Carnataka & English ಮತ್ತು ೧೮೨೪ರಲ್ಲಿ A Dictionary English and Carnataka ಕೃತಿಗಳೆರಡನ್ನು ರಚಿಸಿದ್ದಾರೆ ಇಂಗ್ಲೀಷ್- ಕನ್ನಡ ನಿಘುಂಟು ರಚನಾಕಾಲದಲ್ಲಿ ಸಾಮಾನ್ಯವಾಗಿ ಬಳಕೆಯಿರುವ ಶುದ್ಧ ಕರ್ನಾಟಕ ಪದಗಳನ್ನು ಕೊಡುವುದು ನಿಘಂಟುಕಾರರ ಉದ್ದೇಶವಾಗಿತ್ತು. ಕೆಲವು ಸಂಸ್ಕೃತ ಪದಗಳು ಕನ್ನಡದಲ್ಲಿ ಸಹಜವಾಗಿ ಒಳಕೆಯಲ್ಲಿವೆ ಎಂಬುದನ್ನು ನಿಘಂಟುಕಾರರು ಮುನ್ನುಡಿಯಲ್ಲಿ ಸೇರಿಸುತ್ತಾರೆ. ಭಾರತೀಯ ಭಾಷೆಗಳ ಭಾಷಿಕ ಅಧ್ಯಯನ ಹಾಗೂ ತತ್ವಗಳ ವ್ಯಾಖ್ಯಾನ ವಿಚಾರದ ಅಂಗವಾಗಿ ನಿಘಂಟು ರಚಿಸಲಾಗಿದೆ ಎಂಬುದನ್ನು ತಿಳಿಸುತ್ತಾರೆ. ಕನ್ನಡ ಇಂಗ್ಲಿಷ್ ನಿಘುಂಟು ರಚನೆಯಲ್ಲಿ ಕೆಲವು ಸಂಕೇತಾಕ್ಷರಗಳನ್ನು ನಿಘಂಟಿನಲ್ಲಿ ಬಳಸಲಾಗಿದೆ. ಉದಾ: C:ಆಕ್ಕಳ-a hump.C: ಆಗಣಿ-The inner Wooden bolt that Fastens a native Door, ಇಲ್ಲಿ C ಎಂಬುದು ಶುದ್ಧ ಕನ್ನಡ ಪದವನ್ನು ಸೂಚಿಸುತ್ತದೆ. ಈ ನಿಘಂಟು ರಚನೆಯಲ್ಲಿ Campbellನೇ ತೆಲುಗು ನಿಘಂಟಿನ ಉಪಯೋಗ ಮಾಡಲಾಗಿದೆ. ಅಂತೆಯೇ ತೆಲುಗು, ಕನ್ನಡ ಭಾಷೆಯ ಸಾಮಿಪ್ಯವನ್ನು ಗುರುತಿಸಲಾಗಿದೆ. ಕನ್ನಡ ಪದಗಳಿಗೆ ತೆಲುಗು ಮತ್ತು ತಮಿಳು ಪದಗಳ ಸಮಾನಾರ್ಥಕ ಪದಗಳ ಹುಡುಕಾಟಕ್ಕಾಗಿ ಪರಿಣಿತ ವ್ಯಕ್ತಿಗಳ ಸೇವೆಯನ್ನು ಬಳಸಿಕೊಳ್ಳಲಾಗಿದೆ. ಅದರಂತೆಯೇ Krishnamachara ಅವರ ಸೇವೆಯನ್ನು ಸ್ತುತಿಸಲಾಗಿದೆ.

೮೮. ವಿಲಿಯಂ ಬ್ರೈಟ್ (೧೯೨೮೨೦೦೬)

ವಿಲಿಯ್ ಬ್ರೈಟ್ ಅತ್ಯುತ್ತಮ ಭಾಷಾವಿಜ್ಞಾನಿ ಮಹಾನ್ ಸಾಧಕರು. ವಿದ್ವಾಂಸರು. ಕುಪ್ಪಂನಲ್ಲಿ ಜರುಗಿದ ಅಖಿಲ ಭಾರತ ದ್ರಾವಿಡಿಯನ್ ಭಾಷಾ ವಿಜ್ಞಾನದಲ್ಲಿ ಅಧ್ಯಕ್ಷರಾಗಿದ್ದರು. ಕನ್ನಡ ಭಾಷಾ ವಿಜ್ಙಾನ, ಸಮಾಜೋ ಭಾಷಿಕ ಅಧ್ಯಯನ, ದಕ್ಷಿಣ ಏಷ್ಯಾ ಭಾಷಾವಿಜ್ಞಾನ ಇವರ ಆಸಕ್ತಿಯ ಕ್ಷೇತ್ರಗಳು, ಭಾಷೆ ಎಂಬ ಪ್ರತಿಷ್ಠಿತ ಪತ್ರಿಕೆಗೆ ೨೨ ವರ್ಷ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ವಿಲಿಯಮ್ ಬ್ರೈಟ್ ೧೯೪೯ರಲ್ಲಿ ಭಾಷಾ ವಿಜ್ಞಾನದಲ್ಲಿ ಬಿ.ಎ. ಪದವಿ ಪಡೆದರು. ೧೯೫೫ರಲ್ಲಿ ಪಿ.ಎಚ್.ಡಿ. ಪದವಿಗಳನ್ನು ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಡೆದರು. ೧೯೫೯-೧೯೮೮ರವರೆಗೆ ಭಾಷಾವಿಜ್ಞಾನ ಮತ್ತು ಮಾನವಶಾಸ್ತ್ರದ ಪ್ರಾಧ್ಯಪಕರಾಗಿದ್ದರು. ಅವರಿಗೆ ಕ್ಯಾಲಿಫೋರ್ನಿಯ ಸ್ಥಳೀಯ ಭಾಷೆ ಸಂಸ್ಕೃತಿಯ ಬಗ್ಗೆ ಅಧಿಕೃತತೆ ಇತ್ತು ಹಾಗಾಗಿ Survey of California and other Indian Languages’ ವಿಷಯದಲ್ಲಿ ಅಧ್ಯಯನ ಮಾಡಿದರು. ದಕ್ಷಿಣ ಏಷ್ಯಾ ಭಾಷೆಯಾದ ಲುಪಾಯಿ, ಕನ್ನಡ ತಮಿಳು, ತುಳು ಭಾಷೆಗಳಲ್ಲಿ ಪರಿಣಿತ ಇತ್ತು ೧೯೮೯ರಲ್ಲಿ Lingustic Society of America ದ ಅಧ್ಯಕ್ಷರಾಗಿದ್ದರು, 1966-೬೮ರವರೆಗೆ Language ಎಂಬ ಪತ್ರಿಕೆಯ ಸಂಪಾದಕರು.

ಭಾಷಾ ವಿಜ್ಞಾನದಲ್ಲಿ ಸಾಕಷ್ಟು ಅಧ್ಯಯನ ಮಾಡಿ ೧೯೫೮ರಲ್ಲಿ An outline of Colloguial Kannada ಎಂಬ ಕೃತಿಯನ್ನು ರಚಿಸಿದರು. International Encyclo paedia of Linguisties ಹಾಗೂ Oxford Studies in Anthropological Linguistics ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ.

ಸಂಸ್ಕೃತ ಮತ್ತು ತೌಲನಿಕ ದ್ರಾವಿಡ ಕ್ಷೇತ್ರದಲ್ಲಿ ಆಸಕ್ತಿಯಿಂದ ಅಧ್ಯಯನ ಮಾಡಿದರು. Rockfeller Foundation Scholarship ಪಡೆದು ಭಾಷಾವಿಜ್ಞಾನದಲ್ಲೇ ಅಧ್ಯಯನ ಅಧ್ಯಾಪನ ನಡೆಸಿದರು. ನಂತರ ಕರ್ನಾಟಕದಲ್ಲಿ ನೆಲೆಸಿ ಕನ್ನಡದ ವಿವರಣಾತ್ಮಕ ವ್ಯಾಕರಣದ ಬಗ್ಗೆ ಕೆಲಸ ಮಾಡಿದರು. ೧೯೫೫-೫೭ರಲ್ಲಿ ಪುಣೆಯಲ್ಲಿ ನೆಲೆಸಿ ನಂತರ ಬೆಂಗಳೂರಿನಲ್ಲಿ ನೆಲೆಸಿದರು (Socio-Linguistics) ಕುರಿತು ಹೆಚ್ಚಿನ ಅಧ್ಯಯನ ನಡೆಸಿದರು. ಅವರ ಅತ್ಯಂತ ಮಹತ್ವದ ಕೃತಿ Language Variation in South Asia ೧೯೬೦ -೮೮ರವರೆಗಿನ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡಿದೆ.

Linguistic Change in some Indian Castedialects (೧೯೬೦) ರಲ್ಲಿ ರಚಿತಗೊಂಡ ಪ್ರಬಂಧದಲ್ಲಿ ಎರಡು ಬಗೆಯ ಆಡುನುಡಿಯ ಜ್ಞಾತಿವಿಭಾಗದ ವಿವರಗಳಿವೆ. ಒಂದು ಬ್ರಾಹ್ಮಣರ ಬಳಕೆಯಲ್ಲಿರುವ ಮತ್ತೊಂದು ಬ್ರಾಹ್ಮಣೇತರರ ಬಳಕೆಯದು. Sociolinguistic Variation and language Change ಎಂಬ ಲೇಖನವನ್ನು ಎ.ಕೆ. ರಾಮಾನುಜಂ ಅವರೊಂದಿಗೆ ೧೯೬೪ರಲ್ಲಿ ಬರೆದಿದ್ದಾರೆ. ತಮಿಳು ಮತ್ತು ತುಳು ಭಾಷೆಯ ತೌಲನಿಕ ವ್ಯತ್ಯಾಸಗಳನ್ನು ತಿಳಿಸಿ ಅಕ್ಷರಸ್ಥರ ಬೆಳವಣಿಗೆಯಿಂದಾಗಿ ಸಾಮಾಜಿಕ ಪ್ರಭೇದಗಳಲ್ಲಿ ಉಂಟಾಗುವ ಐತಿಹಾಸಿಕ ವ್ಯತ್ಯಾಸಗಳನ್ನು ಕುರಿತು ಇದು ವಿವರಿಸುತ್ತದೆ. Dravidian Metaphony ಎಂಬ ಲೇಖನವನ್ನು ೧೯೬೬ರಲ್ಲಿ ಪ್ರಕಟಿಸಿದರು. ದಕ್ಷಿಣ ಭಾರತ ಹಾಗೂ ಶ್ರೀಲಂಕಾದ ಪ್ರಾದೇಶಿಕ ಮತ್ತು ಸಾಮಾಜಿಕ ಪ್ರಭೇದದಲ್ಲಿ ವ್ಯಾಪಕವಾಗಿ ಅಂಟಿಕೊಂಡಿರುವ (Vowel assimilation) ಸ್ವರ ಸಮರೂಪಧಾರಣೆ ಬಗೆಯನ್ನು ಇದು ಸಮೀಕ್ಷಿಸುತ್ತದೆ. ಅದರಂತೆಯೆ ಎಮಿನೋ ಸಾಧಿಸಿರುವ ಪ್ರಾದೇಶಿಕ ಹರಡುವಿಕೆಯ ಸಿದ್ಧಾಂತವನ್ನು ದಕ್ಷಿಣ ಏಶಿಯಾದ ದ್ರಾವಿಡೇತರ ಭಾಷೆಗಳಲ್ಲಿನ ಈ ವಿಷಯದಲ್ಲಿನ ಸಮಾನಾಂತರ ಬೆಳವಣೆಗೆಯನ್ನು ಲೇಖನ ವಿವರಿಸುತ್ತದೆ. Language, Social stratification and Cognitive orientatin ಎಂಬ ಲೇಖನವನ್ನು ೧೯೬೬ರಲ್ಲಿ ಪ್ರಕಟಿಸಿದರು. ಲೇಖನವು ಹಲವು ದ್ರಾವಿಡಿಯನ್ ಭಾಷೆಗಳ ಜ್ಞಾತಿ ಪ್ರಭೇದಗಳಲ್ಲಿರುವ ನಿಘಂಟಿನ ಶಬ್ಧಾನುಸಂಧಾನದ (Lexical Semantics) ವ್ಯತಾಸಗಳನ್ನು ಕುರಿತು ವಿವರಿಸುತ್ತದೆ ಒಂದು ವಿಸ್ತಾರವಾದ ಭಾಷಾ ವರ್ಗದಲ್ಲಿ ವಿಶಿಷ್ಟ ಶಾಬ್ದಿಕ ಸಮಗುಂಪಿನ (Semantic isoglasses) ಇರುವಿಕೆಯಿಂದಾದ ಪ್ರತ್ಯೇಕ ಸಾಮಾಜಿಕ ಗುಂಪುರಚನೆಗೆ ಪರಸ್ಟರ ಗುಂಪಿನಲ್ಲಿರುವ ಮನೋಭಾವ ಭಿನ್ನತೆಯೇ ಕಾರಣ ಎಂಬುದನ್ನು ವಿವರಿಸಲಾಗಿದೆ. Complex Verb Forms in Colloical Tamil ಎಂಬುದನ್ನು ೧೯೬೪ರಲ್ಲಿ ಜೆ. ಲಿಂಡರ್‍ಫೀಲ್ಡ್ ಜೊತೆಗೆ ಪ್ರಕಟಿಸಿದರು. Generative Grammer ನ ತತ್ವಗಳನ್ನು ಬಳಸಿಕೊಂಡು ಅಯ್ಯಂಗಾರ ತಮಿಳಿನಲ್ಲಿನ ಕ್ರಿಯಾಪದ ಸಂಕೀರ್ಣತೆ ಬಗೆಗೆ ತಿಳಿಸಿದರು. Phonological Rules in Literary & Collquial kannada ಎಂಬುದನ್ನು ೧೯೭೦ ರಲ್ಲಿ ಪ್ರಕಟಿಸಿದರು. ಕನ್ನಡದ ಹಳೆಯ ಭಾಷಾ ಶೈಲಿ ಹಾಗೂ ವಿವಿಧ ಪ್ರಾದೇಶಿಕ ಮತ್ತು ಸಾಮಾಜಿಕ ಸ್ತರಗಳ ಆಡುಮಾತಿನ ಅಂತರಸಂಬಂಧ ಮೂಲಕ (Generative Grammar)ನ ತತ್ವಗಳನ್ನು ಹುಡುಕುವ ಪ್ರಯತ್ನ ಇಲ್ಲಿದೆ. Archealogy Linguistic and ancient Dravidian ೧೯೮೬ ರಲ್ಲಿ ಪ್ರಕಟಿಸಿದರು. ಸಿಂಧೂ ನಾಗರಿಕತೆ ಲಿಪಿಯಲ್ಲಿನ ಕೆಲವು ಸಮಸ್ಯೆಗಳನ್ನು ಎತ್ತಿಕೊಂಡು ಪುರಾತತ್ವೀಯ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. The Dravidian Enuciative Vowelನ್ನು ೧೯೭೫ರಲ್ಲಿ ಸಿದ್ಧಪಡಿಸಿದರು. I ಮತ್ತು U ಗಳನ್ನು ಯಾವುದೇ ಜಾತಿಯ ಪದದ ಶಬ್ದಗಳಿಗೆ ಜೋಡಿಸಿ, ಜೊತೆಗೆ ವ್ಯಂಜನಗಳ ಆಧಿಕರಣದಿಂದ ಪ್ರಾದೇಶಿಕವಾಗಿ ಮತ್ತು ಸಾಮಾಜಿಕವಾಗಿ ಆಗುವ ಪ್ರಭೇದಗಳನ್ನು ವಿವರಿಸಿದ್ದಾರೆ. ಅದೇ ರೀತಿ ಐತಿಹಾಸಿಕವಾಗಿ ಮತ್ತು ಪ್ರದೇಶವಾಗಿ ವಿವರಣೆ ಕೂಡ ನೀಡಿದ್ದಾರೆ. ಕೊನೆಯ ಮೂರು ಪ್ರಬಂಧಗಳು ಭಾಷೆಯ ಲಿಖಿತ ಮತ್ತು ಮೌಲಿಕ ರೂಪಗಳ ನಡುವಿನ ಸಂಬಂಧದ ಒಗ್ಗೆ ಹಾಗೂ ಪ್ರಾಚೀನ ದಕ್ಷಿಣ ಏಶಿಯಾದಲ್ಲಿ ಲಿಖಿತ ರೂಪದ ಭಾಷೆಗಳ ಐತಿಹಾಸಿಕತೆಗಳನ್ನು ಚರ್ಚಿಸುತ್ತದೆ. How not to Deci pher the indus vallay inscriptions ಪ್ರಬಂಧದಲ್ಲಿ ಹರಪ್ಪ ಮತ್ತು ಮೆಹಂಜೊದಾರೋ ನಾಗರಿಕತೆಯ ನಿಗೂಢ ಲಿಪಿ, ಕಾಲದ ನಿರ್ದಿಷ್ಟತೆಯನ್ನು ಕ್ರಿ.ಪೂ. ೩ನೇ ಸಹಸ್ರಮಾನವಾಗಿ ಚರ್ಚಿಸಿದ್ದಾರೆ. ಲಿಪಿಯ ಮೂಲ ದ್ರಾವಿಡ / ಆರ್ಯ ಅಥವಾ ಬೇರೆ ಭಾಷಾ ವರ್ಗಕ್ಕೆ ಸೇರಿರುವ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

೮೯. ವಿ.ಆರ್‌ ಸುಬ್ರಮಣ್ಯಮ್ (೧೯೨೬೨೦೦೯)

ವಿ.ಆರ್‌. ಸುಬ್ರಮಣ್ಯಮ್ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ದ್ರಾವಿಡಿಯನ್ ಭಾಷಾ ವಿಜ್ಞಾನವನ್ನು ಪ್ರಚುರ್ಯ ಪಡಿಸಿದವರು. ತಂಜಾವೂರು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ. ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ತಿರುವನಂತಪುರಮ್ DLA ಸಂಸ್ಥೆಯ ಸ್ಥಾಪಕರಾಗಿದ್ದರು. International Institute of Tamil Studies ಸ್ಥಾಪನೆಯಲ್ಲೂ ಇವರ ಪಾತ್ರ ಹಿರಿದಾಗಿದೆ. ಅಲ್ಲದೇ Central Institute of Classical Tamil ನ ಉಪಚೇರ್‍ಮನ್‌ರಾಗಿ ಕಾರ್ಯ ನಿರ್ವಹಿಸಿದ್ದಾರೆ, International journey of Dravidian Linguistics ನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

Vadasery lyemperumal Subramoniam ಅವರು ಕನ್ಯಾಕುಮಾರಿ ಜಿಲ್ಲೆಯ ವಡಸೇರಿ ಎಂಬಲ್ಲಿ ೧೯೨೬ರಲ್ಲಿ ಜನಿಸಿದರು. Vaiyaapuri Pillai ಅವರ ಶಿಷ್ಯರಾಗಿದ್ದರು. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ತಮಿಳು ಭಾಷೆ ಮತ್ತು ಸಾಹಿತ್ಯದಲ್ಲಿ ಎಂ.ವಿ ಪಡೆದುಕೊಂಡರು. USA ಯ Indian University ನಲ್ಲಿ ಪಿ.ಎಚ್. ಡಿ. ಪಡೆದುಕೊಂಡರು. ಜಾಘ್ನಾ, ಶ್ರೀಲಂಕಾ, ತಮಿಳು ವಿಶ್ವವಿದ್ಯಾಲಯ, ತಂಜಾವೂರು ಈ ವಿಶ್ವವಿದ್ಯಾಲಯಗಳಲ್ಲಿ ಡಿ.ಲಿಟ್ ಪಡೆದುಕೊಂಡರು. ಅಣ್ಣಾಮಲೈ ಮತ್ತು ಕೇರಳ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ತಿರುವನಂತಪುರಮ್‌ನ ಪ್ರಾದೇಶಿಕ ಸಮುದಾಯದ ಭಾಷಾ ವಿಜ್ಞಾನದ ನಕಾಶೆ ಸಿದ್ಧಪಡಿಸಿದ James. R. Daniels ಇವರ ಶಿಷ್ಯರಾಗಿದ್ದರು.

ಸುಬ್ರಮಣ್ಯಮ್ ಅವರು Renewellek’s, Theory of Literature ನ್ನೂ ತಮಿಳಿಗೆ ಅನುವಾದಿಸಿದರು. ಇದೊಂದು ಆಕರ ಗ್ರಂಥವಾಗಿದೆ. ತಮಿಳು ಮತ್ತು ಮಲಯಾಳಮ್ ವಿಷಯಗಳೆರಡರಲ್ಲೂ ಪರಿಣಿತರಾಗಿದ್ದು ಅನೇಕ ವಿದ್ಯಾರ್ಥಿಗಳಿಗೆ ಗೈಡ್ ಮಾಡಿದರು. ಸಾಹಿತ್ಯಿಕ ಸಿದ್ಧಾಂತಗಳು, ಸಾಹಿತ್ಯದ ಘಟ್ಟಗಳು, ವಿವರಣಾತ್ಮಕ ಭಾಷಾ ವಿಜ್ಞಾನ ಮೆದುಳು ಮತ್ತು ಭಾಷೆ ಎಲ್ಲ ವಿಷಯಗಳ ಕುರಿತು ಸಾಕಷ್ಟು ಬರವಣೆಗೆ ಮಾಡಿದ್ದಾರೆ. ಒಟ್ಟಾರೆಯಾಗಿ ೧೬ ಕೃತಿಗಳು, ೧೦೨ ಸಂಶೋಧನಾ ಪ್ರಬಂಧಗಳಿವೆ. Index of purananuru ೧೯೬೨ರಲ್ಲಿ Dialect Survey of of Malayalam, ೧೯೭೪ರಲ್ಲಿ ಪ್ರಕಟಿಸಿದರು. Dravidian Encyclopaedia ಮೂರು ಸಂಪುಟಗಳನ್ನು ಸಂಪಾದಿಸಿದರು. The International Association of Tamil Research’ ಆಯೋಜಿಸಿದ Proceedings ಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು.

೯೦. ವೈಯಾಪುರಿ ಪಿಳ್ಳೆ (೧೮೯೧೧೯೫೬)

ಪ್ರಾಚೀನ ತಮಿಳು ಸಾಹಿತ್ಯದ ಕುರಿತು ಸಾಕಷ್ಟು ಸಂಶೋಧನೆ ಮಾಡಿದ್ದಾರೆ ತಮಿಳು ನಿಘಂಟನ್ನು ೧೦ ಸಂಪುಟಗಳಲ್ಲಿ ಸಂಪಾದಿಸಿದರು. ಸಂಗಮ್ ಕಾಲದ ಕೃತಿ ನಿರ್ಣಯವನ್ನು ಮಾಡಿದರು. ಹಲವಾರು ಹಸ್ತಪ್ರತಿಗಳನ್ನು ಸಂಪಾದಿಸಿದರು. ಸಂಗಮ್ ಕಾಲದ ಕೃತಿಗಳನ್ನು ಸಂಪುಟಗಳಲ್ಲಿ ಹೊರತೊಂದರು.

೧೯೨೬ರಲ್ಲಿ ಮದ್ರಾಸ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದರು. ೧೯೫೧-೫೪ ಕೇರಳ ವಿಶ್ವವಿದ್ಯಾಲಯದಲ್ಲಿ ತಮಿಳು ಪೀಠದಲ್ಲಿ ಕಾರ್ಯನಿರ್ವಹಿಸಿದರು. ತಮಿಳು ಮತ್ತು ಸಾಹಿತ್ಯ ಕುರಿತು ಸಾಕಷ್ಟು ಕೃತಿ ರಚಿಸಿದ್ದಾರೆ. Kaviyar Kalam, History of Tamil Language and literature, Tami Cudas Manikal, Dravida Maligalin Araichi ಇತ್ಯಾದಿ.