೯೧. ಸಿ.ಪಿ. ಬ್ರೌನ್ (೧೭೯೮೧೮೮೪)

ಸಿ.ಪಿ. ಬ್ರೌನ್ ತೆಲುಗು ಭಾಷೆಯ ಆಚಾರ್ಯ ಪುರುಷರು, ತೆಲುಗು ಭಾಷಾ ಪ್ರವೀಣರಾಗಿದ್ದಷ್ಟೇ ಸಂಸ್ಕೃತ, ಪರ್ಶಿಯಾ ಭಾಷೆಗಳಲ್ಲೂ ಆಳವಾದ ಜ್ಞಾನ ಹೊಂದಿದವರಾಗಿದ್ದರು. ರಾಬರ್ಟ್ ಕಾಲ್ಡ್‌ವೆಲ್‌ಗೆ ಸಂಸ್ಕೃತಿ ಪಾಠ ಹೇಳಿಕೊಟ್ಟವರು ಕೊನೆಗೆ ಲಂಡನ್ ವಿಶ್ವವಿದ್ಯಾಲಯದಲ್ಲಿ ತೆಲುಗು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮದ್ರಾಸ್‌‌ನಲ್ಲಿ ಪ್ರಾಚ್ಯ ಹಸ್ತಪ್ರತಿಗಳ ಸಂಗ್ರಹಿಸಿ ಗ್ರಂಥಾಲಯವೊಂದನ್ನು ಮಾಡಿದರು. ೧೯ನೇ ಶತಮಾನದ ತೆಲುಗಿನ ಅತೀ ಮಹತ್ವದ ವಿದ್ವಾಂಸರಾಗಿ ಬ್ರೌನ್ ಕಾಣಿಸಿಕೊಳ್ಳುತ್ತಾರೆ.

ಬ್ರಿಟಿಷ್ ಮಿಶನರಿಯೊಬ್ಬರ ಮಗನಾಗಿ ಕಲ್ಲತ್ತಾದಲ್ಲಿ ೧೭೯೮ರಲ್ಲಿ ಬ್ರೌನ್ ಜನಿಸಿದರು. ಇಂಗ್ಲೆಂಡ್‌‌ದಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಿದರು. ಕ್ರಿಶ. ೧೮೧೭ರಲ್ಲಿ ಆಂಧ್ರಪ್ರದೇಶದಲ್ಲಿ ಐ.ಎ.ಎಸ್. ಅಧಿಕಾರಿಯಾಗಿ ನಿಯುಕ್ತಿಗೊಂಡರು. ಆಂಧ್ರ ಜನಮನ ಅರ್ಥೈಸಿಕೊಳ್ಳಲು ತೆಲುಗು ಭಾಷೆ ಸಾಹಿತ್ಯಾದಿಗಳನ್ನು ಅಧ್ಯಯನ ಮಾಡಿದರು. ಹಾಗಾಗಿಯೇ ಇಂಗ್ಲಿಷ್ ತೆಲುಗು ಭಾಷೆಗಳನ್ನು ಒಲ್ಲ ದ್ವಿಭಾಷಿಗಳಾಗಿ ಭಾಷಾಂತರ ಕಾರ್ಯವನ್ನು ನಿರ್ವಹಿಸಿದರು. ತೆಲುಗಿನ ವೇಮನನ ಸಾಹಿತ್ಯವನ್ನು ಇಂಗ್ಲಿಷಿನಲ್ಲೂ ಮತ್ತು ಇಂಗ್ಲಿಷ್ ಬೈಬಲನ್ನು ತೆಲುಗಿಗೂ ಅನುವಾದಿಸಿದರು. ತೆಲುಗು- ಇಂಗ್ಲಿಷ್, ಇಂಗ್ಲಿಷ್ ತೆಲುಗು ನಿಘಂಟುಗಳನ್ನು ರಚಿಸಿದರು. ಅಲ್ಲದೇ ತೆಲುಗು ವ್ಯಾಕರಣ ಮತ್ತು ತೆಲುಗು ಓದುಗ ಎಂಬ ಕೃತಿಗಳನ್ನು ರಚಿಸಿದ್ದಾರೆ. ವ್ಯಾಖ್ಯಾನ ಸಹಿತ ತೆಲುಗಿನ ಮನುಚರಿತಮ್ ಮತ್ತು ವಸುಚರಿತಮ್‌‌ಗಳನ್ನು ಸಂಪಾದಿಸಿದ್ದಾರೆ. ಹಸ್ತಪ್ರತಿ, ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ ಆಂಧ್ರ ಇತಿಹಾಸಕ್ಕೆ ಸಂಬಂಧಿತ ೪೮ ಸಂಪುಟಗಳನ್ನು ರಚಿಸಿದ್ದಾರೆ. ಕಾಲ್ಡ್‌ವೆಲ್‌ಗೆ ಸಂಸ್ಕೃತ ಮತ್ತು ತೆಲುಗು ಕಲಿಸಿಕೊಟ್ಟ ಗುರುಗಳು ಇವರಾಗಿದ್ದಾರೆ. ಅಪ್ರಕಟಿತ ಹಾಗೂ ಅಲಕ್ಷಿತ ಹಲವಾರು ತೆಲುಗಿನ ಹಸ್ತಪ್ರತಿಗಳನ್ನು ಸಂಶೋಧಿಸಿ ಕೊಟ್ಟಿದ್ದಾರೆ. ಸಂಸ್ಕೃತ ಹಾಗೂ ಪರ್ಶಿಯನ್ ಭಾಷೆಗಳ ಬಗೆಗೂ ಅಪಾರ ಜ್ಞಾನವಿತ್ತು.

೯೨. ಸಿ.ಜೆ. ಬೆಶ್ಚಿ (೧೯೮೦೧೭೪೭)

ಬೆಶ್ಚಿಯು ಒಬ್ಬ ಇಟಲಿಯನ್ ಜೆಸುಯಿಟ್ ಮಿಶನರಿಯಾಗಿ ೧೬-೧೭ನೆಯ ಶತಮಾನಕ್ಕಾಗಲೇ ದ್ರಾವಿಡ ಭಾಷೆಯೊಂದರ ಕುರಿತು ಕೂಲಂಕುಷ ಅಧ್ಯಯನ ನಡೆಸಿದರು. ಯಾವುದೇ ಸಂಶೋಧನೆ, ಅಧ್ಯಯನಗಳು ನಡೆಯುವ ಕಾಲಕ್ಕೆ ಭಾಷೆಯೊಂದರಲ್ಲಿ ವಿಶೇಷ ಅಧ್ಯಯನ ನಡೆಸಿರುವುದು ಗಮನಾರ್ಹವೆನಿಸಿದೆ. ಅದರಲ್ಲೂ ಧಾರ್ಮಿಕ ಚಟುವಟಿಕೆಯ ಜೊತೆ ಜೊತೆ ಈ ರೀತಿಯ ಭಾಷಾ ಕಾರ್ಯವನ್ನು ನಿರ್ವಹಿಸಿದರು.

ಬೆಶ್ಚಿಯವರು ಇಟಲಿಯಲ್ಲಿ (ವೆನಿಸನಲ್ಲಿ) ೧೬೮೦ರಲ್ಲಿ ಜನಿಸಿದರು. ೧೭೧೧ರಲ್ಲಿ ಜೆಸುಯಿಟ್ ಮಿಶನರಿಯಾಗಿ ಭಾರತಕ್ಕೆ ಒಂದು ತಮಿಳುನಾಡಿನಲ್ಲಿದ್ದರು. ತಮಿಳು ವ್ಯಾಕರಣವನ್ನು ಬರೆದಿದ್ದಾರೆ. ಶೆಂದಮಿಳನ್ನು ಲ್ಯಾಟಿನ್ ಭಾಷೆಗೆ ಪರಿಚಯಿಸಿದರು. ತಮಿಳು ವರ್ಣಮಾಲೆಯಲ್ಲಿ ಹೊಸ ಸಂಕೇತಗಳನ್ನು ಬಳಕೆಗೆ ತಂದರು. ತಮಿಳನ್ನು ತೀರ ಪ್ರೀತಿಸಿದ ಇವರು ತಮಿಳಿನ ವ್ಯಾಕರಣ ನಿಘಂಟು, ಛಂದಸ್ಸು ಕುರಿತು ಹಲವಾರು ಕೃತಿಗಳನ್ನು ರಚಿಸಿದರು. ಚತುರಕರಾದಿ ಎಂಬ ತಮಿಳು ನಿಘುಂಟು ತಮಿಳ್-ಲ್ಯಾಟಿನ್ ನಿಘಂಟು, ಪೋರ್ಚುಗೀಸ್ ತಮಿಳ್ ಲ್ಯಾಟಿನ್ ನಿಘಂಟುಗಳನ್ನು ಇಂಗ್ಲೀಷಿಗೆ ಅನುವಾದಿಸಿ ಜಗತ್ತಿನ ಗಮನ ಸೆಳೆದರು. ತಮಿಳಿನ ಶಾಸ್ತ್ರೀಯ ಕಾವ್ಯದಂತೆಯೇ ಎರಡು ಕಾವ್ಯಗಳನ್ನು ಸಂಯೋಜಿಸಿದರು.

ಬೆಶ್ಚಿ ತಮಿಳು ವ್ಯಾಕರಣ, ನಿಘಂಟುಶಾಸ್ತ್ರ ಮತ್ತು ಮಹಾಕಾವ್ಯಗಳ ಕುರಿತು ಅಧಿಕೃತವಾಗಿ ಹೇಳಬಲ್ಲವರಾಗಿದ್ದರು. ಕುರುಳ್‌‌ನ್ನು ಲ್ಯಾಟಿನ್‌‌ಗೆ ಭಾಷಾಂತರಿಸಿದರು. ಚತುರಕರಾತಿ ನಿಘಂಟು ಅಕರಾದಿ ಪದ್ಧತಿಯಲ್ಲಿ ರಚಿತಗೊಂಡಿದೆ. ನಾಲ್ಕು ಭಾಗಗಳಿದ್ದು ಮೊದಲ ಭಾಗದಲ್ಲಿ ನಾನಾರ್ಥಕ ಪದಗಳಿವೆ. ಎರಡನೆಯ ಭಾಗದಲ್ಲಿ ಸಮಾನಾರ್ಥಕ ಪದಗಳಿವೆ, ಮೂರರಲ್ಲಿ ತಾಂತ್ರಿಕ ಹಾಗೂ ಪಾರಿಭಾಪಿಕ ಪದಗಳು ಮತ್ತು ನಾಲ್ಕರಲ್ಲಿ ಪ್ರಾಸಪದಗಳು ಇವೆ. Tamil-Latin Dictionary -೧೭೪೨ರಲ್ಲಿ ರಚಿಸಿದರು.

ನಿಘಂಟುಕಾರರಾಗಿ, ವ್ಯಾಕರಣತಜ್ಞರಾಗಿ, ಕವಿಯಾಗಿ, ಅನುವಾದಕರಾಗಿ ಇವರ ಕಾರ್ಯಕ್ಷೇತ್ರ ವಿಸ್ತೃತವಾದುದು. ಇಟಾಲಿಯನ್ ಮಿಶನರಿಯಾಗಿ ವೀರಮಾಮನಿವೆರ್‌ ಎಂದೇ ಪ್ರಖ್ಯಾತರಾಗಿದ್ದಾರೆ. ಪ್ರಾಚೀನ ಭಾರತಶಾಸ್ತ್ರಜ್ಞರೂ ಕೂಡಾ. ಬೆಶ್ಚಿ ಹಲವಾರು ವ್ಯಾಕರಣ ನಿಘಂಟು ಛಂದಸ್ಸು, ಗದ್ಯ-ಪದ್ಯ ತತ್ವಶಾಸ್ತ್ರೀಯ, ಧಾರ್ಮೀಕ ಕೃತಿಗಳ ಕತೃ ತಮಿಳು ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಚೆನ್ನಾಗಿ ಅರ್ಥೈಸಿ ಕೊಂಡವರು. ಚತುರಕರಾದ ಎಂಬ ತಮಿಳು ನಿಘಂಟನ್ನು ಅಕಾರಾದಿ ವ್ಯವಸ್ಥೆಯಲ್ಲಿ ಸಿದ್ಧಪಡಿಸಿಕೊಟ್ಟಿದ್ದಾರೆ. ತಮಿಳು ಲ್ಯಾಟಿನ್ ನಿಘಂಟು ಮತ್ತು ಪೋರ್ಚಿಗೀಸ್ – ತಮಿಳು ಲ್ಯಾಟಿನ್ ನಿಘಂಟುಗಳನ್ನು ರಚಿಸಿಕೊಟ್ಟಿದ್ದಾರೆ.

ಕೃತಿಗಳು :

 1. Grammar of Kodum Tamil
 2. Sentamil
 3. Agrammar of the Common Dialect of Tamil Language
 4. Thonnul Vilakkam
 5. Latin- Tamil Dictionary
 6. Portuguese- Tamil Dictionary

 

೯೩. ಸಿ. ಶಿವಮೂರ್ತಿ

ಸಿ. ಶಿವಮೂರ್ತಿಯವರ ಪುರಾತತ್ವ ಇಲಾಖೆಯ ಸೂಪರಿಡೆಂಟ್ ವಿವಿಧ ವಸ್ತು ಸಂಗ್ರಹಾಲಯಗಳನ್ನು ಇರುವ ವಾಸ್ತುಶಿಲ್ಪ ಶಿಲ್ಪಕಲೆ ಶಾಸನಗಳನ್ನು ಅಧ್ಯಯನ ಮಾಡಿದವರು.

ರಾಜ್ಯದ ಸಾಮ್ಯಾಜ್ಯ ವಿಸ್ತರಣೆ ಹೇಗೆ ಎರಡು ಸಂಸ್ಕೃತಿಗಳ ಜನರ ಸಂಕರಕ್ಕೆ ಪ್ರಭಾವಕ್ಕೆ ಒಳಗಾಗುತ್ತವೆ. ಅಲ್ಲದೆ ವಿಸ್ತರಣೆಯಿಂದ ಸಾಂಸ್ಕೃತಿಕ ಕೊಳುಕೊಡುಗೆ, ಪುನನಿರ್ಮಾಣಕ್ಕೆ ಕಾರಣವಾಗುತ್ತದೆ ಎಂಬುದನ್ನು ಪುರಾತತ್ವೀಯ ನೆಲೆಯಿಂದ ಅಧ್ಯಯನ ಮಾಡಿ Royal Conquests and cultural Migrations in South India & the Deccan ಕೃತಿ ರಚಿಸಿದ್ದಾರೆ.

ಇತಿಹಾಸದ ತುಂಬ ವಿವಿಧ ರಾಜರುಗಳ ಆಕ್ರಮಣ, ಸಾಮ್ರಾಜ್ಯಶಾಹಿ ಮನೋಭಾವ ರಾಜ್ಯವಿಸ್ತರಣೆ, ಆಡಳಿತ ಇತ್ಯಾದಿಗಳ ಬಗೆಗೆ ವಿವರಣೆಯಿದೆ. ದೊಡ್ಡ ಸಾಮ್ರಾಜ್ಯಗಳು ಮೊದಲಿನಿಂದಲೂ ಸಮಾನ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿವೆ. ಅಲ್ಲಲ್ಲಿ ಸ್ಥಳೀಯ ಸಂಸ್ಕೃತಿ ತಲೆಹಾಕಿದ್ದರೂ ಅದರಲ್ಲಿ ಸಮಾನ ಗುಣಲಕ್ಷಣಗಳಿವೆ. ಪರಕೀಯರು ಒಂದು ರಾಜ್ಯಕ್ಕೆ ಬರುವುದು, ವಾಸವಾಗುವುದು ಸ್ಥಳೀಯ ಸಂಸ್ಕೃತಿಯನ್ನು ಒಪ್ಪಿಕೊಳ್ಳುವುದು ಒಂದಾದರೇ, ಇಲ್ಲಿಯವರು ಕಾರ್ಯನಿಮಿತ್ತ ಬೇರೆಡೆಗೆ ಚಲಿಸುವುದು ಒಂದು ರೀತಿಯ ಸಾಮಾನ್ಯ ಗುಣಲಕ್ಷಣ ಸಂಸ್ಕೃತಿಗೆ ನಾಂದಿ ಹಾಡಿದೆ. ಪ್ರೊಷಾಕು, ಆಭರಣ, ಶಿಲ್ಪಕಲೆಯಲ್ಲಿನ ಸಾಮ್ಯ ಗಮನಾರ್ಹವೆನಿಸುತ್ತದೆ.

೨ನೇ ಶತಮಾನದ ಅಮರಾವತಿಯಲ್ಲಿರುವ ಮಾರನ ದರ್ಶನಕ್ಕೆ ಸಂಬಂಧಪಟ್ಟ ಕೆತ್ತನೆಯಲ್ಲಿ ಮಾರನ ಒಬ್ಬ ಕಿವುಡ ಅನುಚರನ ಹೊಟ್ಟೆಯ ಮೇಲೆ ಸಿಂಹದ ಮುಖವನ್ನು ಕೆತ್ತನೆಯಲ್ಲಿ ಮಾರನ ಒಬ್ಬ ಕಿವುಡ ಅನುಚರನ ಹೊಟ್ಟೆಯ ಮೇಲೆ ಸಿಂಹದ ಮುಖವನ್ನು ಕೆತ್ತಿರುವ ದೃಶ್ಯವಿದೆ. ಅದೇ ತರಹದ ದೃಶ್ಯವು ಘಂಟಸಾಲದಲ್ಲಿದೆ ಅದರಂತೆ ಅಜಂತಾದ ಚಿತ್ರಕಲೆಯಲ್ಲಿ ಚಿತ್ರಿತವಾಗಿದೆ. ಬದಾಮಿ ಮತ್ತು ಪ್ರಭಂಜನನಲ್ಲಿ ಹೊಟ್ಟೆಯ ಮೇಲೆ ಸಿಂಹದ ಕೆತ್ತನೆ ಇದೆ. ಚಾಲುಕ್ಯ ಮತ್ತು ರಾಷ್ಟ್ರಕೂಟರ ಯುದ್ದ ಮತ್ತು ಸಂಧಿಗಳು ಅವರ ವಾಸ್ತುಶಿಲ್ಪದ ಭವ್ಯತೆಗೆ ಸೌಂದರ್ಯ, ಸೂಕ್ಷ್ಮತೆಗೆ ಕೊಡುಗೆಗಳನ್ನು ನೀಡಿವೆ ಎಂಬ ಅಂಶಗಳನ್ನು ಕೃತಿಯಲ್ಲಿ ತಿಳಿಸಲಾಗಿದೆ.

೯೪. ಸುಬ್ರಮಣ್ಯಂ ಪಿ.ಎಸ್. (೧೯೩೯)

ದ್ರಾವಿಡ ಭಾಷಾ ಕ್ಷೇತ್ರದಲ್ಲಿ ಪಿ.ಎಸ್. ಸುಬ್ರಮಣ್ಯಂ ಅವರದು ಅಪಾರ ಕೊಡುಗೆಯಿದೆ. ತೌಲನಿಕ ದ್ರಾವಿಡ ಅಧ್ಯಯನ ಮತ್ತು ಬುಡಕಟ್ಟು ಭಾಷಾ ವಿಜ್ಞಾನದಲ್ಲಿ ಅಧ್ಯಯನ ಮಾಡಿದ್ದಾರೆ. ಸಂಸ್ಕೃತದಲ್ಲೂ ಅಗಾಧ ಪಾಂಡಿತ್ಯವಿದ್ದೂ ೫೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದರೂ ದ್ರಾವಿಡ ಕ್ಷೇತ್ರದಲ್ಲೂ ಮಹತ್ತರ ಕೊಡುಗೆಯಿದೆ.

ಸಂಸ್ಕೃತ ತಮಿಳು ವಿದ್ವಾಂಸರಾದ ಇವರು ತಿರುಚ್ಚಿಯ ಸೆಂಟ್ ಜೋಸಫ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದರು. ಗಣಿತಶಾಸ್ತ್ರದಲ್ಲಿ ಸ್ನಾತಕ, ಸಂಸ್ಕೃತದಲ್ಲಿ ಸ್ನಾತಕೋತ್ತರ ಹಾಗೂ ತಮಿಳಿನಲ್ಲಿ ಪಿ.ಹೆಚ್. ಡಿ (A Study on the relation Tamil and Sanskrit Grammatical Concepts) ಪಡೆದರು. ತಿರುವಾಯೂರಿನ ಮಹಾರಾಜ ಕಾಲೇಜ ಪ್ರಾಂಶುಪಾಲರು ಅಣ್ಣಾಮಲೈ ವಿ.ವಿ. ಯಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು.

೧೯೭೧ರಲ್ಲಿ ಆದ್ಯ ಕೃತಿಯೆನಿಸಿದ Dravidian Verb Morphology A Comparative Study ಪ್ರಕಟಿಸಿದರು. ದ್ರಾವಿಡ ಭಾಷಾವಿಜ್ಞಾನ ಕ್ಷೇತ್ರಕ್ಕೆ ಅಗತ್ಯವಾದ ಕೃತಿಯೆನಿಸಿದೆ. ಇದಾದ ನಂತರ ಭಾಷಿಕ ಹಾಗೂ ಬುಡಕಟ್ಟು ಭಾಷೆಯ ಬಗೆಗೆ ಹಲವಾರು ಕೃತಿಗಳನ್ನು ರಚಿಸಿದರು. ೧೯೮೨ರಲ್ಲಿ Dravidian Comparative Phonology ೧೯೭೪ರಲ್ಲಿ A descriptive Grammar of Gondi ೧೯೭೭ರಲ್ಲಿ Dravidian Language in Telugu ಪ್ರಕಟಿಸಿದರು. ಗೊಂಡೀ ಭಾಷಾ ವರ್ಣನಾತ್ಮಕ ವ್ಯಾಕರಣದಲ್ಲಿ ಗೊಂಡಿ ಭಾಷೆಯ ವಿಶ್ಲೇಷಣಾತ್ಮಕ ಅಧ್ಯಯನವನ್ನು ಮೂರು ಗೊಂಡಿ ಭಾಷೆಯ ಉಪಭಾಷೆಗಳ ಬಗೆಯನ್ನು ಕಾಣಬಹುದಾಗಿದೆ. ದ್ರಾವಿಡ ಕುಟುಂಬದ ಹಲವಾರು ಬುಡಕಟ್ಟು ಭಾಷೆಗಳನ್ನು ಅನ್ವೇಷಿಸಿದರು. ಅಲ್ಲದೇ on Theories of modern Lingustics ಗಳ ಕುರಿತಾಗಿಯೂ ಬರೆದಿದ್ದಾರೆ. ತೊಲಕಾಪ್ಪಿಯಂನ ಇಂಗ್ಲೀಷಿಗೆ ಅನುವಾದಿಸಿದರು. Comparative Study of Tamil Grammar ಬರೆದರು.

೯೫. ಸುನೀತಿಕುಮಾರ ಚಟರ್ಜಿ (೧೮೯೦೧೯೭೭)

ಸುನೀತಿಕುಮಾರ ಚಟರ್ಜಿಯವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು. ಬಹುಭಾಷಾ ವಿಶಾರದರಾದ ಇವರು ಮೂಲತಃ ಬಂಗಾಳಿಯವರು. ದ್ರಾವಿಡ -ಇಂಡೋ ಯುರೋಪಿಯನ್ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರ ಚಟರ್ಜಿಯವರು ತಮ್ಮ ಉತ್ನತ ಶಿಕ್ಷಣವನ್ನು ಕಲ್ಕತ್ತಾ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪೂರೈಸಿದರು. ಬಂಗಾಲಿಯ ಜೊತೆಗೆ ಪರ್ಶಿಯನ್ ಆಫ್ರಿಕನ್, ಹಿಂದಿ, ಗೋಥಿಕ್, ಐರಿಷ್ ಭಾಷೆಗಳನ್ನು ಅರಿತವರಾಗಿದ್ದರು. ದ್ರಾವಿಡ ವಿಜಾರಕ್ಕೆ ಸಂಬಂಧಿಸಿದಂತೆ Dravidian ಎಂಬ ಶೀರ್ಷಿಕೆಯಲ್ಲಿ ಲೇಖನಗಳ ಸಂಗ್ರಹ ರೂಪ ಕೃತಿಯೊಂದನ್ನು ಬರೆದಿದ್ದಾರೆ. ೧೯೫೭ರಲ್ಲಿ Dravidian Philology, ೧೯೫೯ ರಲ್ಲಿ Ancient Tamil and primitive Dravidian ಎಂಬ ಲೇಖನನ್ನು ಬರೆದಿದ್ದಾರೆ. ಇವರ ಅಧ್ಯಯನ ಕ್ಷೇತ್ರದ ವ್ಯಾಪ್ತಿಯ ಇಂಡೋ ಆರ್ಯನ್, ಆಸ್ಟ್ರಿಕ್ ಮತ್ತು ದ್ರಾವಿಡ ಭಾಷೆಗಳನ್ನು ಒಳಗೊಳ್ಳುತ್ತದೆ.

ಸುನೀತಿಕುಮಾರ ಚಟರ್ಜಿಯವರು ೧೮೯೦ರಲ್ಲಿ ಜನಿಸಿದರು. ಕಲ್ಕತ್ತಾ ಕಾಲೇಜಿನಲ್ಲಿ ಮತ್ತು ಲಂಡನ್‌ನಲ್ಲಿ ಪ್ರಾಚ್ಯ ಮತ್ತು ಆಫ್ರಿಕನ್ ಅಧ್ಯಯನವನ್ನು ಮಾಡಿದರು. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ತೌಲಕ ಭಾಷಾಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿ ಬೋಧಿಸುತ್ತಿದ್ದರು. ಚಟರ್ಜಿಯವರ ಪ್ರಮುಖ ಕೃತಿಯಾಗಿ Origin and Development of Bengali Language ೧೯೨೬ರಲ್ಲಿ ಪ್ರಕಟವಾಯಿತು. ಇದಲ್ಲದೇ ಹಲವಾರು ಕೃತಿಗಳನ್ನು ಬಹುಭಾಷಾ ನೆಲೆಯಿಂದ ಗಮನಿಸಬಹುದಾಗಿದೆ. ೧೯೪೨ರಲ್ಲಿ Africanism ೧೯೬೪ರಲ್ಲಿ Balts & Aryans ಇದಲ್ಲದೇ ಹಲವಾರು ಸಂಶೋಧನಾತ್ಮಕ ಪ್ರಬಂಧಗಳನ್ನು ಬರೆದಿದ್ದಾರೆ. ಈ ಪ್ರಬಂಧಗಳು ಇಂಡೋ ಆರ್ಯನ್, ಆಸ್ಟ್ರಿಕ್ ಮತ್ತು ದ್ರಾವಿಡ ಚಿಂತನೆಯ ಫಲಗಳಂತೆ ತೋರುತ್ತವೆ. ೧೯೩೧ರಲ್ಲಿ Africanism ೧೯೩೮ರಲ್ಲಿ Levels of Linguistic analysis ೧೯೬೭ರಲ್ಲಿ Some lranian and turkic Loans in Sanskrit ಇತ್ಯಾದಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಅನೇಕ ವಿದ್ವಾಂಸರುಗಳ ಒಡನಾಟದಲ್ಲಿ ಬಹುಭಾಷಾ ವಿದ್ವಾಂಸರಾದ ಇವರಿಗೆ ಅನೇಕ ದೇಶಗಳಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸುವ ಅವಕಾಶವಿತ್ತು ಹಾಗೂ ಅನೇಕ ಸಂಘಗಳ, ಸಂಸ್ಥೆಗಳ ಅಧ್ಯಕ್ಷಸ್ಥಾನ ಗೌರವಾದರಗಳನ್ನು ಇವರು ಪಡೆದುಕೊಂಡಿದ್ದಾರೆ. ಚಲಿಸುವ ಜ್ಞಾನಕೋಶದಂತೆ ಇವರ ಕೀರ್ತಿ ಅಪಾರ.

೯೬. ಸುದಿಭೂಷಣ ಭಟ್ಟಾಚಾರ್ಯ (೧೯೧೨೧೯೭೫)

ಸುದಿಭೂಷಣ ಭಟ್ಟಾಚಾರ್ಯರು ಪ್ರಗಲ್ಫ ಭಾಷಾ ವಿಜ್ಞಾನಿಯಾಗಿದ್ದರು. ಕ್ಷೇತ್ರಕಾರ್ಯವು ಅವರ ಅಚ್ಚುಮೆಚ್ಚಿನ ವಿಷಯವಾಗಿತ್ತು. ಕ್ಷೇತ್ರಕಾರ್ಯದ ಮೂಲಕ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಬುಡಕಟ್ಟು ಸಮುದಾಯ ಭಾಷೆಗಳನ್ನು ಅಧ್ಯಯನ ಮಾಡಿದ್ದಾರೆ. ದ್ರಾವಿಡ ಪದನಿಷ್ಟತ್ತಿಕೋಶದಲ್ಲಿ ಬುಡಕಟ್ಟು ವಿವರಗಳಿಗೆ ಸಂಬಂಧಿಸಿ ಇವರ ಮಾಹಿತಿಯನ್ನು ಹೆಚ್ಚು ಬಳಸಿಕೊಳ್ಳಲಾಗಿದೆ. ಇವರು Anthropological Survey of India ದಲ್ಲಿ ಕೆಲಸ ನಿರ್ವಹಿಸುತ್ತ ಬುಡಕಟ್ಟುಗಳನ್ನು ಸರ್ವೆಕ್ಷಣೆ ಮಾಡಿದ್ದಾರೆ. ಅಲಿಖಿತ ಭಾಷೆಗಳೆನಿಸಿದ ಪರ್ಜಿ ಕುಯಿ, ಕುವಿ ಗದಬಾ ಗೊಂಡಿ ಮತ್ತು ಪೆಂಗೋ ಭಾಷೆಗಳನ್ನು ಅಧ್ಯಯನ ಮಾಡಿದ್ದಾರೆ. ಸುದಿಭೂಷಣ ಭಟ್ಟಾಚಾರ್ಯ ಅವರು ದ್ರಾವಿಡ ಭಾಷೆಗಳಂತೆ ಆಸ್ಟ್ರಿಕ್, ಟೆಬೆಟೋ- ಬರ್ಮನ್ ಮತ್ತು ಇಂಡೋ ಆರ್ಯನ್ ಭಾಷಾ ವಿಜ್ಞಾನದಲ್ಲೂ ಪರಿಣಿತಿ ಪಡೆದಿದ್ದರು. ಹಾಗಾಗಿಯೇ ತೌಲನಿಕಭಾಷಾ ವಿಜ್ಞಾನದಲ್ಲೂ ಇವರ ಸಾಧನೆಯಿದೆ. ಟಿ.ಬರೋ ಅವರೊಂದಿಗೆ ಕ್ಷೇತ್ರಾಧ್ಯಯನ ಮಾಡಿ (DED) ಸಿದ್ಧಪಡಿಸುವಲ್ಲಿ ಅವರ ಮಹತ್ತರ ಪ್ರಾತ್ರವಿದೆ.

ಕೃತಿಗಳು: ಅವರ ಕೃತಿಗಳು ಈ ರೀತಿಯಾಗಿವೆ.

 1. The Parji Language (1963)
 2. Acomparative Vocabulary of the Gondi dialects and notes on kuvi with a Short vocabulory (With T. Burrow).
 3. Konda Language (Grammar and Vocabulory) 1956 ಪ್ರಬಂಧ
 4. Ollari- A Dravidian Speech (1957)
 5. Naiki of Chanda (1961)
 6. Tribal Languages of Kerala (1976)

 

೯೭. ಸೇತು ಪಿಳ್ಳೈ. ಆರ್‍. ಪಿ. (೧೮೯೬೧೯೬೧)

ಸೇತುಪಿಳ್ಳೈ ಅವರದು ವಿಮರ್ಶಕರಾಗಿ, ಪ್ರಬಂಧಕಾರರಾಗಿ, ಸಂಶೋಧಕರಾಗಿ ಬಹುಮುಖಿ ನಿಲುವು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪ್ರಥಮ ತಮಿಳರು, ತಮಿಳು ವಾಙ್ಮಯಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ತಮಿಳು, ಇಂಗ್ಲಿಷ್ ಬಲ್ಲ ಇವರು ತಮಿಳು ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಾಗಿ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ದ್ರಾವಿಡಕ್ಕೆ ಸಂಬಂಧಿಸಿದಂತೆ ಇಂಗ್ಲಿಷಿನಲ್ಲಿ Dravidian Compartive Vocabulory and Common Dravidian Proverbs and words and their Significance. ಎಂಬ ಕೃತಿಗಳನ್ನು ರಚಿಸಿದ್ದಾರೆ. Tamil Encyclopaedia ಮತ್ತು Tamil Lexicon ಅಲ್ಲದೆ ಮತ್ತು ಯೋಜನೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮಿಳು ಸಾಹಿತ್ಯ ಕುರಿತು ಹಲವಾರು ವಿಮರ್ಶೆಗಳನ್ನು ಪ್ರಕಟಿಸಿದ್ದಾರೆ. ತಮಿಳು ಸಾಹಿತ್ಯ ಸಂಸ್ಕೃತಿಯನ್ನು ತಮಿಳೇತರರಿಗೂ ತಿಳಿಸಿಕೊಟುವಲ್ಲಿ ಇವರ ಪಾತ್ರ ಮಹತ್ವದ್ವಾಗಿದೆ.

ಸೇತುಪಿಳ್ಳೈ ೧೮೯೬ ರಲ್ಲಿ ತಿರುನೆಲ್ವೇಲಿ ಜಿಲ್ಲೆಯ ರಾಜವಲ್ಲಿಪುರಮ್‌ನಲ್ಲಿ ಜನಿಸಿದರು. ತಮ್ಮ ವಿದ್ಯಾಭ್ಯಾಸದ ನಂತರ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪಾಲಯಮ್ ಕೋಟೈ ೧೯೧೨ರ ಜೂನ್‌‌ನಲ್ಲಿ ಮರೈಮಲೈ ಅಡಿಗಳ್ ಅವರ ವ್ಯಾಖ್ಯಾನ ಕೇಳಿದ ನಂತರ ತಮಿಳಿನಲ್ಲಿ ಆಸಕ್ತಿ ಬೆಳೆಸಿಕೊಂಡರು. ಅಲ್ಲಿ ಕೆಲಕಾಲ ರಾಜಕೀಯ ಜೀವನ ನಡೆಸಿ ಶಿಕ್ಷಕ ವೃತ್ತಿಗೆ ಸೇರಿದರು. ೧೯೩೦-೩೬ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಂತರ ೧೯೩೬ರಲ್ಲಿ ಮದ್ರಾಸ್ ವಿ.ವಿ.ಗೆ ಸೇರಿದರು. ರಾಬರ್ಟ್ ಕಾಲ್ಡ್‌‌ವೆಲ್ ಬಗ್ಗೆ Caldwell Aiyar Saritam ಬರೆದಿದ್ದಾರೆ. ಇವರಿಗೆ ಶಬ್ದಗಳ ಮಗು Sollin Selver ಎಂಬ ಹೆಸರಿತ್ತು. ತಮಿಳು ನಿಘಂಟು, ತಮಿಳಿನಲ್ಲಿ ಅನೇಕ ಕೃತಿಗಳ ರಚನೆ ಮಾಡಿದ್ದಾರೆ.

೯೮. ಸೇಡಿಯಾಪು ಕೃಷ್ಣ ಭಟ್ (೧೯೦೨)

ಸೇಡಿಯಾವು ಕೃಷ್ಣ ಭಟ್ ಅವರು ಕವಿಯಾಗಿ, ಕಥಾನಿರೂಪಕರಾಗಿ, ನಿಘಂಟುಕಾರರಾಗಿ ಭಾಷಾಶಾಸ್ತ್ರಜ್ಞರಾಗಿ, ವಿದ್ವಾಂಸರಾಗಿ ಪ್ರಸಿದ್ಧರು. ಅತೀವ ಜ್ಞಾನದಾಹದಿಂದ ಹಲವಾರು ವಿಷಯಗಳನ್ನು ಅರ್ಥೈಸಿಕೊಂಡರು. ಕನ್ನಡವಲ್ಲದೇ ಸಂಸ್ಕೃತ ಇತ್ಯಾದಿ ಭಾಷೆಗಳನ್ನು ಕಲಿತರು. ಆಯುರ್ವೇದವನ್ನು ಕೂಡ ಕರಗತ ಮಾಡಿಕೊಂಡಿದ್ದರು.

ಕೃಷ್ಣಭಟ್ ಅವರು ೧೯೦೨ರಲ್ಲಿ ಸೇಡಿಯಾವು ಊರಲ್ಲಿ ಜನಿಸಿದರು. ಅವರ ಶಿಕ್ಷಣ ಕೇವಲ ೯ ತರಗತಿವರೆಗಾದರೂ ಪಡೆದುಕೊಂಡ ಜ್ಞಾನ ಸಾಗರದಷ್ಟು. ಅವರದ್ದು ಸ್ವತಂತ್ರ ಮತ್ತು ಸ್ವಂತಿಕೆಯಿಂದ ಕೂಡಿದ ಸೃಜನಶೀಲ ಬರವಣಿಗೆ. ಅನೇಕ ಕೃತಿಗಳನ್ನು ಅವರು ರಚಿಸಿದರು. ೧೯೫೩ರಲ್ಲಿ ಕನ್ನಡ ವರ್ಣಗಳು ಎಂಬ ಕೃತಿಯನ್ನು ವ್ಯಾಖ್ಯಾನ ಸಹಿತ ರಚಿಸಿದರು. ಕೆಲವು ದೇಶನಾಮಗಳು ಎಂಬುದನ್ನು ೧೯೭೫ರಲ್ಲಿ ಕನ್ನಡ ಗೀತಿಕೆಯ ಲಕ್ಷಣ ಮತ್ತು ಧಾಟಿಯನ್ನು ೧೯೭೨ರಲ್ಲಿ, ಛಂದೋಗತಿಯನ್ನು ೧೯೭೫ರಲ್ಲಿ ಕನ್ನಡ ಗೀತಿಕೆಯ ಲಕ್ಷಣ ಮತ್ತು ಧಾಟಿಯನ್ನು ೧೯೭೨ರಲ್ಲಿ ಛಂದೋಗತಿಯನ್ನು ೧೯೮೭ರಲ್ಲಿ ಕನ್ನಡ ಛಂದಸ್ಸು (೧೯೮೮)ರಲ್ಲಿ ವಿಚಾರಪ್ರಪಂಚವನ್ನು ೧೯೯೨ರಲ್ಲಿ ಕನ್ನಡ ಪಡಿಸಿದರು.

ತಥ್ಯದರ್ಶನ ಕೃತಿ ಮೂರು ವೈಚಾರಿಕ ಪ್ರಬಂಧಗಳನ್ನೊಳಗೊಂಡಿದೆ. ಅವರ ಮನಸ್ಸಿನಲ್ಲಿ ಮಾಡಿದ ಹಲವಾರು ವಿಚಾರಗಳನ್ನು ಮುಕ್ತ ಮನಸ್ಸಿನಿಂದ ವಿಶ್ಲೇಷಿಸಿದ್ದಾರೆ. ಆರ್ಯ ಶಬ್ದದ ವಿವೇಚನೆ? ಆರ್ಯ ದ್ರಾವಿಡ ವಾಸ್ತವಿಕವೇ? ಕಲ್ಪನೆಯೇ? ವರ್ಣ ಜಾತಿ ಆರ್ಯ -ದ್ರಾವಿಡ ಶಬ್ದಗಳ ಉತ್ಪತ್ತಿ? ಮೊದಲಾದ ವಿಷಯಗಳನ್ನು ಅನೇಕ ನಿದರ್ಶನಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ. ಪಾಶ್ಚಾತ್ಯರು ನಿರ್ವಚಿಸಿದ ವಿಷಯಗಳಿಗೆ ಸ್ಪಷ್ಟವಾದ ಉದಾಹರಣೆಗಳೊಂದಿಗೆ ತಿರಸ್ಕರಿಸುತ್ತಾರೆ. ಪೂರ್ವಜರ ಬಗ್ಗೆ ಸಾತ್ವಿಕ ಮನಸ್ಸಿನಿಂದ, ತೀವ್ರ ಜಿಜ್ಞಾಸೆ ಹಾಗೂ ಪ್ರಾಮಾಣಿಕ ವೈಜಾರಿಕತೆಗಳೂಂದಿಗೆ ಮಾತನಾಡುತ್ತಾರೆ. ದ್ರಾವಿಡ ಎಂಬುದು ಸಂಸ್ಕೃತ ಶಬ್ದ. ದ್ರು ಎಂಬ ನಾಮಕ್ಕೆ ಇಲ ಎಂಬ ತದ್ಧಿತ ಪ್ರತ್ಯಯವು ಸೇರಿದಾಗ ಸಂಸ್ಕೃತ ವ್ಯಾಕರಣ ನಿಯಮಾನುಸಾರವಾಗಿ ದ್ರವಿಲ ಎಂಬ ರೂಪ ಸಿದ್ಧಿಸುತ್ತದೆ. ಡಲಯೋರಭೇದ ಎಂಬ ನಿಯಮಾನುಸಾರ ಲಕಾರದ ಸ್ಥಾನದಲ್ಲಿಡ ಕಾರವು ಬಂದು ದ್ರಾವಿಡ ರೂಪ ಸಿದ್ಧಿಸುತ್ತದೆ ಎಂದು ವಿವರಿಸುತ್ತಾರೆ. ಅಲ್ಲದೇ ಬೇರೆ ಬೇರೆ ನಿದರ್ಶನಗಳನ್ನು ಪೂರಕವಾಗಿ ಬದಗಿಸುತ್ತಾರೆ. ಒಟ್ಟಿನಲ್ಲಿ ಆರ್ಯ- ದ್ರಾವಿಡ ಬಗ್ಗೆ ತಮ್ಮದೇ ಆದ ಸ್ಪಷ್ಟ ನಿಲುವಿನಿಂದ, ದೇಶಿಯ ಆಕರಗಳಿಂದ ಸಾಧಿಸುವ ಅವರು ಅತೀ ವಿಶಿಷ್ಟರಾಗಿ ಅಪ್ಯಾಯಮಾನವೆನಿಸುತ್ತಾರೆ.

೯೯. ಸೋಮಯಾಜಿ ಜಿ.ಜಿ. (೧೯೦೦೧೯೮೭)

ಸೋಮಯಾಜಿಯವರು ದ್ರಾವಿಡ ಭಾಷಾ ಕ್ಷೇತ್ರದಲ್ಲಿ ಇತ್ತೀಚಿನ ಪೀಳಿಗೆಯವರಾಗಿರುತ್ತಾರೆ. ಸಂಸ್ಕೃತಿ, ತೆಲುಗು ಹಾಗೂ ಇತರ ದ್ರಾವಿಡ ಭಾಷೆಗಳನ್ನು ಇವರು ಬಲ್ಲವರಾಗಿದ್ದರು. ಕವಿಯು ಹಾಗೂ ವಿಮರ್ಶಕರಾಗಿಯೂ ಅವರದು ಅನುಪಮ ಸೇವೆ ಈ ಕ್ಷೇತ್ರದಲ್ಲಿದೆ.

ಆಂಧ್ರಭಾಷಾ ವಿಕಾಸಮ್ ಎಂಬ ಕೃತಿಯನ್ನು ರಚಿಸಿದ ಇವರು ತೆಲುಗು ಭಾಷೆಯ ವಿಕಾಸವನ್ನು ವಿವರಿಸಿದ್ದಾರೆ. ಇನ್ನೊಂದು ಕೃತಿ ದ್ರಾವಿಡ ಭಾಷಾ ಕುಟುಂಬಗಳ ತೌಲನಿಕತೆಯನ್ನು ಒಳಗೊಂಡಿದೆ. ೧೯೦೧ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದರು. ಮದ್ರಾಸಿನ ಪಚ್ಚಿಪ್ಪಾ ಕಾಲೇಜಿನಲ್ಲಿ ತೆಲುಗು ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಅನಂತರ ಆಂಧ್ರ ವಿಶ್ವವಿದ್ಯಾಲಯ ವಾಲ್ಟೇರ್‍ನಲ್ಲಿ ತೆಲುಗು ಪೀಠದಲ್ಲಿ ಕಾರ್ಯನಿರ್ವಹಿಸಿದರು. ೫೦ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಇವರು ೧೯೪೭ರಲ್ಲಿ ತೆಲುಗು ಭಾಷಾ ಚರಿತ್ರೆಯ ಕೃತಿಯನ್ನು ಪ್ರಕಟಿಸಿದರು.

೧೦೦. ಸಾಮ್ಯುಯಲ್ ಮಿಲೆ

ಸಾಮ್ಯುಯಲ್ ಮಿಶನರಿಯಾಗಿ ಭಾರತಕ್ಕೆ ಬಂದಿದ್ದರು. ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಕ್ಷೇತ್ರಕಾರ್ಯ ಕೈಗೊಂಡು Canara-Past & Present ಕೃತಿ ರಚಿಸಿದ್ದಾರೆ. ಈ ಕೃತಿಯ ಎರಡನೆಯ ಆವೃತ್ತಿ ೧೮೮೪ರಲ್ಲಿ ಬಾಸೆಲ್ ಮಿಶಲ್ ಪ್ರೆಸ್ ನಲ್ಲಿ ಪ್ರಕಟಗೊಂಡಿದೆ.

ಕೃತಿಯಲ್ಲಿ ದಕ್ಷಿಣ ಕನ್ನಡದ ಕುರಿತಾಗಿ ವಿವರಗಳಿವೆ. ಮೊದಲನೆಯದಾಗಿ ಭೌತಿಕ / ರಾಜಕೀಯ ವಿವರ ನಂತರ ಜನ, ಶಿಕ್ಷಣ ನೀರಾವರಿ, ಕೃಷಿ ನೇಕಾರಿಕೆ ಹೆಸರು ಮತ್ತು ಅಡ್ಡ ಹೆಸರುಗಳ ಪ್ರಾಮುಖ್ಯತೆ ಮಳೆಯ ವಿವರ, ಅಳಿಯ ಸಂತಾನ ವ್ಯವಸ್ಥೆ, ಚರ್ಚೆ ಆಡಳಿತ, ಕಂದಾಯ ವಸೂಲಿ, ವ್ಯಾಪರ ಇತ್ಯಾದಿ ವಸ್ತು ವಿಷಯಗಳಿವೆ, ಬಂಟೆ, ಬಿಲ್ಲವ ಮೊಗೇರ ಅಜಮ್, ಕುಂಬಾರ, ಕೊರಗಾಸ, ಕೊರಮ, ದರ್ಜಿ, ದೋಬಿ, ದೇವಾಡಿಗಾ, ಗೊಲ್ಲರು, ಕ್ರೈಸ್ತ ಮತದ ಉಗಮ ಮತ್ತು ಪ್ರಸಾರ ಕ್ರೆಸ್ತ ಭೇದಗಳು ಗಾದೆ ಮಾತುಗಳು, ಜಾನುವಾರು ಆಟಗಳು ನ್ಯಾಯಾಲಯಗಳು ಅದರ ಇತಿಹಾಸ, ಶಕ್ತಿ ಅಧಿಕಾರ ಮತ್ತು ಕಕ್ಷೆ ಇತ್ಯಾದಿ.

 • ಬಂಟರು-ದಕ್ಷಿಣ ಕನ್ನಡ ಮೂಲ ಜಮೀನು ಒಡೆಯರು
 • ಬಿಲ್ಲವರು- ತುಳು ಮಾತನಾಡುವ ಸಾರಾಯಿ ತೆಗೆಯುವವರು
 • ಮೊಗೇರರು – ಮೀನುಗಾರರು
 • ಅಜಮ್ – ಕ್ಷೌರಿಕರು
 • ಕುಂಬಾರರು
 • ಕೊರಗರು- ಆರಣ್ಯದಲ್ಲಿ ಇರುವವರು

ಇದರಲ್ಲಿ ಹಿರಿಯರಿಂದ ಕೂಡಿದ ನ್ಯಾಯ ಪಂಚಾಯಿತಿ ಇರುತ್ತದೆ. ಈ ಪಂಚಾಯಿತಿ ಬಹುಮತದಿಂದ ಆಯ್ಕೆ ಮಾಡಿರುತ್ತಾರೆ. ಕುಟುಂಬದಲ್ಲಿ ಉದ್ಭವಿಸಿದ ಸಮಸ್ಯೆ ಅನೈತಿಕ ಕೃತ್ಯದಿಂದಾದ ಅಪಮಾನ ಇತ್ಯಾದಿಗಳ ಬಗ್ಗೆ ನಿರ್ಣಯ ನೀಡುತ್ತಾರೆ. ಅದಕ್ಕೆ ಜುಂತಾ (ಪಂಚಾಯಿತಿ) ಎನ್ನುತ್ತಾರೆ. ಎರಡೂ ಕಡೆಯ ವಾದ ವಿವಾದಗಳ ನಂತರ ನಿರ್ಣಯ ಕೊಡುತ್ತಾರೆ. ಹೆಣ್ಣು ಮಕ್ಕಳಿಗೆ ಮಾತನಾಡುವ ಹಕ್ಕು ಇದೆ. ಹೀಗೆ South canaraದ ಸಮಗ್ರ ವಿವರಗಳನ್ನು ಕೊಡುತ್ತಾರೆ ಮತ್ತು ಅಗತ್ಯತೆಯನ್ನು ಮನಗಾಣಿಸುತ್ತಾರೆ. ಇದು ಮುಸುಕಿನಲ್ಲಿರುವ ಜಿಲ್ಲೆಯಾಗಿದೆ ಎಂಬುದನ್ನು ತಿಳಿಸುತ್ತಾರೆ.