ಪಲ್ಲವಿ : ದ್ವಾರಕಾಧೀಶನ ನೋಡುವಾ
ಬನ್ನಿರಿ ಎಲ್ಲರು ಹೋಗುವಾ
ಚರಣ : ರಾಧಾ-ಕೃಷ್ಣ ಎಂದು ಕೂಗುವಾ
ಕುಣಿಯುತ ನಲಿಯುತ ಕೂಗುವಾ
ಕಾಶಿಪೀತಾಂಬರ ಹೊದಿಸುವಾ
ಮಲ್ಲಿಗೆ ಹೂಗಳ ಹಾಸುವಾ
ಧೀರ ಶೂರನ ಹೊಗಳುವಾ
ಮಧುರ ಪಾದಕೆ ಎರಗುವಾ
ಶಂಖ ಧಾರಿಯನು ನೋಡುವಾ
ಶಂಕೆಗಳ ದೂರ ಮಾಡುವಾ
ನಂದ ನಂದನನ ನೋಡುವಾ
ನವನೀತವನ್ನು ನೀಡುವಾ
ನೊರೆ ಹಾಲನ್ನು ಒಯ್ಯುವಾ
ಕಾಲಿಗೆ ಗೆಜ್ಜೆ ತೊಡಿಸುವಾ
ಡುಂಡುಭಿ ಹೊಡೆಯುತ ಹೋಗುವಾ
ಡಿಂಬುಗಳನೆಲ್ಲಾ ಕೊಡುವಾ
ವಂದಿಸಿ ಪಾದವ ಹಿಡಿಯುವಾ
ಜಯವನು ಹೇಳುತ ಜಿಗಿಯುವಾ
Leave A Comment