ಅಮರಾವತಿಯೆಂಬ ಪೊೞಲೊಳ್ ವಿಮಳಮೆತಿಯೆಂಬ ಪರದಂ ಪಿರಿದುಂ ಪೊನ್ನಂ ಪಡೆದು ದಾನಧರ್ಮ ಪರೋಪಕಾರಕ್ಕೆಡೆಯುಡುಗದೆ ಕೊಟ್ಟು ಕಡೆಯೊಳ್ ಬಡತನಮುಂ ಮುಪ್ಪಂ ಒಡನಡಸುವುದಂ ಅವಸಾನಕಾಲದೊಳಾತಂ ತನ್ನ ಮಗನಪ್ಪ ಅಜಿತನಂ ಕರೆದು ಎಲೆ ಮಗನೆ ನಿನಗಾಪ್ತಮಾದ ಪಸದನಮನಮೂಲ್ಯಮಪ್ಪ ವಸ್ತುವನೊಂದು ಪುಸ್ತಕದೊಳ್ ಮಡಿಗಿಟ್ಟೆನೆಂದು ಪೇಳ್ದು ಲೋಕಾಂತರಿತನಾದಂ, ಅಜಿತಂ ತನ್ನ ತಂದೆಗೆ ಪರಲೋಕಕ್ರಿಯೆಗಳಂ ಮಾಡಿ ಬಳಿಕ್ಕಂ ತಮ್ಮಯ್ಯಂ ಮಡಗಿಟ್ಟ ವಸ್ತುವಂ ನೋೞ್ಪೆನೆಂದು ಕವಳಿಗೆಯಂ ಬಿಟ್ಟು ನೋೞ್ಪನ್ನೆಗಂ ಪಲವುಂ  ಕಪ್ಪಡಂಗಳೊಳ್ ಸುತ್ತಿರ್ಪುದೊಂದೋಲೆಯೊಳ್ ಬರೆದಿರ್ದ ಗಾಹೆಯಂ ಕಂಡು ತಮ್ಮಯ್ಯನಾಪದ್ಧನ ಮೆಂದು ತನಗೆ ಬೈತಿಟ್ಟ ವಸ್ತುವಿದುಕ್ಕುಮೆಂದು ಬಳಕ್ಕದಂ ವಾಚಿಸಿನೋಡಿ

ಶ್ಲೋ || ಗುರುಪತ್ನೀವ ಸಾಗಮ್ಯಾ ಯಾ ಶ್ರೀಃ ಪೂರ್ವಕ್ರಮಾಗತಾ
ಸ್ವಭುಜೋಪಾರ್ಜಿತಾ ಯಾ ತು ಸಾ ಹಿ ಸತ್ವವತಾಂ ಪ್ರಿಯಾ  ||೧೩೭||

ಟೀ|| ಸಮರ್ಥರಹ ಪುರುಷರ್ಗೆ ಅವುದಾನೊಂದು ಅನ್ವಯಾಗತಮಪ್ಪ ಶ್ರೀಯಂ ಭೋಗಿಸಲು ಯೋಗ್ಯವಲ್ಲ ಅದು ಗುರುವಿನ ಸ್ತ್ರೀಯ ಸಮನಾವಾಗಿಹುದು. ತನ್ನ ಭುಜಬಲದಿಂ ಗಳಿಯಿಸಿದ ಶ್ರೀಯೆ ಬೋಗಿಸಲು ಯೋಗ್ಯವಹಂತಹುದು ಎಂಬುದು ಮಹಾಪುರುಷರ ಚರಿತ್ರಮೆಂದಿರದಾಂ ಪಿತೃವಿತ್ತಕಾಸೆಪಟ್ಟು ಕಷ್ಟನೆಚಿiiದೆನೆಂದು ತನ್ನಂ ತಾಂ ನಿಂದಿಸಿ ಮಹಾನೃಪತಿಯ ಸೇವೆಗೆಯ್ವೆನೆಂದು ಕಷ್ಟಡಮಂ ಸೀಳ್ದು ಮನೆಯಂ ಪೊಱಮಟ್ಟು ಕೆಲವಾನು ದಿವಸದಿಂ

ಅಮರಾವತಿಯೆಂಬ ಪಟ್ಟಣದಲ್ಲಿ ವಿಮಳಮತಿಯೆಂಬ ವ್ಯಾಪಾರಿಯು ಅಕವಾದ ಹೊನ್ನನ್ನು ಪಡೆದು ಧಾನಧರ್ಮಪರೋಪಕಾರಕ್ಕೆ ಎಡೆಯಿಲ್ಲದಷ್ಟು ಕೊಟ್ಟು ಕಡೆಯಲ್ಲಿ ಬಡತನವೂ ಮುಪ್ಪೂ ಒಡನೆಯೇ ಅಡರಲು ಅವಸಾನಕಾಲದಲ್ಲಿ ಆತನು ತನ್ನ ಮಗನಾದ ಅಜಿತನನ್ನು ಕರೆದು ಎಲೆ ಮಗನೇ, ನಿನಗೆ ಆಪ್ತವಾದ ಆಸ್ತಿಯನ್ನೂ ಅಮೂಲ್ಯವಾದ ವಸ್ತುವನ್ನು ಒಂದು ಪುಸ್ತಕದಲ್ಲಿ ಇಟ್ಟಿರುವೆನೆಂದು ಹೇಳಿ ಲೋಕಾಂತರಕ್ಕೆ ಸಂದನು. ಅಜಿತನು ತನ್ನ ತಂದೆಗೆ ಪರಲೋಕಕ್ರಿಯೆಗಳನ್ನು ಮಾಡಿ ಬಳಿಕ ತನ್ನ ತಂದೆ ಇಟ್ಟಿದ್ದ ವಸ್ತುವನ್ನು ನೋದುವೆನೆಂದು ಕವಳಿಗೆಯನ್ನು ಕಳಚಿ ನೋಡಲು ಹಲವು ಬಟ್ಟೆಗಳನ್ನು ಸುತ್ತಿದ ಒಂದು ಓಲೆಯಲ್ಲಿ ಬರೆದಿದ್ದ ಗಾಹೆಯನ್ನು ಕಂಡು ತನ್ನ ತಂದೆ ಆಪದ್ಧನವೆಂದು ತನಗಾಗಿ ಬಿಟ್ಟುಹೋದವಸ್ತುವಿದಾಗಿರಬೇಕೆಂದು ಅದನ್ನು ಓದಿ ನೋಡಿದನು: ಶ್ಲೋ|| ಸಮರ್ಥರಾದ ಪುರುಷರಿಗೆ ಯಾವುದಾದರೂ ಒಂದು ವಂಶಾನುಗತವಾಗಿ ಬ,ದ ಐಶ್ವರ್ಯವನ್ನು ಭೋಗಿಸುವುದು ಯೋಗ್ಯವಲ್ಲ; ಅದು ಗುರುಪತ್ನಿಗೆ ಸಮಾನವಾಗಿರುವುದು. ತನ್ನ ಭುಜಬಲದಿಂದ ಗಳಿಸಿದ ಐಶ್ವರ್ಯವೇ ಭೋಗಕ್ಕೆ ಯೋಗ್ಯವಾದುದು ಎಂಬುದು ಮಹಾಪುರುಷರ ಚರಿತ್ರವೆಂದು ಬಗೆಯದೆ ನಾನು ಪಿತೃವಿತ್ತಕ್ಕೆ ಆಸೆಪಟ್ಟು ಕಷ್ಟವನ್ನು ಅನುಭವಿಸಿದೆ ಎಂದು ತನ್ನನ್ನು ತಾನೇ ನಿಂದಿಸಿ ಮಹಾರಾಜನ ಸೇವೆ ಮಾಡುವೆನೆಂದು ಬಟ್ಟೆಯನ್ನು ಕಟ್ಟಿ ಮನೆಯನ್ನು ಬಿಟ್ಟು

ನಯವಿದ್ಯಾವಿದರಿಂ ಕವಿಪ್ರಕರದಿಂ ತರ್ಕಜ್ಞರಿಂ ಶಬ್ದವಿ
ದೈಯೊಳಬ್ಜಾಸನಕಲ್ಪರಪ್ಪ ವಿಳಸದ್ಬೂದೇವರಿಂ ದೇವತಾ
ಲಯದಿಂದೊಪ್ಪುವ ಗುಪ್ತವಂಶವಸುಧಾಶಾವಳೀ ರಾಜಧಾ
ನಿಯನ್ಮಜ್ಜೈನಿಯನೆಯ್ದಿ ಬಂದನಜಿತಂ ಶುಂಭದ್ಗುಣಭ್ರಾಜಿತಂ ೨೫೯

ಅಂತೆಯ್ದಿ ರಾಜಭವನಮಂ ಪೊಕ್ಕು ರಾಜಾರಾಜನಂ ವಿಭವಾಧರೀಭೂತನಳನಹುಷ ಭರತಭಗೀರಥಹರಿಶ್ಚಂದ್ರಾದಿ ಪುರಾತನ ಮಹೀಪಾಲಚರಿತ್ರನಂ ಕರಾಳಕರವಾಳದಾರಾವಿದಾರಿ ತಮದವದರಾತಿಮಂಡಲೇಶ್ವರ ಪ್ರಚಂಡಶುಂಡಾಲನಂ ಪ್ರತಾಪಾನುರಾಗಾವನತ ಸಕಲ ಸಾಮಂತ ಮಕುಟಮಣಿ ಮರೀಚಿಮಾಲಾಂಕೃತ ಚಾರುಚರಣಕಮಲನಂ ಅತುಳವಿತರಣವಿನಿರ್ಜಿತ ಜೀಮೂತವಾಹನದಾನಾಶ್ವರ ದಿನಕರತನೂಜನಂ ಸಕಲ ಜಗಜ್ಜನಸಂಸ್ತೂಯಮಾನ ಗುಪ್ತಾನ್ವಯಜಲದರಮಾರ್ಗಗಭಸ್ತಿಮಾಲಿಯಂ ವಾಮನಜಯಾದಿತ್ಯನಪ್ರಮುಖಮುಖಕಮಳವಿನಿUತ ಸೂಕ್ತಿ ಮುಕ್ತಾವಲೀಮಣಿಕುಂಡಲಮಂಡಿಕರ್ಣನಂ ಚತುರುದವಲಯವೇಲಾಲಂಕೃತ ವಸುಂಧರಾಸುಂದರೀ ಜೀವಿತೇಶ್ವರನಂ ವಿಬುಧವನಜವನಾದಿತ್ಯನಪ್ಪ ವಿಕ್ರಮಾದಿತ್ಯನಂ ಕಂಡು.

ಶ್ಲೋ || ಅರ್ಥಿನಾಂ ಕೃಪಾಣಾದೃಷ್ಟಿಸ್ತ್ವನ್ಮುಖೇ ಪತಿತಾಸಕೃತ್
ತದವಸ್ಥಾಪುನರ್ದೇವನಾನ್ಯಸ್ಯ ಮುಖಮೀಕ್ಷ್ಯತೇ  ||೧೪೭||

ಟೀ|| ಬೇಡುವವರ ದೀನತರವಹ ಸೃಷ್ಟಿಯರಸಿನ ಮುಖದಲ್ಲಿ ಬಿರ್ದುದಾದೊಡೆ ಮರಳಿಯದು ಆ ಅವಸ್ಥೆಯಲ್ಲಿ ಮತ್ತೊಬ್ಬನ ಮುಖಮಂ ನೋಡದು ಎಂಬ ಶ್ಲೋಕಮಂ ಪೇೞ್ದೊಡಾತಂಗೆ ವಿಕ್ರಮಾದಿತ್ಯದೇವಂ  ಮೆಚ್ಚಿದೆಂ ಬೇಡಿಕೊಳ್ಳೆಂಬುದುಂ ಅಜಿತನಿಂತೆಂದಂ:

ಕೆಲವು ದಿನಗಳಲ್ಲಿ ೨೫೯.ನೀತಿಶಾಸ್ತ್ರಜ್ಞರಿಂದಲೂ ಕವಿಸಮುಹದಿಂದಲೂ, ತರ್ಕಶಾಸ್ತ್ರಜ್ಞರಿಂದಲೂ ಶಬ್ದವಿದ್ಯೆಯಲ್ಲಿ ಬ್ರಹ್ಮಮನಿಗೆ ಸಮಾನರಿಂದಲೂ ಸಜ್ಜನರಾದ ಬ್ರಾಹ್ಮಣರಿಂದಲೂ ದೇವಾಲಯಗಳಿಂದಲು ಶೋಭಿಸುವ ಗುಪ್ತವಂಶದ ರಾಜನ ರಾಜಧಾನಿಯಾದ ಉಜ್ಜಯನಿಗೆ ಸದ್ಗುಣಶೋಭಿತನಾದ ಅಜಿತನು ಬಂದನು.  ವ|| ಹಾಗೆ ರಾಜಭವನವನ್ನು ಹೊಕ್ಕು ರಾಜಾರಾಜನೂ ಭರತ ಭಗೀರಥ ಹರಿಶ್ಚಂದ್ರಾದಿ ಪುರಾತನ ಮಹೀಪಾಲರ ವೈಭವವನ್ನು ಕುಂದಿಸಿದ ಚರಿತ್ರನೂ ಶತೃರಾಜರೆಂಬ ಮದ್ದಾನೆಗಳನ್ನು ಸೀಳಿದ ಖಡ್ಗಧಾರೆಗಳಿಂದ ಕೂಡಿದವನೂ ಪರಾಕ್ರಮದಿಂದಲೂ ಪ್ರೀತಿಯಿಂದಲೂ ಶರಣಾಗತರನ್ನಾಗಿಸಿದ ಸಕಲ ಸಾಮಂತ ಮಕುಟಮಣಿಯ ಕಾಂಯಿಂದ ಅಲಂಕೃತವಾದ ಸುಂದರ ಪಾದಪದ್ಮನೂ ಸಮಸ್ತ ಪ್ರಪಂಚದಿಂದ ಸ್ತುತವಾದ ಗುಪ್ತವಂಶವೆಂಬ ಗಗನಕ್ಕೆ ಸೂರ್ಯನಂತಿರುವವನೂ ವಾಮನ ಜಯಾದಿತ್ಯರೇ ಮೊದಲಾದವರ ಮುಖಕಮಲದಿಂದ ಹೊರಟ ಸೂಕ್ತಮುಕ್ತಾವಲಿಯೆಂಬ ಕರ್ಣಾಭರಣದಿಂದ ಅಲಂಕೃತನಾದ ಕಿವಿಗಳುಳ್ಳವನೂ ನಾಲ್ಕು ಸಮುದ್ರಗಳ ತರಂಗದಿಂದ ಅಲಂಕೃತಳಾದ ಭೂದೇವಿಯ ಪ್ರಾಣೇಶ್ವರನೂ ವಿದ್ವಾಂಸರೆಂಬ ಕಮಲವನಕ್ಕೆ ಸೂರ್ಯನಂತಿರುವವನೂ ಆದ ವಿಕ್ರಮಾದಿತ್ಯನನ್ನು ಕಂಡನು. ಶ್ಲೋ|| ಬೇಡುವವರ ದೀನತರವಾದ ದೃಷ್ಟಿ ಅರಸನ ಮುಖದ ಮೇಲೆ ಬಿದ್ದಲ್ಲಿ ಮರಳಿ ಅದು ಆ ಅವಸ್ಥ್ತೆಯಲ್ಲಿ ಮತ್ತೊಬ್ಬನ ಮುಖವನ್ನು ನೋಡದು ಎಂಬ ಶ್ಲೋಕವನ್ನು ಹೇಳಲು ಆತನಿಗೆ ವಿಕ್ರಮಾದಿತ್ಯನು, ಮೆಚ್ಚಿದೆ, ಬೇಕಾದುದನ್ನು ಬೇಡಿಕೊಳ್ಳು ಎನ್ನಲು ಅಜಿತನು ಹೀಗೆಂದನು:

ಜಯಲಕ್ಷ್ಮೀಧಾಮ ಧನಾ
ರ್ಥಿಯೆನಲ್ಲೆನಶೇಷ ಭುವನವಲ್ಲಭಸೇವಾ
ರ್ಥಿಯೆನಾಂ ಭವತ್ಪದಾಬ್ಜ
ದ್ವಯಮಂ ಸೇವಿಸುವೆನೆಂಬ ಬಗೆಯಿಂ ಬಂದೆಂ  ೨೬೦

ಎಂದೊಡರಸಂ ಕರಮೊಳ್ಳಿತ್ತೆಂದು ಸಜ್ಜೆಯ ಕಾಪಿನ ಬೆಸನಂ ಕುಡೆ ಪಡೆದು ನಿಶ್ಚಿಚಿತಮಿರಲೊಂದು ದೆವಸಮರಸಂ ಬೇಂಟೆವೋದೊಡಜಿತಂ ತಮ್ಮ್ಮಯ್ಯಂ ಪೇೞ್ದಗಾಹೆಯಂ ಕಟ್ಟುವಂಜರದ ನಡುವಣ ನಾಗವೇದಿಕೆಯೊಳ್ ವಿನೋದದಿಂ ಬರೆದಿಟ್ಟಂ, ಇತ್ತಲ್ ಮಹಾದೇವಿಯಂ ರೂಪಾದೇವಿಯುಮೆಂಬರಿರ್ವರರಸಿಯರುಂ ವಿನೋದಾರ್ಥದಿಂ ಸೀತೆಯುಂ ರಾಮನುಮಾಗಿ ಕೃತಕನಾಟಕಮನಾಡಿ ಬೞಲ್ದು ಕೃತಕ ಪುರುಷಾಕಾರಚಿಹ್ನೆಗಳಂ ಕಳೆಯಲ್ ಮಱೆದು ಅರಸನ ಸಿರಿಮಂಚದೊಳ್ ಗಾಢಾಲಿಂಗನಂಗೈದು ಮಱೆದೊಱಗಿರ್ದರ್ ಅನ್ನೆಗಮರಸನರ್ಧರಾತ್ರಿಸಮಯದೊಳ್ ಬಂದು ಶ್ರಮಶ್ರಾಂತಿಯಿಂ ಮಜ್ಜನಬೋಜನಾದಿ ಕ್ರಯೆಗೆಯ್ಯಲಾರದೆ ಸಜ್ಜೆಯ ಮೆನೆಯಂ ಪೊಕ್ಕು ಸಿರಿಮಂಚದೊಳ್ ಮಹಾದೇವಿಯರೊಡನೆ ಪಟ್ಟಿರ್ದ ಪುರುಷರೂಪಮಂ ಕಂಡು ಕೋಪಾನಳಶಿಖಾಕಳಾಪದಹ್ಯಮಾನಮಾನಸನಾಗಿ ಪೆಱತೇನುಮಂ ಕಾಣದೆ ಕೀೞಳಿನ ಕಯ್ಯೊಳಿರ್ದ ಬಾಳಂ ಕೊಂಡೆತ್ತಿ ಪೊಯ್ವುದುಮಾ ಬಾಳ್ ನಾಗವೇದಿಕೆಯಂ ತಾಗಿ  ತೆತ್ತಿಸೆ ಮೇಗಂ ನೋಡಿ

ವರನಾಗವೇದಿಕಾಭ್ಯಂ
ತರಲಿಖತಂಗಳನತಿಸುಟಂಗಳನುದ್ಯ
ದ್ಗುರುತರ ಕೋಪಾಸ್ತಂಭಾ
ಕ್ಷರಂಗಳೆನಿಪಕ್ಷರಂಗಳಂ ವಿಭು ಕಂಡಂ  ೨೬೧

ಮಹಾರಾಜಾ, ನಾನು ಧನಾರ್ಥಿಯಾಗಿ ನಿನ್ನಲ್ಲಿಗೆ ಬಂದವನಲ್ಲ. ಚಕ್ರವರ್ತಿಯ ಸೇವಾರ್ಥಿಯಾಗಿ ಬಂದವನು; ನಾನು ನಿನ್ನ ಪಾದಸೇವೆಯ ಭಾಗ್ಯವನ್ನು ಪಡೆಯಬೇಕೆಂದು ಬಂದೆ ಎನ್ನಲು ಅಅಸನು ಹಾಗೆಯೇ ಆಗಲಿ ಎಂದು ಶಯ್ಯಾಗೃಹದ ಕಾವಲಿನ ಕೆಲಸವನ್ನ್ನು ಕೊಡಲು ಅದನ್ನು ಪಡೆದು ನಿಶ್ಚಿಂತನಾಗಿದ್ದನು. ಒಂದು ದಿನ ಅರಸನು ಬೇಟೆಗೆ ಹೋಗಲು ಅಜಿತನು ತನ್ನ ತಂದೆ ಹೇಳಿದ ಗಾಹೆಯನ್ನು ಮೇಲ್ಕಟ್ಟಿನ ನಡುವೆ ನಾಗವೇದಿಕೆಯಲ್ಲಿ ವಿನೋದಕ್ಕಾಗಿ  ಬರೆದಿಟ್ಟನು.ಎಂದು ಶಯ್ಯಾಗೃಹದ ಕಾವಲಿನ ಕೆಲಸವನ್ನು ಕೊಡಲು ಅದನ್ನು ಪಡೆದು ನಿಶ್ಚಿಂಚಿತನಾಗಿದ್ದನು.ಒಂದು ದಿನ ಅರಸನು ಬೇಟೆಗೆ ಹೋಗಲು ಅಜಿತನು ತನ್ನ ತಂದೆ ಹೇಳಿದ ಗಾಹೆಯನ್ನು ಮೇಲ್ಕಟ್ಟಿನ ನಡುವೆ ನಾಗವೇದಿಕೆಯಲ್ಲಿ ವಿನೋದಕ್ಕಾಗಿ ಬರೆದಿಟ್ಟನು. ಇತ್ತ ಮಹಾರಾಣಿಯೂ ರೂಪಾದೇವಿ ಎಂಬ ಅರಸಿಯೂ ವಿನೋದಕ್ಕಾಗಿ ಸೀತಾರಾಮರಾಗಿ ಕೃತಕನಾಟಕವನ್ನಾಡಿ  ಬಳಲಿ ಕೃತಕ ಪುರುಷರೂಪ ಚಿಹ್ನೆಗಳನ್ನು  ತೆಗೆಯಲು ಮರೆತು ಅರಸನ ಸಿರಿಮಂಚದಲ್ಲಿ ಗಾಢಾಲಿಂಗನದಲ್ಲಿ ವೈಮರೆತು ಮಲಗಿದ್ದರು. ಅಷ್ಟರಲ್ಲಿ ಅರಸನು ಅರ್ಧರಾತ್ರಿಯ ಸಮಯ ಬಂದು ಆಯಾಸದಿಂದ ಮಜ್ಜನಭೋಜನಾದಿ ಕಾರ್ಯಗಳನ್ನು ಮಾಡದೆ ಶಯ್ಯಾಗೃಹವನ್ನು ಹೊಕ್ಕು ಸಿರಿಮಂಚದಲ್ಲಿ ಮಹಾರಾಣಿಯೊಡನೆ ಮಲಗಿದ್ದ ಪುರುಷನನ್ನು ಕಂಡು ಕೋಪಾಕ್ರಾಂತನಾಗಿ ಬೇರೆನನ್ನೂ ಕಾಣದೆ ಸೇವಕನ ಕೈಯಲ್ಲಿದ್ದ ಕತ್ತಿಯನ್ನು ಕೊಂಡು ಎತ್ತಿ ಹೊಡೆಯಲು ಆ ಕತ್ತಿ ನಾಗವೇದಿಕೆಯನ್ನು ತಾಗಿ ನಾಟಿಕೊಳ್ಳಲು ರಾಜನು ಮೇಲೆ ನೋಡಿದಾಗ.

ಗಾಹೆ|| ಮಾಹೇಹಿ ಸುವಗ್ಗಾಹಿಯ ಮಾಪತ್ತಿಯಜಿಣ್ಣದಿಟ್ಟಪಚ್ಚಖ್ಖಂ
ಪಚ್ಚಖ್ಖಂ ಮಿಯದಿmಂ ಜುತ್ತಾಜುತ್ತಂ ವಿಯಾರೇಹಿ  ||೧೩೯||

ಟೀ|| ಪೇೞ* ಕೇಳಿದ ಮಾತನೆ ವಿಶ್ವಾಸಿಸಲಾಗದು. ಅಜ್ಞಾನವಹ ದೃಷ್ಟಿಯಿಂ ಕಂಡ ಕಾರ‍್ಯವನೆ ಬೇಗಂ ಮಾಡಲಾಗದು ಪ್ರತ್ಯಕ್ಷನಾಗಿ ಕಂಡುದನು ಯಥಾಯುಕ್ತವಾಗಿ ವಿಚಾರಿಸಿ ಮಾಡುವುದ, ಎಂದಿರಲ್ ಕಂಡಾ ಗಾಹೆಯರ್ಥಮನರಸಂ ವಿಚಾರಿಸಿ ಮತ್ತಮಿಂತೆಂದು ಬಗೆದು,

ಮಱೆದೊರಗಿದರಂ ಲಿಂಗದ
ಮಱೆವೊಕ್ಕವರಂ ನಿರಾಯುಧರನಾಹವದೊಳ್
ಪೊಱಮಾಱ*ದರಂ ತುೞ*ಲಾ
ಳಿಱ*ದೊಡೆ ನೆಱೆ ದೋಷಿಯಾಗಿ ಪೋಗನೆ ಜಗದೊಳ್  ೨೬೨

ಅದರಂದಿವಂದಿರನೆತ್ತಿ ನುಡಿಸಿ ಬೞ*ಕ್ಕ ತಕ್ಕುದಂ ಮಾೞ್ಪೆನೆಂದು ಪಿಡಿದರ್ದ ಬಾಳೊಳ್ ತೊಡೆಯಂ ಪೊಯ್ದೆತ್ತುವುದುಂ ಅರಸಿಯರಿರ್ವರುಂ ಬೋಕುನೆೞ್ಚೆತ್ತು ತನ್ನ ಕಾಲ ಮೇಲೆ ಬಿರ್ದೊಡರಸನಿದೇನೆಂದು ಬೆಸಗೊಳ್ವುದುಂ ರೂಪವತಿಯಿಂತೆಂದಳ್: ನೀಂ ಬೇಂಟೆವೋಗಿ ತಡವಾದ ಕಾರಣದಿಂ ಪೊೞ್ತು ಪೋಗದೆ ಅೞ*ಯಿಂದಾಂ ರಾಮಚಂದ್ರನಾಗಿಯುಂಮಹಾದೇವಿ ಸೀತಾದೇವಿಯಾಗಿಯುಂ ನಾಟಕಮನಭಿಯಸಿ ಕರಂ ಬೞಲ್ದು  ನೇಪಥ್ಯಮಂ ಕಳೆಯಲ್ ಶಕ್ತಿಯಿಲ್ಲದೆ ನಿದ್ರಾಸಕ್ತರಾದೆವು. ಇದರ್ಕೆ ದೇವರ್ ದಯೆಗಿಡಲ್ವೇಡೆಂದುಕಾಲ್ಗೆಱಗುವುದುಮರಸಂ ವಿಸ್ಮಯರಸಾವೇಷ್ಟಿತನಾಗಿಯರಸಿಯರ್ಗೆ ತತ್ಪಂಪಚಮೆಲ್ಲಮಂ ಪೇೞುತ್ತುಮಿರ್ಪಿನಮನ್ನೆಗಂ ನೇಸಱ್ ಮೂಡುವುದುಂ ಸಮಸ್ತಪರಿವಾರಮಂ ಬರಿಸಿ ಸಜ್ಜೆಯ ಮನೆಯ ನಾಗವೇದಿಯೊಳ್  ಸುಭಾಷಿತವನಾರ್ ಬರೆದರ್ ಪೇೞ*ಮೆಂಬುದುಂ ಸಜ್ಜೆಯ ಮನೆಯ ಕಾಪಿನನೊರ್ವಂ ಪೊಸಮಾಣಿ ಬರೆದನಿದನೆಂದು ಭಿನ್ನಪಂಗೆಯ್ವುದುಮರಸನಾತನಂ ಕರೆದು ಕಟ್ಟುವಂಜರದೊಳ್ ನೀಂ ಬರೆದ ಗಾಹೆಯಲ್ಲಿ ಕಲ್ತೆಯೆಂದೊಡೆಮ್ಮ ತಂದೆ ಮಾಸಿರಿವಂತನಾಗಿಯುಂ ಪೊನ್ನೆಂಬ ಪೆಸರ ಚಿನ್ನಮನಿರಿಸದೆ ದಾನಧರ್ಮಂಗೆಯ್ದು ತನಗವಸಾನಕಾಲಮಪ್ಪುದುಮೆನ್ನಂ ಕರೆದು ಮಗನೆ ನಿನಗೆ ಜೀವನೋಪಾಯಮೊಂದನರ್ಘ್ಯಮಪ್ಪ ರತ್ನಮಂ  ಪುಸ್ತಕದೊಳ್ ಮಡಗಿಟ್ಟೆನೆಂದು ಪರಲೋಕಪ್ರಾಪ್ತನಾದಂ ಬೞ*ಕ್ಕೆ ನಾನಾ ಕವಳಿಗೆಯಂ ಬಿಟ್ಟು ನೋಡಿ ಪೆಱತೇನುಮುಂ ಕಾಣದೆ ಗಾಹೆಯಂ ಕಂಡು ಪಾಠಮಂಗೆಯ್ದೆನೆಂದು  ಬಿನ್ನಪಂಗೆಯ್ದೊಡರಸನಿತೆಂದಂ : ನಿಮ್ಮಯ್ಯನನರ್ಘ್ಯವಸ್ತುವೆಂದು ಪೇೞ್ದುದೊಂದು ಸಂದೆಯಮಿಲ್ಲೆಂತೆಂದೊಡೆನ್ನ ಪ್ರಾಣೇಶ್ವರಿಯರಿರ್ವರುಂ ಸ್ತ್ರೀ ಪುರುಷರೂಪಧಾರಿಗಳಾಗಿ ನಿದ್ರಗೆಯ್ದಿರ್ದರನಾಂ ಕಂಡು ಬಾಳಂ ಕಿತ್ತೆತ್ತಿ ಪೊಯ್ಯಲದು ನಾಗವೇದಿಕೆಯಂ ತಾಗಿ ತಡೆಯೆ ಮೇಗಂ ನೋಡಿ ಬರೆದಿರ್ದ ಸುಭಾಷಿತಮಂ ಕಂಡು ಪರೀಕ್ಷಿಸುವ ಬುದ್ದಿ ಪುಟ್ಟಿ ಪಟ್ಟಿರ್ದರನೆತ್ತುವುದುಮವರೆೞ*ತ್ತು  ತತ್ಪ್ರಪಂಚಮೆಲ್ಲಮಂ ಪೇೞೆ ಕೇಳ್ದೀ ಸುಭಾಷಿತದ ಪ್ರಸಾದದಿಂದೆನೆಗೆ ಸ್ತ್ರೀವಧೆಯುಂ ಯಶೋಹಾನಿಯುಮಾದುದಿಲ್ಲದಱ*ಂ ರತ್ನಮೆಂಬುದು ಪಾಷಾಣವಿಶೇಷಮಪ್ಪುದದರ್ಕೆ ಬೆಲೆಯಿಡಲಕ್ಕುಮೀ ಸುಭಾಷಿತರತ್ನಕ್ಕೆ ಬೆಲೆಯಿಲ್ಲೆಂದು,

೨೬೨. ಮರೆದೊರಗಿದವರನ್ನು, ಲಿಂಗದ ಮೊರೆ ಹೊಕ್ಕುವರನ್ನು ನಿರಾಯುಧರನ್ನು , ಯುದ್ದ ರಂಗದಿಂದ ಹಿಮ್ಮೆಟ್ಟಿ ಓಡುವವರನ್ನು ಕೊಂದರೆ ಜಗತ್ತಿನಲ್ಲಿ ಅವನು ದೋಷಿಯಾಗದೆ ಇರುವನೆ ವ|| ಅದರಿಂದ ಇವರನ್ನು ಎಬ್ಬಿಸಿ ಮಾತನಾಡಿಸಿದ ಬಳಿಕ ತಕ್ಕ ಶಿಕ್ಷೆಯನ್ನು ಕೈಗೊಳ್ಳುವೆನು ಎಂದು ಕೈಯ್ಯ ಕತ್ತಿಯಿಂದ ತೊಡೆಯನ್ನು ಬಡಿದು  ಎಬ್ಬಿಸಲು ಅರಸಿಯರಿಬ್ಬರೂ ಎಚ್ಚೆತ್ತು ತನ್ನ ಕಾಲ ಮೇಲೆ ಬೀಳಲು ಅರಸನು ಇದೇನೆಂದು ವಿಚಾರಿಸಲು ರೂಪಾದೇವಿಯು ಹೀಗೆಂದಳು  ದೇವಾ ! ನೀನು ಬೇಟೆಗೆ ಹೋಗಿ ತಡವಾದ ಕಾರಣದಿಂದ ಹೊತ್ತು ಹೋಗದೆ ಪ್ರೀತಿಯಿಂದ ನಾನು ರಾಮಚಂದ್ರನಾಗಿಯೂ  ಮಹಾರಾಣಿಯು ಸೀತಾದೇವಿಯಾಗಿಯೂ ನಾಟಕವನ್ನಾಡಿ ಬಳಲಿ ನೇಪಥ್ಯವನ್ನು ತೆಗೆದಿಡಲು ಶಕ್ತಿಯಿಲ್ಲದೆ ನಿದ್ರಾಸಕ್ತರಾದೆವು. ಇದಕ್ಕಾಗಿ ಪ್ರಭುಗಳು ದಯೆಗೆಡುವುದು ಬೇಡ ಎಂದು ಕಾಲಿಗೆರಗಿದಳು. ಆಗ ಅರಸನು ವಿಸ್ಮಯಚಿತ್ತನಾಗಿ ಅರಸಿಯರಿಗೆ ತನ್ನ ವಿಚಾರವನ್ನೆಲ್ಲ  ತಿಳಿಸುತ್ತಿರಲು ಸ್ರರ‍್ಯೋದಯವಾಗಲು ಸಮಸ್ತ ಪರಿವಾರವನ್ನೂ ಬರಿಸಿ  ಶಯ್ಯಾಗೃಹದ ನಾಗವೇದಿಕೆಯಲ್ಲಿ ಸುಭಾಷಿತವನ್ನು ಬರೆದವರು ಯಾರು ಎಂದು ತಿಳಿಸಿ ಎನ್ನಲು ಶಯ್ಯಾಗೃಹದ  ಕಾವಲಿನವರಲ್ಲಿ ಒಬ್ಬನಾದ ಹೊಸಮಾಣಿ ಬರೆದನು ಎಂದು ಬಿನ್ನವಿಸಿದರು. ಅರಸನು ಆತನನ್ನು ಕರೆದು ನಾಗವೇದಿಕೆಯಲ್ಲಿ ನೀನು ಬರೆದ ಗಾಹೆಯನ್ನು ಎಲ್ಲಿ ಕಲಿತೆ ಎಂದು ಕೇಳಿದನು. ಅದಕ್ಕೆ ಅವನು ನಮ್ಮ ತಂದೆ ಮಹಾಶ್ರೀಮಂತನಾಗಿದ್ದರೂ ಹೊನ್ನೆಂಬುದನ್ನು ಹೆಸರಿಗೂ ಇರಿಸದೆ ದಾನಧರ್ಮಗಳನ್ನು ಮಾಡಿ ತನಗೆ ಅವಸಾನ ಕಾಲವುಂಟಾಗಲು ನನನ್ನು ಕರೆದು ಮಗನೇ, ನಿನಗೆ, ಜೀವನೋಪಾಯವಾದ ಅನರ್ಘ್ಯವಾದ ಒಂದು ರತ್ನವನ್ನು ಪುಸ್ತಕದಲ್ಲಿ ಮಾಡಗಿಟ್ಟಿರುವೆನೆಂದು ಪರಲೋಕವಾಸಿಯಾದನು. ಬಳಿಕ ನಾನು ಅದನ್ನು ಬಿಚ್ಚಿ ನೋಡಿ ಬೇರೇನನ್ನೂ ಕಾಣದೆ ಗಾಹೆಯನ್ನು ಕಂಡು ಪಾಠ ಮಾಡಿದನು ಎಂದು ಬಿನ್ನವಿಸಿದನು. ಅರಸನು ಹಿಗೆಂದನು: ನಿನ್ನ ತಂದೆ ಅನರ್ಘ್ಯ ವಸ್ತು ಎಂದು ಹೇಳಿರುವುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ.ನನ್ನ ಅರಸಿಯರಿಬ್ಬರೂ ಸ್ತ್ರೀ ಪುರುಷ ರೂಪಧಾರಿಗಳಾಗಿ ನಿದ್ರಿಸುತ್ತಿದ್ದುನನ್ನು  ನಾನು ಕಂಡು ಕತ್ತಿಯನ್ನು ಕಿತ್ತು ಎತ್ತಿ ಹೊಡೆಯಲು ಅದು ನಾಗವೇದಿಕೆಯನ್ನು ತಾಕಿ ನಾಟಲು ಮೇಲೆ ನೋಡಿ ಬರೆದಿದ್ದ ಸುಭಾಷಿತವನ್ನು ಕಂಡು ಪರೀಕ್ಷಿಸುವ ಬುದ್ದಿ ಹುಟ್ಟಿ ಮಲಗಿದ್ದವರನ್ನು ಎಬ್ಬಿಸಲು ಅವರು ತಮ್ಮ ವಿಚಾರವನ್ನೆಲ್ಲ ತಿಳಿಸಲು  ಕೇಳಿ ಈ ಸುಭಾಷಿತದ ಪ್ರಸಾದದಿಂದ ನನಗೆ  ಸ್ತ್ರೀವಧೆಯೂ ಯಶೋ ಹಾನಿಯೂ ಅಗಲಿಲ್ಲ ಅದರಿಂದ ರತ್ನವೆನ್ನುವುದು  ಪಾಷಾಣ ವಿಶೇಷ ಮಾತ್ರವಾದುದರಿಂದ ಅದಕ್ಕೆ ಬೆಲೆಗಟ್ಟಬಹುದು. ಈ ಸುಬಾಷಿತ ರತ್ನಕ್ಕೆ ಬೆಲೆಗಟ್ಟುವುದು ಅಶಕ್ಯ ಎಂದು ೨೬೩’ಶತ್ರುಗಳನ್ನು ಸೊಕ್ಕನ್ನು ಮುರಿದವನೂ, ಜ್ಞಾನಿಗಳಿಗೆ ಹಿತವನ್ನೂ , ಶ್ರೀ ಸಾಹಸಾಂಕನೂ  ಅದ ಅರಸನು ಅಜಿತನಿಗೆ ತಾನು  ತೊಟ್ಟ  ಆಭರಣಗಳ ಸಹಿತವಾಗಿ ಮಣಿಕನಕ ವಸ್ತು ವಾಹನಾದಿಗಳನ್ನಿತ್ತು ಮನ್ನಿಸಿದನು. ಅದರಿಂದ ಪ್ರತ್ಯಕ್ಷವಾಗಿ ಕಂಡುದ್ದನ್ನು ಪರೀಕ್ಷಿಸಬೇಕು. ಎಂದು ಹೇಳಿರುವುದು ಧನದತ್ತನಿಗೆ ನಿಷ್ಕಾರಣವಾಗಿ ಮುನಿಗಳು ಬಂದು ನಿಯಾಗುವುದು ಅಸಾದ್ಯ ಎನೋ ಅವನ ಪೂರ್ವಜನ್ಮದ ಸುಕೃತಗಳು ಮೂರ್ತಿಮತ್ತಾಗಿ ಬಂದು ಅ ನೆಪದಲ್ಲಿ ನಿಗಳಾಗಿ ಪರಿಣಮಿಸಿರಬೇಕು. ಅದನ್ನು ಅತನನೊಡೆನೆ ವಿಚಾರಿಸದೆ ಪರೀಕ್ಷಿಸದೆ ಸವಣರನ್ನು ಈ ದುರಾತ್ಮನನು ಸಾಯೆ ಬಡಿದ. ಪ್ರತ್ಯಕ್ಷವಾಗಿ ದೋಷವನ್ನು ಮಾಡಿದ ದುಷ್ಟನಾದ ಇವನಿಗೆ ಶಿಕ್ಷೆಯಾಗಬೇಕು ಎಂದು ಅಲೋಚಿಸಿ ಹೀಗೆಂದನು: ಶ್ಲೋ || ಬುದ್ಧಿಯುಳ್ಳವರನ್ನು ಗುರು ಶಿಕ್ಷಿಸುವನು ದುರಾತ್ಮನನ್ನು ಅರಸನು ಶಿಕ್ಷಿಸುವನು ಪಾಪಿಗಳನ್ನು ಅಂತಕನು ಶಿಕ್ಷಸುವನು ಎಂದು ಧರ್ಮಾಕರಣರು ದೋಷಾನುರೂಪವಾದ ಶಿಕ್ಷೆಯನ್ನು ವಿಸುವಂತೆ ದಂಡಧರನಿಗೆ ಹೇಳಿದರು. ಅದರಿಂದ ಮುಂಗುರಿ ಕೂಸನ್ನು ಕೊಂದುದ್ದನ್ನು ಪ್ರತ್ಯಕ್ಷವಾಗಿ ಕಂಡರು ಅದು ವಧ್ಯವಲ್ಲ೨೬೪.

ಅಹಿತಮದಭಂಜನಂ ವಿಬು
ಧಹಿತಂ ಶ್ರೀ ಸಾಹಸಾಂಕನಜಿತಂಗಿತ್ತಂ
ಮಹಿಪಂ ಸ್ವಾಂಗಸ್ಪೃಷ್ಟಕ
ಸಹಿತಂ ಮಣಿಕನಕವಸ್ತುವಾಹನಚಯಮಂ  ೨೬೩

ಅದರಂ ಪ್ರತ್ಯಕ್ಷಂ ಕಂಡುದುದಂ ಪರೀಕ್ಷಿಸಲ್ವೇಡಿದುದು. ಧನದತ್ತಂಗನಿಮಿತ್ತಂ ಮುನಿಗಳ್ ಬಂದು ನಿಗಳಾಗಲರಿಯರೆತ್ತಾನುಮಪ್ಪೊಡಾತನ ಸುಕೃತಂಗಳ್ ಮೂರ್ತಿಮತ್ತುಗಳಾಗಿ ಬಂದಾ ನೆವದೊಳೆ ನಿಗಳಾಗಿ ಪರಿಣಮಿಸಿದವಕ್ಕುಂ.  ಅದನಾತನಂ ಬೆಸಗೊಳ್ಳದೆ ಅಪರೀಕ್ಷಿತಂ ಮುಮುಕ್ಷಗಳಂ ಸಾಯೆ ಸದೆಬಡೆದನೀ ದುರಾತ್ಮಂ ಪ್ರತ್ಯಕ್ಷಂ ದೋಷಮಂ ಮಾಡಿದದುಷ್ಟನಿಗೆವಂಗೆತಕ್ಕುದಂಮಾಡಲ್ವೇೞ್ಕುಮೆಂದು ತಮ್ಮೊಳಾಳೋಚಿಸಿಕೊಂಡಿಂತೆಂದರ್:

ಶ್ಲೋ || ಗುರುರಾತ್ಮವತಾಂ ಶಾಸ್ತಾ ರಾಜಾ ದುರಾತ್ಮನಾಂ
ಅಂತಃಪ್ರಚ್ಛನ್ನಪಾಪಾನಾಂ ಶಸ್ತಾ ವೈವಸ್ವತೋ  ಯಮಃ  ||೧೪೦||

ಟೀ|| ಬುದ್ದಿಯುಳ್ಳರಂ ಗುರು ಶಿಕ್ಷಿಸುವಂ,  ದುರಾತ್ಮರನರಸಂ ಶಿಕ್ಷಿಸುವಂ ಪಾಪಿಗಳ ನಂತಕಂ ಶಿಕ್ಷಿಸುವಂ ಎಂದು ಧರ್ಮಾಕರಣದವರ್ ದೋಷಾನುರೂಪದಂಡಮಂ ನಿರೂಪಿಸಿ ದಂಡಧರಂಗೆ ಪೇೞ್ದರ್ ಅದರಂ ಮುಂಗುರಿ ಕೂಸಂ ಕೊಂದುದಂ ಪ್ರತ್ಯಕ್ಷ ಕಂಡೊಡಮದುವಧಾಪ್ರಾಪ್ತನಲ್ಲಮದೆಂತೆನೆ: