ಭದ್ರಪುರವೆಂಬ  ಪುರದೊಳ್ ದಾರಿದ್ರ್ಯ ಭೂತಿಯೆಂಬ ಪರದನಿರ್ಪಂ ಅತನ ಮಗಂ ಧನದತ್ತನೆಂಬ ನವಯೌವನಪ್ರರಂಭದೊಳ್ ತನಗಿಷ್ಟ ಭೋಗಕಾಮವಿಷಯಸುಖಕು ಪಾಯಮಿಲ್ಲದೆ ಸಂಸಾರಕ್ಕೆ ಬೇಸತ್ತೊಂದು  ದಿವಸಂ ನಡುವಿರುಳ್ ತನ್ನ ತಂದೆಗಿಂತೆಂದಂ:

ಶ್ಲೋ || ಪುಂಸಾಮುನ್ನತ ಚಿತ್ತಾನಾಂ ದ್ವಯಮೇವ ಸುಖಾವಹಂ
ಸರ‍್ವಸಂಗನಿವೃತ್ತಿರ್ವಾ ವಿಭೂತಿರ್ವಾ ಸುವಿಸ್ತಾರಾ ||೧೩೫||

ಟೀ|| ಸುಚಿತ್ತರಪ್ಪ ಪುರುಷರ್ಗೆ ಸರ‍್ಯಂಸಂಗಪರಿತ್ಯಾಗವಾಗಲಿ ಸಕಲೈಶ್ವರ‍್ಯವಾಗಲಿ ಎರಡೇ ಸುಖಮಪ್ಪುದಹುದು ಎಂಬ ನೀತಿಯುಂಟು. ತಾಂ ಮಹಾನೃಪತಿಯ ಸೇವೆಗೆಯ್ಯಲ್ಪೋಪೆನೆಂದೊಡಾತನ ತಂದೆಯಿಂತೆಂದಂ: ಮಗನೆ ದೇಶಾಂತರಕ್ಕೆ ಪೋಗಿ ಪೊನ್ನಂ ಪಡೆವುದು ಸಂದೆಯಂ, ಸಾವುಂ ಕೇಡಂ ನಿಶ್ಚಯಮದಱ*ಂ ಪೋಗಲ್ವೇಡೆನೆ ಧನದತ್ತಂ ಮತ್ತಮಿಂತೆಂದಂ:

ಶ್ಲೋ|| ಉದ್ಯೋಗಿ ಪ್ರಾಪ್ಯ್ನಯಾದರ್ಥಂ ಯಶೋ ವಾ ಮೃತ್ಯುದೇವ ವಾ ಮೃತ್ಯುದೇವ ನಿರುದ್ಯೋಗಿ ಸ ಯಶೋ ನಾರ್ಥಸಂಪದಃ ||೧೩೬||

ಟೀ|| ಉದ್ಯೋಗವುಳ್ಳಾತಂಗರ್ಥಲಾಭವಹುದು. ಕೀರ್ತಿಯನಾಗಲಿ ಮೃತ್ಯುವನಾಗಲಿ ಐದುವನು.ನಿರುದ್ಯೋಗಿಗೆ ಕೀರ್ತಿಯಾಗದು ಅರ್ಥಲಾಭವಾಗದು ಮೃತ್ಯುವೇ ಅಹುದು ಎಂಬುದು ಯುಕ್ತಿಯುಂಟುಪ್ಪುದಱ*ಂ

ಕಥೆತಂತಾಯಿತು ಎನಲು ದೇವಶರ್ಮನು ಅದೇನೆಂದು ಕೇಳಲು ಯಜ್ಞದತ್ತೆಯು ಹೇಳಿದಳು:ವ||ಭದ್ರಪುರ ಎಂಬ ಪಟ್ಟಣದಲ್ಲಿ ದಾರಿದ್ರ್ಯಭೂತಿಯೆಂಬ ವ್ಯಾಪಾgಯಿದ್ದನು. ಆತನ ಮಗನಾದ ಧನದತ್ತನೆಂಬುವನು ನವಯೌವನಪ್ರಾರಂಭದಲ್ಲಿ  ತನ್ನ ಇಷ್ಟವಿಷಯ ಕಾಮಭೋಗಕ್ಕೆ ಉಪಾಯವಿಲ್ಲದೆ ಸಂಸಾರಕ್ಕೆ ಬೇಸತ್ತು ಒಂದು ದಿವಸ ನಡುರಾತ್ರಿಯಲ್ಲಿ ತನ್ನ ತಂದೆಗೆ ಹೀಗೆಂದನು:: ಶ್ಲೋ|| ಸುಚಿತ್ತರಾದ ಪುರುಷರಿಗೆ ಸರ್ವಸಂಗಪರಿತ್ಯಾಗವಾಗಲಿ ಸಕಲೈಶ್ವರ್ಯವಾಗಲಿ ಎರಡೇ ಸುಖವನ್ನುಂಟುಮಾಡುವುದೆಂಬ ನೀತಿಯುಂಟು. ತಾನು ಮಹಾರಾಜನ ಸೇವೆ ಮಾಡಲು ಹೋಗುವೆನೆಂದರೆ ಆತನ ತಂದೆ ಹೀಗೆಂದನು: ಮಗನೇ, ದೇಶಾಂತರಕ್ಕೆ ಹೋಗಿ ಹೊನ್ನನ್ನು ಪಡೆಯುವುಧು ಸಂದೇಹ.ಸಾವೂ ಕೇಡೂ ನಿಶ್ಚಯ. ಅದರಿಂದ ಹೋಗಬೇಡ ಎನ್ನಲು ಧನದತ್ತನು ಪುನಃ ಹೀಗೆಂದನು: ಶ್ಲೋ|| ಉದ್ಯೋಗಶೀಲನಿಗೆ ಅರ್ಥಲಾಭವಾಗುವುಧು. ಅವನು Pಕಿರ್ತಿಯನ್ನಾಗಲೀ ಮೃತ್ಯುವನ್ನಾಗಲೀ ಹೊಂದುವನು. ನಿರುದ್ಯೋಗಿಗೆ ಕೀರ್ತಿಯಾಗದು; ಅರ್ಥಲಾಭವಾಗದು;

ಪುರುಷಂ ದೈವಮೆ ಶರಣೆಂ
ದಿರಲಾಗದು ತನಗೆ ತಾನೆ ಮಾಡದು ದೈವಂ
ಪುರುಷಾರ್ಥಂಗೆಯ್ಯತ್ತಿರೆ
ಪರಮಾರ್ಥಂ ದೈವಮುಂ ಕೃತಾರ್ಥಮದಕ್ಕುಂ  ೨೫೫

ಅದಱ*ಂ ತಾನೇಗೆಯ್ದುಂ ಪೋಗಿ ಪುರುಷಾರ್ಥಂಗೆಯ್ಯದೆ ಮಾಣೆನೆಂದು ತನ್ನ ಮನೋಧರ್ಮಮಂ ತಂದೆಗೆ ಪೇೞ್ದು ನಿದ್ರಾಂಗನಾಸಕ್ತನಾಗಿರ್ಪುದುಂ ನಿಶಾವಸಾನಸಮಯದೊಳಾತನ ಮುನ್ನ ಮಾಡಿದ ದಾನಧರ್ಮಂಗಳ ಫಲಂಗಳೆ ಮೂರ್ತಿಮತ್ತಾಗಿ ಬಂದಿಂತೆದವು:

ನೀನಿನಿತು ಕಾಲಮದ್ಯಮ
ಹೀನನೆಯಾಗಿರ್ದೆಯದಱ*ನಾಮುಂ ನಿನಗಂ
ತೇನುಮುಪಕರಿಸಲಱ*ಯಮೆ
ನೀನೀ ತೆಱದಿಂದೆ ನೆಱೆಯ ತಱ*ಸಂದುದಂ  ೨೫೬

ಇನ್ನೆಮಗಿರಲ್ದಾರದು ನಾಳೆ ನಾಂ ನಾಲ್ವರ್ ದಿಗಂಬರರೂಪಗೊಂಡು ನಿನ್ನ ಮೆನೆಗೆ ಬಂದೆಪ್ಪೆವು.  ನೀನೆಮಗಿದಿರಂ ಬಂದು ವಂದಿಸಿ ವಿಯಿಂದರ್ಚಿಸಲೊಡಂ ನಿಗಳಾಗಿ ಪರಿಣಮಿಸುವವೆಂದು ಪೇಳ್ದುದಂ ಕನಸಂ ಧನವತ್ತಂ ನನಸೆಂದು ಭೋಂಕನೆೞ್ಚತ್ತತಿ ಕುತೂಹಲಂಬೆತ್ತುಮೀ ಚೋದ್ಯಮಂ ನೋೞ್ಪೆನೆಂದು ಮನೆಯಂ ಶೋಬಾವಹಂಗೈದು ಶುಚಿರ್ಭೂತನಾಗಿರ್ದು ದ್ವಾರದೊಳ್ ನಿಲ್ವದುಂ ನಾಳ್ವರ್ ಸವಣರ್ ಸೈತೆ ತನ್ನ ಮನೆಗಾಗಿಬರ್ಪುದುಂ ಕಂಡು ಇದಿರಂ ಪೋಗಿ ಬಲವಂದು ವಂದಿಸಿ ಮನೆಗೊಡಂಗೊಂಡು ಪೋಗಿ ಪೂಜಿಸಿ ಪೊಡಮಡಲೊಡಂ ಪೊನ್ನರಾಶಿಯಾಗಿರ್ದುದಂ ನೆರೆಮನಯ ಪರದಂ ಕಂಡೊಡಾತಂಗೆ ರಹಸ್ಯರಕ್ಷಣೋಚಿತಂ ಕಿರಿದಂ ಪೊನ್ನನಿತ್ತೊಡವನದನೀದಾಡಿ ಪೋಗಿ,

ಮೃತ್ಯುವಂತೂ ತಪ್ಪಿದ್ದಲ್ಲ ಎಂಬ ಯುಕ್ತಿಯಿರುವುದರಿದ ೨೫೫. ಪುರುಷನು ದೈವವೇ ಶರಣು ಎಂದು ಸುಮ್ಮನೆ ಇರಬಾರದು.ದೈವವು ತನ್ನಿಂದ ತಾನೇ ಎನನ್ನೂ ಮಾಡದು. ಪುರುಷಾರ್ಥವನ್ನು ಮಾಡುತ್ತಿರಲು ಪರಮಾರ್ಥವೂ ದೈವವೂ ಕೃತಾರ್ಥವಾಗುವುದು. ವ|| ಅದರಿಂದ ತಾನು ಏನಾದರೂ ಹೋಗಿ ಪುರುಷಾರ್ಥವನ್ ಮಾಡದೆ ಇರೆನು ಎಂದು ತನ್ನ ಮನೋಧರ್ಮವನ್ನು ತಂದೆಗೆ ಹೇಳಿ ನಿದ್ರಾಂಗನಾಸಕ್ತನಾದನು. ಮುಂಜಾನೆ ಹಿಂದೆ ಮಾಡಿದ ದನ ಧರ್ಮಗಳ ಫಲಗಳೇ ಮೂರ್ತಿಮತ್ತಾಗಿ ಹೀಗೆಂದುವು: ೨೫೬. ನೀನಿಷ್ಟರವರೆಗೆ ಉದ್ಯೋಗಹೀನನಾಗಿದ್ದೆ. ಅದರಿಂದ ನಾವೂ ನಿನಗೆ ಏನೂ ಉಪಕಾರವನ್ನು ಮಾಡಲಿಲ್ಲ. ವ|| ಇನ್ನು ನಾವು ನಾಳೆ ಸುಮ್ಮನಿರೆವು. ನಾಲ್ವರೂ ದಿಗಂಬರ ರೂಪದಲ್ಲಿ ನಿನ್ನ ಮನೆಗೆ ಬರುವೆವು. ನೀನು ನಮ್ಮನ್ನು ಎದಿರುಗೊಂಡು ವಂದಿಸಿ ವಿಪೂರ್ವಕವಾಗಿ ಅರ್ಚಿಸಿದಲ್ಲಿ ನಿಗಳಾಗಿ ಪರಿಣಮಿಸುವೆವು ಎಂದು ಹೇಳಲು ಕನಸನ್ನು ಧನದತ್ತನು ನನಸೆಂದೇ ತಿಳಿದು ಭೋಂಕನೆ ಎಚ್ಚತ್ತು ಅತಿ ಕುತೂಹಲಗೊಂಡು ಈ ಆಶ್ಚರ್ಯವನ್ನು ನೋಡುವೆನೆಂದು ಮನೆಯನ್ನು ಸಿಂಗರಿಸಿ ಶುಚಿರ್ಭೂತನಾಗಿದ್ದು ದ್ವಾರದಲ್ಲಿ ನಿಂತನು. ನಾಲ್ವರು ಶ್ರಮಣರು ನೇರವಾಗಿ ತನ್ನ ಮನೆಗೇ ಬರುವುದನ್ನು ಕಂಡು ಎದುರುಗೊಂಡು ಪ್ರದಕ್ಷಿಣೆ ಬಂದು ನಮಸ್ಕರಿಸಿ ಮನೆಗೆ ಕರೆದುಕೊಂಡು ಹೋಗಿ ಪೂಜಿಸಿ ನಮಸ್ಕರಿಸಲು ಹೊನ್ನರಾಶಿಯಾಗಿದ್ದುದನ್ನು ನೆರೆಮನೆಯ ವ್ಯಾಪಾರಿಯು ಕಾಣಲು ರಹಸ್ಯ ರಕ್ಷಣೋಚಿತವಾಗಿ ಅವನಿಗೆ ಸ್ವಲ್ಪ ಹೊನ್ನನ್ನು ಕೊಡಲು ಅವನು ಅದನ್ನು ಬಿಸುಟು

ನಿನಗುಳ್ಳ ಸವಣರೇಂ ಮ
ತ್ತೆನಗಿಲ್ಲವೆಯೆಂದು ಪರಿದು ಪರದಂ ಪುರದೊಳ್
ಮುನಿಗಳ್ ಚರಿಗೆಗೆ ಬರುತಿರೆ
ಮನೆಗುಯ್ದಾರಾಧನೋಕ್ತಿ ಪೂರ್ವಕ್ರಮದಿಂ  ೨೫೭

ಅಂತು ಪೂಜಿಸಿ ಪೊಡೆಮಟ್ಟು  ತನ್ನ ಪೊನ್ನರಾಸಿಗಳಾಗಿಮೆನೆ ಭಿಕ್ಷಕುಗಳ್ ಬೆಕ್ಕಸಂಬಟ್ಟು ಬೆಱಗಾಗಿರ್ದವರ ಶಿರಂಗಳಂ ಕಿರಾಟಂ ಲುಕುಟದಿಂ ಬಿರಿಯೆ ಪೊಯ್ಯಲೊಡನವರ್  ಪೊಯ್ಯಲಿಡಲೊಡಂ ಕೇಳ್ದು ತಳಾರರ್ ಪರಿತಂದು ಪರದನಮ ಪಿಡಿದು ಪಡೆಗಯ್ಯಂ ಕಟ್ಟಿ ಧರ್ಮಾಕರಣರಲ್ಲಿಗುಯ್ಯೆ

ಕರಣಮಿದೇ ಕಾರಣದಿಂ
ತಿರಿವರನಕೃತಾಪರಾಗಳನವಿಚಾರಂ
ಪರಿಭವಿಸಿದೆ ಪೇೞೆಂದೊಡೆ
ಪರದಂ ಧರ್ಮಾಕರಣದವರ್ಗಿಂತೆಂದಂ  ೨೫೮

ಧನಧತ್ತನ ಮನೆಗೆ ನಾಲ್ವರ್ ಸವಣರ್ ಬಂದು ಪೊನ್ನಾದುದಂ ನಾಂ ಪ್ರತ್ಯಕ್ಷಂ ಕಂಡೆಂ ಎನ್ನ ಮೆನೆಗೆ ಸಾಧುಗಳಪ್ಪ ನಾಲ್ವರ್ ಸವಣರಂ ಬರಿಸಿ ವಿಧಾನದಿಂದರ್ಚಿಸಿ ಪೂಜಿಸಿ ಬೞ*ಕ್ಕೆ ಪೊನ್ನಾಗಿಮೆಂದು ಪೊಡೆಮಟ್ಟೊಡವರೆಂತುಂ ಪೊನ್ನಾಗದಿರೆ ಬಡೆದೆನಕಾರಣಂ ಪೊಯ್ದುದಿಲ್ಲೆನೆ ಸಭೆಯೆಲ್ಲ ನಗೆ ಧರ್ಮಾಕರಣರಿಂತೆಂದರ್: ಅವುದುಮಂ ಪ್ರತ್ಯಕ್ಷಂ ಕಂಡುಂ ಕೇಳ್ದು ಮತ್ತಂ ಯುಕ್ತಾಯುಕ್ತಾದಿಂ ವಿಚಾರಿಸಿ ನೆಗೞಲೆವೇಮದೆಂತೆಂದೊಡೆ,

ಹೋದನು.೨೫೭. ನಿನಗಿರುವ ಸವಣರು ನನಗೇನಿಲ್ಲವೇ ಎಂದು ಆ ವ್ಯಾಪಾರಿಯು ಪುರದಲ್ಲಿ ಮುನಿಗಳು ಭಿಕ್ಷೆಗೆ ಬರುತ್ತಿರಲು ಮನೆಗೆ ಕರೆದುಕೊಂಡುಹೋಗಿ ಆರಾಧನೋಕ್ತಿಪೂರ್ವಕವಾಗಿ ಪೂಜಿಸಿ ನಮಸ್ಕರಿಸಿ ತನಗೆ ಹೊನ್ನರಾಶಿಗಳಾಗಿರಿ ಎನ್ನಲ ಭಿಕ್ಷುಗಳು ಆಶ್ಚರ್ಯಪತ್ತು ಬೆರಗಾಗಿರಲು ವ್ಯಾಪಾರಿಯು ದಂಡದಿಂದ ಅವರ ಶಿರಸ್ಸನ್ನು ಬಿರಿಯುವಂತೆ ಹೊಡೆಯಲು ಅವರು ಹುಯ್ಯಲಿಡಲು ಅದನ್ನು ಕೇಳಿ ತಳಾರರು ಬಂದು ವ್ಯಾಪಾರಿಯನ್ನು ಹಿಡಿದು ಕೈಗಳನ್ನು ಹಿಂದಕ್ಕೆ ಕಟ್ಟಿ ಧರ್ಮಾಕರuರಲ್ಲಿ ಒಯ್ದರು. ೨೫೮. ನಿರಪರಾಗಳಾದ ಭಿಕ್ಷುಗಳನ್ನು ವಿನಾಕಾರಣ ಹೊಡೆದುದೇಕೆಂದು ಧರ್ಮಾಕರಣರು ಕೇಳಲು ವ್ಯಾಪಾರಿ ಅವರಿಗೆ ಹೀಗೆ ಹೇಳಿದನು: ವ||ಧನದತ್ತನ ಮನೆಗೆ ನಾಲ್ವರು ಸವಣರು ಬಂದು ಹೊನ್ನಾದುದನ್ನು ನಾನು ಪ್ರತ್ಯಕ್ಷವಾಗಿ ಕಂಡೆ. ಅದರಿಂದ ನನ್ನ ಮನೆಗೆ ನಾಲ್ವರು ಸವಣರನ್ನು ಬರೆಸಿ ವಿಧನದಿಂದ ಅರ್ಚಿಸಿ ಬಲಿಕ ಹೊನ್ನಾಗಿರಿ ಎಂದು ನಮಸ್ಕರಿಸಲು ಅವರು ಏನು ಮಾಡಿದರೂ ಹೊನ್ನಾಗದಿರಲು ಬಡಿದೆನು. ಅಕಾರಣವಾಗಿ ಹೊಡೆಯಲಿಲ್ಲ ಎನ್ನಲು ಸಭೆಯೆಲ್ಲಾ ನಗೆಯಾಡಿತು. ಧರ್ಮಾಕರಣರು ಹೀಗೆಂದರು: ಯಾವುದನ್ನು ಪ್ರತ್ಯಕ್ಷವಾಗಿ ಕಂಡೂ, ಕೇಳಿಯೂ, ಯುಕ್ತಾಯುಕ್ತವಾಗಿ ವಿಚಾರಿಸಿಯೂ ಕೈಗೊಳ್ಳಬೇಕು. ಅದು ಹೇಗೆಂದರೆ,

ಭದ್ರಪುರ  ಎಂಬ ಪಟ್ಟಣದಲ್ಲಿ ದಾರಿದ್ರಭೂತಿಯೆಂಬ ವ್ಯಾಪಾರಿಯಿದ್ದನು. ಅತನ ಮಗನಾದ ಧನದತ್ತನೆಂಬುವನು ನವಚಿiiವನ ಪ್ರಾರಂಭದಲ್ಲಿ ತನ್ನ ಇಷ್ಟ ವಿಷಯ ಕಾಮಬೋಗಕ್ಕೆ ಉಪಾಯವಿಲ್ಲದೆ ಸಂಸಾರಕ್ಕೆ ಬೇಸತ್ತು ಒಂದು ದಿವಸ ನಡುರಾತ್ರಿಯಲ್ಲಿ ತನ್ನ ತಂದೆಗೆ ಹೀಗೆಂದನು: ಶ್ಲೋ || ಸ್ಮಚಿತ್ತರಾದ ಪುರುಷರಿಗೆ ಸರ್ವಸಂಗಪರಿತ್ಯಾಗವಾಗಲಿ ಸಕಲೈಶ್ವರ್ಯವಾಗಲಿ ಎರಡೇ ಸುಖವನ್ಮ್ನಂಟುಮಾಡುವುದು ಎಂಬ ನೀತಿಯುಂಟು. ಗಿನು ಮಹಾರಾಜನ ಸೇವೆ ಮಾಡಲು ಹೋಗುವೆನೆಚಿದರೆ ಅತನ ತಂದೆ ಹೀಗೆಂದನು: ಮಗನೆ ದೇಶಾಂತರಕ್ಕೆ ಹೋಗಿ ಹೊನ್ನನನ್‌ಉ ಪಡೆಯುವುದು ಸಚಿದೇಹ. ಸಾವೂ ಕೇಡೂ ನಿಶ್ಚಯ ಅದರಿಂದ ಹೋಗಬೇಡ ಎನ್ನಲು ಧನದತ್ತನು ಪುನಃ ಹೀಗೆಂದನು ಶ್ಲೋ || ಉದ್ಯೋಗಶೀಲನಿಗೆ ಅರ್ಥಲಾಭವಾಗುವುದು. ಅವನು ಕ್ಭಿರ್ತಿಯಾನ್ನಾಗಲಿ ಮೃತ್ಯವನ್ನಾಗಲೀ ಹೊಂದುವನು. ನಿರುದ್ಯೋಗಿಗೆ ಕೀರ್ತಿಯಾಗದು. ಅರ್ಥಲಾಭವಾಗದು:  ಮೃತ್ಯುವಚಿತು ತಪ್ಪಿದಲ್ಲ ಎಂಬ ಯುಕ್ತಿಯಿರುವ್ಯದರಿಂದ ೨೫೫. ಪುರುಷನು ದೈವವೇ ಶರಣು ಎಂದು ಸುಮ್ಮನೆ ಇರಬಾರದು ದೈವವು ತನ್ನಿಂದ ತಾನೇ ಏನನ್ನೂ ಮಾಡದು. ಪುರುಷಾರ್ಥವನ್ನು ಮಾಡುತ್ತಿರಲು ಪರಮಾರ್ಥವೂ ದೈವವೂ ಕೃತಾರ್ಥವಾಗುವುದು ವ || ಅದರಿಂದ ತಾನೂ ಏನಾದರೂ  ಹೋಗಿ ಪುರುಷಾರ್ಥವನ್ನು ಮಾಡದೆ  ಇರೆನು ಎಂದು ತನ್ನ ಮನೋಧರ್ಮವನ್ನು ತಂದೆಗೆ ಹೇಳಿ ನಿದ್ರಾಂಗನಾಸಕ್ತನಾದನು. ಮುವ್ಮಜಾನೆ ಹಿಂದೆ ಮಾಡಿದ ದಾನ ಧರ್ವ್ಮಗಳ ಫಲಗಳೆ ಮೂರ್ತಿಮತ್ತಾಗಿ ಬಮದು ಹೀಗೆಂದವು. ೨೫೬. ನಿನಿಷ್ಟರವರೆಗೆ ಯದ್ಯೋಗಹೀನನಾಗಿದ್ದೆ, ಅದರಿಮದ ನಾವೂ ನಿನಗೆ ಏನೂ ಉಪಕಾರವನ್ನು ಮಾಡಲಿಲ್ಲ. ವ|| ಇನ್ನು ನಾವು ನಾಳೆ ಸುಮ್ಮನಿರೆವು, ನಾಲ್ವರು ದಿಗಂಬರೂಪದಲ್ಲಿ ನಿನ್ನ ಮನೆಗೆ ಬರುವೆವು. ನೀನು ನಮ್ಮನ್ನು ಎದುರುಗೊಂಡು ವಂದಿಸಿ ವಿಪೂರ್ವಕವಾಗಿ ಅರ್ಚಿಸಿದ್ದಲ್ಲಿ  ನಿಗಳಾಗಿ ಪರಿಣಮಿಸುವೆವು ಎಂದು ಹೇಳಲು ಕನಸನ್ನು ಧನದತ್ತನು ನನಸೇಂದೆ ತಿಳಿದು  ಬೋಂಕನೆ ಎಚ್ಚತ್ತು ಅತಿ ಕುತೂಹಲಗೊಂಡು ಈ ಆಶ್ಚರ್ಯವನ್ನು ನೋಡುವೆನೆಂದು ಮನೆಯನ್ನು ಸಿಂಗರಿಸಿ ಶ್ಮಚಿರ್ಭೂತನಾಗಿದ್ದು ದ್ವಾರದಲ್ಲಿ ನಿಂತನು. ನಾಲ್ವರು ಶ್ರಮಣರು ನೇರವಾಗಿ ತನ್ನ ಮೆನೆಗೆ ಬರುತ್ತಿರುವುದನ್ನು ಕಂಡು ಎದುರುಗೊಂಡು ಪ್ರದಕ್ಚಿಣೆ ಬಂದು ನಮಸ್ಕರಿಸಿ ಮನೆಗೆ ಕರೆದುಕೊಂಡು ಹೋಗಿ ಪೂಜಿಸಿ ನಮಸಖರಿಸಲು ಹೊನ್ನ ರಾಶಿಯಾಗಿದುದ್ದನ್ನು ನೆರೆಮನೆಯ ವ್ಯಾಪಾರಿಯು ಕಾಣಲು ರಹಸ್ಯ ರಕ್ಷಣೊಚಿತವಾಗಿ ಅವನಿಗೆ ಸ್ವಲ್ಪ ಹೊನ್ನನ್ನು ಕೊಡಲು ಅವನು ಅದನ್ನು ಬಿಸುಟು ಹೋದನು. ೨೫೭: ನಿನಗಿರುವ ಸವಣರು ನನಗೇನಿಲ್ಲದೆ ಎಂದು ಆ ವ್ಯಾಪಾರಿಯು  ಪುರದಲ್ಲಿ ಮುನಿಗಳು ಭಿಕ್ಷೆಗೆ ಬರುತ್ತಿರಲು ಮೆನೆಗೆ  ಕರೆದುಕೊಂಡು ಹೋಗಿ ಆರಾಧನಾನೋಕ್ತಿಪೂರ್ವಕವಾಗಿ ಪೂಜಿಸಿ ನಮಸ್ಕರಿಸಿ ತನಗೆ ಹೊನ್ನರಾಶಿಗಳಾಗಿರಿ ಎನ್ನಲು ಭಿಕ್ಷುಗಳು ಆಶ್ಚರ್ಯಪಟ್ಟು ಬೆರಗಾಗಿರಲು ವ್ಯಾಪಾರಿಯು ದಂಡದಿಮದ ಅವರ ಶಿರಸ್ಸನ್ನು ಬಿರಿಯುವಂತೆಹ್ರೊಡೆಯಲು ಅವರು ಹುಯ್ಯಲಿಡಲು ಅದನ್ನು ಕೇಳಿ ತಳಾರರು ಬಂದು ವ್ಯಾಪಾರಿಯನ್ನು ಹಿಡಿದು ಕೈಗಳನ್ನು ಹಿಂದಕ್ಕೆ ಕಟ್ಟಿ ಧರ್ಮಾಕರಣರಲ್ಲಿ ಒಯ್ದರು. ೨೫೮. ನಿರಪರಾಗಳಾದ ಭಿಕ್ಚುಗಳನ್ನು ವಿನಾಕಾರಣ ಹೊಡೆದುದೃಕೆಂದು ಧರ್ಮಾಕರಣರು ಕೇಳಲು ವ್ಯಾಪಾರಿ ಅವರಿಗೆ  ಹೇಳಿದನು: ವ || ಧನದತ್ತನ ಮನೆಗೆ ನಾಲ್ವರು ಸವಣರುಬಂದು ಹೊನ್ನಾದುದನ್ನು ನಾನು ಪ್ರತ್ಯಕ್ಷವಾಗಿ ಕಂಡೆ. ಅದರಿಮದ ತನ್ನ ಮೆನೆಗೆ ನಾಲ್ವರು ಸವಣರನ್ನು ಬರಿಸಿ ವಿಧಾನದಿಂದ ಅರ್ಚಿಸಿ ಬಳಿಕ ಹೊನ್ನಾಗಿರಿ ಎಂದು ನಮಸಖರಿಸಲು ಅವರು ಏನುಮಾಡಿದರೂ ಹೊನ್ನಾಗದಿರಲು ಬಡಿದೆನು. ಅಕರಣವಾಗಿ ಹ್ರೆಡೆಯಲ್ಲಿಲ್ಲ ಎನ್ನಲು ಸಭೆಯಲ್ಲ ನಗೆಯಾಡಿತು ಧರ್ಮಾಕರಣರು ಹೀಗೆಂದರು : ಯಾವುದನ್ನು ಪ್ರತ್ಯಕ್ಷವಾಗಿ ಕಂಡೂ ಕೇಳಿಯೂ ಯುಕ್ತಯುಕ್ತವಾಗಿ ವಿಚಾರಿಸಿಯೂ ಕೈಗೊಳ್ಳಬೇಕು. ಅದು ಹೇಗೆಂದರೆ