ಸಿದ್ದಾಂತತತ್ತ್ವ ವೇದಿ ವಿ
ಶುದ್ಧ ಸಾದಾಚಾರೆ ಚಾರುಗುಣಯುತೆ ಸಾಕ್ಷಾ
ದ್ಬುದ್ಧಿ ವಿವೇಕ ಮಹಾನಿ
ಸದ್ಧರ್ಮಸುಮೂರ್ತಿ ವೃದ್ಧ್ದಗೌತಮಿಯೆಂಬಳ್  ೨೬೪

ಆ ಪರಮೇಶ್ವರಿಯ ಪಿರಿಯ ಮಗನನೊಂದು ಉರಗಂ ಕೊಂಡೊಡೆ ಅದನೊರ್ವ ನಿಷಾದಂ ಕಂಡು ಪಿಡಿದಡಸಿ ಕಟ್ಟಿ ಗೌತಮಿಯ ಮುಂದಿಕ್ಕಿ ನಿನ್ನಮಗನನೀ ಪನ್ನಗಂ ಕೊಂದುದಿದಂ ಕೊಂದಪೆನೆಂದು ಪಿರಿದಾಗ್ರಹಗೆಯ್ವದುಮವಂಗೆ ಗೌತಮಿಯಿಂತೆಂದಳ್: ಇದು ಕಾರಣಭೂತಮಲ್ಲದೆ ನಿಮಿತ್ತಭೂತಮಲ್ಲ ಅಂತುಮಲ್ಲದೆ ಕ್ಷುದ್ರಜಂತುವಪ್ಪುದರಿಂ ಸ್ವಭಾವಸಿದ್ಧವಾದುದು ವಧಪ್ರಾಪ್ತನಲ್ಲೆಂದು ತನ್ನ ಮಗನಂ ಕೊಂದ ಸರ್ಪನಂ ಪ್ರತ್ಯಕ್ಷಂ ಕಂಡುಂ ಕೊಲಲಿತ್ತಳಿಲ್ಲ. ನೀವಿದಱ ನಖಮಂ ಮುಖಮುಂ ರಕ್ತಮಾಗಿರ್ದುವೆಂಬನಿತಱೊಳನಪಾರಾಯಂ ಪರಮೋಪಕಾರಿಯನೀ ಮುಂಗುರಿಯಂ ಪರೀಕ್ಷಿಸದೆ ಕೊಂದುಂ ಕಷ್ಟಂಗೆಯ್ದರ್ ಇನ್ನು ಪಶ್ಚಾತಾಪಮುಂ ವಿಪ್ರಲಾಪಮುಂ ಪ್ರಯೋಜನಮಿಲ್ಲ: ಇನ್ನುಸಿರದಿರಿಮೆಂದು ಪಾರ‍್ವನಂ ಸಂತೈಸಿ ಮತ್ತಮಿಂತೆಂದಳ್

ದಶರಥನೆಂಬ ನರೇಂದ್ರಂ
ವಿಶದಯಶಂ ಗಜಮಗೆತ್ತು ಋಷಿಪುತ್ರನುಮಂ
ಶಿಶುವನಪರೀಕ್ಷಿತಂ ಕೊಂ
ದು ಶಾಪಮಂ ಭೂಪನಾಗಳಲ್ಲಿಯೆ ಪಡೆದಂ  ೨೬೫

ಅಂತುಮಲ್ಲದೆಯುಂ
ಜಸಮಂ ಧರ್ಮಮುಮಂ ಪಾ
ಲಿಸುವೊಡಮಿಹಪರಮನೊಲ್ವಡಂ ತನ್ನಂ ರ
ಕ್ಷಿಸುವೊಡಮಾರೈದು ಪರೀ
ಕ್ಷಿಸುವುದು ಮನುಜಂ ಸಮಸ್ತಕಾರ‍್ಯಸ್ಥಿತಿಯಂ  ೨೬೬

ಇಹದೊಳ್ ದುರ್ಯಶಮಾಗದಂತು ಪರದೊಳ್ ಪಾಪಕ್ಕೆ ಪಕ್ಕಾಗದಂ
ತು ಹಿತಾರ್ಥಂಗಳನೆಂತು ನೀತಿನಿಪುಣರ್ ಪೇಳ್ದಂತೆ ಸಂತರ್ ಸಮಂ
ತು ಹಿತಸ್ವಾಂತಗುಣೋಕ್ತಮಾಗೆ ಸುಪರೀಕ್ಷಾಕಾರ‍್ಯಮಂ ಮಾಳ್ಪದಾ
ತ್ಮಹಿತಂ ತಾನಿದು ದುರ್ಗಸಿಂಹನ ಮತಂ ಲೋಕೋತ್ತರಂ ಧಾತ್ರಿಯೊಳ್  ೨೬೭

ರಕ್ಷಿಪೊಡಿಹಪರಸುಖಮನು
ಪೇಕ್ಷಿಸದೆ ಸಮಸ್ತಕಾರ‍್ಯಮಂ ಸತ್ಪರುಷಂ
ದಕ್ಷತೆಯಿನೈದೆ ನೋಡಿ ಪ
ರೀಕ್ಷಿಸುವುದು ದುರ್ಗಸಿಂಹಮತಮಂ ಹಿತಮಂ  ೨೬೮

ಇದು ವಿನಮದಮರರಾಜ ಮೌಳಿಮಾಣಿಕ್ಯಮರೀಚಿಮಂಜರೀಪುಂಜರಂಜಿತ ಭಗವದ್ಭವಾನೀವಲ್ಲಭ ಚರಣಸರಸೀರುಹಷಟ್ಚರಣಂ ಶ್ರೀಮನ್ಮಹಾಸಂವಿಗ್ರಹಿ ದುರ್ಗಸಿಂಹವಿರಚಿತಮಪ್ಪ ಪಂಚತಂತ್ರದೊಳ್ ಪರೀಕ್ಷಾವ್ಯಾವರ್ಣನಂ ದ್ವಿತೀಯತಂತ್ರಂ ಸಮಾಪ್ತಂ.;

೨೬೪: ಹೇಗೆಂದರೆ ಸಿದ್ಧಾಂತ ತತ್ವವೇದೀಯೂ ವಿಶುದ್ಧ ಸದಾಚಾರಿಯೂ ಸುಂದರ ಗುಣಯುತೆಯೂ ಪ್ರತ್ಯಕ್ಷ ಬುದ್ಧಿ ವೀವೆಕಗಳ ಮಹಾನಿಯೂ ಸದ್ಧರ್ಮಮೂರ್ತಿಯೂ ಎನಿಸಿದ ವೃದ್ದ ಗೌತಮಿಯೆಂಬವಳ  ವ|| ಹಿರಿಯ ಮಗನನ್ನು ಒಂದು ಸರ್ಪವು ಕಚ್ಚಲು ಅದನ್ನು ಕಂಡು ಒಬ್ಬ ಬೇಡನು ಅದನ್ನು ಹಿಡಿದು ಕಟ್ಟಿ Uತಮಿಯ ಮುಂದೆ ಹಾಕಿ ನಿನ್ನ ಮಗನನ್ನು ಈ ಪನ್ನಗವು Pಚ್ಚಿ ಕೊಂದಿತು, ಅದರಿಂದ ಇದನ್ನು ಕೊಲ್ಲುತ್ತೇನೆ ಎಂದು ಬಹಳ ಒತ್ತಾಯಪಡಿಸಲು ಅವನಿಗೆ ಗೌತಮಿ ಹೀಗೆಂದಳು ಇದು ಕಾರಣಭೂತವಲ್ಲದೆ ನಿಮಿತ್ತಭೂತವಲ್ಲ. ಅಲ್ಲದೆ ಕ್ಷುದ್ರ ಜಂತುವಾದ್ದರಿಂದ ಅದು ಅದರ ಸ್ವಾಭಾವ ಸಿದ್ದವಾದುದು. ಅದನ್ನು ಕೊಲ್ಲಬಾರದೆಂದು ಅವಳು ತನ್ನ ಮಗನ್ನನ್ನು ಕೊಂದ ಸರ್ಪವನ್ನು ಪ್ರತ್ಯಕ್ಷವಾಗಿ ಕಂಡರೂ ಅದನ್ನು ಕೊಲ್ಲಲ್ಲು ಬಿಡಲಿಲ್ಲ ನೀವು ಇದರ ಉಗುರುಗಳು ಮುಖವು ರಕ್ತವಾಗಿರುಷ್ಟರಿಂದಲೇ ಅನಪರಾಯೂ ಪರಮೋಪಕಾರಿಯೂ ಅದ ಈ ಮುಂಗುರಿಯನ್ನು ಪರೀಕ್ಷಿಸದೆ ಕೊಂದುಬಿಟ್ಟಿರಿ ಇನ್ನು ಪಶ್ಷತ್ತಾಪವೂ ವಿಪ್ರಲಾಪವೂ ಪ್ರಯೋಜನವವಿಲ್ಲ; ಇನ್ನು ಸುಮ್ಮನಿರಿ ಎಂದು ಪತಿಯನ್ನು ಸಂತೈಸಿ ಹೀಗೆಂದಳು: ೨೬೫. ಹಿಂದೆ ದಶರಥನೆಂಬ ಭೂಪನು ಋಷಿಪುತ್ರನ್ನನ್ನು ಆನೆಯೆಂದು ಭ್ರಮಿಸಿ ಕೊಂದು ಶಾಪಗ್ರಸ್ತನಾಗಲಿಲ್ಲವೆ ಅದರಿಂದ ೨೬೬; ಮನುಷ್ಯನು ಯಶಸ್ಸನ್ನ್ನೂ ಧರ್ಮವನ್ನೂ ಪಾಲಿಸುವದಾದರೆ ಇಹಪರಗಳನ್ನು ಬಯಸುವುದಾದರೆ ಸಮಸ್ತ ಕಾರ‍್ಯಗಳನ್ನು ವಿಚಾರಿಸಿ ಪರೀಕ್ಷಿಸಿ ಕೈಗೊಳ್ಳಬೇಕು ೨೬೭: ಇಹದಲ್ಲಿ ಅಪಕೀರ್ತಿ ತಟ್ಟದಂತೆ ಪರದಲ್ಲಿ ಪಾಪಕ್ಕೆ ಗುರಿಯಾಗದಂತೆ ನೀತಿ ನಿಪುಣರು ಸಂತರು  ಹೇಳಿದಂತೆ ಲೋಕದಲ್ಲಿ ಪರೀಕ್ಷಿಸಿ ಕಾರ‍್ಯವನ್ನು ಮಾಡಬೇಕು. ಇದು ದುರ್ಗಸಿಂಹನ ಲೋಕೋತ್ತರವಾದ ಮತ. ೨೬೮. ಇಹಪರ ಸುಖವನ್ನು ರಕ್ಷಿಸುವುದಾದರೆ ಸಮಸ್ತ ಕಾರ‍್ಯವನ್ನು ಉಪೇಕ್ಷಿ ಸದೆ ಸತ್ಪರುಷನಾದವನು ದಕ್ಷತೆಯಿಂದ ಚೆನ್ನಾಗಿ ನೋಡಿ ಪರೀಕ್ಷಿಸುವುದು. ಇದು ಹಿತವಾದ ಸಿಂಹದುರ್ಗನ ಅಭಿಪ್ರಾಯ ವ|| ಇದು ವಿನಮದಮರರಾಜ ಮೌಳಿಮಾಣಿಕ್ಯ ಮರೀಚಿ ಮಂಜರೀಪುಂಜರಂಜಿತ ಭಗದ್ಭವಾನೀವಲ್ಲಭ ಚರಣಸ ರಸೀರುಹಷಟ್ಚರಣ ಶ್ರೀಮನ್ಮಹಾಸಂವಿಗ್ರಹಿ ದುರ್ಗಸಿಂಹ ವಿರಚಿತವಾದ ಪಂಚತಂತ್ರದಲ್ಲಿ ಪರೀಕ್ಷಾವ್ಯಾವರ್ಣನಂ ಎಂಬ ದ್ವೀತಿಯತಂತ್ರ ಸಮಾಪ್ತಿಯಾಯಿತು.