ವ|| ಒದ್ದು ‘ನಿನ್ನನ್ನು ಇಷ್ಟು ಅವಮಾನಪಡಿಸಿದುದು ಸಾಕು. ನಿನ್ನನ್ನು ಕೊಲ್ಲಬಾರದು. ಕೊಂದರೆ ಹೆದರಿ ತನಗಿಂತ ಮೇಲಾದ ಶತ್ರುವನ್ನೂ ಕೊಂದಂತಾಗುತ್ತದೆ’ ಎಂದು ಕಟ್ಟಿದ ಕಟ್ಟುಗಳೆಲ್ಲವನ್ನೂ ತಾನೇ ಬಿಚ್ಚಿಕಳೆದು ಹೋಗು ಎನ್ನಲು ದ್ರುಪದನು ಅವಮಾನವೆಂಬ

ನಿನ್ನಂ ಕೊಲ್ವನ್ನನೊರ್ವ ಮಗನುಮಂ ವಿಕ್ರಮಾರ್ಜುನಂಗೆ ಪೆಂಡತಿಯಪ್ಪನ್ನಳೊರ್ವ ಮಗಳುಮಂ ಪಡೆದಲ್ಲದಿರೆನೆಂದು ಮಹಾ ಪ್ರತಿಜ್ಞಾರೂಢನಾಗಿ ಪೋದನಿತ್ತ ಭಾರದ್ವಾಜಂ ಪಾಂಡವ ಕೌರವರ್ಕಳ ಮೆಯ್ಯೊಳೆ ವಿದ್ದೆಯಂ ನೆಯೆ ಸಂಕ್ರಮಿಸಿದ ತನ್ನ ವಿದ್ಯಾಮಹಿಮೆಯಂ ಮೆ ಯಲ್ಕೆ ಬಾಹ್ಲೀಕ ಭೂರಿಶ್ರವಸ್ಸೋಮದತ್ತ ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಿಂತೆಂದಂ-

ಕಂ|| ನೆಯೆ ಧನುರ್ವಿದ್ಯೆಯ ಕ
ಣ್ದೆವಿನೆಗಂ ಕಲ್ತ ನಿಮ್ಮ ಮಕ್ಕಳ ಮೆಯ್ಯೊಳ್|
ಮೆದಪ್ಪೆನೆನ್ನ ವಿದ್ದೆಯ
ನಱದೊಯ್ಕನೆ ನೆರೆದು ನೋೞ್ಪುದನಿಬರುವಿಗಳ್|| ೬೫

ವ|| ಎಂದೊಡಂತೆಗೆಯ್ವಮೆಂದನಿಬರುಮೊಡಂಬಟ್ಟು ಪೊಱವೊೞಲೊಳುತ್ತರ ದಿಶಾಭಾಗದೊಳ್ ಸಮಚತುರಸ್ರಮಾಗೆ ನೆಲನನಳೆದು ಕಲ್ಲಂ ಪುಲ್ಲುಮಂ ಸೋದಿಸಿ ಶುಭದಿನ ಶುಭಮೂಹೂರ್ತದೊಳ್-

ಕಂ|| ಗಟ್ಟಿಸಿ ಸಿಂಧುರದೊಳ್ ನೆಲ
ಗಟ್ಟಿಸಿ ಚೆಂಬೊನ್ನ ನೆಲೆಯ ಚೌಪಳಿಗೆಗಳೊಳ್|
ಕಟ್ಟಿಸಿ ಪೞಯಿಗೆಗಳನಳ
ವಟ್ಟಿರೆ ಬಿಯಮಲ್ಲಿ ಮೊೞಗೆ ಪಲವುಂ ಪಗಳ್|| ೬೬

ವ|| ಅಂತು ಸಮೆದ ವ್ಯಾಯಾಮ ರಂಗಕ್ಕೆ ಗಾಂಗೇಯ ಧೃತರಾಷ್ಟ್ರ ವಿದುರ ಸೋಮದತ್ತ ಬಾಹ್ಲೀಕ ಭೂರಿಶ್ರವಾದಿ ಕುಲವೃದ್ಧರುಂ ಕುಂತಿ ಗಾಂಧಾರಿಗಳುಂ ವೆರಸು ಬಂದು ಕುಳ್ಳಿರೆ-

ಕಂ|| ಅರಸಿಯರನಣುಗರಂ ಬೇ
ೞ್ಪರುಮಂ ಮೊನೆಗಾಱರಂ ಪ್ರಗೀತರನಿಂಬಾ|
ಗಿರೆ ಚೌಪಳಿಗೆಗಳೊಳ್ ಕು ಳ್ಳಿರಿಸಿದರೊಡನೆಸೆಯೆ ನೆರೆದ ಪುರಜನ ಸಹಿತಂ|| ೬೭

ವ|| ಆಗಳ್ ಕುಂಭಸಂಭವಂ-

ಕಂ|| ಪೊಸ ಮುತ್ತಿನ ತುಡಿಗೆ ಪೊದ
ಸೆಯೆ ದುಕೂಲಾಂಬರಂ ನಿಜಾಂಗದೊಳಂ ಸಂ|
ದೆಸೆದಿರೆ ಬೆಳ್ಮುಗಿಲಿಂದಂ
ಮುಸುಕಿದ ನೀಲಾದ್ರಿ ಬರ್ಪ ತೆಱದೊಳ್ ಬಂದಂ- ೬೮

ಅಗ್ನಿಯು ವಿಶೇಷವಾಗಿ ಸುಡಲು ‘ನಿನ್ನನ್ನೂ ಕೊಲ್ಲುವಂತಹ ಮಗನನ್ನೂ ವಿಕ್ರಮಾರ್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನೂ ಪಡೆಯದಿರುವುದಿಲ್ಲ’ ಎಂದು ದೂಡ್ಡ ಪ್ರತಿಜ್ಞೆಯನ್ನೂ ಮಾಡಿಹೋದನು. ಈ ಕಡೆ ಭಾರದ್ವಾಜನು ಪಾಂಡವ ಕೌರವರುಗಳ ಶರೀರದಲ್ಲಿ ವಿದ್ಯೆಯನ್ನು ಪೂರ್ಣವಾಗಿ ಅಳವಡಿಸಿದ ತನ್ನ ಮಹಿಮೆಯನ್ನು ಪ್ರಕಾಶಪಡಿಸುವುದಕ್ಕಾಗಿ ಬಾಹ್ಲೀಕ, ಭೂರಿಶ್ರವ, ಸೋಮದತ್ತ, ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಹೀಗೆಂದು ಹೇಳಿದನು. ೬೫. ‘ಬಿಲ್ವಿದ್ಯೆಯೇ ಆವಿರ್ಭಾವವಾಗುವ ಹಾಗೆ ಸಂಪೂರ್ಣವಾಗಿ ಕಲಿತುಕೊಂಡಿರುವ ನಿಮ್ಮ ಮಕ್ಕಳ ಶರೀರದಲ್ಲಿ ನನ್ನ ವಿದ್ಯಯನ್ನು ಪ್ರಕಾಶಪಡಿಸುತ್ತೇನೆ. ಈಗ ಎಲ್ಲರೂ ಒಟ್ಟಾಗಿ ಸೇರಿ ಪ್ರತ್ಯಕ್ಷವಾಗಿ ತಿಳಿದು ನೋಡಬೇಕು.’ ವ|| ಎಂದು ಹೇಳಲಾಗಿ ಹಾಗೆಯೇ ಮಾಡೋಣವೆಂದು ಎಲ್ಲರೂ ಒಪ್ಪಿ ಪಟ್ಟಣದ ಹೊರಗಿನ ಉತ್ತರದಿಗ್ಭಾಗದಲ್ಲಿ ಚಚ್ಚೌಕವಾದ ಭೂಮಿಯನ್ನು ಅಳೆದು ಕಲ್ಲು ಹುಲ್ಲನ್ನು ಶೋಸಿ ತೆಗೆದು ಶುಭದಿನ ಶುಭಮೂಹೂರ್ತದಲ್ಲಿ ೬೬. ನೆಲವನ್ನು ಚಂದ್ರಕಾವಿಯಿಂದ ಧಮ್ಮಸ್ಸುಮಾಡಿ ಅಪರಂಜಿಯಿಂದ ಮಾಡಿದ ಮನೆಗಳ ತೊಟ್ಟಿಗಳಲ್ಲಿ ಬಾವುಟಗಳನ್ನು ಕಟ್ಟಿಸಿ ಸೂಕ್ತ ವೆಚ್ಚದಿಂದ ಹಲವು ವಾದ್ಯಗಳು ಮೊಳಗುತ್ತಿರಲು ವ|| ಹಾಗೆ ನಿರ್ಮಿಸಿದ ವ್ಯಾಯಾಮರಂಗಕ್ಕೆ ಭೀಷ್ಮ, ಧೃತರಾಷ್ಟ್ರ, ವಿದುರ, ಸೋಮದತ್ತ, ಬಾಹ್ಲೀಕ, ಭೂರಿಶ್ರವರೇ ಮೊದಲಾದ ಕುಲವೃದ್ಧರು ಕುಂತಿಗಾಂಧಾರಿಯರೊಡನೆ ಬಂದು ಕುಳಿತರು. ೬೭. ರಾಣಿಯರನ್ನೂ ಮಕ್ಕಳನ್ನೂ ಬೇಕಾದವರನ್ನೂ ಯೋಧರನ್ನೂ ಗಣ್ಯರನ್ನೂ ಪಟ್ಟಣಿಗರೊಡನೆ ಶೋಭಿಸುವ ಹಾಗೆ ಒಟ್ಟಿಗೆ ಹಜಾರದ ಮೇಲುಭಾಗದಲ್ಲಿ ಆಕರ್ಷಕವಾಗಿರುವ ರೀತಿಯಲ್ಲಿ ಕುಳ್ಳಿರಿಸಿದರು. ೬೮. ಆಗ ದ್ರೋಣನು ಹೊಸಮುತ್ತಿನ ಆಭರಣಗಳು ವ್ಯಾಪಿಸಿ ಶೋಭಾಯ ಮಾನವಾಗಿರಲು, ರೇಷ್ಮೆಯ ವಸ್ತ್ರವು ತನ್ನ ಶರೀರವನ್ನು ಸೇರಿ ಸುಂದರವಾಗಿರಲು ಬಿಳಿಯ ಮೋಡದಿಂದ ಮುಚ್ಚಿದ ನೀಲಪರ್ವತವು

ವ|| ಅಂತು ಬಂದು ರಂಗಭೂಮಿಯ ನಡುವೆ ನಿಂದು-

ಕಂ|| ನೆಗೞರೆ ಪುಣ್ಯಾಹ ಸ್ವರ ಮೊಗೆದಿರೆ ಪಟು ಪಟಹ ಕಾಹಳಾ ರವವಾಗಳ್|
ಪುಗವೇೞ್ದಂ ವಿವಿಧಾಸ್ತ್ರ ಪ್ರಗಲ್ಭರಂ ತನ್ನ ಚಟ್ಟರಂ ಕಳಶಭವಂ|| ೬೯

ಅಂತು ಪುಗವೇೞ್ವ್ವುದುಂ ದಿ
ಗ್ದಂತಿಗಳುಂ ಕುಲನಗಂಗಳುಂ ಗಡಣಂಗೊಂ|
ಡೆಂತು ಕವಿತರ್ಕುಮಂತೆ ನೆ
ಲಂ ತಳರ್ರ‍ಿನೆಗಂ ಪ್ರಚಂಡ ಕೋದಂಡಧರರ್|| ೭೦

ವ|| ಅಂತು ಧರ್ಮಪುತ್ರನಂ ಮುಂತಿಟ್ಟು ಭೀಮಾರ್ಜುನ ನಕುಲ ಸಹದೇವರುಂ ದುರ್ಯೋಧನನಂ ಮುಂತಿಟ್ಟು ಯುಯುತ್ಸು ದುಶ್ಯಾಸನ ದುಸ್ಸಹ ದುಸ್ಸಳ ಜರಾಸಂಧ ಸತ್ಯ ಸಂಧ ನಿಸ್ಸಹ ರಾಜಸಂಧ ವಿಂದ ಅನುವಿಂದ ದುರ್ಮತಿ ಸುಬಾಹು ದುಸ್ಪರ್ಶನ ದುರ್ಮರ್ಷಣ ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಸುನಾಭ ಚಿತ್ರ ಉಪಚಿತ್ರ ನಂದ ಉಪನಂದ ಸುಚಿತ್ರಾಂಗದ ಚಿತ್ರಕುಂಡಲ ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹು ಪ್ರತಿಮ ಸುಪ್ರತಿಮ ಸಪ್ರಮಾಥಿ ದುರ್ಧರ್ಷಣ ದುಷ್ಟರಾಜಯ ಮಿತ್ರ ಉಪಮಿತ್ರ ಚೌಳೋಪ ದ್ವಂದ್ವಹಸ್ತ ಪ್ರತೀಪ ಸುಪ್ರತೀಪ ಪ್ರಹಸ್ತ ಪ್ರತಾಪ ಪ್ರಮದ ಸದ್ಬಾಹುಗಳ್ ಮೊದಲಾಗಿ ನೂರ್ವರುಂ ಬಂದು-

ಕಂ|| ಗದೆಯೊಳ್ ಬಿಲ್ಲೊಳ್ ಗಜದೊಳ್
ಕುದುರೆಯೊಳಂ ರಥದೊಳಸ್ತ್ರಕೌಶಲದೆ ಬೆಡಂ|
ಗೊದವಿರೆ ತೋಱದರವರೊ ರ್ಮೊದಲೆ
ಜನಂ ಪೊಗೞೆ ನೆಗೞೆ ಜಳನಿ ನಿನದಂ|| ೭೧

ವ|| ಅಂತವರಿಂ ಬೞ ಯಂ-

ಕಂ|| ಆದ ಮುಳಿಸಿಂದಮಾಗಳ್ ಮೋದುವ ಬಗೆ ಬಳೆಯೆ ಪಿಡಿದ ಗದೆಗಳಿನಿಳಿಪಂ|
ತಾದುದು ಸುಯೋಧನೋಗ್ರ ವೃ ಕೋದರರೊರ್ಮೊದಲೆ ಶಿಖರಮುಳ್ಳೆರಡಗಮಂ|| ೭೨

ವ|| ಅಂತಿರ್ವರುಮೊರ್ವರೊರ್ವರೊಳ್ ಸೆಣಸಿ ಬಹಪ್ರಯೋಗ ಗದಾ ಕೌಶಲಮಂ ತೋಱಲೆಂದು-

ಬರುವ ಹಾಗೆಬಂದನು. ವ|| ಬಂದು ರಂಗಸ್ಥಳದ ಮಧ್ಯೆ ನಿಂತುಕೊಂಡು- ೬೯. ಪುಣ್ಯಾಹವಾಚನ ಮಂತ್ರನಾದವೂ ತಮಟೆ ಕೊಂಬು ಮೊದಲಾದ ವಾದ್ಯಧ್ವನಿಗಳೂ ಮೊಳಗುತ್ತಿರಲು ಬಗೆಬಗೆಯಾದ ಶಸ್ತ್ರಾಸ್ತ್ರಗಳಲ್ಲಿ ಪರಿಣತರಾದ ತನ್ನ ಶಿಷ್ಯರನ್ನು ದ್ರೋಣನು ಪ್ರವೇಶಮಾಡಹೇಳಿದನು. ೭೦. ದಿಗ್ಗಜಗಳೂ ಕುಲಪರ್ವತಗಳೂ ಗುಂಪುಕೂಡಿ ಮುತ್ತುವ ಹಾಗೆಯೂ ಭೂಮಿ ನಡುಗುವ ಹಾಗೆಯೂ ಉದ್ದಾಮರಾದ ಬಿಲ್ಗಾರರು ವ|| ಧರ್ಮರಾಯನನ್ನು ಮುಂದಿಟ್ಟುಕೊಂಡು ಭೀಮಾರ್ಜುನ ನಕುಲಸಹದೇವರೂ ದುರ್ಯೋಧನನನ್ನು ಮುಂದಿಟ್ಟುಕೊಂಡು ಯುಯುತ್ಸು, ದುಶ್ಯಾಸನ, ದುಸ್ಸಳ, ಜರಾಸಂಧ, ಸತ್ಯಸಂಧ, ನಿಸ್ಸಹ, ರಾಜಸಂಧ, ವಿಂದ, ಅನುವಿಂದ, ದುರ್ಮತಿ, ಸುಬಾಹು, ದುಸ್ಪರ್ಶನ, ದುರ್ಮರ್ಷಣ, ದುರ್ಮುಖ, ದುಷ್ಕರ್ಣ, ವಿಕರ್ಣ, ವಿವಿಂಶತಿ, ಸುಲೋಚನ, ಸುನಾಭ, ಚಿತ್ರ, ಉಪಚಿತ್ರ, ನಂದ, ಉಪನಂದ, ಸುಚಿತ್ರಾಂಗದ, ಚಿತ್ರಕುಂಡಲ, ಸುಹಸ್ತ, ದೃಢಹಸ್ತ, ಪ್ರಮಾಥಿ, ದೀರ್ಘಬಾಹು, ಮಹಾಬಾಹು, ಪ್ರತಿಮೆ, ಸುಪ್ರತಿಮ, ಸಪ್ರಮಾಥಿ, ದುರ್ಧರ್ಷಣ, ದುಷ್ಟರಾಜಯ, ಮಿತ್ರ, ಉಪಮಿತ್ರ, ಚೌಳೋಪ, ದ್ವಂದ್ವಹಸ್ತ, ಪ್ರತೀಪ, ಪಹಸ್ತ, ಪ್ರತಾಪ, ಪ್ರಮದ, ಸದ್ಬಾಹುಗಳೇ ಮೊದಲಾದ ನೂರ್ವರೂ ಬಂದು-೭೧. ಜನರೆಲ್ಲರೂ ಸಮುದ್ರಧ್ವನಿಯಂತೆ ಗಟ್ಟಿಯಾಗಿ ಒಟ್ಟಿಗೆ ಹೊಗಳುವ ಹಾಗೆ ಗದೆಯಲ್ಲಿಯೂ ಬಿಲ್ಲಿನಲ್ಲಿಯೂ ಆನೆಯಲ್ಲಿಯೂ ಕುದುರೆಯಲ್ಲಿಯೂ ರಥದಲ್ಲಿಯೂ ಅಸ್ತ್ರಕೌಶಲದಲ್ಲಿಯೂ ಬೆಡಗುತೋರುವಂತೆ ಜಾಣ್ಮೆಯನ್ನು ಪ್ರದರ್ಶಿಸಿದರು. ವ|| ಅವರಾದ ಮೇಲೆ ೭೨. ಹೆಚ್ಚಿದ ಕೋಪವೂ ಹೊಡೆಯಬೇಕೆಂಬ ಅಭಿಲಾಷೆಯೂ ಬೆಳೆಯಲಾಗಿ ದುರ್ಯೋಧನನೂ ಭೀಮನೂ ಏಕಕಾಲದಲ್ಲಿ ಹಿಡಿದ ಗದೆಗಳು ಶಿಖರದಿಂದ ಕೂಡಿದ ಎರಡು ಬೆಟ್ಟಗಳನ್ನು ಒಟ್ಟಿಗೆ ಇಳಿಸಿದಂತಾದುವು. ವ|| ಅವರಿಬ್ಬರೂ ಪರಸ್ಪರ ರ್ಸ್ಪಸಿ ಅನೇಕ ಪ್ರಯೋಗಗಳಿಂದ ಕೂಡಿದ ಗದಾಕೌಶಲವನು

ಕಂ|| ಗೆಡೆವಚ್ಚಿರ್ವರ್ ಮನಗೊಂ ಡೊಡನೊಡನೋರಂತು ತಗುಳ್ದು ಝೇಂಕರಿಸಿದೊಡೆ| ಲ್ವಡಗಾಗೆ ಮೋದಲೆಂದಿ ರ್ದೆಡೆಯೊಳ್ ಗುರು ತನ್ನ ಮಗನನೆಡೆವುಗವೇೞ್ದಂ|| ೭೩

ವ|| ಅಂತು ಮೇರೆದಪ್ಪಲ್ ಬಗೆದ ಮಹಾಸಮುದ್ರಂಗಳೆರಡಱ ನಡುವೆ ಕುಲಗಿರಿಯಿರ್ಪಂತಿರ್ದಶ್ವತ್ಥಾಮನಂ ಕಂಡಿರ್ವರುಮೆರಡುಂ ದೆಸೆಗೆ ತೊಲಗಿ ನಿಂದಾಗಳ್-

ಕಂ|| ಆ ದೂರ್ವಾಂಕುರ ವರ್ಣದೊ ಳಾದಮೊಡಂಬಟ್ಟ ಕನಕ ಕವಚಂ ರಾಜ| ತ್ಕೋದಂಡಮಮರ್ದ ದೊಣೆ ಕ ಣ್ಗಾದಮೆ ಬರೆ ಬಂದು ಮುಂದೆ ನಿಂದಂ ಹರಿಗಂ|| ೭೪

ವ|| ಆಗಳ್ ಕುಂಭಸಂಭವನುಲಿವ ಜನದ ಕಳಕಳ ರವಮುಮಂ ಮೊೞಗುವ ಪಗಳುಮಂ ಬಾರಿಸಿ-

ಕಂ|| ಈತಂ ಗುಣಾರ್ಣವಂ ವಿ
ಖ್ಯಾತ ಯಶಂ ವೈರಿಗಜಘಟಾವಿಘಂಟನನಿಂ||
ತೀತನ ಸಾಹಸಮುಪಮಾ ತೀತಮಿದಂ ನೋಡಿಮೆಂದು ನೆರವಿಗೆ ನುಡಿದಂ|| ೭೫

ವ|| ಆ ಪ್ರಸ್ತಾವದೊಳ್-

ಚಂ|| ಒಡೆಗುಮಜಾಂಡಮಿನ್ನಿನಿಸು ಜೇವೊಡೆದಾಗಳೆ ಬೊಮ್ಮನುಂ ಮನಂ
ಗಿಡುಗುಮದೇವುದೆಂದು ಮಿಡಿದೊಯ್ಯನೆ ಜೇವೊಡೆದಾಗಳಂಬನಂ| ಬೊಡನೊಡನೀಂಬುವೆಂಬನಿತು ಸಂದೆಯಮಪ್ಪಿನಮಸ್ತ್ರ ಜಾಲದಿಂ ತಡೆಯದೆ ಪಂಜರಂಬಡೆದನಂದು ವಿಯತ್ತಳದೊಳ್ ಗುಣಾರ್ಣವಂ|| ೭೬

ವ|| ಮತ್ತಮೈಂದ್ರ ವಾರುಣ ವಾಯವ್ಯಾಗ್ನೇಯ ಪಾರ್ವತಾದಿ ಬಾಣಂಗಳಂ ತುಡೆ-

ಚಂ|| ಕವಿದುವು ಕಾಳ ನೀಳ ಜಳದಾವಳಿ ವಾರಿಗಳ್ ಧರಿತ್ರಿಯಂ
ಕವಿದುವು ಗಾಳಿಗಳ್ ಪ್ರಳಯಕಾಲಮನಾಗಿಸಲೆಂದೆ ಲೋಕಮಂ| ಕವಿದುವು ಮೊಕ್ಕಳಂ ಕವಿದುವುಗ್ರ ಲಯಾಗ್ನಿಗಳಂತೆ ಬೆಟ್ಟುಗಳ್ ಕವಿದುವಿವೆಂಬನಿತ್ತು ಭಯಮಾಯ್ತು ಗುಣಾರ್ಣವನಸ್ತ್ರಕೌಶಲಂ|| ೭೭

ತೋರಿಸಿದರು. ೭೩. ಸಮಾನಬಲರಾದ ಇಬ್ಬರೂ ದೃಢಚಿತ್ತರಾಗಿ ಜೊತೆಜೊಯಲ್ಲಿಯೇ ಬೆನ್ನಟ್ಟಿಕೊಂಡು ಝೋಂಕರಿಸಿ (ಪರಸ್ಪರ ಅವರಿಬ್ಬರ ಶರೀರವು) (ಎಲಬು ಮಾಂಸವಾಗಿ) ಜಜ್ಜಿಹೋಗುವ ಹಾಗೆ ಹೊಡೆಯಬೇಕೆಂದಿದ್ದ ಸಮಯದಲ್ಲಿ ಗುರುವಾದ ದ್ರೋಣನು (ಅವರಿಬ್ಬರನ್ನು ಬೇರ್ಪಡಿಸುವುದಕ್ಕಾಗಿ) ತನ್ನ ಮಗನಾದ ಅಶ್ವತ್ಥಾಮನನ್ನು ಮಧ್ಯೆ ಪ್ರವೇಶಮಾಡಹೇಳಿದನು. ವ|| ಹಾಗೆ ಎಲೆಯನ್ನು ಮೀರಲು ಯೋಚಿಸಿದ ಎರಡು ಮಹಾಸಮುದ್ರಗಳ ಮಧ್ಯೆ ಕುಲಪರ್ವತದಂತಿದ್ದ ಅಶ್ವತ್ಥಾಮನನ್ನು ನೋಡಿ ಇಬ್ಬರೂ ಎರಡು ಪಕ್ಕಕ್ಕೆ ಸರಿದು ನಿಂತರು. ೭೪. ಎಳೆಯ ಗರಿಕೆಯ ಬಣ್ಣದಿಂದ ವಿಶೇಷವಾಗಿ ಒಪ್ಪಿ ತೋರುವ ಚಿನ್ನದ ಕವಚ ಪ್ರಕಾಶಮಾನವಾದ ಬಿಲ್ಲು ಮೈಗೆ ಸೇರಿಕೊಂಡಿದ್ದ ಬತ್ತಳಿಕೆ ಇವು ಕಣ್ಣುಗಳಿಗೆ ಮನೋಹರವಾಗಿರಲು ಹರಿಗನು ಮುಂದುಗಡೆ ಬಂದು ನಿಂತನು. ವ|| ಆಗ ದ್ರೋಣನು ಶಬ್ದಮಾಡುತ್ತಿದ್ದ ಜನಗಳ ಕಳಕಳಧ್ವನಿಯನ್ನೂ ಮೊಳಗುತ್ತಿದ್ದ ವಾದ್ಯಗಳನ್ನೂ ನಿಲ್ಲಿಸಿ ೭೫. ವಿಖ್ಯಾತಯಶಸ್ಸುಳ್ಳವನೂ ವೈರಿಗಜ ಘಟಾವಿಘಟನೂ (ಶತ್ರುಗಳೆಂಬ ಆನೆಗಳನ್ನು ಸೀಳುವ ಪರಾಕ್ರಮಿಯಾದ) ಆದ ಗುಣಾರ್ಣವನು ಇವನು. ಈತನ ಸಾಹಸ ಹೋಲಿಕೆಗೆ ಮೀರಿದುದು ಇದನ್ನು ನೋಡಿ ಎಂದು ಆ ಗುಂಪಿಗೆ ತಿಳಿಸಿದನು. ವ|| ಆ ಸಂದರ್ಭದಲ್ಲಿ- ೭೬. ಅರ್ಜುನನು ಸ್ವಲ್ಪ ಮಟ್ಟಿಗೆ ಬಿಲ್ಲನ್ನು ಶಬ್ದಮಾಡಿಸಿದರೂ ಬ್ರಹ್ಮಾಂಡವು ಒಡೆದುಹೋಗುತ್ತದೆ; ಬ್ರಹ್ಮನು ಉತ್ಸಾಹಶೂನ್ಯನಾಗುತ್ತಾನೆ. ಅಷ್ಪನ್ನೇಕೆ ಮಾಡುವುದು ಎಂದು ಅವನು ಬಹುನಿಧಾನ ಟಿಂಕಾರಮಾಡಿದಾಗ ಒಂದು ಬಾಣವು ಮತ್ತೊಂದು ಬಾಣವನ್ನೂ ಹೆರುತ್ತಿದೆಯೋ ಎಂಬ ಸಂದೇಹವನ್ನುಂಟುಮಾಡುತ್ತ ಗುಣಾರ್ಣವನು ಆಕಾಶಪ್ರದೇಶದಲ್ಲಿ ಆ ದಿನ ಅಸ್ತ್ರಗಳ ಸಮೂಹದಿಂದ ಸ್ವಲ್ಪವೂ ಸಾವಕಾಶ ಮಾಡದೆ ಒಂದು (ಬಾಣದ) ಪಂಜರವನ್ನು ಕಟ್ಟಿದನು. ವ|| ಮತ್ತು ಐಂದ್ರ, ವಾರುಣ, ವಾಯವ್ಯ, ಆಗ್ನೇಯ, ಪಾರ್ವತವೇ ಮೊದಲಾದ ಅಸ್ತ್ರಗಳನ್ನು ಪ್ರಯೋಗಿಸಲು- ೭೭. ಪ್ರಳಯಕಾಲದ ಕಪ್ಪುಮೋಡಗಳು ಮುಚ್ಚಿಕೊಂಡವು. ಸಮುದ್ರಗಳು ಭೂಮಿಯನ್ನು ಮುಚ್ಚಿದುವು.

ವ|| ಆಗಳಾ ಪರಾಕ್ರಮಧವಳನ ಶರಪರಿಣತಿಯಂ ಕಂಡು ದುಯೋಧನನ ಮೊಗಂ ತಲೆನವಿರ ಗಂಟಿಂ ಕಿಱದಾಗೆ ದ್ರ್ಹೋಣ ಭೀಷ್ಮ ಕೃಪ ವಿದುರ ಪ್ರಭೃತಿಗಳ ಮೊಗಮರಲ್ದ ತಾವರೆಯಿಂ ಪಿರಿದಾಗೆ-

ಕಂ|| ತೊಳಗುವ ತೇಜಂ ತೊಳತೊಳ ತೊಳಗುವ ದಿವ್ಯಾಸ್ತ್ರಮಮರ್ದ ಕೇದಂಡಮಸುಂ|
ಗೊಳಿಸೆ ಮನಂಗೊಳಿಸೆ ಭಯಂ
ಗೊಳಿಸೆ ಸಭಾಸದರನುಱದೆ ಕರ್ಣಂ ಬಂದಂ|| ೭೮

ವ|| ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು ಶರಯಿಂ ದಿವ್ಯಾಸ್ತ್ರಂಗಳನುರ್ಚಿ ಕೊಂಡು-

ಕಂ|| ಅರಿಗನ ಬಿಲ್ಬಲ್ಮೆಯೊಳಂ ದೆರಡಿಲ್ಲದೆ ಬಗೆದ ಮುಳಿಸುಮೇವಮುಮೆರ್ದೆಯೊಳ್||
ಬರೆದಿರೆ ತೋಱದನಾಯತ
ಕರ ಪರಿಘಂ ಕರ್ಣನಾತ್ಮ ಶರಪರಿಣತಿಯಂ|| ೭೯

ವ|| ಅಂತು ತೋಱಯುಮೆರ್ದೆಯ ಮುಳಿಸು ನಾಲಗೆಗೆ ವರೆ ಸೈರಿಸಲಾಱದೆ ವಿದ್ವಿಷ್ಟ ವಿದ್ರಾವಣನನಿಂತೆಂದಂ-

ಕಂ|| ಸಂಗತದಿನೀಗಳಿಂತೀ
ರಂಗಮೆ ರಣರಂಗಮಾಗೆ ಕಾದುವಮಳವಂ|
ಪೊಂಗದಿರಿದಿರ್ಚದೇಂ ಗಳ
ರಂಗಂಬೊಕ್ಕಾಡುವಂತೆ ಪೆಂಡಿರೆ ಗಂಡರ್|| ೮೦

ವ|| ಎಂಬುದುಮತಿರಥಮಥನನಿಂತೆಂದಂ-

ಕಂ|| ಈ ನೆರೆದ ಗುರುಜನಂಗಳ
ಮಾನಿನಿಯರ ಮುಂದೆ ಕರ್ಣ ಪೊಲ್ಲದು ನುಡಿದೈ|
ನೀನೆನ್ನೀ ನಿಡುದೋಳ್ಗಳ
ತೀನಂ ಮೞಸುವೆಯಪ್ಪೊಡಾನೊಲ್ಲದನೇ|| ೮೧

ವ|| ಎಂಬುದುಂ ದ್ರೋಣನುಂ ಕೃಪನುಮೆಡೆಗೆ ವಂದು ಕರ್ಣನನಿಂತೆಂದರ್-

ಪ್ರಳಯಕಾಲವನ್ನುಂಟುಮಮಾಡಬೇಕೆಂದೇ ಬಿರುಗಾಳಿಗಳು ಭೂಮಿಯನ್ನಾವರಿಸಿಕೊಂಡವು. ಪ್ರಳಯಕಾಲದ ಬೆಂಕಿಗಳು ವಿಶೇಷವಗಿ ಮುಚ್ಚಿಕೊಂಡವು. ಹಾಗೆಯೇ ಬೆಟ್ಟಗಳು ಕವಿದುಕೊಂಡವು ಎನ್ನುವಷ್ಟು ಮಟ್ಟಿಗೆ ಅರ್ಜುನನ ಅಸ್ತ್ರವಿದ್ಯಾ ಕೌಶಲವು ಭಯಂಕರವಾಯಿತು. ವ|| ಆಗ ಆ ಪರಾಕ್ರಮಧವಳನಾದ ಅರ್ಜುನನ ಬಿಲ್ವಿದ್ಯೆಯ ಪಾಂಡಿತ್ಯವನ್ನು ನೋಡಿ ದುರ್ಯೋಧನನ ಮುಖವು ತಲೆಯಕೂದಲಿನ ಗಂಟಿಗಿಂತ ಚಿಕ್ಕದಾಗಲು, ದ್ರೋಣ, ಭೀಷ್ಮ, ಕೃಪ, ವಿದುರರೇ ಮೊದಲಾದವರ ಮುಖಗಳು ಅರಳಿದ ತಾವರೆಗಿಂತ ಹಿರಿದಾದುವು. ೮೭. ಈ ಮಧ್ಯೆ ಪ್ರಕಾಶಮಾನವಾದ ತೇಜಸ್ಸೂ ಅತ್ಯಂತ ಜಾಜ್ವಲ್ಯಮಾನವಾದ ದಿವ್ಯಾಸ್ತ್ರದಿಂದ ಕೂಡಿಕೊಂಡಿರುವ ಬಿಲ್ಲೂ ಸಭೆಯ ಜನರನ್ನು ಉತ್ಸಾಹಗೊಳಿಸಿ ಆಕರ್ಷಿಸಿ ಭಯವನ್ನುಂಟುಮಾಡುತ್ತಿರಲು ಕರ್ಣನು ವೇಗವಾಗಿ ಬಂದನು. ವ|| ದ್ರೋಣಾ ಚಾರ್ಯರಿಗೆ ನಮಸ್ಕಾರಮಾಡಿ ಬತ್ತಳಿಕೆಯಿಂದ ದಿವ್ಯಾಸ್ತ್ರಗಳನ್ನು ಸೆಳೆದುಕೊಂಡು ೭೯. ಅರ್ಜುನನ ಬಿಲ್ಲಿಗಿಂತ ತನ್ನ ಬಿಲ್ಲಿನ ಪಾಂಡಿತ್ಯವು ಸ್ವಲ್ಪವೂ ಬೇರೆಯಿಲ್ಲವೆಂದು ಭಾವಿಸಿದ ಕೋಪವೂ ಅಸಮಾಧಾನವೂ ಎದೆಯಲ್ಲಿ ಬರೆದಿರಲು ಪರಿಘಾಯುಧದಂತೆ ದೀರ್ಘವಾದ ಬಾಹುಗಳನ್ನುಳ್ಳ ಕರ್ಣನು ತನ್ನ ಅಸ್ತ್ರವಿದ್ಯಾಪ್ರೌಢಿಮೆಯನ್ನು ಪ್ರದರ್ಶಿಸಿದನು. ವ|| ಹಾಗೆ ತೋರಿಸಿಯೂ ಹೃದಯದ ಕೋಪವು ನಾಲಗೆಗೆ ಬರಲು ಸಹಿಸಲಾರದೆ ವಿದ್ವಿಷ್ಠವಿದ್ರಾವಣನಾದ ಅರ್ಜುನನನ್ನು ಕುರಿತು ಹೀಗೆಂದನು- ೮೦ ಎಲ್ಲರೂ ಇಲ್ಲಿ ಸೇರಿರುವುದರಿಂದ ಈ ವ್ಯಾಯಾಮರಂಗವೇ ರಣರಂಗವಾಗಿರಲು ಯುದ್ಧಮಾಡೋಣ. ಪರಾಕ್ರಮದಿಂದ ಉಬ್ಬದೇ (ಅಹಂಕಾರಪಡದೇ) ಇದಿರಿಸು. ಇದೇನಯ್ಯ ನಾಟ್ಯರಂಗವನ್ನು ಪ್ರವೇಶಿಸಿ ನರ್ತನಮಾಡುವುದಕ್ಕೆ ಶೂರರು ಹೆಂಗಸರೇನು? ವ|| ಎನ್ನಲು ಅದಕ್ಕೆ ಅತಿರಥಮಥನನಾದ ಅರ್ಜುನನು ಹೀಗೆಂದನು. ೮೧. ಕರ್ಣ ನೀನು ಇಲ್ಲಿ ಸೇರಿರುವ ಹಿರಿಯರ ಮತ್ತು ರಾಣಿವಾಸದ ಮುಂದೆ ಕೆಟ್ಟ ಮಾತನ್ನಾಡಿದ್ದೀಯೆ. ನೀನು ನನ್ನ ದೀರ್ಘವಾದ ತೋಳುಗಳ ತೀಟೆಯನ್ನು ಹೋಗಲಾಡಿಸುವುದಾದರೆ ನಾನು ಬೇಡವೆನ್ನುತ್ತೇನೆಯೇ? ವ|| ಎನ್ನಲು ದ್ರೋಣನು ಕರ್ಣನ

ಕಂ|| ಏವದ ಮುಳಿಸಿನ ಕಾರಣ ಮಾವುದೊ ನೀಂ ನಿನ್ನ ತಾಯ ತಂದೆಯ ದೆಸೆಯಂ|
ಭಾವಿಸದೆ ಕರ್ಣ ನುಡಿವಂ ತಾವುದು ಸಮಕಟ್ಟು ನಿನಗಮರೀಕೇಸರಿಗಂ|| ೮೨