ಕಂ|| ಶ್ರೀಗಗಲುರಮಂ ಕೀರ್ತಿ
ಶ್ರೀಗೆ ದಿಗಂತಮುಮನಹಿತರಂ ಗೆಲ್ವ ಜಯ|
ಶ್ರೀಗೆ ಭುಜಶಿಖರಮಂ ನೆಲೆ
ಯಾಗಿಸಿ ನೀಂ ನೆಲಸು ನೇಸಱುಳ್ಳಿನಮರಿಗಾ|| ೧

ಎಂಬ ಪರಕೆಗಳ ರವದೊಳ್
ತುಂಬೆ ನಭೋವಿವರಮಮರ ಮುನಿಜನಮಮರೇಂ|
ದ್ರಂ ಬೆರಸು ತಳರ್ದುದಾದುದ
ಳುಂಬಂ ಮನದೊಸಗೆ ಕುಂತಿಗಂ ತತ್ಪತಿಗಂ|| ೨

ವ|| ಅಂತು ಗುಣಾರ್ಣವನ ಪುಟ್ಟಿದೊಸಗೆಯೊಳೊಸಗೆ ಮರುಳ್ಗೊಂಡು ಕುಂತಿಯುಂ ಪಾಂಡುರಾಜನುಮಿರೆ ಮಾದ್ರಿ ತನಗೆ ಮಕ್ಕಳಿಲ್ಲದುದರ್ಕೆ ವಿರಕ್ತೆಯಾಗಿ ಪೊಸೆದು ಬಿಸುಟ ರಕ್ತಾಶೋಕಪಲ್ಲವದಂತೆ ಕರಂ ಕೊರಗಿ ಚಿಂತಿಸುತಿರ್ದೊಡಾಕೆಯ ಬಿನ್ನನಾದ ಮೊಗದಂದಮಂ ಕಂಡು ಕುಂತಿ ಕರುಣಿಸಿ ಪುತ್ರೋತ್ಪತ್ತಿ ನಿಮಿತ್ತಂಗಳಪ್ಪ ಮಂತ್ರಾಕ್ಷರಂಗಳನುಪದೇಶಂಗೆಯ್ದೊಡಾಕೆಯುಂ ತದುಕ್ತಕ್ರಿಯೆಯೊಳಂ ನಿಯಮನಿಯಮಿತೆಯಾಗಿ-

ಕಂ|| ಆಹ್ವಾನಂಗೆಯ್ದಶ್ವಿನಿ
ದೇವರನವರಿತ್ತ ವರದೊಳವರಂಶಮೆ ಸಂ|
ಭಾವಿಸೆ ಗರ್ಭದೊಳಮಳರ
ನಾ ವನಜದಳಾಕ್ಷಿ ಪಡೆದು ಸಂತತಿವೆತ್ತಳ್|| ೩

ವ|| ಆಗಳಾ ಪಾಂಡುರಾಜನಾ ಕೂಸುಗಳ್ಗೆ ಜಾತಕರ್ಮಮಂ ಮುನಿಗಳಿಂ ಬಳೆಯಿಸಿ ನಕುಲ ಸಹದೇವರೆಂದವರ್ಗಮಳ್ವೆಸರನಿಟ್ಟು ಪುತ್ರ ಸಂಪೂರ್ಣ ಮನೋರಥನಾಗಿರ್ಪಿನಮಯ್ವರ್ ಕೂಸುಗಳುಮೇೞ್ಗೆವಾಡಿವದ ಚಂದ್ರನಂತುತ್ತರಾಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ ಭರತ ಕುಲಕ್ಕೆ ವಿಶದ ಯಶೋಂಕುರಂಗಳುಂ ಬಂಧುಜನಕ್ಕೆ ಪುಣ್ಯಾಂಕುರಂಗಳುಂ ವಂದಜನಕ್ಕೆ ಕಲ್ಪವೃಕ್ಷಾಂಕುರಂಗಳುಮರಾತಿಜನಕ್ಕೆ ಕಾಳಕೂಟಾಂಕುರಂಗಳುಮಂ ಪೋಲ್ತು ಪಂಚಾಂಗ ಮಂತ್ರಂ ಸ್ವರೂಪದೊಳ್ ಮೂರ್ತಿಮಂತಂಗಳಾದಂತೆ ಸೊಗಯಿಸಿ ಬಳೆಯೆ-

೧. ಎಲೌ ಅಂಗನೆ ನೀನು ನಿನ್ನ ಅಗಲವಾದ ಎದೆಯನ್ನು ಲಕ್ಷ್ಮಿಗೂ ದಿಗಂತವನ್ನು ಕೀರ್ತಿಲಕ್ಷ್ಮಿಗೂ ಭುಜಶಿಖರವನ್ನು ಶತ್ರುಗಳನ್ನು ಗೆಲುವ ವಿಜಯಲಕ್ಷ್ಮಿಗೂ ನಿವಾಸಸ್ಥಾನವನ್ನಾಗಿಸಿ ಸೂರ್ಯನಿರುವವರೆಗೂ ಸ್ಥಿರವಾಗಿ ನಿಲ್ಲು ೨. ಎಂಬ ಹರಕೆಯ ಶಬ್ದವು ಆಕಾಶ ಪ್ರದೇಶವನ್ನೆಲ್ಲ ತುಂಬಲು ದೇವತೆಗಳೂ ಋಷಿಗಳೂ ದೇವೇಂದ್ರನೊಡನೆ ಹೊರಟುಹೋದರು. ಕುಂತಿಗೂ ಅವಳ ಪತಿಯಾದ ಪಾಂಡುರಾಜನಿಗೂ ವಿಶೇಷವಾಗಿ ಮನಸ್ಸಂತೋಷವಾಯಿತು. ವ|| ಹಾಗೆ ಗುಣಾರ್ಣವನ ಜನ್ಮೋತ್ಸವದ ಸಂತೋಷದ ಸಂಭ್ರಮದಲ್ಲಿ ಸೇರಿಕೊಂಡು ಕುಂತಿಯೂ ಪಾಂಡುರಾಜನೂ ಇರಲಾಗಿ ಮಾದ್ರಿಯು ತನಗೆ ಮಕ್ಕಳಿಲ್ಲದುದಕ್ಕೆ ಉತ್ಸಾಹಶೂನ್ಯಳಾಗಿ ಹೊಸೆದು ಬಿಸಾಡಿದ ಅಶೋಕದ ಚಿಗುರಿನಂತೆ ವಿಶೇಷವಾಗಿ ದುಖಪಟ್ಟು ಚಿಂತಿಸುತ್ತಿರಲಾಗಿ ಆಕೆಯ ಬಾಡಿದ ಮುಖದ ರೀತಿಯನ್ನು ಕಂಡು ಕುಂತಿಯು ಕರುಣಿಸಿ ಪುತ್ರೋತ್ಪತ್ತಿ ಕಾರಣಗಳಾದ ಮಂತ್ರಗಳನ್ನು ಉಪದೇಶಮಾಡಲಾಗಿ ಅವಳು ಆ ಮಂತ್ರಕ್ಕೆ ವಿಸಿದ ರೀತಿಯಲ್ಲಿ ನಿಯಮದಿಂದ ೩. ಅಶ್ವಿನೀದೇವತೆಯರನ್ನು ಆಹ್ವಾನಿಸಿ ಬರಿಸಿ ಅವರು ಕೊಟ್ಟ ವರಗಳಿಂದ ಅವರಂಶವೇ ಗರ್ಭದಲ್ಲುಂಟಾಗಲು ಅವಳಿ ಮಕ್ಕಳನ್ನು ಪಡೆದು ಸಂತಾನವನ್ನು ಊರ್ಜಿತಗೊಳಿಸಿದಳು. ವ|| ಆಗ ಆ ಪಾಂಡುರಾಜನು ಆ ಶಿಶುಗಳಿಗೆ ಋಷಿಗಳಿಂದ ಜಾತಕರ್ಮಗಳನ್ನು ಮಾಡಿಸಿ ನಕುಲಸಹದೇವರೆಂಬ ಜೋಡಿ ಹೆಸರನ್ನಿಟ್ಟು ಮಕ್ಕಳನ್ನು ಪಡೆಯುವ ಸಂಪೂರ್ಣತೃಪ್ತಿ ಹೊಂದಿರಲು ಆ ಅಯ್ದು ಮಕ್ಕಳೂ ಶುಕ್ಲಪಕ್ಷದ ಪ್ರಥಮೆಯ ವೃದ್ಧಿಚಂದ್ರನಂತೆ ಮೇಲೆಮೇಲೆ ಸೊಗಯಿಸಿ ಬಳೆಯುತ್ತಿದ್ದರು; ಅವರು ಭರತವಂಶಕ್ಕೆ ವಿಸ್ತಾರವಾದ ಯಶಸ್ಸಿನಮೊಳಕೆಗೂ ಬಂಧುಜನಗಳಿಗೆ ಪುಣ್ಯದ ಮೊಳಕೆಗಳೂ ಶತ್ರುಜನಕ್ಕೆ ಕಾಳಕೂಟವಿಷದ ಮೊಳಕೆಗಳೂ ಆಗಿ ಪಂಚಾಂಗ ಮಂತ್ರಗಳಾದ ಸ್ತುತಿ, ನೈವೇದ್ಯ, ಅಭಿಷೇಕ, ತರ್ಪಣ, ಸಮಾರಾಧನ ಎಂಬ ವೇದಕ್ಕೆ ಸಂಬಂಸಿದ ಮಂತ್ರಗಳು ತಮ್ಮ

ಕಂ|| ತೊಡರ್ದಮರ್ದ ಬಾಳವಣ್ಣದ
ತುಡುಗೆ ಪಳಂಚಲೆವ ಪಂಚ ಜಡೆ ನೊಸಲೊಳೊಡಂ|
ಬಡುವರಳೆಲೆಯಿವಱಂ ಚೆ
ಲ್ವಿಡಿದಿರ್ದುದು ಬಾಳಕೇಳಿ ಧರ್ಮಾತ್ಮಜನಾ|| ೪

ವ|| ಅಂತಾತಂ ಬಳೆಯೆವಳೆಯೆ-

ಕಂ|| ನಡೆವ ತಳರ್ನಡೆಯೊಳ್ ಪುಡಿ
ವುಡಿಯಾದುವು ಶಿಲೆಗಳೊಡೆದು ಕರಿಗಳ್ ಭೀಮಂ|
ಪಿಡಿದಡರ್ದೊಡೆ ಬಾಯ್ವಿಟ್ಟೆ
ಲ್ವಡಗಾದುವು ಮುದ್ದದಂತು ಸೊಗಯಿಸವೇಡಾ|| ೫

ಮುನಿವನ ಮನೆ ಬಿಸುಟುವು ಮುಂ
ಮುನಿಯರ ಸೋಂಕಿಲೊಳೆ ಬಳೆದ ಸಿಂಗಂಗಳ್ ಮು|
ದ್ದಿನೊಳಡರ್ವ ಪಿಡಿವ ಗುರ್ದುವ
ಮನೆಗೆೞೆವನಿತರ್ಕಮಲಸಿ ಮರುದಾತ್ಮಜನಾ|| ೬

ವ|| ಅಂತಾತಂ ಬಳೆಯೆ-

ಕಂ|| ಬೇಡದುದಂ ಬೇಡುವ ಪುಡಿ
ಯಾಡುವ ತೊದಳೊದವೆ ನುಡಿವ ನಗಿಸುವ ಬಾಲ|
ಕ್ರೀಡೆ ಮುರಾರಿಯ ಬಾಲ
ಕ್ರೀಡೆಯನನುಕರಿಪುದಾದುದರಿಕೇಸರಿಯಾ|| ೭

ಪರೆದಡರ್ದ ಧೂಳಿ ಕಿಱುನಗೆ
ವೆರಸಿದ ತೊದಳೊದವೆ ನುಡಿವ ನುಡಿ ನಗೆಮೊಗದೊಳ್|
ಪರಕಲಿಸಿದ ಕಾಡಿಗೆವೆರ
ಸರಿಕೇಸರಿ ತಾಯ ಮನಮನಿೞ್ಕುಳಿಗೊಂಡಂ|| ೮

ಒಗೆತರ್ಪ ಪಲ್ಗಳಾ ನಗೆ
ಮೊಗದ ಸರಸ್ವತಿಯನಾಗಳರ್ಚಿಸಿದ ಪೊದ|
ಳ್ದಗಲದ ಚೆಲ್ವಿನ ಮೊಲ್ಲೆಯ
ಮುಗುಳ್ಗಳನಿಳಿಸಿರೆ ಗುಣಾರ್ಣವಂ ಸೊಗಯಿಸಿದಂ|| ೯

ರೂಪದಲ್ಲಿಯೇ ಪ್ರತ್ಯಕ್ಷವಾಗಿ ಮೂರ್ತಿಮತ್ತುಗಳಾದಂತೆ ಸೊಗಯಿಸಿ ತೋರಿದರು. ೪. ಮೈಯನ್ನು ಚೆನ್ನಾಗಿ ಸೇರಿಕೊಂಡ ಕತ್ತಿಯ ಬಣ್ಣದ (ನೀಲಿಬಣ್ಣದ) ಉಡುಪಿನಿಂದಲೂ ಬೆನ್ನಿಗೆ ಅಪ್ಪಳಿಸುತ್ತಿರುವ ಅಯ್ದು ಜಡೆಗಳಿಂದಲೂ ಒಪ್ಪಿ ತೋರುವ ಅರಳೆಲೆಯ ಆಕಾರದ ಪದಕಗಳಿಂದಲೂ ಧರ್ಮರಾಯನ ಬಾಲಕ್ರೀಡೆಯು ಸುಂದರವಾಗಿದ್ದಿತು. ವ|| ಹಾಗೆ ಅವನು ಅಭಿವೃದ್ಧಿಯಾಗುತ್ತಿರಲು ೫. ಭೀಮನು ನಡೆಯುವ ತಪ್ಪು ಹೆಜ್ಜೆಗಳಿಂದಲೇ ಕಲ್ಲುಗಳು ಒಡೆದು ಪುಡಿಯಾದುವು. ಆನೆಗಳನ್ನು ಹಿಡಿದು ಅವನು ಹತ್ತಲು ಅವು ಬಾಯಿಬಿಟ್ಟು (ಕೂಗಿಕೊಂಡು) ಜಜ್ಜಿ ಎಲುಬುಮಾಂಸಗಳಾದುವು. ಮುದ್ದುಮುದ್ದಾಗಿರುವ ಬಾಲ್ಯಸ್ಥಿತಿ ಹೀಗೆ ಸೊಗಯಿಸಬೇಡವೇ? ೬. ಭೀಮನು ಹುಟ್ಟುವುದಕ್ಕೆ ಮುಂಚೆ ಋಷಿಗಳ ಮಡಲಿನಲ್ಲಿಯೇ ಬಳೆದ ಸಿಂಹಗಳು ಈಗ ಭೀಮನು ಆಟಕ್ಕಾಗಿ ಅವುಗಳನ್ನು ಹತ್ತುವ, ಹಿಡಿಯುವ, ಗುದ್ದುವ, ಮನೆಯೊಳಕ್ಕೆ ಎಳೆದುಕೊಂಡುಹೋಗುವ ಹಿಂಸೆಗಳಷ್ಟಕ್ಕೂ ಆಯಾಸಗೊಂಡು ಆ ಋಷಿಗಳ ವನವನ್ನೇ ತೊರೆದುಹೋದವು. ೭. ಬೇಡದುದನ್ನು ಬೇಡುವ ಧೂಳಾಟವಾಡುವ ತೊದಲುಮಾತುಗಳನ್ನಾಡುವ ನಗುವನ್ನುಂಟುಮಾಡುವ ಅರಿಕೇಸರಿಯ ಬಾಲಕ್ರೀಡೆಯು ಶ್ರೀಕೃಷ್ಣನ ಬಾಲಕ್ರೀಡೆಗಳನ್ನು ಅನುಕರಿಸುವುದಾಯಿತು. ೮. ಕೆದರಿ ಮೆಯ್ಗಂಟಿಕೊಂಡಿರುವ ಧೂಳು, ಹುಸಿನಗೆಯಿಂದ ಕೂಡಿದ ತೊದಲುಮಾತು, ನಗುಮುಖದಲ್ಲಿ ಹರಡಿದ ಕಾಡಿಗೆಯೊಡನೆ ಅರಿಕೇಸರಿ ತಾಯಿಯಾದ ಕುಂತಿಯ ಮನಸ್ಸನ್ನು ಆಕರ್ಷಿಸಿದನು.

೯. (ಆಗತಾನೆ) ಹುಟ್ಟುತ್ತಿರುವ ಹಲ್ಲುಗಳು ಆ ನಗೆಮೊಗದ ವಾಗ್ದೇವಿಯನ್ನು ಪೂಜಿಸುವುದಕ್ಕಾಗಿ ಹರಡಿದ ಸುಂದರವಾದ ಮೊಲ್ಲೆಯ

ಕರಿಕಳಭಂಗಳ ಶಿಶು ಕೇ
ಸರಿಗಳ ಬೞಯಂ ತಗುಳ್ದು ಬಡವುಗಳನವಂ|
ತಿರಿಪಿ ಪಿಡಿಯುತ್ತುಮರಿಗಂ
ಪರಿದಾಡುವ ಸಮವಯಸ್ಕರೊಳ್ ಸೊಗಯಿಸಿದಂ|| ೧೦

ದೆಯ್ವಬಲಂ ಸೊಗಸಿಕೆ ಮುಂ
ಗೆಯ್ವ ಬಲಂ ಬಾಳಕಾಲದೊಳ್ ತೊಡರ್ದ ಪೊಡ|
ರ್ದಯ್ವರ ಬಾಲಕ್ರಿಯೆಯುಂ
ಮುಯ್ವಂ ನೋಡಿಸಿತು ತಾಯುಮಂ ತಂದೆಯುಮಂ|| ೧೧

ವ|| ಅಂತಾ ಕೂಸುಗಳ್ ನಿಜ ಜನನೀಜನಕರ ಮನಮನಿೞ್ಕುಳಿಗೊಳಿಸಿಯುಮರಾತಿ ಜನಂಗಳ ಮನಮನಸುಂಗೊಳಿಸಿಯುಂ ಬಳೆಯೆ ಬಳೆಯೆ-

ಚಂ|| ಅಲರ್ದದಿರ್ಮುತ್ತೆ ಪೂತ ಪೊಸಮಲ್ಲಿಗೆ ಕಂಪನವುಂಕುತಿರ್ಪ ತೆಂ
ಬೆಲರುಮಿದಂ ಗೆಲಲ್ಬಗೆವ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ|
ಗಿಲೆ ನನೆದೋಱ ನುಣ್ಪೆಸೆವ ಮಾಮರನೊರ್ಮೊದಲಲ್ಲದುಣ್ಮುವು
ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್|| ೧೨

ವ|| ಅಂಗಳಾ ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ ಬಳ್ವಳ ಬಳೆದ ಮಿಳಿರ್ವಶೋಕೆಯ ತಳಿರ್ಗಳುಮಾತನ ಬರವಿಂಗೆ ತೋರಣಂಗಟ್ಟಿದಂತೆ ಬಂದ ಮಾಮರಂಗಳನಡರ್ದು ತೊಡರ್ದೆಳಗೊಂಬುಗಳ್ವಿಡಿದು ಮರದಿಂ ಮರಕ್ಕೆ ದಾಂಗುಡಿವಿಡುವ ಮಾಧವೀಲತೆಗಳು ಮಾತನ ಬರವಿಂಗೆ ನೆಯೆ ಸೊಗಯಿಸೆ ಕೆಯ್ಗೆಯ್ವ ನಲ್ಲಳಂತೆ ನನೆಯ ಬಿರಿಮುಗುಳ್ಗಳ ತುಱುಗಲೊಳೆಱಗಿ ತುಱುಗಿದ ಕಲ್ಪಲತೆಗಳು ಮಾತನ ಬರವಿಂಗೆ ಬದ್ದವಣಂ ಬಾಜಿಪಂತೆ ಭೋರ್ಗರೆದು ಮೊರೆವ ತುಂಬಿಗಳುಮಾತನ ಬರವಿಂಗೆ ರಂಗವಲಿಯಿಕ್ಕಿದಂತೆ ಪುಳಿನಸ್ಥಳಂಗಳೊಳುದಿರ್ದ ಕೞವೂಗಳುಮಾತನ ಬರವಿಂಗೆ ವನವನಿತೆ ಮೆಚ್ಚಿ ನೆಯೆ ಕೆಯ್ಗೆಯ್ದಂತೆ ನಿಱನಿಱಗೊಂಡು ಸೊಗಯಿಸುವ ನಿಱಗನ ನಿಱದಳಿರ ಗೊಂಚಲ್ಗಳುಮಾತನ ಮೇಲ್ವಾಯೆ ರಾಗಿಸಿ ರೋಮಾಂಕುರಮೊಗೆದಂತೊಗೆದ ಕಳಿಕಾಂಕುರಂಗಳುಮಾತನಂಗಸಂಗದೊಳ್ ಕಾಮರಸಮುಗುವಂತುಗುವ ಸೊನೆಯ ಸೋನೆಗಳುಮನೊಳಕೊಂಡು ತದಾಶ್ರಮದ ನಂದನವನಂಗಳ್ ಜನಂಗಳನನಂಗಂಗೆ ತೋೞ್ತುವೆ ಸಂಗೆಯ್ಸಿದುವು-

ಮೊಗ್ಗಿನ ರಾಶಿಯನ್ನು ತಿರಸ್ಕರಿಸುತ್ತಿರಲು ಗುಣಾರ್ಣವನು ಸೊಗಸಾಗಿ ಕಂಡನು. ೧೦. ಆನೆಯ ಮರಿಗಳನ್ನೂ ಸಿಂಹದ ಮರಿಗಳನ್ನೂ ಬೆನ್ನಟ್ಟಿ ಹೋಗಿ ಆ ಬಡಪ್ರಾಣಿಗಳನ್ನು ಹಿಂತಿರುಗಿಸಿ ಹಿಡಿಯುವ ಅರಿಕೇಸರಿ ಅಲ್ಲಿ ಓಡಾಡುವ ಜೊತೆಗಾರರೊಡನೆ ಸೊಗಸಾಗಿ ಕಂಡನು. ೧೧. ದೈವಬಲವೂ ಸೊಗಸಿಕೆಯೂ ಮುಂದಿನ ಕಾಲದಲ್ಲಿ ಅವರಿಗುಂಟಾಗಬಹುದಾದ ಸಾಮರ್ಥ್ಯವೂ ಬಾಲಕಾಲದಲ್ಲಿಯೇ ಸೂಚಿತವಾಗಿ ಪ್ರಕಾಶಿತವಾಗಿರುವ ಬಾಲಕ್ರೀಡೆಯು ತಾಯಿಯನ್ನೂ ತಂದೆಯನ್ನೂ ತಮ್ಮ ಭುಜವನ್ನು ತಾವೇ ನೋಡಿಕೊಳ್ಳುವ ಹಾಗೆ ಮಾಡಿತು (ಅಂದರೆ ತಾವೇ ಅದೃಷ್ಟಶಾಲಿಗಳೆಂದು ತಮ್ಮ ಭುಜವನ್ನು ತಾವೇ ನೋಡಿ ಸಂತೋಷಪಡುವ ಹಾಗೆ ಮಾಡಿತು).

ವ|| ಹಾಗೆ ಆ ಮಕ್ಕಳು ತಮ್ಮ ತಾಯಿತಂದೆಯರ ಮನಸ್ಸನ್ನು ಸೂರೆಗೊಳ್ಳುವಂತೆಯೂ ಶತ್ರುಜನರ ಮನಸ್ಸನ್ನು (ಪ್ರಾಣಾಪಹರಣ ಮಾಡುವಂತೆ) ಆಕ್ರಮಿಸುತ್ತಿರುವಂತೆಯೂ ಬಳೆದರು. ೧೨. ಅರಳಿದ ಅದಿರ್ಮುತ್ತೆಯ ಹೂವು, ಹೊಸದಾಗಿ ಬಿಟ್ಟಿರುವ ಮಲ್ಲಿಗೆಯ ಹೂವು, ಸುವಾಸನೆಯನ್ನು ಒತ್ತಿ ಹೊರಡಿಸುತ್ತಿರುವ ದಕ್ಷಿಣದ ಗಾಳಿ, ಇದನ್ನು ಗೆಲ್ಲಲು ಯೋಚಿಸುತ್ತಿರುವ ದುಂಬಿ, ಕೊರಳ ಶಬ್ದದಿಂದ ಕುಕಿಲ್ ಎಂಬ ಧ್ವನಿಯನ್ನು ಹೊರಡಿಸುತ್ತಿರುವ ಕೋಗಿಲೆ, ಹೂವಿನಿಂದ ಕೂಡಿ ನಯವಾಗಿರುವ ಮಾವಿನ ಮರ, ಒಂದೇ ಸಲವಲ್ಲದೆ ಬಾರಿಬಾರಿಗೂ ಹೆಚ್ಚುತ್ತಿರುವ ಉಯ್ಯಾಲೆಯ ಹೊಸದಾದ ಇವು ವಸಂತಋತುವಿನ ಪ್ರವೇಶದಲ್ಲಿ ಏನು ಸೊಗಸಾಗಿ ಕಂಡವೋ !

ವ|| ಆಗ ಆ ವಸಂತರಾಜನ ಬರವಿಗಾಗಿ ಬಾವುಟಗಳನ್ನು ಕಟ್ಟಿದಂತೆ ಕೋಮಲವಾಗಿ ಬೆಳೆದು ಅಲುಗಾಡುವ ಅಶೋಕವೃಕ್ಷಗಳೂ, ಆತನ ಬರವಿಗಾಗಿ ತೋರಣ ಕಟ್ಟಿದಂತೆ ಹಣ್ಣು ಕಾಯಿಗಳನ್ನು ಬಿಟ್ಟಿರುವ ಮಾವಿನ ಮರಗಳನ್ನು ಏರಿ ಅಡ್ಡಲಾಗಿ ಎಳೆಕೊಂಬೆಗಳನ್ನು ಹಿಡಿದು ಮರದಿಂದ ಮರಕ್ಕೆ ಕುಡಿಯನ್ನು ಚಾಚುವ ಮೊಲ್ಲೆಯ ಬಳ್ಳಿಗಳೂ ಆತನ ಬರುವಿಕೆಗೆ ಸಂಪೂರ್ಣ ಸುಂದರವಾಗಿ ಕಾಣುವುದಕ್ಕಾಗಿ ಅಲಂಕಾರವನ್ನು ಮಾಡಿಕೊಳ್ಳುವ ಪ್ರೇಯಸಿಯಂತೆ ಹೂವಿನ ದಪ್ಪ ಮೊಗ್ಗಿನ ಗುಂಪುಗಳಿಂದ ಕೂಡಿ ದಟ್ಟವಾಗಿರುವ ಕಲ್ಪಲತೆಗಳೂ ಆತನ ಬರವಿಗೆ ಮಂಗಳವಾದ್ಯವನ್ನು ಬಾಜಿಸುವಂತೆ ಭೋರ್ಗರೆದು ಶಬ್ದಮಾಡುವ ದುಂಬಿಗಳೂ ಆತನ ಬರವಿಗೆ ರಂಗೋಲೆಯನ್ನಿಕ್ಕಿದಂತೆ ಮರಳಿನ ಪ್ರದೇಶದಲ್ಲಿ ಉದುರಿದ್ದ ಕಳಿತಹೂವುಗಳೂ ಆತನ ಬರುವಿಕೆಗೆ ವರಲಕ್ಷ್ಮಿಯು ಸಂತೋಷಪಟ್ಟು ಸಂಪೂರ್ಣವಾಗಿ ಅಲಂಕಾರ ಮಾಡಿದಂತೆ ನಿರಿಗೆನಿರಿಗೆಯಾಗಿ ಸೊಗಯಿಸುವ ಸಿಹಿಮಾವಿನ ಸಾಲಾಗಿರುವ ಗೊಂಚಲುಗಳೂ ಆತನ ಮೇಲೆ ಪ್ರೀತಿಸಿ ನುಗ್ಗಲು

ಚಂ|| ಬಿರಯಿಯ ಮಿೞ್ತುವೆಂ ಮಿದಿದೊಡಲ್ಲದಣಂ ಮುಳಿಸಾಱದೆಂದು ಪ
ಲ್ಮೊರೆದಪನಿಲ್ಲಿ ಮನ್ಮಥನಿದಂ ಪುಗಲಿಂಗಡಿಮೆಂದು ಬೇಟಕಾ|
ಱರನಿರದೂಱ ಸಾಱ ಜಡಿವಂತೆಸೆಗುಂ ಸಹಕಾರ ಕೋಮಳಾಂ
ಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ ನಂದನಂಗಳೊಳ್|| ೧೩

ಚಂ|| ಕವಿವ ಮದಾಳಿಯಿಂ ಮಸುಳನಾಗಿ ಪಯೋಜರಜಂಗಳೊಳ್ ಕವಿ
ಲ್ಗವಿಲನುಮಾಗಿ ಬಂದ ಮಲಯಾನಿಲನೂದೆ ತೆರಳ್ವ ಚೂತ ಪ|
ಲ್ಲವದ ತೆರಳ್ಕೆ ತದ್ವನ ವಿಳಾಸಿನಿಯುಟ್ಟ ದುಕೂಲದೊಂದು ಪ
ಲ್ಲವದ ತೆರಳ್ಕೆಯಂತೆಸೆಯೆ ಕಣ್ಗೆಸೆದಿರ್ದುವು ನಂದನಾಳಿಗಳ್|| ೧೪

ಉ|| ಪೋಗದೆ ಪಾಡುತಿರ್ಪಳಿಯೆ ಬೃಂಹಿತಮಾಗಿರೆ ಚಂದ್ರಕಾಂತಿ ಕಾ
ಯ್ಪಾಗಿರೆ ಬೀಸುವೊಂದೆಲರೆ ಬೀಸುವುದಾಗಿರೆ ಕಾಯ್ಗಳಿಂದಮಿಂ|
ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ
ಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ|| ೧೫

ವ|| ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ ಕ್ರೀಡಾನುಶೀಲೆಯು ಮಪ್ಪುದಱಂ ವನಕ್ರೀಡಾನಿಮಿತ್ತದಿಂ ಪೋಗಿ-

ಚಂ|| ವನಕುಸುಮಂಗಳಂ ಬಗೆಗೆವಂದುವನೞಯೊಳಾಯ್ದು ಕೊಯ್ದು ಮೆ
ಲ್ಲನೆ ವಕುಳಾಳವಾಳ ತಳದೊಳ್ ಸುರಿದಂಬುಜಸೂತ್ರದಿಂದೆ ಮ|
ತ್ತನಿತಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇ
ೞ್ಪನಿತನೆ ಮಾಡಿ ತೊಟ್ಟು ಕರಮೊಪ್ಪಿದಳಾಕೆ ಬಸಂತ ಕಾಂತೆವೋಲ್|| ೧೬

ವ|| ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆ-

ರೋಮಾಂಚನವಾದಂತೆ ಹುಟ್ಟಿರುವ ಚಿಗುರು ಮತ್ತು ಕಿರುಗೊಂಬೆಗಳ ಮೊಳಕೆಗಳೂ ಆತನ ಶರೀರಸ್ಪರ್ಶದಿಂದ ಕಾಮರಸವು ಜಿನುಗುವಂತೆ ಸ್ರವಿಸುವ ಮರದ ಹಾಲಿನ ಸೋನೆಗಳೂ ಇವುಗಳಿಂದ ಆ ಆಶ್ರಮದ ನಂದನವನಗಳು ಜನಗಳು ಮನ್ಮಥನಿಗೆ ಸೇವೆಗೆಯ್ಯುವ ಹಾಗೆ ಮಾಡಿದುವು. ೧೪. ನಾನು ವಿರಹಿಗಳ ಶತ್ರುವಾಗಿದ್ದೇನೆ. ಅವರನ್ನು ತುಳಿದಲ್ಲದೆ ನನ್ನ ಕೋಪವು ಸ್ವಲ್ಪವೂ ಆರುವುದಿಲ್ಲ ಎಂದು ಇಲ್ಲಿ ಮನ್ಮಥನು ಹಲ್ಗಡಿದು ಕೂಗುತ್ತಿದ್ದಾನೆ. ಇಲ್ಲಿಗೆ ವಿರಹಿಗಳು ಪ್ರವೇಶಿಸಲು ಅವಕಾಶಕೊಡಬೇಡಿ ಎಂದು ಒಂದೇ ಸಮನಾಗಿ ಬಲಾತ್ಕಾರದಿಂದ ಕೂಗಿ ಹೇಳಿ ಹೆದರಿಸುವಂತೆ ಮಾವಿನ ಮೃದುವಾದ ಚಿಗುರುಗಳನ್ನು ತೃಪ್ತಿಯಾಗುವಷ್ಟು ತಿಂದು ಕೊಬ್ಬಿ ಬೆಳೆದಿರುವ ಕೋಗಿಲೆಗಳ ಕೊರಳನಾದವು ಆ ತೋಟಗಳಲ್ಲಿ ಪ್ರಕಾಶಿಸುತ್ತದೆ. ೧೪. ಮುತ್ತಿಕೊಳ್ಳುತ್ತಿರುವ ಸೊಕ್ಕಿದ ದುಂಬಿಗಳಿಂದ ಮಾಸಿದವನಾಗಿಯೂ ತಾವರೆಯ ಪರಾಗಗಳಿಂದ ಮಾಸಲುಗೆಂಪುಬಣ್ಣದವನಾಗಿಯೂ ತಲೆದೋರಿದ ಮಲಯಮಾರುತನು ಬೀಸಿದುದರಿಂದ ಅಳ್ಳಾಡುವ ಮಾವಿನಮರದ ಚಿಗುರುಗಳ ಅಲುಗಾಟವು ಆ ವನಲಕ್ಷ್ಮಿಯು ಉಟ್ಟ ರೇಷ್ಮೆಯ ಸೀರೆಯ ಸೆರಗಿನ ಅಲುಗಾಟದಂತೆ ಪ್ರಕಾಶಿಸಲು ಆ ತೋಟದ ಸಾಲುಗಳು ಕಣ್ಣಿಗೆ ಮನೋಹರವಾಗಿದ್ದುವು. ೧೫. ಆ ವನವನ್ನು ಬಿಟ್ಟು ಹೋಗದೆ ಅಲ್ಲಿಯೇ ಹಾರಾಡುತ್ತಿರುವ ದುಂಬಿಯೇ ಆನೆಯ ಘೀಂಕಾರವಾಗಿರಲು, ಬೆಳದಿಂಗಳೇ ಅದರ ಕೋಪವಾಗಿರಲು, ಬೀಸುವ ಗಾಳಿಯೇ ಬೀಸಣಿಗೆಯಾಗಿರಲು, ಕಾಯಿಗಳಿಂದ ಸೊಗಸಾಗಿ ಸೋರುತ್ತಿರುವ ಸೋನೆಯೇ ಮದೋದಕವಾಗಿರಲು ಮಾವಿನ ಮರದಲ್ಲಿ ಹುಟ್ಟಿಬಂದ ಕೊಂಬೆಗಳೇ ಅದರ ಕೊಂಬಾಗಿರಲು ವಸಂತಕಾಲವೆಂಬ ಆನೆಯು ವಿರಹಿಗಳನ್ನು ತನ್ನ ಕೋಡಿನಿಂದ ತಿವಿದು ಹರಿಯಿತು, ಓಡಿತು. ವ|| ಹಾಗೆ ಬಂದ ವಸಂತಋತುವಿನಲ್ಲಿ ಮಾದ್ರಿಯು ತಾನು ಅಹಂಕಾರದಿಂದ ಕೆಟ್ಟವಳೂ ಆಟವಾಡುವುದರಲ್ಲಿ ಆಸಕ್ತಳಾದವಳೂ ಆಗಿದ್ದುದರಿಂದ ಕಾಡಿನಲ್ಲಿ ಆಟವಾಡುವುದಕ್ಕಾಗಿ ಹೋಗಿ ೧೬. ತನ್ನ ಮನಸ್ಸಿಗೆ ಒಪ್ಪುವಂತಹ ಕಾಡಿನ ಹೂವುಗಳನ್ನು ಪ್ರೀತಿಯಿಂದ ಆರಿಸಿ ಕೊಯ್ದು ಮೃದುವಾಗಿ ಬಕುಳವೃಕ್ಷದ ಪಾತಿಯಪ್ರದೇಶದಲ್ಲಿ ಸುರಿದು ತಾವರೆಯ ಸೂತ್ರದಿಂದಲೂ ಮತ್ತಿತರ ಹೂಗಳಿಂದಲೂ ರಚಿಸಿದ ಮೊಗ್ಗಿನ ಸರಿಗೆ, ತೋಳಬಳೆ, ಕೈಬಳೆ, ಹಾರ ಮೊದಲಾದವುಗಳನ್ನು ತೃಪ್ತಿಯಾಗುವಷ್ಟು ಧರಿಸಿ ಅಲಂಕಾರಮಾಡಿಕೊಂಡು ಮಾದ್ರಿಯು ವಸಂತಲಕ್ಷ್ಮಿಯಂತೆ ವಿಶೇಷವಾಗಿ

ಚಂ|| ಮಿಳಿರ್ವ ಕುರುಳ್ಗಳೊಳ್ ತೊಡರ್ದು ದೇಸಿಯನಾವಗವಿವ ಚೆನ್ನ ಪೂ
ಗಳನವನೊಯ್ಯನೋಸರಿಸುತುಂ ವದನಾಬ್ಜದ ಕಂಪನಾಳ್ದುಣಲ್|
ಬಳಸುವ ತುಂಬಿಯಂ ಪಿಡಿದ ನೆಯ್ದಿಲೊಳೊಯ್ಯನೆ ಸೋವುತುಂ ಬೆಡಂ
ಗೊಳಕೊಳೆ ಸೊರ್ಕಿದಂಗಜ ಮತಂಗಜದಂತಿರೆ ಬರ್ಪ ಮಾದ್ರಿಯಂ|| ೧೭

ವ|| ತಾಪಸಾಶ್ರಮದಿಂ ಪೊಱಮಟ್ಟಂತೆ ಬನಮಂ ತೊೞಲ್ವ ಪಾಂಡುರಾಜಂ ಕಂಡು-

ಚಂ|| ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ
ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ|
ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ
ಬಗೆಯದೆ ಮಿೞ್ತುದೇವತೆಯನೞ್ಕಱಳುರ್ಕೆಯಿನಪ್ಪುವಂತೆವೋಲ್|| ೧೮

ವ|| ಅಂತಪ್ಪುವುದುಂ ವಿಷಮ ವಿಷವಲ್ಲಿಯನಪ್ಪಿದಂತೆ ತಳ್ತ ನಲ್ಲಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗೆ-

ಚಂ|| ಬಿಗಿದಮರ್ದಿರ್ದ ತೋಳ್ ಸಡಿಲೆ ಜೋಲೆ ಮೊಗಂ ಮೊಗದಿಂದಮೊಯ್ಯಗೊ
ಯ್ಯಗೆ ನಗೆಗಣ್ಗಳಾಲಿ ಮಗುೞ್ದಂತಿರೆ ಮುಚ್ಚಿರೆ ಸುಯ್ಯಡಂಗೆ ಮೆ|
ಲ್ಲಗೆ ಮಱಸೊಂದಿದಂದದೊಳೆ ಜೋಲ್ದ ನಿಜೇಶನನಾ ಲತಾಂಗಿ ತೊ
ಟ್ಟಗೆ ಕೊಳೆ ನೋಡಿ ಕೆಟ್ಟೆನಿನಿಯಂ ಮಱಸೊಂದಿದನೋ ಬೞಲ್ದನೋ|| ೧೯

ವ|| ಎಂದು ಪಱಪಟ್ಟ ಸುಯ್ಯುಮಂ ಕೋಡುವ ಮೆಯ್ಯುಮಂ ಕಂಡು ಪರಲೋಕ ಪ್ರಾಪ್ತನಾದುದನಱತು-

ಕಂ|| ತಾಪಸನ ಶಾಪಮೆಂಬುದು
ಪಾಪದ ರೂಪಱತುಮಱಯದಂತೇಕೆ ಮನಂ|
ಗಾಪೞದು ಬಂದು ಮುಟ್ಟಿದೆ
ಯೋಪನೆ ನೀನೆನ್ನ ಪಾಪಕರ್ಮಿಯ ಮೆಯ್ಯಂ|| ೨೦

ನೀನ್ನಿನ್ನ ಸಾವನದನೆನ
ಸುನ್ನೆನೆಯದೆ ನೆರೆವೆನೆಂಬ ಬಗೆಯೊಳ್ ಬಂದೈ|
ನಿನ್ನೊಡನೆ ವಂದು ದಿವದೊಳ್
ನಿನ್ನ ಮನೋರಥಮನರಸ ನೆಱಪದೆ ಮಾಣೆಂ|| ೨೧

ಒಪ್ಪಿದಳು. ವ|| ಹಾಗೆ ಧರಿಸಿದ ಪುಷ್ಪಾಭರಣವೇ ಮನ್ಮಥನು ಪ್ರಯೋಗಿಸಿದ ಪುಷ್ಪಬಾಣಕ್ಕೆ ಸಮಾನವಾಗಿರಲು ೧೭. ಅಲುಗಾಡುತ್ತಿರುವ ಮುಂಗುರುಳುಗಳಲ್ಲಿ ಸಿಕ್ಕಿಕೊಂಡು ವಿಶೇಷ ಸೌಂದರ್ಯವನ್ನುಂಟುಮಾಡುತ್ತಿರುವ ಸೊಗಸಾದ ಹೂವುಗಳನ್ನು ನಿಧಾನವಾಗಿ ಒಂದು ಪಕ್ಕಕ್ಕೆ ಓಸರಿಸುತ್ತ ಮುಖಕಮಲದ ಸುಗಂಧವನ್ನು ಪಡೆದು ಆಸ್ವಾದಿಸುವುದಕ್ಕೋಸ್ಕರ ಮುತ್ತಿಕೊಳ್ಳುತ್ತಿರುವ ದುಂಬಿಯನ್ನು ಕಯ್ಯಲ್ಲಿ ಹಿಡಿದಿದ್ದ ನೆಯ್ದಿಲಪುಷ್ಪದಿಂದ ಮೆಲ್ಲಗೆ ಓಡಿಸುತ್ತ ಬೆಡಂಗಿನಿಂದ ಕೂಡಿ ಸೊಕ್ಕಿದ ಮನ್ಮಥನ ಮದ್ದಾನೆಯಂತೆ ಬರುತ್ತಿದ್ದ ಮಾದ್ರಿಯನ್ನು ವ|| ತಾಪಸಾಶ್ರಮದಿಂದ ಹೊರಗೆಹೊರಟು ಹಾಗೆಯೇ ಕಾಡಿನಲ್ಲಿ ಅಡ್ಡಾಡುತ್ತಿದ್ದ ಪಾಂಡುರಾಜನು ನೋಡಿ ೧೮. ಅವಳು ಧರಿಸಿದ ಪುಷ್ಪಾಲಂಕಾರವು ತನ್ನ ಮೃದುವಾದ ಹೃದಯದಲ್ಲಿ ಸೊಗಯಿಸಲು ಅವಳ ಸೌಂದರ್ಯವು ಅವನ ದೃಷ್ಟಿಯಲ್ಲಿ ಕಾಮರಸವುಕ್ಕುವಷ್ಟು ನಿಧಾನವಾಗಿ ಆಡುತ್ತಿರಲು ಅವಳನ್ನು ತೃಪ್ತಿಯಾಗುವಷ್ಟು ನೋಡಿ ಥಟಕ್ಕನೆ ಹಿಡಿಯಲು ಮೇಲೆ ನುಗ್ಗಿ ಅವಳನ್ನು ರಾಜನಾದ ಪಾಂಡುವು ತನಗಿದ್ದ ಶಾಪವನ್ನು ಯೋಚಿಸದೆ ಪ್ರೀತ್ಯಾತಿಶಯದಿಂದ ಮೃತ್ಯುದೇವತೆಯನ್ನಪ್ಪುವಂತೆ ಆಲಿಂಗನ ಮಾಡಿಕೊಂಡನು. ವ|| ಹಾಗೆ ವಿಷದ ಬಳ್ಳಿಯನ್ನು ಆಲಿಂಗನ ಮಾಡುವಂತೆ ಅವಳನ್ನು ಅಪ್ಪಿಕೊಳ್ಳಲು ಆ ಪ್ರಿಯಳು ಆಲಿಂಗಿಸಿದ ತಾವರೆಯದಂಟಿನಂತೆ ಮೃದುವೂ ಕೋಮಳವೂ ಆದ ಅವಳ ಬಾಹುಪಾಶವೇ ಯಮಪಾಶವಾಗಲು- ೧೯. ಬಿಗಿಯಾಗಿ ಅಪ್ಪಿಕೊಂಡಿದ್ದ ತೋಳು ಸಡಿಲವಾಗಲು ಮುಖವು ಜೋತುಬೀಳಲು ಮುಖದಲ್ಲಿದ್ದ ನಗೆಗಣ್ಗಳ ಪಾಪೆಗಳು ಕಾಂತಿಹೀನವಾಗಿ ಮುಚ್ಚಿರಲು ಉಸಿರಾಟವು ನಿಂತುಹೋಗಲು ನಿಧಾನವಾಗಿ ಪ್ರಜ್ಞೆತಪ್ಪಿದವನಂತೆ ಜೋತುಬಿದ್ದ ತನ್ನ ಪತಿಯನ್ನು ಆ ಮಾದ್ರಿಯು ದಿಟ್ಟಿಸಿನೋಡಿ, ಕೆಟ್ಟೆನು; ಪತಿಯು ಮೂರ್ಛೆ ಹೋದನೋ ಇಲ್ಲವೇ ಬಳಲಿದ್ದಾನೋ ವ|| ಎಂದು (ಹರಿದುಹೋದ) ನಿಂತುಹೋದ ಉಸಿರನ್ನೂ ತಣ್ಣಗಾದ ಮೆಯ್ಯನ್ನೂ ನೋಡಿ ಪತಿ ಸತ್ತನೆಂದು ತಿಳಿದಳು. ೨೦. ಪ್ರಿಯನಾದ ಪಾಂಡುರಾಜನೇ ಋಷಿಯ ಶಾಪವು ಪಾಪದ ರೂಪವನ್ನೂ ತಾಳಿರುವುದು; ತಿಳಿದೂ ತಿಳಿದೂ ತಿಳಿಯದೆ ನಿನ್ನ ಮನಸ್ಸಿನ ಸಂಯಮವನ್ನು ನಾಶಪಡಿಸಿಕೊಂಡು ಬಂದು ಪಾಪಿಷ್ಠಳಾದ ನನ್ನ ಶರೀರವನ್ನು ಏಕೆ ಮುಟ್ಟಿದೆ? ೨೧. ನೀನು ನಿನ್ನ ಸಾವನ್ನು ಸ್ವಲ್ಪವೂ ಯೋಚಿಸದೆ ನಿನ್ನೊಡನೆ ಕೂಡುತ್ತೇನೆ ಎಂದು ಬಂದಿದ್ದೀಯೇ. (ಹಾಗೆಯೇ) ನಾನೂ ನಿನ್ನೊಡನೆ

ಉನ್ನತ ಧವಳಚ್ಛತ್ರ
ಚ್ಛನ್ನ ವಿಯತ್ತಳನನಿಂದುಕುಳತಿಳಕನನಿಂ|
ತನ್ನೆಯದಿಂದೀ ಪೞುವಿನೊ
ಳೆನ್ನರಸನನಿಂತು ಬಿದಿಯೆ ತಂದಿಕ್ಕುವುದೇ|| ೨೨

ವ|| ಎಂದು ವನದೇವತೆಗಳ್ಗೆಲ್ಲಂ ಕರುಣಮಾಗೆ ಪಳಯಿಸುವ ಮಾದ್ರಿಯ ಸರಮಂ ಕುಂತಿ ಕೇಳ್ದು ಭೋಂಕನೆರ್ದೆದೆದು-

ಕಂ|| ಆ ದೆಸೆಯೊಳ್ ಭೂಭುಜನೋ
ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮಂ|
ತಾ ದೆಸೆಯೊಳ್ ಭೂಪತಿಗೇ
ನಾದುದೊ ಪೇೞ್ ಬಿದಿಯೆ ಕೆಟ್ಟೆನೞದೆನೆನುತ್ತುಂ|| ೨೩

ಬೞಯನೆ ಮಕ್ಕಳ್ ಭೋರ್ಗರೆ
ದೞುತುಂ ಪೆಱ ಪೆಱಗನಂತೆ ಪರಿತರೆ ಮುಡಿ ಬಿ|
ಟ್ಟೆೞಲೆ ನಡುನಡುಗೆ ಕಣ್ಣೀರ್
ಗೞಗೞನೊರ್ಮೊದಲೆ ಸುರಿಯೆ ಪರಿತಂದಾಗಳ್|| ೨೪

ವ|| ಅಂತು ತನ್ನ ನಲ್ಲನ ಕಳೇವರಮಂ ತೞ್ಕೈಸಿಕೊಂಡು ತನ್ನ ಸಾವಂ ಪರಿಚ್ಛೇದಿಸಿ ಪಲ್ಲಂ ಸುರಿಯುತ್ತುಮಿರ್ದ ಮಾದ್ರಿಯಂ ಕಂಡು ಕುಂತಿ ನೆಲದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಪಳಯಿಸಿ-

ಕಂ|| ಅಡವಿಯೊಳೆನ್ನುಮನೆನ್ನೀ
ನಡಪಿದ ಶಿಶುಗಳುಮನಿಸಿರಿಸಿ ನೀಂ ಪೇೞದೆ ಪೋ|
ದೊಡಮೇನೋ ನಿನ್ನ ಬೞಯನೆ
ನಡೆತರ್ಪೆಂ ನಿನ್ನರಸ ಬಿಸುಟೆಂತಿರ್ಪೆಂ|| ೨೫

ವ|| ಎಂದು ನೀನೀ ಕೂಸುಗಳಂ ಕೈಕೊಂಡು ನಡಪು ನಲ್ಲನನೆನಗೊಪ್ಪಿಸಾನಾತನಾದುದನಪ್ಪೆನೆನೆ ಮಾದ್ರಿಯಿಂತೆಂದಳ್-

ಕಂ|| ಎನಗಿಂದಿನೊಂದು ಸೂೞುಮ
ನಿನಿಯಂ ದಯೆಗೆಯ್ದನೆನ್ನ ಸೂೞಂ ನಿನಗಾ|
ನೆನಿತಾದೊಡವಿವೆನೆ ಮ
ತ್ತನಯರ್ ಕೆಯ್ಯೆಡೆ ಪಲುಂಬದಿರ್ ಪೆಱಪೆಱವಂ|| ೨೬

ಬಂದು ಸ್ವರ್ಗದಲ್ಲಿ ನಿನ್ನಿಷ್ಟಾರ್ಥವನ್ನು ಸಲ್ಲಿಸದೆ ಬಿಡುವುದಿಲ್ಲ ೨೨. ಅಯ್ಯೋ ವಿಯೇ, ಎತ್ತರವಾದ (ರಾಜಸೂಚಕವಾದ) ತನ್ನ ಶ್ವೇತಚ್ಛತ್ರದಿಂದ ಆಕಾಶಪ್ರದೇಶವನ್ನೆಲ್ಲ ಮುಚ್ಚಿದವನೂ ಚಂದ್ರವಂಶಶ್ರೇಷ್ಠನಾದವನೂ ಆದ ಪತಿಯನ್ನು ಹೀಗೆ ಅನ್ಯಾಯದಿಂದ ಕಾಡಿನಲ್ಲಿ ತಂದೆಸೆಯುವುದೇ? ವ|| ಎಂದು ವನದೇವತೆಗಳಿಗೆಲ್ಲ ಮರುಕ ಹುಟ್ಟುವ ಹಾಗೆ ಅಳುತ್ತಿದ್ದ ಮಾದ್ರಿಯ ಆ ಧ್ವನಿಯನ್ನು ಕುಂತಿ ಕೇಳಿ ಥಟ್ಟನೆ ಎದೆಬಿರಿದು- ೨೩. ಯಾವ ದಿಕ್ಕಿನಲ್ಲಿ ರಾಜನು ಹೋದನು ಆ ದಿಕ್ಕಿನಿಂದಲೇ ಮಾದ್ರಿಯ ಕುರಣಾಮಯವಾದ ಧ್ವನಿಯೂ (ಕೇಳಿಬರುತ್ತಿದೆ) ಅಯ್ಯೋ ದೈವವೇ ನನ್ನ ರಾಜನಿಗೆ ಏನಾಗಿದೆಯೋ ಹೇಳು ಸತ್ತೆ, ಕೆಟ್ಟೆ, ಎಂದು ಚೀರಿದಳು. ೨೪. ಮಕ್ಕಳು ವಿಶೇಷ ಶಬ್ದಮಾಡಿಕೊಂಡು ಅಳುತ್ತಾ ಬೆನ್ನಹಿಂದೆಯೇ ಬರುತ್ತಿರಲು ತಲೆಯ ತುರುಬು ಬಿಚ್ಚಿ ಕೆಳಗೆ ಜೋಲುತ್ತಿರಲು ಸೊಂಟವು ನಡುಗುತ್ತಿರಲು ಕಣ್ಣೀರು ಗಳಗಳನೆ ಧಾರಾಕಾರವಾಗಿ ಹರಿಯುತ್ತಿರಲು ಕುಂತಿಯು ಓಡಿಬಂದಳು. ವ|| ತನ್ನ ಪ್ರಿಯನ ಶರೀರವನ್ನು ತಬ್ಬಿಕೊಂಡು ತನ್ನ ಸಾವನ್ನು ನಿಷ್ಕರ್ಷೆ ಮಾಡಿಕೊಂಡು ಹಲ್ಲನ್ನು ಕಿರಿಯುತ್ತಿದ್ದ (?) ಮಾದ್ರಿಯನ್ನು ಕಂಡು ಕುಂತಿಯು ನೆಲದಲ್ಲಿ ಬಿದ್ದು ಹೊರಳಾಡಿ ವಿಶೇಷವಾಗಿ ಅತ್ತಳು. ೨೫. ಈ ಕಾಡಿನಲ್ಲಿ ನನ್ನನ್ನೂ ನಾನು ಸಾಕಿದ ಈ ಮಕ್ಕಳನ್ನೂ ಬಿಟ್ಟು ನೀನು ಹೋದರೆ ತಾನೆ ಏನು? ನಾನು ನಿನ್ನ ಹಿಂದೆಯೇ ಬರುತ್ತೇನೆ. ರಾಜನೇ ನಿನ್ನನ್ನು ಬಿಟ್ಟು ನಾನು ಹೇಗಿರಬಲ್ಲೆ? ಎಂದು ಮಾದ್ರಿಯನ್ನು ಕುರಿತು ನೀನು ಈ ಕೂಸುಗಳನ್ನು ಸ್ವೀಕರಿಸಿ ಸಲಹು; ಪ್ರಿಯನನ್ನು ನನಗೊಪ್ಪಿಸು, ಅವನಾದುದನ್ನು ನಾನು ಆಗುತ್ತೇನೆ ಎನ್ನಲು ಮಾದ್ರಿ ಹೀಗೆಂದಳು- ೨೬. ನನ್ನ ಪತಿಯು ಇಂದಿನ ಸರದಿಯನ್ನು ನನಗೆ ದಯಮಾಡಿ ಕೊಟ್ಟಿದ್ದಾನೆ. ನನ್ನ ಈ ಸರದಿಯನ್ನು ನಿನಗೆ ಏನಾದರೂ ಕೊಡುತ್ತೇನೆಯೇ ! ನನ್ನ ಮಕ್ಕಳು

ವ|| ಎಂದು ತಪೋವನದ ಮುನಿಜನಮುಂ ವನದೇವತಾಜನಮುಂ ತನ್ನಣ್ಮಂ ಪೊಗೞೆ ಮಾದ್ರಿ ಪಾಂಡುರಾಜನೊಡನೆ ದಾಹೋತ್ತರದಂತೆ (?) ಕಿರ್ಚಿಂಗೆ ಕುಲದೊಳಂ ಚಲದೊಳಮಾವ ಕಂದುಂ ಕುಂದುಮಿಲ್ಲದೆ ತನ್ನೊರೆಗಂ ದೊರೆಗಮಾರುಮಿಲ್ಲೆನಿಸಿದಾಗಳ್ ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರಾ ಕಾಂತೆಯನಿಂತೆಂದು ಸಂತೈಸಿದರ್-

ಚಂ|| ಕೞದವರ್ಗೞ್ವುದೞ್ತೊಡವರೇೞ್ವೊಡಮಂತವರಿಂ ಬೞಕ್ಕೆ ತಾ
ಮುೞವೊಡಮೇೞರಂತವರಣಂ ತಮಗಂ ಬರ್ದುಕಿಲ್ಲ ಧರ್ಮಮಂ|
ಗೞಯಿಸಿಕೊಳ್ವುದೊಂದೆ ಚದುರಿಂತುಟು ಸಂಸೃತಿ ಧರ್ಮಮೇಕೆ ಬಾ
ಯೞವುದಿದೇಕೆ ಚಿಂತಿಸುವುದೇಕೆ ಪಲುಂಬುವುದೇಕೆ ನೋವುದೋ|| ೨೭

ವ|| ಅಂತುಮಲ್ಲದೆ-

ಕಂ|| ಬಿಡದೞಲ್ವ ಬಂಧುಜನದೊ
ೞ್ಕುಡಿಯದ ಕಣ್ಣೀರ ಪೂರಮಾ ಪ್ರೇತಮನೋ|
ಗಡಿಸದೆ ಸುಡುವುದು ಗಡಮಿ
ನ್ನುಡುಗುವುದೀ ಶೋಕಮಂ ಸರೋಜದಳಾಕ್ಷೀ|| ೨೮

ವ|| ನೀನಿಂತು ಶೋಕಾಕ್ರಾಂತೆಯಾಗಿ ಸಂಸಾರಸ್ಥಿತಿಯನಱಯದಜ್ಞಾನಿಗಳಂತೆ ವಿಪ್ರಳಾ ಪಂಗೆಯ್ದೆಯಪ್ಪೊಡೀ ಕೂಸುಗಳ್ ಮನಮಿಕ್ಕಿಯುಮೆರ್ದೆಯಿಕ್ಕಿಯುಂ ಕಿಡುವರೆಂದನೇಕೋಪ ಶಾಂತವಚನಂಗಳಿಂದಮಾಕೆಯುಬ್ಬೆಗಮನಾ ನುಡಿದುಮಲ್ಲಿಯ ಮುನಿಜನ ಮೆಲ್ಲಮಾ ಕೂಸುಗಳುಮಂ ಕುಂತಿಯುಮಂ ಮುಂದಿಟ್ಟೊಡಗೊಂಡು ನಾಗಪುರಕ್ಕೆ ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಮಂಬಾಲೆಗಂ ಪಾಂಡುರಾಜನ ವೃತ್ತಾಂತಮನಱಪಿದೊಡಾಗಳ್-

ಕಂ|| ತುಱುಗಿದ ಹಿಮಬಿಂದುಗಳಿಂ
ದೆಱಗಿದ ನವ ವನಜವನದವೋಲ್ ಶೋಕದಿನಂ|
ದೊವ ನಯನೋದಬಿಂದುವಿ
ನೆಱಗಿದುದೊರ್ಮೊದಲೆ ಬಂಧುಮುಖ ವನಜವನಂ|| ೨೯

ವ|| ಆಗಳ್ ಪುತ್ರ ಸ್ನೇಹದಿಂದತಿ ಪ್ರಳಾಪಂಗೆಯ್ವಂಬಾಲೆಯುಮಂ ಬಂಧುಜನ ನಿರೀಕ್ಷಣದಿಂ ಶೋಕಂ ಮಱುಕಣಿಸೆ ಬಾಯೞದು ಪಳಯಿಸುವ ಕುಂತಿಯುಮಂ ಗಾಂಗೇಯ ಧೃತರಾಷ್ಟ್ರ ವಿದುರರ್ಕಳುಮಂ ಸತ್ಯವತೀದೇವಿಯುಮಂ ಸಂತೈಸಿ ಪಾಂಡುರಾಜಂಗೆ