ಹಿಬ್ಬಣಕ್ಕೆ ಹೋಗಲು ನಾನೊಬ್ಬವಳೇ ಕಾಣಿಸಿ
ಅತ್ತಿಗೆ ಮೇಲು ಅತ್ತಿಗೆ ಜಾವತ್ತಿಗೆ
ಸುತಿರೆ || ಹೆಬ್ಬಣಕ್ಕೆ ||

ಧನವು ಧಾನ್ಯ ನಿನ್ನದಲ್ಲ
ತನುವಿನಾಕೆ ಎನುಗು ಇಲ್ಲ
ಮನೆಯ ಗಂಡ ಮುನಿದ ಮೆಲನ್ನು
ಒಬ್ಬರಿಲ್ಲವತ್ತಿಗೆ || ಹಿಬ್ಬಣಕ್ಕೆ ||

ಗಂಡುನುಳ್ಳ ಗರತಿಯನು ಮುಂಡೆಯೆಂದ
ಕರೆವರಲ್ಲ ಮನೆಯಗಂಡ ಮುನಿಯದ
ಮೇಲಿನ್ನು ಒಬ್ಬರಿಲ್ಲ ಅತ್ತಿಗೆ || ಹಿಬ್ಬಣಕ್ಕೆ ||

ಕಾಮನೆಂಬೊ ವಲಸನ್ನು
ಸೀಮೆಯೆಂಬೊ ನದಿಯ ದಾಟಿ
ಹೇಮಗಿರಿಯ ಪೊತ್ತ ಮೇಲಿನ್ನು
ಒಬ್ಬರಿಲ್ಲವತ್ತಿಗೆ || ಹಿಬ್ಬಣಕ್ಕೆ ||

ಆರು ಚಕ್ರದ ನೆಲೆಯ ತಿಳಿದು
ಸೂರ‍್ಯ ಚಂದ್ರರ ದಾರಿ ಹಿಡಿದು
ಪೊತ್ತ ಮೇಲಿನು ಒಬ್ಬರಿಲ್ಲ
ಬ್ರಹ್ಮಗಿರಿಯ ಅತ್ತಿಗೆ ಹಿಬ್ಬಣಕ್ಕೆ ||