ಎಯ್ದಾಟಾ ಆಡೇ ಭೀಮಯ್ನಾ ಗೆದ್ದಾಳೇ
ಭೀಮಯ್ಯಾ ತಡೆವ ಕೊಡೆಕುಂಚಾ | ಸಯ್ವಾಗೇ
ರೂಪತ್ ಗೆದ್ದಾಳೇ  ಗಳಗ್ಯಲ್ಲೇ
ಮೂರಾಟಾ ಆಡೇ ಅರ್ಜಿಣ್ಣ ಗೆದ್ದಾಳೆ

ಅರ್ಜಿಣ್ಣಾ ತಡೆವಾ ಕೊಡೆಕುಂಚಾ | ಸಯ್ವಾಗೇ
ರೂಪತ್ ಗೆದ್ದಾಳೆ ಗಳಗ್ಯಲ್ಲೇ
ನಾಕಾಟಾ ಆಡೇ ಸಕಲಯ್ನ ಗೆದ್ದಾಳೇ

ಸಕಲಯ್ಯಾ ತಡೆವಾ ಕೊಡೆ ಕುಂಚಾ | ಸಯ್ವಾಗೇ
ರೂಪತ್‌ ಗೆದ್ದಾಳೆ ಗಳಗ್ಯಲ್ಲೇ
ಅಯ್ದಾಟಾ ಆಡೇ ಸಾದೇವ್ನ ಗೆದ್ದಾಳೆ.

ಸಾದೇವಾ ತಡೆವಾ ಕೊಡೆಕುಂಚಾ | ಸಯ್ವಾಗೇ
ರೂಪತೊ ಗೆದ್ದಳೇ ಗಳಗ್ಯಲ್ಲೇ

ಕಂಚಗಾರರ ಮನಿಯಾ ಕಂಚಿನ ಕರಡಗೀ
ಎಯ್ಡೋರ್ದ್‌ ಮುಚ್ಚಳವಾ ತೆಗೆದೋದೆ | ದ್ | ಆಡುವಂಗೇ
ತಂಗಾಳಿ ಸುಳಿಗಾಳಿ ಸುಳ್ದೇ ಬೀಸೇ | ಸು | ವಂಗೇ

ರೂಪತಿ ಮೇದಲಗೀ ಮರೂಚದೆ
ಎದೆಯಾಸೆಯಾ ಕಂಡೆ ಬದಿಯಾ ಬಾಮಾಕಂಡೇ

ಗುರುರಾಯಾಟಾವಾ ಮರೆತಾನ | ಗುರ್ರಾಯಾ
ಆಟ್ ಮುರ್ದೀ ಗೂಟೆ ಕುಳತಾನೆ
ಆಟ್‌ ಮುರ್ದೀ ಗೂಟೆ ಕುಳುವುದ್ನ | ರೂಪತಿ

ಹೊತ್ತ ಮೆಟ್ಹೋತ್ತ ಅಳಿದಾಳೇ
ಅದು ಏನು ಬಾವ್ನೋರೆ ಅಟ್‌ಮುರ್ದೀ ಗೋಟ್ ಕುಳ್ತ್ರಿ
ಹೊತ್ತು ಮಜ್ಜನವೇ ಗಳಿಯಾಲಿಲ್ಲ.

ಹೊತ್ತ ಮೀರ್ದ ಮನೆ ಹೆಂಗ್ಸ್ರ ಕುಯ್ಲಾಟ ಸಲ್ಲ
ಆಟಕೂ ತನಗೂ ತಕರೆ | ಅಂದ್ ಗುರ್ರಾಯ
ಆಟ್‌ಮುರ್ದೀ ಗೂಟೆ ಕುಳೀತಾನೇ | ಗುರ್ರಾಯ
ತನ್ನ ದುಸುವಯ್ನಾ ದೆನೀದೂರೇ

ಇಂದೂ ಕರದಮಲ್ಲಾ ಬಂದಾನೇ ದುಸುವಯ್ಯಾ
ನಿಂದನೇ ಗುರ್ರಾಯ್ನಾ ಒಡನಲ್ಲೇ |ಲ್| ನಿಂದೀ ಕಂಡಿ
ಏನು ಕಾರಣಲೆ ಕರದೀಯೋ

ಕರದಂ ಕಾರ್ಯವಿಲ್ಲ ಕಿರಿದುಂ ಬೆಸರ ಸಯ್ಯೇ
ಪಾಂಡೋರ್ ಸೆರ್ಮನಿಯೂ ಇಳ್ಗೇಬಾರೋ | ಅಂಬುದ್ನು ದುಸ್ವಯ್ಯಾ
ಪಂಡೋರಿದ್ದಲ್ಲೆ ಮೆಡದಾನೆ | ದುಸುವಯ್ಯ
ಪಾಂಡೋರಾ ಸೆರ್ಮನಿಯಾ ಇಳೋಗಾನೆ

ಪಾಂಡೋರ್ ಸೆರ್ಮನಿಯಾ ಇಳುಗ್ವದ್ನು ಪಾಂಡೋರು
ಮೂವದ ಸರ್ನ ತಟ್ಟೇ ಇಳೀದಾರೆ | ಪಾಂಡೋರು
ತಮ್ಮುಂಬು ಬಲ್ಲೆಲ್ಲ ತಡದಾರೆ | ಪಾಂಡೋರು

ರಾಜಂಗಳ್ಳೆ ಬಂದೇ ನಿಲೋವಾರೆ
ರಾಜಂಗಳ್ಳೆ ನಿಲುವದ್ನು ಗುರ್ರಾಯ
ಮಾಳೂಗೀ ಒಳಗೇ ನೆಡದಾನೇ

ಅಯೊಳ್ಳ ಹೆಣ್ಣಡಕೆ ಸೋಯಿಸಿದ ಬೆಳಿಎಲೆ
ಹಾಲಿನಲಿ ಬೆಂದಾ ತೆನೆಸುಣ್ಣಾ | ತಡಕಂಡಿ
ಮಾಳಗ್ಗಿಂದೆರಗೇ ಬರೋವಾನೆ | ಗುರ್ರಾಯ
ಧರ್ಮರೀಗೊಂದೀಳ್ಯ ಕೊಡೋವಾನೇ

ಒಂದೇ ತಾಯಿಗೆ ನೀವಯ್ವರು ಮಗದೀರೆ
ನೀವಯ್ವರೊಂದೀಳ್ಯ ಮೆಲಲಂದೇ | ಗುರ್ರಾಯಾ
ದರ್ಮರ ಕಯ್ಲೀಳ್ಯ ಕೊಡೋವಾನೇ

ದರ್ಮರ ಕಯ್ಲೀಳ್ಯ ಕೊಡುವುದ್ನು ಧರ್ಮರು
ತಾವಯ್ವರೊಂದೀಳ್ಯ ಮೆಲೋವಾರೇ
ತಾವಯ್ವರೊಂದೀಳ್ಯಾ ಕೊಡೋವುದ್ನು ಗುರ್ರಾಯ
ರೂಪತಿಗೊಂದೀಳ್ಯಾ ಕೊಡೋವಾನೇ

ಗುರ್ರಾಯ ಕೊಟ್ಟೀಳ್ಯಾ ಮುಟ್ಟಿಲೇ ಮುರದಿಟ್ಟಾಳೆ
ಕರ್ಣನ ಕುಯ್ನೀಳ್ಯಾ ಮೇಲೊವಾಳೇ
ಕರ್ಣನ ಕಯ್ನೀಳ್ಯಾ ಮೆಲುವುದ್ನು ಗುರ್ರಾಯ
ಆಗೊಂದು ಮಾತಾ ನುಡೀದಾನೆ

“ಅಂಬರ ಕರಣ ಕಡುಚಲುವ ಕೋಟ್ಟೀಳ್ಯ
ಇಂಬಾಗೇ ನಾರಿ ಮೇಲೋವಾಳೆ |ಳು| ಅಂದೇಳೇ
ತುಂಬದ ಸಬಿಯಲ್ಲೇ ನುಡಿದಾನೆ

ತುಂಬ್ದ ಸಭಿಯಲ್ಲೆ ನುಡುವದ್ನು ಕರಣನು
ಆಗೊಂದು ಮಾತಾ ನುಡೀದಾನೆ

“ಅಂಬೀರ್ ಅಂಬೀರ್ ಅಂದಿ ಕುಂದೊಂದಾ ನುಡಿಬೇಡಾ
ಕುಂದೂವೆ ನಿನ್ನಾ ಮೊದಲೆಲ್ಲಾ | ಅಂದೇ
ಕರ್ಣ ಕೋಪದಲೇ ಇರುವಾನೇ

ಅರ್ಜೇರು ಇನ್ನೂರು ಕೋಟಿ ಬಿಲ್ನರು ಮುನ್ನೂರು ಕೋಟಿ
ಇಂದ್ರಾಕ್ಷರ ಕೋಟೀ ಗಡಿಯಿಲ್ಲ | ಸಯ್ಯ
ಕರ್ಣನ ಬೆನ್ನತ್ತೇ ನಡೆದಾರೆ | ಗುರ್ರಾಯ್ನ
ಒಂದೇ ಕೊಡಲ್ಲಿ ಉಳದದೆ

ಒಂದೇ ಕೊಡಲ್ಲಿ ಉಳುವುದ್ನು | ಒಳಗಿದ್ದಾ
ಬೊನ್ಪತಿ | ಹೆರೂಗೇ ಬರೊವಾಳೇ

ಕರ್ಣಗೇನಂದಾರೋ ಕರ್ಣಗೇನ್ ಬಯ್ದಾರೋ
ಕರ್ಣಗೇನ್ ಕುಂದಾ ನುಡದೀರೋ | ನಮ್ಮನಿಯಾ

ರಾಜಂಗಳೆಲ್ಲಾ ಸುಬನಿಲ್ಲ. | ಗುರ್ನಾಯ್ನಾ
ಒಂದೇ ಕೊಡಲ್ಲಿ ಉಳದದೆ |
ಕಂದಾ ಬಲಿದನಂದೇ ತಿಂದೆ ನಿನ್ನಂಜಲವಾ
ಹಿಂಡೂತಿಗಿಂತೂ ಕಿರಿಯಂದ

ಅರಸು ಬಲಿದವನೆಂದು ಬೆರಸಿದೆ ನಿನ್ನೆಂಜಲವಾ
ಅರಸೊತ್ತಿಗಿಂದು ಕಿರಿಯವ | ಕರ್ಣನ
ನಾಮುನಿದರೆ ನಿನಗೆ ಮುನಕೇನು ?| ಅಂದೇಳಿ
ಹೋಗ್ ತಮ್ ಕರ್ಣನಾ ತೆಳುಗಾರೆ

ಹೋಗ್ ತಮ್ ಕರ್ಣನಾ ತೆಳುಗ್ವದ್ನು ಕರ್ಣನು
ಬಂದೀ ರಾಜಂಗ್ಳಲ್ಲೇ ನಿಲುವದ್ನು ಗುರಾಯ್ನಾ ಮನೆಯಾ
ರಾಜಂಗಳೆಲ್ಲ  ಸುಬನಾದೊ | ದರುಮರು
ಆಗೊಂದು ಮಾತಾ ನುಡೀದಾರೆ

ಎಣ್ಣೀದ ಮನಸೂ ಎಣ್ಣೀದಂಗಿದ್ದರೆ
ಹನ್ನೆರಡು ವರ್ಸ್ರ ವನವೇಸ| ತಿರಗ್ತೇನಂದೇ
ಇಣ್ಣೀದರೇ ತಮ್ಮ ಮನಸೀಲೇ
ಎಣ್ಣೀದೆ ಮನಸು ಎಣ್ಣಿದಂಗಿದ್ದರೆ

ಹನ್ನೆರಡು ವರ್ಸೆ | ವನವಾಸ | ತಿರುಗೇನಂದೇ
ಎಣ್ಣಿದರೆ ತಮ್ಮ ಮನಸೀಲೇ | ಅವರಯ್ವರು
ತಮ್ಮಂಬು ಬಿಲ್ಲೆಲ್ಲ ತಡೆದಾರೆ | ದರ್ಮರು

ಸೆಣ್ಣಗಂಬಳಿಯೂ ಹೊಗಲೀಗೆ |ಹಾಯೀಕಂಡೇ
ರಾಜಂಗ್ಳ ಮೆಟ್ಟಾ ಇಳೀದಾರೆ | ದರುಮರು.
ರಾಜಬೀದಿಗಾಗೇ ನಡೆದಾರೆ | ದರುಮರು

ಹೋಗಲಾದ ಕಟ್ಟಿ ನೆಗೆದತ್ತೇ | ದರುಮರು
ಸೆಣ್ಣಗಂಬುಳಿಯ ಮಡದಾಸೇ | ದರುಮರು
ಚಕ್ರಪಡಿ ಹೊಯ್ದೇ ಕುಳತಾರೆ | ದರುಮರು
ತಮ್ಮಾ ಕಯ್ಚಂಚೇ ಬಿಡಸಾರೆ | ದರುಮರು

ಬಾಯ್ತುಂಬ ಎಳಿ ಎಳಿಎಲಿಯೂ ಮೆಲೋವಾರೇ
ಎಲಿಯೊಂದ್ ತಿಂದಾರೆ ರಜವಲ್ಲೆ ಉಗಳಾರೆ
ತಮ್ಮ ಸಾದೇವ್ನಾ ದೆನಿದೂರೇ

ತಮ್ಮಾ ಸಾದೇವ್ನಾ ದೆನಿದೂರ್ವದ್ನು ಸಾದೇವ
ಓಯ್ಗೊಂಡೇ ಒಡನೇ ಬರುವಾನೇ
ಒಯ್ಗೊಂಡೇ ಒಡ್ನೇ ಬಂದೀ ಏನಂಬಾನೇ
ಏನು ಕಾರಣಲೇ ಕರದೀಯೋ

ಕರದಂ ಕಾರ್ಯವಿಲ್ಲ ಕಿರಿದುಂಬೆಸರಸಯ್ಯ
ಆಲದ ಮರನಾ ನೆಗದತ್ತೋ | ಸಾದೆವಾ
ತಮ್ಮುಂಬು ಬಿಲ್ಲೆಲ್ಲ ಮರನ್ಹೇರೋ

ಅಟ್ಟಂಬಾ ಮಾತಾ ಕೇಳಾನೆ ಸಾದೆವಾ
ಅಲದಾ ಮರನಾ ನೆಗೆದತ್ತೇ | ಸಾದೇವಾ
ತಮ್ಮಂಬು ಬಲ್ಲೆಲ್ಲ ಮರನ್ಹೇರೇ | ಸಾದೇವಾ
ಆಲದಾ ಮರನಾ ಇಳೀದಾನೆ

ಆಲದಾ ಮರನಾ ಇಳವೆದ್ನು ದರ್ಮರು
ಲಾಗೊಂದು ಮಾತಾ ನುಡೀದಾರೆ
ನಮ್ಮಂಬು ಬಿಲ್ಲೆಲ್ಲ ನರಮನಸರು ಮುಟ್ಯಾರಾ
ನರಮನಸರೀಗದು ಸಿಕ್ಬಾರಾ

ನರಮನಸರದ್ರಾ ಮುಟ್ಟಂದುಂಟಾದಾರೆ
ಸರ್ಪನೆ ಆಗೀ ಸಮೆಯಲಿ | ಅಂದೇಳೇ
ನರಮಸ್ರರಿಗ್ ಸಾಪಾ ಇಡೋವಾರೇ | ದರುಮರು
ಸೆಣ್ಣಗಂಬಳಿಯಾ ಕುಡೋಗೆದ್ದೇ |

ಸೆಣ್ಣ ಗಂಬಳಿಯಾ ಹೊಗಲೀಗೇ | ಹಾಯೀಕಂಡೇ
ಆಲ್ದ್ ಕಟ್ಟೀ ಕೆಳಗೇ ಇಳೀದಾರೆ | ದರ್ಮರು
ರಾಜೋ ಬಿದಿಗಾರೇ ನೆಡದಾರೆ

ಆ ಗುಡಿ ಹತ್ತಾರೆ ಈ ಗುಡಿ ಇಳ್ದಾರೆ
ಮಾಗುಡಿ ಮಕ್ಲಾಗೇ ಇಳದಾರೆ.

ಎಣ್ಣೀದ ಮನಸು ಎಣ್ಣೀದಂಗೀದ್ದರೆ
ಹನ್ನೆರಡು ವರ್ಸೆ ವನವೇಸ | ತಿರಗ್‌ತೀನಂದ
ಎಣ್ಣಿದರೇ ತಮ್ಮಾ ಮನಸೀಲಿ | ಅವ್ರ ಅಯ್ವರು

ಹನ್ನೆರಡು ವರ್ಸಾರುಣ್ಯ ತಿರುಗಾರೆ | ದರುಮರು
ಹಿಂದಾಕೇ ತಿರುಗೇ ಬರುವಾರು | ದರುಮರು
ಬಂದಾಲದ ಕಟ್ಟೇ ನೆಗದತ್ತೇ | ದರುಮರು

ಚೆಣ್ಣ ಗಂಬಳಿಯಾ ಮಡದ್ಹಾಸೇ | ದರ್ಮರು
ಚಕ್ರಪಡಿ ಹೊಯ್ದೇ ಕುಳಿತಾರೆ  | ದರ್ಮರು
ಅಗೊಂದು ಮಾತಾ ನುಡಿದಾರೆ

ತನ್ನ ಅಮ್ಮಗೆ ಒಂದೆಣ್ಣು ಇದ್ದರೆ
ಹೋಗೊಂದು ತುತ್ತಾ ಮೆಲೋತ್ತಿದೋ | ನನ್ನಮ್ಮಗೇ
ಹೆಣ್ಣೂ ಸಂತನವೇ ಮೊದಲ್ಹೆಚ್ಚೂ | ಚ್‌ | ಅಂದ್ ದರುಮರು
ಕಡಗಣ್ಣಲ್‌ಕಣ್ಣೀರಾ ಸೆಡದಾರೇ

ಕಡಗಣ್ಣಲ್‌ಹನಿಯಾ ಸೆಡ್ವನ್ನು ರೂಪತೀ
ತನ್ನಾ ಕರ್ಣನಾ ದೆನಿದೂರೇ
ತನ್ನಾ ಕರ್ಣನಾ ದೆನಿದೂರ್ವದ್ನು ಕರ್ಣನು
ಓಯ್ಗುಂಡೇ ಒಡನೇ ಬರೂವಾನೋ

ಓಯ್ಗುಂಡೇ ಒಡ್ನೇ ಬಂದೀ ಏನಂಬಾನೇ
ಏನು ಕಾರಣಲೆ ಕರದೀಯೋ
ಕರದು ಕಾರ್ಯವಿಲ್ಲ ಕಿರಿದುಂಬೆಸರ ಸಯ್ಯೆ
ಹೋಗ್ಯನಿ ಅಣ್ಣನಾ ಅರಮನೆಗೆ

“ನನ್ನಾ ಅಮ್ಮಗೆ ಒಂದೆಣ್ಣು ಇದ್ದೀರೆ
ಹೋಗೊಂದು ತುತ್ತಾ ಮೆಲತೀದೋ | ನನ್ನಮ್ಮಗ

ಹೆಣ್ಣು ಸಂತನವೇ ಮೊದಲ್ಹೆಚ್ಚೊ | ಅಂದೇಳೇ
ಕಡಗಣ್ಣಲ್‌ಹನಿಯಾ ಸೆಡೀದಾರೆ

ಅಯ್ವರ ನೆಡಗೆ ಒಂದ್ಹೆಣ್ಣು ಇದ್ದೀರೆ
ಹೋಗೊಂದು ತುತ್ತಾ ಮೆಲೋತೀದೋ | ನನ್ನಮ್ಮನೆ
ಹೆಣ್ನುಸಂತನವೇ ಮೊದಲ್ಹೆಚ್ಚೋ  ಅಂದ್ ದರುಮರು

ಕಡಗಣ್ಣಲ್ ಹನಿಯಾ ಸೆಡೀದಾರೆ |  ಬಾವಾನೋರೆ
ಹೋಗ್ಯನ್ನಿ ಅಣ್ಣನ ಅರಮನೆಗೆ | ಅಣ್ಣನ ಕಯ್ಲೆ
ಬೂಮ್ ತೂಕ್ದ ಹಲ್ಸ್ನ ಹಣ್ಣಾ ಕೊಡಬೇಕೆ

ಅಟ್ಟಂಬಾ ಮಾತಾ ಕೇಳಾನೆ ಕರ್ಣನು
ಅಲ್ದ ಕಟ್ಟೇ ಕೆಳಗೇ ಇಳದಾನೇ | ಕರ್ಣನು

ರಾಜಬೀದಿಗಾಗೆ ನಡೆದಾನೇ | ಕರ್ಣನು
ನಾರ್ಣದೆವ್ನರಮನೆಗೆ ನಡೆದಾನೆ | ಕರ್ಣನು
ಹೋಗೀ ಬಾಗಲೇ ನಿಲೋವಾನೇ | ಕರ್ಣನು
ಮಾಳೂಗೀ ಒಳಗೇ ನೆಡದಾನೇ

ಮಾಳೂಗೀ ಒಳಗೆ ನೆಡುವದ್ನು ನಾರ್ಣದೇವಾ
ವಾಲಗ್ಗುಂಡಾನೆ ಹಸೆಯಲ್ಲಿ | ನಾರ್ಣದೆವಾ
ಆಗೊಂದು ಮಾತಾನುಡೀದಾನೆ

“ಗುರ್ರಾಯ್ನ ಅರ್ಮಲ್ಲಿ ಸಂಬಳಕಿದ್ ಕರ್ಣನೆ
ಏನ್ಬಂದ್ಯೋ ತನ್ನ ಅರಮನೆಗೇ”

ತನ್ನಾ ಅಮ್ಮಗೆ ಒಂದ್ಹೆಣ್ಣು ಇದ್ದಿರೆ
ಹೋಗೊಂದು ತುತ್ತಾ ಮೆಲತೀದೊ | ನನ್ನಮ್ಮಗೆ
ಹೆಣ್ಣು ಸಂತನವೇ ಮೊದಲ್ಹೆಚ್ಚೇ | ಅಂದ ದರ್ಮರು
ಕಡೆಗಣ್ಣಲ್ ಹನಿಯೂ ಸೆಡೀದಾರೆ

ಅಯ್ವರ ನೆಡಗೇ ಒಂದ್ಹೆಣ್ಣು ಇದ್ದೀರೆ
ಹೋಗೊಂದು ತುತ್ತಾ ಮೇಲೇದೊ | ನನ್ನಮ್ಮಗೆ
ಹೆಣ್ಣು ಸಂತನವೇ ಮೊದಲ್ಹೆಚ್ಚೇ| ಅಂದ್‌ದರ್ಮರು
ಕಡಗಣ್ಣಲ್ ಹನಿಯೂ ಸೆಡೀದಾರೆ
ಅಯ್ವರ ನಡಗೇ ಒಂದ್ಹೆಣ್ಣು ಇದ್ದೀರೆ
ಹೋಗೊಂದು ತುತ್ತಾ ಮೇಲೋದೊ | ನನ್ನಮ್ಮಗೆ
ಹೆಣ್ಣೂಸಂತಾನವೇ ಮೊದಲೆಚ್ಚೇ | ಅಂದಾ ದರ್ಮರು

ಕಡಗಣ್ಣಲ್ ಹನಿಯೂ ಸೆಡೀದಾರೆ | ಅಂದ್ ದೇವರೇ
ನಿಮ್ ತಂಗಿ ತನ್ನಾ ಕಳಗದೆ | ಅಣ್ಣನಕಯ್ಲೆ
ಬೂಮ್ ತೂಕ್ದ ಹಲ್ಸನ್ ಹಣ್ಣಾ ಕೊಡೋಚೀಕೆ ”

ಅಟ್ಟಂಬಾ ಮಾತಾ ಕೇಳಾನೆ ನಾರ್ಣದೆವಾ
ಮಾಳೂಗಿ ಒಳಗೆ ನೆಡದಾನೆ | ನಾರ್ಣದೆವಾ
ಬೂಮ್ ತೂಕ್ದಾ ಹಲ್ಸನ ಹಣ್ಣಾ ತರೋವಾನೆ | ನಾರ್ಣದೆವಾ
ಕರ್ಣನ ಕಯ್ಲದ್ರಾ ಕೊಡೋವಾನೆ

ಕರ್ಣನ ಕಯ್ಲದ್ರಾ ಕೊಡುವದ್ನು ಕರ್ಣನು
ಎಯ್ದೂ ಕಯ್ಯೊಡ್ಡೇ ತಡದಾನೆ | ಕರ್ಣನು

ಹೊತ್ತಾನೆ ಹೊನ್ನಾ ಮುಡಿಮೆನೆ | ”
ರಾಜಂಗ್ಳ ಮೆಟ್ಟಾ ಇಳೀದಾನೆ | ”
ರಾಜೋಬೀದಿಗಾಗೆ ಬರೋವಾನೆ | ”
ಬಂದ್ ಅಲ್ದ ಕಟ್ಟಿ ನೆಗದತ್ತೇ | ”
ರೂಪತಿ ಕಯ್ಲ್ ಹಣ್ಣಾ ಕೊಡೋವಾನೇ

ರೂಪತಿ ಕಯ್ಲ್ ಹಣ್ಣಾ ಕೊಡುವದ್ನು ರೂಪತಿ
ದರುಮರಾ ಕಯ್ಲಣ್ಣಾ ಕೊಡೋವಾಳೇ
ದರುಮರಾ ಕಯ್ಲಣ್ಣಾ ಕೊಡುವದ್ನು ದರುಮರು
ಸೆಳ್ಳುಗರೀಲಣ್ಣಾ ಸಿಗೋಳೆತ್ತೇ | ದರುಮರು
ಸಾದೆವಾನೊಳಲು ಹೊಳುವಾದಿಲ್ಲಾ

ತಮ್ಮಾ ಸಾದೆವಾ ಇನ್ನೆತ್ತಾ ನೆರ್ದಾನೆ
ಸಾದೆವಾನೊಳಲು ಹೊಳುವಾದಿಲ್ಲ | ಅಂಬುದ್ನು ಭೀಮಯ್ಯ

ಆಲ್ದ್ ಕಟ್ಟೀ ಕೆಳಗೆ ಇಳದಾನೆ | ಭೀಮಯ್ಯ
ರಾಜಬೀದಿಗಾಗೇ ನೆಡದಾನೆ | ಭೀಮಯ್ಯ
ಹೋಗಿ ತರಕನ ಜಿಗಟೀ ಮಗೂಚಾನೆ |
ಹೋಗಿ ತರಕನ ಜಿಗಟೀ ಮಗಚ್ಚದ್ನು
ಸಾದೇವಾ ಎದ್ದೇ ಬರೂವಾನೇ

ಭೀಮಯ್ಯಾ ಮುಂದಾಗೇ ಸಾದೆವಾ ಹಿಂದಾಗೇ
ಬಂದಾಲದ ಕಟ್ಟೇ ನೆಗದಾರೆ | ಸಾದೇವಾ
ದರುಮರೊಡನೋಗಿ ಕುಳೋವಾನೇ

ದರುಮರೊಡನೋಗಿ ಕುಳುವುದ್ನು ದರುಮರು
ಬೀಮಗರ್ದಣ್ಣಾ ಕೊಡುವಾರೇ | ಇವರಿನ್ನು
ಆಯ್ವರರ್ದಣ್ಣಾ ಮೆಲೋವಾರೇ