ಆರು ಗೆರಿಯ ಬರದೇ ಹನ್ನೆಯ್ಡ್ ತೆರಿಯಾ ಕಟ್ಟೇ
ಧರ್ಮಾರಾಟಾಕೇ ಕುಳತಾರೆ

ಒಂದಾಟಾ ಆಡೇ ಗುರ್ರಾಯ ಗೆದ್ದಾನೆ
ದರ್ಮರ್ಗೆ ತಡದಾ ಕೊಡೆ ಕುಂಚಾ | ಸಯ್ವಾಗೇ
ಗುರ್ರಾಯ ಗೆದ್ದಾನೆ ಗಳಗ್ಯಲ್ಲೇ

ಎಯ್ಡಾಟಾ ಆಡೇ ಗುರ್ರಿಯಾ ಗೆದ್ದಾನೆ
ಭೀಮಯ್ಯಗೇ ತಡೆದಾ ಕೊಡೆ ಕುಂಚಾ | ಸಯ್ವಾಗೇ
ಗುರ್ರಾಯಾ ಗೆದ್ದಾನೆ ಗಳಗ್ಯಲ್ಲೇ,

ಮೂರಾಟಾ ಆಡೇ ಗುರ್ರಾಯ ಗೆದ್ದಾನೆ
ಅರ್ಜಿಣ್ಣಾ ತಡದಾ ಕೊಡೆ ಕುಂಚಾ | ಸಯ್ವಾಗೇ
ಗುರ್ರಾಯ ಗೆದ್ದಾನೆ ಗಳಗ್ಯಲ್ಲೇ

ನಾಕಾಟ ಆಡೇ ಗುರ್ರಾಯ ಗೆದ್ದಾನೇ
ಸಾದೇವಗೆ ತಡೆವಾ ಕೊಡೆಕುಂಚಾ | ಸಯ್ವಾಗೇ
ಗುರ್ರಾಯ ಗೆದ್ದಾನೆ  ಗಳಗ್ಯಲೇ

ಆಯ್ದಾಟಾ ಆಡೇ ಗುರ್ರಾಯ ಗೆದ್ದಾನೆ
ಸಕಲಯ್ಯಗೆ ತಡೆವಾ ಕೊಡಕುಂಚಾ | ಸಯ್ವಾಗೇ
ಗುರ್ರಾಯ ಗೆದ್ದಾನೆ ಗಳಗ್ಯಲ್ಲೇ | ಧರ್ಮರ್ಗೆ

ಇಂದೀನಾ ಆಟ ಗೆಲವಿಲ್ಲ | ಂದ್  ದರ್ಮರು
ಬೂಮಗ್ ಸಯ್ವಾಗೆ ತೆಲಗಬಾಗೇ |ಗ್ವ| ದ್ನು | ಗುರ್ರಾಯ
ಲಾಗೊಂದು ಮಾತ ನುಡಿದಾನೆ

“ಅದುಏನು ದರ್ಮರೆ ತಲೆಬಾಗಿ ಕೂತಿರಿ
ಕಕಿತನ್ನಿ ನಿಮ್ಮ ಅರಸೀಯೆ”

ಅಟ್ಟಂಬಾ ಮಾತಾ ಕೇಳಾರೆ ದರ್ಮರು
ಕೂತಾ ಮಂಚವಾ ಜಡೋದೆದ್ದೇ | ದ್ದಿ| ದರ್ಮರು
ಮಾಳೂಗೀ ಒಳುಗೆ ನಡೆದಾರೆ |  ”

ತೂಗು ಮಂಚದಲೆ ಕುಳೋತಾರೆ
ತೂಗು ಮಂಚಲೆ ಕುಳೂವುದ್ನು ರೂಪತಿ
ಮಾಳಗ್ಗಿಂದೆರಗೇ ಬರೋವಾಳೆ

ಆಯುಳ್ಳ ಹಣ್ಣಡಕೆ ಸೋಯಿಸಿದಾ ಬೆಳಿಎಲೆ
ಹಾಲಿನಲಿ ಚಿಂದಾ ತೆನೆಸುಣ್ಣಾ | ತಡಕಂಡಿ
ಮಾಳಗ್ಗಿಂದೆರಗೇ ಬರೋವಾಳೆ | ರೂಪತಿ
ದರ್ಮರೊಡನೋಗಿ ನಿಲೋವಾಳು | ”

ದರ್ಮರ್ಗೊಂದೀಳ್ಯ ಕೊಡೋವಾಳೇ
ಕೊಟ್ಟಾ ಈಳ್ಯವ ತಟ್ಟಾನೆ ತಡದಾರೆ
ಆಯೊಕೊಂದೀಳ್ಯ ಮೆಲೋವಾರೇ

ಅಯಾಕೊಂದೀಳ್ಯಾ ಮೆಲುವುದ್ನು ರೂಪತಿ
ತಾನೊಂದೀಳ್ಯವಾ ಮೇಲೋವಾಳೇ
ಎಲೆಯೊಂದ್ ತಿಂದಾಳೆ ರಜವಲ್ಲೇ ಉಗಳಾಳೆ
ಆಗೊಂದು ಮಾತಾ ನುಡೀದಾಳೆ

“ಯಾರತ್ತ ಸೋಲಾದೋ ಯಾರತ್ತ ಗೆಲೂವಾದೊ
ಯಾರೀಗೀ ಆಟ ಗೆಲೂವಾದೋ ?”

ನಮ್ಮತ್ತ ಸೋಲಾದೊ ಅವರತ್ತ ಗೆಲೂವದೂ
ಅವರೀಗೀ ಆಟಾ ಗೆಲೂವಾದೋ | ರೂಪತಿ
ಗುರ್ರಾಯ ನಿನಕೈಲಿ ಬರುಬೇಕೇ

“ಮುಟ್ಟೀಲಗುಂಡಿ ಮೂರ್ ನೀರು ಸಂದ್ಲಲ್ಲ
ತೊಳಚೀಯಾ ಕದ್ರಾ ಮೋಡಿಲಿಲ್ಲ,
ಮುಟ್ಟಿಲ ಗುಂಡಿ ನಾಕ್‌ನೀರ್ ಸಂದಲಿಲ್ಲ

ತೊಳಚೀಯ ಕದ್ರಾ ಮೋಡಿಯಾಲಿಲ್ಲಾ ಅದರಿನ್ನು
ಕಿಟ್ಟದೆ ತಾನೂ ಬರೋಲಾರೆ

ನಿಮ್ಮ ಮಾನಾವಾ ನೀವಿದ್ದಿ ಕೊಡಬಾರಾ
ಸುಮ್ಮನೆ ನೀವು ನೆಡೆಯಿರಿ | ಅಂಬುದ್ನು
ಕೂತಾ ಮಂಚವಾ ಜಡೋದೆದ್ದೇ | ದರ್ಮರು

ರಾಜಂಗಳ ಮೆಟ್ಟಾ ಇಳೀದಾರೇ | ”
ರಾಜಬೀದಿಗಾಗೇ ನೆಡೆದಾರೆ

ಮಾಡನ ಮೆನಿದ್ದಿ ನೋಡಾನೆ ಗುರ್ರಾಯ
ಪಾಂಡವರಸೀ ಬರಲಿಲ್ಲ | ಅಂದೇಳೀ
ಮಾಡ್ಗಿಂದು ಕೆಳಗೆ ಬರೋವಾನೆ.
ಮಾಡ್ಗಿಂದು ಕೆಳಗೆ ಇಳುವುದ್ನು ದರ್ಮರು

ರಾಜಂಗ್ಳ ಮೆಟ್ಟಾ ನೆಗದತ್ತೀ
ರಾಜಂಗ್ಳ ಮೆಟ್ಟಾ ನೆಗೆದತ್ವದ್ನು ಗುರ್ರಾಯ
ಆಗೊಂದು ಮಾತಾ ನುಡೀದಾನೆ

ಅದು ಏನು ದರ್ಮರೇ ಹಾಂಗೋಗಿ ಹೀಂಗ್ ಬಂದ್ರಿ
ಕರ್ತಂದ್ರಾ ನಿಮ್ಮಾ ಅರಸೀಯಾ

“ಮುಟ್ಟಾಲ ಗುಂಡಿ ಮೂರ್ನೀರು ಸಂದಲಿಲ್ಲ
ತೊಳಚೀಯ ಕದ್ರಾ ಮುಡಿಯಾಲಿಲ್ಲ | ಅದಂನ್ನು
ಕಿಟ್ಟಾದೆ ತಾನಿನ್ನು ಬರೋಲಾರೆ

ಮುಟ್ಟಾಲ ಗುಂಡಿ ಮೂರ್ ನೀರು ಸಂದಲ್ಲಿಲ್ಲ
ತೊಳಚೀಯೂ ಕದರಾ ಮುಡಿಯಾಲಿಲ್ಲ ಅದರಿನ್ನು
ಮುಟ್ಟಾದೆ ನಾನು ಬರೋಲಾರೆ

ರೂಪತಿ ಬಣಾ ತುಂಬೀ ಹೊಂಗಿನೋರ್ಣ
ಕಾಣಸಲೊಂದು ಕಲೆಯಿಲ್ಲ | ಧರ್ಮರೆ

ಬಾಯಾ ಮಾತಾಡಿ ತೆಳದ್‌ಬಂದ್ರಾ | ಅಂದೇಳಿ
ತನ್ನಾ ಕರ್ಣನಾ ದೆನಿದೂರಿ.

ಎಂದೂ ಕರ್ದವಂಲ್ಲಾ ಬಂದಾನೇ ಕರ್ಣನು
ನಿಂದಾನೆ ಗುರ್ರಾಯ್ನಾ ಒಡನೋಗಿ | ನಿಂದೀಕಂಡಿ
ಏನು ಕಾರಣ್ಣಿ ಕರದೀಯೋ”

“ಕರ್ದಂಬ್ ಕಾರ್ಯವಿಲ್ಲ ಕಿರಿದುಂಬೆಸರ ಸಯ್ಯೆ.
ಹೋಗೀ ರೂಪತಿಯಾ ಕರತಾರೋ.

“ಆರ್ನ್ ತಲಿತಾ ಅಂದ್ರ ತರವೆ ಚೋರ್ನ್ ತಲಿತಾಅಂದ್ರ ತರ್ವೆ.
ಹೀಲಿಸತ್ತಗೀಯಾ ನೆಳಲಾಡೇ | ಡ್ ಹೋಗ್ವನತಲಿತರ್ವೆ
ತರಲಾರೆ ಪರರಾ ಅರಸೀಯಾ.”

“ನನ್ನ ಅನ್ನಾ ಉಂಡೇ ವನ್ನಾ ಸುಣ್ಣಾತಿಂದೇ
ತಾನೇ ಹೇಳಿದ ಮಾತಾ ಸಲ್ಲೀಸ್ಲಾರ್ಯಾ| ಕರ್ಣನೆ
ಕಟ್‌ಕಣೋ ಪಂಜರದಾ ಅರಮನೆ

ಒಬ್ಬರ ವಲ್ಲೆ ಇರುವುದು ಅತಿಕಟ್ಟಾ
ಹೇಳಿದುಳಗವಾ ಸಲಸಬೇಕೋ
ಹೇಳಿದುಳಗವಾ ಸಲಸದೇ ಇದ್ದರೆ
ಕಟ್‌ಕಂಬೇಕೋ ಪಂಜರದ ಅರಮನೆ | ಅಂದ್ ಕರ್ಣನು

ಮುತ್ತನ ಕಣ್ಣೀರಾ ಸೆಡೀದಾನೆ | ಕರ್ಣನು
ಮಾಳೂಗಿ ಒಳಗೆ ನೆಡದಾನೆ. | ಕರ್ಣನು
ಅಟ್ಟತ್ತಿ ಪೆಟ್ಟಗಿಯಾ ತೆಗದಾನೆ. | ಕರ್ಣನು
ಮೆಟ್ಟಿ ಬೀಗನಾ ಕರೀದಾನೆ | ಕರ್ಣನು

ಮುಚ್ಚೀಲ ತಗದೆ ಕಡಗಿಟ್ಟಿ
ಕರ್ದೊಂದುಟ್ಟಾನೆ ಕರ್ದೊಂದಾ ತೊಟ್ಟಾನೆ
ಕರಿಯಾ ದರಿಗಳ ಬೀಗಿದಾಗೆ | ಅರ್ಜಿಣ್ಣ
ಪೆಟ್ಟೂಗಿ ಬಾಯಲ್ಲೇ ಮಡೋಗಾನೆ | ಕರ್ಣನು

ಕದೊಂದ್ ಮುಗ್ಲಲ್ಲೆ ಹೆರೋಟಾನೆ | ಕರ್ಣನು
ಮಾಳಗ್ಗಿಂದೆರಗೇ ಬರೇವಾನೇ | ಕರ್ಣನು
ರಾಜಂಗ್ಳ ಮೆಟ್ಟ ಇಳೀದಾನೆ

ಹೊನ್ನಾರು ತಂಕು ಗೆರಸಪ್ಪಿ ತುದಿತಂಕು
ತನಗಲ್ಲದ ರಾಜ್ಯ ಪರ್ರಗಲ್ಲವೆಂದ್ | ಕರ್ಣನು

ಸಂಕ ವಜ್ಜಳಸೇ ನಡೆದಾನೇ | ಕರ್ಣನು
ಅಪ್ಸೂಲಿದೆವ್ನರಮನೆಗೇ ನಡೆದಾನೇ | ಕರ್ಣನು

ಹೋಗಿ ಬಾಗಲ್ಲೇ ನಿಲೋವಾನೇ
ಹೋಗಿ ಬಾಗಲ್ಲೇ ನಿಲುವದ್ನು ಅಪ್‌ಸೂಲೀದೆವಾ

ತಡದಾನೆ ಚಂಬಗಲೇ ಉದಕಾವೇ
ಅಪ್ಪಕೊಟ್ಟುದಕಾ ತಟ್ಟಾನೆ ತಡದಾನೆ

ಕಾಲೋ ಸಿರಿಮೊಕವಾ ತೊಳದಾನೆ | ಕರ್ಣನು
ಮಾಳೂಗಿ ಒಳಗೆ ನಡೆದಾನೆ | ಕರ್ಣನು

ತೂಗು ಮಂಚದಲೆ ಕುಳೋತಾನೆ
ತೂಗು ಮಂಚದಲೆ ಕುಳುವದ್ನು ಅಪ್‌ಸೂಲೀದೆವಾ
ಮಾಳೂಗೀ ಒಳಗೆ ನಡೆದಾನೆ

ಅಯುಳ್ಳ ಹಣ್ಣಡಕೆ ಸೋಯಿಸಿದ ಬಿಳಿಎಲೆ
ಹಾಲಿನಲಿ ಬೆಂದಾ ತೆನೆ ಸುಣ್ಣಾ | ತಡಕಂಡಿ
ಮಾಳಗ್ಗಿಂದೆರಗೇ ಬರೋವಾನೇ

ಮಾಳಗ್ಗಿಂದೆರಗೆ ಬರ್ವದ್ನು ಅಪ್‌ಸೂಲೀದೆವಾ
ಕರ್ಣನೊಡನೋಗೇ ಕುಳತಾನೆ

ಕರ್ಣನೊಡನೋಗೇ ಕುಳ್ವದ್ನು ಅಪ್‌ಸೂಲೀದೆವಾ
ಕರ್ಣಗೊಂದೀಳ್ಯಾ ಕೊಡೋವಾನೇ
ಅಪ್ಪಾ ಕೊಟ್ಟೀಳ್ಯ ತಟ್ಟಾನೆ ತಡದಾನೆ

ಅಯಾಕೊಂದೀಳ್ಯ ಮೆಲೋವಾನೇ
ಎಲಿಯೊಂದ್ ತಿಂದಾನೆ ರಜವಲ್ಲೆ ಉಗುಳಾನೆ
ಆಗೊಂದು ಮಾತಾ ನುಡಿದಾನೆ

“ಅರ್ನತಲತಾಂದ್ರ ತಕ್ವಿ ಚೋರ್ನ ತಲಿತಾಂದ್ರ ತರ್ವೆ
ತರ್ನಾಕಿ ಪರರಸೀಯ | ಅಂಬುದ್ನು ಅಪ್‌ಸೂಲೀದೆವಾ
ಆಗೊಂದು ಮಾತಾ ನುಡೀದಾನೆ.

“ಉಪ್‌ನೀರ್ ಹುಟ್ಟಲಿತಂಕು ಸೀನೀರ್ ಬೆಳವಲಿ ತಂಕು
ನಿನಗಲ್ಲದ ರಾಜ್ಯ ಪರರ್‌ಗಲ್ಲ | ಮಗನೇ ಕೇಳೋ

ಬಾಯಾ ಮಾತಾಡೇ ತೆಳದ್‌ಬಾರೋ | ಅಂಬುದ್ನು
ಕೂತಾ ಗದ್ದಗಿಯಾ ಜಡದೆದ್ದೇ | ಕರ್ಣನು
ರಾಜಂಗ್ಳ ಮೆಟ್ಟಾ ಇಳೀದಾನೆ.

ಉಪ್‌ನೀರ್ ಹುಟ್ಟಲಿತಂಕು ಸೀನೀರ್ ಬೆಳವಲಿತಂಕು,
ತನಗಲ್ಲದ ರಾಜ್ಯಾ ಪರರ್‌ಗಲ್ಲ | ಅಂದೇಳೇ
ಸಂಕಾ ವಜ್ಜಳಸೇ ನೆಡದಾನೆ | ಕರ್ಣನು
ಇಸ್ಕನ್ನೆ ಅರ್ಮನೆಗೇ ನೆಡೆದಾನೆ | ”
ಹೋಗೀ ಬಾಗಲ್ಲೇ ನಿಲೋವಾನೇ.

ಹೋಗಿ ಬಾಗಲ್ಲೆ ನಿಲ್ವದ್ನು ಇಸ್ಕನ್ನಿ
ತಡ್ದಳೇ ಚಂಬಗಲೇ ಉದಕವೇ
ಇಸ್ಕನ್ನೆ ಕೊಟ್ಟುದಕಾ ತಟ್ಟಾನೆ ತಡದಾನೆ
ಕಾಲೂ ಸಿರಿಮೊಕವಾ ತೊಳದಾನೆ | ಕರ್ಣನು
ಮಾಳೂಗಿ ಒಳಗೆ ನಡೆದಾನೆ

ಮಾಳೂಗಿ ಒಳಗೆ ನೆಡ್ವದ್ನು ಇಸ್ಕನ್ನೆ
ಹಸವೀಗ್ ಹಾಲ್ಗಂಜಿ ಬಡಸಾಳೆ
ಹಸವೀಗ್ ಹಾಲ್ಗಂಜಿ ಬಡಸ್ವದ್ನು ಕರ್ಣನು

ಉಂಡೆದ್ದನೊಂದು ಗಳಗ್ಯಲ್ಲೇ
ಉಂಡಾನೂಟವಾ ತೋಳ್ದಾನೆಂಜಲಮೊಕವಾ
ತೂಗುಮಂಚದಲೆ ಕುಳೋತಾನೆ.

ತೂಗು ಮಂಚದಲೆ ಕುಳ್ವದ್ನು ಇಸ್ಕನ್ನೆ
ಎಂಜಲಮಯ್ಲಗೀಯಾ ತೆಗೆದಾಳೆ.

ಎಂಜಲಮಯ್ಲಗೀಯಾ ತೆಗ್ವದ್ನು ಇಸ್ಕನ್ನೇ
ಮಾಳೂಗೀ ಒಳಗೆ ನಡೆದಾಳೆ.

ಆಯುಳ್ಳ ಹಣ್ಣಡಕೆ ಸೋಯಿಸಿದ ಬೆಳಿ ಎಲೆ
ಹಾಲಿನಲಿ ಬೆಂದಾ ತನೆಸುಣ್ಣಾ | ತಡಕಂಡೆ
ಮಾಳಗ್ಗಿಂದೆರಗೇ ಬರೋವಾಳೆ | ಇಸ್ಕನ್ನೆ
ಕರ್ಣನೊಡನೊಡನೋಗೆ ನಿಲೋವಾಳೆ.

ಕರ್ಣನೊಡನೋಗಿ ನಿಲ್ವದ್ನು ಇಸ್ಕನ್ನೆ
ಕರ್ಣಗೊಂದೀಳ್ಯ ಕೊಡೋವಾಳೆ.

ಇಸ್ಕನ್ನೆ ಕೊಟ್ಟೀಳ್ಯೆ ತಟ್ಟಾನೆ ತಡ್ಡಾನೆ
ಆಯಾಕೊಂದೀಳ್ಯ ಮೇಲೋವಾನೇ
ಆಯಾಕೊಂದೀಳ್ಯೆ ಮೇಲ್ವದ್ನು ಇಸ್ಕನ್ನೆ
ತಾನೊಂದೀಳ್ಯವ ಮೆಲೋವಾಳೇ.

ಎಲಿಯೊಂದ್ ತಿಂದಾಳೆ ರಜವಲ್ಲೆ ಉಗಳಾಳೆ
ಆಗೊಂದು ಮಾತಾ ನುಡೀದಾಳೆ

ಅಂದ್‌ವಂತು ಆಗೀರಿ ಚಂದ್ವಂತು ಆಗೀರಿ
ಗಂಡು ರೂಪದಲೆ ಚಲುವರು | ದೆವರೇ
ನಿಮ್ಮಿಂಡರ ಪುರುವಾ ಅರಿಯಾರಾ
ನಮ್ಮ ಹಿಂಡರ ಪೂರವಾ ನಾನೆಲ್ಲಾ ಬಲ್ಲೆನೆ ಹೆಣ್ಣೆ
ಯಾವದೇ ರೂಪತಿಯಾ ಅರಮನೆ

ಅಂದ್‌ವಂತೂ ಆಗೀರಿ ಚಂದ್ವಂತೂ ಆಗೀರಿ
ಗಂಡು ರೂಪದಲೆ ಚಲುವರು | ದೆವರೆ
ನಿಮ್‌ತಂದೀ ಪುರ್ವಾ ಅರಿಯಾರಾ

ತಂದೀಯ ಪುರ್ವಾಬಲ್ಲೆ ಹೆಣ್ಣೆ ಕೆಳೇ
ಯಾವದ್ದೇ ರೂಪತಿಯ ಅರಮನೆ

ಅಯ್ಯೋ ದೆವಾರೇ ನೀವಿನ್ನು ಅರಿಯೂರಾ
ಇದು ಈಗ ರೂಪತಿಯ ಅರಮನೆ.

“ಬಸ್ಳಿ ನೆಟ್ಟದೆ ದೆಸಕ್ ಕಯ್ ಬಿಟ್ಟದೆ.
ಸಿರಿಯೋ ಮಂಡಲವಾ ಬರದದೆ | ದೇವರೆ
ಇದು ಈಗ ರೂಪತಿಯ ಅರಮನೆ

ಅಟ್ಟೊಂದು ಮಾತಾ ಕೇಳಾನೆ ಕರ್ಣನು
ರಾಜಂಗ್ಳ ಮೆಟ್ಟಾ ಇಳೀದಾನೆ

ಉಪ್ನೀರ್ ಹುಟ್ಟಲಿತಂಕು ಸಿನೀರ್ ಬೆಳವಲಿತಂಕು
ತನಗಲ್ಲದ ರಾಜ್ಯಾ ಪರರ್ರಗಲ್ಲಾ
ಸೋಲಿಯಾ ಸುತನಾ ಹೊಳೆವ ಹೊನ್ನಾರ್ತಂಕು
ತನಗಲ್ಲದ ರಾಜ್ಯಾ ಪರರ್ರಗಲ್ಲಾ | ಲ್ಲಂ | ದ್ ಕಣ್ಣನು
ಸಂಕ ವಜ್ಜಳಸೇ ನೆಡದಾನೆ.

ಅಯ್ಯರಿಗ್‌ಯ್ಡರಮನ್ನೆ ಅಯ್ವರಿಗಯ್ದ್ ಕೆರ್ಬಾವಿ
ಅಯ್ವರಿಗ್ ಅಯ್ದು ಸೆಳಮಂಚಾ | ಕಾಣೀತಾ
ಸಂಕ ವಜ್ಜಳಸೇ ನೆಡದಾನೆ.

ಸಂಕ ವಜ್ಜಳಸೇ ಬರ್ವದ್ನು ರೂಪತಿ
ಅರಗೀ ನೋಡಿದಳೇ ಹೆರಗೊಮ್ಮೆ | ರೂಪತಿ
ಬರ್ವಾ ಅರ್ಜಿಣ್ನಾ ಬರ್ವೇ ಸಯ್ಯೇ | ಅಂದಾಳೆ.

ಬರ್ವಾ ಅರ್ಜಿಣ್ನಾ ಬರುವಲ್ಲ | ಅಂದ್ ರೂಪತಿ
ಬಪ್ಪ ಬಾವ್ನೋರಾ ಬರ್ವೇ ಸಯ್ಯೆ |  ”
ಮಾಳೂಗಿ ಒಳಗೇ ನಡೆದಾಳೆ.

ಮಾಳೂಗಿ ಒಳಗೇ ನೆಡ್ವದ್ನು ಕರ್ಣನು
ಹೋಗೀ ಬಾಗಲ್ಲೇ ನಿಲೋವಾನೇ.

ಸಂಕದ ದೆನಿಯಾ ಸಂತರ್ಸ್ವಳೇ  ರೂಪತಿ
ತಡದಳೆ ಚಂಬಗಲೆ ಉದಕವೇ | ರೂಪತಿ
ಕರ್ಣಗೆ ಉದಕಾ ಕೊಡೋವಾಳೆ,

ರೂಪತ ಕೊಟ್ಟುದಕಾ ತಟ್ಟಾನೆ ತಡದಾನೆ
ಕಾಲೂ ಸಿರಿಮೊಕವಾ ತೊಳದಾನೆ | ಕರ್ಣನು
ಮಾಳೂಗೀ ಒಳಗೆ ನೆಡದಾನೆ | ಕರ್ಣನು
ತೂಗುಮಂಚದಲೆ ಕುಳತಾನೆ.

ತೂಗುಮಂಚದಲೆ ಕುಳುವುದ್ನು ರೂಪತಿ
ಆಗೊಂದು ಮಾತಾ ನುಡೀದಾಳೆ.

ತನ್ನರು ಕೊಟ್ಟರು ಸೆಣ್ಕಾಲಮಂಚವ
ಇಬ್ಬರೂ ಕೂದಲಕು ನೆರಿಯವೆ | ಬಾವ್ನರೆ
ತರಸಲೋ ಅರಜೀಣನ ಸೆಳಮಂಚಾ”

“ತನ್ನ ತಮ್ಮಂದಿರು ಸೆರ್ಮನಿಯಲಿರುವಾಗ
ತನಗೆಂತಕ ಮಂಚಾ ಕೊಡತೀಯೆ | ಎಲೆ ಹೆಣ್ಣೆ
ಕೊಟ್ಟದ್ದು ಒಂದು ಮಣೆಸಾಕು

ತನ್ನರು ಕೊಟ್ಟರು ಸೆಣ್ಣಕಾಲಮಂಚವ
ಇಬ್ಬರು ಕೂದಲಕು ನೆರಿಯವೆ | ಬಾವನರೆ
ತರಸಲೋ ಭೀಮನ ಸೆಳಮಂಚ

ತನ್ನ ತಮ್ಮದಿರು ಸೆರೆಮನೆಯಲಿರುವಾಗ
ತನಗೆಂತಕೆ ಸೆಳಮಂಚಾ | ಕೊಡೀತೀಯೇ
ಕೊಟ್ಟದ್ದು ಒಂದು ಮಣೆ ಸಾಕೆ

ಅಟ್ಟಂಬು ಮಾತಾ ಕೇಳಾಳೆ ರೂಪತೀ
ಮಾಳೂಗಿ ಒಳಗೆ ನೆಡದಾಳೆ |

ಆಯುಳ್ಳ ಹಣ್ಣಡಕೆ ಸೋಯಿಸಿದ ಬಿಳಿಎಲೆ
ಹಾಲಿನಲಿ ಬೆಂದಾ ತೆನೆಸುಣ್ಣಾ | ತಡಕಂಡೆ
ಮಾಳಗ್ಗಿಂದೆರಗೇ ಬರೋವಾಳೆ | ರೂಪತಿ
ಕರುಣಾನೊಡನೋಗೆ ಕುಳತಾಳೆ |”
ಕರುಣಾಗೊಂದೀಳ್ಯಾ ಕೊಡುವಾಳೆ

ಕರುಣಾಗೊಂದೀಳ್ಯ ಕೊಡುವುದ್ನು ಕರ್ಣನು
ಆಯಾಕೊಂದೀಳ್ಯಾ ಮೆಲೋವಾನೇ

ಆಯಾಕೊಂದೀಳ್ಯಾ ಮೆಲುವುದ್ನು ರುಫತಿ
ತಾನೊಂದು ಈಳ್ಯಾ ಮೆಲೋವಾಳೆವದ್ನು ರೂಪತಿ

ಅಡಕೆ ಸೊಕ್ಕಲೆ ಮಯ್ಮರತರಲ್ಲೊರಗಾಳೆ
ಅಡ್ಕೆ ಸೊಕ್ಕಲೇ ಮಿಯ್ಮರತಲ್ಲೊರಗ್ವದ್ನು ಕರ್ಣನು
ಹಚ್ಚಡ ಸೆರಗೀಲೆ ತಡೆದಾನೆ

ಹಚ್ಚಡ ಸೆರಗೀಲೇ ತಡವದ್ನು ರೂಪತಿ
ಮೆಯ್ಯ ಮುರುದೆದ್ದೇ ಕುಳತಾಳೆ
ಮೆಯ್ಯ ಮುರುದೆದ್ದೇ ಕುಳುವುದ್ನು ರೂಪತಿ
ಆಗೊಂದು ಮಾತಾ ನುಡೀದಾಳೆ.

ಅದು ಏನು ಬಾವ್ನೋರೆ ಹಚ್ಚಡ ಸೆರಗೀಲಿ ತಡ್ದ್ರಿ
ಗೋವ್‌ಕಟ್ನರ್ಗು ನಿಮಗೂ ಹೊಲೆಯೇನು ?

ಬಾವಾ ಮುಯ್ದನಿಯಾ ಕಿಟ್ಟ ಬಾರದಂದೇ
ಹಚ್ಚಡ ಸೆರ್ಗೀಲಿ  ತಡದೀನೇ

ಅಟ್ಟಂಬ ಮಾತಾ ಕೇಳಾಳೆ ರೂಪತಿ
ಆಗೊಂದು ಮಾತಾ ನುಡೀದಾಳೆ

ಯಾರತ್ತ ಗೆಲೂವಾದೋ ಯಾರತ್ತ ಸೋಲಾದೋ
ಯಾರೀಗೀ ಆಟ ಗೆಲೂವಾದೋ

ನಮ್ಮತ್ತ ಸೋಲಾದೊ ಅವರತ್ತ ಗೆಲೂವಾದೋ
ಅವರೀಗಿ ಆಟಾ ಗೆಲೂವಾದೊ | ರೂಪತಿ
ಗುರ್ರಾಯ್ ನಿನ್ ಕಯ್ಲೆ ಬರೋಬೇಕೆ

ಬಾವ ಮುಯ್ದಿನೀ ಒಂದಾದೀಲೋಗ್ವಂಗೆ
ಕಂಡವ್ರು ನಿಮ್ಮಾ ಸತಿಯೆಂಬ್ರು | ಭಾವಾನೋರೆ
ಬರುವುದಿಲ್ಲಾ ನಿಮ್ಮಾ ಒಡನಲ್ಲೇ

ಮುಂದೋದ್ರ ತಂಗ್ಯಂಬ್ರು ಹಿಂದೋದ್ರ ಮಡದ್ಯಂಬ್ರು
ಬರುವುದಿಲ್ಲಂತೂ ತನ್ನಾ ಒಡನಲ್ಲೆ | ಅಂದೇಳೇ
ಹೋಗೇ ನಿಮ್ಮಣ್ಣಂಗೆ ಒರೆಯಂದೇ

ಅಟ್ಟಂಬಾ ಮಾತಾ ಕೇಳಾನೆ ಕರ್ಣನು
ಆಗೊಂದು ಮಾತಾ ನುಡೀದಾನೆ.

ನನಗಿಂದು ಹಿಂದೆ ದುಸುವಯ್ಯ ಬರುತಾನೆ
ಬಾಗೀಲ ಗೀಳಾನೇ ಬೀಗುದಿಡೆ | ರೂಪತಿ

ಕೋಲಾಮೆನ್ ಕೋಲಾ ಬಿಗೂದೀಡೆ | ರೂಪತಿ
ಸಿಂಗರಸಿ ಆನೀ ಬಿಗದೀಡೆ | “