ಆಗೊಂದು ಮಾತಾ ನುಡೀದಾರೆ

ಹೊಸಹೊನ್ನ ಬಾಗಲವಾ ಕಾದಿರುಬಾಗಿಲವ್ನೆ
ದರ್ಮರೊಲಗದಾ ಅಡೀಗಾರಾ | ಬಾಗೀಲವ್ನೆ
ತಡೀತಿಯೋ ಬಾಗಿಲವ ಬಿಡತೀಯೋ”

“ಬಾಗಿಲ ಬಿಡವಕೆ ದೇವರಪ್ಪಣೆಬೇಕು
ಬಂದವರಿಲ್ಲೆ ನೀಲೋಬೇಕು.

ಬಾಗಲಕಾದಿರುವಾ ಮನ್ನೆಯ ನಾಯಕ
ಹೊನ್ನನ್ನ ಗದ್ದಗಿಯಾ ತಡದಿರುವೆ | ಕುಳ್ತಿರುವೆ
ಬಿಮನೊಲಗದಾ ಅಡೀಗಾರಾ| ಬಾಗೀಲವ್ನೆ
ತಡೀತಿಯೋ ಬಾಗಲವಾ ಬಿಡತೀಯೋ”

“ಬಾಗಲ ಬಿಡವಕೆ ದೆವರಪ್ಪಣೆ ಬೇಕು
ಬಂದವರಿಲ್ಲೆ ನಿಲಬೇಕು”

ಬಾಗಲ ಕಾದಿರುವಾ ಮನ್ನೆಯ ನಾಯಕಾ
ಚಿನ್ನದ ಗದ್ದಗಿಯಾ ತಡದಿರುವೆ | ಕುಳ್ತಿರುವೆ
ಅರ್ಜಿನ್ನೊಲಗದಾ ಅಡೀಗಾರಾ | ಬಾಗೀಲವನ್ನೇ
ತಡಿತೀಯೋ ಬಾಗಲವಾ ಬಿಡತೀಯೋ”

“ಬಾಗಲ  ಬಿಡವಕೆ- ದೇವರಪ್ಪಣೆ ಬೇಕು
ಬಂದವರಿಲ್ಲೆ ನಿಲೋಬೇಕು”

“ಬಾಗಲ ಕಾದಿರುವಾ ಮನ್ನೆಯ ನಾಯಕಾ
ಮುತ್ತನ ಗದ್ದಗಿಯಾ ತಡದಿರುವೆ | ಕುಳ್ತಿರುವೆ
ಸರ್ಲಯ್ಯಾ ಸಾದೆವ್ನೊಲಗದಾ ಆಡೀಗಾರಾ| ಬಾಗೀಲವ್ನೆ
ತಡೀತಿಯೋ ಬಾಗಲವಾ ಬಿಡತೀಯೋ

ಅಟ್ಟಂಬೋ ಮಾತಾ ಕೇಳಾನೆ ಬಾಗೀಲಂವ
ದರ್ಮರ್‌ತುಂಬೀದ್ದೊಲಕ್ಕೆ ನೆಡದಾನೆ | ಬಾಗೀಲಂವ
ಹೋಗೀ ಬಾಗಲ್ಲೇ ನೀಲೋವಾನೆ
ಹೋಗೀ ಬಾಗಲ್ಲೇ ನಿಲ್ವದ್ನು ದರ್ಮರು
ಆಗೊಂದು ಮಾತಾ ನುಡೀದಾರೆ

“ಯಾವಾಗೂ ನಮ್ಮಾ ಕಾದಿರುವ ಬಾಗೀಲವ್ನೆ
ಏನ್ಬಂದ್ಯೋ ನಮ್ಮ ಅರಮನಗೆ ”

“ಬರವೀನೊಲೆ ಬಂದೀ ಬಾಗೀಲಲಿ ನಿಂರದೆ
ತಡೀಬೇಕೋ ಬಾಗಲವಾ ಬಿಡೋಬೇಕೋ”

“ಬರವೀನೋಲಿಯಾ ತಡವಾ ಕಾರಣಿಲ್ಲ
ತಡವಿಲ್ದೆ ಬಾಗಲವಾ ಬಿಡೋಬೇಕೋ”

ಅಟ್ಟಂಬಾ ಮಾತಾ ಕೇಳಾನೆ ಬಾಗೀಲಂವ
ಹಿಂದಕ್ಕೆ ತಿರ್ಗೇ ಬರೋವಾನೇ | ಬಾಗೀಲಂವ
ಹುರಡಾಡೇ ಅಡಿಯಾ ತೆಗೆದಾನೆ
ಹುರಡಾಡೆ ಅಡಿಯಾ ತೆಗ್ವದ್ನು ಮೂಡಾನಾ

ಬರ್ಮಾಲೊಕೆಲ್ಲಾ ಬೆದೂರಾವೆ | ಅರ್ದಿಕಾರ್ರು
ರಾಗಾದಿಂದೊಳಗೇ ಬರೋವಾರು

ಅತ್ತೇ ಹೋದವ್ರಾ ಇತ್ತೇ ಬರುವೇಳಿ
ಸತ್ಯಲಿ ಗಿಳಿಬರದಾ ನಿವ್ರಲೋಲೆ | ಗೋಕನದಾ
ದೇವುತೆಗಳಿರುವಾ ಅರಮನೆ
ಅತ್ತೇ ಹೋದವ್ರಾ ಇತ್ತೇ ಬರುವೇಳಿ
ಹಾರೂ ಗಿಳಿಬರದಾ ನಿವುಲೋಲೆ | ಮೂಳೂಗೀಒಳಗೆ

ದೆವ್ರ ದರುಮರು ಕುಳಿತರೆ | ಅರ್ದಿಕಾರ್ರು
ಹೋಗೀ ವಾಲೀಯ ಕೋಡೋವಾರು |
ಹೋಗಿ ವಾಲೀಯ ಕೊಡುವದ್ನು ದರ್ಮರು

ತೊಡಿಯಾ ಮೆನೊಲೀ ಮಡುಗಾರ
ತೊಡಿಯಾ ಮೆನನೊಲಿ ತಡದೆತ್ತಿ ನೋಡಾರೆ
ತನ್ನಾ ಸಾದೆವ್ನಾ ದೆನಿದೂರೇ

ತನ್ನಾ ಸಾದೆವ್ನಾ ದೇನಿದೂರ್ವದ್ನು ಸಾದೇವಾ
ಓಯ್ಗುಂಡೇ ಒಡನೇ ಬರೋವಾನೇ
ಓಯ್ಗುಂಡೇ ಒಡ್ನೇ ಬಂದೀ ಏನಂಬಾನೆ
ಏನು ಕಾರಣಲೆ ಕರದೀಯೋ

“ಕಾಲೂ ಮೊರಿಯ ತೊಳಿಯೋ ಹಾಲು ಗಂಜಿಯನುಣ್ಣೋ
ಬೂಮು ದೇವತಗೆ ಸರಣನ್ನೋ | ಸಾದೆವಾ
ಹೆತ್ತಮ್ಮ ಕುಂತೀಗೆ ಸರಣನ್ನೋ |
ಹಿರಿಯಣ್ಣ ದರ್ಮಗೇ ಸರಣನ್ನೋ |
ವಾಲೆ  ಒತ್ತಗೀಯಾ ಬಿಡಸೋದೋ

ಕಾಲೂ ಮೊರಿಯ ತೊಳಿಯೋ ಹಾಲು ಗಂಜಿಯನುಣ್ಣೋ
ಬೂಮು ದೇವತಗೆ ಸರಣನ್ನೋ | ಸಾದೇವಾ
ಹೆತ್ತಮ್ಮ ಕುಂತೀಗೆ ಸರಣನ್ನೋ | ಸಾದೇವಾ
ಹಿರಿಯಣ್ಣ ದರ್ಮಗೆ ಸರಣನ್ನೊ | ಸಾದೇವಾ
ಕಟ್ಟೀನೊತ್ತಗೀಯ ಬಿಡಸೋದೋ

ಅಟ್ಟಂಬಾ ಮಾತಾ ಕೇಳಾನೆ ಸಾದೇವಾ
ಕಾಲೂಸಿರಿಮೊಕವಾ ತೋಳದಾನೆ | ಸಾದೇವಾ
ಬೂಮು ದೇವತೆಗೆ ಸರಣಂದೇ | ಸಾದೇವಾ
ಹೆತ್ತಮ್ ಕುಂತೀಗೇ ಸರಣಂದೇ | ಸಾದೇವಾ

ಹೆರಿಯಣ ದರ್ಮಗೇ ಸರಣಂದೇ | ಸಾದೇವಾ
ಅಣ್ಣನೊಡನೋಗೇ ನಿಲೋವಾನೇ
ಅಣ್ಣ ನೋಡನೋಗೇ ನಿಲ್ವದ್ನು ದರ್ಮರು
ವಾಲೆ ವತ್ತಗೀಯಾ ಕೊಡೊವಾರೇ
ವಾಲೆ ವತ್ತಗೀಯಾ ಕೊಡ್ವದ್ನು ಸಾದೆವಾ
ವಾಲೆ ವತ್ತಗೀಯಾ ಬಿಡಸೋದೆ

ವಾಲೆ ಓದೀತಾ ಅಣ್ಣನ ಮೊಕ ನೋಡೀತಾ
ಮುಂಗಣ್ಣೀಲ್ ಹನಿಯಾ ಸೆಡದಾನೇ
ವತ್ತಗೆ ಓದೀತಾ ಅತ್ತೂಗೀ ಮೊಕನೋಡೀತಾ
ಕಡಗಣ್ಣಲ್ ಕಣ್ಣೀರಾ ಸೆಡೀದಾನೆ

ಅಂಚಂಚಾ ಮೆಟ್ಗಂಟೇ ಗುಂಚೊಂದಾ ಉರಿಕಂಡೇ
ತಾಯ್‌ ಕುಂತೀ ಹೆರುಗೇ ಬರೋವಾಳೆ
ತಾಯ್‌ಕುಂತಿ ಹೆರುಗೆ ಬಂದೀ ಏನಂಬಾಳೇ
ಎಂತಪ್ಪ ಮಕ್ಕಳ್ರಾ ವಾಲೀ ಹದೂಳವೇ?”

ವಾಲೇ ಹದುಳವೆ ತಾಯೇ ಏನಾಹೇಳಲೆ ತಾಯೇ
ಪಟ್ಟೂಗೀ ಕೊಳ್ಳಾಪತೂರಲೇ | ರೋಪಲೆ
ಕುಸುಮ ಸಂಕದಲೇ ಅಸೀಯಳೆ |ಳು| ಸೋಲ್ವದ
ಗುರ್ರಾಯಾ ನೆನಸೇ ಬರದಾನೆ

ಅಟ್ಟಂಬಾ ಮಾತಾ ಕೇಳಾರೆ ದರುಮರ,
ಸತ್ತಗಿಯಾ ಕಟ್ಟೇ ಮಡಗಂದೆ
ಸತ್ತಗಿಯಾ ಕಟ್ಟೇ ಮಡಗ್ವದ್ವು ಸಾದೇವಾ

ಕಟ್ಟಿ ಹೊತ್ತಗೀಯಾ ಮಡಗಾನೆ
ಕಟ್ಟಿ ಹೊತ್ತಗೀಯಾ ಮಡಗ್ವದ್ನು ದರುಮರು
ತಮ್ಮಾ ರೋಪತೀಯಾ ದೆನೀದೂರೇ
ತಮ್ಮಾ ರೋಪತಿಯಾ ದೆನಿದೂರ್ವದ್ನು ರೂಪತಿ

ಓಯ್ಗುಂಡೇ ಒಡನೆ ಬರೋವಾಳೆ | ರೋಪತೀ
ನಿಂದಾಳೇ ದರ್ಮರಾ ಒಡನಲ್ಲಿ | ನಿಂದೀಕಂಡೇ
ಏನು ಕಾರಣಲೆ ಕರದೀರೋ

ಅಣ್ಣಾ ಕರ್ವೊಲಿ ಚೆನ್ನಗ ಮಾಡಲಬಾರಾ
ಹೋಗಬೇಕು ಅಣ್ಣನ ಅರಮನಗೆ | ರೋಪತಿ
ಹಾಲ್ಗಂಜಲೂಟಕೆ ಅನೋಮಾಡೇ

ಅಟ್ಟಂಬಾ ಮಾತಾ ಕೇಳಾಳೇ ರೋಪತಿ
ಮಾಳೂಗೀ ಒಳಗಿ ನಡೆದಾಳೆ

ಅಟ್ಟದ ಮೆನನ ಜೀರಗ್‌ಸಾಲಕ್ಕಿಯಾ
ಅನ್ನಾ ಮೆಗರಕೇ ಅನೋಮಾಡಿ
ಅಟ್ಟದ ಮೆನನ ಪುಟ್ಟೂ ಸಣ್ಣಕ್ಕೀಯಾ
ಹಾಲೂ ಪಾಯಸಕೆ ಅನೂಮಾಡೀ

ಹಿತ್ತಲಕಣಕೀನಾ ಬೊಟ್ಟು ಕೆಂಬರಗೀಯಾ
ಬೊಟ್ಟೆಣ್ಣಿ ಕಿಟ್ಟೇ ಬೆಗೊರೀಸಿ
ಬೇಲಿಯ ಮೆನನ ದಾರೆ ಹಿರೆಯಕಾಯಾ
ದಾರೆಯನರದೇ ಮೆಣಸಿಟ್ಟೇ

ಹರ್ದಬ್ದು ಹಾಗೀಲಾ ಮುರ್ದಬ್ಬೂ ತೊಂಡೀಲಾ
ಪಲಬೆರಸಬ್ಬು ಒಸಳೀಯಾ | ಕೊಡಿಯಾತಂದೇ
ತುಪ್ಪದಲ್ಲದ್ರಾ ಬೆಗೋರೀಸೇ

ಎಲಮೆರೆಂಬಂತ್ ಬಗೆ ಕಾಯ್ ಮೆರ್‌ತೊಂಬತ್ ಬಗೆ
ನೂರೊಂದು ಬಗೆಯ ಅಡಗೀಯಾ | ಕಜ್ಜಾಯವಾ
ಅನಮಾಡಿದಳೊಂದೋ ಗಳಗ್ಯಲ್ಲೇ | ದರ್ಮರು
ಕೂತಮಂಚವ ಜಡದೆದ್ದೇ | ದರ್ಮರು
ಅನೀಸಾಲೀಗೆ ನೆಡದಾರೆ | ”

ಅಂದೊಳ್ಳೊಂದಾನೀ ಹೊಡತಂದೇ
ಅಂದೊಳ್ಳೊಂದಾನೀ ಅಂಗಳಕೇ ಹೊಡತಂದೇ
ಅಂದಾಚಂದಾದಲೇ ಹೊಡೀಉದ್ದೇ | ಆನೀಗೇ
ತಿಂಬೂಕಿಕ್ಕಾನೆ ಕಡಲೀಯೇ | ಆನೀಗೇ
ಬಾಲಕ್ ಬಿಸಿದಾರೆ ಚಿವಲವೇ | ಆನೀಗೇ
ಕಾಲೀಗಿಕ್ಕಾರೆ ಉರೋಗೆಜ್ಜೆ | ”

ಕೊಳ್ಳೀಗ್ ಕಟ್ಟಾರೆ ಸರಗಂಟೆ | ದರ್ಮರು
ಅನೀ ಕಂಬ್ಗಾನೀ ಸೆಳ್ದಕಟ್ಟೇ |ಟ್| ದರ್ಮರು
ಆನಿ ಮಾಳೂಗೀ ಒಳಗೇ ನೆಡದಾರೆ

ಮಾಳೂಗೀ ಒಳಗೆ ನೆಡ್ವದ್ನು ರೋಪತಿ
ಸೆಣ್ಣ ಗಿಂಡ್ಯಲ್ಲೆ ಉದಕವೇ |ವ| ತಡಕಂಡೇ
ಮಾಳಗ್ಗಿಂದೆರಗೇ ಬರೋವಾಳೆ | ರೋಪತಿ
ಧರ್ಮರೊಡನೋಗೆ ನಿಲೋವಾಳೆ| ”
ದರ್ಮರ್ಗೆ ಉದಕಾ ಕೊಡೋವಾಳೇ

ದರ್ಮರ್ಗೆ ಉದ್ಕಾ ಕೊಡ್ವುದ್ನ ದರ್ಮರು
ತಾವಯ್ವರು ಮೊಕವಾ ತೊಳದಾರೆ |ದರ್ಮರು

ಮಾಳೂಗಿ ಒಳಗೆ ನೆಡದಾರೆ
ಮಾಳೂಗಿ ಒಳಗೆ ನೆಡ್ವದ್ನು ರೂಪತಿ
ಅಯ್ದೂ ಹೊನಮಣೆಯಾ ಮಡೋಗಾಳೆ
ಆಯ್ದೂ ಹೊಮಣೆಯಾ ಮಡಗ್ವದ್ನು ದರ್ಮರು
ಮಣೆಯ ಮೆನ್ಹೋಗೇ ಕುಳತಾರೆ

ಮಣೆಯ ಮೆನ್ಹೋಗೇ ಕುಳುವದ್ನು ರೂಪತಿ
ಕಿರಳು ಬಾಳೆಲಿಯೂ ತೊಳದ್ಹಾಸೇ | ರೂಪತಿ
ಅನ್ನಾ ಮೆಗರವಾ ಬಡಸಾಳೆ | ರೂಪತಿ
ಹಾಲೂ ಪಾಯಸವಾ ಬಡಸಾಳೆ | ರೂಪತಿ
ತುಪ್ಪಾ ಸಕ್ಕರೆಯ ಎರದಾಳೆ

ತುಪ್ಪಾ ಸಕ್ಕರೆಯ ಎರ್ದೀ  ತಿರ್ಗೂ ವಲ್ಲೆ
ಉಂಡೆದ್ದರೊಂದು ಗಳಗ್ಯಲ್ಲೇ
ಉಂಡರೂಟವಾ ತೊಳ್ದ ರೆಂಜಲಮೊಕವಾ
ತೂಗುಮಂಚಲ್ಲೆ ಕುಳುವುದ್ನ ರೂಪತಿ

ತಮ್ಮೂಟಕೆ ತಾವು ಎಡೆಮಾಡೇ |ಡ್| ಬಡಸೀಗಂಡೇ
ಉಂಡೆದ್ದ ರೊಂದು ಗಳಗ್ಯಲ್ಲೇ
ಉಂಡಾಳೂಟವಾ ತೊಳದಾಳೆಂಜಲವಮೊಕವಾ
ಎಂಜಲಮಯ್ಲಗಿಯಾ ತೆಗದಾಳೆ | ರೂಪತಿ
ಮಾಳೂಗೀ ಒಳಗೆ ನೆಡದಾಳೆ | ರೂಪತಿ

ದರ್ಮರ ಸಾಕದಾ ಹರಳೂ ಮುಟ್ಟೇ | ಟ್ಟೀ| ದೀಳ್ಯವಾ
ಆಯ್ಯಾಕೊಂದೀಳ್ಯವಾ ತಡದಾಳೆ | ರೂಪತಿ
ಮಾಳಗ್ಗಿಂದೆರಗೇ ಬರೋವಾಳೆ |     ”
ಧರ್ಮರೊಡನೋಗೆ ನಿಲೊವಾಳೇ | ರೂಪತಿ
ದರ್ಮರ ಕಯ್ಲೀಳ್ಯ ಕೊಡೋವಾಳೆ.

“ನೀವೊಂದು ತಾಯೀಗೆ ಅಯ್ವರು ಮಗದೀರು
ನೀವಯ್ವರೊಂದೀಳ್ಯ ಮೆಲಗೇಕು”

ರೂಪತಿ ಕೊಟ್ಟೀಳ್ಯ ತಟ್ಟಾನೆ ತಡ್ದಾಕಿ
ಅಯ್ವರೊಂದೀಳ್ಯ ಮೆಲೋವಾರೇ
ಎಲಿಯೊಂದ್ ತಿಂದಾರೆ ರಜವಲ್ಲೇ ಉಗಳಾರೆ

ಮಾಳುಗಿ ಒಳಗೇ ನಡೆದಾರೆ | ದರ್ಮರು
ಅಟ್ಹತ್ತಿ ಪೆಟ್ಟಗಿಯಾ ತೆಗೆದಾರೆ | ”
ಮೆಟ್ಟೀ ಬೀಗವ ಕರೀದಾರೆ | ”
ಮುಚ್ಚೀಲ ತೆಗದೇ ಕಡೆಗಿಟ್ಟೇ | ದರ್ಮರು
ಪಟ್ಟೇ ಜೋತರವ ನೆರದುಟ್ಟೇ | ”
ಮುತ್ನ ಮುಂಡುಸ್ನ ತಲಸುತ್ತೇ |”
ಪಟ್ಟೇ ಜೋತರವರ ಹೊಗಲೀಗೆ |

ಕಾಲು ಕಡಗಾ ಇಟ್ಟೀ ಕೀಲು ತೊಂಡಲಮುಟ್ಟೀ
ತಮ್ಮುಂಬು ಬಿಲ್ಲೆಲ್ಲ ತಡೆದಾರೆ | ದರ್ಮರು
ತಮ್ಮ ಕಯ್ಚಂಚೀ ತಡದಾರೆ | ದರ್ಮರು

ಸೆಣ್ಣಾ ಗಂಬುಳಿಯ ಹೊಗಲೀಗೇ| ಹಾಯೀಕಂಡೇ
ಹಾಲೂಗಾಯಯ್ದಾ ತಡದಾರೆ | ದರ್ಮರು
ಪೆಟ್ಟೂಗೀ ಬಾಯಲ್ಲೇ ಮಡಗಾರೆ | ದರ್ಮರು

ಮಾಳಗ್ಗಿಂದೆರಗೇ ಬರೋವಾರೇ | ದರ್ಮರು
ಬಂದೀ ಬಾಗಲ್ಲೇ ನಿಲೋವಾರೆ | ”
ಹೊಸಹೊನ್ ಬಾಗ್ಲ ಕದವಾ ತೆಗೆದಾರೆ | ”
ದೀಪಾ ದೂಪೆಲ್ಲಾ ಕಸೀದರೆ | ”

ಹೊಸ ಹೊನ್‌ಬಾಗ್ಲಕ್‌ಕಾಯಾ ಒಡದಾರೆ
ಹೊಸ ಹೊನ್ ಬಾಗ್ಲಕ್ ಕಾಯಾ ಒಡುವುದ್ನು ಅರ್ಜಿಣ
ತಾನೂ ಮುಂದಾಗೇ ಬರೋವಾನೇ

ಅಣದಿರ್ ಹೋಗುವಾಗೇ ತಮದಿರ್ ನಿಲಬಾರಂದೇ
ಬೀಮಾನು ಗಜವಾ ತಡೆದದ್ದೇ
ಅಣದೀರ್ ಹೋಗುವಾಗೇ ತಮದಿರ್ ನಿಲಬಾರಂದೇ
ಅರಜೀಣ ತನ್ನಂಬಾ ತದದದ್ದೇ
ಅಣದೀರ್ ಹೋಗುವಾಗೇ ತಮದೀರ್ ನಿಲಬಾರಂದೇ
ಸಕಲಯ್ಯ ತನ್ನಂಬಾತಡದೆದ್ದೇ
ಆಣದೀರ್ ಹೋಗುವಾಗೇ ತಮದಿರ್ ನಿಲಬಾರಂದೇ
ಸಾದೇವಾ ತನ್ನಂಬಾ ತೆಡದದ್ದೇ | ಅವ್ರ್ ನಾಲ್ವರು

ಅಣ್ಣಾ ನೊಡನೋಗೇ ನಿಲೋವಾರೇ
ಅಣ್ಣಾ ನೊಡನೋಗಿ ನಿಲ್ವದ್ನು ದರ್ಮರು
ಹೊಸ ಹೊನ್ ಬಾಗ್ಲಕದವಾ ಬಡದಾರೇ
ಹೊಸ ಹೊನ್ ಬಾಗ್ಲ ಕದವಾ ಬಡ್ವದ್ನು ಸಾದೇವಾ
ಆಗೊಂದು ಮಾತಾ ನುಡೀದಾನೇ

“ಕಾಯೊಂದು ಒಡದೀ ಕಡ ಕವಜೀ ಬಿದ್ದವೋ
ಕಾರ್ಯಂಗಳೋ ನಮಗೆ ಗೆಲವಿಲ್ಲ | ಅಣ್ಣ ಕೇಳೋ
ಇಂದೋಗು ಪಯ್ಣ ನಿಲೋಬೇಕು ”

“ಕಾಯೊಂದ್ ಒಡ್ದಾರೇನೋ ಕಡಕವ್ಚ ಬಿದ್ದಾರೇನೋ
ಕಾರಂಗಳು ನಮಗೆ ಗೆಲವಕ್ಕು | ಅಂದೇಳೇ

ಮರ್ಚೊಂದ್ ಕಾಯಾ ಒಡದಾರೆ | ದರ್ಮರು
ಅನೀ ಕಂಬ್ನಾನೀ ಸೆಳ್ದ ಬಿಚ್ಚೇ | ಅಯ್ವರು
ಅಂದೋಳ್ಳಾನೀಯಾ ನೆಗದತ್ತೇ| ದರ್ಮರು
ಆಯಾಕಯ್ದಜ್ಜಿ ಹೊಡದಾರೇ
ಆಯಾಕಯ್ದಜ್ಜಿ ನೆಡ್ವದ್ನು ಸಾದೇವಾ
ಆಗೊಂದು ಮಾತಾ ನುಡೀದಾನೆ

“ಗೂಡೊಳಗಕ್ಕಿ ಕೂಡಿದ್ಬಿ ನುಡಿದಾವೆ
ಬಂದಾ ದಂಡೆಲ್ಲ ತಿರುಗಲೀ | ಅಂದೇಳೀ
ಗೂಡಿನೊಳಗಕ್ಕೀ ನುಡದಾವೆ”

ಗೂಡಿನೊಳಗಕ್ಕಿ ನುಡಿದಾಕಿ ನುಡಿಯಾಲಿ
ಕಾರ್ಯಂಗಳು ನಮಗೆ ಗೆಲವಕ್ಕು | ಅಂದೇಳಿ
ಆಯಾ ಕಯ್ದೆಜ್ಜಿ ಹೊಡದಾರೆ.

“ಕಾಕಿ ಕೆಲ್ದ ವಣ್ಣ ಕೆರ್ಯಾ ಬಲಗುಂಡಾವೋ
ಕಾರ್ಯಂಗಳ್ ನಮಗೆ ಗೆಲವಿಲ್ಲ | ಅಣ್ಣ
ಇಂದೋಗು ಪಯಣ ನಿಲೋಬೇಕು”

ಕಾಕಿ ಕಲ್ಪಾರೇನೋ ಕೆರ್ಯಾ ಬಲಗುಂಡಾರೇನೋ
ಕಾರ್ಯಂಗಳ್ ನಮಗೆ ಗೆಲವಕ್ಕೋ | ಅಂದೇಳೇ
ಸಾದೇವಾಸಿಂಗ ನೆಡೆ ಮುಂದೆ |”

ಆಯಾಕಯ್ದೆಜ್ಜಿ ಹೊಡದಾರೆ | ದರ್ಮರು
ರಾಜಾಬೀದಿಗಾಗೇ ನಡೆದಾಗೇ ನಡೆದಾರೆ | ”
ಕುರು ? ಗುರ್ರಾಯ್ನರ ಮನೆಗೇ ನೆಡದಾರೆ

ಮಾಡಾಮೆನಿದ್ದೇ ನೋಡಾನೇ ಗುರ್ರಾಯಾ
ಮಾಡ್ಗಿಂದೇ ಕೆಳಗೆ ಇಳದಾನೆ | ಗುರ್ರಾಯಾ
ಬಂದೀ ಬಾಗಲ್ಲೆ ನಿಲೋವಾನೇ

ಬಂದೀ ಬಾಗಲ್ಲೇ ನಿಲುವದ್ನು ದರ್ಮರು
ಬಂದೀ ಬಾಗಲ್ಲೆ ನಿಲೋವಾರೆ | ”
ಬೋರಿನೇ ಆನೀ ಇಳದಾರೆ | ”

ಅನೀಕಂಬ್ಗಾನೀ ಸೆಳ್ದೇ ಕಟ್ಟೇ| ದರ್ಮರು
ತಿಂಬೂಕಿಕ್ಕಾರೆ ಕಡಲೀಯೇ | ಯ| ”
ಹೋಗಿ ಬಾಗಲ್ಲೇ ನೀಲೋವಾರೇ
ಹೋಗಿ ಬಾಗಲ್ಲೇ ನಿಲುಗವುದ್ನ ಗುರ್ರಾಯ
ತಡ್ಡಾನೇ ಚಂಗಲೇ ಉದುಕಾವೇ

“ಒಂದೇ ತಾಯಿಗೆ ಅಯ್ವರು ಮಗದೀರು
ನೀವ್ ಅಯ್ವುರು ಮೊಕವಾ ತೊಳಯರೋ |ರಿ| ” ಅಂದೇಳಿ

ದರ್ಮರ ಕಯ್ಲುದಕಾ ಕೊಡುವಾರೇ
ದರ್ಮರ ಕಯ್ಲದಕಾ ಕೊಡುವುದನ್ನು ದರ್ಮರು
ಕಾಲೂ ಸಿರಿಮೊಕವಾ ತೊಳದಾರೆ | ದರ್ಮರು
ಮಾಳೂಗಿ ಒಳಗೆ ನಡೆದಾರ |

ತೂಗು ಮಂಚದೆಲೆ ಕುಳತಾರೆ
ತೂಗು ಮಂಚದಲೆ ಕುಳವುದ್ನು ಗುರುರಾಯ
ಆಗೊಂದು ಮಾತಾ ನುಡೀದಾನೆ
ಆಗೊಂದು ಮಾತಾ ಏನಂದಿ ನುಡದಾನೆ

“ಉಂಡ್‌ಬನ್ನಿ ಅತ್ತುಗಿಯ ಅರಮನೆಯ | ಅಂಬುದನ್ನು
ಅಡಗೀ ಸಾಲೀಗೇ ನೆಡದಾರೆ
ಅಡಗೀ ಸಾಲೀಗೇ ನೆಡವುದ್ನು ದರ್ಮರು
ಹೋಗಿ ಬಾಗಲ್ಲೇ ನಿಲೋವಾರೆ ದರ್ಮರು

ಅತ್ತಗತ್ತಂದೇ ದೆನೀದೋರೇ
ಅತ್ತಗತ್ತಂದೇ ಹತ್ತತ್ತರದೆನಿಗುಡರು
ಒಯ್ಗುಂಡು ಬೆನ್‌ಪತಿ ಒಳಗಿದ್ದೇ | ಬೋನ್ಪತಿ
ಮಾಳಗ್ಗಿಂದೆರಗೇ ಬರೂವಾಳೇ
ಮಾಳಗ್ಗಿಂದೆರಗೇ ಬಂದೀ ಏನಂಬಾಳೇ

“ಏನು ಕಾರಣಲೇ ಕರದಿಯೋ”

“ಕರದಂ ಕಾರ್ಯವಿಲ್ಲ ಕಿರ್ದುಂಬೆಸರಸಯ್ಯ
ಅದಲ್ ಅನ್ನಿದ್ರೆ ಎಡೆಮಾಡೆ ”

“ಅದಲ್ಲನ್ನಿಲ್ಲ ಕಾದಲ್ ಪನ್ನೀರಿಲ್ಲ
ಆಗೂರೊಟ್ಗ ನೀವು ನಿಲಬೇಕು”

“ಅದು ಅನ್ನಿಲ್ಲ ಸಿಟ್‌ದಲ್ ಬಾಳೆಲಿಲ್ಲ
ಆಗೂರೂಟ್ಗ ನೀವು ನೀವು ನಿಲಬೇಕು.

“ಆಗೂ ರೋಟ್ಗ್ ನೀವು ನಿತ್ತಂದುಂಟಾದರೆ
ನಿತ್ತೀ ಅಂಜಿಸುವ ಹೆರಿಯಣ್ಣ | ಅಂದೇಳೆ
ಹಿಂದಕೇ ತಿರ್ಗೇ ಬರೋವಾರೆ| ದರ್ಮರು
ಅಣ್ಣ ನೋಡನೋಗೇ ನಿಲೋವಾರೇ

“ಅದು ಏನ್‌ ದರ್ಮರೆ ಹಾಂಗೋಗಿ ಹಿಂಗ್ ಬಂದ್ರಿ
ಉಂಡ್ ಬಂದ್ಯ್ರೆ ಅತ್ತುಗಿಯ ಅರಮಲ್ಲ”

ಆದಲ್ ಅನ್ನಿಲ್ಲ ಕಾದಲ್ ಪನ್ನೀರಿಲ್ಲ
ಆಗೂರೋಟ್ಗ್ ನಾವು ನಿಲಲಿಲ್ಲ.
ಆಗೂರೊಟ್ಗ ನಾವು ನಿತ್ತದ್ದುಂಟಾದರೆ

ನಿತ್ತೀ ಅಂಜಿಸುವೆ ಹೆರಿಯಣ್ಣ| ಅಂದೇಳೇ
ಹಿಂದಕೆ ತಿರಗೇ ಬರತಿದ್ದೋ

ಅದಲ್ ಅನ್ನಿಲ್ಲ ಸಿಟ್‌ದಲ್ ಬಾಳೆಲಿಲ್ಲ
ಆಗೂ ರೊಟ್ಗ್ ನಾವು ನಿಲಲಿಲ್ಲ
ಆಗೂ ರೂಟ್ಗ್ ನಾವು ನಿತ್ತಂದ್ದುಟಾದರೆ
ನಿತ್ತೀ ಅಂಜಿಸುವೆ ಹೆರಿಯಣ್ಣ ಅಂದೇಳೇ
ಹಿಂದಕ್ಕೆ ತಿರುಗೇ ಬರತಿದ್ದೋ”

ಅಟ್ಟಂಬು ಮಾತಾ ಕೇಳಾನೇ ಗುರುರಾಯ
ಮಾಳೂಗಿ ಒಳಗೆ ನಡೆದಾನೆ

ಆಯುಳ್ಳ ಹಣ್ಣಡಕೆ ಸೋಯಿಸಿದ ಬೆಳಿ ಎಲೆ
ಹಾಲನಲಿ ಬೆಂದಾ ತನೆಸುಣ್ಣ | ತಡಂಕಂಡೇ
ಮಾಳಗ್ಗಿಂದೆರಗೇ ಬರೋವಾನೆ | ಗುರ್ರಾಯ
ದರ್ಮರೊಡನೋಗೇ ನಿಲೋವಾನೆ | ಗುರ್ರಾಯ

ಒಂದೇ ತಾಯೀಗೆ ನೀವಯ್ವರ್ ಮಗದೀರು
ಅಯ್ವರ್ ಬಂದೀಳ್ಯ ಮೆಲಲಂದೇ | ಗುರ್ರಾಯಾ

ದರ್ಮರ ಕಯ್ಲೊಂದೀಳ್ಯ ಕೊಡೋವಾನೇ
ಅಣ್ಣ ಕೊಟ್ಟೀಳ್ಯ ತಟ್ಟಾನೆ ತಡ್ದಾರೆ
ಅಯ್ಪರೊಂದೀಳ್ಯ ಮೆಲೊವಾಕೀ
ಅಯ್ವರೊಂದೀಳ್ಯ ಮೆಲುವವದ್ನು ಗುರ್ರಾಯ

ತಾನೊಂದೀಳ್ಯವಾ ಮೆಲೋವಾನೇ
ಎಲಿಯೊಂದ್ ತಿಂದಾನೆ ರಜವೆಲ್ಲ ಉಗಳಾನೆ
ಮಾಳೂಗೀ ಒಳಗೆ ನಡೆದಾನೆ | ಗುರ್ರಾಯ

ಹೊಸ ಹಲ್ಗ್ ಹೊಸ ಪಗ್ಡೀ ತರೋವಾನ ಗುರ್ರಾಯ
ಮಾಳಗ್ಗಿಂದೆರಗೇ ಬರೋವಾನೆ | ಗುರ್ರಾಯ

ಆಟದ ಚಾವಡಗೇ ನೆಡೆದಾನೆ
ಆಟದ ಚಾವಡಗೇ ನೆಡ್ವೆದ್ನು ದರ್ಮರು
ಆಟದ ಚಾವಡಗೇ ನೆಡದಾರೆ.

ಆರುಗೆರಿಯ ಬರದೇ ಬೆಂಬತ್ತ ತೆರಿಯ ಕಟ್ಟೇ
ಗುರುರಾಯಟಕೇ ಕುಳೂತಾನೆ
ಆರುಗೇರಿಯಾ ಬರದೆ ಹನ್ನೆಯ್ಡು ತೆರಿಯಾ ಕಟ್ಟೇ
ದರ್ಮರಾಟಕೆ ಕುಳತಾರೆ

ಒಂದಾಟಾ ಅಡಿ ದರ್ಮಾರೆ ಗೆದ್ದಾರೆ
ಗುರ್ರಾಯಾಗಾಟ ಗೆಲವಿಲ್ಲ.

ಎಯ್ಡಾಟಾ ಆಡೇ ದರ್ಮಾರೇ ಗೆದ್ದಾರೆ
ಗುರ್ರಾಯಗಾಟಾ ಗೆಲುವಿಲ್ಲ.

ಗುರ್ರಾಯಾಗಾಟ ಗೆಲವಿಲ್ಲಂದ್ ಗುರ್ರಾಯ
ಆಟ್‌ಮುರ್ದೀ ಗೊಟೆ ಕುಳಿತಾನೆ | ಗುರ್ರಾಯ
ಮಾಳೂಗೀ ಒಳಗೀ ನಡೆದಾನೆ | ಗುರ್ರಾಯ

ತನ್ನಾ ಗಣಿನಾಥಾಗೇ ಹರಕೀಯೇ
ಮೆಟ್ಟೂವೆ ಗಣಿನಾಥ್ನಾ ಕುಟ್ಟೂವೆ ಗಣಿನಾಥ್ನಾ
ಕಿತ್ತೀ ಸಾಗರಕೆ ಹಣೂವೆನೋ

ಈ ಸಾರೀನಾಟಾ ತಾನಾಡಿ ಗೆದ್ದರೆ
ಕಾಯಾ ಒಡಿಸೂವೆ ಹದಿನಾರು | ಗಣಿನಾಥಾ

ಹಣ್ಣಾ ಹರಗೂವೆ ಅಯ್ನೂರಾ| ಅಂದೇಳೇ
ತನ್ನಾ ಗಣಿನಾಥಾಗೆ ಹರಕೀಯೇ |ಯ| ಮಾಡಿನ್ನು
ಮಾಳಗ್ಗಿಂದೆರಗೇ ಬರೋವಾನೇ | ಗುರ್ರಾಯಾ

ಆಟದ ಚಾವಡಗೇ ನೆಡೆದಾನೆ
ಆರುಗೇಯಾ ಬರದೇ ಒಂಬತ್  ತೆರಿಯಾ ಕಟ್ಟೇ
ಗುರ್ರಾಯಾಟಾಕ್ಕೆ ಕುಳತಾನೆ.