ರಹಮತ್ ತರೀಕೆರೆ

ಬೆಳಿಗ್ಗೆ ಮಾತಾಡಿದ ಶಿವಗಂಗ ಮತ್ತು ಭಂಡಾರಿ ಅವರಿಬ್ಬರೂ ಮಾತಾಡಿದ ಮೆಥಡಾಲಜಿ ವಿಚಿತ್ರ. ಆದರೂ ವಿಶೇಷ ಅನ್ನಿಸಿತು. ಅಂದರೆ ನಮ್ಮ ಹದಿಮೂರು ವಿಚಾರ ಸಂಕಿರಣಗಳಲ್ಲಿ, ಸಂವಾದ ಕಾರ್ಯಕ್ರಮಮಗಳಲ್ಲಿ ಮತ್ತೆ ಮತ್ತೆ ಬರ್ತಾ ಇರುವ ಪ್ರಶ್ನೆಯೆಂದರೆ ಅದಿನ್ನೂ ಬಗೆಹರಿದಿಲ್ಲ. ಅದೇನೆಂದರೆ ಒಂದು ಪದ್ಯ ಹ್ಯಾಗೆ ಸೃಷ್ಟಿಯಾಗ್ತದೆ ರೂಪುಗೊಳ್ಳುತ್ತದೆ. ಹ್ಯಾಗೆ ಸಂಘಟಿತವಾಗುತ್ತದೆ. ಎರಡನೆಯದು ಬೇರೊಂದು ಕಾಲಘಟ್ಟಕ್ಕೆ ಸೇರಿದ ನಾವು ಅದನ್ನು ಹ್ಯಾಗೆ ಮುಖಾಮುಖಿ ಮಾಡ್ತೀವಿ, ಇದರ ಬಗ್ಗೆ ಸರ್ವಸಮ್ಮತವಾದ ಯಾವ ಕಾಲಕ್ಕೂ ಪರಿಭಾವಿಸಬಹುದಾದ ಒಂದು ಮೆಥಡಾಲಜಿನ ನಮಗೆ ಹುಟ್ಟಿಸಿಕೊಳ್ಳಲಿಕ್ಕೆ ಆಗಿಲ್ಲ. ನಾವು ಒಂಥರ ಪ್ರೊಸೆಸ್‌ಲ್ಲೆ ಇದ್ದೀವಿ. ಆ ದೃಷ್ಟಿಯಿಂದ ನೋಡಿದರೆ ನಿನ್ನೆ ಮತ್ತು ಇವತ್ತು ಮತ್ತೆ ಮತ್ತೆ ಒಂದು ಪಠ್ಯ ಹ್ಯಾಗೆ ರೂಪುಗೊಳ್ಳುತ್ತದೆ ಚರಿತ್ರೆಯಲ್ಲಿ ಇನ್ನೊಂದು ಚಾರಿತ್ರಿಕ ಕಾಲಘಟ್ಟಕ್ಕೆ ಸೇರಿದ ಓದುಗರು ಅದನ್ನು ಹ್ಯಾಗೆ ಮುಖಾಮುಖಿ ಮಾಡುತ್ತಾರೆ. ಈ ಪ್ರಶ್ನೆ ಮತ್ತೆ ಮತ್ತೆ ಬರ್ತಾಯಿದೆ. ಭಂಡಾರಿ ಮತ್ತು ಶಿವಗಂಗಾ ಅವರು ರಿಯಾಕ್ಟ್ ಮಾಡಿದ ಎರಡು ವಿಧಾನನ ನಾನು ಗ್ರಹಿಸಿದ ರೀತಿ ಹೀಗೆ. ಭಂಡಾರಿಯವರು ಒಂದು ಚಾರಿತ್ರಿಕ ಇಕ್ಕಟ್ಟುಗಳು ಒಂದು ಕೃತಿಯನ್ನು ರೂಪಿಸುತ್ತಿವೆ ಮತ್ತು ಅದರ ಎಲ್ಲ ನಿರ್ಬಂಧ ಗಳು, ಬಂಧನಗಳು ಆ ಕೃತಿಯಲ್ಲಿ ಪ್ರತಿಫಲಿಸುತ್ತವೆ. ಅಂದರೆ A Text is product of  Historical ಫೆನಾಮನ್ ಅವೆರೆಡರ ನಡುವೆ ಒಂದು ಬಗೆಯ ಈಕ್ವೇಷನ್ ರೀತಿ ಮಾತಾಡಿದರು ಮತ್ತು ಅಂತಿಮವಾಗಿ ಒಂದು Textನ್ನು ಗ್ರಹಿಸಿದ ವಿಧಾನ ಹ್ಯಾಗಿತ್ತು ಅಂದರೆ ಪ್ರಭುತ್ವ, ಸಂಪತ್ತು ಅಥವಾ ರಾಜಕೀಯ ಕೇಂದ್ರಗಳು, ಶಕ್ತಿಕೇಂದ್ರಗಳು. ಇವೆಲ್ಲವೂ ಆ ಪಠ್ಯವನ್ನು ರೂಪಿಸಿವೆ ಮತ್ತು ಅದರಲ್ಲಿ ದೊಡ್ಡ ಬಿಡುಗಡೆಯ ಹಾದಿಯಲ್ಲಿ ಅದೊಂದು ನಿರ್ಬಂಧದ ಪಠ್ಯಅಂತ ನಿರ್ವಚನೆ ಮಾಡಿದರು. ಅಂದರೆ ಸಾಧ್ಯತೆಗಳ ಪಠ್ಯವನ್ನಾಗಿ ಅವರು ನೋಡಿದರೆ, ನಿರ್ಬಂಧಗಳ ಪಠ್ಯವಾಗಿ ಅವರು ನೋಡಿದರು. ನಂಗೆ ಬಹಳ ವಿಶೇಷ ಅನ್ನಿಸಿತು. ಇವೆರಡರ ನಡುವೆ ಯಾವುದಾದರೂ ಒಂದು ಹಾದಿ ಇದೆಯೊ ಅಂತ ಪಠ್ಯ ನೋಡೊದಕ್ಕೆ. ಯಾಕೆಂದರೆ ನಿಮ್ಮ ರೀಡಿಂಗ್ ಇದೆಯಲ್ಲ, ನಿಮ್ಮ ಇಂಟರ್‌ಪ್ರಿಟೇಷನ್ ಇದೆಯಲ್ಲ ಅದರಲ್ಲಿ ನನಗೆ ಒಂದು ಏನು ಆಫ್ ಕೊರ್ಸ್ ದೇರ್ ಆರ್ ನಂಬರ್ ಆಫ್ ಇನ್‌ಸೈಟ್ಸ್ ಇಫ್ ಯುಗೆ ಆದರೆ ಒಂದು ಪಠ್ಯ ಇದೆಯಲ್ಲ. ಆ ಪಠ್ಯವನ್ನು ನೋಡುವ ನಿಮ್ಮ ದೃಷ್ಟಿಕೋನ ಬಹಳ ಸಿಮೀತವಾದದ್ದು ಅಂತ ನನಗೆ ಅನ್ನಿಸ್ತಾಯಿದೆ. ಅಂದರೆ ಪಠ್ಯಕ್ಕೆ ಇರುವ ಸಾಧ್ಯತೆ ಗಳೆಲ್ಲಾ ಐಡಿಯಲಾಜಿಕಲ್ ಆದ ಈ ಲೋಕಗ್ರಹಿಕೆಯ ದೃಷ್ಟಿಕೋನಗಳಿಗೆ ಅವುಗಳಲ್ಲಿ ಒಂಥರ ಮುಚ್ಚಿ ಹೋಗುವ ಹಾಗೆ ನನಗೆ ಅನ್ನಿಸ್ತಾಯಿದೆ. ನಿಸ್ಸಂಶಯವಾಗಿ ನಿಮ್ಮ ಪೊಲಿಟಕಲ್ ಅನಾಲಿಸಿಸ್ ಈ ಲೋಕವನ್ನು ಅರ್ಥಮಾಡಿಕೊಳ್ಳೊದಕ್ಕೆ ಅದಕ್ಕೆ ಪ್ರತಿಯಾದ ರಾಜಕಾರಣ ಮಾಡೊದಕ್ಕೆ ಆ ರಾಜಕಾರಣನ ಅರ್ಥಮಾಡಿಕೊಳ್ಳದಕ್ಕೆ ಬಹಳ ಉಪಯುಕ್ತ ವಾದದ್ದು. ಅಂದರೆ ಪಠ್ಯಕ್ಕೆ ಬಂದರೆ ಸಾಹಿತ್ಯದ ಅಧ್ಯಾಪಕರಾದ ನೀವು ಅದನ್ನು ಬಹಳ ಸಿಮೀತವಾದ ನೆಲೆಯಲ್ಲಿ ನೋಡ್ತಾಯಿರುವಿರೇನೊ ಅಂತ ನನಗೊಂದು ಅನುಮಾನ ಬರ್ತಾಯಿದೆ. ನಾನು ಅವೆರಡರ ಉದಾಹರಣೆಗಳನ್ನು ಕೊಡುವುದರ ಮೂಲಕ ಅವುಗಳ ನಡುವೆ ಯಾವುದಾದರೂ ಹಾದಿ ಇರಬಹುದು ಅಂತ ಯೋಚನೆ ಮಾಡ್ತಾಯಿದ್ದೆ. ಅದು ಹ್ಯಾಗೆ ಅಂದರೆ ಸಂಪತ್ತಿನ ಪ್ರಶ್ನೆ ತಗೊಳ್ಳೊಣ. ಬಾಹುಬಲಿ ಮಸ್ತಾಭಿಷೇಕದಲ್ಲಿ ಬಹಳ ಇಂಟರೆಸ್ಟಿಂಗ್ ಅಂದರೆ ಒಂದು ಕೊಟಿ ಅದೆಷ್ಟೊ ಲಕ್ಷಕ್ಕೆ ಮೊದಲನೇ ಕುಂಬ ಮಾರಾಟ ವಾಗಿದ್ದು, ಆ ಮೊದಲು ರಾಜಸ್ಥಾನದ ಯಾರೊ ಒಬ್ಬ ಮಾರವಾಡಿ ತಗೊಂಡ. ನನಗೆ ಯಾವತ್ತು ಜೈನ ಪಠ್ಯಗಳನ್ನು ಅನುಸಂಧಾನ ಮಾಡುವಾಗ, ಈ ಹದಿಮೂರು ಪಠ್ಯಗಳಲ್ಲಿ ನಾಲ್ಕೋ, ಐದೊ ಮಾಡಿದೀವಿ ಇದನ್ನು ಬಗೆಹರಿಸಿಕೊಳ್ಳಲಿಕ್ಕೆ ಆಗಿಲ್ಲ. ನಮಗೆ ಅದೇನು ಅಂದರೆ ಈ ಲೋಕಕ್ಕೆ ಸಂಬಂಧಿಸಿದಂತಹ ಎಲ್ಲ ಪ್ರಾಪಂಚಿಕ ಸಂಗತಿಗಳನ್ನು ನಿರಾಕರಿಸುವ, ತ್ಯಾಗಮಾಡುವ ಅದನ್ನು ದೊಡ್ಡ ಮೌಲ್ಯವಾಗಿ ಮಂಡಿಸುವ ಈ ಧರ್ಮದಲ್ಲಿ ಅರ್ಥವಿದೆ ಯಲ್ಲ, ಹಣವಿದೆಯಲ್ಲ ಯಾಕೆ ಇಷ್ಟು ಡಾಮಿನೇಟಾಗಿದೆ? ಆ ಬಾಹುಬಲಿ ಮತ್ತು ಒಂದು ಕೋಟಿ ರೂಪಾಯಿ ಕೊಟ್ಟು ಕುಂಬ ತಗೊಂಡ ಎಕ್ಸಾಮ್‌ಪಲ್ಸ್ ಎರಡನ್ನೂ ಇಟ್ಟು ನೋಡಿದರೆ ಅಣ್ಣ ಹೆಂಗೆ ನನ್ನ ಅಭಿಮಾನವನ್ನ ಪ್ರಶ್ನಿಸಿ ರಾಜ್ಯ ಕೇಳ್ತೀದಾನೆ ಅಂತ ರಾಜ್ಯಬಿಟ್ಟು ಹೋಗ್ತಾನೆ ಅಂತ ಒಂದು ವಿರಕ್ತಮೂರ್ತಿ ಎದುರುಗಡೆ ತನ್ನ ಭಕ್ತನು ಒಂದು ಕೋಟಿ ಅದೆಷ್ಟು ಲಕ್ಷಕ್ಕೆ ಕುಂಬ ಕೊಂಡುಕೊಳ್ಳೊ ಒಬ್ಬ ಮಾರ್ವಾಡಿ ಮೊದಲೇ ಕುಂಬವನ್ನು ಸುರಿತಾನೆ. ಇದನ್ನು ನಾನು ಬಹಳ ನೈತಿಕವಾಗಿ ನೋಡೊದಕ್ಕೆ ಇಷ್ಟಪಡೋದಿಲ್ಲ. ಚರಿತ್ರೆ ಯಲ್ಲಿ ಧರ್ಮ ಸಂಪತ್ತಿನ ಜೊತೆಗೆ ವಿರಕ್ತ ಹೋಗೋದರ ಜೊತೆಗೆ ಇವೆರಡು  ಮುಖಾಮುಖಿ ಯಾಗುವಂತೆ ಒಂದು ವಿಚಿತ್ರವಾದ ಲಕ್ಷಣ ಎಲ್ಲ ಧರ್ಮಗಳಲ್ಲೂ ಇದೆ. ಅದನ್ನು ನಾನು ಹೀಗೆ ವಿವರಿಸಲಿಕ್ಕೆ ಪ್ರಯತ್ನ ಪಡ್ತೀನಿ. ನಿಜವಾಗ್ಲೂ ನಾನು ಪ್ರತಿ ಧರ್ಮಕ್ಕೆ ಅದರದೊಂದು ಲೋಕದೃಷ್ಟಿಯಿರ್ತದೆ. ಅದನ್ನು ಥಿಯೋಲಜಿ ಅಂತ ಕರೀಬಹುದು. ಫಿಲಾಸಫಿ ಅಂತ ಕರೀಬಹುದು, ಪ್ರತಿಧರ್ಮಕ್ಕೆ ಒಂದು ಸಮಾಜಶಾಸ್ತ್ರ ಕೂಡ ಇರ್ತದೆ. ಅದಕ್ಕೊಂದು ಅರ್ಥಶಾಸ್ತ್ರ ಕೂಡ ಇರ್ತದೆ. ನಯಸೇನನ ಕತೆಗಳಲ್ಲಿ ಅಥವಾ ವಡ್ಡಾರಾಧನೆ ಕತೆಗಳಲ್ಲಿ ಬರೀ ಥಿಯೋಲಜಿ ಅಥವಾ ಧರ್ಮಶಾಸ್ತ್ರ ಅಷ್ಟೇ ತಕ್ಕೊಂಡರೆ ಜೈನಧರ್ಮ Fine ಲೋಕದ ವಿರಕ್ತಿಗಳನ್ನೆ ಹೇಳ್ತಾಯಿದೆ. ಇನ್ನು ಪ್ರಾಕ್ಟೀಸ್ ಅದು ಸಂಪತ್ತಿನ ಪರವಾಗಿದೆ. ಸಂಪತ್ತು ವ್ಯವಸ್ಥಿತವಾಗಿ ಮಕ್ಕಳಿಗೆ ಟ್ರಾನ್ಸ್‌ಫರಾಗಿ ಹೋಗುವಂತ ಒಂದು ಇದನ್ನು ಹೇಳ್ತಾಯಿದೆ.

ಸಮಾಜಶಾಸ್ತ್ರ ಅಂತ ಅಂದರೆ ಭಾರತದ ಜಾತಿ ವ್ಯವಸ್ಥೆನ ಸಂಪೂರ‍್ಣವಾಗಿ ಒಪ್ಪಿಕೊಂಡಿದೆ. ಯಾಕೆ ಕೆಳಜಾತಿಗಳನ್ನು ಪ್ರಮೋಟ್ ಮಾಡಲ್ಲ ಮತಾಂತರಕ್ಕೆ ಅನ್ನೊ ಪ್ರಶ್ನೆಗಳನ್ನು ಎತ್ತಿದ್ದರು. ಅಂದರೆ ಬಹಳ ದೊಡ್ಡ ಮೌಲ್ಯಗಳಿಂದ ಕೂಡಿದಂತಹ ಒಂದು ಫಿಲಾಸಫಿ ಕಾಣುತ್ತದೆ. ಅದಕ್ಕೆ ಇನ್ ಪ್ರಾಕ್ಟೀಸ್ ಆದರೆ ಪೊಲಿಟಿಕ್ಸ್ ಏನಿದೆ ಪ್ರಭುತ್ವದ ಅದರೆ ತಿಳುವಳಿಕೆ, ಅರ್ಥಶಾಸ್ತ್ರದ ಅದರ ಗ್ರಹಿಕೆ ಸಮಾಜಶಾಸ್ತ್ರದ ಅದರ ಪ್ರಾಕ್ಟೀಸ್ ಇವು ಬೇರೆ ಇದ್ದವು. ಇವೆರಡು ಕೂಡೇ ಇರುತ್ತವೆ. This is a problem ಪ್ರಾಕ್ಟೀಸ್‌ನಲ್ಲಿ ಇವೆರಡು ಕೂಡೇ ಇರುತ್ತವೆ.  ಪಠ್ಯಕೂಡ ಹಾಗೇ ಇರ್ತದೆ ಅಂತ ನನಗೆ ಅನ್ನಿಸುತ್ತದೆ. ಅದಕ್ಕೆ ನಿನ್ನೆ ನಾನು ಒಂದು ಚರಿತ್ರೆಯನ್ನು ಕೃತಿ ಪ್ರತಿರೂಪಿಸುತ್ತದೆ ಅನ್ನೊ ವಾದಕ್ಕೆ ಯಾಕೆ ಆತಂಕ ಆಯ್ತು ಅಂದರೆ, ಒಂದು ಕೃತಿಯ ರಚನೆಯ ಕಾಲದಲ್ಲಿ ವರ್ತಮಾನವನ್ನು ಅಂತ ಒಂದು ದೊಡ್ಡ ಕೃತಿ ಒಳಗೊಳ್ತಾಯಿರ್ತದೆ. ಚರಿತ್ರೆಯನ್ನು ಆವಾಹನ ಮಾಡ್ತಾಯಿರ್ತದೆ. ಇವೆರೆಡು ಅಲ್ಲದೆ ಒಂದು ಭವಿಷ್ಯತ್ ಕಾಲವನ್ನು ಅದು ತನ್ನೊಳಗಡೆಗೆ ತರುತ್ತದೆ. ಅದನ್ನು ಪೊಲಿಮಿಕ್ಸ್ ಅಂತ ಹೇಳೋದಿಕ್ಕೆ ಟ್ರೈಮಾಡಿದೆ. ಪೊಲಮಿಕ್ಸ್ ಅಂತ ಪದ ಬಳಸಿದೆ. ಹಾಗೆ ಈ ಪಠ್ಯಗಳು ಒಂದು ಪೊಲಮಿಕ್ಸ್ ಅಂತ ನೋಡೋಕೆ ಶುರು ಮಾಡಿದರೆ ಹ್ಯಾಗಿರುತ್ತದೆ ಅಂತ ಅಂದರೆ ಏಕಕಾಲಕ್ಕೆ ಶಿವಗಂಗರವರು ಹೇಳುವಂತೆ ಬಿಡುಗಡೆಯ ಸಾಧ್ಯತೆಯನ್ನು ಒಳಗೊಂಡಿದೆ ಮತ್ತು ಭಂಡಾರಿಯವರು ಹೇಳಿದ ಹಾಗೆ ನಿರ್ಬಂಧ ಸಾಧ್ಯತೆಯನ್ನು ಒಳಗೊಂಡಿದೆ. ಎರಡು ಒಂದರ ಒಳಗೆ ಒಂದು ಇವೆ. ಎರಡೂ ಒಂದರೊಳಗಿವೆ. ನಿಮ್ಮ ಅನಾಲಿಸಿಸ್ ಹೇಳಿದ ಯಾವುದು ಒಂದು ದೃಷ್ಟಿಕೋನಾನ ಹಿಡಿದುಕೊಂಡು ಹೋದರೆ ಅದೇ ಸಿಕ್ಕುಬಿಡುತ್ತೆ. Textಲ್ಲಿ ಅಂತ ಆ ಬಿಡುಗಡೆಯ ಸಾಧ್ಯತೆಗಳನ್ನು ಹುಡುಕುತ್ತಾ ಹೋದರೆ, ಕುವೆಂಪು ಕಾದಂಬರಿಗಳಲ್ಲೂ ಸಿಕ್ಕುತ್ತೆ, ನಯಸೇನನಲ್ಲೂ ಸಿಕ್ಕುತ್ತೆ. ಇಲ್ಲ ಇದು ನಿರ್ಬಂಧಗಳನ್ನು ಒಳಗೊಂಡಿದೆ. ಇದರಲ್ಲಿ ಸಾಧ್ಯತೆಗಳು ಕಡಿಮೆ ಅಂತ ಹೇಳ್ತಾ ಅದು ಒಂದು ಬಗೆಯ ಪ್ರಭುತ್ವದ ಎಲ್ಲ ಶಕ್ತಿ ಕೇಂದ್ರಗಳು ನೆರಳುಗಳನ್ನು ಒಳಗೊಂಡಿರುವ ಹಾಗೆ ಕಾಣುತ್ತೆ. ಅಂದರೆ ನನಗನ್ನಿಸೋದು ಒಂದು ದೊಡ್ಡ ಪಠ್ಯ ಇವೆರಡು ವೈರುಧ್ಯಗಳನ್ನು ಒಳಗೊಂಡಿ ರುತ್ತದೆ. ಈ ವೈರುಧ್ಯಗಳನ್ನು ಬಿಡಿಸಿ ನೋಡಬೇಕಾಗಿಲ್ಲ ಅಂತ. ಎಲ್ಲೆಲ್ಲಿ ಕೆಳವರ್ಗದ ಪಾತ್ರಗಳು ಬರ್ತವೆ. ಮಕ್ಕಳು ಬರುತ್ತಾರೆ. ಹೆಂಗಸರು ಬರುತ್ತಾರೆ. ವೇಶ್ಯೆಯರು ಬರ್ತಾರೆ ಅಲ್ಲೆಲ್ಲ ಆಂಟಿ ಎಸ್ಟಾಬ್ಲಿಶ್‌ಮೆಂಟ್ ಆದಂತಹ ಒಂದು ನಿಲುವು ಕೃತಿಗಳಲ್ಲಿ ಹೆಚ್ಚು ವ್ಯಕ್ತವಾಗುತ್ತದೆ. ಎಲ್ಲೆಲ್ಲಿ ಪುರುಷರು ಬರುತ್ತಾರೆ ದೊರೆಗಳು ಬರ್ತಾರೆ, ಮುನಿಗಳು ಬರುತ್ತಾರೆ ಅಲ್ಲೆಲ್ಲಾ ಹೆಚ್ಚು ಪ್ರೊಎಸ್ಟಾಬ್ಲಿಶ್‌ಮೆಂಟ್ ಆದ ಇವುಗಳು ಬರ್ತವೆ. The quation is ಯಾವ ಕತೆಗಾರ ಅಂದರೆ ಪ್ರತಿ ಕಾಲದ ಒಬ್ಬ ಲೇಖಕ ಕೂಡ ಇಂತಹ ಕಾಂಟ್ರಡಿಕ್ಷನ್ ಒಳಗಡೇನೆ ಕೃತಿರಚನೆ ಮಾಡ್ತಾನೆ. ಈ ವೈರುಧ್ಯಗಳ ಬಗ್ಗೆ ನೀವು ಹೇಳಿ, ಕುವೆಂಪು ಕೂಡ ಅಂತಹ ವೈರುಧ್ಯದ ಒಳಗಡನೇ ಮಲೆಗಳಲ್ಲಿ ಮದುಮಗಳು ಕಟ್ಟಿದ್ದಾರೆ. ಅದರಲ್ಲಿ ಬಿ. ಕೃಷ್ಣಪ್ಪ ಅವರು ಎತ್ತಿದ ಪ್ರಶ್ನೆನ ಎತ್ತಬಹುದು. ಇದೆ ಉಳಿದವರು ಎತ್ತೊ ಪ್ರಶ್ನೆನೂ ಇದೆ. The quation is ಯಾವ ಬಿಡುಗಡೆಯ ಸಾಧ್ಯತೆಗಳಿಗೆ ಈ ಸಾಧ್ಯತೆಗಳಿಗೆ ಎಷ್ಟು Space ಕ್ರಿಯೇಟ್ ಮಾಡಿದೆ ಕೃತಿ, ನಿರ್ಬಂಧಗಳ ಅಭಿವ್ಯಕ್ತಿಗೆ ಎಷ್ಟು Space ಕ್ರಿಯೇಟ್ ಮಾಡಿದೆ. I Think ಪುಟ್ಟಯ್ಯನವರು ಈ ಪ್ರಶ್ನೇನ ಬಹಳ ಗಂಭೀರವಾಗಿ ಕೇಳ್ತಾಯಿದ್ದರು. ವಿನ್ಯಾಸ ಇದೆಯಲ್ಲ, ಕೃತಿ ವಿನ್ಯಾಸ ಇದೆಯಲ್ಲ ಯಾವುದು ಎಷ್ಟು Spaceನ್ನು ಕ್ರಿಯೇಟಿವ್ ಮಾಡಿದೆ ಅಂತ. ಅದು ಬಹಳ ಮುಖ್ಯ ಅಂತ ನನಗೆ ಅನ್ನಿಸುತ್ತೆ. ಆದ್ದರಿಂದ ಒಂದು ಕೃತಿ ಇವೆರೆಡು ಆಯಾಮಗಳನ್ನು ಒಳಗೊಂಡಿರುತ್ತದೆ. ಅದು ಎಲ್ಲ ಕಾಲದ ಚಾರಿತ್ರಿಕ ಒತ್ತಡಗಳ ಒಳಗೆ ಹುಟ್ಟುವ ಕೃತಿಗಳು, ಈ ಎರಡೂ ಆಯಾಮಗಳನ್ನು ಒಳಗೊಂಡಿರುತ್ತದೆ. ಅವು ಅಂತಿಮವಾಗಿ ಒಂದು ವೈರುಧ್ಯ, ಕಾಂಟ್ರಡಿಕ್ಷನ್‌ಗಳನ್ನು ಒಳಗೊಂಡಿರುತ್ತದೆ. ಆ ವೈರುಧ್ಯ ಗಳನ್ನಿಟ್ಟುಕೊಂಡ, ಅದರೊಳಗೆನೇ ಒಂದು ಕೃತಿಯ ಹುಡುಕಬೇಕೇನೊ ಅಂತ ನನಗೆ ಅನ್ನಿಸ್ತದೆ. ಆದರೆ ನಿಮ್ಮ ಒಟ್ಟು ವಿವರಣೆಯಲ್ಲಿ ಚರಿತ್ರೆಯ ಅಧಿಕಾರಸ್ಥ ಶಕ್ತಿಗಳು ಒಂದು ಕೃತಿಯನ್ನು ರೂಪಿಸುತ್ತವೆ ಎಂಬಂತಹ ಗ್ರಹಿಕೆ ನನಗೆ ಕೇಳಿಸ್ತು ಬಹಳ ಸಿಮೀತ ಅಂತ ನನಗೆ ಅನ್ನಿಸಿತು.

ಲಕ್ಷ್ಮೀನಾರಾಯಣ

ಬಹಳ ಬ್ರೀಫ್ ಆಗಿ ಹೇಳಿಬಡ್ತಿನಿ. ನಿನ್ನೆ ನುಗಡೋಣಿಯವರು. ಮೊಗಳ್ಳಿ ಗಣೇಶರು ಒಂದು ಜಂಟಿ ಸಮರ್ಥನೆಯನ್ನು ಮಾಡಿದರು. ಅದರ ಬಗ್ಗೆ ನನ್ನ ಪ್ರತಿಕ್ರಿಯೆ ಇಷ್ಟೇನೆ. ಒಂದು ಪಠ್ಯಕ್ಕೂ ಇನ್ನೊಂದು ಪಠ್ಯಕ್ಕೂ ವ್ಯತ್ಯಾಸ ಇಲ್ಲದ ಹಾಗೆ ನಮ್ಮ ರೀಡಿಂಗ್ ಇದೆ ಅಂತಾದ್ರೆ ಅಂತ ರೀಡಿಂಗ್ ಬೇಕೆ, ಬೇಡವೆ ಅನ್ನೊದು. ಎರಡನೇ ಪ್ರಶ್ನೆ ಏನು ಕೊಟ್ಟರುನೂ ನಮ್ಮ ರೀಡಿಂಗ್ ಹೀಗೆ ಇರುತ್ತೆ ಅಂದರೆ ನಮ್ಮ ರೀಡಿಂಗಲ್ಲಿ ಏನಾದರೂ ತೊಂದರೆ ಯಿದೆಯಾ ಅಂತ ನಾನು ಎತ್ತಿದ ಪ್ರಶ್ನೆ. ಆ ಎರಡನೆ ಅಂಶ ನೆಸಸಿಟಿಗೆ ಬರ್ತೀನಿ ಇವರು ಹೇಳಿದ ನೆಸಸಿಟಿಗೆ ಬರ್ತೀನಿ. ನೆಸಸಿಟಿ ಅಂತ ಅಂದಾಗ ತಕ್ಷಣ ನಾವು ತರೀಕೆರೆ ಅವರು ಎತ್ತಿದಂತ ಪ್ರಶ್ನೆಗೆ ಡೈರಕ್ಟಾಗಿ ಹೊರಟು ಹೊಗ್ತೀವಿ. ಈಗ ಸೀಮಿತವಾಗಿರೊ ಒಂದು ದೃಷ್ಟಿ ಮತ್ತು ಎಲ್ಲ ಪಠ್ಯಕ್ಕೂ ಒಂದೇ ರೀತಿಯಾಗಿರುವಂತ ಸದುದ್ದೇಶದ ಒಂದು ದೃಷ್ಟಿ ಎರಡಕ್ಕೂ ಸಮಾನವಾಗಿರುವ ತೊಂದರೆಗಳಿವೆಯೇ? ಅಂತ. ಇನ್ನು ಯಾರಾದರೂ ಪ್ರಶ್ನೆ ತೆಗೆಯ ಬಹುದು. ಬಹುಶಃ ಎಲ್ಲ ಪಠ್ಯಕ್ಕೂ ಸಮಾನವಾಗಿರುವ ರೀಡಿಂಗ್ ಇರೊವಂತ ಒಂದು ದೃಷ್ಟಿ ಇವೆರಡಕ್ಕೂ ಒಂದು ದೃಷ್ಟಿ, ಮತ್ತೆ ಸಿಮೀತವಾಗಿರುವಂತ ಒಂದು ರೀಡಿಂಗ್‌ನ ದೃಷ್ಟಿ ಇವೆರಡಕ್ಕೂ ಒಂದು ಸದುದ್ದೇಶಯಿದೆ. ಯಾರು ಈ ಉದ್ದೇಶದ ಪ್ರಶ್ನೆ ಮಾಡ್ಲಿಕ್ಕೆ ಹೋಗಲ್ಲ. ಆ ಸದುದ್ದೇಶನ ಇಟ್ಟುಕೊಂಡು ಮೂರನೇ ಪ್ರಶ್ನೇನಾ ತೆಗಿಬಹುದು. ಈಗ ವಾಪಸ್ಸು ಇದಕ್ಕೆ ಬರ್ತೀನಿ. ಒಂದು ಕಾಲದಲ್ಲಿ ನಮ್ಮ ಸಂಸ್ಕೃತ ಪಂಡಿತರು ಈ ಕೆಲಸನಾ ಮಾಡ್ತಾಯಿದ್ದರು, ಏನೇ ಕೊಡಿ, ಅದಕ್ಕೊಂದು ಆಧ್ಯಾತ್ಮಿಕವಾದ ವಿವರಣೆ ಈಗಲೂ ಮಾಡುತ್ತಾರೆ. ನಮ್ಮಲ್ಲಿ ಬೆಳಿಗಿನ ಹೊತ್ತು ರೇಡಿಯೊದಲ್ಲಿ ಮಾತನಾಡೊ ತುಂಬ ಜನ ಅವರ ಕೈಗೆ ಏನನ್ನ ಕೊಡಿ, ಪೂರಕೆ ಅಂತ ಕೊಡ್ರಿ, ಗೋಣಿಚೀಲ ಅಂತ ಕೊಡಿ. ಬುದ್ಧ ಅಂತ ಕೊಡಿ. ಅವರು ಎಲ್ಲದಕ್ಕೂ ಒಂದು ಅಧ್ಯಾತ್ಮಿಕವಾಗಿರೊ ಅರ್ಥ ವಿನ್ಯಾಸನ ನಮ್ಮ ಕಣ್ಣ ಮುಂದೆ ಇಡುತ್ತಾರೆ. ಹೌದು ಅಂತಲೇ ಅನ್ನಿಸುತ್ತೆ. ನಿಮ್ಮ ಉದ್ದೇಶ ಅದೇ ಆಗಿದ್ದರೆ ಏನು ತೊಂದರೆಯಿಲ್ಲ. ನನ್ನ ಪ್ರಶ್ನೆ ನಿಮ್ಮ ಉದ್ದೇಶದ ಬಗ್ಗೆ ಅಲ್ವೇ ಅಲ್ಲ. ಅಂತ ರೀಡಿಂಗ್‌ನಿಂದ Textನ ಅರ್ಥಮಾಡಿಕೊಳ್ಳಲಿಕ್ಕೆ ತೊಂದರೆ ಆಗಲ್ಲವೇ, ಎರಡನೆಯದು ಈ ಸಿಮೀತವಾಗಿರುವಂತ ಅನ್ನೊದಕ್ಕಿಂತ ನಾನು ಅದನ್ನು ಸಾರಸಂಗ್ರಹವಾಗಿ ಅಂತ ಹೇಳ್ತೀನಿ. ಸಿಮೀತ ಅನ್ನೊದು ಒಂದು ರೀತಿ ನೋಡೊದು ಹೌದು. ನಾನು ಈ ಸಾರಸಂಗ್ರಹವಾಗಿ ನೋಡುವಂತ ದೃಷ್ಟೀಲಿ ಎಷ್ಟೋ ವಿವರಗಳು ಎಷ್ಟೋ ಸಂಕೀರ್ಣತೆಗಳು ಗುಡಿಸಿಹೋಗಿ ಬಿಡ್ತವೆ. ಅಲ್ಲ ನನ್ನ ಮುಖ್ಯವಾದ ಪ್ರಶ್ನೆ ಏನೆಂದರೆ ಸಾವಿರ ವರ್ಷದ ಹಿಂದೆ ಬರೆದಂತಹ ಒಂದು ಕೃತಿನಾ ನಾವು ಇವತ್ತು ಚರ್ಚೆಗೆ ಕೈಗೆ ತೊಗಂಡಿದ್ದೀವಿ. ಇವತ್ತಿನ ಸಂದರ್ಭ ಹೇಗಿದೆ? ಇವತ್ತಿನ ತುರ್ತುಗಳೇನು? ಇವತ್ತಿನ ಒತ್ತಡಗಳೇನು? ಇವತ್ತು ಶಕ್ತಿರಾಜಕಾರಣ ಎಲ್ಲಾ ಕಾಲದಲ್ಲೂ ಒಂದಲ್ಲ ಒಂದು ತರಹದಲ್ಲಿ ಬಂದಿದೆ. But ಇವತ್ತಿನ ಶಕ್ತಿರಾಜಕಾರಣಕ್ಕೆ ವಿಶೇಷವಾಗಿರೋವಂತ ಚರಿತ್ರೆಯಲ್ಲಿ ಹಿಂದೆಂದೂ ಇರದಂತಹ ಶಕ್ತಿ ಮತ್ತು ಸಾಮರ್ಥ್ಯಗಳು ಒದಗಿಬಂದಿವೆ. ಈ ಸಂದರ್ಭದಲ್ಲಿ ನಮ್ಮ ಸಾಮರ್ಥ್ಯ ಏನೆಂದರೆ ನಮ್ಮ ಒಟ್ಟು ಗುರಿ ಶಕ್ತಿರಾಜಕಾರಣ ಮತ್ತು ವಾಣಿಜ್ಯೋದ್ಯಮದ ಮೂಲಕ ಪ್ರತಿಯೊಂದು ಒಂದು ಹುಲ್ಲು ಕಡ್ಡಿಯನ್ನು ನಿಯಂತ್ರಿಸೊ ಸಾಮರ್ಥ್ಯನ ಪಡೆದುಕೊಂಡಿರೊ ಈ ಕಾಲದಲ್ಲಿ ನಮ್ಮ ಸೂಕ್ಷ್ಮಗಳಿವೆಯಲ್ಲ ಅವು ಒಂದು ಕಡೆ ಒಳ್ಳೇ ರೀತಿಲಿ ಒಂದು ಕಾಲನಾ ಕಳಿಲಿಕ್ಕೆ ಬೇಕಾಗಿರೊ ವಂತಹ ಒಂದು ಏರ್ಪಾಡಾಗಿ, ಮಾರ್ಪಾಡಾಗಬಹುದು. ಜೊತೆಗೆ ಯಾವ ಮುಖ್ಯ ಪ್ರಶ್ನೆಗಳನ್ನು ಪ್ರೆಂಟ್‌ಲ್ಲಾಗಿ ಗುರಿಯಿಟ್ಟು ಖಚಿತವಾಗಿ ಎತ್ತಬೇಕೊ ಆ ಪ್ರಶ್ನೆಗಳ ಜಾಗದಲ್ಲಿ ಈ ಸೂಕ್ಷ್ಮಗಳು ಬಂದು ಕುಳಿತುಕೊಳ್ಳುತ್ತವೆ. ಹಾಗಾಗಿ ನಮ್ಮ ಒಟ್ಟು ಉದ್ದೇಶ ಅದು ಧರ್ಮದ ಉದ್ದೇಶ ಮಾನವ ಕಲ್ಯಾಣ. ನಮ್ಮನ್ನು ಸೇರಿಸಿ ನಮ್ಮ ಉದ್ದೇಶ ಎಲ್ಲಮನುಷ್ಯರು ಒಂದು ರೀತಿ ಬದಕನ್ನು ಬದುಕಲೀ ಅನ್ನೊ ಇಡೀ ಪ್ರಪಂಚ ಸುಖವಾಗಿರಲಿ ಅನ್ನೊ ಆಶಯ ಇಟ್ಟುಕೊಂಡು, ಇದಕ್ಕೆ ತದ್ವಿರುದ್ಧವಾದ ಆಸೆಗಳನ್ನು ಇಟ್ಟುಕೊಂಡಂತಹ ಶಕ್ತಿಗಳು ನಮ್ಮನ್ನ ಎಲ್ಲ ಮೂಲೆಯಿಂದಲೂ ನಿಯಂತ್ರಿಸುತ್ತಿದ್ದಾಗ ನಾವು ಇಡೀ ಸಮಾನವಾಗಿರುವಂತ, ಸುಖೀ ಸಮಾಜದಲ್ಲಿ ರಹಮತ್ ತರೀಕೆರೆ ಅವರು ಸಲಹೆ ಮಾಡೋವಂತ ಅಥವಾ ಸರಿ ಅಂತ ಹೇಳುವಂತ ಒಂದು ಸೂಕ್ಷ್ಮದಾರೀನ ಸಾಹಿತ್ಯ ಆಸ್ವಾದನೆ ಅಥವಾ ಯಾವುದೇ ಕಲಾ ಪ್ರಕಾರನ ನಾವು ಅರ್ಥಮಾಡಿಕೊಳ್ಳಲಿಕ್ಕೆ, ಅರ್ಥೈಸಲಿಕ್ಕೆ ನಮ್ಮ ಜೀವನದ ಸಂದರ್ಭದಲ್ಲಿ ಮಾಡೋದರ ಬಗ್ಗೆ ನನ್ನ ಯಾವ ತಕರಾರು ಇಲ್ಲ. ನಾನು ಅದರ ಬಗ್ಗೆ ಕುರುಡಾಗಿಲ್ಲ. ಆದರೆ ವರ್ತಮಾನ ಇದೆಯಲ್ಲ ಮುಖಾಮುಖಿ ಅನ್ನೊದರ ಕಡೆ ನಾನು ಹೆಚ್ಚು ಒತ್ತುಕೊಟ್ಟೀನಿ, ತುಂಬಾ ಒತ್ತು ಕೊಟ್ಟಿದ್ದೀನಿ. ಈ ಮುಖಾಮುಖಿ ಅಂದ ತಕ್ಷಣ ನಾವು ಇವತ್ತಿನ ನೆಲೆಗೆ ಬರಲೇಬೇಕು. ಇವತ್ತಿನ ನೆಲೆಗೆ ಬಂದ ತಕ್ಷಣ ಈ ಎಷ್ಟೋ ಸೂಕ್ಷ್ಮಗಳನ್ನು ನಾವು ಬದಿಗಿಟ್ಟು ಅದಕ್ಕಿಂತ ಹೆಚ್ಚು ಸೂಕ್ಷ್ಮವಾಗಿ ನಮ್ಮನ್ನು ನಿಯಂತ್ರಿಸತಕ್ಕಂತ ಕೆಲವು ಖಚಿತ ಉದ್ದೇಶದ ನಿಲುವುಗಳ ಬಗ್ಗೆ ನಾವು ಅದಕ್ಕೆ ನಾನು ಲೌಡಾಗಿ, ಒರಟಾಗಿ ಅನ್ನೊದಕ್ಕಿಂತ ಬಹಳ ಗಟ್ಟಿಯಾದ ನಿಲುವು ಗಳ ಬಗ್ಗೆ ಯೋಚನೆ ಮಾಡಬೇಕಾಗುತ್ತೆ. ಅದು ಇವತ್ತಿನ ಅಗತ್ಯ ಅಂತ ನಂಬಿದ್ದೀನಿ. ಅದು ಸಂದರ್ಭ ಬಂದಾಗ ನಾನು ಯಾವ ಸಂಕೋಚನು ಇಲ್ಲದೆ ನಾನೇನು ಕಳೆಕೊಳ್ಳುತ್ತಿರ್ತೀನಿ, ನಾನು ಏನನ್ನ ಪಕ್ಕಕ್ಕಿಡ್ತಾಯಿದ್ದೀನಿ ಅನ್ನೊ ಅರಿವು ಇಟ್ಟುಕೊಂಡೆ ಮಾಡ್ತಾ ಇದ್ದೀನಿ. ಈ ಭಾಗನ ನಾನು ಹೇಳಿದಾಗ ಮಾತ್ರ ಅನ್ನೊಕ್ಕಿಂತ ಹೆಚ್ಚಾಗಿ ಸಮಾನ ಧರ್ಮ, ಸಮಾನ ಉದ್ದೇಶ, ಸಮಾನವಾಗಿರೊವಂತ ನೆಲೆಯಿದ್ದಾಗ ಅದನ್ನು ಹೇಳಬೇಕಾಗಿಲ್ಲ ಅಂತ ಬಹು ಅಗತ್ಯಬಿದ್ದಾಗ ಹೇಳಬೇಕಾಗುತ್ತೆ ಹೇಳ್ತೀನಿ. OK.

ಮೊಗಳ್ಳಿ ಗಣೇಶ್

ಓದೋದು ಕಾಲಕ್ಷೇಪಕ್ಕಾಗಿ ಅಲ್ಲ, ಕರ್ಮಕಳಕೊಳ್ಳದಕ್ಕೆ ಅಲ್ಲ, ಪುರಾಣ ಕೇಳಿದರೆ ಪುಣ್ಯಬರುತ್ತದೆ. ಈ ರೀತಿ ಆ ಕ್ರಮದಿಂದ ನಾವು ಯಾವತ್ತು ಓದ್ತಾಯಿಲ್ಲ. ಆಮೇಲೆ ಓದ್ತಾಯಿರೋದು ವ್ಯಕ್ತಿ ಅಲ್ಲ. ನಾನು ಒಬ್ಬನೇ ಓದಿಕೊಳ್ತಾಯಿಲ್ಲ. ನಾನು ಅನ್ನೋದು ಇಲ್ಲಿ ನನಗೆ ಮುಖ್ಯ ಅಲ್ಲ. ನಾವು ಓದ್ತಾಯಿದ್ದೀವಿ ಒಂದು ಕೃತಿಯನ್ನು ನಾನು ಓದ್ತೀನಿ ಅಂದರೆ ನನ್ನ ಬೆನ್ನ ಹಿಂದೆ ನನ್ನ ಸಮುದಾಯವೇ ನಿಂತಿರುತ್ತೆ ಅಥವಾ ನನ್ನ ಸಮಾಜದ ಅನೇಕ ಕಾಲಘಟ್ಟಗಳು ನನ್ನ ಜೊತೆಲೇ ಮಾತಾಡುತ್ತಿರುತ್ತವೆ. ಹಾಗಾಗಿ ಓದೋದು ಅಂದರೆ ನನ್ನ ಪ್ರಕಾರ ನನ್ನ ಇಡೀ ಕಾಲ ಮತ್ತು ನನ್ನ ಸಮಾಜ ಅಥವಾ ನನ್ನ ಸಮುದಾಯವನ್ನು ನಾನು ಬೆನ್ನಮೇಲೆ ಹಾಕಿಕೊಂಡು ನಾನು ಆ ಕೃತಿಯನ್ನು ನೋಡ್ತಾ ಇರ್ತ್ತೀನಿ, ಹಾಗಿದ್ದಾಗ ಅಂತ ಪ್ರವೇಶ ಮಾಡಿದಾಗ ನನಗೆ ನೆಸಸಿಟ ಅನ್ನೊದು ಬಹಳ ಮುಖ್ಯವಾಗುತ್ತದೆ. ನಮಗೆ ಏನು ಬೇಕು, ನಮ್ಮವರು ಎಲ್ಲಿದ್ದಾರೆ, ಈ ಎಲ್ಲ ಅನೇಕ ಪ್ರಶ್ನೆಗಳನ್ನು ಜೋಡಿಸಿಕೊಂಡು ನಾನು ಒಂದು ಕೃತಿಯನ್ನು ವ್ಯಷ್ಠಿಯಾಗಿ ಪ್ರವೇಶಮಾಡ್ತಾ ಸಮಷ್ಟಿಯಾಗಿ ಅದನ್ನು ಅನುಸಂಧಾನ ಯಾಕೆ ಅದರಲ್ಲಿ ಬೇರೆ ಬೇರೆ ಪ್ರತ್ಯೇಕವಾಗಿ ಪೊಲೊನೈಸ್ ಮಾಡಿಕೊಂಡು ನೋಡ್ತೀರಿ ಅನ್ನೊತರ ಅಲ್ಲ. ಹೀಗಾಗಿ ನನಗೆ ಓದೋದು ಒಂದು ರೀತಿನಲ್ಲಿ ನನಗೆ ಬಿಡುಗಡೆ ಮಾಡಿಕೊಳ್ಳೊದಿಕ್ಕಾಗಿ. ಇದನ್ನು ಓದ್ತಾಯಿದ್ದೀನಿ ಅಥವಾ ನಮ್ಮವರ ಬಿಡುಗಡೆಗಾಗಿ ಇದು ಉಪಯೋಗಕ್ಕೆ ಬರಬಹುದು. ಆ ಅರ್ಥದಲ್ಲಿ ಅಂಬೇಡ್ಕರ್ ಇಡೀ ಭಾರತೀಯ ಪುರಾಣ ಗಳನ್ನು ಭಾರತೀಯ ಧರ್ಮಗಳನ್ನು ಓದಿದ್ದು ವ್ಯಕ್ತಿಯಾಗಿ ಅಲ್ಲ. ಇಡೀ ಸಮುದಾಯವಾಗಿ ಓದಿದ್ದು. ಆ ಅರ್ಥದಲ್ಲಿ ಮಾರ್ಕ್ಸ್‌ವಾದಿಗಳು ಕೂಡ ಓದ್ತಾರೆ. ಅದಕ್ಕೆ ನೀವೇ ಸಾಕಷ್ಟು ಉದಾಹರಣೆಗಳನ್ನು ಕೊಡಬಲ್ಲಿರಿ. ಆದರೆ ನಮ್ಮ ಅಸ್ತಿತ್ವಕ್ಕಾಗಿ ನಾವು ಓದ್ತಾಯಿದ್ದೀವಿ ಹೊರತು ಇದನ್ನು ಕೇವಲ ನನ್ನ ವೈಯಕ್ತಿಕವಾದ ತುರ್ತಿಗಾಗಿ ಓದ್ತಾಯಿಲ್ಲ. ಅವಾಗ  ಕಾಲಕ್ಕೆ, ಈ ಸಮಾಜಕ್ಕೆ ಯಾವುದು ಆಗತ್ಯ, ಗತಕಾಲವನ್ನು ವರ್ತಮಾನದ ಮೂಲಕ ನೋಡೋದು ಅಲ್ಲಿ ಮುಖ್ಯವಾಗುತ್ತದೆ ಹೊರತು, ಕೇವಲ ಎಲ್ಲವನ್ನು ಒಂದೇ ಒಂದು ಕುದುರೆ ಕಣ್ಣುಪಟ್ಟಿಯಲ್ಲಿ ಮಾತ್ರವೇ ನೋಡಿದ ಹಾಗೆ ನೀವು ನೋಡ್ತೀರಿ ಅನ್ನೊ ರೀತಿಯಲ್ಲಿ ಹೇಳಿದ್ರೆ ಆ ಮಟ್ಟಿಗೆ ನಮ್ಮ ಬಿಡುಗಡೆಯ ಒತ್ತಡದಿಂದ ಹುಟ್ಟಿಕೊಳ್ಳುತ್ತಿರುವ ಈ ಬಗೆಯ ಪ್ರಶ್ನೆಗಳೆಲ್ಲವನ್ನು ನೀವು ತಪ್ಪಾಗಿ ವ್ಯಾಖ್ಯಾನ ಮಾಡಿದಂಗೆ ಆಗುತ್ತದೆ. ಹೀಗಾಗಿ ವರ್ತಮಾನ ದಿಂದ ಭವಿಷಕ್ಕಾಗಿ ನಾವು ಓದ್ತಾಯಿರ್ತೀವಿ. ಹಾಗೆಯೇ ನನ್ನ ಕಾಲದಿಂದ ಗತಕಾಲವನ್ನು ಅನುಸಂಧಾನ ಮಾಡುವುದಕ್ಕಾಗಿ ಓದ್ತಾಯಿರ್ತೀವಿ. So ಇದು ಬಹಳ ಮುಖ್ಯ. ಮುಖಾಮುಖಿ ಈ ಅರ್ಥದಲ್ಲಿ ನಾವು ಮಾಡ್ತಾಯಿದ್ದೀವಿ ಹೊರತು ಕೇವಲ ಏನನ್ನೂ ಕೊಟ್ಟರು ಕೂಡ ನಮ್ಮ ಒಂದು ಬೌದ್ದಿಕವಾದ ಕೀಟಲೆಯಿಂದ ನೋಡ್ತಾಯಿದ್ದೀವಿ ಅಂತ ಖಂಡಿತವಾಗಿ ಭಾವಿಸಬಾರದು. ಇದು ನನ್ನ ವಿನಂತಿ.

ರಾಜಪ್ಪ ದಳವಾಯಿ

ಲಕ್ಷ್ಮೀನಾರಾಯಣರು ಬೆಳಿಗ್ಗೆ ನೀವು ಮಾತಾಡಿದ್ದು ಅರ್ಧಕ್ಕೆ ಆಯ್ತು. ಬೆಳಗಿನ ಷೆಷನ್ಸ್ ನೀವು ಏನೇನು ಆಕ್ಷೇಪಗಳನ್ನು ಎತ್ತಿದಿರಿ ಅಥವಾ ರೀಡಿಂಗ್‌ನ ಭಿನ್ನತೆಯ ಬಗ್ಗೆ ಆಲೋಚಿಸಿದಿರಿ ಅದು ಸಾಧ್ಯ. ಅದು ಕಾಲದ ಮತ್ತು ನಿಂತ ನೆಲೆಯೂ ಮತ್ತು ಸಾಮಾಜಿಕ ಸಂದರ್ಭದ ಎಲ್ಲ ವಿಷಯಗಳ ಅಡಿಯಲ್ಲಿ ಕೂಡ ರೀಡಿಂಗ್ ಅನ್ನುವಂತದ್ದು ಒಂದೇ ಇರಲಿಕ್ಕೆ ಸಾಧ್ಯವಿಲ್ಲ ಇರಬೇಕಾಗಿಲ್ಲ. ಎರಡನೆದು ನೀವೇನು ಫಂಡಿಂಗ್ ಏಜೆನ್ಸಿಗಳ ಬಗ್ಗೆ ಮಾತನಾಡಿದಿರಿ ಆ ಫಂಡಿಂಗ್ ಏಜೇನ್ಸಿಗಳು ನಮ್ಮ ಬೌದ್ದಿಕ ವಲಯವನ್ನು ಹೇಗೆ ನಿರ್ಧರಿಸುತ್ತಾ ಇವೆ ಅಂತ ಹೇಳಿದಿರಿ ಅದು ಅನಿವಾರ್ಯ. ಅದು ಯಾವುದರಿಂದಲೂ ನಾವು ತಪ್ಪಿಸಿಕೊಳ್ಳಲಿಕ್ಕೆ ಆಗುವುದಿಲ್ಲ. ಯಾವ ಸಂದರ್ಭದಲ್ಲೂ ಕೂಡ ನಮ್ಮ ಆಲೋಚನಾ ಕ್ರಮಗಳ ಮೇಲೆ ಆ ಬಗೆಯ ಒತ್ತಡಗಳು ಇದ್ದೇ ಇರುತ್ತವೆ. ಅವುಗಳನ್ನು ಅಷ್ಟೊಂದು ಸೂಕ್ಷ್ಮವಾಗಿ ನೋಡಬೇಕೆ? ಅನ್ನೋದು ನನ್ನ ತಕರಾರು. ಏಕೆಂದರೆ ಸೂಕ್ಷ್ಮ ಅಥವಾ ಅತಿಸೂಕ್ಷ್ಮವಾದ ವಿಷಯಗಳ ಆಚೆಗಿನ ಕೆಲವು ವಿಷಯಗಳಾಗಿರುತ್ತವೆ. ಈಗ ನೀವು ಮಾನುಷ, ಅಮಾನುಷ ಎನ್ನುವುದನ್ನು ಕೆಟಗರೈಸ್ ಮಾಡಿದಿರಿ. So ಮನುಷ್ಯರೆಲ್ಲ ನೀವು ಹೇಳಿದಂಗೆ ಇರೋದಾಗಿದ್ದರೆ ಹಿಂಗೆ ಸಂದರ್ಭಗಳ ಮಾತಿಗೆ ಪ್ರಶ್ನೆ ಇರುತ್ತಿರಲಿಲ್ಲ. ಹೀಗೆ ಆಗಲ್ಲ ಅಂತ ನನಗೆ ಅನ್ಸುತ್ತೆ. ಆಮೇಲೆ ಪಕ್ಷಿಗಳನ್ನು, ಪ್ರಾಣಿಗಳನ್ನು ಮನುಷ್ಯ ವರ್ಗಗಳಾಗಿ ಗುರ್ತಿಸುವ ಎಷ್ಟೋ ಪ್ರಯತ್ನಗಳನ್ನು ಬೇರೆ ಬೇರೆ ಜನರು ಮಾಡಿದ್ದಾರೆ. ಬೇರೆ ಸಂದರ್ಭ ಗಳಲ್ಲಿ ನಾವು ನೋಡ್ತಾ ಇದ್ದೀವಿ. ಅದು ಅಲ್ಲದಿದ್ದರೆ, ನನ್ನ ತಪ್ಪಾದ ಗ್ರಹಿಕೆಯೆಂದರೆ ನಾನು ವಾಪಸ್ಸು ತಗಳ್ಳೊತ್ತೀನಿ ತೊಂದರೆಯಿಲ್ಲ. ನನ್ನ ಗ್ರಹಿಕೆ ಏನೆಂದರೆ ನೀವು ಯಾವುದನ್ನು ಹಾಗೆ ಕೈಟಗರೈಸ್ ಮಾಡ್ತೀರಿ ಅದರಲ್ಲೇ ತುಂಬ ಅಪಾಯಕಾರಿಯಾದಂತಹ ಅಂಶಗಳಿ ರುತ್ತವೆ. ನಾನು ಹೇಳ್ತಾಇರುವಂತದ್ದರಲ್ಲೇ ಎಷ್ಟೋ ಅಪಾಯಕಾರಿ ಅಂಶಗಳು ನಮಗೆ ಕಾಣದೆಯಿರಬಹುದು ಬೇರೆಯವರಿಗೆ ಕಾಣುತ್ತವೆ. ಆದ್ದರಿಂದ ಈ ದೇಶ ಅಥವಾ ನಮ್ಮ ಸಂದರ್ಭ ಒಂದು ಆಲೋಚನಾ ಕ್ರಮದ ಮೇಲೆ ನಿಲ್ಲಲಿಕ್ಕೆ ಸಾಧ್ಯವಿಲ್ಲ. ಒಂದು ಓದು ಅಂತಿಮವಾದುದಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಕೂಡ ತಮ್ಮ ಆಲೋಚನಾ ಕ್ರಮ ವೈವಿದ್ಯಮಯವಾಗಿರುತ್ತೆ. ಎಷ್ಟು ವೈವಿಧ್ಯಮಯವಾಗಿವೆ ಅಂದರೆ ಓದುಗರ ಸ್ಪಂದನ ಸಿದ್ದಾಂತಗಳು ಹೇಳಿದಂಗೆ ಎಲ್ಲವೂ ಮಿಸ್ ರೀಡಿಂಗ್ಸ್ ಇರಬಹುದು. ಆದರೇನೂ ಅವು ಗಳಲ್ಲಿ ಹಲವು ಸತ್ಯಗಳನ್ನು ಕಾಣಲಿಕ್ಕೆ ಸಾಧ್ಯ. So ಬಹಳ ವೈವಿಧ್ಯಗಳಿವೆ. ಒಂದು ರೀತಿಲಿ ಈ ತರಹದ ಚರ್ಚೆಗಳು ಒಟ್ಟಾರೆಯಾಗಿ ನಯಸೇನನನ್ನ ಹೇಗೆ ನೋಡುತ್ತವೆ ಅಥವಾ ನೋಡಲಿಕ್ಕೆ ಬೇಕಾದ ಟೂಲ್‌ಗಳು ಅನ್ನೋದರ ಕಡಗೆ ನಮ್ಮ ಆಸಕ್ತಿ. ಏಕೆಂದರೆ ನಮ್ಮ ಒಂದು ಚೌಕಟ್ಟು ಏನಿದೆ ಅದನ್ನು ಮೀರಿಯೂ ಕೂಡ ಹೋಗಬಾರದು. ಬೇರೆ ಬೇರೆ ನೆಲೆಯ ನಿಮ್ಮ ಗ್ರಹಿಕೆಗಳಿಗೆ ಆಗ ನಯಸೇನನಂತ ಕವಿಯೊಬ್ಬ ಕಟ್ಟಲಿಕ್ಕೆ ಪ್ರಯತ್ನಪಟ್ಟಿರುವ ಸನ್ನಿವೇಶಗಳಲ್ಲೇ ಕೆಲವು ವಿಚಿತ್ರಗಳಿವೆ ಎನ್ನುವ ಮಾಹಿತಿಗಳನ್ನಿಟ್ಟುಕೊಂಡು ಕೂಡ ನಾವು ಆಲೋಚನೆ ಮಾಡಬೇಕಾಗುತ್ತದೆ. ತಾನು ಅಂತ್ಯದಲ್ಲಿ ಕಥನದ ಮೂಲಕ ಏನನ್ನು ಹೇಳಲಿಕ್ಕೆ ಪ್ರಯತ್ನ ಪಡ್ತಾಇದ್ದಾನೆ. ಆಮೇಲೆ ಇಂದಿಗೂ ಕೂಡ ಸಾಮಾನ್ಯ ಜನರ ಪರವಾಗಿದೆ ಅಂತ ನಮ್ಮ ಗ್ರಹಿಕೆಗಳು ಅಥವಾ ನಾವು ಕಟ್ಟಲ್ಪಟ್ಟ ಹಣೆಪಟ್ಟಿಗಳೇ ಹೊರತು, ಯಾಕಂದ್ರೆ ಹಂಗೆ ಅನ್ನದೇಯಿದ್ದರೆ ಜೈನ ಸಾಹಿತ್ಯವನ್ನು ಬಹುತೇಕ ಯಾರು ಓದ್ಲಿಕ್ಕೆ ಸಾಧ್ಯವೇ ಇಲ್ಲ. ಬಹುತೇಕ ಆರಂಭದ ವಿಮರ್ಶಕರು ಮಾಡಿರುವ, ಸಂಪಾದಕರು ತಮ್ಮ ಉಪೋದ್ಘಾತದಲ್ಲಿ ಮಾಡಿರು ವಂತದ್ದು ಮತ್ತು ಜಾನಪದ ಅಧ್ಯಯನಕಾರರು ಮಾಡಿರುವಂತದ್ದು ನಗೆಗಾರನಾಗಿ ಅವನನ್ನು ನೋಡಿರುವಂತದ್ದು. ಅಂದರೆ ನಯಸೇನನನ್ನ ಅಧ್ಯಯನ ಮಾಡಿರುವ ಮಾದರಿಗಳೇ ತುಂಬ ವಿಚಿತ್ರವಾದವು ಮತ್ತು ಅವು ಕಾಲಬದ್ಧವಾದಂತಹ ಅಧ್ಯಯನಗಳು. ಬಹುಶಃ ಈ ಬಗೆಯ ಮೊಟ್ಟಮೊದಲಿಗೆ ತುಂಬಾ Close ರೀಡಿಂಗ್ ಆದಂತಹ, ತುಂಬ ಬೇರೆ ಬೇರೆ ವಿಭಿನ್ನ ನೆಲೆಗಳಲ್ಲಿ ಆಲೋಚನೆ ಮಾಡ್ತಾಇರುವ ವಿಚಾರ ಸಂಕಿರಣ ಇದು. ನಯಸೇನನ ಮೇಲೆ ಮಾಡಿದ್ರು ಕೂಡ ಮತಧರ್ಮದ ಪ್ರೀತಿಗಾಗಿ ಮಾಡಿದವರೆ ಹೆಚ್ಚು ಅಥವಾ ಇನ್ನೊಬ್ಬರಿಂದ ಮಾಡಿಸಲ್ಪಟ್ಟಿದ್ದಾರೆ. ಬಹುತೇಕ ಅವರ ಮೇಷ್ಟ್ರುಗಳ ಪ್ರೀತಿಗಾಗಿ ಶಿಷ್ಯಂದಿರು ಮಾಡಿದ ಅಧ್ಯಯನಗಳೇ, ಇನ್ನು ಕೆಲವರಷ್ಟೇ ಭಾಷಾಶಾಸ್ತ್ರದ ದೃಷ್ಟಿಯಿಂದ ಸಂಗಮೇಶ ಸವದತ್ತಿ ಮಠರು ಜನಪದದ ದೃಷ್ಟಿಯಿಂದ ಹೀಗೆ ಅಧ್ಯಯನ ಮಾಡಿರುವ ಕೆಲವನ್ನು ಹೊರತು ಪಡಿಸಿದರೆ, ಬಹುತೇಕ ಒಂದು ಚೌಕಟ್ಟಿನಲ್ಲೇ ರೂಪಿತವಾಗಿರುವುದರಿಂದ ಸಹಜವಾಗಿಯೇ ಆ ಕೃತಿಯನ್ನು ಅಂತರಂಗದಿಂದ ನಿಂತು ನೋಡಲಿಕ್ಕೆ ಸಾಧ್ಯವಿಲ್ಲ. ನಯಸೇನ ಅಂದ ತಕ್ಷಣವೇ,  ಸೌಮುಕ್ತ ಕೌಮುದಿಯ ಕತೆಗಳನ್ನೇ ಪ್ರಧಾನವಾಗಿ ಚರ್ಚಿಸದೆ ಅವರು ಮುಂದಕ್ಕೆ ಹೋಗಲಿಕ್ಕಾಗಿಲ್ಲ. So ಆ ಹಿನ್ನೆಲೆಯಲ್ಲಿ ಕೂಡ ಇದು ಒಂದು ಭಿನ್ನವಾದ ಒಂದೇ ಆಲೋಚನಾ ಕ್ರಮ ಆಗಿರೋದರಿಂದ ಇಲ್ಲಿ ಭಿನ್ನ ಮಾದರಿಯ ಭಿನ್ನ ಆಲೋಚನಾ ಕ್ರಮದ ಮೂಲಕ ನೋಡೋಕೆ ಸಾಧ್ಯವಾಗಿದೆ ಅನ್ನೋದು ನನ್ನ ಗ್ರಹಿಕೆ.

ಲಿಂಗಣ್ಣ

ದಳವಾಯಿಯವರು ಪ್ರಭುತ್ವ ಧರ್ಮ ಸಾಹಿತ್ಯ ಈ ಮೂರರ ಬಗ್ಗೆ ಬಹಳ ವಾಸ್ತವಿಕ ಮಾತುಗಳನ್ನು ಹೇಳಿದ್ದಾರೆ. ಅವರ ಪ್ರಬಂಧ ಮಂಡನೆಯ ಅಂತಿಮ ಘಟ್ಟದಲ್ಲಿ ಒಂದು ಮಾತನ್ನು ಹೇಳಿದ್ರು. ಪ್ರಭುತ್ವ ಧರ್ಮ ಮತ್ತು ಸಾಹಿತ್ಯ ಒಟ್ಟೊಟ್ಟಿಗೆ ಇರ್ತವೆ. ಆದರೆ ಸಾಹಿತ್ಯ ಸ್ವಲ್ಪ ಪ್ರತ್ಯೇಕ ಅಂತ ಕಾಣುತ್ತದೆ. ನನ್ನ ಪ್ರಶ್ನೆ ಇಷ್ಟೆ. ಸಾಹಿತ್ಯ, ಧರ್ಮ ಮತ್ತು ಪ್ರಭುತ್ವವನ್ನು ಪ್ರಶ್ನೆ ಮಾಡುವಂತ ಜೊತೆಜೊತೆಗೇನೆ ಅವುಗಳನ್ನು ನಿರ್ದೇಶನ ಮಾಡುವಂತ ಮತ್ತು ಅವುಗಳನ್ನೆ ನಿಯಂತ್ರಿಸುವ ಕೆಲಸ ಮಾಡುತ್ತೆ. ಹಿಂದೆ ಆ ಕಾರ್ಯಗಳನ್ನು ಸಾಹಿತ್ಯ ಮಾಡುತ್ತಿತ್ತು. ಮಾಡುವುದರ ಜೊತೆಗೆ ಅದರ ಪರವಾಗೇ ನಿಂತುಕೊಳ್ಳುತ್ತಿತ್ತು. ಆದರೆ ಇವತ್ತಿನ ದಿನಗಳಲ್ಲಿ ಅದರ ಪರವಾಗಿನೇ ನಿಂತುಕೊಳ್ಳಲ್ಲ ಅಥವಾ ಅದರ ವಿರುದ್ಧವಾಗಿನೂ ಅದು ಕೆಲಸ ಮಾಡಲ್ಲ. ಈ ಸಾಹಿತ್ಯ ಅನ್ನೋದು ಕೇವಲ ಅಕಾಡೆಮಿಕ್ ಆಗಿ ಅದರ ಉದ್ದೇಶದ ಭಾಗವಾಗಿ ಚರ್ಚೆ, ಸಂವಾದ ಸಂಶೋಧನೆಗಳನ್ನು ಮಾಡ್ತಾ ಬಂದಿದೆ. ನಮ್ಮ ಪ್ರಭುತ್ವಕ್ಕೂ ಸಂಬಂಧನೇ ಇಲ್ಲ ಅನ್ನೊ ಒಂದು ಕಲ್ಪನೆ ಮಾಡಿಕೊಂಡಿದೆ. ಇದರಿಂದ ದೊಡ್ಡ ಅಪಾಯ ಇದೆಯೇನೊ ಅನ್ಸುತ್ತೆ. ಯಾಕೆಂದ್ರೆ ನಮ್ಮ ಪ್ರಭುತ್ವ ಆರ್ಥಿಕ ಶಕ್ತಿಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಇರ್ತದೆ. ಆ ಕಾರಣಕ್ಕಾಗಿನೇ ಮೊನ್ನೆ ಬಜೆಟ್‌ನಲ್ಲಿ ನೋಡಿದಾಗ ಶೃಂಗೇರಿ ಪೀಠಕ್ಕೆ, ಆದಿಚುಂಚನಗಿರಿ ಪೀಠಕ್ಕೆ ಮತ್ತು ರವಿಶಂಕರ್ ಗುರೂಜಿ ಅವರ ಸಮಾರಂಭಕ್ಕೆ ಜೊತೆಗೆ ರಹಮತ್ ತರೀಕೆರೆ ಹೇಳಿದಂತೆ ಶ್ರವಣ ಬೆಳಗೊಳದ ಅಭಿಷೇಕಕ್ಕೆ ಕೋಟಿ ಕೊಟ್ಟಂತಹ ಸರ್ಕಾರ ಜನ ಸಾಮಾನ್ಯರ ಅನ್ನಕ್ಕೆ ಕೊಡುವ ಮನಸ್ಸು ಮಾಡಲ್ಲ. ಇಂತ ಒಂದು ಸ್ಥಿತಿಯಲ್ಲಿ ನಮ್ಮ ಸಾಹಿತ್ಯ ಅನ್ನೊದು ಜನಪರ ಕಾಳಜಿಯನ್ನು ತೋರಿಸು ವುದರ ಜೊತೆ ಜೊತೆಗೇನೆ ಅಂತ ಒಂದು ನಿಜಕಾರ್ಯವನ್ನು ಕೈಗೊಳ್ಳುತ್ತಿಲ್ಲ. ಅಂತ ಕಾರ್ಯ ವನ್ನು ಮಾಡಿಕೊಳ್ಳಬೇಕು. ಇದರ ಬಗ್ಗೆ ಗುರುಗಳು ಸ್ಪಷ್ಟನೆ ನೀಡಬೇಕು.

ರಾಜಪ್ಪ ದಳವಾಯಿ

ಮೊದಲು ನೀವು ಹೇಳಿದನ್ನ ಎರಡು ಭಾಗ ಮಾಡ್ಕೊಳ್ತೀನಿ. ನೀವು ಮೊದಲು ಕೇಳಿದ್ದು ಇದೆಯಲ್ಲ ಆ ತರಹದ ಪ್ರಯತ್ನವನ್ನು ಸಾಹಿತ್ಯ ಎಲ್ಲ ಕಾಲಕ್ಕೂ ಮಾಡ್ತಾ ಬರ್ತಾಯಿದೆ. ಅಂತದ್ದರಲ್ಲಿ ನಯಸೇನನ ಪ್ರಯತ್ನವೂಯಿದೆ. ಅವಾಗದನ್ನು ಹೆಚ್ಚು ಚರ್ಚೆ ಮಾಡ್ಲಿಲ್ಲ ಹೊರತು ಅವನು ಮುಖಾಮುಖಿಯಾಗಿಸುವಂತಹ ಧರ್ಮ ಮತ್ತು ಪ್ರಭುತ್ವವನ್ನು, ಜನಸಾಮಾನ್ಯರನ್ನ, ಹೀಗೆ ಒಬ್ಬ ಮುನಿ ಅವನು ಮುನಿಗಳನ್ನು ನಂಬಬೇಡಿ ಅಂತ ಹೇಳ್ತಾನೆ. ಮುನಿಗಳನ್ನು ನಂಬಬೇಡಿ ಅವರು ಶ್ರಮಜೀವಿಗಳಲ್ಲ. ಈ ಶ್ರಮಜೀವಿಗಳಲ್ಲದವರ ಭೋದನೆ ಯನ್ನು ಕೇಳಿಬಿಟ್ಟು ನೀವ್ಯಾಕೆ ನಾಶಮಾಡಿಕೊಳ್ತೀರಿ. ಜೀವನವನ್ನು ನೀವು ಆ ರೀತಿಯಲ್ಲಿ ಆಂಶಿಕವಾಗಿ ನೋಡಿದರೆ ಅಂತದಕ್ಕೆ ಉತ್ತರಯಿದೆ. ಸಾಹಿತ್ಯ ಯಾವಾಗ್ಲೂ ಧರ್ಮ, ಪ್ರಭುತ್ವ ವನ್ನು ಮೀರುವ ಪ್ರಯತ್ನವನ್ನು ನಿರಂತರ ಮಾಡ್ತಾ ಬಂದಿದೆ. ಅದರಲ್ಲಿ ಎರಡು ಮಾತಿಲ್ಲ. ಎಲ್ಲಾ ಕಾಲಕ್ಕೂ ಈಗಲೂ ಕೂಡಾ ಕವಿಯ ಬಗ್ಗೆ ಬಂದ ಬಹಳ ಅದ್ಭುತವಾದ ಪದ್ಯ ಅಗರ ವಾಲಾ ಅವರದು. ಈತ ಕವಿ, ಇವನೊಬ್ಬ ಸ್ವಾಮಿ, ಇವನೊಬ್ಬ ಅಧಿಕಾರಿ, ಇವನೊಬ್ಬ ಇದು ಬೇರೆ  ಎಲ್ಲಾ ಪ್ಯಾಟರ್ನ್‌ನ್ನ ಹೇಳ್ತಾ ಇವನೊಬ್ಬ  ಕವಿ ಇವನದ್ದು ಕೂಡ ಬಾಂಬ್ ಸೃಷ್ಟಿಯಾಗಿದೆ. ಆದ್ದರಿಂದ ನೂರು ಚಾಟಿ ಏಟಿನಿಂದ ಹೊಡೆಯಿರಿ. ಬೇರೆಯವರಿಗೆಲ್ಲ ಐದು, ಹತ್ತು, ಇಪ್ಪತ್ತು ಹೊಡೆದರೆ ಕವಿಗೆ ಜಾಸ್ತಿ ಹೊಡಿಬೇಕು. ಏಕೆಂದರೆ ಇವನು ಕವಿತೆ ಬರೆದರೂ ಕೂಡ ಮನುಷ್ಯರು ಬದಲಾಗಿಲ್ಲ ಅನ್ನುವ ಹಿನ್ನೆಲೆಯಲ್ಲಿ ಹೇಳ್ತಾನೆ. ಅಥವಾ ಹಸನ್ ಮಾಂಟೊ ಕತೆಗಳನ್ನು ತೆಗೆದುಕೊಂಡರೆ ಬಹುಶಃ ಭಾರತ ಮತ್ತು ಪಾಕಿಸ್ತಾನದ ಇಬ್ಬಾಗದ ಸಂದರ್ಭಗಳು ಬಹಳ ಅದ್ಭುತವಾದಂತಹ ಕತೆಗಳ ಮೂಲಕ ನಿರೂಪಣೆ ಮಾಡ್ತಾರೆ. ಇಂತ ಉದಾಹರಣೆಗಳನ್ನು ಬೇಕಾದಷ್ಟು ಕೊಡಬಹುದು. ಇವತ್ತು ಪ್ರಭುತ್ವ ವಿರೋಧಿ ಮತ್ತು ಧರ್ಮ ವಿರೋಧಿ ನೆಲೆಯನ್ನು ಸಾಹಿತ್ಯ ತನ್ನದೇ ರೀತಿನಲ್ಲಿ ಪ್ರಾಚೀನ ಕಾಲದಿಂದಲೂ ಈಗಲೂ ಮಾಡ್ತಾಬಂದಿದೆ. ಈಗ ಬರೆಯುವ ಬರಹಗಾರನು ಅದರ ಪರವಾಗಿರಕೆ ಸಾಧ್ಯನೇ ಇಲ್ಲ. ಬೇಕಾದ್ರೆ ಅದರ ಪರವಾಗಿ ನಿಜ ಜೀವನದಲ್ಲಿರಬಹುದು. ಆದರೆ ತನ್ನ ಸಾಹಿತ್ಯ ಕೃತಿಯಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ಅಂತದ್ದೊಂದು ಕಂಡಿಷನ್ ಇದೆ. ಸಹಜ ಎಲ್ಲ ಕಾಲಕ್ಕೂ ಪ್ರಭುತ್ವದ ಜೊತೆಯಲ್ಲಿರುವ ಲೇಖಕರು ಇರಬಹುದೇ ಹೊರತು, ಪ್ರಭುತ್ವದ ಪರವಾಗಿರುವಂತ ಬರಹಗಳು ಇರಲಿಕ್ಕೆ ಸಾಧ್ಯವಿಲ್ಲ. ಇದ್ದರೂನೂ ಆದರ ಪ್ರಮಾಣ ತುಂಬಾ ಕಡಿಮೆಯಿರುತ್ತೆ. ಈಗ ವೈಚಾರಿಕತೆಯನ್ನು ಬೆಳೆಸುವ ಪತ್ರಿಕೆಗಳು, ಸಾಹಿತ್ಯ ಪತ್ರಿಕೆಗಳು ಜಾಸ್ತಿಇವೆಯೇ ಹೊರತು ಬಹಳ ಮುಖ್ಯವಾದ ಒಂದು ಮತೀಯವಾದವನ್ನು ಸೃಷ್ಟಿಸುವ ಪತ್ರಿಕೆಗಳಿಲ್ಲ ಅಂತ ಹೇಳಬಹುದು. ಇದಾವೆ ಅದರ ಪ್ರಮಾಣ ಕಡಿಮೆ. ಈ ಹಸಿವಿಗಾಗಲೀ, ವಸತಿಗಾಗಲಿ ಮಾಡಬಹುದಾದ ಖರ್ಚಿನ ಬಾಬ್ತಾಗಿ ಒಂದು Stateಗೆ, ಧರ್ಮಕ್ಕೆ ಮಾಡಬಹುದಾದ ಖರ್ಚು ಒಂದಿರುತ್ತೆ. State ಸ್ವರೂಪ ಹ್ಯಾಗಿರುತ್ತೆ ಅಂದ್ರೆ State ಯಾರ ಪರವಾಗಿಯೂ ಇರುವುದಿಲ್ಲ. ಇನ್ನು ವೈಯಕ್ತಿಕವಾಗಿ ನೀವು ನೋಡೋದಾದ್ರೆ ರಾಜಕೀಯ ಪರಿಭಾಷಿಕವಾಗಿ ನೀವು ನೋಡೊದಾದ್ರೆ ಅದಕ್ಕೊಂದು ಅಭಿಪ್ರಾಯ ಅನ್ನೋದಿ ರುವುದಿಲ್ಲ. ಅಭಿಪ್ರಾಯ ರೂಪಿಸಬೇಕು. ಕಾಲಮಾನ ರೂಪಿಸುತ್ತಾ ಹೋಗುತ್ತೆ. ಜನ ಹೇಗೆ ಅಭಿಪ್ರಾಯವನ್ನು ರೂಪಿಸುತ್ತಾರೊ ಆ ಸ್ವರೂಪದಲ್ಲಿ ಪ್ರಭುತ್ವ ಬೇರೆ ಬೇರೆ ಸ್ವರೂಪವನ್ನು ಪಡೆಯುತ್ತೆ. ಈಗ ನಾನು ಅದನ್ನೆ ಹೇಳಿದ್ದು. ಪ್ರಭುತ್ವ ನಾವೀಗ ಯೋಚನೆ ಮಾಡ್ತಿರೋದು ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ನಿಂತು. ಆದರೆ ಸಾವಿರ ವರ್ಷದ ಹಿಂದಿನ ಪ್ರಭುತ್ವ ಹೇಗಿತ್ತು. ನಿಜವಾಗಿಯೂ ನಯಸೇನನ ಸಂದರ್ಭದಲ್ಲಿ ಪೊಲಿಟಿಕಲೈಜೇಷನ್ ಒಂದು ರಾಜಕಾರಣ ವ್ಯವಸ್ಥೆ ಹೇಗಿತ್ತು. ಅವನೇ ಬದುಕುತ್ತಿದ್ದಂತಹ ಮುಳಗುಂದದ ಪ್ರಾಂತ್ಯವನ್ನು ಯಾರು ಆಡಳಿತ ಮಾಡ್ತಿದ್ದರು. ಖಚಿತವಾದ ಮಾಹಿತಿಗಳು ಸಿಕ್ಕಿಲ್ಲ. ಅಥವಾ ಅಲ್ಲಿಯ ನಿಜವಾದ ಪೊಲಿಟಿಕಲ್ ಸಿಸ್ಟಮ್ ಹೇಗಿತ್ತು ಅನ್ನೋದು ಗೊತ್ತಿರಲಿಲ್ಲ. ನಮಗೆ ಬರೇ ಸಾಹಿತ್ಯ ಕೃತಿಯೊಂದು ಉಳಿದು ಬಂದಿದೆ. ಆಷ್ಟೆ. ೧೯೨೪ರಲ್ಲಿ ಅದನ್ನ ಭಾಗಶಃ ಮುದ್ರಿಸಿದರು. ಅಲ್ಲಿಂದ ಅದರ ಚರ್ಚೆ ಶುರುವಾಗಿದೆ. ನಿಜವಾಗಿಯೂ ಆಗ ನಯಸೇನನಲ್ಲಿ ಸಾಮಾಜಿಕ ಕಳಕಳಿಯನ್ನು ಚರ್ಚೆ ಮಾಡಿರುವಂತ ವೇದಿಕೆ ಇದೇನೆ ನನ್ನ ದೃಷ್ಟಿಯಿಲ್ಲಿ. ಆದ್ದರಿಂದ ಪ್ರಭುತ್ವಕ್ಕೆ ಒಂದು ಸ್ಪಷ್ಟವಾದ ಅಭಿಪ್ರಾಯವಿರಲ್ಲ. ರೂಪಿಸಬೇಕು. ಸ್ವತಃ ಪ್ರಭುತ್ವ ಧರ್ಮವನ್ನು ವಿರೋಧಿಸಲಿಕ್ಕೆ ಬರುವಂತಹ ಸಾಧ್ಯತೆ ಇಲ್ವೇಇಲ್ಲ. ಧರ್ಮವನ್ನು ಒಬ್ಬ ಲೇಖಕ ವಿರೋಧಿಸಬಹುದು. ಒಂದು ಪ್ರಭುತ್ವ ವಿರೋಧಿಸಬರುವುದಿಲ್ಲ. ಅದೇ ವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಭುತ್ವಕ್ಕಿರುವ ವ್ಯತ್ಯಾಸ ಎಷ್ಟು ಅಂದರೆ, ಎಷ್ಟೋ ಸಾರಿ ಒಬ್ಬ ಒಂದು ಪ್ರಭುತ್ವಕ್ಕೆ ಸವಾಲಾಗುವಂತ ಶಕ್ತಿ ಒಬ್ಬ ಮನುಷ್ಯನಿಗಿರುತ್ತೆ. ಅಥವಾ ಒಬ್ಬ ಚಿಂತಕನಿಗಿರುತ್ತೆ, ಒಬ್ಬ ಲೇಖಕನಿಗಿರುತ್ತೆ, ಸ್ವತಃ ಪ್ರಭುತ್ವವೇ ಒಬ್ಬ ಚಿಂತಕನನ್ನು ಪುರಸ್ಕರಿಸುತ್ತೆ. ಅಂದರೆ ಅವರ ಒಂದು ಅಭಿಪ್ರಾಯ ತನಗೆಲ್ಲಿ ವಿರುದ್ಧವಾಗುತ್ತೊ ಅಂತ ಭಯ ಕೂಡ ಇರುತ್ತೆ. ಎಲ್ಲ ಕಾಲಕ್ಕೂ ನೀವು ಪ್ರತಿಕಾಲಕ್ಕೂ ಪ್ರಭುತ್ವ ಮತ್ತು ಚಿಂತಕರ ಸಂಘರ್ಷ ಇದ್ದೇ ಇದೆ. ಯಾರು ಪ್ರಭುತ್ವ ವಿರೋಧಿಗಳಾಗಿರ್ತಾರೆ. ಬಹಳ ಅದ್ಭುತವಾದ ಒಂದು ಚರ್ಚೆಯನ್ನು ಶಿವಪ್ರಕಾಶ್ ಆ ಕಾಲಕ್ಕೆ ಮಾಡಿದರು. ಹೇಗೆ ಸೂಫಿಗಳು ಮಧ್ಯಯುಗಿನ ಸಂದರ್ಭದಲ್ಲಿಯ ಭಕ್ತಿ ಬೆಲ್ಟ್ ಇವೆಲ್ಲವೂ ಪ್ರಭುತ್ವ ವಿರೋಧಿಯಾದ ನೆಲೆಗಳ ಬೇರೆ ಬೇರೆ ದಾರಿಗಳನ್ನು ಹುಡುಕಿಕೊಂಡು ಹೋಯ್ತು. ಆದ್ದರಿಂದ ಪ್ರಭುತ್ವ ಅನ್ನೋದು ಈಗಿರುವ ನಮ್ಮ ಬಜೆಟ್ ಮಂಡಿಸುವ ಸರ್ಕಾರ ಇದೆಯಲ್ಲ ಅದು ಒಂದು ಪ್ರಭುತ್ವ ಮಾದರಿ. So ತುಂಬ ಸರಳವಾಗಿ ಹೇಳೊದಾದ್ರೆ ಪ್ರಭುತ್ವ ಅಂದರೆ ಎಲ್ಲರ ಹಿತವನ್ನು ಕಾಪಾಡುವಂತ ಮನುಷ್ಯರಿಗಿಂತ, ಗುಂಪಿಗಿಂತ ಒಂದು ದೊಡ್ಡ ವ್ಯವಸ್ಥೆ ಅದಕ್ಕಿಂತ ದೊಡ್ಡದು ಇರೋದಿಲ್ಲ.

ಚಂದ್ರಬಾಗ್ ಬಿದರಿ

ಶಿವಗಂಗಮ್ಮ ಮೇಡಂ ಮಹಿಳಾ ಲೋಕದ ವೈರುಧ್ಯಗಳನ್ನು ಕುರಿತು ಮಾತಾಡಿದರು. ಆದರೆ ವೈರುಧ್ಯದ ವ್ಯಾಖ್ಯಾನ ಎಲ್ಲಿಯೂ ಬರಲಿಲ್ಲ ಅಂತ ನನ್ಗೆ ಅನ್ಸುತ್ತೆ ಅಲ್ಲಿಯ ಪಾತ್ರಚಿತ್ರಣ ಅವರು ಕಟ್ಟಿಕೊಟ್ಟರೇನೊ ಅಂತ ಅನಿಸಿಕೆ ನನ್ನದು. ಬಹುಶಃ ಮೇಡಂ ಅದಕ್ಕೆ ಉತ್ತರಿಸುತ್ತಾರೆ ಅನ್ಕೋತ್ತೀನಿ. ಇನ್ನು ಜೈನಧರ್ಮ ಸ್ವಯಂ ಹಿಂಸೆಯನ್ನು ಕುರಿತು ಪ್ರತಿಪಾದನೆ ಮಾಡ್ತಾ ಇರೋದು ಯಾಕೆ ಸ್ವಯಂ ಹಿಂಸೆಗೆ ಒಳಗಾಗ್ತಾರೆ. ಅವರಿಗೆ ಇನ್ನೊಬ್ಬರ ಹಿಂಸೆ ನೋವಾಗಿ ಕಾಣೋದಿಲ್ಲ. ನೋವಾಗಿ ಕಾಣದೆ ಇರುವಂತ ಸಂದರ್ಭದಲ್ಲಿ ಅದಕ್ಕೆ ಮಿಡಿಬೇಕಾದಂತ ಸಂದರ್ಭನೂ ಇರೋದಿಲ್ಲ. ಅದಕ್ಕೆ ಜೈನಧರ್ಮ ಜನಪರವಾಗಲಿಲ್ಲ ವೇನೊ ಅಂತ ನನಗೆ ಅನ್ನಿಸುತ್ತೆ. ಇನ್ನು ಪ್ರಭುತ್ವ ಮತ್ತು ಧರ್ಮ ಇವೆರಡೂ ಜೊತೆ ಜೊತೆಯಲ್ಲಿಯೇ ಸಾಗ್ತಾಯಿರ್ತವೆ. ಧರ್ಮ ಅನ್ನೋದು ಬಹಳ ವಿಶಾಲ ಅರ್ಥವುಳ್ಳದ್ದು. ಎಲ್ಲರಿಗೂ ಒಳಿತನ್ನೇ ಮಾಡೋದು ಅನ್ನುವಂತ ವ್ಯಾಖ್ಯಾನಗಳಿರೊವಾಗ ಕೂಡ ಧರ್ಮ ಪ್ರಭುತ್ವದ ಜೊತೆಗೂಡಿದಾಗ ಪ್ರಭುತ್ವ ಅದನ್ನು ತನ್ನ ನೇರಕ್ಕೆ ವ್ಯಾಖ್ಯಾನಿಸಿಕೊಳ್ಳುತ್ತದೆ. ಹಾಗಾದಾಗ ಅದು ಜನಪರ ಆಗೋದಿಲ್ಲವೇನೂ ಅಂತ ನನ್ನ ಅನಿಸಿಕೆ. ಮೇಡಂ ಅವರು ವೈರುದ್ಯದ ವ್ಯಾಖ್ಯಾನವನ್ನು ನೀಡಬೇಕು ಅಂತ ಕೇಳಿಕೊಳ್ತೀನಿ.

ಶಿವಗಂಗಮ್ಮ

ಪಾಪಗಳ ಬಗ್ಗೆ ಹೇಳುವಾಗ, ಅರಿವು ಮತ್ತು ಕುರುಹನ್ನು ಕುರಿತು ಹೇಳುವಾಗ, ಧರ್ಮದ ಬಗ್ಗೆ ಹೇಳುವಾಗ, ವೈರುಧ್ಯಗಳನ್ನು ನಾನು ನಿರೂಪಿಸುತ್ತಿದ್ದೀನಿ. ವೈರುಧ್ಯಗಳು ಅಂದ್ರೇನು ಅಂತ ವ್ಯಾಖ್ಯಾನ ಮಾಡೋ ಅವಶ್ಯಕತೆಯಲ್ಲ ಅಂತ ನಾನು ಮಾಡ್ಲಿಲ್ಲ ಅಷ್ಟೆ. ಮತ್ತು ಒಂದು ಪಾತ್ರನೇ ಒಂದು ಸಲ ಹೇಳ್ತದೆ. ಇಲ್ಲ ಈ ವೈರಾಗ್ಯ ಎಂಬುದೇ ಬೇಡ ಅಂತ ಒಂದು ಪಾತ್ರ ಹೇಳ್ತದೆ. ಅದೇ ಪಾತ್ರ ತಾನು ಗರ್ಭಿಣಿಯಾಗಿದ್ದಾಗ ಜಿನ ಉಪದೇಶ ಕೇಳ್ತೀನಿ ಅಂತ ಹೇಳ್ತದೆ. ಇದನ್ನೆಲ್ಲ ನಾನು ಉಲ್ಲೇಖಿಸಿದ್ದೀನಿ. ಅವೇ ವೈರುಧ್ಯಗಳು ಕಾಂಟ್ರಡಿಕ್ಷನ್ಸ್ ಅವುಗಳ ನಡುವೆ ಸಂಘರ್ಷ ವಿರೋಧ ಇದ್ದಾಗ ಬೇರೆ ಬೇರೆಯಾಗ್ತವೆ. ಸಂಘರ್ಷದ ನಡುವೆ ಏಕತೆಯಿದ್ದಾಗ ಎಲ್ಲ ವೈರುಧ್ಯಗಳನ್ನು ನಿರೂಪಿಸಿದ್ದೀನಿ.

ರಾಜಶೇಖರಪ್ಪ

ಯಾವುದೇ ಒಂದು ಪಠ್ಯದ ಓದು ಆ ಪಠ್ಯ ಒಂದು ಸಂಘಟಿತರೂಪವಾಗಿ ಬಂದಾಗ ಯಾವ ಕ್ರಮವನ್ನು ಬೇಡುತ್ತೆ ಅನ್ನೋದರ ಬಗ್ಗೆ ಸಾಕಷ್ಟು ಈಗಾಗಲೇ ಇಲ್ಲಿ ಪ್ರಸ್ತಾಪ ಆಗಿದೆ. ರಹಮತ್ ತರೀಕೆರೆ ಅವರು ಆ ಬಗ್ಗೆ ಮಾತನಾಡಿದರು ಮತ್ತು ಲಕ್ಷ್ಮೀನಾರಾಯಣ ಕೂಡ ಮಾತನಾಡಿದ್ದಾರೆ. ಮೊಗಳ್ಳಿ ಆ ಬಗ್ಗೆ ಮಾತನಾಡಿದ್ದಾರೆ. ಇದು ಒಂದು ನೆಲೆಯನ್ನು ಕಾಣಲಿಕ್ಕೆ ಅಥವಾ ಒಂದು ತುದಿಯನ್ನು ಮುಟ್ಟಲಿಕ್ಕೆ ಅದರ ಓದಿನ ರೀತಿ ಬದಲಾಗ್ತವೆ. ನಾವು ಸಮಕಾಲೀನವಾಗಿ ಇರತಕ್ಕಂತ ಎಲ್ಲರೂ ಕೂಡ ನಮ್ಮದೇ ಆದಂತಹ ದೃಷ್ಟಿಕೋನ ದಿಂದ ನಾವು ಓದ್ತಾಯಿರ್ತೀವಿ. ಹಾಗೇ ನಾವೇನೇ ಸ್ವಲ್ವಕಾಲ ಕಳೆದ ಮೇಲೆ ಈ ಪಠ್ಯವನ್ನು ಇನ್ನೊಂದು ದೃಷ್ಟಿಯಿಂದ ನೋಡ್ತಾ ಇರ್ತೀವಿ. ಹೀಗೆ ಪ್ರತಿಯೊಬ್ಬರಿಗೂ ಕೂಡ ಕಾಲದೇಶ ಸಂದರ್ಭಾನುಸಾರಿಯಾಗಿ ನಾವು ನೋಡತಕ್ಕಂತ ದೃಷ್ಟಿಕೋನ ನಮ್ಮ ಮನಸ್ಸಿನಲ್ಲಿ ನೋಡ ತಕ್ಕಂತ ದೃಷ್ಟಿಕೋನ ಎಲ್ಲ ಬೇರೆ ಬೇರೆಯಾಗ್ತವೆ. ಬಹುಶಃ ಇದೇ ದೃಷ್ಟಿಯಿಂದಲೇ ಕುವೆಂಪು ರವರು ಧರ್ಮದ ವ್ಯಾಖ್ಯಾನವನ್ನು ಅವರು ಮಾಡ್ಲಿಕ್ಕೆ ಹೋಗದೆ ಹೇಳ್ತಾರೆ. ಅವರು ಈ ಜಗತ್ತಿನಲ್ಲಿ ಎಷ್ಟು ಜನರಿದ್ದಾರೊ ಅಷ್ಟು ಧರ್ಮಗಳಿವೆ ಅಂತ. ಯಾಕೆಂದರೆ ಧರ್ಮವನ್ನು ಪ್ರತಿಯೊಬ್ಬರು ಗ್ರಹಿಸತಕ್ಕಂತ ರೀತಿ ಬೇರೆಯಿರ್ತದೆ. ಒಂದೊಂದು ಕಾಲಕ್ಕೆ ಒಂದೊಂದು ವಯಸ್ಸಿಗೆ ಒಂದೊಂದು ರೀತಿ ಧರ್ಮ ಅರ್ಥ ಆಗ್ತಾಹೋಗ್ತೆದೆ. ಅವನ ಅನುಭವ ಇದರ ಹಿನ್ನೆಲೆಯಲ್ಲಿ ಅವನು ನೋಡ್ತಾ ಹೋಗುತ್ತಾನೆ. ಹಾಗಾಗಿ ಧರ್ಮ ಅನ್ನೋದು ಏನು ಅನ್ನೊದು ಅದರ ಒಟ್ಟು ಸ್ವರೂಪದಲ್ಲಿ ಅದರ ಸಂಪೂರ‍್ಣ ಸ್ವರೂಪದಲ್ಲಿ ಯಾರಿಗೂ ಕೂಡ ಅದು ಕೈಗೆಟುಕುವುದಿಲ್ಲ. ನಿಲುಕವುದಿಲ್ಲ, ಯಾವುದೇ ಒಂದು ಪಠ್ಯದ ಓದು ಹಾಗೇನೇ. ಇದು ಹೀಗೆ ಇರಬೇಕು ಅಂತ ಅದನ್ನು ಮಿತಿಸೋದಕ್ಕೆ ಆಗೋದಿಲ್ಲ. ಅಥವಾ ಹೀಗೆ ಇಲ್ಲವಲ್ಲ ಅಂತೇಳಿ ಕೊರಗಬೇಕಾದುದು ಇಲ್ಲ. ಹಾಗೆ ಮಾಡುವಾಗ ಏನಾಗುತ್ತೆ ಅಂದ್ರೆ ನಾವು ಇಲ್ಲಿ ಧರ್ಮಾಮೃತ ಅಥವಾ ನಯಸೇನ ಇಂತಹ ಕೃತಿಯನ್ನು ಕೃತಿಕಾರನ ಹೆಸರನ್ನು ಇಟ್ಟುಕೊಂಡು ಯಾವುದನ್ನು ಕೇವಲ ನಿಮಿತ್ತ ಮಾತ್ರ ಮಾಡಿ ನಮ್ಮದೇ ಆದಂತಹ ಯಾವುದೋ ಒಂದು ಐಡಿಯಾಲಜಿನ ನಮ್ಮದು ಯಾವುದೊ ಒಂದು ನಮ್ಮ ಮನಸ್ಸಿನ ಮುಂದೆ ಬಹಳ ಕಾಲ ಕಾಡ್ತಾ ಇರುವಂತ ಸಮಸ್ಯೆನ ನಾವು ಬಿಡಿಸಿಕೊಳ್ಳಲಿಕ್ಕೆ ಪ್ರಯತ್ನ ಸುತ್ತೇವೆನೊ ಅಂತ ಅನ್ನಿಸಿಬಿಡುತ್ತೆ. ಹಾಗಾದಾಗ ಏನಾಗುತ್ತೆ, ಅದು ನಾವು ಒಟ್ಟಾರೆಯಾಗಿ ಇಲ್ಲಿ ಚರ್ಚೆ ಮಾಡುತ್ತಾ ಬಂದಿರತಕ್ಕಂತದ್ದು. ಒಂದು ಕೃತಿಯ ಬಗ್ಗೆ, ಒಬ್ಬ ಕೃತಿಕಾರನ ಬಗ್ಗೆ  ಅವನು ನಮ್ಮ ಕಾಲಕ್ಕೆ ಎಷ್ಟರಮಟ್ಟಿಗೆ ಮುಖಾಮುಖಿಯಾಗಿ ಅಲ್ಲಿ ಮತ್ತೆ ಅವನಿಗೆ ನಿಜವಾಗಲೂ ಯಾವುದು ಎಟುಕಿತ್ತು ಯಾವುದು ಎಟುಕಲಿಲ್ಲ ಇದು ಕೂಡ ಬಹಳ ಮುಖ್ಯ ಆಗ್ತದೆ. ಅದಕೋಸ್ಕರನೇ Reading between the lines ಅಂತ ಹೇಳೋದು. ಅದಕೋಸ್ಕರನೇ ಯಾವುದೊ ಒಂದು ಕೃತಿ ಅದು ಅಕ್ಷರದ ಮೂಲಕ ಗ್ರಹಿಕೆಯಾಗೋದಕ್ಕಿಂತ ಅಕ್ಷರಗಳ ಮುಂದೆ ಅದು ಹುದುಗಿಸಿಕೊಂಡಿರತಕ್ಕಂತ ಅರ್ಥಗಳ ಮೂಲಕ ಗ್ರಹಿಕೆಯಾಗ ಬೇಕು. ಅದು ಈ ದೃಷ್ಟಿ ಯಾವುದೊ ದೇಶದ ಒಬ್ಬ ಕೃತಿಕಾರ ನಮಗೆ ಅಪರಿಚಿತನಾಗಿ ಉಳಿಯೋದಿಲ್ಲ. ಅವನು ಷೇಕ್ಸ್‌ಪಿಯರ್ ಇರಬಹುದು ಅಥವಾ ಬೇರೆ ಯಾರೊ ಇರಬಹುದು. ಯಾವ ದೇಶದಲ್ಲಿ ಯಾವ ಭಾಷೆಯಲ್ಲಿ ಕೃತಿ ರಚನೆ ಮಾಡಿರತಕ್ಕಂತವನು ಕೂಡ ನಮ್ಮಿಂದ ಭಿನ್ನ ಆಗುವುದಿಲ್ಲ. ಏಕೆ ಅಂತಂದ್ರೆ ಅವನನ್ನು ನಾವು ಹೇಗೆ ನೋಡ್ತೀವಿ ಅವನತ್ತ ಹೇಗೆ ಹೋಗ್ತೀವಿ ಅನ್ನೊದು ಅದಕ್ಕೆ ಕಾರಣವಾಗಿರುತ್ತೆ. ಈ ದೃಷ್ಟಿಯಿಂದ ನಾವು ಇಲ್ಲಿ ಆದರ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ನಾನು ಕೂಡ ಈ ವಿಷಯದಲ್ಲಿ ಸಮಯವನ್ನು ಕಬಳಿಸುವುದಿಲ್ಲವೇನೊ ಅಂತ ನನಗೆ ಅನ್ನಿಸುತ್ತೆ. ಈ ದಿಶೆಯಿಂದ ನಾವು ವಿಚಾರಮಾಡಿ ನೋಡಿ ಆದಷ್ಟು ಬೇಗ ನಾವೀಗ ಧರ್ಮಾಮೃತ ಅಂತ ಅಂದಾಗ ನಯಸೇನ ಅಂದಾಗ ಆ ವಿಷಯಕ್ಕೆ ನಾವು ಸೀಮಿತಗೊಳಿಸಿಕೊಂಡು ನಮ್ಮಯೋಚನೆಯ ಸಾಧ್ಯತೆಗಳು, ಐಡಿಯಾಲಜಿ ಬೇಕಾದಷ್ಟು ಬೇರೆ ಬೇರೆ ಇರಬಹುದು. ಅದನ್ನು ಬೇರೆ ಸಂದರ್ಭದಲ್ಲಿ ಬೇರೆ ವೇದಿಕೆಯಲ್ಲಿ ನಾನು ಚರ್ಚೆಮಾಡೊದು ಒಳ್ಳೆದು. ಏಕೆಂದರೆ ಇಲ್ಲಿ ನಯಸೇನನ ಹೆಸರೆತ್ತಿ ಬೇರೆ ಏನೊ ಮಾಡಿದಂಗೆ ಆಗುತ್ತೆ ಹಾಗೆ ಮಾಡೋದರಿಂದ. ಆ ಕವಿಗೆ ಮತ್ತು ಕೃತಿಗೆ ನ್ಯಾಯ ಸಲ್ಲಿಸಿದಂಗೆ ಆಗ್ತದೆ. ನಾವು ಹಾಗೆ ಮಾಡ್ಲಿಲ್ಲ ಅಂದ್ರೆ ಕವಿ ಹೆಸರನ್ನು ನೆಪಮಾತ್ರ ಉಪಯೋಗಿಸಿಕೊಂಡು ನಾವು ಬೇರೇನೊ ಕೆಲಸ ಮಾಡಿದಂಗೆ ಆಗ್ತದೆ ದಯವಿಟ್ಟು ಕ್ಷಮಿಸಬೇಕು.

ರಾಜಪ್ಪ ದಳವಾಯಿ

ನಾನೇನು ನಿಮ್ಗೆ ಆಕ್ಷೇಪವನ್ನು ಹೇಳಲಿಕ್ಕೆ ಬಂದಿಲ್ಲ. ಆದರೆ ಒಂದು ಕಾಲದ ಓದು ಅದು ಬಹಳಷ್ಟು ಚರ್ಚೆಯಾಯಿತು. ವಾಸ್ತವವಾಗಿ ವಿಮರ್ಶೆಗೆ ಹೀಗೆ ಯಾವುದೇ ಒಂದು ಪಠ್ಯಕೇಂದ್ರ ಅನ್ನೋದೆ ಮುಖ್ಯಅಲ್ಲ. ಬೇರೆ ಜ್ಞಾನ ಶಾಖೆಗಳ ಅಡಿಯಲ್ಲಿ ಕೂಡ ಒಂದು ಕೃತಿಯನ್ನು ನೋಡುವ ಕೃತಿಕೇಂದ್ರಿತವಾದ ಓದು ಎಷ್ಟು ಮುಖ್ಯವೊ ಹಾಗೆನೇ ಕೃತಿ ಆವರಣ ಕೇಂದ್ರಿತವಾದ ಓದು ಬಹಳ ಮುಖ್ಯ. ನಮ್ಮ ಬಹಳಷ್ಟು ಕಾಲ ಪಠ್ಯಕೇಂದ್ರಿತ ಓದಿಗೆ ಒಗ್ಗೀದೀವಿ. ಆದರೆ ಈಗ ವಿಮರ್ಶೆ ಹೀಗೆ ಅನಂತ ಸಾಧ್ಯತೆಗಳನ್ನು ಒಳಗೊಂಡಿದೆ. ಅಂದ್ರೆ ಎಲ್ಲ ಕಾಲಕ್ಕೆ ಒಳಗೊಳ್ತಾಯಿರುತ್ತೆ. ಆದರೆ ಹೀಗಂತ ಹೆಚ್ಚು ಭಿನ್ನ ವಿಚಾರಧಾರೆಗಳ ಮೂಲಕ ಕೃತಿ ತಲುಪಬಹುದಾದ ಅಥವಾ ತಲುಪದೆ ಇರಬಹುದಾದ ಕೃತಿಯ ಸಮೀಪಕ್ಕೆ ಬರಬೇಕು. ಅಂತ ವಿಮರ್ಶೆಯಲ್ಲಿಯೇನಿಲ್ಲ ಇವತ್ತು. ಆದ್ದರಿಂದ ತುಂಬ ವೈವಿಧ್ಯಮಯವಾದ ಕಾಲದಲ್ಲಿ ನಾವಿರುವಾಗ So ಕೃತಿಯನ್ನು ಕುರಿತು ಅಧ್ಯಯನ ನಡೆಸೋದು, ಅದೇ ಮುಖ್ಯ ನೀವು ಹೇಳಿದ್ರಲ್ಲ ಅದು ನನ್ನ ಆಕ್ಷೇಪ ಅಲ್ಲ. ವೆರಿಟಿಸ್ ಒಂದನ್ನು ಎಲ್ಲರ ಗಮನಕ್ಕೆ ತರಲಕ್ಕೆ ಇಷ್ಟಪಡ್ತೀನಿ. ಈಗ ಏಕಕಾಲಕ್ಕೆ ಭಾಷಾ ವಿಜ್ಞಾನದ, ಸಮಾಜಶಾಸ್ತ್ರದ ಅಥವಾ ಆಂತ್ರೋ ಪಾಲಜಿಯ ವಿಜ್ಞಾನದ ವಿಚಿತ್ರವಾದ ಎಲ್ಲಜ್ಞಾನದ ಶಾಖೆಗಳು ವಿಮರ್ಶೆಯಲ್ಲಿ ಕೆಲಸ ಮಾಡುತ್ತಾ ಬಂದಾಗ, ಅದರ ಸ್ವರೂಪ ಬದಲಾಗಿರುವ ಸಂದರ್ಭದಲ್ಲಿ ನಾವು ಮತ್ತೆ ನಾವೇನು ಅನ್ಯಾಯ ಮಾಡ್ತೀದೀವಿ ಅನ್ನೊದು ಕೂಡ ಎಷ್ಟರಮಟ್ಟಿಗೆ ನ್ಯಾಯ ಸಲ್ಲಿಸಬಹುದು ಆ ಮೂಲಕ ಅನ್ನೋದು ಅನುಮಾನ ನನ್ನದು.

ಲಕ್ಷ್ಮೀನಾರಾಯಣ

ಆವಾಗ ನಾನು ಹೇಳಲಿಕ್ಕೆ ಮರೆತಂತಹ ಒಂದು ಅಂಶವನ್ನು ಜ್ಞಾಪಿಸಿಕೊಳ್ಳದಿಕ್ಕೆ ಈ ಸಂದರ್ಭ ಬಳಸಿಕೊಳ್ತೀನಿ. ನಾನು ದೇವನೂರು ಮಹಾದೇವರ ಅಮಾಸ ಕತೆಯ ರೈಲ್ವೆ ಗ್ಯಾಂಗ್‌ಮನ್ ಸಿದ್ಧಪ್ಪನ್ನ ಇನ್ಸ್‌ಟೆಷನ್ ಹೇಳಿದ್ದು ಒಂದು ಅಂಶ ಹೇಳಾನ ಅಂತ ಆಗ ಮಧ್ಯ ಕಳೆದು ಹೋಯ್ತು. ಈಗ ಈ ಸಂದರ್ಭದಲ್ಲಿ ಸಾಹಿತ್ಯದಲ್ಲಿ ವರ್ತಮಾನದ ಬದಲಾವಣೆಗೆ ಅಥವಾ ವರ್ತಮಾನವನ್ನು ವಿರೋಧಿಸಲಿಕ್ಕೆ ಬಳಸುವಂತ ಕೆಲವು ಪರಿಕರ ಗಳನ್ನು ನಮ್ಮ ಸಾಹಿತಿಗಳು ಸೃಷ್ಟಿ ಮಾಡುತ್ತಾರೆ. ಎರಡು ಕಾರಣದಿಂದ ಅವು ಸೃಷ್ಟಿಯಾಗಿರ ಬಹುದು. ಒಂದು ಇಲ್ಲಿ ಬರೋ ಹಾಗೇ ರಾಜನ ಮೇಲೆ ವಾಂತಿ ಮಾಡಿಕೊಳ್ಳುವಂತಹ ಆ ಮುನಿ ಕುಡಿದಾಗ ‘ಕಮ್ಯುನಿಸಮ್ ಬರ‍್ಬೇಕು ಮಕ್ಳೆ’ ಅಂತ ಹೇಳುವ ಒಬ್ಬ ವ್ಯಕ್ತಿ ವಿಶ್ವಾಮಿತ್ರ ಸೃಷ್ಟಿಸಿದ್ದಂತಹ ಹೊಲತಿಯರನ್ನ ಮದುವೆಯಾಗಲಿಕ್ಕೆ ನಿರಾಕರಿಸುವ ಹರಿಶ್ಚಂದ್ರ. ಮತ್ತೆ ಇನ್ನೊಂದು ಅಂಶ ಅದು ಜನಜನಿತವಾಗಿದೆ. ಅದಕ್ಕೆ ಎಲ್ಲೂ ಆಧಾರಯಿಲ್ಲ. ಶಂಕರಾ ಚಾರ್ಯರು ಕಾಶಿಗೆ ಹೋದಾಗ ಅವರು ಎದುರುಗಡೆ ಬಂದಂತಹ ವ್ಯಕ್ತೀನ ಚಂಡಾಲ ಅಂದು ಅವನು ಯಾರನ್ನ ನೀನು ಅಂದಿದ್ದು ಅಂತ ಕೇಳಿ, ಇವರು ನಾನು ಯಾರನ್ನು ಅಂದೆ ದೇಹನೊ ಆತ್ಮನೊ ಅಂತ ನಾಚಿಕೆಪಟ್ಟುಕೊಂಡು ಅವನ ಕಾಲಿಗೆ ನಮಸ್ಕಾರ ಮಾಡಿದ ಅನ್ನೊ ಅಂತ ಅಂಶ. ಅದನ್ನ ಶಂಕರಾಚಾರ್ಯನ ಪರೀಕ್ಷೆ ಸಾಕ್ಷಾತ್ತ್ ಈಶ್ವರನೇ. ಇದನ್ನು ಅಮೃತನ ಹಚ್ಚಿಕೊಂಡು ಹೆಂಡ ಅಲ್ಲ ಅದು ಅಮೃತ, ಅವು ನಾಯಿಗಳಲ್ಲ ನಾಲ್ಕು ವೇದಗಳು. ಹಾಗಾಗಿ ಶಂಕರರನ್ನು ಪರೀಕ್ಷೆ ಮಾಡ್ಲಿಕ್ಕೆ ಹಾಗೇ ಆಡಿದ ಅಂತ ಹೇಳೋದು ಇದರ ಹಿಂದೆ ಈ ಎರಡು ಅಂಶಗಳು ಪ್ರಧಾನವಾಗಿ ಕಾಣಿಸುತ್ತವೆ. ಒಂದೇನು ಅಂತ ಅಂದ್ರೆ ಶಂಕರಾಚಾರ್ಯರ ಅನುಯಾಯಿಗಳು ಇದನ್ನು ಒಪ್ಪಿಕೊಳ್ಳಲ್ಲ ಯಾಕೆಂದ್ರೆ ಶಂಕರಾಚಾರ್ಯರು ಒಬ್ಬ ಹೊಲೆಯನ ಕಾಲಿಗೆ ಬೀಳೋದು ಅವರಿಗೆ ಸಾಧ್ಯವೇ ಇಲ್ಲ, ಏನಿದ್ರೂ ಈಶ್ವರ ಹೊಲೆಯನ ಅವತಾರ ತಾಳಿ, ಕುಷ್ಟರವೇಷ ತಾಳಿ ರಾಜನ ಮೈಮೇಲೆ ವಾಂತಿ ಮಾಡಬಹುದೇ ಹೊರತು ನಿಜವಾದ ಒಬ್ಬ ಕುಷ್ಟರೋಗಿಯಾಗಿ ಬಂದು ವಾಂತಿ ಮಾಡೋದು ಸಾಧ್ಯವಿಲ್ಲ. ಹಾಗೇನೇ ಒಂದು ಭ್ರಾಮಕ ಸ್ಥಿತಿನಲ್ಲಿ ಕಮ್ಯುನಿಸಮ್ ಬರಬೇಕು ಅಂತ ಹೇಳೋದಿಕ್ಕೂ ಕಮ್ಯುನಿಸಮ್ ಬೇಕು ಅಂತ ಒಬ್ಬ ಸೊಬರ್ ಆಗಿರುವ ವ್ಯಕ್ತಿ ಹೇಳೋದಿಕ್ಕೂ ವ್ಯತ್ಯಾಸ ಇಲ್ವೆ? ಇದ್ರೆ ಯಾತಕ್ಕೆ ಈ ವ್ಯತ್ಯಾಸಯಿದೆ? ಅನ್ನೊದು ನನ್ಗೆ ಕಾಣುವ ಎರಡು ಅಂಶಗಳಂದ್ರೆ ಯೋಚನೆ ಮಾಡೋವಂತ ಒಬ್ಬ ಲೇಖಕ ಅನುಸರಿಸುವಂತ ಒಂದು ತಂತ್ರ ಇದಿರಬಹುದು. ಇವನು ವಾಂತಿ ಮಾಡಿದ್ದು ಜಿನಮುನಿನೇ, ಅವನು ಕುಷ್ಟರೋಗಿ ಅಲ್ಲ. ಕುಷ್ಟರೋಗಿ ಒದಗಿಸುವ ಎಲ್ಲ ತೊಂದರೇನೂ ರಾಜನಿಗೆ ಒದಗಿಸಿದ ರಾಜ ಅದನ್ನು ಅನುಭೋಗಿಸಿದ ಅಂತ ಹೇಳೋದರ ಮೂಲಕ ಒಂದು ಕಡೆ ಈ ಧರ್ಮ ಎಷ್ಟರಮಟ್ಟಿಗೆ ಚಾಚಿಕೊಳ್ಳಬಹುದು, ಆ ಧರ್ಮನಾ ನಂಬೊರು ಎಷ್ಟು ಇದನ್ನು ಸಹಿಸಿಕೊಬಹುದು. ಈ ಸಿಮಿಲೇಟೇಡ್ ವೈಲೆನ್ಸ್ ಅಂತಂತೀವಲ್ಲ ಒಂತರ ಪೆಕ್ ಮೂಟ್‌ಕೋರ್ಟ್ ಇದ್ದಹಾಗೆ. ಮಾಟ್ ಇನ್ಸಿಡೆಂಟನ್ನ ಸೃಷ್ಟಿಮಾಡಿಕೊಡೊದು ಒಂದು ಉದ್ದೇಶ ಇರಬಹುದು. ಅದು ನನ್ಗೆ ಗೊತ್ತಿಲ್ಲ. ಎರಡ ನೆಯದು ಒಂದು ಧರ್ಮಕ್ಕೆ ಸಾಧ್ಯವಿರೋವಂತ ಅಥವಾ ಧಾರ್ಮಿಕ ಭಾವನೆನಾ ನಂಬುವಂತ ಮನುಷ್ಯರಿಗೆ ಸಾಧ್ಯವಿರೋ ವಂತ ಮನಸ್ಥಿತೀಲಿ ಅದು ಆ ಧರ್ಮದ ಚೌಕಟ್ಟನ್ನು ಹಾಕೊವಂತ, ನಿಯಂತ್ರಿಸುವಂತ ನಿಯಂತ್ರಣಾನ ಮೀರಿ ಚಾಚಿಕೊಳ್ಳ ಹೊರಟಾಗ ಅದನ್ನು ಮತ್ತೆ ವಾಪಸ್ಸು ಹೇಳದು ಇಲ್ಲಿ ಅವನು ಚಂಡಾಲ ಅಲ್ಲ ಚಂಡಾಲನ ವೇಷ ಹಾಕಿದಂತಹ ಈಶ್ವರ ಅಥವಾ ಅವರು ಹೊಲತಿ ಯರಲ್ಲ, ಹೊಲತಿಯರಂತೆ ಕಾಣಲಿ ಅಂತ ವಿಶ್ವಾಮಿತ್ರ ಸೃಷ್ಟಿಮಾಡಿದ್ದು. ಏಕೆಂದರೆ ಅವರು ಹೊಲತಿಯರಾದ ಮೇಲೆ ವಿಶ್ವಾಮಿತ್ರ ಹೊಲೆಯನಾಗ ಬೇಕಾಗುತ್ತೆ ಅಥವಾ ಹೀಗಿಂದ ಹಾಗೆ ಹಾಗಿಂದ ಹೀಗೆ ಈ ಹೊಲಿತಿನ ಹರಿಬೇಕಾಗುತ್ತೆ. ಹಾಗಾಗಿ ಇದನ್ನು ಸಹ್ಯಮಾಡೋದು ಅಲ್ಲ. ಒಂದು ವಾಸ್ತವನ ಅಥವಾ ಒಂದು ಸತ್ಯವಾಗಿ ಇದು ನಿಜವಾದಲ್ಲಿ ತೋರಿಕೆಯದು ಅಂತ ಹೇಳೋದರೆ ಮೂಲಕ ಅಲ್ಲಿ ಉಂಟಾಗಿರುವಂತ ವೈರುಧ್ಯನ ಮರೆಮಾಚೋದು. ಈ ಮೂರನೇ ಅಂಶ ಯಾವುದಂದ್ರೆ ಯಾವುದೇ ಒಂದು ವ್ಯವಸ್ಥೆನಲ್ಲಿ ಈ ವ್ಯವಸ್ಥೆ ಪರವಾಗಿರೋವಂತ ಯೋಚನೆ ಮಾಡೋವರಿಗೆ ಒದಗುವ ತದ್ವಿರುದ್ಧವಾಗಿರುವ ಅನುಭವನಾ ಹ್ಯಾಗೆ ಅದನ್ನು place ಮಾಡಬೇಕು. ನಿಜವಾಗಿ place ಮಾಡಿದರೆ ಇವರು ನಂಬಿರುವಂತ ವ್ಯವಸ್ಥೆಗೆ ಧಕ್ಕೆಯಾಗುತ್ತೆ. ಆವಾಗ ಈ ಭ್ರಾಮಕವಾಗಿ ರುವಂತ Reading ಅಲ್ಲದೇ ಇರುವಂತ ಸಂದರ್ಭದಲ್ಲಿ ಇವನ್ನು ತುರುಕಬಹುದು. ಈ ಮೂರು ರೀತಿಯ ಎಕ್ಸಟೆನ್ಸ್ ನಮ್ಗೆ ಈ ಸಾಹಿತ್ಯದಲ್ಲಿ ಈ ಕಲೆಯ ಎಲ್ಲ ಪ್ರಕಾರಗಳಲ್ಲೂ ಕಾಣಿಸುತ್ತೆ. ಬಹುಶಃ ಚಿತ್ರಕಲೆಗೆ ಜಾಸ್ತಿಸಾಧ್ಯತೆಗಳಿವೆ. ಶಾರ್ವಂಟಿ ಅಂತ ಒಬ್ಬ ರೈಟರ್ ಅವನು ಒಂದು ವಿಡಂಬನೆನಾ ಬರೆದಾಗ ಆಗಿನ ಕಾಲದ ರಾಜರನ್ನ ಲೇವಡಿ ಮಾಡಿಯೂ ಅವನು ಬದುಕಿ ಉಳುಕೊಳ್ಳುವಂತ ಫಾರಂನ್ನ ಅವನು ಆರಿಸಿಕೊಂಡು ಅವನು ಬದುಕಿ ಉಳಿದು ಹೇಳಬೇಕಾದುದನ್ನು ಹೇಳುವಂತ ಸಾಧ್ಯತೆ ಅಥವಾ ಭಾಷೆನೇ ಬೇರೆ. ಈಗ ಆರ್ಶೀವಾದ ಮಾಡುವಂತ ಒಬ್ಬ ಪುರೋಹಿತ ತಾನು ಯಾರಿಗೆ ಯಾವ ತರ ನಮಸ್ಕಾರ ಮಾಡ್ತಾಯಿದಾನೊ ಅವನಿಗೆ ಬಾಯಿಗೆ ಬಂದದ್ದನ್ನು ಸಂಸ್ಕೃತದಲ್ಲಿ ಹೇಳಿ ಅವನು ಹಂಗೆ ಆರ್ಶೀವಾದ ಮಾಡಿರೊ ನಂಬಿಕೆ ಇವನಿಗೆ ದಕ್ಷಣ ಎರಡು ಸಿಗುವಂತ ಈ ರೀತಿಯ ಒಂದು ಆಕ್ಸಪ್‌ಟೆಡ್ಡ್ ಡಿಸೀಟ್ ಅಥವಾ ಇನೊಸೆಂಟ್ ಡಿಸೀಟ್ ಅಥವ ದುರುದ್ದೇಶವಲ್ಲದ ಡಿಸೀಟ್. ಈ ಸಾಧ್ಯತೆಗಳು ಸಾಹಿತ್ಯದಲ್ಲಿ ಬೇಕಾದಷ್ಟು ಸಲ ಸಿಗುತ್ತೆ. ಇವನ್ನ ನಾವು ಅರ್ಥ ಮಾಡ್ಕೊಳ್ಳಬೇಕಾದಾಗ ಒಂದು ಸ್ವಲ್ಪ ಈ ಕೃತಿಯ ಆಶಯ ಮತ್ತು ನಾವು ಓದೋ ರೀತಿಗೆ ಅನುಗುಣವಾಗಿ ಅವನ್ನು ನಾವು ಆ Shadeನ್ನ ಗಮನಿಸ್ತೀವಿ ಅಂತ ಕಾಣ್ಸುತ್ತೆ. ನಾನು ನೋಡಿರೊ ಹಾಗೆ ಈ ಸ್ಥಾಪಿತವಾಗಿರುವ ಯಾವುದೇ ಧರ್ಮದಲ್ಲಿ ಬರೋವಂತ ಇಂತ ಸಂದರ್ಭಗಳು ಲೇಖಕನ ಮಾನವೀಯತೆಗೆ ಅನುಗುಣವಾಗಿ But ಸ್ಥಾಪಿತ ಧರ್ಮದ. ನಂಬಿರುವ ಧರ್ಮದ ಅಥವಾ ಪ್ರಚಾರ ಮಾಡುತ್ತಿರುವ ಧರ್ಮಕ್ಕೆ ವಿರುದ್ಧವಾಗಿ ಹೋಗಬೇಕಾ ದಾಗಲೆಲ್ಲ ಇಲ್ಲಿ ಅದನ್ನು ಒಳಸೇರಿಸುವ ಒಂದು ತಂತ್ರವಾಗುತ್ತೆ. ಆ ತರಹದ ತಂತ್ರ ಇಲ್ಲಿದಿಯೇ ಅಂತ ನೋಡಬೇಕು ಅಂತ ನನ್ನ ವಿಜ್ಞಾಪನೆ.

ಇನ್ನು ಇವತ್ತಿನ ಸಂದರ್ಭಕ್ಕೆ ನಾವು ಬಳಸ್ತಾ ಇರೋವಂತ ಮೀಡಿಯಾ ಇದೆಯಲ್ಲ ಮೀಡಿಯಾಗಳು ಮಾಡ್ತಾ ಇರೋದು ನಾನು ಮೊಗಳ್ಳಿ ಗಣೇಶ್ ಅವರನ್ನು ಕೇಳಿದಾಗ ಲಾಟರಿ ಟಿಕೇಟನ್ನು ಸಂತೆಯಲ್ಲಿ ಮಾರೋವಂತದ್ದು ಜನಪರವಾಗಿರುವಂತದ್ದು ಅಂದಾಗ ನಾನು ವಿಸ್ತರಿಸುವಂತ ತರ್ಕ ಇದೆಯಲ್ಲ ಅದು ಕುಚೋದ್ಯದಲ್ಲಿ ಜನಗಳ ಮಧ್ಯೆ ಮಾಡುವಂತ ಯಾವುದೇ ಕ್ರಿಯೆ ಜನಪರವಾಗಿರಬೇಕೆಂತೇನಿಲ್ಲ. ಜನವಿರುದ್ಧವಾಗಿರಬಹುದು. ಆದರೆ ಜನಪರವಾಗಿರುವಂತ ಒಂದು ಸ್ಲೋಗನ್ ಅವರು ಕೊಡಬೇಕಾಗುತ್ತೆ. ಇನ್ನು ಒಂದು ವಾರದಲ್ಲಿ ಒಂದೇಳು ಜನ ಲಕ್ಷಾಧಿಪತಿಗಳು ಹುಟ್ತಾರೆ. ಲಕ್ಷಾಧಿಪತಿಗಳನ್ನು ಈ ಲಾಟರಿ System ಮಾಡ್ತಾಯಿದೆ. ಈ ರೀತಿ ಸಮರ್ಥನೆನಾ ಅಥವಾ ಇವತ್ತು ನಡೆದುಕೊಂಡು ಹೋಗ್ತೀದಿರಾ, ನಾಳೆ ಕಾರಲ್ಲಿ ಹೋಗ್ತೀರ, ಇವತ್ತು ಬೆಳ್ಳಿತಟ್ಟೇಲಿ ಊಟಮಾಡಿ ಚಿನ್ನದ ತಟ್ಟೇಲಿ ಕೈತೊಳಿರಿ. ಈ ತರಹದ್ದು ಹೇಳುತ್ತಿರುವವರಿಗೆ ಗೊತ್ತು ಅದೇನು ಅಂತ. ಆದ್ರೂ ಹೇಳ್ತಾರೆ, ಯಾಕೆ ಹೇಳ್ತಾರೆ ಅಂದ್ರೆ ಅದು ಎಲ್ಲೋ ಒಂದು ಕಡೆ ಒಂದು ಹತಾಶ ಸ್ಥಿತಿಯಲ್ಲಿ ರುವಂತವರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯುತ್ತೆ. ಯಾಕಾಗಬಾರದು ಒಂದು ರೂಪಾಯಿ ಕಳೆದುಕೊಳ್ಳುವರಿಂದ ಹತ್ತುರೂಪಾಯಿ ಕಳೆದುಕೊಳ್ಳವದರಿಂದ ಬೆಳ್ಳಿತಟ್ಟೇಲಿ ಯಾಕೆ ಊಟಮಾಡಬಾರದು. ಈ ಟೆಕ್ನಿಕ್ ಹೆಚ್ಚು ಕಡಿಮೆ ಎಲ್ಲ ಪ್ರಚಾರ ಮಾಧ್ಯಮಗಳಲ್ಲಿ ಬಳಸ್ತಾರೆ. ಯಾವಾಗ ಸಾಹಿತ್ಯ ಅನ್ನೊದು ಒಂದು ಪ್ರಚಾರ ಮಾಧ್ಯಮ ಆಗುತ್ತೆ ಅದರ ಇತಿ – ಮಿತಿಗಳೇನೆ ಇರಲಿ, ಅದರ ಉದ್ದೇಶ ಮೀರಿಹೋಗಲಿ ಹೋಗದೇ ಇರಲಿ. ಈ ತಂತ್ರಗಳು ಅಲ್ಲಿ ಬಳಕೆಯಾಗುತ್ತವೆ. ಕತೇನ ಯಾಕೆ ನಯಸೇನ ಆರಿಸಿಕೊಂಡ ಅನ್ನುವಾಗ ಕತೆಗೆ ಹೆಚ್ಚು ಆಪ್ಯಾಯಮಾನವಾದಂತಹ ಕಾಲ ಕಳೆಯುವ ರೀತಿಯಾಗಿದೆ. ಆ ಕಾಲ ಕಳೆಯುವ ರೀತಿಯನ್ನು ಬಳಸಿಕೊಂಡು ತಾನು ಹೇಳಬೇಕಂತಿರೊದನ್ನು ಹೇಳೋದಿಕ್ಕೆ ಪ್ರಯತ್ನ ಪಡೋದು ಒಂದು. ನಾವು ನಮಗೆ ಧರ್ಮ ಮುಖ್ಯ ಅಲ್ಲ. ಕತೆ ಬೇಕಾಗಿದೆ ನಮಗೆ. ಆ ಕತೆ ಕಟ್ಟೋ ರೀತಿ ನಮಗೆ ಬೇಕಾಗಿದೆ. ಆದ್ದರಿಂದ ನಮಗೆ ನಯಸೇನ impartant ಅಂತ  ಹೇಳೋದು. ನಾವು ನಮ್ಮ ಕಡೆಯಿಂದ ಮಾಡೋವಂತದ್ದು ಹೀಗೆ ಇದು ಬಹುಪಯೋಗಿ ಆಗಿರುವಂತದ್ದು. ಆ ಭಾಷೆಗೆ ಆ ಒಂದು ಕಲಾ ಮಾಧ್ಯಮಕ್ಕೆ ಇರೋವಂತ ಸಾಧ್ಯತೆ ……. ಪಠ್ಯ ಸೃಷ್ಟಿಸಿಕೊಳ್ಳುತ್ತಾರೆ. ಹಾಗಾಗಿ ಅನೇಕ ಪಠ್ಯಗಳು ನಾನು ವಿರೋಧಿಸಲಿ, ವಿರೋಧಿಸದೆ ಇಲ್ಲಿ ನಾನು ಹೇಳಲಿ, ಹೇಳದೆ ಇರಲಿ ಅಥವಾ ನನ್ನಂತವರು ಎಷ್ಟೇ ನಿರ್ಬಂಧ ಮಾಡಿದರು ವೈವಿಧ್ಯಮಯವಾಗಿರುವ ರೀಡಿಂಗ್ ಇರುತ್ತೆ. ಅದರ ಬಗ್ಗೆ ಯಾರು ಕೂಡ ಏನೂ ಅಡ್ಡಿ ಮಾಡಲಿಕ್ಕೆ ಆಗ್ಲೀ ಅಥವಾ ಭಯಪಡಲಿಕ್ಕೆ ಆಗ್ಲೀ ಕಾರಣಯಿಲ್ಲ. ಆದರೆ ಏನು ಹೇಳಬಹುದು ಅಂದ್ರೆ ಆ ಎಚ್ಚರ ಇಟ್ಟುಕೊಂಡು ಹೇಳಬೇಕಾದ್ದನ್ನು ಹೇಳದೇ ಇರಬಾರದಲ್ಲ. ಕಳೆದು ಹೋಗಬಾರದಲ್ಲ ಅನ್ನೋದು ನನ್ನ ಕಳಕಳಿ. ನಾನು ಈ ಒಂದೇ ರೀತಿಯ ರೀಡಿಂಗ್ ಅಂತ ಹೇಳಿದಾಗ ಒಂದೇ ರೀತಿ ಆಶಯ ಆಶಯದ ಬಗ್ಗೆ ನನ್ನ ಯಾವ ತಕರಾರು ಇಲ್ಲ. ನೂರು ಜನ ಆಗ್ಲೀ, ಸಾವಿರ ಜನ ಆಗ್ಲೀ, ಒಂದೇ ಆಶಯ ಇಟ್ಟುಕೊಳ್ಳದರ ಬಗ್ಗೆ ನಂದೇನು ತಕರಾರಿಲ್ಲ. ಈ ಮೆಥಡಾಲಜಿ ಇದೆಯಲ್ಲ. ಅದನ್ನು ಬಿಡಿಸೊ ಕ್ರಮಯಿದೆಯಲ್ಲ ಒಂದು ಪಠ್ಯನಾ ಓದೋ ಕ್ರಮಯಿದೆಯಲ್ಲ ಆ ಕ್ರಮ ನೋಡದಕ್ಕೆ ನಾನು ಹೇಳೋದು ಒಂದು Set ಆಗಿರೊ ಕ್ರಮದ ಪರ ಕಂಡ್ರೂ ಕೂಡ ನಾನು ಅದನ್ನು ಬೇರೆ ವೈವಿಧ್ಯನಾ ಒಳಗೊಳಲಿಕ್ಕೆ ನನ್ನ ಹತ್ತಿರ ಬೇಕಾದಷ್ಟು ಮಾರ್ಜಿನ್ ಇವೆ. ಆದರೆ ನಿಮ್ಮ ಹತ್ತಿರ ಒಂದೇ ರೀತಿ ಓದ್ತೀರ ಅಂತ ನಾನು ಆಕ್ಷೇಪ ಮಾಡಿದಾಗ ನಿಮಗೆ ಬೇರೆ ರೀಡಿಂಗನ್ನು ಒಳಗೊಳ್ಳೊವಂತ ಒಂದು ಮಾರ್ಜಿನ್ ಇದೆಯೇ ಅನ್ನೋದು ಹಾಗಿಲ್ಲದೆ ಇದ್ದಾಗ ಆಶಯ ಎಷ್ಟು ಒಳ್ಳೇದು ಆಗಿದ್ದರೂ ಉದ್ದೇಶ ಒಳ್ಳೇದು ಆಗಿದ್ದರು ಎಷ್ಟೇ ಉನ್ನತವಾಗಿದ್ದರು ಕೂಡ ನಾವು ಬೇರೆ ಬೇರೆ ಪಠ್ಯ ಗಳನ್ನು ಒಂದೇ ಪಠ್ಯ ಅನ್ನೋತರ ಓದ್ತಾಯಿರ್ತೀವಿ. ಹಾಗಾಗಿ ಒಂದು ಕೃತಿಗೂ ಇನ್ನೊಂದು ಕೃತಿಗೂ ವ್ಯತ್ಯಾಸ ಕಾಣಿಸೋದೇ ಇಲ್ಲ. ಈ ಮಾತನ್ನು ನಾನು ಹೇಳಿದಾಗ ಸ್ವಲ್ಪ ಬೇರೆ ಅರ್ಥ ಬಂತು. ನಾನು ಹೇಳೊ ದಾಟಿಲೊ, ಏನೊ ಬೇರೆ ಅರ್ಥ ಬಂತು. ಅದಲ್ಲ ಆ ಒಂದೇ ಆಶಯದ ಬಗ್ಗೆ ನನ್ನದೇನು ಇಲ್ಲ. ಈ ಅಂಶ ಇದೆಯಲ್ಲ ಇದರ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಅಂತೇಳಿ, ಈ ಸಿಮಿಲೆಟೆಡ್, ಇದನ್ನು ಯಾಕೆ ಹೇಳಿದೆ ಅಂದ್ರೆ ಇವತ್ತು ಕೂಡ ಮುಖ್ಯವಾಗಿ ಟಿ.ವಿ. ಬಂದಿರೊದು ತುಂಬಾ ಜನ ಆಕ್ಷೇಪಿಸುತ್ತಾರೆ. ಕತೆಯ ಮಧ್ಯೆ ಜಾಹೀರಾತು ಬಂದುಬಿಡುತ್ತೆ ಅಂತ ಅದು it is for education at ಅಂತ ಹೇಳಿಬಿಟ್ಟು To educate, the customer about a product ನಾವು ತಪ್ಪಾಗಿ ತಿಳುಕೊಂಡಿವಿ ಅಷ್ಟೆ. ನಾನು ಆ ತಪ್ಪನ್ನು ಬಹಳ ಕಾಲ ಮಾಡಿದ್ದೆ. educational purposeಗೆ ಯಾವುದು education, to educat the customer about the product to sencetise the customers ಜೊತೆಗೆ The desentise the customer ಇವೆರಡು ಜೊತೆಗೆ ನಡೆಯುತ್ತೆ. ನಾವು ಕೃತಿಗಳನ್ನು ಓದುವಾಗ ಇದನ್ನು ಜ್ಞಾಪಕ ಇಟ್ಟುಕೊಂಡಿರುತ್ತೀವಿ. ಎಲ್ಲೋ ಒಂಚೂರು ಕಳೆದು ಹೋಗಿಬಿಡುತ್ತೆ. ಆಚೆ ಹೊರಟೋಗಿ ಇದು Textಗೆ ಸಂಬಂಧ ಪಟ್ಟದ್ದಲ್ಲ. ನಮ್ಮ ದಳವಾಯಿ ಅವರು ಮಾತಾಡುವಾಗ ನಾವು ಎಲ್ಲಾ ಹೊರಟುಹೋಗಿ ಬಿಡ್ತೀವೆನೊ ಬೇರೆ ಏನೆನೋ ಹೇಳಿಬಿಡ್ತೀವೆನೊ ಅನ್ನೋ ಆತಂಕ ಕಾಣಿಸಿತು. ಇಲ್ಲಿ ಹಾಗಿಲ್ಲ……….ನಾವು ಮಾತಾಡ್ತಾ ಇರೋದು ಬೇರೆ ಕೆಲವರ ಪ್ರಶ್ನೆಗಳಲ್ಲಿ ಈ ಆತಂಕಯಿದೆ. ನಮ್ಗೆ ಬೇಕಾದ್ದೆಲ್ಲ ಹೇಳ್ತಾಯಿದೀವೊ ಅಂತ ಆ ಪ್ರಶ್ನೆ ಬಂತಲ್ಲ ಅಲ್ಲಿ ಏನಾಗುತ್ತೆ ಅಂದರೆ ನಮಗೆ ಬೇಕಾದ್ದೆಲ್ಲ ಅನ್ನೋದು ಈಗಾಗಲೇ ಒಪ್ಪಿತವಾಗಿದ್ದಕ್ಕಿಂತ ಭಿನ್ನವಾದದ್ದು ಅಂತ ಅಷ್ಟೇ ಅರ್ಥ. ಈಗಾಗಲೆ ಒಪ್ಪಿತವಾದದ್ದು ಹ್ಯಾಗೆ ಒಪ್ಪಿತವಾಗಿದೆ ಮತ್ತೆ ಮೂಲಕೃತಿ ಅನ್ನೋದು ಒಂದು ಪ್ರಸ್ತಾಪ ಬರುತ್ತೆ, ನಾನು ಅದರ ಬಗ್ಗೆನೂ ಹೇಳಬೇಕು. ಏನು ಮೂಲ ಕೃತಿ ಅಂದರೆ ನನಗೆ ಅದರ ಬಗ್ಗೆ ಅರ್ಥ ಆಗಲಿಲ್ಲ. ಇದು ಮೂಲದಿಂದ ಬೇರೆಯಾಗುತ್ತೆ ಯಾವುದು ಮೂಲ, ಇದಕ್ಕಿಂತ ಹಿಂದಿನ ರೆಫರೆನ್ಸ್ ಅಷ್ಟೆ ಮೂಲ ಅಂದ್ರೆ ಇದಕ್ಕಿಂತ ಹಿಂದೆ ಸಿಕ್ಕುವಂತ ಒಂದು Text ಅಷ್ಟೆ. ಒಂದು ಗದ್ಯ ಆಧಾರ ಅಷ್ಟೆ. ಅದಕ್ಕಿಂತ ಹಿಂದಕ್ಕೆ ನಾನು ಹೋಗಲ್ಲ. ಅದಕ್ಕಿಂತ ಹಿಂದಕ್ಕೆ ಹೋದಾಗ ಯಾವುದು ಮೂಲ ಅಂತ ಶುರುವಾಗುತ್ತೆ. So ಮೂಲ ಅಲ್ಲ. ನಮ್ಮ ಎದುರಗಡೆ ಒಂದು ಕೃತಿಯಿದೆ ಅದರ ರೀಡಿಂಗನ್ನು ಮಾಡ್ತಾ ಇದೀವಿ. ಆ ರೀಡಿಂಗನ್ನು ಇವತ್ತಿನ ಸಂದರ್ಭದಲ್ಲಿ ಮಾಡ್ತಾಇದೀನಿ. ನಮ್ಮ ಬ್ಯಾಕ್‌ಗ್ರೌಂಡ್ ನಮ್ಮ ಆಶಯ. ನಮ್ಮ ಸಾಮರ್ಥ್ಯ ಇದನ್ನೆಲ್ಲಾ ಸೇರಿಸಿ ಮಾಡ್ತಾ ಇದ್ದೀವಿ. ಹಾಗಾಗಿ ನಾವು ಈ ಪುಸ್ತಕದ ನೆಪದಲ್ಲಿ ಏನೇನೂ ಹೇಳ್ತಾಯಿಲ್ಲ. ಈ ಪುಸ್ತಕದ ನೆಪದಲ್ಲಿ ಏನೇನೊ ಹೇಳ್ತೀದೀವಿ ಅಂತಲ್ಲ. ಸ್ವತಂತ್ರ ವಾಗಿರೊದನ್ನು ನಮಗೆ ಬೇಕಾಗಿರೊದನ್ನು ನಾನು ಮಾತಾಡುವಾಗ ನನಗೆ ಯಾವುದು ಮುಖ್ಯ ಅನ್ಸುತ್ತೆ ಅದನ್ನು ಹೈಲೆಟ್ ಮಾಡ್ತೀನಿ. ನೀವು ಮಾತಾಡುವಾಗ ನಿಮಗೆ ಯಾವುದು ಮುಖ್ಯ ಅನ್ಸುತ್ತೆ ಅದನ್ನು ಹೈಲೆಟ್ ಮಾಡ್ತೀರಿ. ನಾವೆಲ್ಲ ಮಾಡ್ತಾಯಿರೊದು ಅದೇ. ಈಗಾಗಲೇ ಒಪ್ಪಿತವಾಗಿದೆ ಅನ್ನೊ ಒಂದೇ ಕಾರಣಕ್ಕೋಸ್ಕರ ಕೃತಿಯ ವಿವರಣೆ ಆಗಲ್ಲ. ಈ ಟಿ.ವಿ. ವಿಷಯಕ್ಕೆ ಅಡ್ವರಟೈಸ್‌ಮೆಂಟ್ ಕೊಡೊದಕೋಸ್ಕರ ಟಿ.ವಿ.ನೇ ಹೊರತು, ಕತೆನೇ ಹೊರತು, ಸಿರಿಯಲ್ಲೇ ಹೊರತು, ಸೀರಿಯಲ್‌ಗೋಸ್ಕರ ಜಾಹಿರಾತು ಅಲ್ಲ. ಅದು ತೆಲೆಕೆಳಗಾಗಿ present ಮಾಡ್ತಾರೆ. ಅದು ಇನ್ನೊಂದು ವಿಶೇಷ, ಏನು ಕಾಣ್ಸುತ್ತೆ ಅದಲ್ಲ. ಏನು ಕಾಣ್ಸಲ್ಲ ಅದು ಹೌದು. ಈ ರೀತಿ ಒಂದು ತಂತ್ರಗಾರಿಕೆ ಸಾಹಿತ್ಯದಲ್ಲಿದೆ. ಅಥವಾ ಯಾವುದೇ ಮಾಧ್ಯಮದಲ್ಲಿದೆ. ಯಾವುದೇ ಪ್ರಚಾರ ಸಾಧನದಲ್ಲಿದೆ. ಹಾಗಾಗಿ ನಾವು ಕೂಡ ಆ ತಪ್ಪನ್ನು ಮಾಡ್ತಾಯಿಲ್ಲ. ನನ್ನ ವಿಚಾರ ಹೇಳಲಿಕ್ಕೆ ನಯಸೇನನನ್ನ ಬಳಸಿಕೊಂಡ ತಕ್ಷಣ ನಾನು ಟಿ.ವಿ. ಆಗ್ತೀನಿ ಹಾಗೆ ಮಾಡ್ತಾಯಿಲ್ಲ.

ಮೊಗಳ್ಳಿ ಗಣೇಶ್

ಲಕ್ಷ್ಮೀನಾರಾಯಣ ಅವರು, ಮತ್ತೆ ನನ್ನನ್ನು ಉಲ್ಲೇಖ ಮಾಡಿ Temt ಮಾಡ್ತಿದ್ದಾರೆ ಅನ್ಸುತ್ತೆ. ಆದರೆ ಇದು ನನ್ನ ಕೊನೆಯ ಪ್ರತಿಕ್ರಿಯೆ ತಮಗೆ ಓದುವ ಕ್ರಮದ ಬಗ್ಗೆ ಮಾತಾಡುವಾಗ ನಾನು ನನ್ನ ಕಾಲವನ್ನು ಓದ್ತಾಯಿರ್ತೀನಿ ಪಠ್ಯ ಅನ್ನುವ ಶರೀರವನ್ನು ಮಾತ್ರ ಓದ್ತಾಯಿರೊದಿಲ್ಲ. ನನ್ನ ಕಾಲವನ್ನು ನಾನು ಓದ್ತಾಯಿರ್ತೀನಿ. ಹಾಗೇನೇ ಬಹಳ ಮುಖ್ಯ ವಾಗಿ, ಎಲ್ಲವೂ ಏಕಾಶ್ರಯದಲ್ಲೇ ಇರ್ತದೆ. ಆದರೂ ಕೂಡ ನಮ್ಮ ಎಲ್ಲವನ್ನು ಒಂದೇ ಕಣ್ಣಿಂದ ಓದ್ತೀರಿ ಅನ್ನೊದರ ಮಾತಾಡ್ತಿರೊವಾಗ ನನ್ನ ಆಶಯ ಒಂದೇ ಆಗಿರುತ್ತೆ. ನನ್ನ ನೀರಿಕ್ಷೆ ಒಂದೇ ಆಗಿರುತ್ತೆ. ಆದರೆ ಆಶಯಕ್ಕೆ ಪೂರಕವಾಗಿ ನಾನು ಪ್ರವೇಶಗೊಳ್ಳುವ ಕ್ರಮಗಳು ಬೇರೆ ಬೇರೆಯಿರ್ತವೆ. ಆಶಯ ಒಂದೆನೇ. ಆದರೆ ಅದನ್ನು ಪಡೆದುಕೊಳ್ಳಲಿಕ್ಕೆ ಮಾಡುವ ಪ್ರಯತ್ನಗಳು ಅಥವಾ ಅರ್ಥೈಸುವ ಕ್ರಮಗಳು ನಿರೂಪಿಸುವ ರೀತಿನೀತಿಗಳು ಎಲ್ಲವೂ ಕೂಡ ಬಹುರೂಪದಲ್ಲಿರುತ್ತವೆ. ಅದನ್ನು ಮನಗಾಣಬೇಕು. ಆಶಯವನ್ನು ನೋಡಿಕೊಂಡು ಉಳಿದದ್ದು ಇದರ ನಿರೂಪಣೆ ಎಲ್ಲವೂ ಒಂದೇ ಆಗಿರುತ್ತವೆ ಅಂದ್ಕೊಳ ಬಾರದು ಅಂತ ನನ್ನ ವಿನಂತಿ.

ಬಿ. ಎಂ. ಪುಟ್ಟಯ್ಯ

ಈ ಒಟ್ಟು ಚರ್ಚೆಯಲ್ಲಿ ಎರಡು ಮೂರು ಅಂಶಗಳ ಬಗ್ಗೆ ಒಳ್ಳೆ ಚರ್ಚೆ ನಡೀತು. ಒಂದು ಕೃತಿನ ಹ್ಯಾಗೆ ಓದಬೇಕು, ನಮ್ಮ ಕಾಲದ್ದಲ್ಲದ ಕೃತಿಯನ್ನು ಹ್ಯಾಗೆ ಓದಬೇಕು, ಪಠ್ಯವೊಂದು ಮತಧರ್ಮವನ್ನು ಸಾಮಗ್ರಿಯಾಗಿ ಹೊಂದಿದ್ದರೆ ಹ್ಯಾಗೆ ಓದಬೇಕು – ಇವೇ ಮುಂತಾದ ಅಂಶಗಳ ಬಗ್ಗೆ ಗೆಳೆಯರೆಲ್ಲ ಗಂಭೀರವಾಗಿ ಚರ್ಚೆ ಮಾಡಿದ್ದಾರೆ. ಪ್ರಶ್ನೆ ಇರೋದು ನಾವು ವ್ಯವಸ್ಥೆಯನ್ನು, ಸಮಾಜವನ್ನು ಯಾವ ದೃಷ್ಟಿಕೋನದಿಂದ ನೋಡ್ತೀವೊ ಅದೇ ದೃಷ್ಟಿಕೋನದಿಂದ ಸಾಹಿತ್ಯಕ ಪಠ್ಯವನ್ನೂ ನೋಡ್ತೀವಿ. ಆದರೆ ಸಾಮ್ರಾಜ್ಯಶಾಹಿ ಯುಗದಲ್ಲಿ ‘ನಮ್ಮ ದೃಷ್ಟಿಕೋನ’ ಎಂಬುದು ಸಾಮ್ರಾಜ್ಯಶಾಹಿ ಮಾರುಕಟ್ಟೆಯ ಹಿತಕಾಯುವ ಹಿತಾಸಕ್ತಿಯನ್ನು ಸೂಕ್ಷ್ಮಾತಿಸೂಕ್ಷ್ಮ ಸ್ತರದಲ್ಲಿ ಹೊಂದಿರಬಹುದಾದ ಗಂಭೀರವಾದ ಅಪಾಯವಿದೆ. ಈ ಅಪಾಯಗಳನ್ನು ಗುರುತಿಸುತ್ತಲೇ ಸಾಮ್ರಾಜ್ಯಶಾಹಿ ವಿರೋಧಿ ನೆಲೆಯಲ್ಲಿ ಸಾಹಿತ್ಯ ಪಠ್ಯವನ್ನು, ವ್ಯವಸ್ಥೆಯನ್ನು ನೋಡಬೇಕಾಗಿದೆ. ಇದು ನಮ್ಮ ಅಕಾಡೆಮಿಕ್ ಸವಾಲು ಹೇಗೋ ಅದೇ ರೀತಿಯಲ್ಲಿ ನಮ್ಮ ಸಾಮಾಜಿಕ ಜವಾಬ್ದಾರಿಯು ಹೌದು.