ಲಕ್ಷ್ಮೀನಾರಾಯಣ

ಈ ಹೊತ್ತಿನಲ್ಲಿ ನಾವು ಈ ಮುಖಾಮುಖಿ ಅನ್ನೋದನ್ನು ಬಹಳ ಸ್ಪಷ್ಟವಾಗಿ ಬಹಳ ನಿರ್ಣಾಯಕವಾಗಿ, ಬಹಳ ಶಕ್ತಿಯುತವಾಗಿ ಮಾಡೋಕೆ ಶುರು ಮಾಡಿದೀವಿ ಅಂತ ಅನ್ಕೋ ತೀನಿ. ಆಮೇಲೆ ಈ ಕಾಲದ ಈ ೨೧ನೇ ಶತಮಾನವನ್ನು ನಾವು ಬಿಡಿಸಿ ಹೇಳೋದಕ್ಕೆ ಎಷ್ಟು ಕಷ್ಟ ಪಡಬೇಕಾಗಿದೆಯೆಂದರೆ ಅದು ಇವತ್ತಿನ ನಮ್ಮ ಜೀವನ ಕ್ರಮದ ಸ್ಥಿತಿಯನ್ನು ಹೇಳ್ತಾಯಿದೆ. ಈ ಒಂದು ಸಂದರ್ಭದಲ್ಲಿ ನಮ್ಮ ಚರ್ಚೆ ಎಷ್ಟು ಚೆನ್ನಾಗಿ ಎಷ್ಟುಗಟ್ಟಿಯಾಗಿ ಮತ್ತೆ ಎಷ್ಟೊಂದು ಶಕ್ತಿಯುತವಾಗಿ ಯಾವುದು ಖಂಡಿತವಾಗಿ ಇವತ್ತಿನ ಅಗತ್ಯವೋ ಆ ಕಡೆ ಹೊರಳ್ತು ಅನ್ನೊದು ನಾನು ಬಹಳ ನೋವಿನಿಂದ, ಬಹಳ ಬೇಜಾರಿನಿಂದ ಗಮನಿಸುತ್ತಾ ಕೂತಿದ್ದೆ. ಹಾಗಾಗಿ ನನ್ನಲ್ಲಿ ಚಡಪಡಿಕೆ ಶುರುವಾಗಿತ್ತು. ನನ್ನಲ್ಲಿ ನಿರ್ಣಾಯಕವಾದ ಒಂದು ಅರ್ಥವಿದೆ ಒಂದು ಚರ್ಚೆಯಿದೆ ಅಥವಾ ಒಂದು ಹೊಳಹು ಇದೆ ಅಂತ ನಂಬಿದೋನಲ್ಲ ನಾನು. ಆದರೆ ನಾನು ಅರ್ಥಮಾಡಿಕೊಂಡ ರೀತಿಯಲ್ಲಿ ನಾನು ಹೇಳ್ಲಿಲ್ಲ. ಅಂದರೆ ಇದು ಪೂರ್ಣವಾಗಲ್ಲ. ಇದರಲ್ಲಿ ನನ್ನ ಪಾಲು ನಾನು ಉಳಿದುಬಿಡುವ ಒಂದು ಕೊರಗು ನನ್ನಲ್ಲಿ ಉಳಿಯುತ್ತೆ. ಇಷ್ಟೊಂದು ಗಟ್ಟಿಯಾಗಿ, ಸ್ಪಷ್ಟವಾಗಿ ಹೇಳ್ತಾ ಇದ್ದೀನಿ.

ಮೊದಲನೆಯದು ಇಲ್ಲಿಂದ ಶುರು ಮಾಡಿಕೊಳ್ತೀನಿ. ಮೊಗಳ್ಳಿ ಗಣೇಶ್ ಅವರು ಈ ನಯಸೇನನ ಧರ್ಮಾಮೃತ ಓದ್ತಾಯಿದಾರಲ್ಲ, ಅವರ ರೀಡಿಂಗ್ ಇದೆಯೆಲ್ಲ ಅದಕ್ಕೂ ಧರ್ಮಾಮೃತ ಕೃತಿಗೂ ಎಲ್ಲೋ ಒಂದು Link ನನಗೆ ಸಿಕ್ತಾಯಿಲ್ಲ. ಅವರು ಏನು ಓದ್ತಾಯಿದ್ದಾರೆ. ಆ ಮಧ್ಯೆ ಬೇಕಾಗಿರೋವಂತ ಒಂದು ಕೊಂಡಿ ಸಿಕ್ತಾಯಿಲ್ಲ. ನನಗೆ ಅವರೇನು ಧರ್ಮಾಮೃತದಲ್ಲಿ ಇದುಯಿದೆ, ನಯಸೇನ ಹೀಗೆ ಅನ್ಕೊಂಡಿದ್ದಾನೆ ಹಿಂಸೆ ಹೇಳ್ತಾಇದ್ದಾನೆ. ಇವನು ಆಚೆಗೆ ನೋಡ್ತಾಯಿದ್ದಾನೆ ಅಂತ ಹೇಳ್ತಿದ್ದಾರೆ ಇದಕ್ಕೆ ಬೇಕಾದ ಕೊಂಡಿ ನನಗೆ ಸಿಕ್ತಾಯಿಲ್ಲ. ಆ ಕೊಂಡೀನ ಎಲ್ಲೋ ಒಂದು ಕಡೆ ನಮಗೆ ದೊರಕಿಸಿಕೊಳ್ಳೋಕೆ ಸಾಧ್ಯವಾದರೆ ನಮಗೆ ಬಹಳ ಚೆನ್ನಾಗಿರುತ್ತೆ. ತುಂಬಾ ಅರ್ಥಪೂರ್ಣವಾಗಿರುತ್ತೆ ಅನ್ಸುತ್ತೆ.

ಎರಡನೆದು ನಾನು ಲ್ಯಾಟಿನ್ ಅಮೇರಿಕಾ ದೇಶದ ಉದಾಹರಣೆಗಳನ್ನಿಟ್ಟುಕೊಂಡು ಅಲ್ಲಿ ಪಾದ್ರಿಗಳು ದೇಶದ ಮತ್ತು ಮನುಷ್ಯರ ಬಿಡುಗಡೆಗೆ ಪ್ರಯತ್ನ ಪಡ್ತಿದ್ದಾರೆ ಅನ್ನೋದು ಅಂಶಯಿದೆಯಲ್ಲ ಬಹಳ ದೂರದಿಂದ, ಬಹಳ ಅಪ್ಯಾಯಮಾನವಾಗಿ, ಆಕರ್ಷಕವಾಗಿ ಕಾಣುವಂತ ಒಂದು ಅಂಶ. ಕೊನೆಯಲ್ಲಿ ಮನುಷ್ಯ ಯಾಕೆ ಒಬ್ಬರ ಮೇಲೆ ಇನ್ನೊಬ್ಬರು ಸವಾರಿ ಮಾಡಲಿಕ್ಕೆ ಪ್ರಯತ್ನ ಪಡ್ತಾರೆ ಅನ್ನೋದನ್ನು ಒಂಥರ ಫ್ರಾಯ್ಡ್, ಎರಿಕ್ ಫ್ರಾಂನ ತಿಳುವಳಿಕೆಯ ಬಲದಿಂದ ಹೇಳಿದರು. ಅದು ಈ ಮೂರನ್ನು ಸೇರಿಸಿ ನನ್ನ ಆತಂಕ ಅಲ್ಲಿ ತೋಡಿಕೊಳ್ಳೋಕ್ಕೆ ಪ್ರಯತ್ನ ಪಡ್ತೀನಿ.

ನಾವು ಮಾಡ್ತಾ ಇರೋದು ಏನೆಂದರೆ, ನನಗೆ ತುಂಬಾ ಕಷ್ಟ ಆಗ್ತಿರೋದರಿಂದ ಹೀಗೆ ಬಿಡಿಸಿ ಬಿಡಿಸಿ ಹೇಳ್ತಾಯಿದ್ದೀನಿ. ಒಂದು ನಯಸೇನ ಇದ್ದಾನೆ. ಗ್ರಂಥಕರ್ತ ಇದ್ದಾನೆ. ಅವನು ಒಂದು ಕೃತಿಯನ್ನು ರಚಿಸಿದ್ದಾನೆ. ನಯಸೇನ ಮತ್ತು ಕೃತಿ ಎರಡು ಒಟ್ಟಿಗೆ ಹೋಗ್ತಿ ದೆಯಾ ಅಲ್ಲಲ್ಲಿ ಕವಲೊಡೆಯುತ್ತಿವೆಯೊ ಅನ್ನೋದು ಗಮನಿಸುವುದು ಒಂದು ಅಂಶ. ಎರಡನೆಯದು ನಯಸೇನ ಕತೆ ಹೇಳಲಿಕ್ಕೆ ಈ ಶ್ರೇಣಿಕ ಮಹಾರಾಜ ಮತ್ತು ಗೌತಮಗುಣಧರ ಸ್ವಾಮಿಗಳನ್ನು ಆರಿಸಿಕೊಂಡಿದ್ದಾನೆ. ಒಬ್ಬ ಮಹಾರಾಜನಿಗೆ ಈ ಸ್ವಾಮಿಗಳು ಜೈನಧರ್ಮದ ಶ್ರೇಷ್ಠತೆಯನ್ನು ವಿಶದಪಡಿಸಲಿಕ್ಕೋಸ್ಕರ ಈ ಹದಿನಾಲ್ಕು ಕತೆಗಳನ್ನು ಅದು ರಾಜನು ಇಷ್ಟಪಟ್ಟು ಕೇಳಿದ್ದರಿಂದ ಇದನ್ನು ಕತೆಯ ಮೂಲಕವೇ ಹೇಳಿ ಅಂತ ಕೇಳಿದ್ದರಿಂದ ಅವನು ಹೇಳ್ತಾಯಿದ್ದಾನೆ.

ಮೂರನೆದು ಈ ಕತೆಯೊಳಗಡೆ ಇರುವಂತ ಪಾತ್ರಗಳು ತಮ್ಮ ಮನಸ್ಸನ್ನು, ತಮ್ಮ ದೃಷ್ಟಿಕೋನವನ್ನು, ತಮ್ಮ ತಿಳಿವಳಿಕೆಯನ್ನು, ಆಗಾಗ ವ್ಯಕ್ತಪಡಿಸುತ್ತವೆ. ಅವರ ಕೃತಿಗಳಿಂದ ಅವರ ನಡವಳಿಕೆಯಿಂದ ನಮಗೆ ಎಷ್ಟೋಸಲ ವರ್ತಮಾನದಲ್ಲಿ ಅಥವಾ ನಮ್ಮ ಕಾಲದಲ್ಲಿ ಅಥವಾ ನಾವು ನಂಬುವಂತಹ ಸತ್ಯಗಳೆಲ್ಲಿ ಹೊಂದಾಣಿಕೆ ಮಾಡಿಕೊಳ್ಳೊ ಅಂತ ಮಾತುಗಳನ್ನು ಇವರು ಆಡ್ತಾರೆ. ಈ ಅಂತರಾನ ನಾವು ಗಮನಿಸದೆ ಹೋದರೆ ಬದುಕು ಒಂದು ಅಂತರಯಿದೆ. ಇದಕ್ಕೆ ಹಿನ್ನೆಲೆಯಾಗಿ ಇವತ್ತಿನ ನಮ್ಮ ಓದಿನಲ್ಲಿರುವಂತೆ ಒಂದು ಬಹಳ ದೊಡ್ಡ ಆತಂಕಕಾರಿ ಅಂಶ ಏನೆಂದರೆ ನಾವು ಯಾವುದನ್ನು ಮಾಡಬಾರದು ಅಂತ ಅಂದುಕೊಂಡಿದೀವೊ ಅದನ್ನು ನಮ್ಮ ಕೈಲಿ ನಮ್ಮದೇ ನಂಬಿಕೆಗಳು, ನಮ್ಮದೇ ದೃಷ್ಟಿಕೋನ ನಮ್ಮದೆ Termsಲ್ಲಿ ಮಾಡೋ ದಿಕ್ಕೆ ಮಾಡೋವಂತ ಶಕ್ತಿ ಇವತ್ತಿನ ವರ್ತಮಾನಕ್ಕಿದೆ. ನಾನು ಶಿವಗಂಗಾ ಅವರು ಒತ್ತಾಯ ಮಾಡ್ತಿದ್ದಾಗ ನನಗೆ ಅದು ಎಷ್ಟು ಭಯಂಕರವಾಗಿದೆ ಅಂತ ಗೋಚರಿಸಿತು. ಏನೆಂದರೆ ಇದು ನನ್ನ ಗ್ರಹಿಕೆ ಅನ್ನೋದನ್ನು ಮತ್ತೆ ಮತ್ತೆ ಹೇಳ್ತೀನಿ. ಏಕೆಂದರೆ ಇದು ಕೊನೆ ಮಾತು ಅನ್ನೋ ಅಭಿಪ್ರಾಯ ಬರಬಾರದು ಅನ್ನೋ ಕಾರಣಕ್ಕೋಸ್ಕರ ಕಾರ್ಲ್‌ಮಾರ್ಕ್ಸ್‌ನ ದೃಷ್ಟಿ ಕೋನ ಏನಿದೆ, ಇಡೀ ಮನುಷ್ಯನ ಬಗ್ಗೆ ಮನುಷ್ಯ ಚರಿತ್ರೆಯ ಬಗ್ಗೆ ಈ ವರ್ಗ ಸಂಘರ್ಷದ ಬಗ್ಗೆ ಮತ್ತೆ ಸ್ಟೇಟ್‌ಲೆಸ್ ಸೊಸೈಟಿ ಒಂದು ಆದರ್ಶ ಕಮ್ಯುನಿಸಮ್ ಬಗ್ಗೆ ಆತನ ಆಲೋಚನೆ ಗಳು ಮತ್ತು ದೃಷ್ಟಿಕೋನ ಏನಿದೆ ಆ ದೃಷ್ಟಿಕೋನನ ಪಕ್ಕಕಿಟ್ಟು, ಆ ದರ್ಶನಾನ ಪಕ್ಕಕಿಟ್ಟು ಕಾರ್ಲ್‌ಮಾರ್ಕ್ಸ್‌ನ Text ಇದೆಯಲ್ಲ ತುಂಬ ಸಲ Text ಬಗ್ಗೆ ಮಾತಾಡ್ತೀವಿ. ಇಂತ ಕಡೆ ಮಾತ್ರ ಯಾಕೋ Text ಹೊಳೆಯುವುದಿಲ್ಲ. ಮಾರ್ಕ್ಸ್‌ನ Works ಇದೆಯಲ್ಲ, Text ಇದೆಯಲ್ಲ ಅವನ ಎಷ್ಟೋ ಆಲೋಚನೆಗಳಿದಾವಲ್ಲ ಅವನ್ನು ಇವತ್ತು ಅತ್ಯಂತ ಸಮರ್ಥ ವಾಗಿ ಅವಕ್ಕೆ ತದ್ವಿರುದ್ಧವಾಗಿರುವಂತಹ ದರ್ಶನಾನ ಉಳಿಸಿಕೊಳ್ಳಲಿಕ್ಕೆ ಪ್ರಯತ್ನ ಪಡ್ತೀ ರೊದು ನಾವು ಯಾವುದನ್ನು ಇಂಪಿರಿಲಿಸಮ್ ಅಂತೀವಿ ಅಥವಾ ಕೆಲವರು ನಿಯೋ ಇಂಪಿರಿಲಿ ಸಮ್ ಅಂತಾರೆ ಅದು ಬಹಳ ಸಮರ್ಥವಾಗಿ ಮಾಡ್ತಾಯಿದೆ. ಕಾರ್ಲ್‌ಮಾರ್ಕ್ಸ್‌ನ Text ಇಂಪಿರಿಯಲಿಸಂಗೆ ಇವತ್ತು ಉಪಯೋಗವಾಗ್ತಾ ಇರೋವಷ್ಟು ಬಹುಶಃ ಹಿಂದೆಲ್ಲೂ ಆಗಿರಲಿಲ್ಲ. ಇದು ಬಹಳ ನೋವು ಕೊಡುವಂತಹದ್ದು ಮತ್ತು ಅಸಹಾಯಕರಾಗಿ ಒದ್ದಾಡೋ ವಂತದ್ದು. ಎ ಪೆವಿಲ್ ಕೋಟ್ ಇನ್ ದ ಸ್ಟ್ರಕ್ಚರ್ ಅಂದ್ರೆ ಬಹಳ Simple ಆಗಿ ಹೇಳಿಬಿಟ್ಟ ಹಾಗೆ ಆಗ್ತದೆ. ಇಲ್ಲಿ ಆಶಯ ಇದೆಯಲ್ಲ ದರ್ಶನ ಇದೆಯಲ್ಲ, ದರ್ಶನ ಖಂಡಿತ ಮನುಷ್ಯತ್ವ ಇರೊ ಅಥವಾ ನಾವೇನು ಒಂದು ಸಮಾನತೆಯನ್ನು ಎಲ್ಲಾ ರೀತಿಯಲ್ಲಿ ಸಾಧಿಸುವಂತ ಮಾನವೀಯ ಸಮಾಜ ಅಂತೀವಿ ಅದಕ್ಕೆ ತದ್ವಿರುದ್ಧವಾದದ್ದು. ಆ ತದ್ವಿರುದ್ಧವಾಗಿರುವ ಉದ್ದೇಶಕ್ಕೆ ಇವತ್ತಿನ ಅದನ್ನು ರಾಜಕೀಯ ಅಂತ ಕೂಡ ಒಡೆಯಕೆ ಆಗಲ್ಲ ಅಷ್ಟು ಕ್ಲಿಷ್ಟ ವಾಗಿದೆ. ರಾಜಕೀಯ ಅಂದ ತಕ್ಷಣ ಈ ಅರಿವು – ಕುರುಹು ವಾದಯಿದೆಯಲ್ಲಿ ಬಹುಶಃ ಅದು ನನಗೆ ಸಹಾಯ ಮಾಡುತ್ತೆ. ಇದನ್ನು ಹೇಳಲಿಕ್ಕೆ ಈ ಭಯಕಂರ ಅರಿವು ಮತ್ತು ಕುರುಹಿನ ವಾದಕ್ರಮಯಿದೆಯಲ್ಲ ಅವು ಮೇಡಂ ಮಾತಾಡುವಾಗ Matter and mind ಶಬ್ದಗಳನ್ನು ಬಳಸಿದರಲ್ಲ ಅವು ಎಂದೂ ಕೆಲಸಕ್ಕೆ ಬರದೇ ಇರುವಂತಹ ವಾದ ಕ್ರಮಗಳಾಗಿ ಬಿದ್ದಿವೆ. ಕೆಲಸಕ್ಕೆ ಬಾರದೆ ಬಿದ್ದಿವೆ ಯಾಕಂದ್ರೆ ಇಂಪಿರಿಯಲಿಸಮ್‌ಗೆ ಇಂಟರ್‌ಪ್ರೀಟ್ ಮಾಡೋ ರೀತಿಲಿ ಮತ್ತೆ ನೀವು ಕ್ವಾಂಟಮ್ ಥಿಯರಿನ ಮತ್ತೆ ಎಲೆಕ್ಟ್ರಾನ್ ಈ ಶಬ್ದಗಳನ್ನು ಬಳಸಿಕೊಳ್ಳುತ್ತಿರೊ ರೀತಿಲಿ, ಬಹಳ ಬೇಗ ಈ ಯೋಚನೆಯ ಬಲೆಯಲ್ಲಿ ಬೀಳೋದು ಬಹಳ ಸುಲಭ. ಮತ್ತೆ ಇನ್ನು ಒಂದು ಅಂಶ ಏನೆಂದ್ರೆ ಮಾನುಷ ಮತ್ತು ಅಮಾನುಷ ಅಂತೀರಿ. ಅಮಾನುಷದಲ್ಲಿ ಪ್ರಾಣಿಗಳಿವೆ, ಪಕ್ಷಿಗಳಿವೆ, ಯಂತ್ರಗಳಿವೆ, ಕಾರ್ಪೊರೇಟ್ ಸೆಕ್ಟರ್‌ಇದೆ. ನಾನು ಇವಷ್ಟನ್ನು ಒಂದು ಕಡೆ ಸೇರಿಸ್ತಾಯಿದೀನಿ. ಮನುಷ್ಯ ಮತ್ತು ಮನುಷ್ಯ ನಲ್ಲದ ಅಮಾನುಷ ಅಂತ ಹೇಳೊ ಅಮಾನುಷ ಅಂತ ನೀವು ಭಾಗಮಾಡಿಕೊಳ್ಳಲಿಕ್ಕೆ ಸಾಧ್ಯ ವಿದ್ದರೆ ಈ ಅಮಾನುಷದಲ್ಲಿ ಪಶು, ಪಕ್ಷಿ, ಪ್ರಾಣಿಗಳು ಮತ್ತೆ ಈ ಕಾರ್ಪೊರೇಟ್, ನಾವು ಇವತ್ತು ಯಾವುದು ದೈತ್ಯ ಸಂಸ್ಥೆಗಳು ಅಂತ ಹೇಳ್ತೀವಿ ಇವು ಯಾವುವು ಕೂಡ ನಮ್ಮ ಯೋಚನೆಗೆ, ನಮ್ಮದರ್ಶನಕ್ಕೆ ದಕ್ಕುವಂತವಲ್ಲ. ಇದನ್ನು ಬಳಸಿಕೊಂಡು ಈ ಅರಿವು ಮತ್ತು ಕುರುಹು ಕಾನ್ಸ್‌ಪ್ಟನ್ನ ಅಥವಾ ಕ್ವಾಂಟಂ ಥಿಯರಿ ಮತ್ತು ಎಲೆಕ್ಟ್ರಾನ್ ಇಟ್ಟುಕೊಂಡು ನೀವು ಬಹಳ ಸಮರ್ಥವಾಗಿ ಕೇಳೋರು ಎದೆ, ತಲೆ ಕುದಿಯೊ ಹಾಗೆ ಮಾಡಬಹುದು. ಅದಕ್ಕೆ ಅಷ್ಟು ಶಕ್ತಿಯಿದೆ. ಆ ಶಕ್ತಿ ಇರೋದರಿಂದ ನಾವು ಇಷ್ಟು ಕಷ್ಟ ಪಡಬೇಕಾಗ್ತಾಯಿದೆ. ಈ ಅರಿವು ಮತ್ತು ಕುರುಹು ವ್ಯತ್ಯಾಸವಿದೆಯಲ್ಲ ಇದನ್ನು ಬಹಳ ಹತ್ತಿರಕ್ಕೆ ತಂದುಕೊಳ್ಳು ವಂತ ಒಂದು ಉದಾಹರಣೆ ಅಥವಾ ಸಂದರ್ಭ ಅಂದರೆ ಇಡೀ ಶ್ರಮ ಸತ್ಯವಾಯಿತು. ಅದನ್ನು ನೀವು ಅರಿವು ಅಂತ ಕರೆಯೋದಾದರೆ ನಂದೇನು ಆಕ್ಷೇಪವಿಲ್ಲ. ಹಣ ಕುರುಹು ಈ ಎರಡಕ್ಕೂ ಮದ್ಯೆ ಬೇದನಾ ಸಾಧಿಸಿ ಒಂದು ನಿಕೃಷ್ಟವಾದದ್ದು ಕೆಲಸಕ್ಕೆ ಬಾರದ್ದು ಅಥವಾ ಪ್ರಸ್ತಾಪನೇ ಬೇಡ. ಪ್ರಸ್ತಾಪ ಮಾಡೋರು ಎಲ್ಲೋ ಏನೋ ತಪ್ಪು ಮಾಡ್ತಾಯಿ ದ್ದಾರೆ. ಪ್ರಸ್ತಾಪ ಮಾಡಿದಾಗಲ್ಲೆಲ್ಲ ಹೀಗೆ ಒಡೆಯೊದೇ ಅಲ್ಲ, ಎರಡು ಯುನಿಟಿ ಬೇಕಂತ ಹೇಳಿ. ಆದರೆ ವಾಸ್ತವವಾಗಿ ನನಗೆ ಮೊಗಳ್ಳಿ ಗಣೇಶ ಅವರು ವಾಸ್ತವದ ಬಗ್ಗೆ ಮಾತಾನಾಡಿ ದಾಗಲೆಲ್ಲ ಈ ಕಷ್ಟ ತಲೆಯನ್ನು ಬಾಧಿಸುತ್ತೆ. ಈ ವಾಸ್ತವ ಇದೆಯಲ್ಲ ಎಷ್ಟು ಜಟಿಲವಾಗಿರು ವಂತಹ ವಾಸ್ತವ ಎಂದರೆ ನೀವು ಅದರ ವಿರುದ್ಧ ಮುಖಾನ ನೋಡ್ತೀನಿ ಅಂದರೆ ಇಲ್ಲ ಎರಡು ಒಂದೆ ಅನ್ಸುತ್ತೆ. ಎರಡು ಒಂದೇ ಅಂತ ನೋಡೋಕೆ ಹೋದರೆ ವಾಸ್ತವ ಅಂತ ಹೇಳ್ತೀವಲ್ಲ ಬದುಕಿನ ರೀತಿನಲ್ಲಿ ಎರಡೂ ಒಂದೇ ಅಲ್ಲ. ಇದೇ ಮುಖ್ಯ. ಇದೇನೇ ನಿಜವಾದದ್ದು, ಹಣಾನೇ ನಿಜವಾದದ್ದು. ಕುರುಹುನೇ ನಿಜವಾದದ್ದುಅಂತ ಹೇಳುವಂತ ಬಹಳ ಜಟಿಲವಾಗಿರುವಂತ ಒಂದು ಮಾತನ್ನು ಹೇಳ್ತೀವಿ. ಈ ಇದನ್ನು ನಾವು ಗ್ರಹಿಸಲಿಲ್ಲ. ಅಂದರೆ ಈಗ ಲ್ಯಾಟಿನ್ ಅಮೇರಿಕಯಿದೆ ಬಹಳ ಸುಲಭವಾಗಿರುವಂತ ಒಂದು ವಿವರಣೆ ಏನೆಂದ್ರೆ ಕ್ರಿಸ್ತ ಬಡವರ ದೇವರು. ಎಷ್ಟು ಚೆನ್ನಾಗಿದೆ ಕೇಳೋದಕ್ಕೆ. ಕ್ರಿಸ್ತನ್ನ ಸೂಚಿಸುವುದು ಅಂದರೆ ಬಡವರಿಗೆ ಸಹಾಯ ಮಾಡೋದು, ಬಡವರಿಗೆ ಸಹಾಯ ಮಾಡೋದು ಅಂದರೆ ಬಡತನ ಹೋಗಲಾಡಿಸುವುದು, ಬಡತನ ಹೋಗಲಾಡಿಸುವುದು ಅಂತ ಅಂದರೆ ಶೋಷಣೆ ಯನ್ನು ಹೋಗಲಾಡಿಸುವುದು, ಶೋಷಣೆನ್ನ ಹೋಗಲಾಡಿಸುವುದು ಅಂದರೆ ಶೋಷಣಾರಹಿತ ಸಮಾಜವನ್ನ ಕಟ್ಟೋದು. ಶೋಷಣಾರಹಿತ ಸಮಾಜ ಕಟ್ಟಲಿಕ್ಕೆ ಕಾರ್ಲ್‌ಮಾರ್ಕ್ಸ್‌ನ ಮ್ಯಾನಿಫೆಸ್ಟೋ ಇದೆ. So ಮಾರ್ಕ್ಸಿಸಮ್ ನಾವು ಮಾರ್ಕ್ಸಿಸ್ಟ್ ಈ ಚರ್ಚೆಯೊಳಗಡೆ ಯಾಕೀದಾರೆ ಅಂತ ಅಂದರೆ ಅದು ಇವತ್ತಿನ ನಮ್ಮ ಮಿತಿ. ಅದು ಅಲ್ಲಿತಂಕ ಒಪ್ಪಿಕೊಳ್ಳೋಣ ಏನೂ ತೊಂದರೆಯಿಲ್ಲ. ಇದರಿಂದ ಒಳ್ಳೇದು ಆಗ್ತಾಯಿಲ್ಲವೊ, ಖಂಡಿತ ಒಳ್ಳೇದು ಆಗ್ತಾ ಯಿದೆ. ಇದರಿಂದ ಯಾರಿಗೆ ಹೆಚ್ಚು ಅನುಕೂಲ ಆಗ್ತಾಯಿದೆ. ಆ ಪ್ರಶ್ನೆನ ಕೇಳಬಾರದು. ಇವತ್ತು ಸೇವೆ ಅಂತ ಏನಿದೆ ಅದು ಸಮಾಜ ಸೇವೆಯಿರಬಹುದು, ದೀನದಲಿತರ ಸೇವೆಯಿರ ಬಹುದು, ವ್ಯಕ್ತಿಸೇವೆ ಇರಬಹುದು, ಅಥವಾ ಯಾವುದೇ ಸೇವೆಯಿರಬಹುದು. ಒಂದು ಕಡೆ ಕಾರ್ಪೊರೇಟ್ ಸೆಕ್ಟರ್ ಕಡೆಯಿಂದ ಬಂದಾಗ  Paid ಸರ್ವಿಸ್ ಅಂದ್ರೆ ಕೈ ಕಾಲೆಲ್ಲ ಚಡಪಡಿಸಿ ಒಂಥರ ತೊಟ್ಟಿಲಲ್ಲಿ ಒದ್ದಾಡೋ ಮಗುತರ ಆಗಿಬಿಡುತ್ತೆ. ಇವರು ಸೇವೆ ಮಾಡ್ತೀಲ್ಲವೆ ಮಾಡ್ತಿದ್ದಾರೆ. ಇದರಿಂದ ಅನುಕೂಲ ಆಗ್ತಿದೆಯೇ? ಅಲ್ಪಸ್ವಲ್ಪ ಬೇಕಾದಷ್ಟು ತೋರಿಸಬಹುದು. ಮೇಡಂ ಅವರು ಅಲ್ಲಿ ಧರ್ಮಾಮೃತದಲ್ಲಿ ಬರೋ ಹೆಂಗಸರಲ್ಲಿರೊ ಹೆಣ್ಣಿಗೆ ಆಗಿರುವಂತ ಎಷ್ಟೋ ಒಳ್ಳೇತನ ತೋರಿಸಿದರಲ್ಲ ಹಾಗೆ ತೋರಿಸಬಹುದು. ಆದರೆ ಲಾಭ ಯಾರಿಗೆ ಆಗ್ತಾಯಿದೆ. ಈ ಅರಿವು ಮತ್ತು ಕುರುಹನ್ನ ನೀವು ಅಷ್ಟೇ ಒಂದು ಸಣ್ಣ ಚೌಕಟ್ಟಲ್ಲಿಟ್ಟುಕೊಂಡು ನೋಡಿದಾಗ ಬಹಳ ಆಪ್ಯಾಯಕರವಾಗಿರುತ್ತೆ. ಅದಕ್ಕೆ ನಮಗೆ ಎಷ್ಟೋ ಬುದ್ದಿಜೀವಿಗಳಿಗೆ ಇವತ್ತು ಏನ್ಮಾಡಬೇಕೆಂದು ತೋಚದೆ ಝೆನ್ ಬುದ್ದಿಸಂಗೆ ಹೋಗ್ತಾರೆ, ಅಲ್ಲಮಪ್ರಭುಗೆ ಹೋಗ್ತಾರೆ. ಅನುಭಾವದ ಬಗ್ಗೆ ಗಂಟೆಗಟ್ಲೆ ಮಾತಾಡ್ತಾರೆ. ದಪ್ಪದಪ್ಪ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಎಷ್ಟು ಚೆನ್ನಾಗಿದೆ ಅಂದರೆ, ಇವರು ಬಹಳ ಮೀನಿಂಗ್‌ಫುಲ್ ಆಗಿರೋವಂತದು. ಇವರು ಮನುಷ್ಯರನ್ನು ಒಟ್ಟುಗೂಡಿಸುವಂತದ್ದು ಏನೋ ಮಾಡತ್ತಿದ್ದಾರೆ ಅಂತ ಇವರಿಗೂ ಅನ್ಸುತ್ತೆ, ನಮಗೂ ಅನ್ಸುತ್ತೆ. ಈ ಜಟಿಲತೆಯಿದೆ ಯಲ್ಲ ಇದು ಯಾಕೆ ಬರುತ್ತೆ ಅಂದರೆ, ಇನ್ನೊಂದು ಅಂಶಾನ ನಾನು ಹೇಳ್ತೀನಿ. ಈ ವಾಸ್ತವ ಎಚ್ಚರದ ವ್ಯವಹಾರ ಇದೆಯಲ್ಲ ಇದಕ್ಕೆ ಒಂದು ರೀತಿಯ ನಡವಳಿಕೆಯಿದೆ. ಇದಕ್ಕೆ ಒಂದು ಆಚಾರ ಸಂಹಿತೆಯಿದೆ. ಒಂದು ಭಾಗ ಮಾಡೋ ಕ್ರಮಯಿದೆ. ಇದರಲ್ಲಿ ನಾವು ಅನುಭವಿಸುವಂತ ಭಾವನೆಗಳಿವೆ. ಇದು ಒಂದು ಕ್ರಮ. ಎರಡನೆದು ಭ್ರಾಮಕವಾದದ್ದು. ಭ್ರಾಮಕವಾದದ್ದರಲ್ಲಿ ನಮ್ಮ ಎಲ್ಲ ಆಶಯವನ್ನು ತಗೊಂಡೋಗಿ ಸೇರಿಸಿಬಿಡಬಹುದು. ಸಾಧ್ಯವಾಗುತ್ತೊ, ಬಿಡುತ್ತೊ ಇಮ್ಮೆಟಿರಿಯಲ್. ಭ್ರಾಮಕವಾದದ್ದು ಇಲ್ಲಿಲ್ಲ. ಮೂರನೆ ಯದು ಸಾಹಿತ್ಯಿಕವಾಗಿ ನಾವು ವ್ಯಕ್ತಪಡಿಸುತ್ತಾ ಇರೋವಂತ ಆಶಯಗಳು ಅವು ಸುಳ್ಳಾಗಿರ ಬೇಕಂತೇನಿಲ್ಲ. ಆದರೆ ಸಾಹಿತ್ಯಿಕವಾಗಿ ವ್ಯಕ್ತಪಡಿಸುತ್ತಾ ಇರೋವಂತ ಆಶಯಗಳು. ನಾಲ್ಕನೆಯದಾಗಿ ನಾವು ಯಾವುದನ್ನು ರಿಯಲಿಸ್ಟಿಕ್ ಅಂತ ಹೇಳ್ತೀವಿ ಅಂದರೆ ಹೆಚ್ಚು ಸಬ್‌ಕಾನ್ಷಿಯಸ್ ವೇ ಆಫ್‌ದಿ ಎಕ್ಸ್‌ಪ್ರಷನ್ ನ ರಿಯಲಿಸ್ಟಿಕ್ ಅಂತ ಹೇಳ್ತಾರೆ. ನನ್ನ ಉದ್ದೇಶ ಅವಲ್ಲ. ಈ ವಾಸ್ತವದ ಜೊತೆಗೆ ಬೇರೆ ವಾಸ್ತವದ Termsಲ್ಲಿ ಇಡೋವಂತ ಕನಸಿನ, ನಮಗೆ ಏನು ತೊಂದರೆಯಾಗಿದೆ ಎಂದರೆ ಸಾಹಿತ್ಯದಲ್ಲಿ ಈ ಎಲ್ಲವೂ ಬರುತ್ತೆ ವಾಸ್ತವ ಬರುತ್ತೆ, ಕನಸೂ ಬರುತ್ತೆ. ಭ್ರಾಮಕವಾಗಿರೋದು ಬರುತ್ತೆ. ರಿಯಿಲಿಸ್ಟಿಕ್ ಆಗಿರೋದು ಬರುತ್ತೆ ಎಷ್ಟು ಕಷ್ಟ ಆಗ್ತಿದೆ ಅಂದರೆ ಈ ಅಷ್ಟನ್ನು ಬಳಸಿಕೊಂಡು ನಮ್ಮದೇ Terms ಅಲ್ಲಿ ನಮಗೆ ಬೇಕಾದ್ದಕ್ಕಿಂತ ವಿರುದ್ಧವಾದುದಕ್ಕೆ ನಮ್ಮನ್ನು ಒಪ್ಪಿಸಿ ಬಿಡುತ್ತೆ. ನಮಗೆ ಬೇಕಾದ್ದೇನು ಅನ್ನುವುದರ ಬಗ್ಗೆ, ಬೇಕಾದರೆ ಭೇದ ಇಟ್ಟುಕೊಬಹುದು. ನಾವು ಮನುಷ್ಯತ್ವದ ಬಗ್ಗೆ ಮಾತಾಡ್ತಾಯಿದೀವಿ, ಮನುಷ್ಯ ಸಮಾಜದ ಬಗ್ಗೆ ಮಾತಾಡ್ತಾಯಿದೀವಿ ಅನ್ನೋದು ನಮ್ಮ ಉದ್ದೇಶ ಅಂತ ಇಟ್ಟುಕೊಂಡರೆ ಇಲ್ಲಿ ಸಿಡಿತಾಯಿರೋದು ಅದಕ್ಕೆ ವಿರುದ್ಧವಾಗಿರುವಂತ ದರ್ಶನಗಳನ್ನು ಪ್ರತಿಪಾದಿಸೊ ಮಾತುಗಳನ್ನು ನಾವು ನಮ್ಮ Termsಲ್ಲಿ ನಮ್ಮ ಆಲೋಚನಾ ಕ್ರಮದಲ್ಲಿ ಸರಿ ಅಂತ ಒಪ್ಪಿಕೊಳ್ತಾಯಿರೋದು. ನಾನಿಷ್ಟೆ ಹೇಳಿದರೆ Statement ಆಗುತ್ತೆ. ಇವನ್ನು ಇನ್ನು ಮತ್ತಷ್ಟು ಬಿಡಿಸಿ ಹೇಳ್ತೀನಿ. ಹಾಗಾಗಿ ನಾನು ಮೊಗಳ್ಳಿ ಗಣೇಶ ಅವರ ರೀಡಿಂಗ್‌ನ ಮಿಸಿಂಗ್ ಲಿಂಕ್‌ನ ಬಗ್ಗೆ ನನ್ನ ತೊಂದರೆ ಶುರುವಾಗಿರೋದು ಇದು ಗಣದರಸ್ವಾಮಿಗಳು, ಶ್ರೇಣಿಕ ಮಹರಾಜನಿಗೆ ಹೇಳ್ತೀರೊ ಜೈನಧರ್ಮದ ಉತ್ಕೃಷ್ಟತೆ ಬಗ್ಗೆ ಹೇಳ್ತೀರೊ ಕತೆಗಳಲ್ಲಿ, ಕತೆಯ ಅಗತ್ಯದಿಂದಲೊ ಒಬ್ಬ ವೇಶ್ಯೆ ಬರೋದು ಕತೆಯ ಆಗತ್ಯ. ಆದರೆ ವೇಶ್ಯೆ ಬರುತ್ತಾಳೆ. ಒಬ್ಬ ರಾಜ ಬರೋದು ಕತೆಯ ಅಗತ್ಯವಾದರೆ ರಾಜ ಬರುತ್ತಾನೆ. ಅದನ್ನು ನಾವು ಇಲ್ಲಿ ನಿರ್ಧರಿಸುವುದಕ್ಕೆ ಕಷ್ಟ ಆಗ್ತದೆ. ಮತ್ತೆ ಕತೆಯಿಂದ ಆಚೆ ಹೋಗಬೇಕಾಗುತ್ತೆ. ಇದನ್ನು ಸ್ಪಷ್ಟಪಡಿಸಲಿಕ್ಕೆ ನಾನು ದೇವನೂರು ಮಹಾದೇವರ ‘ಅಮಾಸ’ ಕತೆಯಲ್ಲಿ ಒಂದು ಪ್ರಸಂಗವನ್ನೆ ಆರಿಸಿಕೊಳ್ತೀನಿ. ಅದು ನಿಮ್ಮಂತವರ ಕಣ್ಣಿಗೆ ಯಾಕೆ ಬೀಳಲ್ಲ ಅನ್ನೊದನ್ನ ಹೇಳ್ತೀನಿ. ನನ್ನಂತರವರ ಕಣ್ಣಿಗೆ ಯಾಕೆ ಬೀಳುತ್ತೆ. ರೈಲ್ವೆ ಗ್ಯಾಂಗ್‌ಮನ್ ಸಿದ್ಧಪ್ಪ ಕುಡಿದುಬಿಟ್ಟು ‘ಕಮ್ಯುನಿಸಮ್ ಬರ‍್ಬೇಕು ಮಕ್ಕಳೇ’ ಅಂತ ಕೂಗುತ್ತಾನೆ. ಅಮಾಸ ಕತೆಯಲ್ಲಿ ರೈಲ್ವೆ ಗ್ಯಾಂಗ್‌ಮನ್ ಸಿದ್ಧಪ್ಪ ಕೂಗೋದು ಕುಡಿದು ಕಮ್ಯುನಿಸಮ್ ಬರ‍್ಬೇಕು ಅಂತಾನೆ. ಆ ಕುಡಿದು ಯಾಕೆ ಕಮ್ಯುನಿಸಮ್ ಬರ‍್ಬೇಕು ಅಂತಾನೆ. ಇದನ್ನು ನೀವು ಗ್ಯಾಂಗ್ ಮನ್ ಸಿದ್ಧಪ್ಪನ್ನ ಕೇಳಾಕಾಗಲ್ಲ. ಮಹಾದೇವ ಅವರನ್ನೇ ಕೇಳಬೇಕು. ಮಹಾದೇವ ಅವರು ಉತ್ತರ ಕೊಡಲ್ಲ. ಅಂದರೆ ಜವಾಬ್ದಾರಿ ನಮ್ಮಮೇಲೆ ಬೀಳುತ್ತೆ. ನಾನು ಇಲ್ಲಿ ಹೇಳ್ತೀರೊ ದೇನು ಅಂದರೆ ನಮ್ಮ ಆಶಯಕ್ಕೆ ವಿರುದ್ಧವಾದದ್ದು ಒಂದು ವೇಳೆ ವಾಸ್ತವವಾಗಿದ್ದರೆ, ಒಂದು ವೇಳೆ ನಾವು ಒಪ್ಪಿಕೊಳ್ಳದೆ ಅದು ನಿಜವಾಗಿದ್ದರೆ ಅದು ಭ್ರಮೆಲೊ, ರಿಯಲಸ್ಟಿಕ್ ಆಗೊ ಕನಸಿನಲ್ಲೋ ಅವಕಾಶ ಪಡೆದುಕೊಳ್ಳುತ್ತೆ. ಆ ಅವಕಾಶ ಪಡೆದುಕೊಂಡಿದ್ದನ್ನು ನಾವು ಹೆಕ್ಕಿತೆಗೆದು ನಾವು ಅದರ ಪರ ಆದರೆ, ನೋಡಿ ಇವರು ಹೇಳಿದ್ದಾರೆ ಇವರ ಪರ, ನಾವು ಅದರ ಪರ ಅಲ್ಲ ಅಂತಾದರೆ ಗಮನಿಸೊದೇ ಇಲ್ಲ. ನಮ್ಮ ಗಮನಕ್ಕೆ ಬರೋದೇ ಇಲ್ಲ. ಈ ವಾಸ್ತವಕ್ಕಿಂತ ಹೆಚ್ಚಾಗಿ ವಾಸ್ತವ ಏನು? ಕಾರ್ಪೊರೇಟ್ ಸೆಕ್ಟರ್ ನಮ್ಮ ಎಲ್ಲಾ ಜೀವನ ಕ್ರಮಗಳನ್ನು ನಮ್ಮ ಆಲೋಚನಾ ಕ್ರಮಗಳನ್ನು ನಮ್ಮ ಕನಸುಗಳನ್ನು, ನಮ್ಮ ಎಚ್ಚರಗಳನ್ನು ನಿಯಂತ್ರಿಸುತ್ತ ಇರೋವಂತ ಸ್ಥಿತಿ ಯಾವುದೊ ಕಾಲದಲ್ಲಿ ಬ್ಲೇಕ್ ಯಾಕೆ ಹೇಳಿದ. ಯಾಕೆಂದರೆ ಸಂತರಿಗೆ ಆ ಗುಣವಿದೆ. ಅನುಭಾವಿಗಳಿಗೆ ಆ ಗುಣಯಿದೆ, ಅವರು ಭೇದ ಮಾಡಲಾರರು. ಅವರು ಅಭೇದ ಅವರು ಕುರುಹು ಮತ್ತು ಅರಿವು ಅಂತ ಬೇಧ ಮಾಡ್ಲಿಕ್ಕೆ ಆಗಲ್ಲ. ಯಾವುದು ಕುರುಹು, ಯಾವುದು ಅರಿವು ಅಂತ ಬೇಧ ಮಾಡ್ಲಿಕ್ಕೆ ಆಗಲ್ಲ. ಅವರಿಗೆ ಹೊಳೆಯುತ್ತೆ ಅದು Pitty world no more if you did not make some body poor ಇದು ಕಾರ್ಲ್‌ಮಾರ್ಕ್ಸ್ ಹೇಳಿದ್ದಲ್ಲ. ಬ್ಲೇಕ್ ಹೇಳಿದ್ದು. ನಾವು ಹೇಳುವ ಎಲ್ಲ ಮಾನವೀಯ ಮೌಲ್ಯ ಇಲ್ಲಿ ಅಸಮಾನತೆಯ ಮತ್ತೆ ಬೇಧದ ಆಧಾರನ ಪಡೆದುಕೊಂಡಿವೆ. ಬೇಧ ಮಾಡಿದರೆ ಮಾತ್ರ ನಾನು ಇದನ್ನು ರಿಟೈರ್‌ಮೆಂಟ್ ಅನ್ನಿಸಿದರೂ ತುಂಬ ಕಡೆಹೆಳ್ತೀನಿ. ಸ್ಲಂಗಳಿಲ್ಲದೆ ಮದರ್‌ತೇರಿಸಾ ಇಲ್ಲ, ಮದರ್ ತೆರಿಸಾಗೆ ನೋಬಲ್ ಪ್ರೈಜ್ ಕೊಡಲಿಕ್ಕೆ ಒಂದು ವ್ಯವಸ್ಥೆಯಿದೆ, ಇದೇ ವ್ಯವಸ್ಥೆ ಸ್ಲಂಬೋರ್ಡ್‌ನ್ನ, ಸ್ಲಂಮಿನಿಸ್ಟ್ರೀನ ಅಥವಾ ಸ್ಲಂನ್ನ ಮೆಂಟೇನ್ ಮಾಡಲಿಕ್ಕೆ ಬೇಕಾಗಿರುವ ಎಲ್ಲ ಕ್ರಮಗಳನ್ನು ತೆಗೊಳ್ಳತ್ತೆ. ಅಲ್ಲಿ ಸೇವೆ ಮಾಡೊ NGOಗಳಿಗೆ ಎಷ್ಟು ದುಡ್ಡು ಬೇಕಾದರೂ ಕೊಡ್ತಾರೆ. ಆದರೆ ಸ್ಲಂಗಳಿರ ಬೇಕು. ಸ್ಲಂ ಇಲ್ಲ ಅಂದರೆ ಇವರ‍್ಯಾರು ಇಲ್ಲ. ಅಂದರೆ ವಾಸ್ತವವಾಗಿ ಮೊಗಳ್ಳಿ ಗಣೇಶ್ ಅವರು ಹೇಳೋ ವಾಸ್ತವ ವರ್ತಮಾನದಲ್ಲಿ ನಮ್ಮ ಜೀವನ ನಮ್ಮ ಈ ಆಶಯದ ಪ್ರಕಾರ ಇರಬೇಕು ಅಂತಾದರೆ, ಬಹುಶಃ ಇವ್ಯಾವು ಬೇಕಿಲ್ಲ. ನಯಸೇನನಂತವರು ಧರ್ಮಾಮೃತನ ಬರೆಯುವಾಗ ನಾವು ನಯಸೇನನಲ್ಲಿ ಈ ಗುಣಗಳನ್ನು ನೋಡ್ತೀವಿ ಇಲ್ಲವೆ ಅನ್ನೊದು ನಮ್ಮ ಆಶಯ, ನಮ್ಮ ಆಸೆ ಮೇಲೆ ನಿಂತಿದೆ. ಇಲ್ಲ ಒಂದು Text ಎದುರುಗಡೆಯಿದೆ. ಅವನು ಸ್ಪಷ್ಟವಾಗಿ ಹೇಳ್ತಾನೆ. ದುಡ್ಡನ್ನ ಯಾಕೆ ಸಂಪಾದಿಸಬೇಕು? ಈ ನಮ್ಮ ವಸುಭೂತಿನ ಜೈನಧರ್ಮಕ್ಕೆ ಎಳಸೋದಕೋಸ್ಕರ ಪ್ರಯತ್ನ ಪಡುವಂತೆ ಮತ್ತು ಈ ಪ್ರಯತ್ನದಲ್ಲಿ ಸಫಲನಾಗುವಂತ ಆ ಮನುಷ್ಯ. ಪುರಷನು ತನಗೆ ಧನವಿದೆಯೆಂದು ಸುಮ್ಮನಿರಬಾರದೆ. ದ್ರವ್ಯವಿದ್ದರೂ ಮತ್ತೆ ದ್ರವ್ಯವನ್ನು ಸಂಪಾದಿಸಬೇಕೆ? ಸಂಪಾದಿಸಲೇಕೆ? ಎಂದರೆ ಧನ ಸಿಕ್ಕಿದರೆ ಇಹ – ಪರಗಳೆರಡನ್ನು ಸಾಧಿಸಬಹುದು. ಧನ ಕುರುಹು ಇವತ್ತಿನ ಇಡೀ ಪ್ರಪಂಚ ನಾವು ವಿರೋಧಿಸುವಂತೆ ಒಪ್ಪದೇ ಇರುವಂತ ಪ್ರಪಂಚ ವ್ಯವಹರಿಸುತ್ತಿರೊದೊ, ನಿಂತಿರೊದು ಈ ಕುರುಹುವಿನ ಮೇಲೆ. ನಾವು ಯಾವತ್ತು ಕೂಡ ಈ ಕುರುಹನ್ನ ಮೀರಿ, ಕುರುಹನ್ನ ಛೇದಿಸಿ ಈ ಅರಿವನ್ನು ಮಾಡಲ್ಲ. ಅದಕ್ಕೆ ನಾವು ಬೇರೊಂದು Compartment ಮಾಡೋದು ಯಾತಕ್ಕೆ ಅಂದರೆ ಇಕ್ಕಟ್ಟಾದ ತಕ್ಷಣ ಅಲ್ಲಿಗೆ ಜಾರಿ ಬಿಡಬಹುದು. ಈ ಪ್ರಶ್ನೆನಾ ಅಲ್ಲಿಗೆ ತಳ್ಳಿ ಬಿಡಬಹುದು. ಇದು ನಮ್ಮದಲ್ಲ ಅಂತ. ಮೈಸೂರಿಗೆ ಮೊಗಳ್ಳಿಗಣೇಶ್ ಅವರು ಬಂದಿದ್ದಾಗ ಒಂದು ಪ್ರಶ್ನೆನಾ ಕೇಳಿದೆ. ಇದು ಎಕಾನಾಮಿಕ್ಸ್‌ಗೆ ಸಂಬಂಧಿಸಿದ ಪ್ರಶ್ನೆ ಅಂತ ಅವರು ಪಕ್ಕಕ್ಕಿಟ್ಟುಬಿಟ್ಟರು. ಅದು ಸಾಹಿತ್ಯದ ಚರ್ಚೆ ಸಿಡಿತಾ ಇತ್ತು. ಜ್ಞಾಪಕ ಇದಿಯೊ, ಇಲ್ಲೋ ಗೊತ್ತಿಲ್ಲ, ಯುರೋಪಿನಲ್ಲಿರುವಂತೆ ಯುರೋಪಿನಲ್ಲಿರುವ ಕರೆನ್ಸಿಗೂ, ಇಂಡಿಯಾ ದಲ್ಲಿರೊ ಕರೆನ್ಸಿಗೂ ಇರೊ ಅಂತರನ ಹ್ಯಾಗೆ ವಿವರಿಸುತ್ತೀರ? ಅಂತ ಕೇಳಿದ್ದೆ ನಾನು. ಅಲ್ಲಿ ಸಂಪಾದಿಸುವಂತ ಎಪ್ಪತ್ತು ರೂಪಾಯಿ ಇಲ್ಲಿ ತೆಗೆದುಕೊಂಡು ಬಂದರೆ ನಾನು ಮಾಡು ವಂತ ನಾಲ್ಕು ಊಟನ ಆರಾಮಾಗಿ ಮಾಡಬಹುದು. ನಾನು ಇಲ್ಲಿ ಸಂಪಾದಿಸಿರೊ ರೂಪಾಯಿ ಯಾತಕ್ಕೂ ಬರಲ್ಲ ಲೆಕ್ಕಕ್ಕೆ ಇಲ್ಲ ಇದನ್ನ ಹ್ಯಾಗೆ ವಿವರಿಸುತ್ತಿರಾ ಅಂತ ನಾನು ಕೇಳಿದ್ದೆ. ನನ್ನ ಉದ್ದೇಶ ಅವರು ಸಾಹಿತ್ಯ ಮತ್ತು ಈ ಎಕಾನಾಮಿಕ್ಸ್ ಬೇರೆ ಬೇರೆ ಅಂಗಗಳಿಗಿರೊ ಸಂಬಂಧನಾ ಅವರು ಮನಗಾಣುತ್ತಾರೇನೊ ಅಂತ ಒಂದು ಆಸೆಯಿತ್ತು. ಅವರು ಬಹಳ ಸುಲಭವಾಗಿ ನನ್ನ ನಿರೀಕ್ಷೆಮೀರಿ ಪಕ್ಕಕ್ಕಿಟ್ಟು ಬಿಟ್ಟರು. ಅವರು ಸಾಕಷ್ಟು ಸೂಕ್ಷ್ಮವಾಗಿ ಯೋಚನೆ ಮಾಡ್ತಾರೆ. ಆದರೆ ಈ Compartment ವಿಷಯ ಬಂದಾಗ ಈ Compartment ಇಟ್ಟುಕೊಂಡು, ನಯಸೇನ ಒಂದು ಕಂಪರ್ಟ್‌ಮೆಂಟ್, ಧರ್ಮಾಮೃತ ಒಂದು ಕಂಪರ್ಟ್‌ಮೆಂಟ್, ಶೆಟ್ಟಿ ಒಂದು ಕಪರ್ಟ್‌ಮೆಂಟ್, ಇವರೆಲ್ಲ ಒಂದು ಸಮಾಜಕ್ಕೆ ಸೇರಿದವರು ಒಂದು ಸಮಾಜದ ಆಶಯದಲ್ಲಿ ಬಂದು ಸೇರಿಕೊಂಡಿರುವಂತವರು ತಮ್ಮದೇ ಆದ ರೀತಿಲಿ ನಮ್ಮ ಕಾಣ್ಕೇನ ಇದರಲ್ಲಿ ನೋಡಲಿಕ್ಕೆ ಪ್ರಯತ್ನ ಪಡ್ತಲೇ ಇರ್ತೀವಿ. ದುರಂತ ಎಲ್ಲಿದೆ ಅಂತ ಅಂದರೆ ಈ ರೀತಿ ಮಾಡೋವಂತದ್ದು. ಮಾರ್ಕ್ಸಿಸ್ಟ್ Terms ನಲ್ಲಿನೇ, ಪ್ರಗತಿಪರ ಯೋಚನೆಯ Terms ನಲ್ಲಿನೇ ಇರೋ ವ್ಯವಸ್ಥೆನ ಇನ್ನು ಬಲಪಡಿಸೋದು ಅಥವಾ ಡಿಸ್ಟರ್ಬ್ ಮಾಡದೆ ಇರೋದು ಸಾಧ್ಯ ಇದ್ದರೆ ಬಹಳ ಸಂತೋಷ. ನಾನು ನಿನ್ನೆ ಬಹಳ ಒರಟಾಗಿ ಬಹಳ ನೇರವಾಗಿ ಹೇಳಿದ್ದು ಇದೇನೆ. ಚರ್ಚೆ ಎಷ್ಟು ಬೇಕಾದರೂ ಮಾಡ್ರಿ. ಚರ್ಚೆ ಎಷ್ಟು ಬೇಕಾದರೂ ಮಾಡೋಣ ಸಹಾಯ ಸಿಗುತ್ತೆ. ಏನೂ ತೊಂದರೆಯಿಲ್ಲ. ಸಹಾಯ ಸಿಗುತ್ತೆ. ಎಷ್ಟು ಬೇಕಾದರೂ ಸಹಾಯ ಸಿಗುತ್ತೆ. ಫಂಡಿಂಗ್ ಇದೆ. ಈ ಫಂಡಿಂಗ್ ಕಾನ್ಸೆಪ್ಟ್ ಇದೆಯಲ್ಲ, ನಾವು ತುಂಬ ಹಿಂದೆ ರಾಜಾಶ್ರಯ ಅಂತ ಈಗ ಕಣ್ಣಿಗೆ ಕಾಣಿಸ್ತಾಯಿದೆಯ ಇವತ್ತು ಫಂಡಿಂಗ್ ನಮಗೆ ಕಾರ್ಪೊರೇಟ್ ಸೆಕ್ಟರ್‌ನಿಂದ ನೇರವಾಗಿ ಬರಲ್ಲ. ಎಲ್ಲೆಲ್ಲೊ ಬಿದ್ದು, ಎಲ್ಲೆಲ್ಲೊ ಬರುತ್ತೆ ನಮಗೆ ಅಧಿಕೃತವಾದ ಸಂಸ್ಥೆಗಳ ಮೂಲಕ ಬರುತ್ತೆ. UGCಯಿಂದ ಬರುತ್ತೆ. UGCಗೆ ಯಾವ ದುರುದ್ದೇಶವಿದೆ. ಯಾವ ಪೊಲಿಟಿಕ್ಸ್ ಯಿದೆ ಅನ್ಸುತ್ತೆ. ನಮಗೆ ಇಷ್ಟು ಹಾಸು ಹೊಕ್ಕಾಗಿರುವಂತ ಶಕ್ತಿಗಳು ನಮ್ಮನ್ನು ನಿಯಂತ್ರಿಸುತ್ತಿ ರುವಲ್ಲಿ ನಮ್ಮನ್ನ ದಾರಿ ತಪ್ಪಿಸೊದು ಆಗಲಿ, ನಮ್ಮ ಯೋಚನೆನಾ ಬೈಪಾಸ್ ಮಾಡಿಸೋದು ಆಗಲಿ ಎಷ್ಟು ಸುಲಭ ಆಗಿದೆ ಅಂದರೆ ಅದನ್ನು ಅರ್ಥಮಾಡಿಕೊಳ್ಳೋ ಕೆಲಸ ಬಹುಶಃ ಹೆಚ್ಚು ಹೆಚ್ಚು ಮಾಡಬೇಕಾಗಿದೆ ಅಂತ ಕಾಣ್ಸುತ್ತೆ. ಇಲ್ಲದೆ ಹೋದ್ರೆ ಒಂದು ಸಾಹಿತ್ಯ ಕೃತಿಯ ಚರ್ಚೆಯಾಗಲಿ ಅಥವಾ ಒಂದು ಧೋರಣೆಯ ಚರ್ಚೆಯಾಗಲಿ ತುಂಬ ಸುಲಭವಾಗಿ ನಮಗೆ ಆಪ್ಯಾಯಮಾನವಾಗಿರೊ ಅಂತ Termsಲ್ಲೇ ದಾರಿ ತಪ್ಪಿಸಿ, ನಿಷ್ಪಲಗೊಳಿಸಿ ಬಿಡುತ್ತವೆ ಅಂತ ತುಂಬ ಜಟಿಲವಾದ ದುಷ್ಟಸ್ಥಿತೀಲಿ ನಾವಿದೀವಿ. ಈ ಅಮಾನುಷ ಅಂತ ಯಾಕೆ ಹೇಳಿದೆ ಅಂದರೆ, ಪ್ರಾಣಿಪ್ರಪಂಚದಲ್ಲಿ ನೀವು ಹೇಳೊ ಸ್ಪರ್ಧೆ ಅಸ್ತಿತ್ವದ ಪ್ರಶ್ನೆ ಒಂದು ಕಾಲದಲ್ಲಿ ಹೇಳ್ತಾಇದ್ದರು. ಇವತ್ತು ಅದನ್ನು ತಗ್ಗಿಸಿ ಹೇಳ್ತಾರೆ. But ಅದನ್ನು ಗಟ್ಟಿಯಾಗಿ ಇವತ್ತು ಇಂಪಿರಿಲಿಸ್ಟ್ ಹೇಳ್ತಾರೆ. ಮನುಷ್ಯ ಸ್ಪರ್ಧಾಜೀವಿ ಸ್ಪರ್ಧೆಯಿಲ್ಲದೆ ಬದುಕಿಲ್ಲ, ಯಾರು ಸ್ಪರ್ಧೆಲಿ ಗೆಲ್ತಾರೆ ಅವರಿಗೆ ಮಾತ್ರ ಬದುಕುವ ಹಕ್ಕಿದೆ. ಇದು ಮನುಷ್ಯ ಪ್ರಪಂಚ. ಇದನ್ನೆ ಬಿಟ್ಟು ತುಂಬಾ ವರ್ಷಗಳಾಗಿವೆ. ಸಾವಿರಾರು ವರ್ಷಗಳಾಗಿವೆ. ಮನುಷ್ಯ ಪ್ರಾಣಿಗಿಂತ ಬೇರೆ, ಪ್ರಾಣಿ ಪ್ರಪಂಚಕ್ಕಿಂತ ಬೇರೆ ಇಲ್ಲ ಸ್ಪರ್ಧೆ ಅಲ್ಲ, ಸಹಕಾರ ಅನ್ನೊ Concept ಇದೆಯಲ್ಲ ಇದು ತುಂಬ wonderful ಆದಂತಹ Concept. ಈ ಸಹಕಾರನ ಇವತ್ತು ಕಾರ್ಪೊರೆಟ್ ಸೆಕ್ಟರ್ ಬಳಸಿಕೊಳ್ತಾ ಇವೆ. ಅವು ಸಹಕಾರ ಇಲ್ಲಿ ಬೇಡ ಅಂತಾರೆ. ಅಂದರೆ ನಾವು ಎಲ್ಲಿ ಬೇಕೊ ಅಲ್ಲಿ ಬೇಡ ಅಂತಾರೆ ಇವರು. ನಮಗೆ ಎಷ್ಟು ತಬ್ಬಿಬ್ಬು ಆಗುತ್ತೆ ಅಂದರೆ ಅವರು ಒಂಥರದಲ್ಲಿ ಹೇಳ್ತಾರೆ. ಇವೆಲ್ಲಾ ನೀವು ಧರ್ಮ, ಮಾರ್ಕ್ಸ್‌ಧರ್ಮ ಅನ್ನೊತರ ಹೇಳಿದರಲ್ಲ ಆ Concept ಇದೆ ನೋಡಿ ಮಾರ್ಕ್ಸ್ ಅನ್ನೊದು ಸೈನ್ಸ್‌ನ ಒಂದು ಧರ್ಮ ಆಗಿ ಹೋಗದು, ಯಾವ ಯೋಚನೆ ಬೇಕಾದರು ಒಂದು ಧರ್ಮ ಆಗಬಹುದು. ಯಾವಾಗ ಆಗುತ್ತೆ ಅಂದರೆ ಈ ಉದ್ದೇಶ ಪೂರ‍್ವಕವಾಗಿ ಅಥವಾ ವ್ಯವಸ್ಥಿತವಾಗಿ Slow and study but ವ್ಯವಸ್ಥಿತವಾಗಿ ಶೂರ್ ಆಗಿ ಮಾಡುವಂತ ಈ ಯೋಚನಾ ಕ್ರಮ ಇದೆಯಲ್ಲ ಯೋಚನಾ ಕ್ರಮ ಮಹಾ ಕಾನಿಷಿಯಸ್ ಆಗಿ ಜನರೇಟ್ ಆಗಿ ನಮನ್ನ ಮುಟ್ತಾ ಇರೋವಂತದ್ದು ಒಂದು ಕಾಲದಲ್ಲಿ ನಾವು ತತ್ವಜ್ಞಾನಿಗಳನ್ನು ತತ್ವಶಾಸ್ತ್ರವೇತರನ್ನ ಅಥವಾ ಸಾಧುಸಂತರನ್ನು ಎಲ್ಲೊ ದೂರ ಇಟ್ಟುಕೊಂಡು ಅಗತ್ಯಬಿದ್ದಾಗ ಅಲ್ಲಿಗೆ ಹೋಗ್ತಾ ಇದ್ವಿ. ಇವತ್ತು ನಮಗೆ ಏನೇನು ಬರುತ್ತೆ ಅಂತಂದ್ರೆ ಒಂದು ಕಡೆ ಉಪಭೋಗಗಳು ಅಂತ ಯಾವುದನ್ನು ಕರಿತೀವಿ ಅವು ನೇರವಾಗಿ ನಮಗೆ ಸಿಗುತ್ತವೆ. ಇನ್ನೊಂದು ಕಡೆ ಯೋಚನೆ ಮಾಡ್ತೀವಿ. ನಮಗೆ ಅದಕ್ಕಿಂತ ಬೇರೆಯಾಗಿರುವಂತ ಪ್ರಪಂಚ ಬೇಕು. ಅಂದರೆ ಅದೇ ಶಕ್ತಿಗಳು ಅವೇನೆ, ನಮಗೆ ಬೇಕಾಗಿರುವಂತ ಯೋಚನೆನಾ ಬಹಳ ಚೆನ್ನಾಗಿ ಇಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಲೆಕ್ಕ ಹಾಕಿ ತೋರಿಸಿಬಿಡಬಹುದು. ಅದಕ್ಕೇನೆ ನಾನು ನಿನ್ನೆ ಹೇಳಿದ್ದು. ಒಂದು ಖಚಿತತೆ ಅನ್ನೊದೇ ತೊಂದರೆ ಅಲ್ಲ, ಯಾವ ಖಚಿತತೆಯನ್ನು ನಾವು ಕಂಬ್ಯಾಟ್ ಮಾಡ್ತೀವಿ. ಅಂದರೆ ಬಹಳ ಸಂತೋಷ. ಬೇಕಾಗಿರುವುದು ಅದೆ. ಆದರೆ ನಮಗೆ ಬೇಕಾಗಿರು ವುದು ಅದಲ್ಲ. ನಮಗೆ ಬೇಕಾಗಿರುವುದು ಈ ಖಚಿತತೆನ ಅಮೂರ್ತರೂಪಗಳಲ್ಲಿ ಬಂದು ನಮ್ಮನ್ನ ಮುಟ್ಟತಾ ಇರುವಂತೆ ಖಚಿತತೆನಾ ನಾವು ಅಮೂರ್ತವಾಗಿ ಯೋಚನೆ ಮಾಡಿದರು ಕೂಡ ಮತ್ತೆ ಖಚಿತ ರೂಪದಲ್ಲೇ ಅದನ್ನ ಎದುರಿಸಬೇಕಾಗುತ್ತೆ. ಹಾಗಾಗಿ ಇನ್ನೊಂದು ಇತ್ತೀಚಿನ ಬೆಳವಣಿಗೆ ಎಂದರೆ ಹೆಚ್ಚು ಕಡಿಮೆ ನಮ್ಮ ಎಲ್ಲ ಪಕ್ಷಗಳು ಕೂಡ ಕಮ್ಯೂನಿಸ್ಟ್ ಪಕ್ಷ ಇರಬಹುದು, ಕಾಂಗ್ರೆಸ್ ಪಕ್ಷವಿರಬಹುದು. ಅವು ಅಸಂಘಟಿತವಾಗಿವೆ. ಮೊದಲು ಲೇಬರ್ ಅಸಂಘಟಿತವಾಯ್ತು. ಸಂಘಟಿತ ಲೇಬರ್‌ನ ಬಗ್ಗೆ ಮಾತಾಡಿದಾಗಲೆಲ್ಲ ನೋಡಿ ಅಸಂಘಟಿತ ಲೇಬರ್‌ನ ನೋಡಿ ಅಂತ ತೋರಿಸ್ತಾ ಇದ್ದರು. ನೀವು ಇಷ್ಟೆಲ್ಲ ಕೇಳ್ತಾಯಿದ್ದೀರ ಅವರನ್ನು ನೋಡಿ ಯಾರು ಇಲ್ಲ. ಇವತ್ತು ಏನಾಗಿದೆ ಎಲ್ಲ ಕಾರ್ಮಿಕರು ಅಸಂಘಟಿತರಾಗಿ ದ್ದಾರೆ. ಅಂದರೆ ಸಂಘಟನೆಯಿಂದ ಅಸಂಘಟನೆ ಕಡೆಗೆ, ಸಮುಷ್ಟಿಯಿಂದ ವ್ಯಕ್ತಿ ಅಲ್ಲ. ಆ ಸಂಘಟನೆ ಬೇಡ ಸಮಷ್ಟಿಯಿಂದ ವ್ಯಕ್ತಿಯಿದ್ದರೆ ಸಮಷ್ಟಿ ಬೇಕು. ಅಂದರೆ ವ್ಯಕ್ತಿ ನಮಗೆ ಒಂದು ವ್ಯಾಲ್ಯೂ ಆಗಿ ಕೊಡ್ತಾಯಿದ್ದಾರೆ. ಅಂದರೆ ಅದು ಇಲ್ಲಿ ಅಸಂಘಟಿತ ಅಂದಾಗ ವ್ಯಕ್ತಿ ವ್ಯಾಲ್ಯೂ ಅಲ್ಲ. ಹೀಗೆ ತದ್ವಿರುದ್ಧವಾಗಿರೋವಂತ ಚಿತ್ರವಿಚಿತ್ರವಾಗಿರುವಂತ ತುಂಬ ಸಂಕೀರ್ಣವಾಗಿರುವಂತ ಆಲೋಚನಾಕ್ರಮ ನಮ್ಮನ್ನು ಆವರಿಸಿದೆ. ಇದರಿಂದ ಹೊರಬರದ ಹೊರತು ಬಹುಶಃ ನಾವು ಯಾವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರೆವು ಅನ್ಸುತ್ತೆ. ಈ ಯಾವುದನ್ನು ಸರಿಯಾಗಿ ನಿರ್ಣಯಸಲಾರದಂತಹ ಸ್ಥಿತಿನಾ ನೀವೊಂದು ಒಳ್ಳೆ ಹೆಸರು ಕೊಡಬಹುದು. ಇದು ಮಹಾ ಸೂಕ್ಷ್ಮಾತಿಸೂಕ್ಷ್ಮ ವಿಚಾರ ತುಂಬ ಸೂಕ್ಷಮವಾಗಿದೆ. ಆದ್ದರಿಂದ ನಾವು ಬಗೆಹರಿಸಲಿಕ್ಕೆ ಬರಲ್ಲ ಅಂತ ಹೇಳಿ ಅದರಲ್ಲೂ ವ್ಯಕ್ತಿ ವ್ಯಕ್ತಿಯಾಗಿ ನಾವು ಜಗಳವಾಡಬಹುದು ಅಥವಾ ಬಗೆಹರಿಸಿಕೊಳ್ಳಬಹುದು. ಸೆಮಿನಾರುಗಳಲ್ಲಿ ಇವು ಎಂದೆಂದೂ ಬಗೆಹರಿಯಲ್ಲ. ಕೊನೆಗೂ ಗೆಲ್ಲೋದು ಯಾವುದು ಅಂದರೆ ಈ ಅಸಂಘಟಿತ ವಾಗಿರುವಂತೆ ತುಂಬ ಸಂಕೀರ್ಣವಾಗಿರವಂತ, ಖಚಿತತೆಗೆ ನಿಲುಕಲಾರದೆ ಇರೋವಂತ ಒಂದು ಸ್ಥಿತಿ ಹೊತ್ತುಕೊಂಡು ನಾವು ವಾಪಸ್ಸು ಮರಳುತ್ತೇವೆ. ಇವತ್ತಿನ ವರ್ತಮಾನಕ್ಕೆ, ಈ ಮುಖ ವಿಲ್ಲದ ವರ್ತಮಾನಕ್ಕೆ ಬೇಕಾಗಿರೋದು ಇದೆ. ಇದರ ಬಗ್ಗೆ ನಾವು ಎಷ್ಟು ಕಾರ್ಮಿಕ ಶ್ರದ್ಧೆ ಯಿಂದ ಅತ್ಯಂತ ಪ್ರಜ್ಞಾಪೂರಕವಾಗಿ ಯೋಚನೆ ಮಾಡೋದಿಕ್ಕೆ ಶುರುಮಾಡಿದರೆ ಮಾತ್ರ ಈ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಇಲ್ಲ ಅಂದರೆ ನಾವು ಇದನ್ನೆ ಇದನ್ನೆ, ಮತ್ತೆ ಬೇರೆ Text ಹೆಸರಿನಲ್ಲಿ  ನೀವು Text ಯಾವುದನ್ನು ಕೊಡಿ ತಾವು ದಯಮಾಡಿ ಬಯ್ತೀನಿ ಅನ್ಕೋಬಾರದು, ಮೊಗಳ್ಳಿಗಣೇಶ್ ಆಗಲಿ, ನುಗಡೋಣಿ ಆಗಲಿ ಬೇರೆ Text ಕೊಟ್ಟರೆ ಬೇರೆತರ ಮಾತಾಡ್ತಾರೆ ಅಂತ ನನಗೆ ಅನ್ನಿಸೊಲ್ಲ. ಹೆಚ್ಚು ಕಡಿಮೆ ಇದೆ ಯೋಚನೇನಾ ನೀವು ಆ Textನ Contextನಲ್ಲಿ ಮಾತನಾಡ್ತೀರಿ. ನಿಮಗೆ ಶೂನ್ಯಸಂಪಾದನೆ ಕೊಟ್ಟರು ಹೀಗೆ ಮಾತಾಡ್ತೀರ. ನೀವು ನಯಸೇನ ಧರ್ಮಾಮೃತ ಕೊಟ್ಟರು ಹೀಗೆ ಮಾತಾಡ್ತೀರ, ಬಹುಶಃ ದಾಸ್‌ಕ್ಯಾಪಿಟಲ್ ಕೊಟ್ಟರು ಹೀಗೆ ಮಾತಾಡ್ತೀರ ಅನ್ನಿಸುತ್ತೆ ನನಗೆ. ಇದು ಏನು ಹೇಳ್ತಾಯಿದೆ ಅಂದರೆ ನಿಮ್ಮ ತೊಂದರೆ ಅಲ್ಲ. ಇದು ಈ ಆಲೋಚನಾ ಕ್ರಮ ಇದೆಯಲ್ಲ ಇದನ್ನು ಮೈಗೂಡಿಸಿಕೊಂಡಿದ್ದರ ಫಲ ಅಥವಾ ಇದರ ಬಗ್ಗೆ ಎಚ್ಚರ ಇಟ್ಟುಕೊಳ್ಳದಿರೋ ಫಲ. ಇದು ನಿಜವಾದ ಮುಖಾಮುಖಿ ಅಂತ ನನಗೆ ಅನ್ಸುತ್ತೆ. ಆಗಬೇಕಾಗಿರೊ ಮುಖಾ ಮುಖಿ ಅಂತ ನನಗೆ ಅನ್ಸುತ್ತೆ. ಇಲ್ಲದೆ ಹೋದರೆ ಯಾವ ಕೃತೀಲಿ, ಯಾವ ಪಾತ್ರ ಬೇಕಾದರೂ ತಗೊಳ್ರೀ ಅದರಲ್ಲಿ ಒಂದು ಪ್ರಗತಿಪರವಾಗಿರೋವಂತ ಆ ಕೃತಿಕಾರನ ಘೋಷಿತ ಆಶಯ ಗಳನ್ನು ಮೀರಿ ಕೃತಿ ನಮಗೆ ಕೊಡೋವಂತ ಒಂದು ಪ್ರಗತಿಪರವಾಗಿರೋವಂತ ಒಂದು ಇಂಟರ್‌ಪ್ರಿಟೇಷನ್ ಸಿಗುತ್ತೆ. ಇದು ಹ್ಯಾಗೆ ಸಿಗುತ್ತೆ? ನಮಗೆ ಹ್ಯಾಗೆ ಒಂದು ಕೃತಿಗೂ ಇನ್ನೊಂದು ಕೃತಿಗೂ ಬೇದಾನೇ ಇಲ್ಲ. ಇಲ್ಲಿ ತೊಂದರೆ ಇರೋದು ಕೃತಿಗಳಲ್ಲಿ ಅಲ್ಲ. ನಮ್ಮಯೋಚನಾ ಕ್ರಮದಲಿ. ನಾವು ನೋಡ್ತಾ ಇರೋವಂತ ರೀತಿಲಿ ಇದೆ ಅನ್ಸುತ್ತೆ. ಇದರ ಬಗ್ಗೆ ಚರ್ಚೆಯಾಗೋದಿದ್ದರೆ ನನಗೆ ಬಹಳ ಸಂತೋಷ. ನನ್ನ ತಿಳುವಳಿಕೆ ತಪ್ಪಾಗಿದ್ದರೆ ಅದರ ಬಗ್ಗೆ ಚರ್ಚೆ ಮಾಡೋಣ. ನಾನು ಹೆಚ್ಚಿನ ತಿಳುವಳಿಕೆ ಪಡುಕೊಳ್ಳಲಿಕ್ಕೆ ಕಾರಣ ವಾಗಿದ್ದೀನಿ.

ಮೊಗಳ್ಳಿ ಗಣೇಶ್

ರಾಜಪ್ಪ ಅವರು ಕೊನೆ ಹಂತದಲ್ಲಿ ಒಂದು ಬಹಳ ಮುಖ್ಯವಾದ ರೀಮಾರ್ಕನ್ನು ಮಾಡಿದರು. ಈ ಪ್ರಭುತ್ವ ಮತ್ತು ಧರ್ಮ ಎರಡೂ ಕೂಡ ಅಂತಿಮವಾಗಿ ಈ ಜನಸಮು ದಾಯದ ಒಟ್ಟಿಗೆ ಇರಲಾರವು. ಈ ಅನಾಥವಾದ ಸಮುದಾಯಗಳ ಜೊತೆಗೆ ಅವು ನೇರವಾಗಿ ಮಾತನಾಡಲಾರವು ಅನ್ನೊ ಮಾತನ್ನು ಅವರು ಸ್ಪಷ್ಟವಾಗಿ ಹೇಳಿದರು. ಅದು ನಿಜ. ಆ ಮಾತಿಗಾಗಿ ನಾನು ಕೊನೆತನಕ ಕಾಯುತ್ತಿದ್ದೆ. ಆ ಮಾತು ಅವರ ಬಾಯಿಲ್ಲಿ ಬರಬಹುದು ಅಂತ. ಒಂದು ಮಾತು ಅದಕ್ಕೆ ಪೂರಕವೊ, ಅಲ್ಲೊ ಎನಿಸುತ್ತದೆ. ಅಂದರೆ ಭಾರತೀಯ ಪುರಾಣಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಬುದ್ಧನ ಅಥವಾ ಮಹಾವೀರ ಜೈನ ತತ್ವದ ಈ ನೀತಿಕತೆಗಳು ಅಥವಾ ಜಾತಕ ಕತೆಗಳು ಈ ಎರಡನ್ನು ಇಟ್ಟುಕೊಂಡು ನೋಡಿದರೆ ಮತ್ತೊಂದು ಅಂಶ ಹೊಳೆಯುತ್ತೆ ಅನ್ಸುತ್ತೆ. ಏನೆಂದರೆ ಈ ಹಿಂದೂಧರ್ಮ ಪುರಾಣಗಳನ್ನು ವಿಶೇಷವಾಗಿ ಅನುಸರಿಸುತ್ತೆ. ತನ್ನ ತತ್ವನ ಪ್ರತಿಪಾದಿಸೊದಕ್ಕಾಗಿ ಹೇರೋದಕ್ಕಾಗಿ ಅವತಾರ ಗಳ ಪುರಾಣಗಳನ್ನು ಅದು ತ್ರೀವವಾಗಿ ಮಂಡಿಸುತ್ತದೆ. ಆದರೆ ಜೈನಧರ್ಮ ತನ್ನ ತತ್ವಸಾರ ವನ್ನು ಪ್ರಚುರಪಡಿಸುವುದಕ್ಕಾಗಿ ವಿಶೇಷವಾಗಿ ಕತೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಬುದ್ಧನು ಕೂಡ ಅದನ್ನೇ ಮಾಡಿದ, ಜೈನರು ಅದನ್ನೆ ಮಾಡುತ್ತಾರೆ. ಹೀಗೆ ಪುರಾಣವನ್ನು ಬಿಟ್ಟು ಲೌಕಿಕವಾದ ಈ ಕತೆಯ ನಿರೂಪಣೆಯನ್ನು ಇಟ್ಟುಕೊಂಡಾಗ ಆ ಕತೆಗಳು ಹೆಚ್ಚು ಹೆಚ್ಚು ಮಾನವೀಕರಣಗೊಳ್ಳುತ್ತವೇನೊ ಅಂತ ಅನ್ಸುತ್ತೆ. ಅಂದರೆ ಇದನ್ನು ಇನ್ನು ಸರಳವಾಗಿ ಹೇಳೋದಕ್ಕೆ ಇಷ್ಟಪಡ್ತೀನಿ. ತನ್ನ ಧಾರ್ಮಿಕ ಶ್ರದ್ಧೆಯನ್ನು ಪ್ರತಿಪಾದಿಸುವುದಕ್ಕಾಗಿಯೇ ಕತೆಗಳ ಮೂಲಕ ಒಬ್ಬ ನಿರೂಪಕ ಹೊರಟಾಗ ಅವನ ಈ ಗದ್ಯಕ್ಕೆ, ಅವನ ಈ ಭಾಷೆಗೆ, ಒಂದು ಅಂತಃಕರಣದ ಛಾಯೆ ತಂತಾನೇ ಬಂದುಬಿಡುತ್ತೆ. ನಯಸೇನನ ಕತೆಗಳಿಗೆ ಈ ಗುಣವಿದೆ. ಲೌಕಿಕಗೊಳ್ಳುವ, ಮಾನವೀಕರಣಗೊಳ್ಳುವ ಒಂದು ಭಾಷಿಕ ವಿನ್ಯಾಸ ನಯಸೇನನ ಕತೆಗಳಿಗೆ ಬರುತ್ತವೆ. ಏಕೆಂದರೆ ತನ್ನ ನೀತಿಯನ್ನು ಹೇಳಲಿಕ್ಕೆ ಕಥನಕ್ರಮವನ್ನು ಅನುಸರಿಸು ತ್ತಿದ್ದಾನೆ ಹೊರತು ಪುರಾಣ ಕ್ರಮಗಳನ್ನು ಅನುಸರಿಸ್ತಾಯಿಲ್ಲ. ಆದರೆ ಮತಮೌಢ್ಯವನ್ನು ಭಯಂಕರವಾಗಿ ಹೇರೋದು ಪುರಾಣಗಳು, ಕತೆಗಳು ಹೆರೋದಿಲ್ಲ. ಹಿಂದೂ ಧರ್ಮದಲ್ಲಿ ಕೂಡ ಪುರಾಣ ಮತ್ತು ಕತೆಗೆ ಈ ತರಹದ ಅಂತರ ಇರೋದನ್ನು ಗಮನಿಸಬಹುದು. ಅಂದರೆ ಜೈನ ಕವಿಗಳು ವಿಶೇಷವಾಗಿ ಅವರು ತಷ್ಕರಪುರಾಣ ಅಂತ ನೀವು ಬಳಸಿದಿರಿ. ಅವರು ಅಜಿನಾಥಪುರಾಣ ಆ ತರಹದ ಪುರಾಣಗಳನ್ನು ಬಳಸಿದರೂ ಕೂಡ ಅವು ಹೆಚ್ಚು ಹೆಚ್ಚು ಲೌಕಿಕವಾದ ಕತೆಗಳೇ ಆಗಿವೆಯೇನೂ ಅಂತ ಅನ್ನಿಸುತ್ತೆ. ಕತೆಗಳ ಪರಿಭಾಷೆಯಲ್ಲಿ ಹೊರಟಾಗ ಅವನು ಪ್ರಭುತ್ವದ ಜೊತೆಗೆ ನೇರವಾಗಿ ಸುಲಭವಾಗಿ ಮಾತಾಡಲಿಕ್ಕೆ ಸಾಧ್ಯ ವಾಗುತ್ತೆ. ಹಾಗೇನೆ ಧರ್ಮದ ಜತೆಗೂ ಇದೆ ಮಾತನ್ನು ನೇರವಾಗಿ ಆಡ್ತದೆ. ಆದರೆ ಪುರಾಣದ ಚೌಕಟ್ಟನ್ನು ಏನಾದರೂ ನಯಸೇನ ಅನುಸರಿಸಿದ್ದರೆ ಆ ಪ್ರಭುತ್ವದ ಅಥವಾ ಆ ಒಂದು ಧರ್ಮದ ವಕೀಲನಾಗಿಯೇ ಉಳಿದುಕೊಳ್ಳಬಹುದಾಗಿತ್ತೇನೊ. ಆದರೆ ನಯಸೇನ ಈ ವಕೀಲತನದಿಂದ ತಪ್ಪಿಸಿಕೊಂಡಿದ್ದು ಏಕೆಂದರೆ ಅವನು ಕತೆಯನ್ನು ಹೇಳೋದಕ್ಕೆ ಹೊರಟಿದ್ದರಿಂದ. So ಈ ಅಂಶ ಕೂಡ ನಮ್ಮ ಚರ್ಚೆಗೆ ಬೇರೆ ರೀತಿಯಲ್ಲಿ ಉಪಯೋಗಕ್ಕೆ ಬರಬಹುದು ಅಂತ ಹೇಳಿದೆ.

ಆಮೇಲೆ ಲಕ್ಷ್ಮೀನಾರಾಯಣರಿಗೆ ಪ್ರತಿಕ್ರಿಯಿಸಬೇಕು. ನಾನು ನಮ್ಮ ಸ್ನೇಹಿತನಾದ ಅಮರೇಶರ ಜೊತೆಗೆ ಮಾತಾಡಿಕೊಂಡಿವಿ. ನೀವು ಅದ್ಭತವಾಗಿ ಕೆಲವು ಒಳನೋಟಗಳನ್ನು ಕೊಟ್ಟರಿ. ಅದನ್ನು ಸಂತೋಷದಿಂದ ನಾನು ಒಪ್ಪಿಕೊಳ್ಳುತ್ತೇನೆ. ಅದಕ್ಕಿಂತ ಬಹಳ ಸಂತೋಷವಾಗಿದ್ದು ಕೊನೆನಲ್ಲಿ ನೀವು ಮಾಡಿದ ಒಂದಕ್ಕೆ. ಮೊಗಳ್ಳಿ ಮತ್ತು ಅಮರೇಶ್ ಯಾವುದೇ Text ಕೊಟ್ಟರೂ ಅವರು ಹೀಗೇನೆ ಮಾತಾಡ್ತಾರೆ ಅಂದಿದ್ದು ನನಗೆ Very gereat possitive ನಾನು ನೆಗಟಿವ್ ಅಂತ ತಕ್ಕೊಳ್ಳೊದಿಲ್ಲ. ಏಕೆಂದರೆ ನನ್ನ ಕಾಲಕ್ಕೆ ನಾನು ಬದ್ಧನಾಗಿದ್ದೀನಿ. ನನ್ನ ಸಂವೇದನೆಗೆ ನಾನು ಬದ್ಧನಾಗಿದಿನಿ. ನಯಸೇನನಿಗೆ ಏನೊಂದು ಧಾರ್ಮಿಕ ರಾಜಕಾರಣ ಮುಖ್ಯವೊ ಅಥವಾ ಇನ್ನೊಬ್ಬ ಮಾಸ್ತಿಗೆ ಏನು ಅವನ ಕಾಲಕ್ಕೆ ಬೇಕಾದದ್ದನ್ನು ಕೊಡೋಕೆ ಅದೇ ತರಹದ ಕತೆಗಳನ್ನು, ಅವರು ಬರೀತಿದ್ದರೊ, ಹಾಗೆನೇ ಈ ಕಾಲದಲ್ಲಿ ನಮಗೆ ನಮ್ಮಂತವರಿಗೆ ನಾನು ಏನು ಕೊಟ್ಟರೂನೂ ದಾಸ್ ಕ್ಯಾಪಿಟಲ್ ಕೊಟ್ಟರುನೂ, ನಾನು ಹಾಗೇ ಮಾತಾಡಾತ್ತೀನಿ. ನನಗಿಂತ ಇದನ್ನು ಚೆನ್ನಾಗಿ ಮಾಡೊರಂದರೆ ರಹಮತ್. ಅವರಿಗೆ ಏನಾದರೂ ನೀವು ಕೊಟ್ಟರೂ ಅವರು ನಂಬಿದ್ದಕ್ಕೆ ಅವರು ಬದ್ಧರಾಗಿ ಅದನ್ನು ಹೇಳ್ತಾರೆ. ಅಂದರೆ ಅದು ಮಿತಿಯಲ್ಲ. ಅದು ನಮ್ಮ ಸಾಧ್ಯತೆ. ಏಕೆಂದರೆ ಅದು ನಮ್ಮ ಮಿತಿಯಲ್ಲ ಒಪ್ಪಿಕೊಳ್ಳುತ್ತೇನೆ. ಅದು ನಮ್ಮಶಕ್ತಿ.