ಆರ್.ವಿ. ಭಂಡಾರಿ

ಮೊದಲನೇ ಸಂದರ್ಭ ಅಂತ ಅಂದ್ರೆ ಲಕ್ಷ್ಮೀನಾರಾಯಣ ಅವರು ಹೇಳಿದ ಹಾಗೆ ಅಲ್ಲಿ ಸ್ವಯಂಭು ಅನ್ನುವ ಪದ ಪ್ರಯೋಗ ಮಾಡಿದ್ದು ನಾನು ಪರಿಪೂರ‍್ಣ, ಎಬ್ಸುಲ್ಯೂಟ್ ಎಂಬ ಅರ್ಥದಲ್ಲಿ ಮಾತ್ರ ಬಳಸಿದ್ದು ವಿನಃ ಆ ಶಬ್ದಕ್ಕಿರಬಹುದಾದ ಏನಾದರೂ ಅಧ್ಯಾತ್ಮ ಗಿದ್ಯಾತ್ಮ ಇಂತಹ ಯಾವುದೇ ಅಲ್ವೇ ಅಲ್ಲ. ನಾನು ಬಳಸಿದ್ದು, ನೀವು ಹೇಳಿದ ಹಾಗೆ ಯಾವುದು ಇಲ್ಲ. ಆದ್ದರಿಂದ ನಾನಿಲ್ಲಿ ಹೇಳಲಿಕ್ಕೆ ಬಯಸಿದ್ದು ಅಂದರೆ ಒಂದು ಸಾಹಿತ್ಯ ಕೃತಿ ಅದು ಇವತ್ತಾಗಬಹುದು, ಆ ಕಾಲದಲ್ಲಿ ಆಗಿರಬಹುದು ಅದು ಪರಿಪೂರ್ಣ ಅಲ್ಲ. ತನ್ನ ಆವರಣವನ್ನು ಪ್ರತಿಬಿಂಬಿಸುತ್ತಲೇ ಅದು ತಾನು ಹೇಳಬೇಕಾದ್ದನ್ನು ಹೇಳಲಿಕ್ಕೆ ಹೋಗುತ್ತದೆ. ನಾನು ಯಾವುದರ ಮೇಲೆ ಕೇಂದ್ರೀಕರಣ ಮಾಡಿದೆ ಎಂದರೆ ನಯಸೇನ ಯಾವುದು ಮುಖ್ಯ ಎಂದು ತೆಗೆದುಕೊಂಡಿದ್ದನೊ ಅದನ್ನು ಬಿಟ್ಟು ಏನೇನೂ ಮೌನವಾದ, ಏನೇನೂ ವರ್ಣನೆಗಳನ್ನು ತನ್ನ ಕತೆಗೆ ಪೋಷಣೆಯಾಗಲಿಕ್ಕೆ ಏನೇನೂ ಮಾಡಿದ. ಅದರ ಮೇಲೆ ನಾನು ಹೆಚ್ಚು ಗಮನ ಕೊಟ್ಟಿದ್ದೇನೆ. ಆಮೇಲೆ ಮೊಗಳ್ಳಿಯವರು ಹೇಳಿದ್ದರಲ್ಲಿ ಒಂದು ಹೊಸವಿಧಾನ ಇದೆ. ಅದನ್ನು ನಾನು ಅಲ್ಲಗಳೆಯುವುದಿಲ್ಲ. ಕೊನೆಗೆ ನಾನು ಹೇಳಿದ್ದು ಏನೆಂದರೆ ಆಡಳಿತದ ಸಲುವಾಗಿಯೇ ಪ್ರಭುತ್ವ ಬರುತ್ತದೆ. ಇಂತಹುದು ಹೇಳಿದ್ದು ನಯಸೇನನ ಬಗ್ಗೆಯಲ್ಲ, ನಯಸೇನ ಮತ್ತಿತರರನ್ನು ನಾವು ಇಡೀ ಭಕ್ತಿಪಂಥವ ಹೀಗೆ ಮಾಡುವುದನ್ನು ನನ್ನ ತಲೆಯಲ್ಲಿಟ್ಟುಕೊಂಡು ಅದನ್ನು ಈಗ ನಾನು ಹಿಂತಿರುಗಿ ನೋಡಿದಾಗ ಈ ಧಾರ್ಮಿಕ ಆಂದೋಲನಗಳಲ್ಲಿ ಇದೇ ಕೆಲಸ ಮಾಡ್ತಾ ಬಂದವೇ ವಿನಃ ಅದು ನಿಜ ವಾಗಿಯೂ ಅಧಿಕಾರ ಮತ್ತು ಸಂಪತ್ತಿನ ಪ್ರಶ್ನೆಗೆ ಉತ್ತರವನ್ನೇ ಕೊಟ್ಟಿಲ್ಲ ಅಂತ ನಾನು ಅದರ ಹೊರಗೆ ಬಂದು ನಯಸೇನನ ಮೇಲೆ ಆರೋಪವಿಲ್ಲ. ನಯಸೇನ ಅದು ಮಾಡಲಿಕ್ಕೆ ಸಾಧ್ಯವಿಲ್ಲ. ಆ ಕಾಲಯಿದೆ. ಅದಕ್ಕೆ ಆ ಕಾಲದಲ್ಲಿ ಅವನಿಗೊಂದು ಆವರಣಯಿದೆ. ಅವನು ಕಾವ್ಯವನ್ನು ಬರೆಯುತ್ತಿದ್ದಾನೆ. ಆ ಜೀವನವನ್ನು ಬಿಟ್ಟು ಅವೇನೂ ಸಾಧ್ಯವಿಲ್ಲ (ನಾನು ಹೇಳಿದ ಹಾಗೆ) ಆದರೆ ಇಡೀ ಆಂದೋಲನಗಳು ಆಯ್ಕೆ ನನ್ನ Point ಇರುವುದು ಧರ್ಮದ ಮೇಲೆ ಈ ಧರ್ಮದ ಮುಖಾಂತರವಾಗಿ ಅದು ಎಲ್ಲ ಕಡೆಗಿದೆ. ವೈದಿಕ ಇದರೊಳಗೂ ಸನ್ಯಾಶ್ರಮ ಹೋಗಬೇಕು. ದಾನ ಮಾಡಿಕೊಡುತ್ತಾರೆ. ದಾನವೇ ಅತ್ಯಂತ ಶ್ರೇಷ್ಠ ಯೇಸು ಕ್ರಿಸ್ತ ಅದನ್ನು ಹೇಳುವುದು. ಮಹಮ್ಮದ್ ಪೈಗಂಬರ್ ಅದನ್ನು ಹೇಳುತ್ತಾರೆ. ಎಲ್ಲ ಸರಿ ಅದು ಅವರು ಸುಧಾರಣೆಗಾಗಿ ಮಾಡಿದ್ದಾರೆ. ಜನಗಳನ್ನು ಬಹಳ ಹಿಂಸೆಯನ್ನು ಕಡಿಮೆ ಮಾಡಬೇಕು ಅನ್ನೋದೇ ಆಲೋಚನೆ. ಕೆಟ್ಟದ್ದು ಏನಿಲ್ಲ ಆದರೆ ಇಡಿಯಾದ ಎರಡು ಸಾವಿರ ವರ್ಷಗಳ ಕಾಲದ ಈ ಆಂದೋಲನವನ್ನು ನೋಡುತ್ತ ಬಂದ್ರೆ ನಮಗೆ ಅನಿಸುವ ಧರ್ಮವು ಆಳುವವರಿಗೆ ಅನುಕೂಲವಾಗಿದೆ. ಅದನ್ನು ಇವರು ಸ್ಥಾಪನೆ ಮಾಡಲಿಕ್ಕೆ ಇಂತಹವು ಗಳ ಸಹಾಯವಾಗಬಹುದು ಅನ್ನುವ ಇವತ್ತಿನ ನನ್ನ ನಿರ್ಣಯ ವಿನಃ ನಯಸೇನನ ಮೇಲೆ ಆ ನಿರ್ಣಯವನ್ನು ನಾನು ಬೇರೆ ಮಾಡಿಕೊಳ್ಳುವುದಿಲ್ಲ.

ಮೊಗಳ್ಳಿ

ವೈರುಧ ಅಂತ ಇರೋ ಈ ಮಾತನ್ನು ನೋಡಿದರೆ, ಇಲ್ಲಿ ಆ ವೈರುಧ್ಯ ಮತ್ತು ನಯಸೇನನ ಸ್ತ್ರೀಪಾತ್ರಗಳಿಗಿರಬಹುದಾದಂತ ಸಂಬಂಧ ನಮಗೆ ಖಚಿತವಾಗಿ ಏನಂತ ಶಿವಗಂಗಮ್ಮ ಅವರ ಮಾತುಗಳಿಂದ ಗೊತ್ತಾಗಲಿಲ್ಲ. ವೈರುಧ್ಯ ನಯಸೇನನ ಸ್ತ್ರೀಪಾತ್ರಕ್ಕೂ ಮತ್ತು ಅವುಗಳ ನಡವಳಿಕೆಗೂ ಸಂಬಂಧಕ್ಕೂ ಇರುವ ವೈರುಧ್ಯ ಏನು ಎಂಬುದನ್ನು ಖಚಿತ ವಾಗಿ ಕೇಳಿಕೊಳ್ಳಲಿಕ್ಕೆ ಆಗಲಿಲ್ಲ. ಆದರೆ ಈ ಮಹಿಳೆಯರೆಲ್ಲರು ಕೂಡ ನೇರವಾಗಿ ಧರ್ಮದ ಪೋಷಾಕನ್ನು ಧರಿಸಿಕೊಂಡು ಆ ಧರ್ಮದ ಉದ್ಧಾರಕ್ಕಾಗಿಯೇ ಒಂದು ಕಡೆ ಬಳಕೆಯಾಗುತ್ತಿ ದ್ದಾರೆ ಎಂಬುದು ನೇರವಾಗಿ ಕಾಣಿಸುತ್ತೆ. ಹಾಗೇನೇ ಆ ಧರ್ಮದ ಎಲ್ಲ ಆನೈತಿಕವಾದ ಮುಖವನ್ನು ತೋರಿಸಲಿಕ್ಕೂನೂ ಈ ಮಹಿಳೆಯರನ್ನು ಸೂಳೆಯ ರೂಪದಲ್ಲಿ ಕೂಡ ಬಳಸಿಕೊಳ್ಳುತ್ತಿದ್ದಾರೆ. ಇದು ಒಂದು ರೀತಿ ವೈರುಧ್ಯ ಅಂತ ನಮ್ಗೆ ಅನ್ನಿಸುತ್ತೆ. ಅಂದರೆ ಧರ್ಮದ ಉದ್ದೇಶಕ್ಕಾಗಿ, ಅದರ ರಕ್ಷಣೆಗಾಗಿ, ಮಹಿಳೆಯರ ಪಾತ್ರಗಳನ್ನು ನಯಸೇನ ಬಹಳ ಚೆನ್ನಾಗಿ ಬಳಸಿಕೊಂಡಿದ್ದಾನೆ. ಒಂದಷ್ಟು ಆರೋಪವನ್ನಷ್ಟೆ ಅಲ್ಲ ನಾನು ಮಾಡ್ತಾಯಿ ರೋದು. ಅವನಿಗಿದ್ದ ಆ ಕಾಲದ ಅನಿವಾರ್ಯತೆ ಮತ್ತು ಒಬ್ಬ ಸೃಜನಶೀಲ ಲೇಖಕನಿಗಿರ ಬಹುದಾದ ಇಕ್ಕಟ್ಟನ್ನು ನಾನು ನಿಮ್ಮ ಗಮನಕ್ಕೆ ತರೋದಕ್ಕೆ ಇಷ್ಟಪಡ್ತೀನಿ. ಸಮಾಜದ ಯಾವುದೇ ಅನುಭವಗಳನ್ನು ಅಭಿವ್ಯಕ್ತಿ ಮಾಡುವಾಗ ಲೇಖಕನಿಗೆ ಅದರಲ್ಲೂ ಬಹಳ ಸ್ಪಷ್ಟವಾಗಿ, ನಿರ್ದಿಷ್ಟವಾಗಿ ನಿರೂಪಿಸಬೇಕಾದ ಅನಿವಾರ್ಯತೆ ಇರುತ್ತದೆ. ಅವನಿಗೆ ಕಳ್ಳನನ್ನು ವೇಶ್ಯೆಯನ್ನು ಅಥವಾ ದುಷ್ಟನನ್ನು, ಸಂರಕ್ಷಕನನ್ನು ನಿರೂಪಿಸುವಾಗ ವಾಸ್ತವವಾದ ನೆಲೆಯಲ್ಲಿಯೇ ಆ ಲೇಖಕ ಅಥವಾ ಕವಿ ಒಂದು ಅನುಭವವನ್ನು ಪ್ರತಿಸೃಷ್ಟಿ ಮಾಡ್ತಾನೆ. ಆದ್ದರಿಂದ ಆ ಲೇಖಕನಿಗೆ ಆ ಸ್ತ್ರೀಪಾತ್ರದ ಬಗ್ಗೆ ಗೌರವ ಇರಲಿಲ್ಲ ಅಂತಲೋ ಅಥವಾ ದಲಿತರ ಬಗ್ಗೆಯೇ ಅಥವಾ ನಡಾವಳಿಗಳ ಬಗ್ಗೆಯೇ ಗೌರವವಿರಲಿಲ್ಲ ಅನ್ನೋ ಒಂದು ಪ್ರಶ್ನೆಯನ್ನು ಎತ್ತುವುದು ಅಷ್ಟು ಸುಲಭವಲ್ಲ, ಯಾಕೆಂದರೆ ವಾಸ್ತವವಾದಿ ಕ್ರಮದಲ್ಲಿ ಒಂದು ಲೋಕನಾನುಭವವನ್ನು ನಿರೂಪಣೆ ಮಾಡುವಾಗ ಆಯಾ ಪಾತ್ರಗಳನ್ನು ಹಾಗೇ ಸೃಷ್ಟಿಸುತ್ತಾನೆ. ಆದರೆ ಆ ಬಿಡಿಬಿಡಿಯಾದ ಪಾತ್ರಗಳೊಂದನ್ನು ಮಾತ್ರ ಇಟ್ಟುಕೊಂಡು ಈತ ಸ್ತ್ರೀಯರಿಗೆ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ ಅಥವಾ ಈ ಪಾತ್ರಕ್ಕೆ ನ್ಯಾಯವನ್ನು ಕೊಟ್ಟಿಲ್ಲ. ಈ ವಕೀಲ ಕೆಲಸವನ್ನು ಅವನಿಂದ ನಿರೀಕ್ಷೆ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ. ಆದರೆ ಒಂದನ್ನು ಗಮನಿಸಬಹುದು. ನಯಸೇನ ಈ ಎಲ್ಲ ಬಗೆಯ ಪಾತ್ರಗಳನ್ನು ನಿರೂಪಿ ಸುತ್ತಾ, ಕೊನೆಗೆ ಯಾವ ಬಗೆಯ ಆಶಯವನ್ನು ಅಥವಾ ಅಂತಿಮವಾದ ನಿರೂಪಣೆಯ ದರ್ಶನ ಯಾವುದು ಅನ್ನುವುದರ ಕಡೆಗೆ ಹೋದಾಗ ಮಾತ್ರ ಈ ಜೆಂಡರ್ ರಿಲೇಷನ್‌ಶಿಪ್ ಅಥವಾ ಅವನ ಕಾಲದ ನ್ಯಾಯ, ನೀತಿ, ಧರ್ಮ, ಕರ್ಮ ಇವುಗಳ ಸಂಬಂಧ ನಮಗೆ ಅರ್ಥವಾಗ್ತದೆ ಅನ್ನೋದು ನನ್ನ ಅಭಿಪ್ರಾಯ. ಇನ್ನೊಂದು ಇದಕ್ಕೆ ಪೂರಕವೂ ಅಥವಾ ಬೇರೆಯೊ ಒಂದು ನೆನಪು ಮಾಡ್ಕೋಬೇಕು. ಬೋಧಿಸುವ ಉದ್ದೇಶವಿದ್ದಾಗ ನಿರ್ದಿಷ್ಟವಾಗಿ ಕೆಲವು ಚೌಕಟ್ಟು ನಿರ್ಮಾಣವಾಗುತ್ತವೆ. ಅವನಿಗೊಂದು ಬೋಧಿಸಬೇಕಾಗಿದೆ. ಆ ಬೋಧಿಸ ಬೇಕಾದಾಗಲೆಲ್ಲ ನಾವು ಪಠ್ಯ ಪುಸ್ತಕವನ್ನು ಬೋಧಿಸುವಾಗ ಒಂದು ಚೌಕಟ್ಟು ಹಾಕಿ ಕೊಳ್ಳೊಲ್ಲವಾ ಅಥವಾ ಸಾಮಾಜಿಕ ನ್ಯಾಯ ಪ್ರತಿಪಾದಿಸಬೇಕೆಂದಾಗ ಸಿದ್ಧಲಿಂಗಯ್ಯ ಚೌಕಟ್ಟು ಹಾಕಿಕೊಳ್ಳೋದಿಲ್ಲವಾ? ಹಾಗೆ ತನ್ನ ಕಾಲದ ಜರೂರುಗಳಿಗೆ ಪ್ರತಿಕ್ರಿಯಿಸ ಬೇಕಾದಾಗ ಒಂದು ಬೋಧಿಸಬೇಕಾದ ಅನಿವಾರ್ಯತೆ ಎಲ್ಲ ಲೇಖಕರಿಗೂ ಬರುತ್ತದೆ. ನನಗೂ ಬರಬಹುದು. ನಿಮಗೂ ಬರಬಹುದು ನಾಳಿನವರಿಗೂ ಬರಬಹುದು. ಈ ಪ್ರೀಚಿಂಗ್ ಮಾಡೋದು ಬೋಧಿಸುವ ಬುದ್ಧನಿಗೆ ಚೌಕಟ್ಟು ಇರಲಿಲ್ಲವೆ? ಎಲ್ಲರಿಗೂ ಚೌಕಟ್ಟಿದೆ. ಅದನ್ನ ‘ಕೇಳಿ  ಜನಮೇಜಯ’ ಅಂತ  ಆ ಕತೆಯನ್ನು ಹೇಳುವಾಗ ಅವರಿಗೊಂದು ಚೌಕಟ್ಟಿತ್ತು ಮತ್ತು ಉದ್ದೇಶವಿತ್ತು. ಒಂದು ಬೋಧನೆಯಿತ್ತು. So ಹೀಗೆ ಬೋಧಿಸಬೇಕಾ ದಾಗಲೆಲ್ಲ ಲೇಖಕರಿಗೆ ಆ ಕಾಲದ ಜರೂರನ್ನು ಅಥವಾ ಆ ಕಾಲದ ಅನಿವಾರ್ಯತೆಯನ್ನು ತುಂಬಿಕೊಡಬೇಕಾದಂತ ದೊಡ್ಡ ಉದ್ದೇಶವಿದೆ. ಆ ಉದ್ದೇಶವನ್ನು ಗಮನಿಸಬೇಕೆ ಹೊರತು ಅವನು ಬೋಧಿಸುವ ಕ್ರಮದಲ್ಲಿ ತನ್ನ ಮುಂದಿನ ಎಲ್ಲ ಪಾತ್ರಗಳನ್ನು ಅತಿ ಹೆಚ್ಚಾಗಿ ಹೇಳ್ತಾಯಿದ್ದಾನೆ. ವೇಶ್ಯೆ ಬಗ್ಗೆಯಿರಬಹುದು, ಕಳ್ಳಕಾಕರಿರಬಹುದು, ಲಂಪಟರ ಬಗ್ಗೆ ಬಹಳ ಬೇಸರವಾಗುವಷ್ಟುರ ಮಟ್ಟಿಗೆ ನಿರೂಪಿಸುತ್ತಾನೆ. ಹಾಗೆ ನಿರೂಪಿಸುವಾಗ ಈ ಲೇಖಕ ಹೆಣ್ಣಿನ ವಿರುದ್ಧವಾಗಿದ್ದ ಅಂತ ಹೇಳೋಕೆ ಬರಲ್ಲ. ಇದು ಯಾಕೆ ಈ ಮಾತು ಹೇಳ್ತೀನಿ ಅಂದರೆ ಹೀಗೆ ಕನ್ನಡದ ಬಹುಪಾಲು ಎಲ್ಲ ಕತೆಗಳು ಒಂದು ಬೋಧಿಸುವ ಗುಣವನ್ನು ಅಳವಡಿಸಿ ಕೊಂಡಿರುತ್ತವೆ. ಯಾವುದೇ ಕತೆಯನ್ನು ನೀವು ತೆಗೆದುಕೊಳ್ಳಿ, ಮಾಸ್ತಿಯ ಕತೆಯನ್ನು ತಗೊಳ್ಳಿ, ಕೇಳುಜನಮೇಜಯ ಅನ್ನುವ ಹಾಗೆ ಅವರು ನನ್ನ ಸ್ನೇಹಿತರು ಬಂದಿದ್ದರು, ಅವರು ಒಂದು ಅನುಭವ ಹೇಳದ್ರು, ಹೀಗಾಯ್ತು ಹಾಗಾಯ್ತು ಅಂತ ಹೇಳ್ತಾ ಕೊನೆಗೆ ಒಂದು ನೀತಿ ಸಾರವನ್ನು ಹೇಳ್ತಾರೆ. So ಹೀಗಾಗಿ ಒಂದು ಸಮಾಜಕ್ಕೆ ಅಖಂಡವಾಗಿ ಬೋಧಿಸಬೇಕಾ ದಾಗಲೆಲ್ಲ ಲೇಖಕನಿಗೆ ಕೆಲವು ಸ್ವಾತಂತ್ರ್ಯವೂ ಇದೆ. ಹಾಗೆಯೇ ಕೆಲವು ಅವಕಾಶಗಳು ಕೂಡ ಸೀಮಿತವಾಗಿರುತ್ತವೆ. ಈ ಆಯಕಟ್ಟನ್ನು ಅರ್ಥಮಾಡಿಕೊಂಡು ನಾವು ಕೃತಿಯನ್ನು ಪ್ರವೇಶ ಮಾಡಿದಾಗ ಮಾತ್ರವೇ ಆ ಮೂಲಪಠ್ಯಕ್ಕೆ ಅಥವಾ ಆ ಮೂಲ ಕಾಲಕ್ಕೆ ನಾವು ಒಂದು ರೀತಿಯಲ್ಲಿ ನೇರವಾಗಿ ರೆಸ್ಪಾಂಡ್ ಮಾಡಿದ ಹಾಗೆ ಆಗುತ್ತೆ. ಇಲ್ಲದಿದ್ದರೆ ಯಾವುದೋ ಬೆಟ್ಟವನ್ನು ಸುತ್ತಿಕೊಂಡು ಬಂದು ಇವತ್ತಿನ ಎರಿಕ್‌ಫ್ರಾಂ ಬಗ್ಗೆ ಫ್ರಾಯ್ಡ್ ಬಗ್ಗೆ, ಲಿಂಗ ಸಂಬಂಧಿ ಜಸ್ಟೀಸ್‌ಗಳ ಬಗ್ಗೆ ಮಾತನಾಡುವಾಗ ಬೇರೆಯಾಗುತ್ತೆ. ಬೇರೆ ತಗೊಳ್ಳಬಾರದು ಅಂತ ಹೇಳ್ತೀಲ್ಲ. ಅಷ್ಲೈ ಮಾಡಬೇಕು. ನಾವು ಆದರೆ ಹೀಗೆ ತಗೊಂಡು ಬಂದು ಸೇರಿಸಿದಾಗ ಜಸ್ಟೀಸ್ ಅಲ್ಲ ಅದು ಜಸ್ಟೀಸ್‌ನ ನಾವು ಮಿಸ್ ಇಂಟರ್‌ಪ್ರೀಟ್ ಮಾಡಿದ ಹಾಗಾಗುತ್ತೆ. ಆ ಅರ್ಥದಲ್ಲಿ ನಿಜವಾಗಲೂ ಒಬ್ಬ ಲೇಖಕನಿಗಿರಬಹುದಾದ ವೈರುಧ್ಯ ಯಾವುದು? So ಈ ಅರ್ಥದಲ್ಲಿ ವಾಸ್ತವವಾದಿಯಾಗಿದ್ದು ನೋಡ್ತಾನೆ ಅದರಾಚಿಗಿನ ಇನ್ನು ಯಾವುದೋ ವಾಸ್ತವಗಳನ್ನು ನೆನಪಿಟ್ಟುಕೊಂಡೇ ನಾವು ಒಂದು ಕೃತಿಯನ್ನ ಪ್ರವೇಶ ಮಾಡಬೇಕು ಎಂಬುದು ನನ್ನ ನಿಲುವು.

ಬಿ. ಎಂಪುಟಯ್ಯ

ನೀವು ಹೇಳಿದ್ದನ್ನು ಒಪ್ಪಿಕೊಳ್ಳತ್ತೇನೆ. ಅದನ್ನು ವಿರೋಧಿಸುವುದಿಲ್ಲ. ಗೊಂದಲ ಕೂಡ ಮಾಡಲ್ಲ. ಆದರೆ ನಾನು ನನ್ನ ವಿವರಣೆಯನ್ನು ಬೇರೆ ರೀತಿಯಲ್ಲಿ ಕೊಡೋದಕ್ಕೆ ಪ್ರಯತ್ನಿ ಸುತ್ತೀನಿ. ಅದು ಏನೆಂದರೆ ಧರ್ಮಾಮೃತ ಕತೆಗಳಲ್ಲಿ ಮೂರು ಸಂದರ್ಭಗಳಲ್ಲಿ ಕೊಲೆಯನ್ನು ತಪ್ಪಿಸುವ ಪ್ರಸಂಗ ಬರುತ್ತದೆ. ಒಬ್ಬಳು ಸೂಳೆ, ಅವಳ ಹೆಸರು ಬೃಹಸೇನೆ ಕೊಲೆಯಾಗಲಿದ್ದ ಒಬ್ಬ ಹುಡಗನನ್ನು ತಪ್ಪಿಸುತ್ತಾಳೆ. ಪತ್ರ ಬರೆಯುವುದರ ಮೂಲಕ ಒಂದು ಕೊಲೆ ತಪ್ಪಿ ಸೋದು, ಮತ್ತೊಬ್ಬ ಮಗುವನ್ನು ಕೊಲೆ ದುಡ್ಡುಕೊಟ್ಟು ಕೊಲೆ ಮಾಡು ಅಂತ ಹೇಳಿದಾಗ, ಆ ಮಗುವನ್ನು ಎತ್ತಿಕೊಂಡು ಹೋಗುತ್ತಿರಬೇಕಾದರೆ ಮಗುವಿನ ಮುಖವನ್ನೆಲ್ಲಾ ನೋಡು ತ್ತಾನೆ. ಆ ಮುಖ ನೋಡಿ ಒಂದು ರೀತಿ ಕರುಣೆ ಹುಟ್ಟಿಬಿಟ್ಟು ಅವನು ಕೊಲೆ ಮಾಡೋದಿಲ್ಲ ಬಿಟ್ಟು ಹೋಗುತ್ತಾನೆ. Next ಇದೇ ಪ್ರಸಂಗ ರಿಪೀಟಾಗಿ, ಅದು ಶಾಲಿನಿ ಗೊತ್ತಾಗಿ ಮಾಲಿಕನಿಗೆ ಕೂಡ ದುಡ್ಡು ಕೊಟ್ಟು ಆ ಮಗುವಿಗೆ ಬರಕಾಗಲ್ಲ. ಪುನಃ ಆ ಮಗು ಅವನ ಮುಖವನ್ನು ಸ್ಪರ್ಶ ಮಾಡಿದಾಗ ಅವನಿಗೆ ಕೂಡ ಕರುಣೆ ಬರ್ತದೆ. ಆ ಮಗು ಅವನಿಗೂ ಕೂಡ ಕೊಲೆ ಮಾಡ್ತದೆ. ಈ ಮೂರು ಪ್ರಸಂಗಗಳನ್ನು ಒಂದು ಕಡೆ ಸೇರಿಸಿ ಚರ್ಚೆ ಮಾಡಿದರೆ, ಎರಡು ಪ್ರಸಂಗಗಳು ಬರ್ತವೆ. ನಮ್ಮ ಪ್ರಶ್ನೆ ಇರೋದು ಅಂದ್ರೆ ಏಕ್‌ದಂ ಅದ್ಕೆ ನೀವು ಹೇಳಿದ ಹಾಗೆ ಒಂದು ಸಾಮಾಜಿಕ ನ್ಯಾಯ ಎಷ್ಟು ಸೂಕ್ತ ಅಂತ ಅಂತಿಮ ಸ್ತರದಲ್ಲಿ ನಿಂತು ಇವತ್ತು ವ್ಯಾಲೂಷನ್ ಮಾಡಬೇಕಿಲ್ಲ. ಆದರೆ ನಿರೂಪಣೆಯ ವಿಧಾನಯಿದೆಯಲ್ಲ, ನಿರೂಪಣೆಯ ವಿನ್ಯಾಸ ಇದೆಯಲ್ಲ ಅದನ್ನು ಮರುವಿಮರ್ಶೆ ಮಾಡಲಿಕ್ಕೆ ನಮಗೆ ಅವಕಾಶ ಇದೆಯಂತ ಇದನ್ನು ನಾನು ಹೇಳಿದೆ. ಏನು ರೆಫರೆನ್ಸ್ ಕೊಡ್ತೀನಿ ಅಂದ್ರೆ ದೇವನೂರರ ಕತೆಯಲ್ಲಿ ‘ಮೂಡಲ ಸೀಮೇಲಿ ಕೊಲೆಗಿಲೆ’ ಆ ಕತೆಯಲ್ಲಿ ಅತ್ಯಂತ ಸೂಕ್ಷ್ಮವಾಗಿರುವ ಒಂದು ಸಣ್ಣ ಅಂಶವಿದೆ. ಏನತ್ತಂದ್ರೆ… ರಂಗಪ್ಪ ಗೌಡ್ರು ಮನೆಗೆ ಸಂಜೆಹೊತ್ತು ಅಕ್ಕಿ ಕೇಳಲು ಹೋಗ್ತಾಯಿದಾನೆ. ಅವನ ಉದ್ದೇಶ ಏನಪ ಅಂದ್ರೆ ಅಕ್ಕಿ ಕೇಳೋಕೆ ಗೌಡ್ರುಮನೆಗೆ ಹೊಗ್ಬೇಕು. ಅಲ್ಲಿ ಪಕ್ಕದಲ್ಲಿ ತಂತಿ ಕಂಬವನ್ನು ನಿಲ್ಲಿಸಿರ್ತಾರೆ ಐಸಾ ಐಸಾ, ಅಂತ ಕಂಬ ನೆಡುತ್ತಾ ಇರ್ತಾರೆ. ಅಲ್ಲಿ ಅವನನ್ನು ಯಾರು ಕರಿಯಲ್ಲ, ಏನೂ ಇಲ್ಲ. ತನ್ನ ಪಾಡಿಗೆ ತಾನು ಕಂಬ ಎತ್ತುತ್ತಾನೆ. ಮುಂದೆ ಹೋಗ್ತಾನೆ. ನನ್ಗೆ ಇಡೀ ಕತೆಯಲ್ಲಿ ಇದು ಬಹಳ ಮುಖ್ಯವಾಗಿರತಕ್ಕಂತ ರೋಲು ಅಂತ ಅನ್ಸುತ್ತದೆ. ಯಾರು ಯಾರು ಕರೆದಿಲ್ಲ ಅವನನ್ನು. ಇದು ದೇವನೂರರ ಕಾಲದಲ್ಲಿ ದೇವನೂರು ಹೊಲೆಯನ ಅದ್ರಲ್ಲೂ ಹಸಿದಂತವನ ಪಾತ್ರವನ್ನು ಚಿತ್ರಿಸುವ ಒಂದು ವಿಧಾನ. Next ಇದೇ ಚರ್ಚೆಯ ವಿನ್ಯಾಸವನ್ನು ಧರ್ಮಾ ಮೃತದ ನೆಲೆಗೆ ಹೋಗಿ ನೋಡಿದಾಗ, ಆ ಮೂರು ನಾಲ್ಕು ಕೊಲೆಯನ್ನು ತಪ್ಪಿಸುವ ವಿನ್ಯಾಸದ ನಿರೂಪಣೆಯಿದೆಯಲ್ಲ ಅದು ಪ್ರಶ್ನೆ ಇರೋದು ಕೊಲೆಯನ್ನು ತಪ್ಪಿಸುವ ಸಲುವಾಗಿ ಆ ಪಾತ್ರಗಳು ಬಂದಿದಾವೊ ಅಥವಾ ಪಾತ್ರಗಳ ನೆಲೆಯಿಂದಲೇ ಆ ನಿರೂಪಣೆ ಹುಟ್ಟಿದೆಯೋ ಅಂತ ಪ್ರಶ್ನೆಯಿರೊದು. ಇದರ ಮೂಲಕ ನಾವು ನಯಸೇನನ್ನು ಮಿತಅಂದಾಜು ಮಾಡಬೇಕಾ ಗಿಲ್ಲ. ಆದರೆ ನಿರೂಪಣೆಯ ವಿಧಾನದಲ್ಲೆ ಯಾವ ಬಗೆಯ ವಿನ್ಯಾಸ ಇದೆಯಂತ. ಹೊಲೆ ಯರಿಗೆ ನ್ಯಾಯ ಕೊಡುವ ಸಲುವಾಗಿಯೊ ಅಥವಾ ಮಾದಿಗನಿಗೆ ಒಂದು ನಿಜವಾಗಲೂ ಅಂತಃಕರಣ ಇದೆಯನ್ನುವ ಕಾರಣಕ್ಕಾಗಿ ಬಂದಿದೆಯಾ, ಅಥವಾ ಕೊಲೆಯನ್ನು ತಪ್ಪಿಸುವ ಸಲುವಾಗಿ ಬಂದಿದೆಯಾ, ಅಲ್ವಾ, ಆ ಮೃಗಸೇನನ ಪ್ರಕರಣವು ಕೂಡ ಅಷ್ಟೆ. ಮೃಗಸೇನ ಪತ್ರವನ್ನು ಬರೆದಿಟ್ಟಳು ಅನ್ನೊದು ಮೃಗಸೇನೆಗಿರಬಹುದಾದ ಅಂಶ ಮೃಗಸೇನೆಗಾಗಿ ನಿರೂಪಣೆ ಹುಟ್ಟಿದೆಯೊ, ಕೊಲೆಯನ್ನು ತಪ್ಪಿಸುವ ಸಲುವಾಗಿ ನಿರೂಪಣೆ ಹುಟ್ಟಿದಿಯೋ ಅಂತ.

ಅಮರೇಶ್. ಎನ್.

(ಶಿವಗಂಗಮ್ಮ) ಹೇಳಿದ್ದು ಕೊಲೆಯನ್ನು ತಪ್ಪಿಸುವುದಕ್ಕಾಗಿಯೇ ಆಕೆ ಬರುತ್ತಾಳೆ ಎಂದು. ಏಕೆಂದರೆ ಅವಳು ಕೊಲೆ ತಪ್ಪಿಸಬೇಕಾಗಿರುತ್ತದೆ. ಏಕೆಂದರೆ ಆ ಕತೆಯ ಚೌಕಟ್ಟಿನೊಳಗಡೆ ಅಲ್ಲಿ ೫ ನಿಯಮಗಳನ್ನು ರಕ್ಷಿಸುತ್ತಾನೆ ಅವನು. ಆ ಐದು ನಿಯಮಗಳನ್ನು ರಕ್ಷಿಸುವುದರಿಂದ ಇವನಿಗೆ ಆ ಸಾವು ಬರಬಾರದೆಂದು ಕತೆಯೊಳಗಡೆ ಈಕೆ ಆಕೆಗೆ ನೆಪವಾಗ್ತಾಳೆ. ಅಲ್ಲಿ ಒಬ್ಬ ಹೊಲೆಯ ಮತ್ತು ಒಬ್ಬ ಮಾದಿಗೆ ಇಬ್ಬರು ಬರುತ್ತಾರೆ. ಅವರಿಬ್ಬರೂ ಆ ಕೊಲೆಯನ್ನು ತಪ್ಪಿಸುತ್ತಾರೆ. ಈಕೆ ವೇಶ್ಯೆ. ಆ ನಿರೂಪಣೆಯಲ್ಲಿ ಏನಾಗಿರುತ್ತೆ ಅಂದರೆ ಆಕೆಯ ಮೇಲೆ ಕರುಣೆ ಬರುತ್ತದೆ. ಆದರೆ ಅವನು ಅಧ್ಯಾತ್ಮವನ್ನು ನೀಡುತ್ತಾರೆ. ಇವರಿಬ್ಬರು ಯಾರು ಹೊಲೆಯ ಮತ್ತು ಮಾದಿಗ ಆದರೆ ಇಡೀ ಕತೆಯಲ್ಲಿ ಯಾವುದು ತಾನೇ ಮುಖ್ಯ ಅಂತ ಕೇಳಿದರೆ ಮೊದಲು ಬೆಸ್ತರಾಗಿ ಹುಟ್ಟಿದವರು. ಅವನು ಮೀನನ್ನು ಹಿಡೀಬೇಡ, ಅದನ್ನು ತಿನ್ನಬೇಡ. ಅನಂತರ ಮೀನನ್ನು ಅಂತ ಹೇಳಿದಾಗ ಅದನ್ನು ಖೂನ ಹಿಡಿಯುವುದು ಹ್ಯಾಗೆ ಅಂತ ಹೇಳಿ ಪ್ರತಿಸಾರಿ ಮೊದಲು ಮೀನು ಹಿಡಿದಾಗ ಅದಕ್ಕೊಂದು ದಾರ ಕಟ್ಟುತ್ತಾನೆ. ಅದು ಮತ್ತೆ ಮತ್ತೆ ಬಂದು ಕೂಡ್ತದೆ. ಅದೇ ಮೀನು ಅಂದ್ರೆ ಕತೆಯ ಚೌಕಟ್ಟಿನೊಳಗಡೆ ಅವನು ಗುರುತಿಸಿದ್ದಾನೆ ಅನ್ನೋ ಕಾರಣಕ್ಕಾಗಿ ಇವರು ಸಾವಿನಿಂದ ಬಿಡುಗಡೆ ಆಗಿದ್ದಾರೆ ಅಂತ ಕತೆಯ ಚೌಕಟ್ಟಿನೊಳಗಡೆ ಬರುತ್ತೆ. ಆದರೆ ನೀವು ಕತೆಯ  ಚೌಕಟ್ಟಿನೊಳಗೆ ಇದನ್ನು ಒಪ್ಪಿಕೊಳ್ಳಬೇಕು ಅಥವಾ ವೇಶ್ಯಯ ಮಂದಿ ಇದ್ದ ಹೊಲೆಯರ ದರೋಡೆಯನ್ನು ಒಪ್ಪಿಕೊಳ್ಳಬೇಕು ಅಂತ.

ರಾಜಪ್ಪ ದಳವಾಯಿ

ನೀವು ಹೇಳಿದ ಕತೆಯ ಮೊದಲ ಭಾಗ ಇದೆಯಲ್ಲ ಅವನ ಹೆಂಡತಿ ಅಂತ ಹೇಳಿ, ಹೆಂಡತಿ ಹೊಡೆದು ಬಿಸಾಕುತ್ತಾಳೆ. ನೀವು ಯಾವುದೊ ಮುನಿಯ ಮಾತನ್ನು ಕಟ್ಟಿಕೊಂಡು ಸಿಗಬೇಕಾಗಿದ್ದ ಗಳಿಕೆಯನ್ನು ನೀನು ನಾಶ ಮಾಡಿದಿಯಾ ಮನೆಯಲ್ಲಿ ನಿನಗೆ ಜಾಗ ಇಲ್ಲ ಹೋಗು ಅಂತ ಹೊರಗಾಕ್ತಾಳೆ. ಅಂದರೆ ಒಬ್ಬ ಮುನಿಯ ಮಾತನ್ನು ಕೇಳಿ ಒಬ್ಬ ಬೆಸ್ತರವನು ಹೇಗೆ ಬೀದಿಗೆ ಬಿದ್ದ ಅನ್ನೋ ತುಂಬ ಸ್ವಾರಸ್ಯಕರವಾದ ಪ್ರಸಂಗವನ್ನು ಕೂಡ ಅಲ್ಲಿ ನಿರೂಪಣೆ ಮಾಡಲಾಗಿದೆ. ಅದು ಬಹಳ ಮುಖ್ಯವಾದ ಸಮಸ್ಯೆ. ನೀವು ಧಾರ್ಮಿಕ ನೆಲೆಯನ್ನು ಇಟ್ಟುಕೊಂಡು ತಕ್ಷಣವೇ ಲೌಕಿಕವಾದಂತಹ ಸಾಮಾನ್ಯ ಜನರ ವರ್ತನೆಗಳು ನಾಶವಾಗುತ್ತವೆ ಎನ್ನುವ ದೃಷ್ಟಿಕೋನವು ಸಹ ಕತೆಗಾರನಿಗಿದೆ. ಏಕೆಂದರೆ ನೀವು ಯಾವ ನೆಲೆಯಲ್ಲಿ ನಿಂತು ನೋಡ್ತೀರಿ ಹಾಗೆ ಕಾಣುತ್ತೆ. ಅಂದರೆ ಬಹಳ ಸ್ವಾರಸ್ಯಕರವಾದ ಕತೆಯದು. ಒಂದು ಕುಟುಂಬ ಹೇಗೆ ಛಿದ್ರವಾಗಲಿಕ್ಕೆ ಸಾಧ್ಯ, ಒಬ್ಬ ಮುನಿಯ ಮಾತು ಕೇಳಿದರೆ ಒಬ್ಬ ಶ್ರಮಜೀವಿ ಹೇಗೆ ನಾಶವಾಗ್ತಾನೆ ಮೊದಲಿನಿಂದಲೂ ಆ ಪ್ರಸಂಗಗಳು ಹಲವು ಇವೆ. ಮುನಿಗಳು ಸೋಂಬೇರಿ ಗಳು, ಕೆಲಸ ಮಾಡದಿರುವಂತವರು ಹೋಗಿ ಹೋಗಿ ಅವರನ್ನು ನಂಬಿಕೊಂಡು ಅವರ ಉಪದೇಶಗಳನ್ನು ಕೇಳಿ ಹಾಳಾಗುತ್ತೀರಿ ಅನ್ನೋದು ವಸುಭೂತಿಯ ಕತೆಯಲ್ಲಿ ಆರಂಭ ದಿಂದಲೂ ಬರೋದು ಅದೊಂದು ದೊಡ್ಡ ವಿನ್ಯಾಸ ಆ ನೆಲೆಯಲ್ಲಿದೆ.

ಮೊಗಳ್ಳಿ ಗಣೇಶ್

ರೈಟಿಂಗ್‌ನ ಬಗ್ಗೆ ಬಹಳ ದೊಡ್ಡ ತಕರಾರಿವೆ. ಅದು ಪುಟ್ಟಯ್ಯ ಮತ್ತು ಅಮರೇಶ್ ಹೇಳಿದ ಹಾಗೆ ಎರಡು ಕಾರಣಗಳಿರಬಹುದು. ನಯಸೇನನ ಎರಡು ಕತೆಗಳ ವಿವರಗಳಲ್ಲಿ ಓದುಗರು ಅನ್ನೋದಕ್ಕಿಂತ ಅವತ್ತು ಇದ್ದ ನೈತಿಕ ಪ್ರಜ್ಞೆ ಬಗ್ಗೆ ಮಾರ್ಮಿಕವಾಗಿ ಅವರು ಸೂಚನೆ ಕೊಡ್ತಾರೆ.

ರಾಜಪ್ಪ ದಳವಾಯಿ

ಇಲ್ಲ ಆ ನೈತಿಕಯನ್ನು ಪ್ರಶ್ನಿಸುವ ಸಾಧ್ಯತೆ ಇಲ್ವೇ ಇಲ್ಲ. ಇಲ್ಲಿ ನಯಸೇನ ಕತೆಯಲ್ಲೇ ಮುಂದುವರಿದು ಒಂದು ಕುಟುಂಬದ ಮೇಲಾಗುವ ಪರಿಣಾಮ ಇದೆಯಲ್ಲ ಅದು ಬಹಳ ಸ್ವಾರಸ್ಯಕರವಾದದು. ಅದರ ಹಿನ್ನೆಲೆಯಲ್ಲಿ ನೀವು ಧರ್ಮವನ್ನು ಹೇಗೆ ಗ್ರಹಿಸುತ್ತೀರಿ ಅನ್ನೋದು ಮುಖ್ಯ.

ಅಮರೇಶ್ ನುಗಡೋಣಿ

ಅದೇ ನಾನು ಏನು ಹೇಳಾಕೆ ಪ್ರಯತ್ನ ಪಟ್ಟೆ ಅಂದ್ರೆ ……ಇರುವ ಈ ಎಲ್ಲ ವೈರುಧ್ಯ ಗಳನ್ನು ಒಂದು ಥೀಸಿಸ್ ಆಗಿ ಪ್ರಕಟಿಸುವಂತೆ ಯಾವ ಕುರುಹು ಕಾಣಲಿಲ್ಲ ನನಗೆ ಅದರೊಳ ಗಡೆ. ಆದರೆ ಅದರ ಫಾಸಿಟಿವ್‌ಗಳನ್ನು ಕಟ್ಟೋದು ಕತೆಯ ಉದ್ದೇಶ. ವೈರುಧ್ಯ ಎಲ್ಲಿದೆ ಯೆಂದರೆ ವೇಶ್ಯೆ ಮತ್ತು ಹೊಲೆಯರು ಅದನ್ನು ತಪ್ಪಿಸುವುದು ಅಂತ ಇದು ವೈರುಧ್ಯ. ಆ ಫಾರಂನಲ್ಲಿ ಕುರುಹು ಮತ್ತು ಅರಿವು ಎರಡರ ಬೇರೆ ಬೇರೆ ಭಾಗವಾಗಿ ಒಂದರ ಪಾಸಿಟಿವ್‌ನ್ನು ಒಂದರ ನೆಗಟಿವ್‌ನ್ನು ಹೇಳೋದಿಕ್ಕೆ ಪ್ರಯತ್ನ ಪಡ್ತಾನೆ ಅಂತ ನಾನು ತಿಳ್ಕೊಂಡಿದೀನಿ. ಆದರೆ ಆಧುನಿಕ ಜಗತ್ತಿನಲ್ಲಿ ಅರಿವು ಮತ್ತು ಕುರುಹು ಒಂದರ ಮೀರಿ ಇನ್ನೊಂದು ಯಾವುದೋ ಒಂದು ಎರಡರಲ್ಲಿದ್ದುಕೊಂಡು ಕೂಡ ಕೆಲಸ ಮಾಡ್ತಿರುತ್ತಾರೆ. ಅಂದರೆ ಅರಿವನ್ನಿಟ್ಟುಕೊಂಡಿರುತ್ತಾರೆ. ಅದನ್ನು ಬಳಸುತ್ತಾರೆ. ಕುರುಹುನ್ನು ಬಳಸುತ್ತಾರೆ. ಆ ತರಹದ ವೈರುಧ್ಯಗಳನ್ನು ಹೇಳೋದಕ್ಕೆ ಪ್ರಯತ್ನ ಪಡಬೇಕು.

ಶಿವಗಂಗಮ್ಮ

ತತ್ವಜ್ಞಾನದ ಧಾರೆಗಳಲ್ಲಿ ಅರಿವು ಮತ್ತು ಕುರುಹನ್ನು ಕಂಪಾರ್ಟ್‌ಮೆಂಟ್ ಮಾಡಿದೀವಿ. ವಾಸ್ತವವಾಗಿ ಅರಿವು ಮತ್ತು ಕುರುಹು ಒಂದೇ ಕಡೆ ಇರುತ್ತವೆ. ಅಂತ ಹೇಳಿ ಪ್ರಜ್ಞಾಪೂರ್ವಕ ವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಎಲ್ಲರೂ ಹೇಳ್ತಾರೆ. ಆದರೆ ಅದು ಏನಿದೆ ಮ್ಯಾಟರ್ ಅಂಡ್ ಸ್ಪಿರಿಟ್ ಸಂಬಂಧ ಏನಿದೆ ಅದು ಒಂದರಿಂದ ಒಂದು ಮ್ಯಾಟರ್‌ನಿಂದ ಸ್ಪಿರೀಟ್‌ಗೆ ಹೋಗೋದು, ಸ್ಪಿರೀಟ್‌ನಿಂದ ಮ್ಯಾಟರ್‌ಗೆ ಬರೋದು ಅಲ್ಲ. ‘ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವ’ ಅಮೂರ್ತತೆಯನ್ನು ನಾವು ಹೇಳಲಿಕ್ಕೆ ಸಾಧ್ಯವಾಗೋದಿಲ್ಲ. ಒಬ್ಬ ಕಾರ್ಮಿಕ ಒಂದು Board ತಯಾರು ಮಾಡಿ ಅದಕ್ಕೆ ಮಳೆ ಎಲ್ಲಿ ಹೊಡೆದು ಅಷ್ಟು ಮಾಡಿದಾಗ ಒಂದು ಒಳ್ಳೇ ಕಲಾಕೃತಿ ನೀವು ಕೊಡೋಕೆ ಸಾಧ್ಯವಾಗುವುದಿಲ್ಲ. ಅಲ್ಲಿ Matter ಇರುತ್ತೆ, ಇವೆರೆಡು ಹ್ಯಾಗೆ ಜೊತೆಗೂಡಿ ಇರುತ್ತವೆ. ಆ ಎರಡು ಜೊತೆಗೂಡಿ ಇದ್ದಾಗ ಒಂದು ಕೃತಿ ಹೇಗೆ ಶ್ರೇಷ್ಠವಾಗುತ್ತೆ ಅನ್ನೋದನ್ನು ನಾನು ಹೇಳಲು ಪ್ರಯತ್ನಿಸಿದೆ.

ಅಮರೇಶ್ ನುಗಡೋಣಿ

ಅಲ್ಲ ನಾನು ಅದನ್ನು ನಿರಾಕರಿಸುವುದು ಅಂತ ಹೇಳ್ತಾ ಇರೋದು. ಅಂದರೆ ನೀವು ಇಲ್ಲಿ ಆಧುನಿಕ ಜಗತ್ತಿನಲ್ಲಿ ಏನಾಗಿದೆಯಂದರೆ ನೀವು ಅರಿವು ಮತ್ತು ಕುರುಹು ಎರಡನ್ನು ಇಟ್ಟುಕೊಂಡು ಇರ್ತೀರಲ್ಲ ಅದು ಕೆಡಕಿಗೂ ಮತ್ತು ಒಳಿತಿಗೂ ಎರಡಕ್ಕೂ ಬಳಸ್ತಾಯಿದ್ದಾರೆ ಅಂತ ನಾನು ಹೇಳಿದ್ದು.

ಶಿವಗಂಗಮ್ಮ

ನಾನು ಅದೇ ಹೇಳಿದ್ದು. ಧರ್ಮವನ್ನು ನಂಬಿಕೊಂಡು ಮೂಲಭೂತವಾದ ಹುಟ್ಟಿದ ಉದಾಹರಣೆಗಳು ನಮ್ಮ ಜಗತ್ತಿನಲ್ಲಿದೆ. ಅದಕ್ಕೆ ಬೇಕಾದಷ್ಟು ದೇಶಗಳ ಉದಾಹರಣೆಗಳನ್ನು ನಾನು ಕೊಡಬಲ್ಲೆ. ಧರ್ಮವನ್ನು ಒಂದು ಫಾಸಿಟಿವ್ ಆಗಿ ಸಾಮಾಜಿಕ ಉಪಕರಣವಾಗಿ ಬಳಸಿಕೊಂಡು ಅನೇಕ ಚಳುವಳಿಗಳು ಆಧುನಿಕವಾಗಿ ಹುಟ್ಟಿಕೊಳ್ತಾಯಿವೆ. ಲ್ಯಾಟಿನ್ ಅಮೇರಿಕದಲ್ಲಿ, ಚಿಲಿಯಲ್ಲಿ ಎಲ್ಲ ಇವೆ. ಅಂದರೆ ಅದನ್ನು ಫಾಸಿಟಿವ್ ಆಗಿ ತಗೊಂಡೋರು, ನೆಗಟಿವ್ ಆಗಿ ತಗೊಂಡೋರು ಏನಾಗುತ್ತಾರೆ ಅನ್ನೊದನ್ನು ಮೊದಲು ಹೇಳಿದ್ದಾನೆ.

ಅಮರೇಶ್ ನುಗಡೋಣಿ

ಅಲ್ಲ ಒಂದೇ ವ್ಯಕ್ತಿ ಎರಡನ್ನೂ ಬಳಸುತ್ತಾನೆ ಅಂತ ನಾನು ಹೇಳ್ತಾಯಿದೀನಿ.

ಶಿವಗಂಗಮ್ಮ

ಎರಡನ್ನು ಬಳಸುತ್ತಾನೆ ಅಂತ ಅವನಿಗೆ ಗೊತ್ತಿಲ್ಲದೆಯೊ, ಗೊತ್ತಿರಲಾರದೊ ಚೈತನ್ಯ ವನ್ನು ಒಪ್ಪಿಕೊಂಡು ಇರ್ತಾಯಿದ್ದಾನೆ. ವಸ್ತುವಿಲ್ಲದೆ ಚೈತನ್ಯವಿಲ್ಲ, ಚೈತನ್ಯವಿಲ್ಲದೆ ವಸ್ತು ವಿಲ್ಲ. ನಮ್ಮ ಈ ಜಗತ್ತಿನ ನಿರ್ಮಾಣದ ಮೊದಲಿನ ಕಣ ಏನಿದೆಯಲ್ಲ ಒಂದು ಅಣು ಮೂರು ಅಂಶವನ್ನು ಒಳಗೊಂಡು ಇರ್ತಾಯಿದೆ. ಒಂದು ಅಣುವಿನಲ್ಲಿ ಪ್ರೊಟಾನ್ ಇರುತ್ತವೆ, ನ್ಯೂಟ್ರಾನ್ ಇರ್ತಾವೆ. ಅವು ಅಣುವಿನ ಕೇಂದ್ರದಲ್ಲಿ ಇರುತ್ತವೆ. ಪಾಸಿಟಿವ್ ವಿದ್ಯುತ್ ಕಣಗಳು, ನ್ಯೂಟ್ರಾನ್ ವಿದ್ಯುತ್ ಕಣಗಳು ಅಣುವಿನ ಕೇಂದ್ರದಲ್ಲಿರುತ್ತವೆ. ಅಣುವಿನ ಸುತ್ತಲಿನಲ್ಲಿ ಎಲೆಕ್ಟ್ರಾನ್ಸ್ ನೆಗಟಿವ್ ವಿದ್ಯುತ್ ಕಣಗಳಿರುತ್ತವೆ. ಆ ಸುತ್ತಲೂ ಸುತ್ತುತ್ತಿರುವ ನೆಗಟಿವ್ ವಿದ್ಯುತ್ ಕಣಗಳಲ್ಲಿ ಒಂದು ಸ್ವಲ್ಪ ಇಂಬ್ಯಾಲೆನ್ಸ್ ಆಯ್ತು ಅಂದರೆ, ಪಾಸಿಟಿವ್ ಹತ್ತು ಇದ್ದು ಅವು ಒಂಬತ್ತು ಇದ್ದವು ಅಂದರೆ, ನೆಗಟಿವ್ ಕಣ ಎಲೆಕ್ಟ್ರಾನ್ ಏನ್ಮಾಡ್ತವೆ. ಇನ್ನೊಂದು ಕಣವನ್ನು ತೆಗೆದುಕೊಳ್ಳುತ್ತವೆ. ಹೆಚ್ಚಿಗಾಯ್ತು ಅಂದರೆ ಒಂದು ಬಿಡ್ತವೆ. ಇದು ಒಟ್ಟಾರೆ ಜಗತ್ತಿನ ಚಲನಶೀಲತೆಗೆ ಮುಖ್ಯತಳಹದಿ Matter and spirit ಏನಿದೆಯಲ್ಲ ಇದು ಜಗತ್ತಿನ ಒಳಗಡೆ ಒಂದರಿಂದ ಒಂದು, ಇನ್ನೊಂದರಿಂದ ಇನ್ನೊಂದು ಅಲ್ಲ ಅವೆರೆಡು ಜೊತೆಗೂಡಿವೆ. ಅದನ್ನು ಹೇಳತಾಯಿದಾನೆ. ಬುದ್ಧನು ಹೇಳಿದಾನೆ, ಬಸವಣ್ಣನು ಹೇಳಿದಾನೆ. ಕಾಂಟ್ ಹೇಳಿದಾನೆ, ಹೆಗಲ್ ಹೇಳ್ತಾನೆ. ಈ ಮಾಕ್ಯಬ್ಲಾಂಕ್ ಥಿಯರಿ ಏನಿದೆಯಲ್ಲ ವಿದ್ಯುತ್ ಕಣಗಳು ತರಂಗಗಳಿಂದ ಕೂಡಿವೆಯಲ್ಲ ತರಂಗಗಳನ್ನು ಕೂಡಿದೆ. ಮತ್ತೊಂದು ಅದರ ಜೊತೆಗೆ ಬೆಳಕು ಕೂಡಿದೆ. ಅಂದರೆ ಚಲನೆಯೂ ಇದೆ. ಮತ್ತು ತರಂಗದಿಂದಲೂ ಕೂಡಿದೆ ಅಂತ ಹೇಳಬಹುದು. ಅಂದ್ರೆ ಕಾನ್‌ಶಿಯಸ್ ಅನ್ನೋದು ಲೆನಿನ್ ಕೂಡ ಆ ಮಾತನ್ನು ಹೇಳ್ತಾನೆ. ಅರಿವಿನಿಂದ ಕುರುಹುಗೆ ಬರುವುದಿಲ್ಲ. ಕುರುಹುನಿಂದ ಅರಿವಿಗೆ ಹೋಗುವುದಿಲ್ಲ. ಅರಿವು ಕುರುಹುಗಳನ್ನು ಹಿಡಿದುಕೊಂಡು ಹೋದವರು ನಿಜವಾಗಲೂ ಸಮತೋಲವನ್ನು ಸಾಧಿಸುತ್ತಾರೆ. ಇದಿಷ್ಟು ನನ್ನ ನಿಲುವು.

ಮೊಗಳ್ಳಿ ಗಣೇಶ್

ಅಲ್ಲ ನನಗೆ ಒಂದು ಅನುಮಾನ ಬರುತ್ತೆ. ನಯಸೇನನ ಧರ್ಮಾಮೃತದ ಎಲ್ಲಾ ಪಾತ್ರಗಳ ಅರಿವು ಮತ್ತು ಕುರುಹು ಇವೆರಡನ್ನು ಇಟ್ಟುಕೊಂಡು ಮಾತಾಡಿದ್ದಾರೆ. ಸ್ಪಷ್ಟವಾಗಿ ಕಾಣಿಸ್ತದೆ. ಇವು ವರ್ತಮಾನದ ಲೌಕಿಕದ ಅರಿವನ್ನು ನಂಬ್ತಾಯಿಲ್ಲ. ಮತ್ತೆ ಈ ಲೌಕಿಕದಲ್ಲಿ ರುವ ತಮಗಿರುವ ಕುರುಹುಗಳಿವೆಯಲ್ಲ ಅದನ್ನು ಕಳೆದುಕೊಳ್ಳಲಿಕ್ಕೆ ಇಚ್ಚಿಸುತ್ತಿಲ್ಲ. ಅಂದರೆ ಇನ್ನೊಂದು ಅರಿವು ಬೇಕು. ನಮಗೆ ಅಥವಾ ಇನ್ನೊಂದು ಅಸ್ತಿತ್ವ ಬೇಕು. ನಮಗೆ ಅನ್ನುವ ಈ ಮಾತುಗಳೆಲ್ಲ ತುಡಿತಾಯಿವೆ. ನಯಸೇನನ ಉದ್ದೇಶವೇ ಈ ಅನಿವಾರ್ಯವನ್ನು….. ಇವೆಲ್ಲವು ವರ್ತಮಾನದಲ್ಲಿರುವ ಅರಿವನ್ನು ನಂಬ್ತಾಯಿದಾವೆ. ಇದು ಕೇಡಿನ ಅರಿವು ಎಂದ ಹಾಗೇನೇ ಈ ಚಹರೆ ನಮಗೆ ಬೇಡ ಈ ರಾಜ್ಯವಿಮುಕ್ತಿಯ ಅಥವಾ ದೊಡ್ಡ ಸಾಕ್ಷಾತ್ಕಾರದ ಇನ್ನೊಂದು ಚಹರೆ ಬೇಕು ನಮಗೆ. ಅರಿವು ಕುರುಹಿನ ನಿರ್ಣಯ ಪುಟ್ಟಯ್ಯನವರು ಏನು ಹೇಳಿದ್ರೊ ಅದನ್ನು ಈ ಎರಡನ್ನು ಅರಿತುಕೊಂಡು ನಡೀಬೇಕು.

ಶಿವಗಂಗಮ್ಮ

ಧಾರ್ಮಿಕ ರಿಚ್ಯುವಲ್ ಆಚರಣೆಗಳು ಯಾವಾಗ ಮನುಷ್ಯ ಮನುಷ್ಯರನ್ನು ಒಡಿತಾಯಿವೆ ಅದನ್ನು ನೆಗಟಿವ್ ಅಂತ ಹೇಳೋದು. ಅದೇ ಧಾರ್ಮಿಕ ಆಚರಣೆಗಳು ಮನುಷ್ಯ ಮನುಷ್ಯ ರನ್ನು ಕೂಡಿಸ್ತಾ ಇವೆ ಅನ್ನೋದಿಕ್ಕೆ ನಾನು ಹಲವಾರು ದೇಶಗಳ ಉದಾಹರಣೆ  ಕೊಡಬಲ್ಲೆ. ಆಚರಣೆಗಳು ಮೂಲಭೂತವಾದಕ್ಕೆ, ಜನಾಂಗವಾದಕ್ಕೆ ಮತ್ತು ರಾಷ್ಟ್ರೀಯವಾದಕ್ಕೆ, ಇಂತ ಕೋಮುವಾದಕ್ಕೆಲ್ಲ ಪ್ರಚೋದನೆಯನ್ನು ನೀಡುತ್ತವೆ. ಅದರ ಅರ್ಥ ಇದೇ ನಮ್ಮ ಜಗತ್ತು. ಯಾಕೆ ಹಿಂದುತ್ವವನ್ನು ಹಿಡಿದುಕೊಂಡು ಹೊರಡ್ತಾಯಿದ್ದಾರೆ. ಒಂದು ಭೂಪಟಕ್ಕಿಂತ ಮನುಷ್ಯರು ಮುಖ್ಯ ಅನ್ನೋದು ಯಾಕೆ ಗೊತ್ತಾಗ್ತಾಯಿಲ್ಲ. ರಿಚ್ಯುವಲ್ ಹಿಡಿದುಕೊಂಡಾಗ ಅದು ಆಗ್ತಾಯಿದೆ. ಬರಿ ನಾವು ಕುರುಹು ಹಿಡಿದಾಗ ಹಾಗೆ ಆಗ್ತಾಯಿದೆ. ಹ್ಯಾಂಡಿಕ್ಯಾಪ್ಡ್ ಆಗ್ತಾಯಿದೀವಿ. ನಮ್ಮಲ್ಲಿ ಕುರುಹನ್ನ ಹಿಡಿದು ಹ್ಯಾಂಡಿಕ್ಯಾಪ್ಡ್ ಆಗಿರೋರು ಇದ್ದಾರೆ. ಅರಿವನ್ನು ಹಿಡಿದು ಹ್ಯಾಂಡಿಕ್ಯಾಪ್ಡ್ ಆಗಿರೋರು ಇದ್ದಾರೆ. ಆದರೆ ಅರಿವು ಮತ್ತು ಕುರುಹುನ್ನು ಎರಡನ್ನು ಫಾಸಿಟಿವ್ ಆಗಿ ತಗೊಂಡಾಗ ಮಾತ್ರ ಜನಸಮುದಾಯದ ಹತ್ತಿರವಿರುತ್ತಾರೆ. Not ಇಂಟೆಲೆಕ್ಚುವೆಲ್ಸ್ ಜನ ಸಮುದಾಯದ ಹತ್ತಿರವಿರೋರು ಯಾವಾಗಲೂ ಅರಿವು ಮತ್ತು ಕುರುಹುಗಳನ್ನು ಜೊತೆಗಿಟ್ಟುಕೊಂಡೇ ಇರುತ್ತಾರೆ. ಬರೀ ಅರಿವನ್ನು ಹಿಡಿದು ಕೊಂಡೋರು ಅಲ್ಲಮನಾಗುತ್ತಾರೆ. ಆ ಎರಡನ್ನು ಒಳಗೊಂಡವರು ಜನರ ನಡುವೆ ಇರುತ್ತಾರೆ. ಅದರಲ್ಲಿ ಒಂದು ಪ್ರಸಂಗ ಬರ‍್ತಿದೆ. ಆ ಪ್ರಭಾವತಿ ಗಂಡ ಇಬ್ಬರು ಆಸ್ಥಾನದಲ್ಲಿ ದ್ದಾಗ ಒಬ್ಬ ಬಹಳ ವಿಕೃತವೇಷದ ಮುನಿ ಮಂಟೆಸ್ವಾಮಿ ಕತೆಯಲ್ಲಿ ಕೊನೆಗೆ ಹ್ಯಾಗೆ ವಿಕೃತವೇಷ ಆಮೇಲೆ ಬಸವಣ್ಣನ ಒಂದು ವಚನ ಕೆದರಿದ ತಲೆ ಬಿಟ್ಟಮಂಡೆ ಅಂದರೆ Last man ಹ್ಯಾಗಿರುತ್ತಾನೆ ಅಂತ ಮಹಾತ್ಮರು ಮಾತ್ರವೇ ಗುರುತಿಸಲಿಕ್ಕೆ ಸಾಧ್ಯ ಅನ್ನೋದು ಇಲ್ಲಿಯ ಆಶಯ. ಒಬ್ಬ Last man ನ್ನು ನಾವು ಹ್ಯಾಗೆ ಕಾಣಬೇಕು ಅದರ ಆಶಯಇಲ್ಲಿದೆ. ಅದಕ್ಕಾಗಿ ರಿಚ್ಯುವೆಲ್ಸ್‌ನನ್ನು ಹಿಡಿದುಕೊಂಡವರು Last manಗೆ ಹೊಗೋದಿಲ್ಲ. ಅವರು ಇಲ್ಲೇ ಇರುತ್ತಾರೆ. ಅದನ್ನು ಪಾಸಿಟಿವ್ ಆಗಿ ತಗೊಂಡಿರೋರು ಒಂದು ಚಳುವಳಿಗಳನ್ನು ರೂಪಿಸುತ್ತಾರೆ. ಕುರುಹುಗಳೆಂದು ಹೇಳುವಾಗ ಮೊದಲು ಮಾರಿಮಸಣಿಗಳನ್ನೆಲ್ಲ ಮಾಡಿಸು ತ್ತಾರೆ. ಆಮೇಲೆ ಇಷ್ಟಲಿಂಗ ಅಂತಾರೆ, ಆಮೇಲೆ ಕಣ್ಣಗಳು ತುಂಬಿದರು ನೋಡಲಿಲ್ಲ. ಕಿವಿಗಳು ತುಂಬಿದರು ಕೇಳಲಿಲ್ಲ. ಅಂದರೆ ಕುರುಹನ್ನು ಹಿಡಿದುಕೊಂಡು ಇದೊಂದು ವಿಮಾನ ಹೋಗೋದಕ್ಕೆ ಇದು ಒಂದು ರನ್‌ವೇ ಇದ್ದ ಹಾಗೆ. ಕುರುಹು ಅನ್ನೋದು ನಾವೇನು ಅಂದ್ರೆ ರನ್‌ವೇನಲ್ಲೇ ಸುತ್ತು ಹಾಕ್ತಾ ಇದ್ದೇವೆ. ಏಕೆಂದರೆ ಕುರುಹುಗಳನ್ನು ಹಿಡಿದುಕೊಂಡಿ ದೀವಿ. ಕುರುಹಿನ ಜೊತೆಗೆ ಇದ್ದಾಗ ರನ್‌ವೇ ಮುಗಿಸಿ ನಾವು ಮೇಲೆ ಹೋದಾಗ ಅದು ಸರಿಯಾಗುತ್ತೆ. ಇಲ್ಲಿ ಮೇಲೆ ಇರ್ತೀವಿ ಇಲ್ಲ ಕೆಳಗೆ ಇರ್ತೀವಿ ಎರಡು ತಗೊಂಡು ಇರೋರು ನಿಜವಾದ ಜನಸಮುದಾಯದ ಹತ್ತಿರ ಇರುತ್ತಾರೆ.