ವೆಂಕಟೇಶ ಇದ್ವಾಂಡಿ

ಬಹಳ ಮುಖ್ಯವಾಗಿ ಭೋಗ ಮತ್ತು ವೈರಾಗ್ಯದ ಈ Conspetಗಳು ಜೈನ ಧರ್ಮಕ್ಕೆ ಬಹಳ ಕಾಡಿರುವಂತ ಎರಡು ಕಾನ್ಸೆಪ್ಟ್‌ಗಳು. ಆದ್ದರಿಂದ ಧರ್ಮಾಮೃತದ ಕತೆಯೊಳಗಡೆ ಅದು ಯಾವ ರೂಪದಲ್ಲಿದೆ ಅಂತ ಅನ್ನೊದನ್ನು ಬೇರೆ ರೂಪಗಳಲ್ಲಿ ಹಿಡಿದಿಡುವುದಕ್ಕೆ ಸಾಧ್ಯವೆ? But ನೀವೇನು ಹೇಳ್ತಾ ಇದ್ದೀರಿ ಎಂದರೆ ಆದಿಪುರಾಣದ ಅಥವಾ ಅಜಿತನಾಥ ಪುರಾಣದ ತರಹದ ಸಾಂಪ್ರದಾಯಿಕ ಭೋಗದ ಕತೆಯಿಲ್ಲ ಅಂತ ಹೇಳ್ತೀದ್ದೀವಲ್ಲ. ಬಹುಶಃ ಅದಕ್ಕೆ ಬೇರೆ ತರದಲ್ಲಿ ಆಲೋಚನೆ ಮಾಡೋದಿಕ್ಕೆ ಸಾಧ್ಯವಿದೆ ಅನ್ಸುತ್ತೆ. ಏನಂತ ಅಂದ್ರೆ ಈ ವಸ್ತು ಮತ್ತು ಪ್ರಕಾರಗಳಿವೆಯಲ್ಲ ಅದು ಬಹಳ ಮುಖ್ಯವಾದ ಕೊಲನ್ನ ಮಾಡಿವೆ. ಈಗ ಆದಿಪುರಾಣಕ್ಕೆ ಒಂದು ಆಕರಗ್ರಂಥವಿದೆ. ಪೂರ್ವಪುರಾಣವನ್ನು ಆಕರವಾಗಿ ಮಾಡಿ ಕೊಳ್ಳೊದು ಮತ್ತು ಆ ಕಥನವೇ ಒಂದು ಹೀರೋ ಸೆಂಟ್ರಿಕ್ ಆದ ಕಥನ. ಅದರಲ್ಲಿ ಬೇರೆ ಮಜಲುಗಳಲ್ಲಿ ಬರುತ್ತವೆ. ಜೀವನದ ಭೋಗದ ಹಂತದಲ್ಲಿ ಹೆಣ್ಣು ಭೋಗವಾಗಿ ಬರೋದು ವೈರಾಗ್ಯವಾಗಿ ಬರೋದು. ಈ ತರಹ ಒಂದು ಫಾರಂ ಇದೆಯಲ್ಲ ಆದರೆ ಇದಕ್ಕೆ ಆ ತರಹದ ಈ ಫಾರಂ ಇಲ್ಲ. ಮುಖ್ಯವಾಗಿ ಧರ್ಮಾಮೃತ ಎನ್ನುವ Text ಅಲ್ಲಿ ವಸ್ತು ಮತ್ತು ಪ್ರಕಾರ ಸಂಬಂಧದ ಕಾರಣದಿಂದ ಈ ಸಂಗತಿಗಳು Miss ಆಗುತ್ತವೆ. ಏಕೆಂದರೆ ಇನ್ನು ವಿಸ್ತರಿಸಿ ಹೇಳಬೇಕೆಂದರೆ ಆ ಕಾಲದಲ್ಲಿ ಬರತಕ್ಕಂತ ಅನೇಕ ಬೇರೆ ಬೇರೆ ಕಥನಗಳು, ನಾನು ಗುಣಾಢ್ಯನ ಬೃಹತ್ಕಥಾ ಅಥವಾ ಸೋಮದೇವನ ಕಥಾ ಸರಿತ್ಸಾಗರ ಈ ಕತೆಗಳಲ್ಲೂ ಕೂಡ ನೀವು ಹೇಳಿದ ಭೋಗದ ಕಲ್ಪನೆಗಳಿಲ್ಲ. ಅದಕ್ಕೆ ಬಹಳ ಮುಖ್ಯ ಕಾರಣ ಅಂದರೆ ಫಾರಂನಲ್ಲೆ ಅವುಗಳನ್ನು ಕಂಡುಕೊಳ್ಳೋಕೆ ಆಗಲ್ಲ. ಅದು ಒಂದು ಕಾರಣವಾಗಿರಬಹುದು ಅಂತ ನನ್ಗೆ ಅನ್ಸುತ್ತೆ. ಏಕೆಂದರೆ Basicaly ಜೈನಧರ್ಮ ನಾಸ್ತಿಕತೆಯನ್ನು ಒಳಗೊಂಡ ಧರ್ಮ. ಜಿನನನ್ನು ಹೊರತುಪಡಿಸಿ ಬೇರೆ ದೇವರನ್ನು ನಂಬುವುದಿಲ್ಲ. ಆ ಕಾರಣದಿಂದ ಭೋಗದ ವಿಷಯವನ್ನು ಬಹಳ ಮುನ್ನೆಲೆಗೆ ತಂದಿದ್ದಾರೆ. ಆದರೆ ಯಾವ ಫಾರಂನಲ್ಲಿ ಭೋಗ ತರಬೇಕು ಯಾವ ಫಾರಂನಲ್ಲಿ ತರಬಾರದು ಅನ್ನೋ ವಿವೇಕ ಇರ್ತದೆ. ಆ ಫಾರಂಗೆ ಅನುಗುಣವಾಗಿ ಅದನ್ನು ನಿರ್ಧರಿಸುತ್ತಾ ಇರ್ತದೆ. ಆ ಕಾರಣದಿಂದ ನನ್ಗನ್ನಿಸೋದು ಫಾರಂನ ವಸ್ತು ಮತ್ತು ಈ ಪ್ರಕಾರದ ಕಾರಣದಿಂದ ಧರ್ಮಾಮೃತದಲ್ಲಿ ನಾವು ಕೇಳ್ತಾ ಇರತಕ್ಕಂತ ಒಂದು ಕಥನ ಬಂದಿರಲಿಕ್ಕೆ ಸಾಧ್ಯವಿದೆ ಅಂತ ನನ್ಗೆ ಅನ್ನಿಸುತ್ತೆ.

ಲಲಿತಾಂಬ

ನಯಸೇನನ ಕಾಲದ ಚಾರಿತ್ರಿಕ ವಿಚಾರಗಳನ್ನು ಕುರಿತಂತೆ ಒಂದು ಪ್ರಬಂಧ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಸಾರ್ ಹೇಳಿದ್ರು ಮತ್ತು ನಯಸೇನನ ಆ ಕಾಲದ ಚಾರಿತ್ರಿಕ ಬದಲಾ ವಣೆಗಳು, ಮೌಲ್ಯಗಳು ಇತ್ಯಾದಿಗಳನ್ನು ಅವನು ಹೇಗೆ ಪ್ರತಿಪಾದಿಸುತ್ತ ಇತ್ಯಾದಿಗಳನ್ನು ಬದಿಗಿಡೊ ಪ್ರಶ್ನೆ ಬಂದಿದ್ದರ ಆ ಹಿನ್ನೆಲೆಯಲ್ಲಿ ನಾವು ನಯಸೇನನ ಕಾಲಕ್ಕೆ ಯಾವ ರೀತಿಯ ಒಂದು ಬೆಳವಣಿಗೆಯಾಗಿತ್ತು. ಅನ್ನೋದನ್ನು ಗಮನಿಸಿದಾಗ ಶಾಸನಗಳು ನಮಗೆ ಅಪಾರವಾದ ಸಹಾಯ ಮಾಡುತ್ತವೆ. ಸುಮಾರು ೮ನೇ ಶತಮಾನದಿಂದ ೧೦ನೇ ಶತಮಾನದವರೆಗೆ ವಿಶೇಷ ವಾದಂತಹ ಕೃಷಿ ಚಟುವಟಿಕೆಗಳು, ಕೃಷಿ ಭೂಮಿಯ ವಿಸ್ತರಣೆ. ಕೆರೆ, ಕಾಲುವೆ, ಕಟ್ಟಿಸುವಂತಹ ಇತ್ಯಾದಿಗಳು ವಿಶೇಷವಾಗಿ ಉತ್ಪಾದಕ ವರ್ಗವೊಂದು ಬೆಳೀತಕ್ಕಂತದ್ದನ್ನು ಮತ್ತು ಈ ಮದ್ಯವರ್ತಿಗಳಾಗಿರುವಂತಹ ಒಂದು ವ್ಯಾಪಾರಿ ವರ್ಗ, ವ್ಯಾಪಾರಿ ಸಂಘ ಇತ್ಯಾದಿಗಳ ಬಾಹುಳ್ಯ ಮತ್ತು ಅವುಗಳ ವರ್ಚಸ್ಸು ಹೆಚ್ಚಿದಂತಹ ಒಂದು ಕಾಲ. ಜೊತೆಗೆ ಅಗ್ರಹಾರಗಳ ನಿರ್ಮಾಣ ಮತ್ತೆ ದಾನ ಇತ್ಯಾದಿಗಳು ಹೆಚ್ಚಾದಂತಹ ಕಾಲದಲ್ಲಿ ಒಂದು ಹೊಸದಾದಂತಹ ಆಗ ಸೃಷ್ಟಿಯಾದಂತಹ ಈ ಸಮುದಾಯ ಏನಿದೆ, ಹೆಚ್ಚು ಭೋಗ ವಸ್ತುಗಳ ಕಡೆಗಿನ ಆ ಒಂದು ಬೇಡಿಕೆ ಕೂಡಾ ಹೆಚ್ಚಿದಂತಹ ಕಾಲ ಆದಾಗಿತ್ತು. ಯಾವ ಶಾಸನವನ್ನು ತೆಗೆದು ಕೊಂಡರೂ ಕೂಡ ಅಲ್ಲೆಲ್ಲ ಸಂಪತ್ತು ಆ ಚಟುವಟಿಕೆಗಳು  ಸಂಪತ್ತನ್ನು ಕಾಪಾಡಿಕೊಳ್ಳೊದ ಕ್ಕೊದಿಕ್ಕೋಸ್ಕರವಾಗಿ, ಕಳ್ಳಕಾಕರಿಂದ ಅದನ್ನು ಉಳಿಸಿಕೊಳ್ಳುವುದಕ್ಕೊಸ್ಕರವಾಗಿ ಆ ಹೈಡ್ ಆದಂತಹ ಬೇರೆಯವರು ಅದನ್ನು ಅದಕ್ಕೆ ರಕ್ಷಕ ಪಡೆಯನ್ನು ಕಾಪಾಡಿಕೊಳ್ಳತಕ್ಕಂತ ಈ ತರಹದ ಒಂದು ಬೆಳವಣಿಗೆ ವಿಶೇಷವಾಗಿ ಈ ಹತ್ತು ಮತ್ತು ೧೧ನೇ ಶತಮಾನದಲ್ಲಿ ಕಾಣಿಸಿಕೊಳ್ಳುತ್ತದೆ. ಮತ್ತು ಹೆಚ್ಚು ಯಾಕೆ ಕಳ್ಳರ ಬಗೆಗೆ ನಯಸೇನ ಹೇಳ್ತಾನೆ ಅನ್ನೋವಾಗ, ಆ ಕಾಲದ ಶಾಸನಗಳನ್ನು ಗಮನಿಸಿದರೆ ಈ ರೀತಿಯ ವ್ಯಾಪಾರಿ ಸರಕುಗಳನ್ನು ಕೊಂಡೊಯ್ಯ ತಕ್ಕಂತ ಗಾಡಿಗಳ ಮೇಲೆ, ವ್ಯಾಪಾರಿಗಳು ನೆಲೆನಿಂತ ಜಾಗದ ಮೇಲೆ ಕಳ್ಳರು ಅಟ್ಯಾಕ್ ಮಾಡುತ್ತಿದ್ದುದನ್ನು ಅಂತಹ ಸಂದರ್ಭದಲ್ಲಿ ಹೋರಾಡಿ ಮಡಿದಂತಹವರ ಬಗ್ಗೆ ವೀರಗಲ್ಲು ಶಾಸನಗಳು ಕೂಡ ನಮಗೆ ಸಂಪತ್ತು ಯಾವುದೊ ಒಂದು ಸಮುದಾಯದ ಕಡೆ ಹರಿತ ಇದದ್ದನ್ನು, ಆ ಸಮುದಾಯಗಳು ಹೆಚ್ಚು ಹಚ್ಚು ಸುಖಲೋಲುಪತೆ ಕಡೆ ಒಲಿದ್ದದ್ದನ್ನು, ಭೋಗವಸ್ತುಗಳ ಕಡೆಗೆ ಒಲೀತ ಇದ್ದುದನ್ನು ಇತ್ಯಾದಿಗಳನ್ನು ಹೇಳುತ್ತೆ. ಜೈನ ಧರ್ಮದ ಆ ಒಂದು ಕಟ್ಟುನಿಟ್ಟಾದಂತಹ ತತ್ವಗಳನ್ನು ಇಟ್ಟುಕೊಂಡು ಹೊರಟಂತಹ ಸಂದರ್ಭದಲ್ಲೂ ಕೂಡ ಜೈನ ಬಸದಿಗಳ ಒಳಗಡೆಗೆ ದೇವದಾಸಿ ಪದ್ಧತಿಗಳಾಗಿರಬಹುದು ಇಂತಹವೆಲ್ಲ ನಿಧಾನವಾಗಿ ಎಂಟ್ರಿ ಆಗುತ್ತಿದ್ದಂತಹ ಕಾಲ. ಹಾಗೇನೆ ತಾಂತ್ರಿಕವಾದಂತಹ ಕೆಲವು ವಿಚಾರಗಳು ಜನ ಸಾಮಾನ್ಯರನ್ನು ಆಕರ್ಷಿಸಲೋಸ್ಕರವಾಗಿ ಜಲಮಾಲಿನಿ ಇತ್ಯಾದಿಯಾದಂತಹ ಒಂದು ಹೊಸ ತಾಯತ ಕಟ್ಟುವುದಿರಬಹುದು, ತಂತ್ರ ಮಂತ್ರ ಮಾಡೋದಿರಬಹುದು ಇತ್ಯಾದಿಗಳೆಲ್ಲ ಬಸದಿಗಳೊಳಗೆ ನಿಧಾನವಾಗಿ ಎಂಟ್ರಿ ಆಗುತ್ತಿದ್ದ ಕಾಲ. ಈ ಎಲ್ಲ ಹಿನ್ನೆಲೆಯಲ್ಲಿ ಅವನಿಗೆ ಈ ವರ್ತಕವರ್ಗ ಅಥವಾ ಪ್ರಭುಗಳ ವರ್ಗ ಏನಿತ್ತು, ಆ ಎಲ್ಲ ವರ್ಗ ಕೂಡ ಹೆಚ್ಚು ಕೂಡಾಟಿಕೆಯದಾಗಿ ಅಥವಾ ಆಂಟಿಸೋಷಿಯಲ್ ಎಲಿಮೆಂಟಾಗಿ ವರ್ತಿಸುವುದಕ್ಕೆ ಕಾರಣ. ಈ ರೀತಿಯ ಒಂದು ಭೋಗದ ಅಥವಾ ಹೆಚ್ಚಾದ ಸಂಪತ್ತು ಒಂದು ಕಡೆಗೆ ಕ್ರೋಡೀಕೃತ ವಾಗಿರುವಂತದ್ದು, ಇವತ್ತು ಕೂಡ ಹೆಚ್ಚು ಹೆಚ್ಚು ಸಣ್ಣವಯಸ್ಸಿನಲ್ಲೂ ಆಧಿಕಾರದ ಕಾರಣದಿಂದಲೊ, ಮತ್ತಿನ್ಯಾವ ಕಾರಣದಿಂದಲೊ ಹೆಚ್ಚು ಸಂಪತ್ತು ಒಂದು ಕಡೆ ಕ್ರೋಡೀಕೃತ ವಾದ ತಕ್ಷಣ ಬೇಡಿಕೆಗಳಂತದ್ದು ಹೆಚ್ಚಾಗುವುದು ಮತ್ತು ಹೇಗೆ ಅದನ್ನು ಬಳಸಬೇಕು ಅನ್ನೋದು ಕಡೆಗೆ ಬೇರೆ ಬೇರೆದಾರಿಗಳನ್ನು ಹುಡುಕಿಕೊಳ್ಳುವುದು ಇತ್ಯಾದಿಗಳನ್ನು ಗಮನಿಸಿತ್ತೇವೆ. So ಹೀಗಾಗಿ ನಯಸೇನ ಏನು ಹೇಳೋದಿಕ್ಕೆ ಪ್ರಯತ್ನ ಮಾಡ್ತಾನೆ ಅಂದ್ರೆ ತನ್ನ ಧರ್ಮದ ಒಳಗೆ ಆಗ್ತಾ ಇರುವಂತ ಆ ಒಳ ಮುಖಾಮುಖಿ ಏನಿತ್ತು ಅಲ್ಲೇ ಆಗುತ್ತಿದ್ದ ಪತನ ಮತ್ತು ಹೆಚ್ಚಾಗಿ ಜೈನಧರ್ಮದಲ್ಲಿ ಇದ್ದಂತಹ ಈ ವರ್ತಕರು ಮತ್ತು ವರ್ತಕ ಸಂಘಗಳು ಅವರಲ್ಲೇ ಆಗುತ್ತಿದ್ದಂತಹ ಒಂದು ಬದಲಾವಣೆ ಇತ್ಯಾದಿಗಳನ್ನು ಕೂಡ ದಾಖಲಿ ಸಿದ್ದಾನೆ ಅಂತ ನನ್ಗೆ ಅನ್ನಿಸುತ್ತೆ. ವರ್ತಕರು ದಾನ ಮಾಡಿದ್ದನ್ನು ದೊಡ್ಡಧ್ವನಿಯಲ್ಲಿ ನಮ್ಮ ಶಾಸನಗಳು ಹೇಳುತ್ತವೆ. ಆದರೆ ಹಾಗೇನೆ ಅವರು ಹಣವನ್ನು ಸಂಪತ್ತನ್ನು ಕ್ರೋಡೀಕರಿಸು ವುದಕ್ಕೆ ಅವರು ಅಲ್ಲಿನ ಉತ್ಪಾದಕ ವರ್ಗಗಳನ್ನು ಹ್ಯಾಗೆ ಬಳಸಿಕೊಳ್ತಾಯಿದ್ದರು ಅನ್ನೋದರ ಕಡೆಗೆ ಅವುಗಳು ಹೆಚ್ಚಾಗಿ ಹೇಳಲ್ಲ. ಸಾರ್ ಅವರು ಹೇಳ್ತಾಯಿದ್ದರು ಶ್ರಮಿಕವರ್ಗವನ್ನು ಇಲ್ಲಿ ಹೆಚ್ಚು ಉಪೇಕ್ಷಿಸಲಾಗಿದೆ ಇತ್ಯಾದಿ ಮಾತುಗಳನ್ನು. ಶ್ರಮಿಕ ವರ್ಗ, ದುಡಿಯುವವರ್ಗ, ಇತ್ಯಾದಿ ವರ್ಗಗಳು ನಯಸೇನನ ಗಮನವನ್ನು ವಿಶೇಷವಾಗಿ ಸೆಳೆಯಲಿಲ್ಲ ಅದನ್ನು ಬಿಡಲಾ ಗಿದೆ ಅಂತೇಳಿ, ಅದಕ್ಕೆ ಕಾರಣ ಯಾಕೆಂದರೆ ಹೊಸದಾಗಿ ಈ ೧೦ – ೧೧ನೇ ಶತಮಾನದಲ್ಲಿ ಸೃಷ್ಟಿಗೊಂಡಂತಹ ಹೊಸ ಸಮುದಾಯ ಅದು ಪ್ರಭುತ್ವದಿಂದ ಒಂದು ರೀತಿಯ ಪ್ರೊಟೆಕ್ಷನ್‌ನ್ನು ಪಡೀತಾಯಿತ್ತು. ಮತ್ತೆ ಈ ಪ್ರಭುವರ್ಗವನ್ನು ಓಲೈಸುವ ಎಲ್ಲಾ ಜಾಣತನಗಳು ಕೂಡ ಅದು ಅಗ್ರಹಾರದವರದಾಗಿರಬಹುದು ಅಥವಾ ಈ ವ್ಯಾಪಾರಿ ವಲಯದವರದಾಗಿರಬಹುದು ಇವೆಲ್ಲವೂ ಸೇರಿಕೊಂಡು ಪ್ರಭುತ್ವ ಅಂದರೆ Power ಶಕ್ತಿ ಈ ಹಣ ಸೇರಿಕೊಂಡಂತಹ ಸಮಾಜ ಹೇಗಿತ್ತು ಅನ್ನೋದನ್ನ ಕೂಡ ಇಲ್ಲಿ ನಯಸೇನ ಚಿತ್ರಣ ಮಾಡ್ತಾನೆ ಅಂತ ಹೇಳೋದಿಕ್ಕೆ ಇಷ್ಟಪಡ್ತಿನಿ. So ಹಾಗಾಗಿ ನಯಸೇನನ ಕಾಲ ಅವನ ಕೃತಿಯನ್ನು ಅರ್ಥಮಾಡಿಕೊಳ್ಳೋದಿಕ್ಕೆ, ಅವನ ಕಾಲ ಹೇಗಿತ್ತು ಅನ್ನೋದಕ್ಕೆ ಚಾರಿತ್ರಿಕವಾದಂತಹ ದಾಖಲೆಗಳು ಕೂಡ ಸಹಾಯ ಮಾಡುತ್ತವೆ ಅಂತ ಹೇಳೋದಕ್ಕೆ ಇಷ್ಟಪಡ್ತೀನಿ.

ರಹಮತ್ ತರೀಕೆರೆ

ಚುಟುಕಾಗಿ ಪ್ರತಿಕ್ರಿಯೆ ಮಾಡ್ಲಿಕ್ಕೆ ಬಯಸ್ತಿದ್ದೀನಿ. ಅಂದರೆ ಈಗ ಮೇಡಂ ಮಾತಾಡಿದ್ದಕ್ಕೂ ಮತ್ತು ಬೆಳಗಿನ ಅನೇಕ ಸಲ ನಯಸೇನನ ಕಾಲಘಟ್ಟದ ಚರಿತ್ರೆ ಯಾವುದು? ಅದು ಈ ಕೃತಿಯಲ್ಲಿ ಹ್ಯಾಗೆ ಬಿಂಬಿತವಾಗಿರಬಹುದು? ಎಂಬ ಅಂತರ್‌ಸಂಬಂಧಗಳ ಪ್ರಶ್ನೆ ಮತ್ತೆ ಮತ್ತೆ ಬರ್ತ್ತಾಯಿದೆ. ಅದನ್ನು ಹೀಗೆ ನೋಡಬಹುದೇ ಅಂತ ನನ್ಗೆ ಅನ್ನಿಸುತ್ತೆ. ಅಂದ್ರೆ ಚಿದಾನಂದಮೂರ್ತಿ ಈ ತರಹದ ಪ್ರಯತ್ನ ಮಾಡಿದ್ದಾರೆ. ಪಂಪನ ಕಾವ್ಯದಲ್ಲಿ ವೀರ ಮತ್ತು ತ್ಯಾಗಗಳು ದೊಡ್ಡ ಮೌಲ್ಯಗಳಾಗಿ ವಿಜೃಂಬಿಸಲಿಕ್ಕೆ ಒಂದು ಚಾರಿತ್ರಿಕ ಹಿನ್ನೆಲೆಯನ್ನು ಶಾಸನಗಳ ಅಧ್ಯಯನದಿಂದ ರೂಪಿಸಿ ಇದು ಅಧಿಕೃತ ಚರಿತ್ರೆ ಶಾಸನಗಳಲ್ಲಿ ಸಿಕ್ಕೋದು, ಪಂಪನಲ್ಲಿ ಬಿಂಬಿತವಾಗಿರೋದು ಈ ಅಧಿಕೃತ ಚರಿತ್ರೆಯ ಬಿಂಬ ಎಂಬಂತೆ ಚಿತ್ರಿಸುತ್ತಾರೆ. ಈ ಮೆಥಡಾಲಜಿಯ ಬಗ್ಗೆ ನನಗೆ ಒಂದು ಸ್ವಲ್ಪ ಅನುಮಾನಯಿದೆ. ಅದೇನೆಂದರೆ ಈ ಕಥನಗಳು ಕರ್ನಾಟಕದ ಚಾರಿತ್ರಿಕ ವಿದ್ಯಮಾನಗಳ ಒಂದು ಪ್ರತಿಬಿಂಬ ಅಂತ ಯಾಕೆ ತಿಳ್ಕೋಬೇಕು ನಾವು. ಮೊದಲನೇ ಕತೆ ಜಿಯಾಗ್ರಾಫಿಕಲಿ  ಇಟ್ಸ್ ಸ್ಟಾರ್ಟ್ ಸೌರಾಷ್ಟ್ರ, ಗುಜರಾತ್ ತೆಂಕಣದಿಂದ ಬಂದ ಬ್ರಾಹ್ಮಣನೊಬ್ಬ ಕಾಶಿಗೆ ಹೋಗಲಿಕ್ಕೆ ಸೌರಾಷ್ಟ್ರದ ಒಂದು ವ್ಯಾಪಾರಿ ಮೇಳದ ಜೊತೆಗೆ ಸೇರಿಕೊಳ್ಳುತ್ತಾನೆ. ಈ ಎಲ್ಲಾ ವಡ್ಡಾರಾಧನೆ ಮತ್ತು ನಯಸೇನನ ಕತೆಗಳಿಗೆ ಮೂಲಮಾತೃಕೆಗಳಾಗಿ ಒಂದು ಕಾಫಸ್ ಆಫ್ ಲಿಟೆರೇಚರ್ ಆಗಿ ಇನ್ಯಾವುದೊ ಅಖಿಲ ಭಾರತ ಮಟ್ಟದ ಕಥನಗಳು ಅಲ್ಲಿಂದ ತಗೊಂಡಿರಬಹುದು ಹಾಗಂತ ಹೇಳಿ ಅಖಿಲ ಭಾರತ ಕಥಾನಕ ಮಟ್ಟುಗಳೇ ಅಲ್ಲ. ತಲ್ಲಣಗಳನ್ನು ಅವನತಿಯ ನೋವನಷ್ಟೇ ಅಲ್ಲದೆ, ಒಂದು ಕಲಾಕೃತಿ ಏನೆಲ್ಲಾ ಸಂಕೀರ್ಣವಾದ ಆಯಾಮಗಳನ್ನು ಒಳಗೊಳ್ಳುತ್ತೆ ಅನ್ನುವುದು. ನಿಜವಾಗಲೂ ಅದು ನಮಗಿನ್ನು ದೊಡ್ಡ ಸವಾಲಾಗಿದೆ. ಅದು ನನ್ನ ಪ್ರತಿಬಿಂಬ ಅಂತು ಆಗಿರುವುದಿಲ್ಲ. ಹೊರಗಡೆಯಿಂದ ತಗೊಂಡರೆ ಅದು ಅಖಿಲ ಭಾರತ ಚೌಕಟ್ಟಿನಲ್ಲೂ ಇರಲ್ಲ. ಒಬ್ಬ ಲೇಖಕ, ಒಬ್ಬ ತುಂಬಾ ಕ್ರಿಯೇಟಿವ್ ಆದ ಲೇಖಕ ಕಡವಾಗಿ ತೆಗೆದುಕೊಳ್ಳುವ ಕಥಾನಕದ ಒಂದು ಚೌಕಟ್ಟಿಗೆ ತನ್ನ ವೈಯಕ್ತಿಕವಾದ, ತನ್ನ ಸಮುದಾಯದ, ತನ್ನ ಕಾಲದ ಚರಿತ್ರೆಯ ಮತ್ತು ತನ್ನ ಕಾಲದಲ್ಲಿ ಇನ್ನೂ ಸಂಭವಿಸದ ಅನೇಕ ಆಶಯಗಳು, ಉಟೋಪಿಯನ್ ಆಶಯಗಳನ್ನು ಕೂಡ ಅವಾಹನೆ ಮಾಡುತ್ತಾಯಿ ರುತ್ತಾನೆ. ದೇವಿ ಪ್ರಸಾದ್ ಚಟ್ಟೋಪಾಧ್ಯಾಯ ಏನು ಹೇಳುತ್ತಾರೆಂದರೆ ವೇದಗಳಲ್ಲಿ ಒಟ್ಟಿಗೆ ತಿನ್ನೋಣ, ಒಟ್ಟಿಗೆ ಕುಡಿಯೋಣ, ಒಟ್ಟಿಗೆ ಶ್ರಮಮಾಡೋಣ ಅನ್ನುವ ಈ ಸಂಗತಿಗಳಿವೆ ಯಲ್ಲ ಅವು ಆ ಕಾಲದ ಸಾಮರಸ್ಯವನ್ನು ಹೇಳುವ ಋಕ್ಕುಗಳಲ್ಲ. ಅವು ಆ ಕಾಲದಲ್ಲಿ ಒಂದು ಸಂಘದ ಅಥವಾ ಸಾಮೂಹಿಕ ಜೀವನ ಪಥವಾಗುತ್ತಿದ್ದಾಗ ಹುಟ್ಟಿದಂತಹ ಬಹಳ ವಿಷಾದದ ಉದ್ಗಾರಗಳು. So ಅನೇಕ ಸಲ ಸಾಹಿತ್ಯ ಕೃತಿಗಳು ತಮ್ಮ ಕಾಲದಲ್ಲಿ ಯಾವುದು ಇಲ್ಲವೊ, ಅವನ್ನ ಅವಾಹನೆ ಮಾಡ್ತಾಯಿರುತ್ತವೆ. ಇರುವುದನ್ನು ಪ್ರತಿಬಿಂಬಿಸುತ್ತಾ ಇರುತ್ತವೆ. ತಾವು ಕಡ ಪಡೆದುಕೊಂಡ ಯಾವ ಮೂಲ ಕಥಾನಕಗಳ ರೂಪವನ್ನು ಹಾಗೇ ಇಟ್ಟುಕೊಂಡಿರುತ್ತವೆ. ಹೀಗಾಗಿ ಒಂದು ಚರಿತ್ರೆಯಲ್ಲಿ ಒಂದು ಸಾಹಿತ್ಯ ಕೃತಿ, ತುಂಬ ಬ್ರಿಲಿಯೆಂಟ್ ರೈಟ್ರಾಗಿದ್ದರೆ ಅನೇಕ ಮೂಲಗಳ ಆಯಾಮಗಳನ್ನು ತನ್ನ Centre ತಂದು ಅದೊಂದು ಬಾಯ್ಲಿಂಗ್ ಪಾರ್ಟ್‌ನಲ್ಲಿ ದ ಪೊಹೊಲ್‌ಮಿಕ್ಸ್ ಮಾಡಿರ್ತಾರೆ ಅನ್ಸುತ್ತೆ. ಅದರಿಂದ ಅದೊಂದು ಚರಿತ್ರೆಯ, ಆ ಕಾಲದ ಚರಿತ್ರೆಯ ನೇರಬಿಂಬವಾಗಿ ನೋಡುವುದು ಎಷ್ಟು ಸರಿ ಅಂತ ನನಗೆ ಯಾವಾಗಲೂ ಕಾಡ್ತಾಯಿರುತ್ತೆ.

ಆರ್.ವಿ. ಭಂಡಾರಿ

ತರೀಕೆರೆಯವರ ಮಾತಿಗೆ ಪೋಷಕವಾಗಿಲ್ಲದೆ ಇರಬಹುದು. ಒಂದು ಹೇಳಲಿಕ್ಕೆ ಇಚ್ಛೆಪಡುತ್ತೇನೆ. ವೇದದಲ್ಲಿ ಅದೇ ಇರಬೇಕು. ‘ಸಹನಾಭವತು ಸಹನಾ ಭುವಕ್ತು’ ಇದೇ ಅಲ್ಲವೇ ಸಾರ್ ನೀವು ನಾವೆಲ್ಲರು ಒಟ್ಟಿಗೆ ಊಟಮಾಡೋಣ ಅಂತ ಹೇಳಿದ್ದು. ಅಲ್ವಾ, ನೀವು ಅದ್ನೆ ಅಲ್ವಾ ಹೇಳಿದ್ದು, ಹಾಗೆ ತಮಾಷೆ ಅಂದ್ರೆ ಸಾಮಾಜಿಕವಲ್ಲ ಅದು ದ್ವಿತೀಯ ವಿಭಕ್ತಿಯೊಳಗೆ ಉಂಟು ಸಂಸ್ಕೃತದಲ್ಲಿ ಮೂರು ಇದೆಯಲ್ಲ ಏಕವಚನ, ದ್ವಿವಚನ, ಬಹುವಚನ ಇಲ್ಲಿ ಗುರುಶಿಷ್ಯರು ಕೂಡಿಕೊಂಡು ನಾವು ನಾವು ಒಟ್ಟಿಗೆ ಊಟಮಾಡೋಣ, ನಾವು ನಾವು ಒಟ್ಟಿಗೆ ಮಾಡಿದೆವು. ಆ ಯಾರು ಗುರು, ಯಾರು ಶಿಷ್ಯರಿರುತ್ತಿದ್ದರು. ಆ ವರ್ಗ ಅಥವಾ ಜಾತಿಯಿದೆಯಲ್ಲ ಅದರ ಹೊರಗಿನವರಿಗೂ ಅವರಿಗೂ ಸಂಬಂಧವಿರಲಿಲ್ಲ. So ಆದ್ದರಿಂದ ಇದು ನೀವು ಹೇಳಿದ ಹಾಗೆ ಇಲ್ಲಿ ನಯಸೇನನ ವಿಚಾರದಲ್ಲಿ ಹೇಳಿದಾಗ ಅವನು ನಿರ್ಮಾಣ ಮಾಡುವುದಿಲ್ಲ. ಅದು ಇರುತ್ತದೆ ಎಂದು ಹೇಳಲಿಕ್ಕೆ ಬರುವುದಿಲ್ಲ. ಅಲ್ಲಿದ್ದಂತಹ ವಾಸ್ತವಿಕತೆಯೇ ಅಲ್ಲಿ ಬಂದಿದೆ ಅಂತ ಹೇಳಲಿಕ್ಕೆ ಬರುವುದಿಲ್ಲ. ಆದರೆ ತನ್ನ ಯೋಚನೆಗೆ ಪುನರ್ ನಿರ್ಮಾಣವೂ ಮಾಡಿಕೊಂಡಿರಬಹುದು. ಆದರೆ ಇದೆಲ್ಲ ಇದೆಯಲ್ಲ ಅದು ಮಾತ್ರ ನೀವೇ ಹೇಳಿದ್ದರಿಂದ ಅದು ಬಹಳ ಮಂದಿ ಹಾಗೇ ತಿಳಿದುಕೊಳ್ಳುವರೇನೊ ಅಂತ ನನ್ನ ಅನಿಸಿಕೆ.

ಬಿ. ರಾಜಶೇಖರಪ್ಪ

ಈ ನಿಲುವುಗಳನ್ನೆಲ್ಲಾ ಒಟ್ಟಾರೆಯಾಗಿ ನಯಸೇನನ ತಲೆಯ ಮೇಲೆ ಹೊರಿಸುವುದು ಈ ವಿಚಾರಗಳನ್ನೆಲ್ಲಾ ನಾವು ಒಪ್ಪತಕ್ಕಂಥದ್ದು ಅಥವಾ ನಿರಾಕರಿಸವಂತದ್ದು. ಎರಡನ್ನು ಕೂಡ ನಾವು ನಯಸೇನನ ಮೇಲೆ ಹೊರಿಸುವುದು ಕಷ್ಟವಾಗುತ್ತದೆ. ಏಕೆಂದರೆ ಅವನಿಗೆ ಮೂಲವಾದ ಅಂತಹವು ಯಾವುವೊ ಇದ್ದಾವೆ ರತ್ನಾಕರಣ್ಯದ ಸಾವಾಪಚಾರ, ಇತ್ಯಾದಿಗಳೆಲ್ಲ ಇರುವುದರಿಂದ ಅಲ್ಲಿನ ಕತೆಗಳಲ್ಲಿರುವುದನ್ನೆ ಅವನು ಹೆಚ್ಚೇನು ಬದಲುಮಾಡದೆ ಹಾಗೇ ಸ್ವೀಕರಿಸಿರಬಹುದು. ಹಾಗಾಗಿ ನಾವು ನಯಸೇನನ ಮೇಲೆಯೇ ನೇರವಾಗಿ ಅದನ್ನು ಆಪಾದಿಸುವುದು ಅಥವಾ ಆರೋಪಿಸುವುದನ್ನ ಮಾಡಲಿಕ್ಕೆ ಆಗಲ್ಲ.

ಆರ್.ವಿ. ಭಂಡಾರಿ

ನಾನು ಈ ಅಭಿಪ್ರಾಯ ಭಿನ್ನತೆಯನ್ನು ಒಪ್ಪಿಕೊಳ್ಳುತ್ತೇನೆ. ಅದೇನೂ ಅಪಾಯ ಏನು ಇಲ್ಲ. ನನ್ನದು ಆದರೆ ಏನಾಗುತ್ತೆ ಅಂದರೆ ಒಂದು ಕೃತಿಯನ್ನು ನಯಸೇನನೇ ಅವನು ಸ್ವತಂತ್ರ ಅಲ್ಲದಿದ್ದರೂ ಸಹ ಅವನು ತನ್ನ ಕೌಶಲ್ಯವನ್ನು ಅದರಿಂದ ತೋರಿದ್ದಾನೆ ಮತ್ತು ಹೇಳಿಬಿಟ್ಟಿದ್ದಾನೆ. ಹಾಗೇ ತನ್ನ ವಿಸ್ತಾರದಿಂದ ಇದನ್ನು ಹೇಳುತ್ತೇನೆ ಅಂತ. ಆ ಸಂದರ್ಭದಲ್ಲಿ  ಅವನು ವಾಸ್ತವತೆಯ ಕಡೆಗೆ ಹೆಚ್ಚು ಒಲಿಯುತ್ತಾನೆ. ಆದರೆ ಅದೇ ಇರಬೇಕಂತಿಲ್ಲ ಈಗ ನಾವು ಹೇಳುತ್ತಿರಬಹುದು. ಹೌದಯ್ಯ ಅಚಲ ವೈರಾಗ್ಯದ ಕಡೆಗೆ, ಅಚಲ ಸಂಪತ್ತು ರಾಜರಾಜರ ಕಡೆಗೆ ವೈರಾಗ್ಯದ ಕಡೆಗೆ ಹೋಗುವುದಿಲ್ಲವಾ ಅಂತ ಹೇಳುತ್ತೇವೆ. ಅಂತಾ ಮಹಾಸಿದ್ದಿ ಕಲ್ಪವನ್ನು ಅಂತಾ ಸಾಮ್ರಾಜ್ಯ ಸುಖವನ್ನು ಅನುಭೋಗಿಸಿದವರು ಮತ್ತೆ ಯಾಕೆ ರಾಜರಾಗಿ ಹುಟ್ಟಬೇಕು. ಇದು ನಯಸೇನನಿಗೆ ಹಾಕಬೇಕಾದ ಪ್ರಶ್ನೆ ಅಲ್ಲ. ನಯಸೇನ ಅಲ್ಲಿ ಗುಪ್ತಕತೆಯನ್ನು ಹೇಳಿದ್ದಾನೆ. ಆದ್ದರಿಂದ ಈ ಜಿನಧರ್ಮ ಸಹ ಏನ್ಮಾಡುತ್ತೆ ಅಂದರೆ ಒಂದು ಕಡೆಯಿಂದ ವೈರಾಗ್ಯವನ್ನು ಹೇಳುತ್ತೆ ಇನ್ನೊಂದು ಕಡೆಯಿಂದ ನಿಜವಾದ ವಾಸ್ತವ ವೇನು ಅಂತ ನಯಸೇನ ಹೇಳುತ್ತಾನೆ. ಆದ್ದರಿಂದ ನಾವು ಯಾವ ನಿರ್ಣಯಕ್ಕೆ ಬರ್ತಾಯಿದಿವಿ. ಅದು ನಾನು ಅಧಿಕ ಪ್ರಸಂಗವಾಗಿ ಯಾವ ನಿರ್ಣಯಕ್ಕೆ ಬರ್ತಾಯಿದಿವೆ ಅಂದರೆ ಇದೆಲ್ಲ ಅಧಿಕಾರಸ್ಥರು. ಪ್ರಭುತ್ವವುಳ್ಳವರು ಹಾಕುವ ಭ್ರಮೆ. ಅವರಿಗೆ ಧರ್ಮ ಅನ್ನುವಂತದ್ದು ಅಧಿಕಾರವನ್ನು, ಸಂಪತ್ತನ್ನು ಪಡೆಯಲಿಕ್ಕೆ ಒಂದು ಮಾಧ್ಯಮವೇ ಹೊರತು, ಅವರಿಗೆ ನಿಜವಾಗಿ ಸ್ವರ್ಗದಲ್ಲಿ ಸುಖ ಸಿಗುತ್ತದೊ, ಅವರಿಗೆ ಇಲ್ಲದನ್ನು ಕಾಣುತ್ತಾ, ಈಗ ಕಳ್ಳ ಒಪ್ಪಿಕೊಳ್ಳದಿದ್ದರೆ ಏನು ಮಾಡಬೇಕಿತ್ತು ಅವನು, ಹೊಡ್ತ ತಿಂದು ಸಾಯಬೇಕಿತ್ತು. ಆದರೆ ನಾವು ಅದಕ್ಕೆ ಈ ಜನ್ಮದಲ್ಲಂತು ಅದು ಅವನಿಗೆ ಸಿಗುವುದಿಲ್ಲ. ಆ ವಸ್ತು ಬ್ರಾಹ್ಮಣನಿಗೂ ಸಿಗುವುದಿಲ್ಲ. ಹೀಗೆಲ್ಲ ಕಾರಣದಿಂದ ಅವರ ವಾಸ್ತವಿಕವಾದ ಪ್ರಪಂಚದಲ್ಲಿಯ ಮನಸು ನಿಷ್ಠ ಹಾಗಂತ ಶೆಟ್ಟಿಗೆ ಸಿಗುತ್ತದೆ, ರಾಜನಿಗೆ ಸಿಗುತ್ತದೆ. ಸಂಪತ್ತುಂಟು, ಅವರು ಸಂಪತ್ತನ್ನು ಉಪಯೋಗಿಸುತ್ತಾರೆ. ಆದರೆ ಇವರು ಮಾತು ಕರೆದುಕೊಂಡಿಹೋಗಿ ಅನುಭವಿಸಿ ಮತ್ತೆ ರಾಜನಾಗಿ ಹುಟ್ಟಿಬಂದಿರಬಹುದು. ಆದ್ದರಿಂದ ಸಾಂಸಾರಿಕವಾದಂತಹ ಲೌಕಿಕವಾದಂತಹ ಆಸೆ ಮತ್ತು ಅನಿವಾರ್ಯತೆ ಎಷ್ಟಿದೆ ಮತ್ತು ಅದೇ ಪ್ರಮುಖವಾದ ಸ್ಥಾನವನ್ನು ಪಡೆಯುತ್ತದೆ ಅಂತ ನನ್ನ ಅನಿಸಿಕೆ.

ಲಕ್ಷ್ಮೀನಾರಾಯಣ

ಧರ್ಮಾಮೃತವನ್ನು ನಾವು ಓದುವಾಗ ನಮಗೆ ಎದುರಾದಂತಹ ವೈರುಧ್ಯಗಳನ್ನು ವಿರೋಧಾಭಾಸಗಳನ್ನು ನಾವು ಯಾವ ನೆಲೆಯಲ್ಲಿ ನಿಂತು ಬಗೆಹರಿಸಲಿಕ್ಕೆ ಪ್ರಯತ್ನ ಪಡುತ್ತೇವೆ. ಆ ಬಗೆಹರಿಸಲಿಕ್ಕೆ ನಾವು ಪ್ರಯತ್ನಪಡುವ ನೆಲೆಯನ್ನು ಗುರುತಿಸಿಕೊಂಡಾಗ ನಮ್ಮ ಬಹಳಷ್ಟು ತೊಂದರೆಗಳು ಅರ್ಥವಾಗುತ್ತವೆ ಅಂತ ನನ್ನ ಭಾವನೆ. ಇದನ್ನು ವಿಶ್ಲೇಷಿ ಸುವುದಾದರೆ ಇಲ್ಲಿ ವಿರೋದಾಭ್ಯಾಸಾವಿದೆ ಅಂದಾಗ ಇದರಿಂದ ನಯಸೇನನನ್ನು ಪಾರು ಮಾಡಬೇಕೆ, ಬೇಡವೆ ಅನ್ನುವ ಪ್ರಶ್ನೆ ಬರುತ್ತದೆ. ಈ ವಿರೋಧಾಭಾಸ ನಯಸೇನನೇ ಆಗಿರಬಹುದು. ಆದರೆ ಇದನ್ನು ಅವನು ಜೈನಧರ್ಮದ ನೆಲೆಯಿಂದ ಮುಖ್ಯವಾಗಿ ಪರಿಗಣಿ ಸದೇ ಇರಬಹುದು ಅಥವಾ ಪಕ್ಕಕ್ಕಿಡಬಹುದು. ಆದರೆ ನಾವು ನಯಸೇನನ್ನು ಸೇರಿಸಿಕೊಂಡು ಈ ಪ್ರಶ್ನೆಗಳನ್ನು ಎತ್ತುವುದರಿಂದ ಸ್ವಲ್ಪ ನಯಸೇನನಿಗೆ ಅದು ಅಂಟಿಕೊಳ್ಳಬಹುದು. ಅಂಟಿಕೊಳ್ಳಲಿ, ಅಂಟಿಕೊಳ್ಳದೇ ಇರಲಿ ಅದು  ಮುಖ್ಯವಲ್ಲ. ನಮ್ಮ ನೆಲೆ ನಾವು ಎಲ್ಲಿ ನಿಂತು ಈ ವಿರೋಧಗಳನ್ನು ನೋಡ್ತೀವಿ ಅನ್ನೋದು ಮುಖ್ಯ. ಇಲ್ಲಿ ಒಂದು ಉದಾಹರಣೆ ಕೊಟ್ಟು ಹೇಳ್ತೀನಿ. ಅನಂತಮತಿ ಅನ್ನೋ ಒಂದು ಹುಡುಗಿ ಮದುವೆ ಆಟ ಆಡುತ್ತಿದ್ದಾಗ ತಮಾಷೆಗೆ ಅಂತ ಜೈನಮುನಿಗಳು ನೀನು ಬ್ರಹ್ಮಚಾರಿಣಿ, ಬ್ರಹ್ಮಚರ್ಯನ ಆಗಿಬಿಡು ಅಂತ ಹೇಳಿದ್ರು. ಆಕೆ ಅದನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ ಅಂದರೆ, ನನಗೆ ಅದನ್ನು ಓದ್ತಾಯಿದ್ದಾಗ ಅಮೇಲೆ ಬಂದಂತಹ ಅಕ್ಕಮಹಾದೇವಿ ನೆನಪಾಗುತ್ತಾಳೆ. ಬ್ರಹ್ಮಚರ್ಯದ ಬಗ್ಗೆ ಆಕೆಯ ನಿಷ್ಠೆಯಿದೆಯಲ್ಲ, ಅದು ಪಡಬಾರದ ಕಷ್ಟು ಪಟ್ಟು ಆ ನಿಷ್ಠೆಯನ್ನು ನಾವು ಬಹುಶಃ ಸರಿಯಾದ ನೆಲೆಯಲ್ಲಿ ಅರ್ಥ ಮಾಡ್ಕೋಬೇಕಾಗುತ್ತೆ. ಅಕ್ಕಮಹಾದೇವಿ ಚೆನ್ನಮಲ್ಲಿ ಕಾರ್ಜುನನ ಬಗ್ಗೆ ಆಕೆ ಇಟ್ಟಂತಹ ನಿಷ್ಠೆಯನ್ನು ಬೇರೆ ಎಲ್ಲೂ ನಾವು ಪ್ರಶ್ನೆ ಮಾಡೋದಕ್ಕೆ ಹೋಗುವುದಿಲ್ಲ. ವಚನ ಸಾಹಿತ್ಯದ ನೆಲೆಯಲ್ಲಿ, ವಚನ ಸಾಹಿತ್ಯದ ಸಂದರ್ಭದಲ್ಲಿ ಅಕ್ಕ ಮಹಾದೇವಿ ನಿಷ್ಠೆಯನ್ನು ಪ್ರಶ್ನೆ ಮಾಡಲಿಕ್ಕೆ ಹೋಗಲ್ಲ. ಅದರ ಬದಲಿಗೆ ಆ ಸಂದರ್ಭದಲ್ಲಿ ಅವರ ಒದ್ದಾಟದಲ್ಲಿ ಅವರ ಆ ಕಷ್ಟದಲ್ಲಿ ಅವರು ಜೀವನಾನ ಎದುರಿಸುವಂತಹ ರೀತಿಯಲ್ಲಿ ಹುಟ್ಟುವಂತಹ ಎಷ್ಟೋ ವೈರುಧ್ಯಗಳನ್ನು ನಾವು ಸಾಮಾಜಿಕವಾಗಿ, ಸಾಮಾಜಿಕ ನೆಲೆಯಲ್ಲಿ ಅರ್ಥ ಮಾಡಿಕೊಳ್ಳೋದಿಕ್ಕೆ ಪ್ರಯತ್ನ ಪಡ್ತೀವಿ. ಈ ಅನಂತಮತಿ ಕತೆಯಲ್ಲಿರುವಂತಹ ಇನ್ನೊಂದು ಮುಖದ ವಿಷಯವನ್ನು ತಾವು ದಯಮಾಡಿ ಗಮನಿಸಬೇಕು. ಅವಳನ್ನು ವಿದ್ಯಾಧರ ಹಾರಿಸ್ಕೊಂಡು ಹೋಗ್ತಾನೆ. ನಂಗೆ ಅದು ಓದ್ತಾಯಿದ್ದರೆ, ದಾರಿಯಲ್ಲಿ ಮೋಟರ್ ಬೈಕಿನಲ್ಲಿ ಹೋಗ್ತಾಯಿದ್ದಂತೆ ಯಾವುದೊ ಒಬ್ಬ ಯುವಕ ಹೆಂಡತಿ ಜೊತೆ ಹೋಗ್ತಾಯಿದ್ದವನು ಇನ್ನೊಬ್ಬ ಸುಂದರವಾದ ಹುಡುಗಿಯನ್ನು ನೋಡಿ, ಇಲ್ಲೇ ಇರು ಬರ್ತೀನಿ, ಹೆಂಡಿತೀನ ಕರ್ಕೊಂಡು ಹೋಗಿ ವಾಪಸ್ಸು ಬಿಟ್ಟುಬಿಟ್ಟು ಬಂದು ಇವಳನ್ನು ಕರ್ಕೊಂಡು ಹೋಗುವಂತೆ ಆ ರೀತಿ ಕರ್ಕೊಂಡು ಹೋಗ್ತಾನೆ. ಆ ಕತೆಯಲ್ಲಿ ಉದ್ದಕ್ಕೂ, ಬೇರೆ ಕತೆಯಲ್ಲಿ  ಬರುವಂತದ್ದು ಏನೆಂದರೆ ತುಂಬಾ ಇಕ್ಕಟ್ಟಾಗಿ ಬಿಡುತ್ತೆ ಇನ್ನುಹಿಂಸೇ ನಾ ತಡೆಕೊಳ್ಳಲಿಕ್ಕೆ ಸಾಧ್ಯವಿಲ್ಲ. ಆ Way out ಇಲ್ಲ ಅಂದ ತಕ್ಷಣ ಈ ಟ್ಯೂಸೆಕ್ಸಂ ಮಿಷನ್ ಹಾಕ್ತೀವಲ್ಲ ಹಾಗೆ ಕಾಪಾಡೋದಕ್ಕೆ ಯಾರು ಇಲ್ಲ. ಆಗ ಆ ಊರಿನ ದೇವತೆಗಳ ಆಸನ ಕಂಪನಿ ಆಗುತ್ತೆ. ಇದು ಪದೇ ಪದೇ ಬರುತ್ತೆ. ನಿಜಕ್ಕೂ ಅದು ಆಕೆ ಸಾಯಬೇಕು ಅಥವಾ ಇವನು ಗೆಲ್ಲೋದಿಕ್ಕೆ ಬೇರೆ ದಾರಿಯಿಲ್ಲ. ಆಕೆ ಕಷ್ಟ ಬೇರೆ ತರಹ ಬಗೆಹರೀಲಿಕ್ಕೆ ಸಾಧ್ಯವಿಲ್ಲ. ಆಕೆ ಸಾಯಬೇಕು ಅಷ್ಟನೇ, ಆ ಸಾಯಬೇಕು ಅನ್ನೋ ಅಂಶ ಬಂದ ತಕ್ಷಣ ಆಸನ ಕಂಪದ ಪ್ರಶ್ನೆ ಬರುತ್ತೆ. ಆಸನ ಕಂಪದಿಂದಾಗಿ ಅವಳು ಬಚಾವಾಗುತ್ತಾಳೆ. ಇಂತಹವು ತುಂಬಾ ಸಲ ಬರುತ್ತವೆ. ಆ ಆಸನ ಕಂಪ ಆಗಲಿಲ್ಲ ಅಂದರೆ ಆ ಊರಿನ ದೇವತೆಗಳಿಗೆ ಇವರ ಕಷ್ಟ ಬಗೆಹರಿಯಲಿಲ್ಲ. ಇದು ತುಂಬಾ ವೀಕ್ ಲಿಂಕ್ ಅಂತ ನಾವು ಏನು ಹೇಳ್ತೀವಿ ಒಂದು ಸರಪಳಿಯಲ್ಲಿ ನಾವು ಎಷ್ಟೋಸಲ ಗಮನಿಸದೆ ಹೋಗ್ತೀವಿ. ಕತೆಗಳಲ್ಲಿ ಇದಕ್ಕೆ ಅವಕಾಶಮಾಡಿ ಕೊಡುವುದರಿಂದ, ಕತೆಗಳಲ್ಲಿ ಇದನ್ನು ನಾವು ಪ್ರಶ್ನೆ ಮಾಡಿ ಒಪ್ಪಿಕೊಳ್ಳುವುದರಿಂದ ಅಂತದೊಡ್ಡ ಕಷ್ಟ ಅಂತ ಅನ್ನಿಸಲ್ಲ. ಎರಡನೆದು ಏನಂದರೆ ಈ ವಿದ್ಯಾಧರ ಅವನು ಖೇಚರ ಇವಳನ್ನು ವಾಪಸ್ಸು ಇದ್ದ ಜಾಗದಲ್ಲಿ ಬಿಟ್ಟುಬರಲ್ಲ. ಅಥವಾ ದೇವತೆಗಳು ಇದ್ದ ಜಾಗಕ್ಕೆ ಬಿಟ್ಟುಬರಲ್ಲ. ಎಲ್ಲೊ ಬಿಟ್ಟು ಬಿಟ್ಟು ಹೊರಟು ಹೋಗುತ್ತಾರೆ. ಈ ತರಹದ ವ್ಯತ್ಯಾಸಗಳನ್ನು ದಯವಿಟ್ಟು ಗಮನಿಸಬೇಕು. ಇನ್ನೊಂದು ಸಂದರ್ಭದಲ್ಲಿ ಆ ಪ್ರಯಾಣ ಹೊರಟಂತಹ ವ್ಯಕ್ತಿ ಈಕೆಯನ್ನು ನೋಡಿ ಮೋಹಗೊಳ್ಳದೇ ಇವಳು ಒಳ್ಳೇ ವ್ಯಕ್ತಿ ನಾನು ಬರುವತನಕ ಕಾಪಾಡು ಅಂತ ಹೇಳಿ ಹೆಂಡತಿಯ ವಶಕ್ಕೆ ಕೊಟ್ಟು ಹೋಗ್ತಾನೆ. ಆ ಹೆಂಡತಿ ಎರಡು ಕಾರಣಕ್ಕೆ ಇವಳನ್ನು ಕಾಪಾಡೋದು ಕಷ್ಟ. ಒಂದು ಸ್ಫುರದ್ರೂಪಿಯಿದ್ದಾಳೆ ಬೇರೆಯವರಿಂದ ಇವಳನ್ನು ಕಾಪಾ ಡೋದು ಕಷ್ಟ. ಜೊತೆಗೆ ತನಗಿಂತ ತುಂಬ ಸುಂದರವಾಗಿರೋದು. ಅವಳನ್ನು ನನಗೆ ಬಹಳ ಡಿಸ್ಟರ್ಬ್ ಮಾಡುವಂತ ಅಂಶ ಅಲ್ಲದಿದ್ದರೆ, ಮನೆಯಿಂದ ಆಚೆ ಅಟ್ಟಿಲ್ಲ. ಅವಳು ಒಬ್ಬನಿಗೆ ಮಾರುತ್ತಾಳೆ. ಆ ಮಾರುವ ಅಂಶಯಿದೆ ನೋಡಿ ಕುಂಟಣಿಗೆ ತೆಗೆದುಕೊಂಡು ಹೋಗಿ ಮಾರ್ತಾಳೆ. ನೀನು ಎಲ್ಲೋ ಹೋಗಮ್ಮ ಅಂತ ಬಿಟ್ಟುಬಿಡಲ್ಲ. ಅವಳು ಕುಂಟಣಿಗೆ ಬಹಳ ಪ್ರಯತ್ನ ಪಟ್ಟು ಇವಳನ್ನು ವೇಶ್ಯೆಯನ್ನಾಗಿಸಲಾರದೆ ಅವಳನ್ನು ತೆಗೆದುಕೊಂಡು ಹೋಗಿ ರಾಜನಿಗೆ ಒಪ್ಪಿಸುತ್ತಾಳೆ. ಈ ಸಂಬಂಧಗಳಿವೆಯಲ್ಲ, ಈ ಸಂಪತ್ತಾಗಲಿ ಅಥವಾ ಸೌಂದರ್ಯ ಪ್ರತಿನಿಧಿಸುವ ಒಂದು ಹೆಣ್ಣಾಗಲಿ ಒಂದು ಭೋಗವಸ್ತು ಅಂತ ಸಮಾನವಾಗಿ ನೋಡುತ್ತಾರೆ. ಅದನ್ನು ನಿರ್ವಹಿಸುವ ಬಗೆಯಿದೆಯಲ್ಲ ಇದಕ್ಕೆ ನಯಸೇನನ ಸಮ್ಮತಿ ಇದೆಯಾ, ಇಲ್ಲವೊ ಎಂಬುದು ಕೃತಿಯಿಂದಾಚೆ ನಿಂತುಕೊಂಡು ಕೇಳಬೇಕೇನೊ ಗೊತ್ತಿಲ್ಲ. ಆದರೆ ಈ ಜಿನಧರ್ಮ ವನ್ನು ಅನುಸರಿಸುವಂತಹ ನಯಸೇನನಿಗೆ ಇದು ಮುಖ್ಯ ಆಗೋದಿಲ್ಲ. ಅಲ್ಲಿ ಮುಖ್ಯ ಯಾವುದಾಗುತ್ತೆ ಅಂದರೆ ಇವಳು ಅದನ್ನೆಲ್ಲ ದಾಟಿಕೊಂಡು ಬಂದು ಹ್ಯಾಗೆ ಜೈನಧರ್ಮವನ್ನು ಒಪ್ಪಿಕೊಂಡಳು, ಜೈನಧರ್ಮವನ್ನು ಆಚರಿಸಿದಳು ಅನ್ನೋದು ಮುಖ್ಯವಾಗುತ್ತೆ. ನಾವು ಗಮನಿಸುವಾಗ ಈ ವಿರೋಧಗಳಿವೆಯಲ್ಲ. ಈ ಸಣ್ಣ ಸಣ್ಣದಾಗಿ ಕುಟ್ಟಣ್ಣ ಮಾರಪ್ಪ ಬಹಳ ಡಿಸ್ ಕೊಲಿಫಾಗಿದೆ. ಅವರೂ ಜೈನರೆ ಅವರು ಈ ತರಹದ ಧರ್ಮದ ಇದಕ್ಕೆ ಸಿಂಪಥಿ ಇಟ್ಟುಕೊಂಡಿರುವವರೆ, ಈ ಮಾರೋದು ಮತ್ತು ಕದಿಯೊದು ಉದಾಹರಣೆ ಸೂರ್ಪನ ಬಗ್ಗೆ ಒಂದು ವಿವರಣೆ ಬರುತ್ತೆ. ಇವನು ಕಳ್ಳರಲ್ಲೇ ವಿವೇಕಿ. ಆ ಕಳ್ಳತನ ಅನ್ನೋ ಸ್ಥಳವೇ ಯುದ್ಧ ಇದ್ದ ಹಾಗೇ ಒಪ್ಪಲಾಗದಂತಹದು ಅಥವಾ ಸಮಾಜದಲ್ಲಿ ಇರೋ ಮೌಲ್ಯಕ್ಕೆ ವಿರೋಧವಾದಂತಹದು. ಇವನು ಅದರಲ್ಲೇ ವಿವೇಕಿ. ಅವನು ಈ ಅರ್ಧರಾಜ್ಯ ಸಿಗುತ್ತೆ ಅನ್ನೋದಕ್ಕೋಸ್ಕರ ಕದ್ದುಕೊಂಡು ಬರೋಕೆ ಒಪ್ರೋಅಮೇಲೆ ಇಲ್ಲಿ ಬರೋವಂತ ಬೇರೆ ಕಳ್ಳರನ್ನ ಗಮನಿಸಿದರೆ ಹೊಟ್ಟೆಗೆ ಇಲ್ಲದಿರೋ ಕಳ್ಳರು ಬಹುಶಃ ಸಿಗೋದೇ ಇಲ್ಲೇನೊ, ಈ ಕಳ್ಳತನದಲ್ಲಿ ಅದೊಂದು ಮಾಡ್ತಾರೆ ಡಿಪ್ರವೇಷನ್ ತುಂಬ ಡಿಪ್ರವೆಗೆ ಒಳಗಾದಾಗ, ವಂಚನೆಗೆ ಒಳಗಾದಾಗ ಇದೊಂದು Way out ಅದು ನಿಮಗೆ ಬೇರೆ ಎಲ್ಲಾ ಸಾಹಿತ್ಯದಲ್ಲಿ ಬರುತ್ತೆ. ದೇವನೂರು ಮಹಾದೇವ ಅವರ ಎಲ್ಲ ಕತೆಗಳಲ್ಲಿ ಕಳ್ಳತನ ಒಂದು ಪರ್ಯಾಯ ವಾಗಿ ಇರೋವಂತ ಒಂದು ಸಂದರ್ಭ ಅಲ್ಲಿ ಬರುತ್ತೆ. ಪಡುಕೊಳ್ಳಲಿಕ್ಕೆ, ಜೀವಿಸಲಿಕ್ಕೆ ಏನಾದರೂ ತೊಗಳಲಿಕ್ಕೆ ಒಂದು ಪರ್ಯಾಯ ಮಾರ್ಗ. ಇಲ್ಲಿ ಆ ತರಹದ ಕಳ್ಳರು ಸಿಕ್ಕಲ್ಲ. ನಮಗೆ ಇಲ್ಲಿರೊ ಕಳ್ಳರ ಒಂದು ಸಂಪತ್ತಿನ ಹೈಯರ್ ಫಾರಮ್ಸ್ ಇದೆಯಲ್ಲ. ಅದು ಹೊಟ್ಟೆ ಅಲ್ಲ,  ಆಹಾರ ಅಲ್ಲ, ಆಹಾರಕ್ಕಿಂತ ಇನ್ನೂ ಆಚೆಗಿನ ಬಯಕೆಗಳೇನಿವೆ ಅದನ್ನು ಪೂರೈಸಿಕೊಳ್ಳಲಿಕ್ಕೆ ಕಳ್ಳರಾಗುತ್ತಾರೆ. ಇವು ಬಹುಶಃ ನಮ್ಮ ಗಮನಾನ ಜಾಸ್ತಿ ಬೇಡುತ್ತೆ ಅಂತ ಅನ್ಸುತ್ತೆ. ಆಮೇಲೆ ಆರ್.ವಿ. ಭಂಡಾರಿಯವರು ಮಾತಾಡುತ್ತಾ ಸ್ವಯಂಭು ಎಂಬ ಶಬ್ದವನ್ನು ಬಳಸಿದರು. ಈ ಲೋಕ ಗ್ರಹಿಕೆ ಸ್ವಯಂಭು ಅಲ್ಲ ಅಂತ ಹೇಳಿದರು. ನನ್ನ ಪ್ರಶ್ನೆ ಏನೆಂದರೆ ಆ ಸ್ವಯಂಭು ಕಲ್ಪನೆ ಎಷ್ಟು ಅಳವಾಗಿ ಸೇರಿಕೊಂಡಿದೆ ಎಂದರೆ ನಾವು ಪ್ರತ್ಯೇಕಿಸಿ ನೋಡುತ್ತೇವೆ. ನಮ್ಮ ವಿದ್ಯಾರ್ಥಿಗಳಲ್ಲಿ ನಾನು ಎಷ್ಟೋಸಲ ಇದನ್ನು ಪ್ರಶ್ನೆ ಮಾಡ್ತೀನಿ. ಇವನು ನಿಜವಾದಂತಹ ಜೋತಿಷಿ ಅಲ್ಲ. ಅಂದ್ರೆ ನಿಜವಾದಂತಹ ಜೋತಿಷಿ ಅಂದರೆ ಏನು? ಜೋತಿಷನೇ ಸುಳ್ಳು. ಅದರಲ್ಲಿ ನಿಜವಾದ ಜೋತಿಷಿ, ಸುಳ್ಳು ಜೋತಿಷಿ ಅಂತ ಇಬ್ಬರಿದ್ದಾರೆ. ಇಂತಹವು ಬೇಕಾದಷ್ಟು ಬರ್ತವೆ. ಇವರು ಆಕ್ರಮ ಮಧ್ಯ ಅಂತಾರೆ ಮಧ್ಯವೇ ಆಕ್ರಮ. ಅದರಲ್ಲಿ ಕ್ರಮಮಧ್ಯ, ಆಕ್ರಮ ಮಧ್ಯ ಯಾವುದಿದೆ. ಇವೆಲ್ಲ ನಮ್ಮ ತಲೆಯೊಳಗಡೆ ಹೋಗಿ ಸೇರಿಕೊಂಡು ಬಿಟ್ಟಿವೆ. ನಾವು ಇವುಗಳನ್ನೆಲ್ಲ ಬಗೆಹರಿಸಲಿಕ್ಕೆ ನೋಡ್ತೇವೆ. ಹಾಗಾಗಿ ಸಾಕಷ್ಟು ಕಷ್ಟ ಆಗುತ್ತೆ ಮತ್ತೆ ಅವು ಅಡ್ಡದಾರಿಗಳನ್ನು ಹಿಡಿಸುತ್ತವೆ ಅಂತ ನನ್ನ ಅಭಿಪ್ರಾಯ.

ಇನ್ನೊಂದು ಅಂಶ ಇದೆ. ಹಿಂಸೆ ವಿಷಯವಾಗಿ ನಾನು ಮಾತನಾಡುವಾಗ ಜೈನಧರ್ಮದಲ್ಲಿ ಇನ್ವರ್‌ಟೆಡ್ ಹಿಂಸೆ ಇದೆ ಎಂದು ಹೇಳಿದೆನಲ್ಲ ಈ ಹಿಂಸೆ ಒಬ್ಬ ವ್ಯಕ್ತಿಯಾಗಿ, ಒಬ್ಬ ಜೈನಧರ್ಮ ಅವಲಂಬಿ ತನಗೆ ತಾನೇ ಕೊಟ್ಟುಕೊಳ್ಳುತ್ತಾನೆ. ಆದರೆ ಬೇರೆಯವರಿಗೆ ಕೊಡು ವುದಕ್ಕೆ ಹೋಗುವುದಿಲ್ಲ ಎನ್ನುವುದು ಒಂದು ಸಾಧರಣವಾಗಿರುವ ಗ್ರಹಿಕೆ. ಆದರೆ ಒಬ್ಬ ರಾಜನ ಪರವಾಗಿ, ಒಬ್ಬ ಸೆಟ್ಟಿಯ ಪರವಾಗಿ, ತಳವಾರನನ್ನು ಹಿಂಸೆ ಮಾಡಬಹುದು. ತಳವಾರ ಹಿಂಸೆ ಮಾಡುವುದನ್ನು ಅವರು ತಪ್ಪು ಅಂತ ಏನು ಹೇಳಲ್ಲ. ಅಂದರೆ ರಾಜಧರ್ಮದ ಆಳ್ವಿಕೆ ಮತ್ತು ಅಧಿಕಾರವನ್ನು ಚಲಾಯಿಸುವ ಒಂದು ಚೌಕಟ್ಟು ಇದೆಯಲ್ಲ ಅದರಲ್ಲೇ ಹಿಂಸೆಯಿದೆ. ಅವರಲ್ಲಿ ಹಿಂಸೆ ಪರವಾಗಿಲ್ಲ. ಹಿಂಸೆ ಬೇಕಾದುದು ಅನ್ನುವ ತರಹದಲ್ಲಿದೆ. ರಾಜನಿಗೆ ವೈರಾಗ್ಯ ಬಂದಾಗ ತಂದೆ ಮಗನಿಗೆ ಅಧಿಕಾರವನ್ನು ಸ್ಥಾಪಿಸಿ ಹೋಗುವಾಗ ಅದರಲ್ಲಿ, ಒಬ್ಬ ಮಗ ಕೇಳುತ್ತಾನೆ. ನಿನಗೆ ಬೇಡದೆ ಇದ್ದುದನ್ನು ನೀನು ಯಾವುದು ಉತ್ಕೃಷ್ಟವಾದುದಲ್ಲ ಅಂತ ಹೇಳ್ತೀಯ ಯಾವುದು ಪ್ರಪಂಚದಲ್ಲಿ ನಿರರ್ಥಕವಾದದ್ದು ಅಂತ ಹೇಳುತ್ತೀಯ. ಅದನ್ನು ನನಗೆ ಯಾಕೆ ಕೊಡುತ್ತಿಯಾ ಎಂದು ಕೇಳುತ್ತಾನೆ. ಸಾಮಾನ್ಯ ವಾಗಿ ಗುರುಗಳು, ತಂದೆ – ತಾಯಿಗಳು ಮಕ್ಕಳಿಗೆ, ಶಿಷ್ಯರಿಗೆ ಅವರಲ್ಲಿರುವ Best ಅಲ್ಲ ಅನ್ನಿಸಿದ್ದನ್ನು ನನಗೆ ಕೋಡ್ತಾಯಿದ್ದೀಯಾ, ಅದಕ್ಕೆ ಒಂದು ಚೌಕಟ್ಟುಳೊಳಗಡೆ ನಯಸೇನ ನಿಗೆ ಅಥವಾ ನಮಗೆ, ನಿಮಗೆ ಇರುವಂತ ಇಕ್ಕಟ್ಟುಗಳು, ನಾವು ಒಂದು ಸಾಮಾಜಿಕ ಚೌಕಟ್ಟು ಒಂದು ರಾಜಕೀಯ ಚೌಕಟ್ಟುಗಳ ಒಳಗಡೆ ಎಲ್ಲಿ ತನಕ ಮಾತನಾಡುತ್ತೀವಿ ಅಲ್ಲಿತನಕ ಕೂಡ ಇದು ಇಕ್ಕಟ್ಟಿನ ಪ್ರಶ್ನೆಯಾಗುತ್ತೆ. ಈ ಇಕ್ಕಟ್ಟನ್ನು ಬಗೆಹರಿಸಲಿಕ್ಕೆ ಆ ಚೌಕಟ್ಟು, ಒಳಗಡೆ ಏನು ನಮಗೆ ಉಪಾಯ ಸಿಗುತ್ತೆ ಅಥವಾ ಅದಕ್ಕೆ ಆಧಾರ ಸಿಗುತ್ತೆ ಅದನ್ನು ನಾವು ಬಳಸಿಕೊಳ್ಳುತ್ತೇವೆ. ಆ ತಂದೆ ಕೂಡ ಅದನ್ನು ಬಳಸಿ ಇಲ್ಲಪ್ಪ ನೀನು ರಾಜ್ಯ ಆಳಿ ನಿನ್ನ ಮಗನಿಗೆ ಇದನ್ನು ಕೊಟ್ಟು ಹೋಗುವ ತನಕ ಇಲ್ಲಿರಬೇಕಾಗುತ್ತೆ. ಇದು ಯಾಕೆ ಸತ್ಯ ಆಗುತ್ತೆ ಅಂದರೆ ಚೌಕಟ್ಟನ್ನು ಮೀರುತ್ತಿಲ್ಲ. ಒಂದು ರಾಜ್ಯಾಂಗದ ಅಥವಾ ಅಧಿಕಾರದ ಒಂದು ಸಂಪತ್ತಿನ ಚೌಕಟ್ಟು ಏನು ಸಮಾಜದಲ್ಲಿದೆ. ಅದನ್ನು ಮೀರಲ್ಲ ಇದು ನಾವೇನು ನಯಸೇನ ಮೀರಬೇಕು ಅಂತ ಬಯಸಲ್ಲ. But ನಾವು ಗಮನಿಸದೆ ಹೋದರೆ ತಪ್ಪಾಗುತ್ತದೆ.

ರಾಜಪ್ಪ ದಳವಾಯಿ

ನೀವು ಹೇಳಿದ್ದು ಕೇವಲ ಮನುಷ್ಯರ ವರ್ತನೆಯನ್ನು. ಕೇವಲ ಮನುಷ್ಯರಷ್ಟರಲ್ಲೇ ಕಾಣದೆ ನಯಸೇನ, ಈಜುಗಾರ್ತಿಗಳ ಪ್ರಸಂಗದಲ್ಲೂ ಈಗ ನೀನಿಲ್ಲೆ ಇರು ನಾನು ಪ್ರಶಸ್ತ ಸ್ಥಳವನ್ನು ನೋಡಿಕೊಂಡು ಬರ್ತೀನಿ ಅಂತ ಹೋದಾಗ ಆ ಹೆಣ್ಣೇನೂ ಸುಮ್ಮನಿರುವುದಿಲ್ಲ. ಹಿಂದೆ ಒಂದು ಗುಪ್ತಚಾರಿಕೆಯನ್ನು ಕೂಡ ಕಳುಹಿಸುತ್ತಾಳೆ. ಅಂದರೆ ತನ್ನ ಗಂಡನ ಗೈರುನಲ್ಲಿ ಎಷ್ಟು ಯೋಗ್ಯವಾಗಿ ಇರಬಲ್ಲ ಅನ್ನುವುದನ್ನು ಪತ್ತೆದಾರಿಕೆಯ ಮೂಲಕ ತಿಳಿದು ಮತ್ತೊಂದು ಕ್ರಿಯಾಶೀಲತೆಗೆ ಅವಳು ಚೈತನ್ಯದಾಯಕಗಳಾಗಿದ್ದಾಳೆ. ಆದ್ದರಿಂದ ಗಂಡಷ್ಟೇ ಕ್ರಿಯಾಶೀಲನಾಗಿಲ್ಲ. ಇಡೀ ಕೃತಿಯಲ್ಲಿ ಹೆಣ್ಣು ಕ್ರಿಯಾಶೀಲಳಾಗಿದ್ದಾಳೆ. ಅದರ ಪ್ರಸಂಗವನ್ನು ಇನ್ನೊಂದು ಕಡೇನೂ ನೋಡಬಹುದು. ಅಂಜನ ಚೋರನ ಕತೆಯಲ್ಲಿ ಬರುವ ಗಿಳಿಗಳ ಪ್ರಸಂಗ, ಗೀಜಗಹಕ್ಕಿಗಳ ಪ್ರಸಂಗ ಇದೆಯಲ್ಲ ಅದು ಬಹುತೇಕ ಮನುಷ್ಯ ವರ್ತನೆಯ ಒಂದು ಅದ್ಭುತವಾದ ರೂಪ. So ಎಲ್ಲಿ ನೀನು ನನ್ನನ್ನು ಬಿಟ್ಟು ಹೋದರೆ ಇನ್ನೊಂದು ಗೀಜಗ ಹಕ್ಕಿಯ ಜೊತೆಯಲ್ಲಿ ಸಂಬಂಧವನ್ನು ಏರ್ಪಡಿಸಿಕೊಳ್ತೀಯ ಅಂತ ತುಂಬ ವಿರೋಧ ವನ್ನು ವ್ಯಕ್ತಪಡಿಸುವ ಪ್ರಸಂಗ ಬರುತ್ತದೆ. ಆದ್ದರಿಂದ ಮನುಷ್ಯನ ವರ್ತನೆಗಳನ್ನು ಬರೀ ಕಳ್ಳತನ ಮಾಡುತ್ತ ಇದ್ದಾನೆ ಅಥವಾ ಒಂದು ರೀತಿಯ ಕಳ್ಳತನವೇ ಅದು. ನೀನಿಲ್ಲಿರು ನಾನು ಬೇರೆ ಜಾಗವನ್ನು ನೋಡಿಕೊಂಡು ಬರ್ತೀನಿ, ಕಳ್ಳತನದ ಬೇರೆ ಬೇರೆ ಮುಖಗಳಲ್ಲಿ ಅದು ಕೂಡ ಒಂದು.

ಮೊಗಳ್ಳಿ ಗಣೇಶ್

ಜೈನ ಮತವನ್ನು ಅವಲಂಬಿಸುವ ಜೈನ ತತ್ವವನ್ನು ಅನುಸರಿಸುವ ಒಂದು ಗೃಹಸ್ಥಾ ಶ್ರಮವನ್ನು ಅನುಸರಿಸುವ ಜನ ಏನು ಇದ್ದಾರೊ ಅವರು ಪಾಲಿಸಬೇಕಾದ ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಅಪರಿಗ್ರಹ, ಆಸ್ಥೇಯ ಅನ್ನೋ ಐದು ತತ್ವಗಳನ್ನಿಟ್ಟುಕೊಂಡು ಎರಡನೇ ಭಾಗದಲ್ಲಿ ನಯಸೇನ ಇನ್ನೊಂದು ಲೌಕಿಕವಾದ ಲೋಕದ ಕೌಟುಂಬಿಕ ಚೌಕಟ್ಟಿನ ಒಳಗಡೆಯೇ ವಿಮುಕ್ತಿಗೆ ಬೇಕಾದ ಕಥನಗಳನ್ನು ಮಂಡಿಸುತ್ತಾನೆ. ಅದರ ಪೂರ್ವಭಾಗದಲ್ಲಿ ಅಖಂಡವಾಗಿ, ಇಡಿಯಾಗಿ ಸಾಮಾಜಿಕವಾಗಿ ಅದನ್ನು ನಿರೂಪಿಸುವ ಬೇರೆ ಬೇರೆ ಕತೆಯನ್ನು ಹೇಳುತ್ತಾನೆ. ಇಲ್ಲಿ ಬಹಳ ಮುಖ್ಯವಾಗಿ ನನಗೆ ಹೇಳಬೇಕಾದದ್ದು ಏನೆಂದ್ರೆ ವ್ಯಕ್ತಿ ಮತ್ತು ಸಮಷ್ಟಿಯಾಗಿ ಈ ಎರಡೂ ನೆಲೆಗಳ ಅನೈತಿಕ ಜೀವನ ಕ್ರಮವನ್ನು ಈ ಕತೆಗಳು ಬಯಲು ಮಾಡುತ್ತವೆ. ಹಾಗೆ ಬಯಲು ಮಾಡೋದಕ್ಕೆ ನಯಸೇನನ ಕತೆಗಳ ತಂತ್ರಗಾರಿಕೆ ಏನೆಂದರೆ ಇದು ಪಾಪಪ್ರಜ್ಞೆಯಿಂದ ನರಳೋ ಹಾಗೇ ತೋರಿಸುವುದು. ಈ ಎಲ್ಲ ಪಾತ್ರಗಳು ಮುಕ್ತಿಗಾಗಿ ಹಾತೊರೆಯುವಾಗ ನಯಸೇನ ಆ ಪಾತ್ರಗಳಿಗಿರಬಹುದಾದ ಒಂದು ಪಾಪಪ್ರಜ್ಞೆಯನ್ನು ದಟ್ಟವಾಗಿ ತೋರಿಸುತ್ತಾನೆ. ಅವು ಎಷ್ಟು ಲೋಬಿ, ಏಷ್ಟು ಅಕ್ರಮ, ಅವು ಹಿಂಸೆಯ ದಾರಿ ಯಲ್ಲಿ ತೊಡಗಿ ಆಮೇಲೆ ಅಹಿಂಸೆಯನ್ನು ತಹತಹಿಸುತ್ತವೆ ಅನ್ನುವ ಈ ಒಂದು ದಟ್ಟವಾಗಿ ತೋರಿಸುವುದಕ್ಕೆ ಮತ್ತು ಆ ಪಾಪಪ್ರಜ್ಞೆಯಿಂದ ಒಂದು ನೀತಿಯನ್ನು, ಒಂದು ನೈ\ಕ ಧರ್ಮವನ್ನು ಪ್ರತಿಪಾದಿಸೋದಕ್ಕೆ ಈ ಕತೆಗಳನ್ನು ನಯಸೇನ ನಿರೂಪಿಸಿದ್ದಾನೆ ಅಂತ ಅನ್ನಿಸುತ್ತೆ. ಹಾಗಾಗಿ ನಾನು ಇಲ್ಲಿ ಚರ್ಚೆಯಲ್ಲಿ ಕೇಳಿಸಿಕೊಳ್ಳುತ್ತಿರುವ ಮಾತನ್ನು ಹಿನ್ನೆಲೆ ಯಾಗಿಟ್ಟು ಹೇಳುವುದಾದರೆ, ಈ ಎಲ್ಲ ಕತೆಗಳಲ್ಲಿಯೂ ನಾವು ಸಹಜವಾಗಿ ನೀರಿಕ್ಷಿಸ ಬಹುದಾಗಿದ್ದು ಒಂದು ಪ್ರಭುತ್ವದ ಹಿಂಸೆ ನೇರವಾಗಿ ಇಲ್ಲಿ ಕಾಣಿಸ್ತಾಯಿಲ್ಲ. ಮತ್ತೆ ಯಾವುದರ ಹಿಂಸೆ ಇಲ್ಲಿ ವಿಶೇಷವಾಗಿ ಕಾಣಿಸುತ್ತೆ ಅಂದರೆ ನೇರವಾಗಿ ಒಂದು ಧರ್ಮದ  ಆಕ್ರಮಣಗಳು ಕಾಣಿಸುತ್ತಿಲ್ಲ. ಆದರೆ ಕಾಣಿಸುತ್ತಾ ಇರೋದು ಒಂದು ಸಮಾಜದ ಮಧ್ಯೆಯೇ ಈ ತರಹದ ಹಿಂಸೆ ಅಥವಾ ಅನೀತಿ; ಆ ಧರ್ಮ ಇವು ನಡೀತಾ ಇವೆ ಅನ್ನೊದನ್ನು ಮಾತ್ರ ನಯಸೇನ ಹೇಳುತ್ತಾ ಇದ್ದಾನೆ. ಹಾಗಾಗಿ ವಿಶೇಷವಾಗಿ ಇಲ್ಲಿ ರಾಜನ ಯುದ್ಧದ ಕಥನವೂ ಇಲ್ಲ, ಹಾಗೆಯೇ ಧರ್ಮಯುದ್ಧದ ಬೇರೆ ಬೇರೆ ಕತೆಗಳು ಇಲ್ಲಿಲ್ಲ. ಮುಖ್ಯವಾಗಿರುವುದು ಒಂದು ಅನೈತಿಕವಾದ ಪ್ರಭುತ್ವದ ವಿರುದ್ಧವೇ ಈ ಕತೆಗಳು ಮಾತನಾಡುತ್ತಾಯಿದ್ದಾವೆ ಅನ್ನೋದು ನನ್ನ ಮುಖ್ಯವಾದ ನಿಲುವು. ಒಂದು ರಾಜ್ಯವ್ಯವಸ್ಥೆ ಅಥವಾ ಅದಕ್ಕೆ ಪೂರಕ ವಾಗಿರುವ ಈ ಧಾರ್ಮಿಕ ವ್ಯವಸ್ಥೆ ಇವೆರಡರ ಅನೈತಿಕತೆಯನ್ನೆ ಈ ಕತೆಗಳು ನಿರೂಪಿಸುತ್ತಾ ಇದ್ದಾವೆ ಅನ್ಸುತ್ತೆ. ಆ ಕಾರಣವಾಗಿ ಇಲ್ಲಿ ಒಂದು ಧರ್ಮಯುದ್ಧ ನಮಗೆ ಕೇಳಸ್ತಾಯಿಲ್ಲ. ಅಥವಾ ತನ್ನ ಕಾಲದಲ್ಲೇ ಇದ್ದ ಬೌದ್ಧ ಧರ್ಮದ ಬಗ್ಗೆ ನಿನ್ನೆ ಇವರು ಪ್ರಸ್ತಾಪ ಮಾಡ್ತಾ ಯಿದ್ದರು. ಆ ತರಹದ ಒಂದು ಟೀಕೆಯೊ, ಇತ್ಯಾದಿಯೋ ಕಾಣಿಸುವುದಿಲ್ಲ. ಆದರೆ ಮಗುಮ್ಮಾಗಿ ಈ ವ್ಯವಸ್ಥೆ ಮತ್ತು ಧರ್ಮದೊಳಗಿರುವ ಒಂದು ಆಕ್ರಮವನ್ನು ಈ ಕತೆಗಳು ಬೇರೆ ಬೇರೆ ರೀತಿಯಲ್ಲಿ ನಮಗೆ ಪರಿಚಯ ಮಾಡಿಕೊಡುತ್ತಿರುವುದರಿಂದ ಇವು ನೇರವಾಗಿ ಒಂದು ಪ್ರಭುತ್ವವನ್ನು ಸಂರಕ್ಷಿಸುವುದಕ್ಕಾಗಿ ಅಥವಾ ಜೈನಧರ್ಮವನ್ನು ಬಹಳ ಗಾಢವಾಗಿ ಅದನ್ನು ಉಳಿಸಿಕೊಳ್ಳಬೇಕು ಅನ್ನೋ ರೀತಿಯಲಿ ಅವೇನು ಹೇಳ್ತಾಯಿಲ್ಲ ಏನೋ ಅನ್ನೋ ಅನುಮಾನ ಕೂಡ ಬರುತ್ತೆ. ಹಾಗಾಗಿ ಈ ಧರ್ಮ ಮತ್ತು ಪ್ರಭುತ್ವ ಈ ಎರಡನ್ನು ಕೂಡ ಇಷ್ಟು ರೂಪಕಾತ್ಮಕವಾಗಿ ಬಯಲು ಮಾಡುತ್ತವೆ. ಈ ಕತೆಗಳನ್ನು ನಾವು ಬೇರೆ ರೀತಿಯಲ್ಲೇ ಪ್ರವೇಶ ಮಾಡಬೇಕಾಗುತ್ತದೆ. ಈ ಧರ್ಮ ಮತ್ತು ಪ್ರಭುತ್ವ ಎರಡನ್ನು ಸುಧಾರಿಸುವುದಕ್ಕಾಗಿ ಕೂಡ ನಯಸೇನ ಪ್ರಯತ್ನ ಪಟ್ಟಿದ್ದಾನೆ. ಅದನ್ನು ಇಲ್ಲ ಅನ್ನೋದಿಲ್ಲ. ಏಕೆಂದರೆ ಬಂಡಾಯ ಸಾಹಿತ್ಯದ ಕವಿಗಳು ಅಥವಾ ಕತೆಗಾರರು ಅತ್ಯುತ್ತಮವಾದ ನಿರೂಪಣೆಗಳನ್ನು ಮಾಡ್ತಾ ಕೊನೆಗೆ ಎಲ್ಲೋ ಬಂದು ನಿಲ್ತಾರಲ್ಲ. ಹಾಗೇನೇ ಆ ಕಾಲದಲ್ಲಿ ನಯಸೇನನಿಗೂ ಅವನ ಕಾಲದ ಒಂದು ಧಾರ್ಮಿಕ ಆಶಯ ತೀವ್ರವಾಗಿತ್ತು. ಮಾರ್ಕ್ಸ್‌ವಾದ ನಮಗೆ ಎಷ್ಟು ಬಿಡು ಗಡೆಯ ಒಂದು ಧರ್ಮವಾಗಿ ಆವರಿಸಿಕೊಂಡಿರುತ್ತದೊ ಹಾಗೆಯೇ ಆ ನಯಸೇನನಿಗೂ ಆ ಕಾಲದಲ್ಲಿ ಆ ಆಶಯವನ್ನು ಹೇಳೋದಿಕ್ಕೆ ಅನಿವಾರ್ಯವಾಗಿ ಬೇಕಿತ್ತು. ಆದರೆ ಬಹಳ ಮುಖ್ಯವಾಗಿ ನಮ್ಮ ಕಾಲದ ಅನೇಕ ಅನೈತಿಕ ಧರ್ಮಗಳನ್ನು ನೋಡುತ್ತಿದ್ದಾರೆ. ಇವು ಕೂಡ ಒಂದು ಅನೈತಿಕ ಧರ್ಮವನ್ನು ಇವು ಬಯಲು ಮಾಡ್ತಾ ಆಮೇಲೆ ಸಮಾರೋಪ ಮಾಡುವಾಗ ಸುಖಾಂತ್ಯವನ್ನು ಜನಪದ ಕತೆಗಳು ಹೇಳೋ ಹಾಗೆ ಇದೆಲ್ಲ ಸರಿಯಾಗಿದೆ, ಧರ್ಮವು ಸರಿಯಾಗಿ ಆಗುತ್ತದೆ ಎಲ್ಲವೂ ಸುಖವಾಗಿರುತ್ತದೆ ಎನ್ನುವ ಒಂದು ಸೂತ್ರವನ್ನು ನಯಸೇನ ಮಾಡ್ತಾಯಿದ್ದಾನೆ ಅನ್ನಿಸುತ್ತೆ. ಹೀಗಾಗಿ ಇವೆಲ್ಲವು ಪ್ರಭುತ್ವದ ವಿರುದ್ಧವಾದ ರೂಪಕ ಪ್ರತಿಭಟನೆಗಳ ಅಥವಾ ಧರ್ಮದ ಸುಧಾರಣೆಗೆ ಬೇಕಾದ ಒಂದು ಮದ್ದನ್ನು ಈ ಪಾತ್ರಗಳ ಮೂಲಕ ನಯಸೇನ ಹೇಳ್ತಾಯಿದ್ದಾನೆ ಅನ್ಸುತ್ತೆ. ಅದು ಅಧಿಕಾರ ಹಿಡಿಯೋದ ಕ್ಕಾಗಿ ಈ ಕತೆಗಳು ಅಥವಾ ನಯಸೇನನ ಈ ನಿರೂಪಣೆ ಬಳಸಿದ್ದಾನೆ ಅನ್ನೋದು, ಜೈನಧರ್ಮದ ಅಸ್ತಿತ್ವವನ್ನು ಘನವಾಗಿ ಸ್ಥಾಪಿಸುವುದಕ್ಕಾಗೇ, ಇವು ಆಗ್ತಾಯಿದಾವೆ ಅನ್ನಿಸೋದು ನನಗೆ ಸ್ವಲ್ಪ ಅನುಮಾನ. ಇದನ್ನು ಒಂದು ಸಣ್ಣ ಅಭಿಪ್ರಾಯವನ್ನಾಗಿ ಹೇಳಿದ್ದೇನೆ ಹೊರತು, ಇದೊಂದು ತೀರ್ಮಾನವಾಗಿಯಲ್ಲ. ಒಂದು ನೈತಿಕತೆಯನ್ನು ಕಳೆದು ಕೊಂಡ ಧರ್ಮಕ್ಕೆ ಯಾವುದೇ ಅಧಿಕಾರವು ಇರೋದಿಲ್ಲ ಎಂದು ನಯಸೇನ ಈ ಕತೆಗಳ ಮೂಲಕ ಹೇಳ್ತಾಯಿದ್ದಾನೆ. ಒಂದು ಅನೈತಿಕ ಸಾಮಾಜಿಕ ವ್ಯವಸ್ಥೆಗೂ ಮತ್ತು ಧರ್ಮಕ್ಕೂ ಹಾಗೂ ಇವೆರಡನ್ನೂ ನಿಭಾಯಿಸುವ ಒಂದು ಪ್ರಭುತ್ವಕ್ಕೂ ನೀತಿ ಬಹಳ ಮುಖ್ಯ ಅನ್ನು ವುದನ್ನ ಈ ಕತೆಗಳು ಸಾರುತ್ತಿದ್ದಾವೆ ಅನ್ನುವುದು ನನ್ನ ಅಭಿಪ್ರಾಯ.