ಪಲ್ಲವಿ : ಧರ್ಮ ಸಂಸ್ಥಾಪಕ ಕೃಷ್ಣಾ ಕೃಷ್ಣಾ
ದ್ರೌಪದೀ ರಕ್ಷಕ ಕೃಷ್ಣಾ ಕೃಷ್ಣಾ

ಚರಣ :  ಸುದಾಮ ಕೊಟ್ಟ ಅವಲಕ್ಕಿ ನೀ ತಿಂದೆ
ಹನುಮಂತಗೆ ರಾಮನಾಗಿ ನೀ ಕಂಡೆ
ಉದ್ಧವಗೆ ವಿಶ್ವರೂಪ ನೀನು ತೋರಿದೆ
ಪಾಂಡವರ ಪಕ್ಷದಲ್ಲಿ ನೀನು ನಿಂತೆ

ಅರ್ಜುನಗೆ ಗೀತೆಯನು ನೀ ಬೋಧಿಸಿದೆ
ರಾಯಭಾರಿಯಾಗಿ ಅವಮಾನ ಹೊಂದಿದೆ
ಕಂಸ ಚಾಣೂರರನ್ನು ನೀನು ವಧಿಸಿದೆ
ತಂದೆ ತಾಯಿ ಸೆರೆಯನ್ನು ನೀನು ಬಿಡಿಸಿದೆ

ಜಯ ಜಯ ಶೂರನಿಗೆ ಜಯವಾಗಲೆಂದೆ
ಜಯ ಜಯ ಧೀರನಿಗೆ ಜಯ ಜಯ ಎಂದೆ
ಜಯ ಸಾರ್ವಭೌಮನಿಗೆ ಜಯ ಪರಾಕೆಂದೆ
ಜಯ ಭಕ್ತವತ್ಸಲಗೆ ಬಹು ಪರಾಕೆಂದೆ