ಇತಿಹಾಸದ ಪುಟಗಳಲ್ಲಿ ಧಾರವಾಡ

ಕರ್ನಾಟಕದಲ್ಲಿ ಬರುವ ಶೈಕ್ಷಣಿಕ ಸಾಂಸ್ಕೃತಿಕ ರಾಜಧಾನಿ ಎಂಬ ಹೆಸರಿನಿಂದಲೇ ಈ ಸ್ಥಳ ಪ್ರಸಿದ್ಧವಾಗಿದೆ. ಕಲ್ಯಾಣಿ ಚಾಲುಕ್ಯರು, ಮರಾಠರು, ಆದಿಲ್‌ಶಾಹಿಯರು ಮತ್ತು ಬ್ರಿಟೀಷರ ಕಾಲದಲ್ಲಿ ಇದು ಮುಖ್ಯ ಕೇಂದ್ರವಾಗಿತ್ತು. ಕನ್ನಡದ ಶಕಪುರುಷ ಡೆಪ್ಯೂಟಿ ಚೆನ್ನಬಸಪ್ಪನವರು, ಜಹಗೀರದಾರ, ಡಿ.ಸಿ. ಪಾವಟೆ, ಮುಂತಾದ ಶಿಕ್ಷಣತಜ್ಞರ, ಆಲೂರ ವೆಂಟರಾವ್‌, ನಾ.ಶ್ರೀ. ರಾಜಪುರೋಹಿತ, ನಾ.ಭಿ. ಕಬ್ಬೂರ ಮುಂತಾದ ಸ್ವಾತಂತ್ರ‍್ಯ ಹೋರಾಟಗಾರರ, ರಾ.ಸ್ವಾ. ಪಂಚಮುಖಿ, ದ.ಪ. ಕರಮರಕರ, ಪಾಂಡುರಂಗ ದೇಸಾಯಿ, ಬಿ.ಏ. ಸಾಲೇತೊರೆ ಮುಂತಾದ ಪ್ರಖ್ಯಾತ ಇತಿಹಾಸತಜ್ಞರ, ದ.ರಾ. ಬೇಂದ್ರೆ, ಎನ್‌.ಕೆ. ಕುಲಕರ್ಣಿ, ಚನ್ನವೀರ ಕಣವಿ, ಸಾಲಿ ರಾಮಚಂದ್ರರಾವ್‌ಮುಂತಾದ ಸಾಹಿತಿಗಳ ನಾಡಾಗಿದೆ. ಇದು ಕರ್ನಾಟಕದಲ್ಲಿ ನಡೆದ ‘ಸ್ವಾತಂತ್ರ‍್ಯ ಚಳುವಳಿ’ ಹಾಗೂ ‘ಕರ್ನಾಟಕದ ಏಕೀಕರಣ’ದ ಮುಖ್ಯ ಕೇಂದ್ರವಾಗಿತ್ತು.

 

ಧಾರವಾಡ ಶಹರದ ಪ್ರೇಕ್ಷಣೀಯ ಸ್ಥಳಗಳು
ಸೋಮೇಶ್ವರ ದೇವಾಲಯ

ಈ ದೇವಾಲಯವು ಧಾರವಾಡದಿಂದ ೪ ಕಿ.ಮೀ. ಅಂತರದಲ್ಲಿ ಕಲಘಟಗಿ ರಸ್ತೆಯಲ್ಲಿ ಎಸ್‌.ಡಿ.ಎಂ. ಕಾಲೇಜು ಹತ್ತಿರದಲ್ಲಿ ಕಾಣಸಿಗುವುದು. ಇದು ಅತ್ಯಂತ ಪುರಾತನ ದೇವಾಲಯವಾಗಿದೆ. ೧೨ನೇ ಶತಮಾನದಲ್ಲಿ ಚಾಲುಕ್ಯ ಶೈಲಿಯಲ್ಲಿ ನಿರ್ಮಿತವಾಗಿದೆ ಎಂದು ಇತಿಹಾಸ ಹೇಳಿದರೆ ಅಗಸ್ತ್ಯ ಋಷಿಗಳಿಂದ ಈ ಈಶ್ವರಲಿಂಗ ಹಾಗೂ ಶಾಲ್ಮಲಾ ನದಿ ಇವೆರಡರ ಉಗಮವಾಗಿದೆಯೆಂದು ದಂತ ಕಥೆಯು ಹೇಳುತ್ತದೆ. ಗರ್ಭಗುಡಿಯಲ್ಲಿ ಈಶ್ವರಲಿಂಗ, ನವರಂಗದ ಮಧ್ಯದಲ್ಲಿ ಚಾಲುಕ್ಯ ಶೈಲಿಯ ಕೆತ್ತನೆಯನ್ನೊಳಗೊಂಡ ನಾಲ್ಕು ಬೃಹತ್‌ಕಂಬಗಳಿವೆ. ಛಾವಣಿಯಲ್ಲಿ ಬಹುದಳಗಳನ್ನು ಹೊಂದಿದ ಕೆಳಮುಖ ಮಾಡಿರುವ ದೊಡ್ಡ ಕಮಲವಿದೆ. ನವರಂಗದಲ್ಲಿ ಚಾಲುಕ್ಯ ಶೈಲಿಯ ಮಹಿಷಾಸುರಮರ್ದಿನಿ ಹಾಗೂ ಚತುರ್ಭುಜ ಗಣೇಶನ ಸುಂದರ ಮೂರ್ತಿಗಳಿವೆ. ದೇವಾಲಯದ ಎದುರು ವಿಶಾಲವಾದ ಪುಷ್ಕರಣಿಯಿದೆ. ವರಕವಿ ದ.ರಾ. ಬೇಂದ್ರೆಯವರು “ಬಂತಣ್ಣಾ ಸಣ್ಣ ಸೋಮವಾರ, ಕಾಣಬೇಕಣ್ಣಾ ಸೋಮೇಶ್ವರ” ಎಂಬ ನುಡಿಗಳಿಂದ ಈ ದೇವಾಲಯ ಕುರಿತು ಬಣ್ಣಿಸಿದ್ದಾರೆ.

 

ಉಳವಿ ಬಸಪ್ಪನ ಗುಡಿ:

ಇದು ಮಾಳಮಡ್ಡಿಗೆ ಹೋಗುವ ರಸ್ತೆಯಲ್ಲಿ ೨ ಕಿ.ಮೀ. (ಸ್ಟ್ಯಾಂಡ್‌ನಿಂದ) ದೂರದಲ್ಲಿದೆ. ಚೆನ್ನಬಸವಣ್ಣ ಹಾಗೂ ಆತನ ಅನುಯಾಯಿಗಳು ಕಲ್ಯಾಣಕ್ಕೆ ಹೋಗುವಾಗ ಈ ದೇವಸ್ಥಾನದಲ್ಲಿ ವಾಸ್ತವ್ಯವಿದ್ದರು. ದೊಡ್ಡ ಪೌಳಿಯನ್ನು ಹೊಂದಿದ ಸುಂದರವಾದ ದೇವಸ್ಥಾನವಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರಕ್ಕೊಮ್ಮೆ ಜಾತ್ರೆ ನಡೆಯುತ್ತದೆ.

 

ಕರ್ನಾಟಕ ವಿಶ್ವವಿದ್ಯಾಲಯ:

ಧಾರವಾಡ ಬಸ್‌ಸ್ಟ್ಯಾಂಡಿನಿಂದ ೫ ಕಿ.ಮೀ. ದೂರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವಿದೆ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಅಭ್ಯಾಸ ಮಾಡುತ್ತಾರೆ. ದೂರದಿಂದ ಬಂದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯವಿದೆ. ಸಿಬ್ಬಂದಿ ವರ್ಗಕ್ಕೆ ಸೌಕರ್ಯವಿದೆ. ವಿಶಾಲವಾದ ಆಟದ ಮೈದಾನವಿದೆ.

 

ಕರ್ನಾಟಕ ಕಾಲೇಜು:

ಬಸ್‌ಸ್ಟ್ಯಾಂಡ್‌ನಿಂದ ೨ ಕಿ.ಮೀ. ದೂರದಲ್ಲಿ ಬ್ರಿಟಿಷರ ಕಾಲದಲ್ಲಿಯೇ ಸ್ಥಾಪಿತವಾದ ಕಾಲೇಜು ಇದಾಗಿದೆ. ಪ್ರಥಮವಾಗಿ ಇದು ಟ್ರೇನಿಂಗ್‌ಕಾಜೇದಲ್ಲಿ ಪ್ರಾರಂಭವಾಯ್ತು. ನಂತರ ಟ್ರೇನಿಂಗ್‌ಕಾಲೇಜದಿಂದ ಸ್ಥಳಾಂತರಗೊಂಡು ಸ್ವಂತ ಕಟ್ಟಡಕ್ಕೆ ಬಂದಿತು. ೧೫ನೇ ಜುಲೈ ೧೯೨೦ ರ ಶುಭದಿನದಂದು ಆಗಿನ ಗವರ್ನರ್‌ಸರ್‌ಚಾರ್ಜ್‌ಲಾಯ್ಡ್‌ರಿಂದ ಉದ್ಘಾಟನೆಗೊಂಡು ಪ್ರಾರಂಭವಾಯಿತು. ಕಲಾ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸಲಾಗುತ್ತಿದೆ. ಇದೊಂದು ಪದವಿ ಶಿಕ್ಷಣದ ಕಾಲೇಜು ಆಗಿದೆ.

 

ಗಂಡು ಮಕ್ಕಳ ಟ್ರೇನಿಂಗ್ಕಾಲೇಜು:

೧೮೫೬ ಫೆಬ್ರುವರಿಯಲ್ಲಿ ಶಿಕ್ಷಕರ ತರಬೇತಿಗಾಗಿ “ನಾನಾಗಿಲ್‌ಕ್ಸಾಲ್‌” ಎಂಬ ಸಂಸ್ಥೆ ಪ್ರಾರಂಭವಾಗಿ ಶಿಕ್ಷಣದ ಅಭಿವೃದ್ಧಿಗೆ ನಾಂದಿ ಹಾಡಿತು. ಧಾರವಾಡ ಚೆನ್ನಬಸಪ್ಪನವರು ಇದರ ಮುಖ್ಯಸ್ಥರಾದರು. ಕಾರಣಾಂತರದಿಂದ ಇದು ೧೮೬೧ ರಲ್ಲಿ ಬೆಳಗಾವಿಗೆ ಸ್ಥಳಾಂತರಗೊಂಡಿತು. ಮತ್ತೆ ೧೮೬೪ ರಲ್ಲಿ ನಾರ್ಮಲ್‌ಸ್ಕೂಲ್‌ಆಗಿ ಪರಿವರ್ತನೆಗೊಂಡಿತು. ೧೮೬೬ ರಲ್ಲಿ ಕಾಲೇಜು ದರ್ಜೆಯನ್ನು ಪಡೆಯಿತು. ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯದಿಂದ ಕನ್ನಡ ಶಿಕ್ಷಕರನ್ನು ಪಡೆಯುವುದು ದುಸ್ತರವಾಗಿ, ಈ ಸಂಸ್ಥೆ ೧೮೭೫ ರಲ್ಲಿ ಮರಳಿ ಹುಟ್ಟೂರಾದ ಧಾರವಾಡಕ್ಕೆ ಬಂತು. ೧೯೯೨ ರಲ್ಲಿ ಈಗ ಈ ಕೇಂದ್ರ ಮೇಲ್ದರ್ಜೆಗೆ ಏರಿ “ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌)” ಎಂದು ನಾಮಕರಣಗೊಂಡಿತು. ಮಾನ್ಯ ಚೆನ್ನಬಸಪ್ಪ ಧಾರವಾಡ (ಡೆಪ್ಯೂಟಿ ಚೆನ್ನಬಸಪ್ಪನವರು) ಇವರು ಈ ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿದ್ದರು. ಶಿಕ್ಷಕರಿಗೆ ತರಬೇತಿ ವರ್ಗಗಳು ನಡೆಯುತ್ತವೆ. ವಸತಿ ನಿಲಯವೂ ಇದೆ.

ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ರಾಷ್ಟ್ರೀಯ ಸ್ಮಾರಕ ಭವನ ಬೇಂದ್ರೆ ಭವನ

ಧಾರವಾಡ ಬಸ್ಟ್ಟ್ಯಾಂಡಿನಿಂದ ೪ ಕಿ.ಮೀ. ಅಂತರದಲ್ಲಿ ಅತ್ಯಂತ ಮನಮೋಹಕ ಭವನವೊಂದು ಸಾಧನಕೇರಿಯಲ್ಲಿ ಕಾಣಸಿಗುತ್ತದೆ. ಬೇಂದ್ರೆಯವರ ನಿಧನಾನಂತರ ಹಲವಾರು ಕಾಣದ ಕೈಗಳ ಪ್ರಯತ್ನದಿಂದಾಗಿ ಕರ್ನಾಟಕ ಸರ್ಕಾರವು ಕ್ರಿ.ಶ. ೧೯೯೩ ಡಿಶೆಂಬರ್‌೮ ರಂದು ಡಾ ದ.ರಾ. ಬೇಂದ್ರೆ ಸ್ಮಾರಕ ಭವನಕ್ಕೆ (ಬೇಂದ್ರೆ ಭವನಕ್ಕೆ) ಶಿಲಾನ್ಯಾಸ ಮಾಡಲಾಯಿತು. ೧೯೯೯ ಜನವರಿ ೩೧ ರಂದು ಸಾರ್ವಜನಿಕರಿಗಾಗಿ ಸಮರ್ಪಣೆ ಮಾಡಲಾಯಿತು. ಬೇಂದ್ರೆ ಭವನದಲ್ಲಿ ನೆಲಮಹಡಿಯ ಸಭಾಭವನವೊಂದು ಹೊಮದಿದೆ. ಮೊದಲ ಅಂತಸ್ತಿನಲ್ಲಿ ಪತ್ರಿಕಾ ವಾಚನಾಲಯ ಮತ್ತು ಹಿಂಭಾಗದಲ್ಲಿ ಗ್ರಂಥಾಲಯವಿದೆ. ಎರಡನೇ ಅಂತಸ್ತಿನಲ್ಲಿ ಬೇಂದ್ರೆ ದರ್ಶನ ಪ್ರದರ್ಶನಾಲಯವಿದೆ. ಇದು ಬೇಂದ್ರೆ ಭಾವಗೀತೆಗಳ ಆಧಾರಿತ ಭಾವಚಿತ್ರ. ಬೇಂದ್ರೆ ಅವರ ಭಾವಚಿತ್ರಗಳನ್ನು ಹೊಂದಿದ್ದು, ಇಲ್ಲಿ ಸಂಗೀತವನ್ನು ಪ್ರದರ್ಶನಾಲಯದಲ್ಲಿ ಕೇಳುವಂತೆ ಮಾಡಲಾಗಿದೆ. ಸಭಾಭವನದಲ್ಲಿ ಪ್ರೊಜೆಕ್ಟರ್‌ಸೌಲಭ್ಯವಿದ್ದು, ಬೇಂದ್ರೆಯವರ ಸಾಕ್ಷ್ಯ ಚಿತ್ರಗಳ ಪ್ರದರ್ಶನವನ್ನು ಮಾಡಲಾಗುತ್ತದೆ. ಬೇಂದ್ರೆಯವರ ಜನ್ಮ ತಿಥಿ ೩೧  ಜನವರಿ ಹಾಗೂ ಅಕ್ಟೋಬರ್‌೨೬ ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಮಾನಸಿಕವಾಗಿ ೧ ನೇ ತಾರೀಕಿನಂದು “ಗೆಳೆಯರ ಗುಂಪು” ಉಪನ್ಯಾಸವನ್ನು, ೧೫ ತಾರೀಕಿನಂದು “ಭಾವಗೀತೆ ಗಾಯನ ಸಂಜೆ” ಕಾರ್ಯಕ್ರಮ ನಡೆಯುವುದು.

 

ಸಾಧನಕೇರಿ ಕೆರೆ:

ಕೆರೆ ಹಾಗೂ ಚಿಕ್ಕ ಉಪವನವನ್ನು ಬೇಂದ್ರೆ ಭವನದ ಎದುರಿನಲ್ಲಿ ನಿರ್ಮಿಸಲಾಗುತ್ತಿದ್ದು, ಅದು ಒಂದು ಪ್ರೇಕ್ಷಣೀಯ ಸ್ಥಳವಾಗಿ ರೂಪುಗೊಳ್ಳುತ್ತಿದೆ. ದ.ರಾ. ಬೆಂದ್ರೆಯವರು ಸಾಧನ+ಕೇರಿ=ಸಾಧನಕೇರಿ ಅಂದರೆ ಸಾಧಿಸುವವರಿಗಾಗಿ ಇರುವ ಸ್ಥಳ ಎಂದು ಹೇಳಿರುವರು. ಈ ಸಾಧನಕೇರಿ ಕೆರೆಯ ಅಂಗಳದಲ್ಲಿ ತಮ್ಮ ಹಲವಾರು ಕವಿತೆಗಳನ್ನು ರಚಿಸಿರುವರು. ಈ ಕೆರೆಯ ಸುತ್ತಲಿನ ೧೩ ಎಕರೆ (ಕೆರೆಯನ್ನೊಳಗೊಂಡು) ಪ್ರದೇಶವನ್ನು ಸರ್ಕಾರದಿಂದ ಬೇಂದ್ರೆ ಟ್ರಸ್ಟಿಗೆ ಪಡೆದು, ಕೆರೆಯಲ್ಲಿ ಬೋಟಿಂಗ್‌, ಕೆರೆಯ ಮಧ್ಯೆ ಒಮದು ಬಯಲು ರಂಗಮಂದಿರದ ನಿರ್ಮಾಣ ಹಾಗೂ ಕೈ ತೋಟ ಮಾಡಬೇಕೆಂದು ಟ್ರಸ್ಟಿನ ಅಧ್ಯಕ್ಷರು ಹಾಗೂ ಟ್ರಸ್ಟ್‌ಸದಸ್ಯರ ಆಶಯವಾಗಿದೆ. ಅದರಂತೆ ಈ ಕೆರೆಯ ಕಾಮಗಾರಿ ಪ್ರಾರಂಭವಾಗಿದ್ದು, ಪ್ರೇಕ್ಷಕರಿಗೆ ಸವಿಯನ್ನು ನೀಡುವಂಥ ಒಂದು ತಾಣವಾಗಿ ರೂಪುಗೊಳ್ಳುತ್ತಲಿದೆ. “ಇದಂ ಬಾರೋ ಸಾಧನಕೇರಿ” ಯೋಜನೆಯಾಗಿದೆ.

 

ಕಿತ್ತೂರ ಚೆನ್ನಮ್ಮ ಉಪವನ:

ಇದು ಧಾರವಾಡ ಬಸ್‌ಸ್ಟ್ಯಾಂಡ್‌ನಿಂದ ೧.೫ ಕಿ.ಮೀ. ದೂರದಲ್ಲಿ ಬೆಳಗಾಂವ್‌ರಸ್ತೆಗೆ ಹೊಂದಿಕೊಂಡಿದೆ. ೧೮೨೩-೨೪ ರಲ್ಲಿ ಧಾರವಾಡವನ್ನಾಳಿದ ಕ್ಯಾಪ್ಟನ್‌ಥ್ಯಾಕರೆಯ ಗೋರಿಯಿದೆ. ಮಕ್ಕಳಿಗಾಗಿ ಆಟವಾಡಲು ಅನುಕೂಲವಿದೆ. ಸುಂದರವಾದ ವಿವಿಧ ಹೂವಿನ ಗಿಡಗಳಿವೆ. ಇದೊಂದು ಅತ್ಯಂತ ಆಕರ್ಷಣೀಯ ಉದ್ಯಾನವನವಾಗಿದೆ.

 

ಹೆಣ್ಣು ಮಕ್ಕಳ ಟ್ರೇನಿಂಗ್ಕಾಲೇಜು:

೧೮೯೫ ರಲ್ಲಿ ಹೆಣ್ಣು ಮಕ್ಕಳ ತರಬೇತಿಗಾಗಿ “ಟ್ರೇನಿಂಗ್‌ಕ್ಲಾಸ್‌” ಎಂಬ ಹೆಸರಿನ ಸಂಸ್ಥೆಯನ್ನು ಧಾರವಾಡ ಮುನಿಸಿಪಾಲಿಟಿಯ ೧ ನೇ ನಂಬರ ಶಾಲೆ (ಇದು ಈಗಿನ ಅಂಚೆ ಕಚೇರಿಯ ಹಿಂದುಗಡೆ ಇದ್ದ ಗಾಂಧಿ ಚೌಕಿನ ಶಾಲೆ) ಯಲ್ಲಿ ಸರ್ಕಾರ ಪ್ರಾರಂಭಿಸಿತು. ೧೯೦೩ ರಲ್ಲಿ ಇದಕ್ಕೆ “ಫಿಮೇಲ್‌ನಾರ್ಮನಲ್‌ಸ್ಕೂಲ್‌” ಎಂದು ನಾಮಕರಣ ಆಯಿತು. ೧೯೦೮ ರಲ್ಲಿ (ಈಗಿದ್ದ ಸ್ಥಳದಲ್ಲಿ) ಮೆ|| ಗಿಬ್‌ಎಂಬ ಬ್ರಿಟಿಷ್‌ಅಧಿಕಾರಿಗಳು ಹೊಸ ಕಟ್ಟಡವನ್ನು ಉದ್ಘಾಟಿಸಿದರು. ಲೇಡಿ ಫೇಮರ್‌ಎನ್ನುವವರು ಪ್ರಥಮ ಲೇಡಿ ಸುಪರಿಂಟೆಂಡೆಂಟ್‌ರಾಗಿ ಕೆಲಸ ನಿರ್ವಹಿಸಿದರು. ಈಗ ಇದು ಪ್ರಥಮ ಹೆಣ್ಣು ಮಕ್ಕಳ ಟ್ರೇನಿಂಗ್‌ಕಾಲೇಜ ಆಗಿದೆ. ಇಲ್ಲಿಯೂ ಹೆಣ್ಣು ಮಕ್ಕಳಿಗಾಗಿ ವಸತಿ ಸೌಲಭ್ಯವಾಗಿದೆ. ೧೯೬೧ ರಲ್ಲಿ ಸಂಸ್ಥೆಯ ಆಶ್ರಯದಲ್ಲಿ ಉರ್ದು ತರಬೇತಿ ಸಂಸ್ಥೆಯೂ ಪ್ರಾರಂಭವಾಯಿತು. ಇದು ಆಝಾದ್‌ರಸ್ತೆಯ ಪಕ್ಕದಲ್ಲಿಯೇ ಕಂಗೊಳಿಸುತ್ತಿದೆ.

 

ಆಝಾದ್ಉಪವನ:

ಇದು ಬಸ್‌ಸ್ಟ್ಯಾಂಡ್‌ಗೆ ಸಮೀಪದಲ್ಲಿಯೇ ಇದೆ. ಇದು ಸುಂದರವಾದ ಉದ್ಯಾನವನವಾಗಿದೆ.

 

ದುರ್ಗಾದೇವಿ ಮಂದಿರ:

ಕಲ್ಯಾಣ ಚಾಲುಕ್ಯರ ೬ ನೆಯ ವಿಕ್ರಮಾದಿತ್ಯನ ಕಾಲದಲ್ಲಿ ಆತನ ಹೆಂಡತಿ ‘ಮಲಯವತಿ’ ಎಂಬ ಪಟ್ಟದರಸಿಯ ಹೆಸರಲ್ಲಿ ಭಾನುದೇವನೆಂಬ ಪ್ರತಿಷ್ಟಿತನು ಕ್ರಿ.ಶ. ೧೧೧೭ ರಲ್ಲಿ ಕಟ್ಟಿಸಿದನೆಂದು ಶಾಸನವು ತಿಳಿಸುತ್ತದೆ. ಗುಡಿಯ ಸುತ್ತಲೂ ಕೋಟೆಯನ್ನು ಕಟ್ಟಿಸಿದ್ದರೆಂದು ಪ್ರತೀತಿಯಿದೆ. ಈ ಗುಡಿಯ ಸುತ್ತಲಿನ ಪ್ರದೇಶವು ಅರಣ್ಯಮಯವಾಗಿತ್ತು. ಕಂದಕಗಳಿಂದ ಕೂಡಿತ್ತು. ಕಾಲುದಾರಿಗಳ ಮೂಲಕ ಜನ ಬಂದು ಪರರ ದಾಳಿ ತಮ್ಮ ಮೇಲೆ ಆಗದಿರಲಿ ಎಂದು ದೇವಿಯನ್ನು ಪ್ರಾರ್ಥಿಸುತ್ತಿದ್ದರೆಂದು ಇತಿಹಾಸ ಹೇಳುತ್ತದೆ. ಇದು ಬೆಳಗಾಂವ್‌ರಸ್ತೆಯ ಎಡಬದಿಯಲ್ಲಿದೆ.

 

ಮುರುಘಾಮಠ:

ಈ ಮಠವು ಸವದತ್ತಿ ರಸ್ತೆಯ ಎಡಭಾಗದಲ್ಲಿ ಕಾಣಸಿಗುತ್ತದೆ. ಧಾರವಾಡ ಬಸ್‌ಸ್ಟ್ಯಾಂಡಿನಿಂದ ೨ ಕಿ.ಮೀ. ದೂರದಲ್ಲಿದೆ. ಶ್ರೀ ಮಹಾಂತಪ್ಪ ಸ್ವಾಮಿಗಳು ಈ ಮಠದ ಮಠಾಧೀಶರಾಗಿದ್ದರು. ಈಗ ಶ್ರೀ ಶಿವಯೋಗೀಶ್ವರ ಸ್ವಾಮಿಗಳು ಮಠಾಧೀಶರಾಗಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ, ಹೈಸ್ಕೂಲ್‌ಮತ್ತು ಕಾಲೇಜು ಇವೆ. ಬಡಮಕ್ಕಳಿಗಾಗಿ ವಸತಿ ನಿಲಯವಿದೆ. ಪ್ರತಿದಿನ ದಾಸೋಹ ನಡೆಉತ್ತದೆ. ಪ್ರತಿ ಸೋಮವಾರ ಧಾರ್ಮಿಕ ಪ್ರವಚನಗಳು ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯುತ್ತವೆ. ಪ್ರತಿವರ್ಷ ಜಾತ್ರೆ ನಡೆಯುತ್ತದೆ.

 

ಧಾರವಾಡದಲ್ಲಿ ನಡೆದ ಗೋಳಿಬಾರ ಬಗೆಗಿನ ಸ್ಮಾರಕ:

೩೦-೦೬-೧೯೨೧ ರಂದು ನಡೆದ ಗೋಳಿಬಾರದಲ್ಲಿ ಮಲ್ಲಿಕಸಾಬ, ಗೌಸಸಾಬ, ಅಬ್ದುಲ್‌ಖಾದಚುಕತಾಂಬ ಈ ಮೂವರು ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಈ ಹುತಾತ್ಮರ ಚಿರನೆನಪಿಗಾಗಿ ಧಾರವಾಡ “ಜಕಣಿಭಾವಿ”ಯ ಹತ್ತಿರ ಈ ಸ್ಮಾರಕ ತಲೆ ಎತ್ತಿ ನಿಂತಿದೆ.