Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಧೃವ ರಾಮಚಂದ್ರ ಪತ್ತಾರ

ಪಾರಂಪರಿಕ ಶಿಲ್ಪಕಲಾ ಕುಟುಂಬದಲ್ಲಿ ಜನಿಸಿದ ಧೃವ ಪತ್ತಾರ ಅವರು ಚಿಕ್ಕವಯಸ್ಸಿನಿಂದಲೇ ಮೂರ್ತಿ ಶಿಲ್ಪ ನಿರ್ಮಾಣದಲ್ಲಿ ತೊಡಗಿಕೊಂಡವರು. ದೇವಾನುದೇವತೆಗಳ ಉತ್ಸವಮೂರ್ತಿಗಳನ್ನು ನಿರ್ಮಿಸುವಲ್ಲಿ ನೈಪುಣ್ಯತೆ ಪಡೆದ ಧೃವಪತ್ತಾರ ಅವರು ರಾಜ್ಯದ ಹಲವಾರು ದೇವಾಲಯಗಳ ಉತ್ಸವಮೂರ್ತಿಗಳನ್ನು ತಯಾರು ಮಾಡಿ ಕೊಟ್ಟಿದ್ದಾರೆ.
ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ದೇವಾಲಯ ಹಾಗೂ ಮಠಗಳ ಉತ್ಸವಮೂರ್ತಿಗಳು ಹಾಗೂ ಬೆಳ್ಳಿಯ ಪಲ್ಲಕ್ಕಿಗಳನ್ನು ಸಿದ್ಧ ಮಾಡಿಕೊಟ್ಟಿರುವ ಧೃವಪತ್ತಾರ ಅವರು ಬೆಳ್ಳಿ ಕವಚಗಳನ್ನು ತಯಾರಿಸುವಲ್ಲಿ ನಿಪುಣರು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಾಮ್ರ, ಬೆಳ್ಳಿ, ಹಾಗೂ ಹಿತ್ತಾಳೆ, ತಗಡುಗಳಿಂದ ಮೂರ್ತಿಗಳು ಹಾಗೂ ಬೆಳ್ಳಿ ಕಿರೀಟಗಳನ್ನು ಕಲಾತ್ಮಕವಾಗಿ ನಿರ್ಮಿಸಿರುವ ಧೃವ ಪತ್ತಾರ ನಾಡಿನ ಹೆಸರಾಂತ ಶಿಲ್ಪಕಲಾ ಕಲಾವಿದರಲ್ಲೊಬ್ಬರು.