ಪಲ್ಲವಿ : ನಂದ ಗೋಕುಲ ಬಾಲ ಬೃಂದಾವನಕೆ
ಬಂದನಂತೆ ನಮ್ಮ ಬಾಲ ಕೃಷ್ಣ

ಚರಣ :  ಬೆಟ್ಟ ಗುಡ್ಡ ಹತ್ತಿ ಕಾಡು ಮೇಡು ಸುತ್ತಿ
ನಿನಗಾಗಿ ರಾಧೆ ಕಾದಳು  

ಗೋಪ ಗೋಪಿಯರೆಲ್ಲ ಮಜ್ಜಿಗೆ ಕಡೆದರು
ಬೆಣ್ಣೆ ಮುದ್ದೆ ಮಾಡಿ ಕಾದು ಕೂತರು

ನೊರೆಹಾಲು ಕುಡಿ ಬಾ ಕರುವಾಗಿ ಓಡಿ ಬಾ
ಕೆರೆ ಏರಿ ಇಳಿದು ನೀ ಓಡಿ ಬಾ

ಬೆಣ್ಣೆ-ಕಳ್ಳನೆಂಬ ಬಿರುದು – ಹೊತ್ತಿಕೊಂಡು
ಓಡಿ ಬಾ ನನ್ನ ನೋಡು ಬಾ

ನೀಲಿಯ ಮೈಬಣ್ಣ ಮುಗುಳು ನಗೆ ಚೆನ್ನ
ಬಳುಕುತಾ ಕುಣಿಯುತಾ ಬೇಗ ಬಾ

ಬುದ್ಧಿಕೊಡು ನಂಗೆ ಸಿದ್ಧಿಕೊಡು
ಜಯವನ್ನು ಕೊಡು ಕೃಷ್ಣಾ