ದಿನಾಂಕ ೭-೮-೧೯೪೭ ರಂದು ಜನಿಸಿದ ನಂದಿನಿ  ಈಶ್ವರ್‍ರವರಿಗೆ ಚಿಕ್ಕಂದಿನಿಂದಲೂ ನೃತ್ಯದಲ್ಲಿ ಅಪಾರ ಆಸಕ್ತಿ. ಅಜ್ಜಿ, ತಾತ, ತಂದೆ (ಎಂ.ಎಸ್.ಶ್ರೀಕಂಠಯ್ಯ) ತಾಯಿ (ಶ್ರೀಮತಿ ಎಂ. ಎಸ್. ಶಾಂತಮ್ಮ) ಇವರ ನಿರಂತರ ಪ್ರೋತ್ಸಾಹದಿಂದ ಆ ದಿಸೆಯಲ್ಲಿ ಶಿಕ್ಷಣ ಮೈಊರು ವಿಶ್ವವಿದ್ಯಾಲಯದ ಬಿ.ಎಸ್.ಸಿ. ಮತ್ತು ಹಿಂದಿಯಲ್ಲಿ ಸ್ನಾತಕೋತ್ತರ ಎಂ.ಎ. ಪದವಿಯನ್ನು ಹೊಂದಿದ್ದಾರೆ.

ಡಾ|| ವೆಂಕಟಲಕ್ಷ್ಮಮ್ಮ, ಲಲಿತ ದೊರೈ, ಮೈಸೂರಿನ ವೈ.ಎನ್. ಸಿಂಹ ನಂತರ ದೆಹಲಿಯ ಗಾಂಧರ್ವ ಮಹಾ ವಿದ್ಯಾಲಯದ ತೀರಥ್ ರಾಂ ಆಜಾದ್‌ರವರಿಂದ ಕಥಕ್, ದೆಹಲಿ ಬ್ಯಾಲೆ ಗ್ರೂಫ್ ನಿರ್ದೇಶಕ ವಾಲ್ಮೀಕಿ ಬ್ಯಾನರ್ಜಿಯವರಿಂದ ಮಣಿಪುರಿ ಮತ್ತು ಜಾನಪದ ನೃತ್ಯ ವೇದಾಂತಂ ಪ್ರಹ್ಲಾದ ಶರ್ಮ ಮತ್ತು ಪಸುಮರ್ತಿ ಗೋಪಾಲ ಕೃಷ್ಣವರ್ಮರವರಿಂದ ಕೂಚುಪುಡಿ ನಾಟ್ಯ, ಗುಜರಾತಿನ ಹಿಮ್ಮತ್ ಸಿಂಹ ಚೌಹಾನ್‌ರವರಿಂದ ನವರ ಸಾಭಿನಯವನ್ನು ಎಂ.ಜೆ. ಶ್ರೀನಿವಾಸಯ್ಯಂಗಾರ್ ರವರಿಂದ ಹಾಗೂ ಎ.ಎಸ್. ಪದ್ಮರವರಿಂದ ವೀಣೆಯನ್ನು ಕಲಿತಿದ್ದಾರೆ.

’ರಾಸವೃಂದ’ ಎಂಬ ನೃತ್ಯ ಶಾಲೆಯನ್ನು ಸ್ಥಾಪಿಸಿ ನೂರಕ್ಕೂ ಹೆಚ್ಚು ಕಲಾವಿದರನ್ನು ತರಬೇತಿಗೊಳಿಸಿದ್ದಾರೆ. ಅವರು ಅನೇಕ ನೃತ್ಯ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮಣಿಪಾಲ್ ಅಕಾಡೆಮಿ ಆಫ್ ಎಜುಕೇಷನ್‌ರವರಿಂದ ’ನಾಟ್ಯರತ್ನ’ ಫಿಜಿ ದ್ವೀಪದ ತಂಬುವ ಸ್ವೀಕಾರ ಮುಂತಾದ ಪ್ರಶಸ್ತಿಗಳನ್ನು ಅವರು ಹೊಂದಿದ್ದಾರೆ.

ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಂದಿನಿ ಈಶ್ವರರವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು “ಕರ್ನಾಟಕ ಕಲಾ ತಿಲಕ” ಎಂಬ ಬಿರುದು ಹಾಗೂ ೧೯೯೪-೯೫ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.