ಇದು ನಕ್ಷತ್ರ ಲೋಕ
ಇಲ್ಲಿಲ್ಲ ಮರ್ತ್ಯ ಶೋಕ
ಮಾತೆಲ್ಲವೂ ಇಲ್ಲಿ ಮೂಕ
ತುಂಬಿಕೋ ಇಲ್ಲಿ ಬೆಳಕ !

ಇದು ರಜತದುದ್ಯಾನ
ಅವ್ಯಕ್ತ ಮಧುರಗಾನ
ಹೊಮ್ಮುತಿದೆ ತಾನತಾನ
ಮನವಿಲ್ಲಿ ಧ್ಯಾನಲೀನ.

ಇದು ನಿತ್ಯ ಜ್ಯೋತಿರೂಪ
ಬಾನ್ ಗುಡಿಯ ಲಕ್ಷದೀಪ
ಬೆಳಗುತಿವೆ ಕಲ್ಪ ಕಲ್ಪ
ಮನವಿಲ್ಲಿ ನಿರ್‌ವಿಕಲ್ಪ !