ಪಲ್ಲವಿ : ನನ್ನದೇನು ಇಲ್ಲ ಕೃಷ್ಣ ಇರುವುದೆಲ್ಲ ನಿನ್ನದೇ

ಚರಣ :  ಹೊನ್ನು ಮಣ್ಣು ಹುಚ್ಚನಾಗಿ ಚಿನ್ನದಂಥ ಬಾಳನೆಲ್ಲ
ಚೆಲ್ಲಿಕೊಂಡೆನು ಕೃಷ್ಣಾ ಚೆಲ್ಲಿಕೊಂಡೆನು       

ದುಷ್ಟಮನದ ಸಂಗದಲ್ಲಿ ಇಷ್ಟಬಂದ ಹಾಗೆ ನಾನು
ನಷ್ಟಮಾಡಿಕೊಂಡೆ ನನ್ನ ಕಾಲವೆಲ್ಲವೂ ಕೃಷ್ಣಾ !

ಕುದುರೆ ಹಾಗೆ ನನ್ನ ಮನವ ಕುಣಿದಂಗೆ ಬಿಟ್ಟೆ ನಾನು
ತತ್ತ್ವಬೋಧೆ ಹಗ್ಗದಿಂದ ಹಿಡಿದು ನಿಲ್ಲಿಸೊ ಕೃಷ್ಣಾ !

ಮಕ್ಕಳಲ್ಲಿ ಮಕ್ಕಳಾಗಿ ದಡ್ಡರಲ್ಲಿ ದಡ್ಡನಾಗಿ
ದೊಡ್ಡಮನವ ಕೊಟ್ಟು ನನಗೆ, ಸಲಹೋ ಕೃಷ್ಣಾ !

ನಾನು ನೀನು ಎಂಬ ಭೇದ ಮೇಲು ಕೀಳು ಎಂಬ ಮನವ
ಹೋಗಲಾಡಿಸಿ ಕಷ್ಟ ಹೋಗಲಾಡಿಸೋ

ಮಾಯೆಯಿಂದ ಎಚ್ಚರಿಸಿ ಕಾಮಮೋಹ ತೊಲಗಿಸಿ
ನಿನಗೆ ಜಯವ ಹೇಳುವಂತೆ ಮಾಡೋ ಮನವ ಕೃಷ್ಣಾ !