(ಕಾಡಿನಲ್ಲಿ ಗೋಪಾಲನೂ ಬನದ ಗೋಪಾಪನೂ ಮಾತನಾಡುತ್ತ ಕುಳಿತಿದ್ದಾರೆ.)
ಗೋಪಾಲ
ಅಣ್ಣಾ, ಇಂದು ಗುರುದಕ್ಷಿಣೆ ಕೊಡಬೇಕಾಗಿದೆ. ಅಮ್ಮನನ್ನು ಕೇಳಿದೆ, ನಿನ್ನನ್ನೇ ಕೇಳು ಅಂದಳು. ಏನಾದರೂ ಕೊಡಣ್ಣ.
ಬನದ ಗೋಪಾಲ
ತಮ್ಮ, ನಾವೇನು ಐಶ್ವರ್ಯವಂತನಲ್ಲ. ದನಕಾಯುವ ಬಡ ಹುಡುಗ. ಸ್ವಲ್ಪ ಮೊಸರನ್ನು ಕೊಡುತ್ತೇನೆ. ತೆಗೆದುಕೊಂಡು ಹೋಗು.
ಗೋಪಾಲ
ಆಗಲಿ, ನೀನೇನು ಕೊಡುವೆಯೋ, ಅದೇ ಸಾಕು.
ಬನದ ಗೋಪಾಲ
ಏನಾದರೂ ಪಾತ್ರೆ ತಂದಿದ್ದೀಯಾ?
ಗೋಪಾಲ
ಇಲ್ಲ,
ಬನದ ಗೋಪಾಲ
ನನ್ನ ಹತ್ತಿರ ಯಾವ ಲೋಹದ ಪಾತ್ರೆಯೂ ಇಲ್ಲ. ಕುಡಿಕೆಯಲ್ಲಿ ಕೊಟ್ಟರೆ ಆಗಬಹುದೆ?
ಗೋಪಾಲ
ಆಗಲಿ. ಅದಕ್ಕೇನು? ಮೊಸರು ಮಣ್ಣಿನ ಕುಡಿಕೆಯಲ್ಲಿದ್ದರೇನು, ಹೊನ್ನಿನ ಪಾತ್ರೆಯಲ್ಲಿದ್ದರೇನು?
ಬನದ ಗೋಪಾಲ
ಹಾಗಾದರೆ, ಇಲ್ಲಿಯೆ ನಿಂತಿರು. ಓಡಿಹೋಗಿ ತರುತ್ತೇನೆ.
(ಓಡಿಹೋಗಿ ತಂದು ಕೊಡುತ್ತಾನೆ.)
ಇನ್ನು ನೀನು ಹೋಗು.
(ಇಬ್ಬರೂ ಬೇರೆ ಬೇರೆ ಕಡೆ ಹೋಗುತ್ತಾರೆ.)
Leave A Comment