ದೇವರ ಪೆಪ್ಪರಮೆಂಟೇನಮ್ಮಾ

ಗಗನದೊಳಲೆಯುವ ಚಂದಿರನು? 
ಎಷ್ಟೇ ತಿಂದರು ಖರ್ಚೇ ಆಗದ
ಬೆಳೆಯುವ ಪೆಪ್ಪರಮೆಂಟಮ್ಮಾ!

ದಿನದಿನ ನೋಡುವೆ, ದಿನವೂ ಕರಗುತ
ಎರಡೇ ವಾರದೊಳಳಿಯುವುದು!
ಮತ್ತದು ದಿನದಿನ ಹೆಚ್ಚುತ ಬಂದು
ಎರಡೇ ವಾರದಿ ಬೆಳೆಯುವುದು!

ಅಕ್ಷಯವಾಗಿಹ ಪೆಪ್ಪರಮೆಂಟದು
ನನಗೂ ದೊರಕುವುದೇನಮ್ಮಾ?  –
ನೀನೂ ದೇವರ ಬಾಲಕನಾಗುಲು
ನಿನಗೂ ಕೊಡುವನು, ಕಂದಯ್ಯ!  –

ದೇವರ ಬಾಕನಾಗಲು ಒಲ್ಲೆ:
ಆತನ ಮೀರಿಹೆ ನೀನಮ್ಮಾ!
ತಾಯಿಯನಗಲಿಸಿ ದೇವರ ಹಿಡಿಸುವ
ಪೆಪ್ಪರಮೆಂಟೂ ಬೇಡಮ್ಮಾ!