ಮನೇ ಮನೇ ಮುದ್ದು ಮನೇ

ಮನೇ ಮನೇ ನನ್ನ ಮನೇ !

ಮೊದಲ ಮಿಂಚು ಹೊಳೆದ ಮನೆ,
ಮೊದಲ ಗುಡುಗು ಕೇಳ್ದ ಮನೆ:
ಮೊದಲ ಮಳೆಯು ಕರೆದು ಕರೆದು
ಹೆಂಚ ಮೇಲೆ ಸದ್ದು ಹರಿದು
ಮಾಡಿನಿಂದ ನೀರು ಸುರಿದು
ಬೆರಗನಿತ್ತ ನನ್ನ ಮನೆ !

ನಾನು ಬಾಳುತ್ತಿರುವ ಮನೆ,
ತಮ್ಮ ತಿಮ್ಮ  ಇರುವ ಮನೆ:
ತಂಗಿ ಬಂದು ಹೋಗುತಿರುವ
ಹಕ್ಕಿ ಬಳಗ ಹಾಡುತಿರುವ
ಕಾಡು ಮುತ್ತು ಕೊಡತಲಿರುವ
ಸೋಬಗುವೀಡು ನನ್ನ ಮನೆ !

ಹಳ್ಳಿ ರಂಗನಿರುವ ಮನೆ:
ಬಳ್ಳಿ ಸಿಂಗರಿಸುವ ಮನೆ;
ಬಾವಿಕಟ್ಟೆ ಬಳಿಯೊಳಂದು
ತಾಯಿತಂದೆ ಬಳಗ ಮಿಂದು
ನಿಲಲು ನೆಳಲ ನೀಡಿದೊಂದು
ತೆಂಗು ಇರುವ ನನ್ನ ಮನೆ !

ಹಿರಗ ಕೊಳಲ ನುಡಿದ ಮನೆ,
ಹಣ್ಣು ತಂದುಕೊಟ್ಟ ಮನೆ:
ತರುಗಳೆಲ್ಲ ‘ಅಂಬ’ ಎಂದು
ಕರುಗಳನ್ನು ಕರೆದು ಬಂದು
ಒಂದು ದಿನವು ಕಳೆಯಿತೆಂದು
ಎಚ್ಚರಿಸಿದ ನನ್ನ ಮನೆ!

ನಾನು ಬದುಕೊಳುಳಿವ ಮನೆ,
ನಾನು ಬಾಳಿಯಳಿವ ಮನೆ:
ನನ್ನದಲ್ಲದಿಳೆಯಳಿಂದು
ಹೆಂಮ್ಮೆಯಿಂದ ನನ್ನದೆಂದು
ಬೆಂದು ಬಳಲಿದಾಗ ಬಂದು
ನೀರು ಕುಡಿವ ನನ್ನ ಮನೆ!