ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ನಿರ್ದೇಶಕರಾದ ಶ್ರೀ ನಾಗೇಶ ಅವರನ್ನು ಭೆಟ್ಟಿಯಾದಾಗ ಇತಿಹಾಸ ಸಂಸ್ಕೃತಿಗಳಿಗೆ ಸಂಬಂಧಿಸಿದ ಮತು ಬಂತು. ಆಗ ರಶಿಯಾದಿಂದ ಕರ್ನಾಟಕಕ್ಕೆ ಬಂದು ಹೋಗದ್ದ ಪ್ರಪ್ರಥಮ ಪ್ರವಾಸಿ ಅಫನಾಸಿ ನಿಕಿತಿನ್‌ನ ಕುರಿತು ಹೇಳಿದೆ. ಈ ಬಗ್ಗೆ ಕರ್ನಾಟಕ ಸರಕಾರ ವಿಶೇಷವಾಗಿ ಇತಿಹಾಸ, ಸಂಸ್ಕೃತಿ ಇಲಾಖೆಗಳು, ವಿಶ್ವವಿದ್ಯಾಲಯಗಳು ಮಾಡಬೇಕಾದದ್ದು ಸಾಕಷ್ಟು ಇರುವದೆಂದು ಹೇಳಿದೆ. ಆಗ ಅವರು ಉಳಿದ ವಿಶ್ವವಿದ್ಯಾಲಯಗಳನ್ನು ಬಿಡಿರಿ. ಅಫನಾಸಿ ಕುರಿತು ಬರೆದು ಕೊಡಿರಿ. ಅದನ್ನು ನಮ್ಮ ಲಪ್ರಸಾರಾಂಗದಿಂದ ಪ್ರಕಟಿಸುತ್ತೇನೆಂದು ಭರವಸೆ ಕೊಟ್ಟರು. ಹೀಗಾಗಿ ಅಫನಾಸಿ ಕುರಿತು ಬರೆಯಲಾರಂಭಿಸಿದೆ. ಮೂರು ಸಮುದ್ರಗಳನ್ನು ದಾಟಿ ಬಂದ ಅಫನಾಸಿ ನಿಕಿತಿನ್‌ಎಂದು ಶ್ರೀ ನಾಗೇಶ ಅವರೆದುರು ಹೇಳಿದ್ದೆ. ಹೆಸರು ಬಹಳ ಉದ್ದವಾಯಿತೇನೋ. ಆಗಲೇ ಅವರು ‘ಅಫನಾಸಿ ಕಂಡ ಕರ್ನಾಟಕ’ ಎಂದು ಕರೆಯಬಹುದೆಂದರು. ನಾನು ಆಗಲೇ ಅವರ ಸಲಹೆಗೆ ಒಪ್ಪಿದೆ. ಒಂದು ಚಿಕ್ಕ ಪುಸ್ತಕದ ಮಿತಿಯಲ್ಲಿ ಹಲವು ವಿಷಯಗಳನ್ನು ಕ್ರೋಢೀಕರಿಸಿ ಕರಡುಪ್ರತಿಯನ್ನು ಸಿಸ್ಧಪಡಿಸಿ ಶ್ರೀ ನಾಗೇಶ ಅವರಿಗೆ ಒಪ್ಪಿಸಲು ನನಗೆ ತೀವ್ರ ಸಂತೋಷವಾಯಿತು. ವಿಶ್ವವಿದ್ಯಾಲಯದಿಂದ ಪುಸ್ತಕ ಪ್ರಕಟವಾದರೆ ಸರಕಾರ, ಸಂಸ್ಕೃತಿ ಇಲಾಖೆ, ದೂರವಾಣಿ ಕೇಂದ್ರ, ಕನ್ನಡ ವಿಶ್ವವಿದ್ಯಾಲಯಗಳು ಕಣ್ದೆರೆದು ಇತಿಹಾಸ, ಸಂಸ್ಕೃತಿಯನ್ನು ಹಿಡಿದಿಡಲು ಗಮನ ಹರಿಸುವವೆಂದು ಭಾವಿಸಿದ್ದೇನೆ. ನಾನು ಎರಡು ಸಲ ರಶಿಯಾ ದೇಶಕ್ಕೆ ಹೋದಾಗ ಅಫನಾಸಿಯ ಭವ್ಯ ಪ್ರತಿಮೆ ಹಾಗೂ ಅವನ ಕುರಿತು ಒಂದು ಸಾಕ್ಷಿಚಿತ್ರವನ್ನು ನೋಡಿ ಬಂದದ್ದುಂಟು. ಅಫನಾಸಿ ಹಲವು ತಿಂಗಳು ಕರ್ನಾಟದಲ್ಲಿಯೇ ಇದ್ದ ಬಹುಮನಿ ರಾಜ್ಯದ ಸಂದರ್ಭದಲ್ಲಿ. ಅಫನಾಸಿ ಪುಸ್ತಕ ಬರೆಯಲು ನನ್ನನ್ನು ಪ್ರೇರೇಪಿಸಿದ ಪ್ರಸಾರಾಂಗದ ನಿರ್ದೇಶಕರಿಗೆ ನಾಣು ಕೃತಜ್ಞನಾಗಿದ್ದೇನೆ.

ಬುದ್ದಣ್ಣ ಹಿಂಗಮಿರೆ
ಧಾರವಾಡ                                   

 

 

 

ಅಫನಾಸಿ ನಿಕಿತೆನ್