ನನ್ನ ಸುತ್ತಲಿನವರು
ಮತ್ತೆ ಹತ್ತಿರದವರು
ಇವರಿಗೇ ನಾನು ಆಡುವ ಮಾತು
ಕೇಳುವುದಿಲ್ಲ,
ಕೇಳಿದರೂ ತಿಳಿಯುವುದಿಲ್ಲ,
ತಿಳಿದರೂ ಅವರು ತಿಳಕೊಂಡದ್ದು
ನಾನು ಹೇಳಿದ್ದಲ್ಲ
ಹೀಗಿದೆ ಪರಿಸ್ಥಿತಿ !

ಇನ್ನು ಬೇರೆಯವರೆದುರು
ನಾನು ಮಾತಾಡಿದರೆ
ತಿಳಿದೀತೆ ಹೇಳಿ ?