ಪಲ್ಲವಿ : ನನ್ನ ಹೃದಯ ಬಡಿತ ಶಬ್ದಕೆ
ಕೊಳಲನೂದುತಿಹನು ಕೃಷ್ಣಾ
ಕಣ್ಣ ಮುಚ್ಚಿ ತೆರೆದೆ ನಾನು
ವಿಶ್ವರೂಪ ಕಂಡೆನು

ಚರಣ :  ಎಚ್ಚರದಲ್ಲಿ ನೀನೇ ಕೃಷ್ಣ
ನಿದ್ದೆಯಲ್ಲೂ ನೀನೇ ಕೃಷ್ಣ
ಹಗಲಿರುಳು ನಿನ್ನ ನಾಮ
ಬಿಟ್ಟರೆ ಗತಿ – ಇಲ್ಲ ಕೃಷ್ಣ  

ಎಷ್ಟು ಜನುಮ ಬಂದರೇನು
ಕಷ್ಟವಿಲ್ಲ ನನಗೆ ಕೃಷ್ಣಾ
ನಿನ್ನ ಭಜನೆ ಮಾಡುವೆನು
ನಿಶ್ಚಲನಾಗಿ ಇರುವೆನು

ತಂದೆ ತಾಯಿ ನೀನೇ ಎಂದೆ
ಬಂಧು ಬಳಗ ನೀನೇ ಎಲ್ಲಾ
ಹಿಂದೆ ಮುಂದೆ ನೀನೇ ಅಂದೆ
ಸಂದೇಹವೇ ಇಲ್ಲ ಕೃಷ್ಣಾ

ಎಲ್ಲದರಲ್ಲೂ ನಿನ್ನ ಕಂಡೆ
ಆಗು-ಹೋಗು ಗತಿಯು ನೀನೇ
ಎಂದೂ ನಿನ್ನ ಪಾದ ಬಿಡೆನು
ನನ್ನ ರಕ್ಷಣೆ ನಿನ್ನ ಭಾರ

ಎಷ್ಟು ಹೇಳಿದರೊಂದೇ ಶಬ್ದ
ನಿನ್ನ ನಾಮ ಒಂದೇ ನನಗೆ
ಜಯವು ಜಯವು ನಿನದಂದೆ
ಎಂದೆಂದಿಗೂ ನೀನೇ ಅಂದೆ