ನನ್ನ ಕೆಲಸದ ಬಗೆಗೆ ಪ್ರೀತಿಯಿಟ್ಟು ಕೃತಿಯನ್ನು ಹೊರತರಲು ಪ್ರೋತ್ಸಾಹಿಸಿದ ಮಾನ್ಯ  ಕುಲಪತಿಯವರಾದ ಪ್ರೊ. ಎ. ಮುರಿಗೆಪ್ಪ ಅವರನ್ನು   ಮಾನ್ಯ  ಕುಲಸಚಿವರಾದ  ಪ್ರೊ. ಮಂಜುನಾಥ ಬೇವಿನಕಟ್ಟಿ ಅವರನ್ನು  ಪ್ರೀತಿಯಿಂದ ನೆನೆಯುತ್ತೇನೆ.

ಈ ಕೆಲಸದ ಬಗೆಗೆ ಪ್ರೊ. ಕೆ. ವಿ. ನಾರಾಯಣ ಅವರೊಂದಿಗೆ ಮೊದಲೇ ಚರ್ಚಿಸಿದ್ದೆ ಆಗ ಸಂಗ್ರಹಿಸಿದ್ದ ಅಲ್ಪಮಾಹಿತಿಯನ್ನು ಗಮನಿಸಿ ಮುಂದುವರೆಯುವಂತೆ ಸೂಚಿಸಿದ್ದರು, ಅವರನ್ನು ಮತ್ತು ಅಧ್ಯಯನ ಮಂಡಳಿ ಸದಸ್ಯರೂ ಗುರುಗಳೂ ಆದ ಡಾ. ಸೋಮಶೇಖರ್ ಗೌಡ ಮತ್ತು ಮತ್ತೊಬ್ಬ ಅಧ್ಯಯನ ಮಂಡಳಿ ಸದಸ್ಯರಾದ ಪ್ರೊ, ವ್ಹಿ. ಜಿ. ಪೂಜಾರ್ ಆವರೂ ಮಾಹಿತಿಯನ್ನು ನೋಡಿ ಸಲಹೆ ಸೂಚನೆಗಳನ್ನು ನೀಡಿದ್ದರು, ಈ ಎಲ್ಲಾ ಮಹನೀಯರನ್ನು ಪ್ರೀತಿಯಿಂದ ನೆನೆಯುತ್ತೇನೆ.

ಮಾಹಿತಿ ಸಂಗ್ರಹಿಸಲು ನೆರವಾದ ವಿಭಾಗದ ಸಹೋದ್ಯೋಗಿ ಮಿತ್ರರಾದ ಡಾ. ಅಶೋಕ ರಂಜೇರೆ, ಡಾ. ಪಿ . ಮಹಾದೇವಯ್ಯ. ಡಾ. ಸಾಂಬಮೂರ್ತಿ, ಗೆಳೆಯರಾದ ಡಾ. ಶಿವನಾಂದ ವಿರಕ್ತಮಠ, ಡಾ. ಎಸ್. ಎಸ್. ಅಂಗಡಿ, ಡಾ. ಸ. ಚಿ. ರಮೇಶ, ಡಾ. ಸುಬ್ಬಣ್ಣ ರೈ, ಡಾ. ಎಚ್. ಡಿ. ಪ್ರಶಾಂತ್ ಮತ್ತು ಶ್ರೀ ಗುರುಮೂರ್ತಿ, ಶ್ರೀ ಮಾರಯ್ಯ ಇವರನ್ನು ಪ್ರೀತಿಯಿಂದ   ನೆನೆಯುತ್ತೇನೆ. ಸಂಶೋಧನಾ ವಿದ್ಯಾರ್ಥಿಗಳಾದ ಡಾ. ಶೇಖರಾಚಾರಿ ಕೆ. ತುಂಬಾ ನೆರವಾಗಿದ್ದಾರೆ ಇವರನ್ನು ಹಾಗೂ ನಾಗಾರಾಜ ಚಿಂತ್ರಪಳ್ಳಿ ಮತ್ತು ಎನ್. ಎಸ್. ವೀರೇಶ್ ಅವರನ್ನು , ಜಾನಪದ ವಿಭಾಗದ ಡಾ. ಚಂದ್ರಪ್ಪ, ಶ್ರೀ ಸುರೇಶ್, ಎಂ. ಫಿಲ್ ವಿದ್ಯಾರ್ಥಿಗಳಾದ ಶ್ರೀ ಹನುಮಂತ, ಶ್ರೀ ಆಜಪ್ಪಬಾಬು ಇವರನ್ನು ಎಂ. ಎ. ಪಿಎಚ್.ಡಿ.  ವಿದ್ಯಾರ್ಥಿಗಳಾದ  ಕುಮಾರ ಸ್ವಾಮಿ, ನಾಗರಾಜ, ಮಂಜುನಾಥ, ಸುರೇಶ್ ಇವರೆಲ್ಲರನ್ನು ಪ್ರೀತಿಯಿಂದ  ನೆನೆಯುತ್ತೇನೆ.

ಪುಸ್ತಕಗಳನ್ನು ನೀಡಿ ಸಹಕರಿಸಿದ ಡಾ. ಎಚ್. ನಾಗವೇಣಿ ತಾಂತ್ರಿಕವಾಗಿ ನೆರವು ನೀಡಿದ ಶ್ರೀ ಭರತ ಕಳಾಸಾಪುರ ಶ್ರೀ ಜಿ. ಶಿವಕುಮಾರ್. ಬಸವರಾಜು ಇವರನ್ನು  ಪ್ರೀತಿಯಿಂದ ನೆನೆಯುತ್ತೇನೆ. ಪ್ರಸರಾಂಗದ ಮಿತ್ರರಾದ ಶ್ರೀ ಬಿ. ಸುಜ್ಞಾನಮೂರ್ತಿ, ಶ್ರೀ ಎಚ್. ಬಿ. ರವೀಂದ್ರ, ಕೆ. ಎಲ್. ರಾಜಶೇಖರ್. ಶ್ರೀ ಕೆ. ಕೆ. ಮಕಾಳಿಯವರನ್ನು ಈ ಕೃತಿಯ ಮಾಹಿತಿಗಾಗಿ ಬಳಸಿರುವ ಲೇಖನ, ಗ್ರಂಥಗಳ ಕರ್ತೃಗಳನ್ನು ಅಕ್ಷರ ಸಂಯೋಜಿಸಿದ ಮತ್ತು ಆಟಗಳ ಬಗೆಗೆ ಮಾಹಿತಿ ನೀಡಿದ ಶ್ರೀ ಎಚ್. ಶರಣಬಸಪ್ಪ ಇವರೆಲ್ಲರನ್ನು  ಪ್ರೀತಿಯಿಂದ  ನೆನೆಯುತ್ತೇನೆ.