ಆಹಾರವಿಲ್ಲದೆ ಮನುಷ್ಯನು ಬದುಕುವುದು ಅಸಾಧ್ಯ. ಆಹಾರದಿಂದ ಲಭಿಸುವ ಇಂಧನವಿಲ್ಲದೆ ದೇಹದ ಜೀವಕೋಶಗಳು ತಮ್ಮ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾರವು. ಆದ್ದರಿಂದ ದೇಹದ ನಾನಾ ಕ್ರಿಯೆಗಳನ್ನು ಸರಿದೂಗಿಸಲು, ದೇಹದ ಅವಶ್ಯಕತೆಗೆ ಅನುಗುಣವಾಗಿ ಶರ್ಕರ ಪಿಷ್ಟ, ಸಸಾರಜನಕ, ಕೊಬ್ಬು, ಖನಿಜಗಳು ಮತ್ತು ಜೀವಸತ್ವಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕಾಗುವುದು.

ಸಮತೂಕ ಆಹಾರವನ್ನು ಸೇವಿಸದಿದ್ದರೆ, ಆಹಾರದಲ್ಲಿ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲದೆ, ಅಪೌಷ್ಟಿಕತೆಯಿಂದ ಉಂಟಾಗುವ ರೋಗಗಳ ಜೊತೆಗೆ ರೋಗ ನಿರೋಧಕ ಶಕ್ತಿಯು ಕುಗ್ಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಅಪಾಯ ಉಂಟಾಗಬಹುದು. ಆದುದರಿಂದ ಸಮತೋಲನ ಆಹಾರದ ಸೇವನೆ ಅತ್ಯಾವಶ್ಯಕ. ಆಹಾರವನ್ನು ಐದು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಅವುಗಳ ವರ್ಗೀಕರಣಗಳನ್ನು ಕೆಳಗೆ ವಿವರಿಸಲಾಗಿದೆ.

ಆಹಾರದ ಐದು ಗುಂಪುಗಳು

೧. ಧಾನ್ಯಗಳ ಗುಂಪು

೨. ಬೆಳವಣಿಗೆಗೆ ಸಹಾಯಕವಾಗುವ ಆಹಾರಗಳ ಗುಂಪು: ಬೇಳೆಕಾಳುಗಳು, ಹಾಲು, ಮೊಟ್ಟೆ, ಮಾಂಸ ಮತ್ತು ಮೀನು.

೩. ಸಂರಕ್ಷಕ ಆಹಾರಗಳಾದ ತರಕಾರಿ ಮತ್ತು ಹಣ್ಣುಗಳ ಗುಂಪು
ಅ. ಸೊಪ್ಪು, ಹಳದಿ ಬಣ್ಣದ ತರಕಾರಿ ಮತ್ತು ಹಣ್ಣುಗಳು
ಆ. ನೆಲ್ಲಿಕಾಯಿ, ಸೀಬೆಹಣ್ಣು- ಜಂಬೀರ ಜಾತೀಯ ಹಣ್ಣಗಳು

೪. ಇತರ ತರಕಾರಿ ಮತ್ತು ಹಣ್ಣುಗಳ ಗುಂಪು.

೫. ಎಣ್ಣೆ,ಕೊಬ್ಬು ಮತ್ತು ಸಕ್ಕರೆಯನ್ನೊಳಗೊಂಡ ಗುಂಪು.

ಪ್ರತಿ ಗುಂಪಿನಿಂದ ದಿನಕ್ಕೆ ಎಷ್ಟು ಆಹರವನ್ನು ಸೇವಿಸಬೇಕು ಎಂಬ ಮಾಹಿತಿಯನ್ನು ಕೋಷಕ ೧ರಲ್ಲಿ ಕೊಟ್ಟಿದೆ. ಪ್ರತಿ ದಿನ ಐದು ಗುಂಪಿಗೂ ಸೇರಿರುವಂತಹ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ನಮ್ಮ ದೇಹಕ್ಕೆ ಸಮತೂಕ ಆಹಾರ ಲಭಿಸುತ್ತದೆ.

ಆಹಾರದ ಐದು ಗುಂಪುಗಳಲ್ಲಿ ಬರುವ ವಿವಿಧ ಆಹಾರಗಳು ಮತ್ತು ಅವುಗಳಿಂದ ಸಿಗುವ ಪೋಷಕಾಂಷಕಾಂಶಗಳು ಹಾಗೂ ಅವುಗಳ ಪ್ರಮಾಣಗಳೊಂದಿಗೆ ಪ್ರತಿದಿನ ಸೇವಿಸಬೇಕಾದ ವಿವರಗಳನ್ನು ಕೆಳಗೆ ಕೊಡಲಾಗಿದೆ.

. ಧಾನ್ಯ ಮತ್ತು ಕಾಳುಗಳು

ಈ ಗುಂಪಿನ ಆಹಾರಗಳು ಶರ್ಕರಪಿಷ್ಟ ಮತ್ತು ಸಸಾರಜನಕದ ಜೊತೆಗೆ ಥಯಾಮಿನ್ ಎನ್ನುವ ಬಿ ಗುಂಪಿನ ಜೀವಸತ್ವವನ್ನು ಒದಗಿಸುತ್ತವೆ.

೨೫ಗ್ರಾಂ ನಿಂದ ತಯಾರಿಸಲ್ಪಟ್ಟ ಯಾವುದೇ ಆಹಾರ ವಸ್ತುವನ್ನು ಒಂದು ಅಳತೆ ಎಂದು ತೆಗೆದುಕೊಂಡರೆ ಕನಷ್ಟ ೬ ಅಳತೆಯ ಆಹಾರವನ್ನು ಈ ಗುಂಪಿನಿಂದ ಪ್ರತಿದಿನ ಸೇವಿಸಬೇಕು. ಉದಾಹರಣೆಗೆ: ಅರ್ಧಬಟ್ಟಲು (ಕಟೋರಿ) ಅನ್ನ, ಒಂದು ಚಪಾತಿ ಅಥವಾ ರೊಟ್ಟಿ, ಎರಡು ಪೂರಿಗಳು.

. ಬೆಳವಣಿಗೆಗೆ ಸಹಾಯಕವಾಗುವ ಆಹಾರಗಳ ಗುಂಪು

ಈ ಗುಂಪಿನ ಆಹಾರಗಳು ದೇಹಕ್ಕೆ ಬೇಕಾಗುವ ಸಸಾರಜನಕ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಜೀವಸತ್ವ ಬಿ ಯನ್ನು ಒದಗಿಸುತ್ತವೆ. ಹಾಲಿನಲ್ಲಿ ಸುಣ್ಣದಂಶ ಹಾಗೂ ಮೊಟ್ಟೆ ಮತ್ತು ಯಕೃತ್ತಿನಲ್ಲಿ ಕಬ್ಬಿಣಾಂಶ ಅಧಿಕವಾಗಿ ಇರುತ್ತವೆ. ಈ ಗುಂಪಿನಿಂದ ಸೇವಿಸಿದ ಒಂದು ಅಳತೆಯ ಆಹಾರ ೫-೬ ಗ್ರಾಂ ಸಸಾರಜನಕವನ್ನು ಒದಗಿಸುತ್ತದೆ.

. ಬೆಳವಣಿಗೆಗೆ ಸಹಾಯಕವಾಗುವ ಆಹಾರಗಳ ಗುಂಪು

೧) ಈ ಗುಂಪಿನಲ್ಲಿ ಜೀವಸತ್ವ ಎ ಹೆಚ್ಚಾಗಿರುತ್ತದೆ. ಎಲ್ಲಾ ತರಹದ ಸೊಪ್ಪುಗಳು, ಎಲೆಕೋಸು, ಈರುಳ್ಳಿ ಸೊಪ್ಪು, ಗಜ್ಜರಿ, ಸಿಹಿಕುಂಬಳಕಾಯಿ, ಕಿತ್ತಳೆಹಣ್ಣು, ಮಾವಿನಹಣ್ಣು, ಪಪಾಯ ಈ ಗುಂಪಿನಲ್ಲಿ ಬರುತ್ತವೆ.

ಒಂದು ಅಳತೆ ಅಂದರೆ ಅರ್ಧ ಕಟೋರಿ ಅಥವಾ ೫೦-೭೫ಗ್ರಾಂ ಬೇಯಿಸಿದ ಸೊಪ್ಪು ಅಥವಾ ತರಕಾರಿ ಅಥವಾ ಒಂದು ಹಣ್ಣಿನ ಸೇವನೆಯಿಂದ ಅರ್ಧ ದಿನದ ಜೀವಸತ್ವ ಎ ನ ಅವಶ್ಯಕತೆಯನ್ನು ಭರಿಸಬಹುದು.

೨) ನೆಲ್ಲಿಕಾಯಿ, ನಿಂಬೆ, ಸೀಬೆಕಾಯಿ, ನುಗ್ಗೆ, ಕೆತ್ತಲೆ, ದ್ರಾಕ್ಷಿ, ಟೊಮೆಟೊ ಮುಂತಾದ ಹಣ್ಣುಗಳಲ್ಲಿ ಸಿ ಅಂಶ ಹೆಚ್ಚಾಗಿರುತ್ತದೆ. ಈ ಗುಂಪಿನಿಂದ ಪ್ರತಿದಿನ ಅರ್ಧ ಕಟೋರಿ ಅಥವಾ ೫೦-೭೫ ಗ್ರಾಂ ಹಣ್ಣು ಮತ್ತು ತರಕಾರಿಯನ್ನು ಸೇವಿಸಲೇಬೇಕು.

. ಇತರ ತರಕಾರಿ ಮತ್ತು ಹಣ್ಣುಗಳ ಗುಂಪು

ಈ ಗುಂಪಿನಲ್ಲಿ ಬದನೆ, ಸೌತೆಕಾಯಿ, ಕುಂಬಳಕಾಯಿ, ಬೆಂಡೆಕಾಯಿ, ಸೋರೆಕಾಯಿ, ಬೂದುಗುಂಬಳ, ಬೀನ್ಸ್, ಬಟಾಣಿ, ಮೂಲಂಗಿ, ಬೀಟ್‌ರೂಟ್‌, ಆಲೂಗಡ್ಡೆ, ಸುವರ್ಣಗಡ್ಡೆ, ಮುಂತಾದ ತರಕಾರಿಗಳು ಹಾಗೂ ಬಾಳೆ, ಸೇಬು, ಕಲ್ಲಂಗಡಿ, ಕರ್ಬೂಜ ಮುಂತಾದ ಹಣ್ಣುಗಳು ಬರತ್ತವೆ.

ಅರ್ಧ ಕಟೋರಿ ಅಥವಾ ೫೦-೭೫ ಗ್ರಾಂ ಅನ್ನು ಒಂದು ಅಳತೆಯೆಂದರೆ ಪ್ರತಿದಿನ ೨ ಅಥವಾ ಹೆಚ್ಚು ಅಳತೆಯ ಆಹಾರವನ್ನು ಈ ಗುಂಪಿನಿಂದ ಸೇವಿಸಬೇಕು.

. ಸಕ್ಕರೆ ಅಥವಾ ಬೆಲ್ಲ ಹಾಗೂ ಕೊಬ್ಬು ಅಥವಾ ಎಣ್ಣೆ

ಈ ಗುಂಪಿನ ಆಹಾರಗಳಿಂದ ದೇಹಕ್ಕೆ ಮುಖ್ಯವಾಗಿ ಕ್ಯಾಲೋರಿ ಶಕ್ತಿ ಲಭಿಸುತ್ತದೆ. ದಿನಕ್ಕೆ ೨೫ ಗ್ರಾಂ ಸಕ್ಕರೆ ಅಥವಾ ಬೆಲ್ಲ ಮತ್ತು ೨೫ ಗ್ರಾಂ ಎಣ್ಣೆ ಅಥವಾ ಕೊಬ್ಬು ಬೇಕಾಗುತ್ತದೆ.

ಎಣ್ಣೆ ಮತ್ತು ಕೊಬ್ಬಿನಿಂದ ಜೀವಸತ್ವ ಎ,ಡಿ,ಇ, ಮತ್ತು ಕೆ ಗಳೂ ಲಭಿಸುವುದಲ್ಲದೆ ಇವು ಆಹಾರಕ್ಕೆ ಸ್ವಾದವನ್ನು ಕೊಡುತ್ತವೆ. ಆದ್ದರಿಂದ ಎಣ್ಣೆ ಅಥವಾ ಕೊಬ್ಬನ್ನು ದಿನನಿತ್ಯ ಉಪಯೋಗಿಸಬೇಕು.

ಕೋಷ್ಟಕ. ದೈನಿಕಆಹಾರದಮಾರ್ಗಸೂಚಿ

ಆಹಾರದ ಗುಂಪುಗಳು ಆಹಾರ ಪದಾರ್ಥಗಳು ಒಂದು ಅಳತೆಯ ಆಹಾರ ಸೇವಿಸಬೇಕಾದ ಪ್ರಮಾಣ
೧. ಧಾನ್ಯ ಕಾಳುಗಳು ಜೋಳ, ಅಕ್ಕಿ, ಗೋಧಿ, ರಾಗಿ ೧ ಅಳತೆ ೩೦ಗ್ರಾಂ:ಅರ್ಧ ಕಟೋರಿ ಅನ್ನ/ಒಂದು ಚಪಾತಿ/ಒಂದು ಸ್ಲೈಸ್ ಬ್ರೆಡ್/೨ ಪೂರಿ ೬-೧೨ ಅಳತೆ
೨. ಬೆಳವಣಿಗೆಗೆ ಬೇಕಾಗುವ ಆಹಾರಗಳ ಗುಂಪು ಬೇಳೆಕಾಳುಗಳು ೧ ಅಳತೆ ೨೫ ಗ್ರಾಂ:ಒಂದು ಚಿಕ್ಕ ಕಟೋರಿ ಬೇಳೆಯ ಸಾರು/ಒಂದು ಲೋಟ ಕಾಳಿನ ಪಲ್ಯ ೩-೬ ಅಳತೆ
ಹಾಲು ೧ ಅಳತೆ ೧೫೦ ಗ್ರಾಂ:ಒಂದು ಲೋಟ ಹಾಲು ಅಥವಾ ಮೊಸರು ೨ ಅಳತೆ
ಮೊಟ್ಟೆ, ಮೀನು, ಕೋಳಿ ಹಾಗೂ ಕುರಿ ಮಾಂಸ ೧ ಅಳತೆ ಒಂದು ಮೊಟ್ಟೆ/೩೦ ಗ್ರಾಂ ಮಾಂಸ/ಒಂದು ಸಾಮಾನ್ಯ ಅಳತೆಯ ಮೀನು ಅಥವಾ ಒಂದು ಮಾಂಸದ ತುಂಡು ೧ ಅಳತೆ
೩. ಸಂರಕ್ಷಕ ಆಹಾರಗಳು ಸೊಪ್ಪು ಮತ್ತು ಹಳದಿ ಬಣ್ಣದ ತರಕಾರಿಗಳು ೧ ಅಳತೆ ೫೦-೭೫ ಗ್ರಾಂ:ಅರ್ಧ ಕಟೋರಿ ಬೇಯಿಸಿದ ಸೊಪ್ಪು/ಒಂದು ಹಣ್ಣು ೧ ಅಳತೆಗಿಂತ ಹೆಚ್ಚು
ಜೀವಸತ್ವ ಸಿ ಭರಿತ ತರಕಾರಿ, ಪಪಾಯ/ಒಂದು ಚಿಕ್ಕ ಮೂಸಂಬಿ ಕಿತ್ತಳೆ, ಟೊಮೆಟೋ ಮುಂತಾದವು ೧ ಅಳತೆ ೫೦-೭೫ ಗ್ರಾಂ:೧-೨ ತುಂಡು ೧ ಅಳತೆಗಿಂತ ಹೆಚ್ಚು
೪. ಇತರ ತರಕಾರಿಗಳು ಬೆಂಡೆಕಾಯಿ, ಬದನೆ, ಹೀರೇಕಾಯಿ ಮುಂತಾದವು ೧ ಅಳತೆ ೫೦-೭೫ ಗ್ರಾಂ:ಅರ್ಧ ಕಟೋರಿ ಯಾವುದೇ ತರಕಾರಿಯ ಪಲ್ಯ ಅಥವಾ ಒಂದು ಹಣ್ಣು ೨ ಅಥವಾ ಹೆಚ್ಚು
೫. ಶಕ್ತಿಯನ್ನು ನೀಡುವ ಆಹಾರಗಳು ಎಣ್ಣೆ ಅಥವಾ ಕೊಬ್ಬು ೧ ಅಳತೆ ೨೫ ಗ್ರಾಂ ೧-೨ ಅಳತೆ
ಬೆಲ್ಲ ಅಥವಾ ಸಕ್ಕರೆ ೧ ಅಳತೆ ೨೫ ಗ್ರಾಂ