ಶರೀರಕ್ಕೆ ಪೋಷಕಾಂಶಗಳು ನಿರಂತರವಾಗಿ ಬೇಕಾಗುತ್ತವೆ. ಆರೋಗ್ಯದ ನಿರ್ವಹಣೆಗೆ ಈ ಪೋಷಕಾಂಶಗಳು ಬಳಕೆಯಾಗುತ್ತವೆ. ದೈಹಿಕ ನಿರ್ವಹಣೆ ಸರಿಯಾಗಿ ಆಗಬೇಕೆಂದರೆ, ಪೋಷಕಾಂಶಗಳನ್ನು ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಒದಗಿಸಬೇಕು. ಆದ್ದರಿಂದ ದಿನನಿತ್ಯ ಸಮತೋಲನ ಆಹಾರದ ಸೇವನೆ ಅತ್ಯಗತ್ಯ.

ದೇಹದ ಬೆಳವಣೆಗೆ, ನಿರ್ವಹಣೆ ಮತ್ತು ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಸಾಕಷ್ಟು ಅಥವಾ ಸರಿಯಾದ ಪ್ರಮಾಣದಲ್ಲಿ ಹೊಂದಿರುವಂತಹ ಆಹಾರವೇ ಸಮತೋಲನ ಆಹಾರ.

ಕೋಷ್ಟಕ. ಪುರುಷರುಮತ್ತುಮಹಿಳೆಯಲ್ಲಿರಬೇಕಾದಎತ್ತರಕ್ಕೆತಕ್ಕತೂಕ

ಎತ್ತರ (ಸೆಂ.ಮೀ) ಪುರುಷರು (ತೂಕ ಕಿ.ಗ್ರಾಂ) ಮಹಿಳೆಯರು ತೂಕ (ಕಿ.ಗ್ರಾಂ)
೧೪೮ ೪೭.೫ ೪೬.೫
೧೫೨ ೪೯.೦ ೪೮.೫
೧೫೬ ೫೧.೫ ೫೦.೫
೧೬೦ ೫೩.೫ ೫೨.೫
೧೬೪ ೫೬.೦ ೫೫.೦
೧೬೮ ೫೯.೦ ೫೮.೦
೧೭೨ ೬೨.೦ ೬೦.೫
೧೭೬ ೬೫.೫ ೬೪.೦
೧೮೦ ೬೮.೫ ೭೬.೦
೧೮೪ ೭೨.೦ ೭೦.೫
೧೮೮ ೭೫.೫ ೭೪.೦
೧೯೦ ೭೭.೫

ಆಧಾರ: ಭಾರತೀಯ ಜೀವವಿಮಾ ನಿಗಮದ ಕೈಪಿಡಿ

ಸಮತೋಲನ ಆಹಾರದ ಅವಶ್ಯಕತೆಯು ವ್ಯಕ್ತಿಯ ವಯಸ್ಸು, ಲಿಂಗ, ನಿರ್ವಹಿಸುವ ಕಾರ್ಯಗಳು ಮುಂತಾದವುಗಳಿಗೆ ಅನುಗುಣವಾಗಿರಬೇಕು. ಶ್ರಮಜೀವಿಗಳು ಅಗತ್ಯವಿರುವ ಹೆಚ್ಚು ಶಕ್ತಿಗಾಗಿ ಸಮತೋಲನ ಆಹಾರದಲ್ಲಿ ಅಧಿಕ ಪ್ರಮಾಣದ ಧಾನ್ಯಗಳು ಹಾಗೂ ಎಣ್ಣೆ ಪದಾರ್ಥಗಳನ್ನು ಸೇವಿಸಬೇಕು.

ಸಮತೋಲನ ಆಹಾರದ ಅವಶ್ಯಕತೆ

ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿದ್ದಲ್ಲಿ ಅವರು ಸುಲಭವಾಗಿ ಮಾರಕ ರೋಗಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಇವರಿಗೆ ಸಮತೋಲನ ಆಹಾರದ ಅವಶ್ಯಕತೆ ಹೆಚ್ಚು. ಗರ್ಭಿಣಿ ಮತ್ತು ಬಾಣಂತಿಯರು ತಮ್ಮ ಆಹಾರದಲ್ಲಿ ಧಾನ್ಯ, ಬೇಳೆಕಾಳುಗಳು, ಹಸಿರುಸೊಪ್ಪು ತರಕಾರಿ, ಜಂಬೀರ ಜಾತಿಯ ಹಣ್ಣುಗಳು, ಹಾಲು ಮತ್ತು ಹಾಲಿನ ಪದಾರ್ಥಗಳನ್ನು ಹೆಚ್ಚಾಗಿ ಉಪಯೋಗಿಸುವುದು ಅತ್ಯಗತ್ಯ. ಚಿಕ್ಕ ಮಕ್ಕಳ ಬೆಳವಣಿಗೆ ಶೀಘ್ರವಾಗಿರುವುದರಿಂದ ಮಕ್ಕಳಿಗೆ ಬೇಕಾದ ಸಸಾರಜನಕವು ಹೆಚ್ಚು ಇರುವ ದ್ವಿದಳಧಾನ್ಯಗಳು ಅದರ ಆಹಾರದಲ್ಲಿ ಹೆಚ್ಚು ಪ್ರಮಾಣದಲ್ಲಿ ಸೇರಿಸಬೇಕು.

ಕೋಷ್ಟಕ: ವಯಸ್ಸಿಗನುಗುಣವಾಗಿಇರಬೇಕಾದದೈಹಿಕತೂಕ (ಕಿ.ಗ್ರಾಂ)

  ವಯಸ್ಸು(ವರ್ಷಗಳು) ಗಂಡು ಹೆಣ್ಣು
ಶಿಶುಗಳು ೦-೧/೨ ೫.೪೦ ೫.೪೦
೧/೨-೧ ೮.೬೦ ೮.೬೦
ಮಕ್ಕಳು ೧-೩ ೧೨.೬೧ ೧೧.೮೧
೪-೬ ೧೯.೨೦ ೧೮.೬೯
೭-೯ ೨೭.೦೦ ೨೬.೭೫
೧೦-೧೨ ೩೫.೫೪ ೩೭.೯೧
ತರುಣರು ೧೩-೧೫ ೪೭.೮೮ ೪೬.೬೬
  ೧೬-೧೮ ೫೭.೨೮ ೪೯.೯೨
ಪ್ರೌಢರು ೨೦-೫೦ ೬೦.೦೦ ೫೦.೦೦

ಆಧಾರ: ನ್ಯೂಟ್ರಿಯೆಂಟ್ ರಿಕ್ವೈರ್ಮೆಂಟ್ ಅಂಡ್ ರೆಕಮೆಂಡಡ್ ಡಯಟರಿ ಅಲೋಯನ್ಸ್ ಫಾರ್ ಇಂಡಿಯನ್ಸ್ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ – ೧೯೮೯.

ಆಹಾರದ ಐದು ಗುಂಪಿನಲ್ಲಿ ಪ್ರತಿ ಗುಂಪಿಗೆ ಸೇರಿದ ಯಾವುದೇ ಒಂದೆರಡು ಆಹಾರ ಪದಾರ್ಥಗಳನ್ನು ದಿನನಿತ್ಯದ ಆಹಾರದಲ್ಲಿ ಉಪಯೋಗಿಸುವುದರಿಂದ ಸಮತೋಲನ ಆಹಾರವನ್ನು ಪಡೆಯಬಹುದು. ಪೌಷ್ಟಿಕ ಆಹಾರಗಳ ಬಗ್ಗೆ ತಿಳಿದುಕೊಂಡು ಸ್ಥಳೀಯವಾಗಿ ದೊರೆಯುವ ಪದಾರ್ಥಗಳನ್ನು ಜಾಣ್ಮೆಯಿಂದ ಉಪಯೋಗಿಸಿದಾಗ ಉತ್ತಮ ಆಹಾರವನ್ನು ಪಡೆಯಲು ಅನುಕೂಲವಾಗುವುದಲ್ಲದೆ. ಇರುವ ಆದಾಯದಲ್ಲೇ ಸಮತೋಲನ ಆಹಾರವನ್ನು ಪಡೆಯಲು ಅನುವು ಮಾಡಿಕೊಳ್ಳಬಹುದು.

ಸಮತೋಲನ ಆಹಾರದ ನಿರ್ವಹಣೆ

 ವಯಸ್ಸು ಹಾಗೂ ದೈಹಿಕ ಪರಿಸ್ಥಿತಿಗೆ ಅನುಗುಣವಾಗಿ, ಜೀವತಕಾಲಾವಸ್ಥೆಯನ್ನು ಹಲವು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವಿತ ಕಾಲದಲ್ಲಿ ಈ ಗುಂಪುಗಳ ಮೂಲಕ ಹಾದು ಹೋಗಬೇಕು. ಆಯಾ ದೈಹಿಕಾವಸ್ಥೆಗೆ ಅನುಗುಣವಾಗಿ ಮನುಷ್ಯನ ಚಟುವಟಿಕೆ, ಕಾರ್ಯಗಳು ಹಾಗೂ ದೇಹದ ಅವಶ್ಯಕತೆಗಳು ಬದಲಾಗುತ್ತವೆ. ಆದ್ದರಿಂದ ದೈಹಿಕ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ಮತ್ತು ಪೋಷಕಾಂಶಗಳನ್ನು ಒದಗಿಸುವುದು ಅತಿ ಮುಖ್ಯ.

೧) ಗರ್ಭಾವಸ್ಥೆ ಮನುಷ್ಯನ ಜೀವನ ಚಕ್ರದ ಪ್ರಾರಂಭ
೨) ಶಿಶು ಬೆಳವಣಿಗೆ ಅತಿ ಶೀಘ್ರವಾಗಿರುತ್ತದೆ.
೩) ಬಾಲ್ಯಾವಸ್ಥೆ ಬೆಳವಣಿಗೆ ಶೀಘ್ರವಾಗಿದ್ದು, ಮಗುವಿನ ಆಹಾರದಲ್ಲಿ ಬದಲಾವಣೆಯಾಗುತ್ತದೆ. ಸಾಮಾನ್ಯವಾಗಿ ಆಹಾರಕ್ಕೆ ಹೊಂದಿಕೊಳ್ಳುತ್ತಾನೆ.
೪) ತರುಣಾವಸ್ಥೆ ಶೀಘ್ರ ದೈಹಿಕ ಹಾಗೂ ಲೈಂಗಿಕ ಬೆಳವಣಿಗೆ
೫) ಪ್ರೌಢಾವಸ್ಥೆ ಬೆಳವಣಿಗೆ ಸ್ಥಗಿತವಾಗುತ್ತದೆ.

ಬೇರೆ ಬೇರೆ ವಯಸ್ಸು ಹಾಗೂ ದೈಹಿಕ ಪರಿಸ್ಥಿತಿಗೆ ಅನುಗುಣವಾಗಿ  ಭಾರತೀಯ ವೈದ್ಯಕೀಎಸಂಶೋಧನಾ ವಿಭಾಗದವರು (ಐ.ಸಿ.ಎಂ.ಆರ್.) ಆಹಾರದ ಅವಶ್ಯಕತೆಯನ್ನು ಗುರುತಿಸಿದ್ದಾರೆ. ಇದರ ವಿವರಗಳನ್ನು ಕೋಷ್ಟಕ ೮,೯,೧೦,೧೧ ಮತ್ತು ೧೨ರಲ್ಲಿ ಕೊಡಲಾಗಿದೆ.

ಕೋಷ್ಟಕ. ಗಂಡಸರಿಗೆಸಮತೋಲನಆಹಾರ (ಗ್ರಾಂ)

 

ಕುಳಿತು ಕೆಲಸ ಮಾಡುವವರು

ಸಾಧಾರಣ ಕೆಲಸಗಾರರು

ಕಠಿಣ ಕೆಲಸಗಾರರು

ಸಸ್ಯಾ ಹಾರ

ಮಾಂಸಾ ಹಾರ

ಸಸ್ಯಾ ಹಾರ

ಮಾಂಸಾ ಹಾರ

ಸಸ್ಯಾ ಹಾರ

ಮಾಂಸಾ ಹಾರ

ಧಾನ್ಯಗಳು ೪೦೦ ೪೦೦ ೪೭೫ ೪೭೫ ೬೫೦ ೬೫೦
ಬೇಳೆಕಾಳುಗಳು ೭೦ ೫೫ ೮೦ ೬೫ ೮೦ ೬೫
ಹಸಿರು ಸೊಪ್ಪು ೧೦೦ ೧೦೦ ೧೨೫ ೧೨೫ ೧೨೫ ೧೨೫
ತರಕಾರಿಗಳು ೭೫ ೭೫ ೭೫ ೭೫ ೧೦೦ ೧೦೦
ಗೆಡ್ಡೆ ಗೆಣಸುಗಳು ೭೫ ೭೫ ೧೦೦ ೧೦೦ ೧೦೦ ೧೦೦
ಹಣ್ಣುಗಳು ೩೦ ೩೦ ೩೦ ೩೦ ೩೦ ೩೦
ಹಾಲು ೨೦೦ ೧೦೦ ೨೦೦ ೧೦೦ ೨೦೦ ೧೦೦
ಎಣ್ಣೆ ಅಥವಾ ಕೊಬ್ಬು ೩೫ ೪೦ ೪೦ ೪೦ ೫೦ ೫೦
ಮೀನು/ಮಾಂಸ ೩೦ ೩೦ ೩೦
ಮೊಟ್ಟೆ ೩೦ ೩೦ ೩೦
ಸಕ್ಕರೆ/ಬೆಲ್ಲ ೩೦ ೩೦ ೪೦ ೪೦ ೫೫ ೫೫

ಆಧಾರ : ನ್ಯೂಟ್ರಿಟಿವ್ ವ್ಯಾಲ್ಯೂ ಆಫ್ ಇಂಡಿಯನ್ ಫುಡ್, ಎನ್.ಐ.ಎನ್.ಹೈದರಾಬಾದ್-೧೯೮೫.

ಕೋಷ್ಟಕ. ಹೆಂಗಸರಿಗೆಸಮತೋಲನಆಹಾರ (ಗ್ರಾಂ)

 

ಕುಳಿತು ಕೆಲಸ ಮಾಡುವವರು

ಸಾಧಾರಣ ಕೆಲಸಗಾರರು

ಕಠಿಣ ಕೆಲಸಗಾರರು

ಹೆಚ್ಚುವರಿ ಆಹಾರ

ಸಸ್ಯಾಹಾರ

ಮಾಂಸಾಹಾರ

ಸಸ್ಯಾಹಾರ

ಮಾಂಸಾಹಾರ

ಸಸ್ಯಾಹಾರ

ಮಾಂಸಾಹಾರ

ಗರ್ಭಿಣಿ

ಬಾಣಂತಿ

ಧಾನ್ಯಗಳು ೩೦೦ ೩೦೦ ೩೫೦ ೩೫೦ ೪೭೫ ೪೭೫ ೧೫೦ ೧೧೦೦
ಬೇಳೆಕಾಳುಗಳು ೬೦ ೪೫ ೭೦ ೫೫ ೭೦ ೫೫ ೧೧೦
ಹಸಿರು ಸೊಪ್ಪು ೧೨೫ ೧೨೫ ೧೨೫ ೧೨೫ ೧೨೫ ೧೨೫ ೧೨೫ ೧೨೫
ತರಕಾರಿಗಳು ೭೫ ೭೫ ೭೫ ೭೫ ೧೦೦ ೧೦೦
ಗೆಡ್ಡೆ ಗೆಣಸುಗಳು ೫೦ ೫೦ ೭೫ ೭೫ ೧೦೦ ೧೦೦
ಹಣ್ಣುಗಳು ೩೦ ೩೦ ೩೦ ೩೦ ೩೦ ೩೦
ಹಾಲು ೨೦೦ ೧೦೦ ೨೦೦ ೧೦೦ ೨೦೦ ೧೦೦ ೧೧೨೫ ೧೧೨೫
ಎಣ್ಣೆ ಅಥವಾ ಕೊಬ್ಬು ೩೦ ೩೫ ೩೫ ೪೦ ೪೦ ೪೫ ೧೧೫
ಮೀನು/ಮಾಂಸ ೩೦ ೩೦ ೩೦
ಮೊಟ್ಟೆ ೩೦ ೩೦ ೩೦
ಸಕ್ಕರೆ/ಬೆಲ್ಲ ೩೦ ೩೦ ೩೦ ೩೦ ೪೦ ೪೦ ೧೧೦ ೧೨೦

ಆಧಾರ : ನ್ಯೂಟ್ರಿಟಿವ್ ವ್ಯಾಲ್ಯೂ ಆಫ್ ಇಂಡಿಯನ್ ಫುಡ್, ಎನ್.ಐ.ಎನ್.ಹೈದರಾಬಾದ್-೧೯೮೫.

ಕೋಷ್ಟಕ೧೦. ಮಕ್ಕಳಿಗೆಸಮತೋಲನಆಹಾರ (ಗ್ರಾಂ)

 

ಶಾಲಾ ಪೂರ್ವ ಮಕ್ಕಳು

ಶಾಲಾ ಮಕ್ಕಳು

ವರ್ಷ

ವರ್ಷ

ವರ್ಷ

೧೦೧೨ ವರ್ಷ

ಸಸ್ಯಾ ಹಾರ

ಮಾಂಸಾ ಹಾರ

ಸಸ್ಯಾ ಹಾರ

ಮಾಂಸಾ ಹಾರ

ಸಸ್ಯಾ ಹಾರ

ಮಾಂಸಾ ಹಾರ

ಸಸ್ಯಾ ಹಾರ

ಮಾಂಸಾ ಹಾರ

ಧಾನ್ಯಗಳು ೧೫೦ ೧೫೦ ೨೦೦ ೨೦೦ ೨೫೦ ೨೫೦ ೩೨೦ ೩೨೦
ಬೇಳೆಕಾಳುಗಳು ೫೦ ೪೦ ೬೦ ೫೦ ೭೦ ೬೦ ೭೦ ೬೦
ಹಸಿರು ಸೊಪ್ಪು ೫೦ ೫೦ ೭೫ ೭೫ ೭೫ ೭೫ ೧೦೦ ೧೦೦
ತರಕಾರಿಗಳು ೩೦ ೩೦ ೫೦ ೫೦ ೫೦ ೫೦ ೭೫ ೭೫
ಹಣ್ಣುಗಳು ೫೦ ೫೦ ೫೦ ೫೦ ೫೦ ೫೦ ೫೦ ೫೦
ಹಾಲು ೩೦೦ ೨೦೦ ೨೫೦ ೨೦೦ ೨೫೦ ೨೦೦ ೨೫೦ ೨೦೦
ಎಣ್ಣೆ ಅಥವಾ ಕೊಬ್ಬು ೨೦ ೨೦ ೨೫ ೨೫ ೩೦ ೩೦ ೩೫ ೩೫
ಮೀನು/ಮಾಂಸ ೩೦ ೩೦ ೩೦ ೩೦
ಮೊಟ್ಟೆ ೩೦ ೩೦ ೩೦ ೩೦
ಸಕ್ಕರೆ/ಬೆಲ್ಲ ೩೦ ೩೦ ೪೦ ೪೦ ೫೦ ೫೦ ೫೦ ೫೦

ಆಧಾರ : ನ್ಯೂಟ್ರಿಟಿವ್ ವ್ಯಾಲ್ಯೂ ಆಫ್ ಇಂಡಿಯನ್ ಫುಡ್, ಎನ್.ಐ.ಎನ್.ಹೈದರಾಬಾದ್-೧೯೮೫. 

ಕೋಷ್ಟಕ೧೨. ತರುಣಾವಸ್ಥೆಗೆಸಮತೋಲನಆಹಾರ (ಗ್ರಾಂ)

 

ತರುಣರು

ತರುಣಿಯರು

೧೩೧೫ ವರ್ಷಗಳು

೧೬೧೮ ವರ್ಷಗಳು

೧೩೧೮ ವರ್ಷಗಳು

ಸಸ್ಯಾ ಹಾರ

ಮಾಂಸಾ ಹಾರ

ಸಸ್ಯಾ ಹಾರ

ಮಾಂಸಾ ಹಾರ

ಸಸ್ಯಾ ಹಾರ

ಮಾಂಸಾ ಹಾರ

ಧಾನ್ಯಗಳು ೪೩೦ ೪೩೦ ೪೫೦ ೪೫೦ ೩೫೦ ೩೫೦
ಬೇಳೆಕಾಳುಗಳು ೭೦ ೫೦ ೭೦ ೫೦ ೭೦ ೫೦
ಹಸಿರು ಸೊಪ್ಪು ೧೦೦ ೧೦೦ ೧೦೦ ೧೦೦ ೧೫೦ ೧೫೦
ತರಕಾರಿಗಳು ೭೫ ೭೫ ೭೫ ೭೫ ೭೫ ೭೫
ಗೆಡ್ಡೆ ಗೆಣಸುಗಳು ೭೫ ೭೫ ೧೦೦ ೧೦೦ ೭೫ ೭೫
ಹಣ್ಣುಗಳು ೩೦ ೩೦ ೩೦ ೩೦ ೩೦ ೩೦
ಹಾಲು ೨೫೦ ೧೫೦ ೨೫೦ ೧೫೦ ೨೫೦ ೧೫೦
ಎಣ್ಣೆ ಅಥವಾ ಕೊಬ್ಬು ೩೫ ೪೦ ೪೫ ೫೦ ೩೫ ೪೦
ಮೀನು/ಮಾಂಸ ೩೦ ೩೦ ೩೦
ಮೊಟ್ಟೆ ೩೦ ೩೦ ೩೦
ಸಕ್ಕರೆ/ಬೆಲ್ಲ ೩೦ ೩೦ ೪೦ ೪೦ ೩೦ ೩೦

ಆಧಾರ : ನ್ಯೂಟ್ರಿಟಿವ್ ವ್ಯಾಲ್ಯೂ ಆಫ್ ಇಂಡಿಯನ್ ಫುಡ್, ಎನ್.ಐ.ಎನ್.ಹೈದರಾಬಾದ್-೧೯೮೫.