ಭೂಮಿಯ ಬಹುಭಾಗ ನೀರು, ಸ್ವಲ್ಪ ಭಾಗ ನೆಲ. ಇದು ನಮಗೆ ಕಾಣುವ ಜಾಗಗಳಿಂದ ತಿಳಿದಿರುವುದು. ಭೂಮಿಯ ಮೇಲುಗಡೆ ಮತ್ತು ಸಾಗರ, ಸಮುದ್ರಗಳಲ್ಲಿ ಜೀವಿಗಳಿವೆೆ. ಆದರೆ ಭೂಮಿಯ ಘನ ಭಾಗ ನಮಗೆ ಪೂರ್ಣವಾಗಿ ಇನ್ನೂ ತಿಳಿದಿಲ್ಲ. ಬಹುಶಃ ಈರುಳ್ಳಿ ಗೆಡ್ಡೆ ದಳಗಳ ಸ್ತರಗಳಂತೆ ಭೂ ಪದಾರ್ಥವು ಅದರ ಕೇಂದ್ರದ ಮೇಲೆ ಸ್ತರಗಳಾಗಿ ಸುತ್ತುವರಿದಿದೆ.  ಕೇಂದ್ರದಲ್ಲಿ ಕಬ್ಬಿಣ-ನಿಕ್ಕಲ್‌ಗಳ ಘನ ಭಾಗವಿದೆ. ಇದರ ಸುತ್ತಲೂ ಇದೇ ಎರಡು ಲೋಹಗಳು ದ್ರವರೂಪದಲ್ಲಿವೆ. ಜೊತೆಗೆ ಸ್ವಲ್ಪಮಟ್ಟಿಗೆ ಸಿಲಿಕಾನ್ ಅಥವಾ ಸಲ್ಫರ್‌ಗಳೂ  ದ್ರವರೂಪದಲ್ಲಿ ಸೇರಿರಬಹುದು. ಇದರ ಹೊರ ವಲಯವೇ ಕವಚ (mantle). ಇದು ತನ್ನೊಳಗಿನ ಸ್ಥರದ ಒತ್ತಡಗಳಿಂದಾಗಿ ಮೇಲೇಳುವುದು, ಕುಸಿಯುವುದು ನಡೆಯುತ್ತಲೇ ಇರುತ್ತದೆ. ಇದರಿಂದ ಮೇಲಕ್ಕೆ ಶಿಲಾಗೋಲವಿದೆ. ನಮಗೆ ಕಾಣಬರುವುದು ಈ ಸ್ತರ.