ಪಲ್ಲವಿ : ನರನಾರಾಯಣ ದೇವನೆ ! ನೀರಜ ನಯನಾ ಗತಿನೀ

ಚರಣ :  ರಂಗಾ ಶ್ರೀಹರಿ ವಿಠಲಾ – ದಯಾಸಮುದ್ರ ಮುರಹರ
ನಾದ ಸುಯೋಗ ಕೃಷ್ಣಾ ಕೋಮಲ ವದನ ಸರೋಜ 

ರಾಜೀವಾಕ್ಷ ಶ್ರೀಹರೇ ಮನಮೋಹನ ಸದನ
ಯದುಕುಲ ನಂದ ಮುಕುಂದ ತಿಳಿಯಲಾರೆ ನಿನ್ನ ಮಾಯ

“ಣಂ’ ಬೀಜಾಕ್ಷರ ಸುಪ್ರೀತ ! ನಿನ್ನ ವಾಸವೇ ಬೃಂದಾವನ
ದೇವರ ದೇವ ಪ್ರಭುವೇ ಹರಿಸರ್ವೋತ್ತಮ ಸರ್ವಗ

ವಂದೇ ದೇವ ಕೇಶವಾ ! ವಿಠಲ ನನಗೆ ನೀ ಗತಿ
ನೆನೆಸುವೆ ನಿನ್ನ ಅನುದಿನವೂ ಜಯವೆಲ್ಲರಿಗೂ ಕೊಡಿಸುವೆ ನೀ