ನರನೆಂದು ತನ್ನ ಪೇಳುವನೊ | ನೋಡೆ ಕುರಿಯಂತೆ
ತಾನು ಸಾಯುವನು | ಅರಿವಿನಾನಂದ ಮರಣವ
ಹರಿಯಿಸದೇ | ನರಜನ್ಮವನು ನರಕಕ್ಕೆ ಗುರಿಯಾಗಿ || ನರನೆಂದು ||

ಧೀರ ನಾನೆಂದು ತಿರುಗುವನು ಬಂದು ಮಾರಿ
ನೋಡೆಸಲು ಕೊರಗು ಏನು ಈರೇಳು ಲೋಕವ
ಮೀರಿ ತಾನಿಲ್ಲದೆ | ಘೋರ ಮೃತ್ಯುವಿಗೆ ಈ
ಸಾರ ದೇಹದ ಕೊಟ್ಟು || ನರನೆಂದು ||

ಜಾಣನೆನ್ನುತ ಕೊಬ್ಬಿ ಮರೆವ ಹೆಣವ ಕಾಣುತ್ತ
ಮಲವನ್ನೆ ಬಿಡುವ | ಜ್ಞಾನದಿಂದ ಹರನಾಗಿ
ಹಾನಿಯಂ ಹರಿಸದೆ | ನಾನ ದುಃಖಗಳಿಂದ
ಪ್ರಾಣವ ಕಳೆಯುತ್ತ || ನರನೆಂದು ||

ಗುರಿ ಮಾಡುತ್ತಿರುರೋ ಮಗಳಾ | ಮತ್ತೊಬ್ಬರಿಗೆ
ಜೋಡಿಸುವ ಹಸ್ತಗಳ | ಗುರು ಮರೆವೆಯಿಂದ್
ನರಿ ನಾಯಿ ಕುರಿಯಾಗಿ ಪುಟ್ಟುತ್ತ || ನರನೆಂದು ||