ಬಂದು ನಂಗುರು ವೀರನೇ | ನಿಮಗೊಂಡ |
ಸುಖ ಸಾಗರ
ಬಂಧ ಮೋಕ್ಷಗಳೆಂಬಿ ಎರಡರ ಸಂದು ತೋರಿದ
ಧೀರನೇ || ಗುರುವೇ ||

ತನ್ನ ನಿಜವನು ನೋಡನು | ಈ ಬಿನ್ನವಳಿಯ
ಮೂಢನು | ನಿನ್ನ ಪಾದವ ಕಂಡಿ ಮನುಜನು |
ಜನ್ಮವಳಿದಾ ರೂಢನು || ಗುರುವೆ ||

ಹಿಂದೆ ಸುಕೃತವ ಮಾಡಿದೆ | ಅದರಿಂದ ನಿನ್ನೊಳೇನು
ಕೂಡಿದೆ ಬಂಧವಿಲ್ಲದ ಪೂರ್ಣ ಸಹಜನೆಂದ
ಪದವಿಯ ನೋಡಿದೆ || ಗುರುವೇ ||

ತಂದೆ ತಾಯಿಗಳಾದರೂ | ಭವ ಬಂಧಕಳಿಯದೆ
ಪೋದರು | ತಂದೆ ಸದ್ಗುರು ಶಂಕರಾರ‍್ಯನ ಹಿಂದೆ
ನಿಲ್ಲುವ ದೇವರೂ || ಗುರುವೆ || ವಂದನಂ ||

ಯಾರು ಸದ್ಗುರು ವಶದೈವಳು ತೋರು
ಧರೆಯೊಳು ಭಕ್ತರು ತೋರಿ ನಂಬಿದ
ನರರಿಗೇತಕ್ಕೆ ಪಾರಮಾರ್ಥದ ಯೋಚನೆ || ಗುರುವೆ ||