ಶ್ರೀ ರಂಭಾಪುರಿ ಪೀಠ:

ಜಿಲ್ಲೆಯಿಂದ ೫೯ ಕಿ.ಮೀ
ತಲ್ಲೂಕಿನಿಂದ ೪೦ ಕಿ.ಮೀ

ಎನ್.ಆರ್. ಪುರದಿಂದ ೪೦ ಕಿ.ಮೀ ದೂರದಲ್ಲಿದ್ದು ಬಾಳೆಹೊನ್ನೂರಿಂದ ೩ ಕಿ.ಮೀ ದೂರದಲ್ಲಿದೆ. ಲಿಂಗಾಯತ/ವೀರಶೈವರಲ್ಲಿನ ಪಂಚಾಚಾರ್ಯರಲ್ಲಿ ಪ್ರಥಮರಾದ ರೇಣುಕಾಚಾರ್ಯರಿಂದ ಸ್ಥಾಪಿತವಾದ  ಮಠ. ಮಠದ ಆವರಣದಲ್ಲಿ ವೀರಭದ್ರ ದೇವಾಲಯ, ಶಿವಲಿಂಗ ಶೂಲಬ್ರಹ್ಮ, ಗಣಪತಿ, ಬಸವ ಮುಂತಾದ ಮೂರ್ತಿಗಳನ್ನು ಕಾಣಬಹುದು.

 

ಶ್ರೀ ಜ್ವಾಲಾಮಾಲಿನಿ ದೇವಾಲಯ, ಸಿಂಹನಗದ್ದೆ, ಬಸ್ತಿಮಠ, .ರಾ. ಪುರ

ಜಿಲ್ಲೆಯಿಂದ ೧೦೦ ಕಿ.ಮೀ
ತಾಲ್ಲೂಕಿನಿಂದ ೨ ಕಿ.ಮೀ

ಜೈನ ಧರ್ಮದಲ್ಲಿ ಕಾಣುವ ಅತಿಶಯ ಕ್ಷೇತ್ರಗಳಲ್ಲಿ ಸಿಂಹನಗದ್ದೆ ಬಸ್ತಿಮಠ, ನರಸಿಂಹರಾಜಪುರ. ಇಲ್ಲಿನ ಜೈನ ಬಸದಿಗಳು ದಕ್ಷಿಣ ಭಾರತದಲ್ಲಿ ಪ್ರಖ್ಯಾತಿ ಪಡೆದು, ಜೈನರ ಪುಣ್ಯಕ್ಷೇತ್ರ ಎನಿಸಿದೆ.

ಇಲ್ಲಿ ಶ್ರೀ ಜ್ವಾಲಾಮಾಲಿನಿ, ಯಕ್ಷ ದೇವತೆ, ಚಂದ್ರಪ್ರಭ ಮೂರ್ತಿ ಅಮೃತ ಶಿಲೆಯಲ್ಲಿನ ಯೋಗಮುದ್ರೆಯ ತೀರ್ಥಂಕರ ಮೂರ್ತಿ, ಕರಿಶಿಲೆಯ ಶಾಂತಿನಾಥಮೂರ್ತಿ, ನೇಮಿನಾಥ ಮೂರ್ತಿ, ಸರಸ್ವತಿ, ಗಣಧರ, ಶೃತ ಮುಂತಾದ ಲೋಹ ವಿಗ್ರಹಗಳು ಇಲ್ಲಿನ ಜೈನ ಮಠದಲ್ಲಿವೆ. ಜೊತೆಗೆ ಅನೇಕ ಶಾಸನಗಳನ್ನು ಕಾಣಬಹುದು. ೧ ಕಿ.ಮೀ ದೂರದಲ್ಲಿದೆ.

ಚರ್ಚನ ನೋಟ, ನ.ರಾ. ಪುರ

ಕ್ರೈಸ್ತ ಧರ್ಮೀಯರೇ ಹೆಚ್ಚಾಗಿರುವ ನ.ರಾ. ಪುರ ಪಟ್ಟಣ ಭಾಗದಲ್ಲಿ ಅನೇಕ ಚರ್ಚ್ ಗಳು ಕಾಣಸಿಗುತ್ತವೆ. ಅದರಲ್ಲಿ ಲಿಟ್ಲ್ ಪ್ಲವರ್ ಚರ್ಚ್ ಅತೀ ದೊಡ್ಡದಾಗಿದ್ದು, ಸದ್ಯದಲ್ಲೇ ಜಿಲ್ಲೆ ತಾಲ್ಲೂಕಿನಲ್ಲೇ ಅತೀ ದೊಡ್ಡದು ಎಂಬ ಹಿರಿಮೆಗೆ ಪಾತ್ರವಾಗಿದೆ. (೧ ಕೋಟಿಗೂ ಹೆಚ್ಚು ಅಂದಾಜು ವೆಚ್ಚ) ೧ ಕಿ.ಮೀ ದೂರದಲ್ಲಿದೆ.