ಕುಲ ಕುಲ ಕುಲವೆಂದೊರಲುವೆ ಏತಕೆ?
ಕೋಗಿಲೆಗಾವುದು ಕುಲವಿದೆ ಹೇಳು?
ಕಿಲ! ಕಿಲ! ಕಿಲವೆಂದೂಳಲು ತಳಿರೊಳು
ಕೆಳಗಿವಿಗೇಳ್ವೆಯ ಕುಲವನು ನೆನೆದು?

ಬೇಸಗೆ ಸಮಯದಿ ಬೇಸರಗೊಂಡಿರೆ
ಗೊಲ್ಲನ ಕೊಳಲನು ಕೇಳಿಹೆಯೇನು?
ವೇಣುನಿನಾದವು ಕಿವಿದೆರೆಗೈತರೆ
ವಂಶದ ವಂಶದ ಹಿಕ್ಕುವೆಯೇನು?

ಎದೆಯಿಂದೈತಹ ನುಣ್ದನಿಯಿಂಪಿರೆ
ಕೋಗಿಲೆಗಾವುದು ಕುಲವಿರಲೇನು?
ವಾಣಿಯದೊಂದೇ ವಿಶ್ವವ ತುಂಬಿರೆ
ವೇಣುಗಳೆನಿತೆನಿದಾದರೆ ಏನು?