ಆಹ! ನಾಕವೆ ನಮ್ಮ ಲೋಕಕೆ
ಕಳಚಿ ಬಿದ್ದಿದೆ ಬನ್ನಿರಿ!
ತುಂಬಿಕೊಳ್ಳಲು ನಿಮ್ಮ ಹೃದಯದ
ಹೊನ್ನ ಬಟ್ಟಲ ತನ್ನಿರಿ!
ಬೇಗ ಬನ್ನಿ! ಬೇಗ ಬನ್ನಿ!
ಕರಗಿ ಹೋಗುವ ಮುನ್ನ ಬನ್ನಿ!
ತಡವ ಮಾಡದೆ ಓಡಿ ಬನ್ನಿ;
ಸ್ವರ್ಗ ಹರಿಯುತಿದೆ;
ಇಳೆಯ ಮಕ್ಕಳನೆಲ್ಲ, ಕೇಳಿರಿ,
ಕೂಗಿ ಕರೆಯುತಿದೆ!