ಉರಿದು ಉರಿದು ಉರಿದು ಸಂಜೆ
ಮೆಲ್ಲಮೆಲ್ಲನಾಯ್ತು ಬಂಜೆ;
ಮುಗಿಲು ಮಾಗಿ, ಬಣ್ಣವೋಗಿ,
ಬೂದಿಯಾಗುತಿದ್ದಲಾಗಿ,
ನಿಶಿಯ ಮಸಿಯ ಮುದ್ದೆ ಬಿತ್ತು;
ಭುವನ ಕವನವಳಿಸಿದತ್ತು!

ಆದರದೋ ಮೇಲೆ ನೋಡು!
ನೂರುತಾರೆ, ಸಗ್ಗವೀಡು!

ಕಾಂತಿ ಕಾಣದಿರುವ ನನ್ನಿ
ಅಂಧಕಾರ ಸುಲಭವೆನ್ನಿ!

ಸಾವು ನನ್ನನಳಿಸಲಿಲ್ಲಿ
ತಾರೆಯಾಗಿ ಹೊಳೆವೆನಲ್ಲಿ!