ಶರಣು ಹೊಗುವುದೆ ಲೇಸು;
ಕಾದಿ ಗೆಲಲರಿಯೆ!
ಪಡೆದು ನಲಿವುದೆ ಲೇಸು;
ತೊರೆದುರಿಯಲರಿಯೆ!

ಗೆಲುವು ಬಹು ದೂರವಿರೆ,
ಹೊಂಚುತಿರೆ ಸೋಲು,
ಗೆಲುವ ಬೇನೆಯದೇಕೆ?
ಸೋತ ಸೊಗ ಮೇಲು!

ಬೇಕಿಹುದು ನನಗೆ ಜಯ-
ದಭಿಮಾನವಲ್ಲ;
ಗೆಲುವೊ? ಸೋಲೋ? ನನಗೆ
ಸುಖವೊಂದೆ ಗೆಲ್ಲ!