ಪ್ರಮುಖ ಘಟನಾವಳಿಗಳು:

 • 1848: ಅಮೇರಿಕಾದ ಮೊದಲ ಮಹಿಳಾ ವೈದ್ಯಕೀಯ ಶಾಲೆಯನ್ನು ತೆರೆಯಲಾಯಿತು.

 • 1866: ಮೊದಲ ನಾಗರೀಕರ ಹಕ್ಕುಗಳ ಮಸೂದೆಯನ್ನು ಅಂಗೀಕರಿಸಲಾಯಿತು

 • 1894: ದಿಫ್ತೀರಿಯಾ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿದಿರುವುದಾಗಿ ಡಾ.ರೌಕ್ಸ್ ಘೋಷಿಸಿದರು.

 • 1939: ಕೃತಕ ಗರ್ಭಧಾರಣೆಯ ಮೂಲಕ ಜನಿಸಿದ ಮೊದಲ ಪ್ರಾಣಿ ಮೊಲವನ್ನು ಪ್ರದರ್ಶಿಸಲಾಯಿತು.
 • 1954: ಫ್ರೆಂಚ್ ವಸಾಹತುಗಳಾದ ಪಾಂಡಿಚೆರಿ, ಕಾರೈಕಾಲ್, ಯಾನಮ್ ಮತ್ತು ಮಾಹೆಯನ್ನು ಭಾರತಕ್ಕೆ ವರ್ಗಾಯಿಸಲಾಯಿತು.
 • 1956: ಭಾರತದ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ ಮತ್ತು ಮೈಸೂರನ್ನು ರಾಜ್ಯ ಪುನರ್ ಸಂಘಟನೆಯ ಕಾಯಿದೆ ಅಡಿ ಔಪಚಾರಿಕವಾಗಿ ರಚಿಸಲಾಯಿತು ಹಾಗೂ ಕನ್ಯಾಕುಮಾರಿ ಜಿಲ್ಲೆಯನ್ನು ಕೇರಳದಿಂದ ತಮಿಳುನಾಡಿಗೆ ಸೇರಿಸಲಾಯಿತು.
 • 1973: ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು.

 • 2006: ಬ್ಯಾಂಗಲೂರನ್ನು ಬೆಂಗಳೂರು ಎಂದು ಮರುನಾಮಕರಣ ಮಾಡಲಾಯಿತು.
 • 2007: ಭಾರತೀಯ ಸರ್ಕಾರವು ನಿವೃತ್ತ ಸೈನಿಕರನ್ನು ಹುಲಿಗಳ ಅಭಯಾರಣ್ಯಕ್ಕೆ ಗಸ್ತು ಮಾಡಲು ನೇಮಕ ಮಾಡಲು ಪ್ರಸ್ತಾಪಿಸಲಾಯಿತು.

ಪ್ರಮುಖ ಜನನ/ಮರಣ:

 • 1915: ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಐಯ್ಯರ್ ಜನಿಸಿದರು.

 • 1940: ಭಾರತದ 35ನೇ ಮುಖ್ಯ ನ್ಯಾಯಮೂರ್ತಿಯಾದ ರಮೇಶ್ ಚಂದ್ರ ಲಹೋಟಿ ಜನಿಸಿದರು.

 • 1945: ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ್ ಸಮಿತಿ ಸಂಸ್ಥೆಯ ಸಂಸ್ಥಾಪಕ, ಮತ್ತು ಲೇಖಕ ನರೇಂದ್ರ ದಾಬೋಲ್ಕರ್ ಜನಿಸಿದರು.

 • 1959: ತಮಿಳು ಚಿತ್ರರಂಗದ ನಟ, ನಿರ್ಮಾಪಕ, ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಎಂ.ಕೆ.ತ್ಯಾಗರಾಜ ಭಾಗವತಾರ್ ನಿಧನರಾದರು.

 • 1963: ಖ್ಯಾತ ಉದ್ಯಮಿ ನೀತಾ ಅಂಬಾನಿ ಜನಿಸಿದರು.

 • 1965: ಖ್ಯಾತ ಹಿನ್ನೆಲೆ ಗಾಯಕಿ ಪದ್ಮಿನಿ ಕೊಲ್ಹಾಪುರಿ ಜನಿಸಿದರು.

 • 1973: ಖ್ಯಾತ ನಟಿ, ವಿಶ್ವ ಸುಂದರಿ ಐಶ್ವರ್ಯ ರಾಯ್ ಜನಿಸಿದರು.

 • 1974: ಖ್ಯಾತ ಕ್ರಿಕೆಟ್ ಆಟಗಾರ ವಿ.ವಿ.ಎಸ್.ಲಕ್ಷ್ಮಣ್ ಜನಿಸಿದರು.

 • 1991: ಚಲನಚಿತ್ರ ಸಂಗೀತ ಸಂಯೋಜಕ ಅರುಣ್ ಪೌದ್ವಾಲ್ ನಿಧನರಾದರು.

 • 2007: ಭಾರತದ ಚಿತ್ರ ನಿರ್ದೇಶಕ ಮತ್ತು ಚಿತ್ರಕಥೆ ರಚನೆಕಾರ ಎಸ್.ಅಲಿ ರಜಾ ನಿಧನರಾದರು.