ಪ್ರಮುಖ ಘಟನಾವಳಿಗಳು:

 • 1841: ಜೇಮ್ಸ್ ಬ್ರೇಡ್ ಪ್ರಾಣಿಗಳ ಕಾಂತೀಯತೆಯ ಪ್ರದರ್ಶನವನ್ನು ಕಂಡು ಇದರಿಂದ ಸಂಮೋಹನದ ಅಧ್ಯಯನ ಮಾಡಿದರು.

 • 1864: ಗ್ರೀಸ್ ದೇಶದ ನೂತನ ಸಂವಿಧಾನವನ್ನು ಅಳವಡಿಸಲಾಯಿತು.

 • 1865: ಅಮೇರಿಕಾದ ಮೊದಲ ಚಿನ್ನದ ಪ್ರಮಾಣ ಪತ್ರಗಳನ್ನು ಹೊರಡಿಸಲಾಯಿತು.

 • 1875: ನ್ಯೂಯಾರ್ಕಿನಲ್ಲಿ ನ್ಯಾಷನಲ್ ಬೌಲಿಂಗ್ ಅಸೋಸಿಯೇಷನ್ ಅನ್ನು ಸ್ಥಾಪಿಸಲಾಯಿತು.

 • 1895: ಹವಾಯಿಯಿಂದ ಪೂರ್ವಸಿದ್ಧ ಅನಾನಸ್ ಹಣ್ಣುಗಳನ್ನು ಮೊದಲ ಬಾರಿಗೆ ಸಾಗಾಣಿಕೆ ಮಾಡಲಾಯಿತು.

 • 1913: ಮೇರಿ ಫೆಲ್ಪ್ಸ್ ಜೇಕಬ್ ಅವರು ಆಧುನಿಕ ಎಲಾಸ್ಟಿಕ್ ಬ್ರಾಸ್ಸಿಯರಿಗೆ ಪೇಟೆಂಟ್ ಪಡೆದರು.

 • 1927: ಹಾಲ್ಯಾಂಡ್ ಸುರಂಗವನ್ನು ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಯಿತು.

 • 1946: ಮೌಂಟ್`ಗ್ರೇಲಾಕಿನಲ್ಲಿ ನೈಸರ್ಗಿಕ ಮೋಡದಿಂದ ಮೊದಲ ಕೃತಕ ಹಿಮವನ್ನು ತಯಾರಿಸಲಾಯಿತು.

 • 1952: ಮೊದಲ ಬಾರಿಗೆ ಸುಳ್ಳು ಉಗುರುಗಳನ್ನು ಮಾರಾಟ ಮಾಡಲಾಯಿತು.

 • 1987: ಬ್ರಿಟಿಷ್ ದೂರದರ್ಶನದಲ್ಲಿ ಮೊದಲ ಬಾರಿಗೆ ಕಾಂಡಮ್ ಜಾಹಿರಾತನ್ನು ಪ್ರದರ್ಶಿಸಲಾಯಿತು.

 • 2009: ನಾಸಾ ಸಂಸ್ಥೆಯು ಚಂದ್ರನ ಮೇಲೆ ನೀರಿನ ಅಂಶವನ್ನು ಪತ್ತೆ ಮಾಡಿರುವುದಾಗಿ ಘೋಷಿಸಿದರು.

ಪ್ರಮುಖ ಜನನ/ಮರಣ:

 • 1780: ಸಿಖ್ಖರ ಸಾಮ್ರಾಜ್ಯದ ಸಂಸ್ಥಾಪಕ ಮಹಾರಾಜ ರಣಜಿತ್ ಸಿಂಗ್ ಜನಿಸಿದರು.

 • 1917: ರಾಜಸ್ಥಾನದ 9ನೇ ಗವರ್ನರ್ ಆಗಿದ್ದ ವಸಂತ್ ದಾದಾ ಪಾಟಿಲ್ ಜನಿಸಿದರು.

 • 1920: ಅಂಕಿ ಸಿದ್ಧಾಂತದಲ್ಲಿ ಕೆಲಸ ಮಾಡಿದ ಭಾರತದ ಗಣಿತತಜ್ಞ ಕೊಲ್ಲಗುಂಟ ಗೋಪಾಲ ಐಯ್ಯರ್ ರಾಮನಾಥನ್ ಜನಿಸಿದರು.

 • 1935: ಖ್ಯಾತ ಬಹುಬಾಷಾ ಹಿನ್ನೆಲೆ ಗಾಯಕಿ ಪಿ.ಸುಶೀಲಾ ಜನಿಸಿದರು.

 • 1942: ಮಾಹಿತಿ ಮತ್ತು ಪ್ರಸಾರ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅಂಬಿಕಾ ಸೋನಿ ಜನಿಸಿದರು.

 • 1963: ಭಾರತೀಯ-ಇಂಗ್ಲಿಷ್ ಮಾನವಶಾಸ್ತ್ರಜ್ಞ ಮತ್ತು ಲೇಖಕ ಮಾರ್ಗಾರೆಟ್ ಮುರ್ರೆ ನಿಧನರಾದರು.

 • 1967: ಭಾರತದ ಖ್ಯಾತ ನಟಿ, ಗಾಯಕಿ, ನಿರ್ಮಾಪಕಿ ಮತ್ತು 1984ರ ಮಿಸ್ ಇಂಡಿಯಾ ಆಗಿದ್ದ ಜೂಹಿ ಚಾವಲಾ ಜನಿಸಿದರು.

 • 1969: ಪಾಕಿಸ್ತಾನದ ಮೊದಲ ರಾಷ್ಟ್ರಪತಿ ಆಗಿದ್ದ ಇಸ್ಕಂದರ್ ಮಿರ್ಜಾ ನಿಧನರಾದರು.

 • 2002: ಖ್ಯಾತ ಲೇಖಕ, ಶಿಕ್ಷಕ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಗೌರೀಶ್ ಕಾಯ್ಕಿಣಿ ನಿಧನರಾದರು.