Categories
e-ದಿನ

ನವೆಂಬರ್-16

 

ಪ್ರಮುಖ ಘಟನಾವಳಿಗಳು:

1841: ಕಾರ್ಕ್ ನಲ್ಲಿ ತುಂಬಿದ ಜೀವ ರಕ್ಷಕಕ್ಕಾಗಿ ನ್ಯೂಯಾರ್ಕಿನ ಎನ್.ಇ.ಗುವೆರಿನ್ ಪೇಟೆಂಟ್ ಪಡೆದರು.

1914: ಫೆಡರಲ್ ರಿಸರ್ವ್ ಸಿಸ್ಟಮ್ ಅನ್ನು ಔಪಚಾರಿಕವಾಗಿ ತೆರೆಯಲಾಯಿತು.

1915: ಕೊಕೊ-ಕೋಲಾ ಅದರ ಮೂಲ ರೂಪವನ್ನು ಪೇಟೆಂಟ್ ಮಾಡಿದ ಬಾಟಲಿಗೆ ಪಡೆಯಿತು.

1945: ಯುನೆಸ್ಕೋ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1945: ಎರಡು ಹೊಸ ಅಂಶವಾದ ಅಮರೇಷಿಯಂ (ಪರಮಾಣು ಸಂಖ್ಯೆ 95) ಮತ್ತು ಕ್ಯೂರಿಯಂ (ಪರಮಾಣು ಸಂಖ್ಯೆ 96) ಪತ್ತೆ ಮಾಡಲಾಯಿತು.

1955: ಒಂದು ಗಂಟೆಗೆ 322 ಮೈಲಿ ವೇಗ ತಲುಪಿದ ಮೊದಲ ಸ್ಪೀಡ್ ಬೋಟ್ ದಾಖಲೆ ನಿರ್ಮಿಸಿತು.

1962: ಕುವೇಟ್ ಸಂವಿಧಾನವನ್ನು ಅಳವಡಿಸಿಕೊಂಡಿತು.

1963: ಟಚ್-ಟೋನ್ ದೂರವಾಣಿಯನ್ನು ಪರಿಚಯಿಸಲಾಯಿತು.

1981: ಹೆಪಾಟಿಟಿಸ್ ಬಿ ಕಾಯಿಲೆಗೆ ಔಷಧಿಯನ್ನು ಪತ್ತೆ ಮಾಡಿ ಅದನ್ನು ಅಂಗೀಕರಿಸಲಾಯಿತು.

1988: ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಲು ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಬೆನೆಜಿರ್ ಭುಟ್ಟೊ ಆಯ್ಕೆಯಾದರು.

2015: 1111 ಕ್ಯಾರೆಟಿನ ಶತಮಾನದ ಅತಿ ದೊಡ್ಡ ವಜ್ರವನ್ನು ಬೊಟ್ಸವಾನದ ಕರೋವೆ ಗಣಿಯಲ್ಲಿ ಪತ್ತೆ ಮಾಡಲಾಯಿತು.

ಪ್ರಮುಖ ಜನನ/ಮರಣ:

1897: ಭಾರತೀಯ ಶಿಕ್ಷಣ ತಜ್ಞ ಚೌಧರಿ ರೆಹಮತ್ ಅಲಿ ಅವರು ಜನಿಸಿದರು.

1909: ಭಾರತೀಯ-ಪಾಕಿಸ್ತಾನದ ಧಾರ್ಮಿಕ ನಾಯಕ ಮಿರ್ಜಾ ನಾಸಿರ್ ಅಹಮದ್ ಅವರು ಜನಿಸಿದರು.

1962: ಬಹುಭಾಷಾ ನಟಿ ಅಂಬಿಕಾ ಅವರು ಜನಿಸಿದರು.

1963: ಮಿಸ್ ಇಂಡಿಯಾ ಸ್ಪರ್ಧೆಯ ವಿಜೇತೆ, ನಟಿ, ನೃತ್ಯಗಾರ್ತಿ ಮೀನಾಕ್ಷಿ ಶೇಷಾದ್ರಿ ಅವರು ಜನಿಸಿದರು.

1973: ಬ್ಯಾಡ್ಮಿಂಟನ್ ಆಟಗಾರ ಮತ್ತು ತರಬೇತುಗಾರ ಪುಲ್ಲೆಲ್ಲ ಗೋಪಿಚಂದ್ ಜನಿಸಿದರು.

1974: ಮೆಚ್ಚುಗೆ ಪಡೆದ ಭಾರತೀಯ ಛಾಯಾಗ್ರಾಹಕ ನಿರಾವ್ ಶಾಹ್ ಜನಿಸಿದರು.

1985: ಖ್ಯಾತ ಹಿಂದಿ ಚಿತ್ರನಟ ಆಧಿತ್ಯ ರಾಯ್ ಕಪೂರ್ ಜನಿಸಿದರು.

2009: ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಗಳ ಸಂಸ್ಥಾಪಕ ಮತ್ತು ಖ್ಯಾತ ನೇತ್ರ ತಜ್ಞ ಜೈವೀರ್ ಅಗರ್ವಾಲ್ ನಿಧನರಾದರು.

2013: ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ತನ್ವೀರ್ ಅಹಮದ್ ಖಾನ್ ಅವರು ನಿಧನರಾದರು.