ಪ್ರಮುಖ ಘಟನಾವಳಿಗಳು:
1924: ಭಾನುವಾರದ ಎಕ್ಸ್ಪ್ರೆಸ್ ನಿಯತಕಾಲಿಕವು ಮೊದಲ ಬ್ರಿಟಿಷ್ ಕ್ರಾಸ್ವರ್ಡ್ ಒಗಟನ್ನು ಪ್ರಕಟಿಸಿತು.
1936: ಬಿ.ಬಿ.ಸಿ ಟೆಲಿವಿಷನ್ ಸೇವೆಯು ಪ್ರಪಂಚದ ಮೊದಲ ಸಾಮಾನ್ಯ ಸಾರ್ವಜನಿಕ ದೂರದರ್ಶನ ಸೇವೆಯಾಗಿ ಚಾಲಿತವಾಯಿತು.
1936: ಕೆನೆಡಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಅನ್ನು ಸ್ಥಾಪಿಸಲಾಯಿತು.
1941: ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರ “ಸುಭ್ ಸುಖ್ ಚೈನ್” ಅನ್ನು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು. ಇದು ಗುರುದೇವ ರವೀಂದ್ರನಾಥ್ ಠಾಗೋರ್ ಸಂಸ್ಕೃತೀಕೃತ ಬಂಗಾಳಿ ಕವಿತೆಯಾದ “ಜನ ಗಣ ಮನ”ದ ಅನುವಾದವಾಗಿದೆ.
1953: ಪಾಕಿಸ್ತಾನವು ಇಸ್ಲಾಮಿಕ್ ರಿಪಬ್ಲಿಕ್ ಆಗಿ ಘೋಷಿತವಾಯಿತು.
1955: ಕ್ಲಾರ್ಟನ್ ಮತ್ತು ಶ್ಯಾಫರ್ ಪೋಲಿಯೋ ವೈರಸ್ ಅನ್ನು ಕಂಡುಹಿಡಿದರು.
1988: ಮೊದಲ ಶ್ರೀಮತಿ ಅಮೇರಿಕಾ ಸೌಂಧರ್ಯ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
2000: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಶಾಶ್ವತವಾಗಿ ಸಿಬ್ಬಂದಿ ಪಡೆಯಿತು.
2000: ಭಾರತದಲ್ಲಿ “ಐರನ್ ಲೇಡಿ” ಎಂದೇ ಖ್ಯಾತಿ ಪಡೆದ ಕವಿಯತ್ರಿ ಇರೋಮ್ ಶರ್ಮಿಳಾ ಅವರು ಮಣಿಪುರದ 10 ನಾಗರಿಕರನ್ನು ಸೈನ್ಯದವರು ಹತ್ಯೆ ಮಾಡಿದನ್ನು ಪ್ರತಿಭಟಿಸಲು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಪ್ರಮುಖ ಜನನ/ಮರಣ:
1833: ಭಾರತದ ವೈದ್ಯ ಮಹೇಂದ್ರಲಾಲ್ ಸರ್ಕಾರ್ ಜನಿಸಿದರು.
1877: ಭಾರತದ 48ನೇ ಶಿಯಾ ಇಮಾಮ್ ಆಗಿದ್ದ ಅಗಾ ಖಾನ್ III ಜನಿಸಿದರು.
1935: ಲೇಖಕ ಶಿರ್ಶೇಂದು ಮುಖ್ಯೋಪಾಧ್ಯಾಯ್ ಜನಿಸಿದರು.
1941: ಬರಹಗಾರ, ಪತ್ರಕರ್ತ, ರಾಜಕಾರಣಿ ಮತ್ತು ಕೇಂದ್ರ ಸಚಿವ ಅರುಣ್ ಶೌರಿ ಜನಿಸಿದರು.
1958: ಹರಿಯಾಣ ರಾಜ್ಯದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ಅಜಯ್ ಸಿಂಗ್ ಯಾದವ್ ಜನಿಸಿದರು.
1960: ಬಾಲಿವುಡ್ ಚಿತ್ರಗಳ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಅನು ಮಲ್ಲಿಕ್ ಜನಿಸಿದರು.
1965: ಖ್ಯಾತ ಬಾಲಿವುಡ್ ನಟ, ನಿರ್ಮಾಪಕ, ನಿರೂಪಕ ಶಾರುಖ್ ಖಾನ್ ಜನಿಸಿದರು.
2012: ಭಾರತ-ಅಮೇರಿಕಾದ ಗಣಿತಶಾಸ್ತ್ರಜ್ಞ ಮತ್ತು ಶಿಕ್ಷಣತಜ್ಞ ಶ್ರೀರಾಮ್ ಶಂಕರ್ ಅಭಯಂಕರ್ ನಿಧನರಾದರು.