Categories
e-ದಿನ

ನವೆಂಬರ್-23

 

ಪ್ರಮುಖ ಘಟನಾವಳಿಗಳು:

1835: ಕುದುರೆಲಾಳ ತಯಾರಿಸುವ ಯಂತ್ರಕ್ಕೆ ಹೆನ್ರಿ ಬರ್ಡನ್ ಪೇಟೆಂಟ್ ಪಡೆದರು.

1848: ಬಾಸ್ಟನ್ನಿನಲ್ಲಿ ಮಹಿಳಾ ವೈದ್ಯಕೀಯ ಶಿಕ್ಷಣ ಸೊಸೈಟಿಯು ರೂಪಿತಗೊಂಡಿತು.

1863: ಬಣ್ಣದ ಛಾಯಾಚಿತ್ರಗಳನ್ನು ತಯಾರಿಸುವ ಪ್ರಕ್ರಿಯೆಗೆ ಪೇಟೆಂಟ್ ನೀಡಲಾಯಿತು.

1897: ಪೆನ್ಸಿಲ್ ಅನ್ನು ಚೂಪುಗೊಳಿಸುವ ಯಂತ್ರಕ್ಕೆ ಜೆ.ಎಲ್.ಲವ್ ಪೇಟೆಂಟ್ ಪಡೆದರು.

1909: ವಿಮಾನ ತಯಾರಿಸಲು ಮಿಲಿಯನ್ ಡಾಲರ್ ಕಾರ್ಪೊರೇಷನ್ ಸಂಸ್ಥೆಯನ್ನು ರೈಟ್ ಬ್ರದರ್ಸ್ ರೂಪಿಸಿದರು.

1948: “ಝೂಮಾರ್ ಲೆನ್ಸ್”ಗೆ ಡಾ.ಫ್ರಾಂಕ್ ಜಿ ಬಾಕ್ ಪೇಟೆಂಟ್ ಪಡೆದರು.

1992: 10,000,000 ಮೊಬೈಲ್ ದೂರವಾಣಿಯನ್ನು ಮಾರಾಟ ಮಾಡಲಾಯಿತು.

1996: ರಿಪಬ್ಲಿಕ್ ಆಫ್ ಅಂಗೋಲಾ ಅಧಿಕೃತವಾಗಿ ವಿಶ್ವ ವಾಣಿಜ್ಯ ಸಂಘಟನೆಗೆ ಸೇರಿತು.

ಪ್ರಮುಖ ಜನನ/ಮರಣ:

1926: ಭಾರತೀಯ ಆಧ್ಯಾತ್ಮಿಕ ಗುರು ಮತ್ತು ತತ್ವಜ್ಞಾನಿ ಸತ್ಯ ಸಾಯಿಬಾಬಾ ಜನಿಸಿದರು.

1930: ಭಾರತದ ಗಾಯಕಿ ಮತ್ತು ನಟಿ ಗೀತಾದತ್ ಜನಿಸಿದರು.

1937: ವೈಯರ್ ಲೆಸ್ ಅಲೆಗಳ ತಂತ್ರಜ್ಞಾನದ ಭೌತ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ನಿಧನರಾದರು

1950: ಭಾರತೀಯ ಇಂಡೋಲಾಜಿಸ್ಟ್, ಲೇಖಕ ಮತ್ತು ಶಿಕ್ಷಣ ತಜ್ಞ ನ್ರಿಸಿಂಗಾ ಪ್ರಸಾದ್ ಭಾದುರಿ ಜನಿಸಿದರು

1971: ಭಾರತೀಯ ಚಿತ್ರರಂಗದ ನಟ, ನಿರ್ದೇಶಕ, ಲೇಖಕ, ಮತ್ತು ಚಿತ್ರಕಥೆಕಾರ ಸಾಜಿದ್ ಖಾನ್ ಜನಿಸಿದರು.

1979: ಭಾರತೀಯ ಮೂಲದ ಅಮೇರಿಕಾದ ನಟಿ ಮತ್ತು ಗಾಯಕಿ ಮೆರ್ಲೀ ಓಬೆರಾನ್ ನಿಧನರಾದರು.

1984: ನಟಿ ಮತ್ತು ನೃತ್ಯಗಾತಿ ಅಮೃತಾ ಖಾನ್ವೀಲ್ಕರ್ ಜನಿಸಿದರು

1986: ಖ್ಯಾತ ತೆಲಗು ನಟ ನಾಗ ಚೈತನ್ಯ ಜನಿಸಿದರು.

2003: ತಮಿಳುನಾಡಿನ ಡಿ.ಎಂ.ಕೆ ಪಕ್ಷದ ಪ್ರಮುಖ ನಾಯಕ ಮುರಸೋಲಿ ಮಾರನ್ ನಿಧನರಾದರು.