ಪ್ರಮುಖ ಘಟನಾವಳಿಗಳು:

 • 1639: ಜೆರೆಮಿಯಾ ಮತ್ತು ವಿಲಿಯಂ ಅವರು ಶುಕ್ರನ ಚಲನೆಯನ್ನು ಮೊದಲ ಬಾರಿಗೆ ವೀಕ್ಷಿಸಿದ ಕಾರಣ ಸೌರಮಂಡಲದ ಗಾತ್ರವನ್ನು ಸ್ಥಾಪಿಸಲು ನೆರವಾಯಿತು.

 • 1715: ಲಂಡನ್ನಿನ ಥೇಮ್ಸ್ ನದಿಯು ಹೆಪ್ಪುಗಟ್ಟಿತು.

 • 1871: ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಯೋಜಿಸಲಾಯಿತು.

 • 1874: ಅಮೇರಿಕಾದ ಸಂಶೋಧಕ ಜೋಸೆಫ್ ಗ್ಲಿಡ್ಡೆನ್ ಮುಳ್ಳು ಬೇಲಿಗೆ ಪೇಟೆಂಟ್ ಪಡೆದರು.

 • 1932: ವಾಷಿಂಗ್ಟನ್ನಿನಲ್ಲಿ ಎಫ್.ಬಿ.ಐ. ಕ್ರೈಂ ಲ್ಯಾಬ್ ಅಧಿಕೃತವಾಗಿ ತೆರೆಯಲಾಯಿತು.

 • 1949: ಬ್ರಿಟಿಷ್ ಉಕ್ಕು ಮತ್ತು ಕಬ್ಬಿಣ ಉದ್ಯಮವನ್ನು ರಾಷ್ಟ್ರೀಯತೆ ಮಾಡಲಾಯಿತು.

 • 2011: ವಾಲ್-ಮಾರ್ಟ್ ಮತ್ತು ಟೆಸ್ಕೋ ಅಂತಹ ವಿದೇಶಿ ಸ್ವಾಮ್ಯದ ಚಿಲ್ಲರೆ ಮಾರಾಟಗಾರರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ಭಾರತದ ಸರ್ಕಾರವು ಸಡಿಲಗೊಳಿಸಿತು.

 • 2012: 808 ದಶಲಕ್ಷ ವೀಕ್ಷಣೆಯನ್ನು ಮೀರಿದ ಅತೀ ಹೆಚ್ಚು ವೀಕ್ಷಿಸಿದ ಯುಟ್ಯೂಬ್ ವಿಡಿಯೋ “ಗಂಗ್ನಂಸ್ಟೈಲ್” ಎಂದು ವರದಿಯಾಯಿತು.

 • 2016: ಅಂತರರಾಷ್ಟ್ರೀಯ ಸಂಶೋಧನಾ ತಂಡವು ಅಕಶೇರುಕಗಳಲ್ಲಿ ಕಂಡುಬರುವ 1500 ನೂತನ ವೈರಸ್ ಗಳನ್ನು ಪತ್ತೆ ಮಾಡಿದರು.

ಪ್ರಮುಖ ಜನನ/ಮರಣ:

 • 1675: ಭಾರತದ ಸಿಖ್ ಪಂಥದ ಗುರು ತೇಗ್ ಬಹಾದ್ದೂರ್ ನಿಧನರಾದರು.

 • 1877: ಭಾರತೀಯ ಪೋಲೀಸ್ ಅಧಿಕಾರಿ ಕವಾಸ್ಜಿ ಜಮ್ಶೇದ್ಜಿ ಪೆಟಿಗಾರ್ ಜನಿಸಿದರು.

 • 1941: ಭಾರತ ಮೂಲದ ಡ್ರಮ್ಮರ್ ಮತ್ತು ಗೀತರಚನೆಕಾರ ಪೀಟೆ ಬೆಸ್ಟ್ ಜನಿಸಿದರು.

 • 1943: ಖ್ಯಾತ ಅರ್ಥಶಾಸ್ತ್ರಜ್ಞ ಮಾಂಟೇಕ್ ಸಿಂಗ್ ಅಹುವಾಲಿಯಾ ಜನಿಸಿದರು.

 • 1944: ಬಾಲಿವುಡ್ ಖ್ಯಾತ ನಿರ್ದೇಶಕ ಅಮೋಲ್ ಪಾಲೆಕರ್ ಜನಿಸಿದರು.

 • 1952: ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್ ಜನಿಸಿದರು.

 • 1961: ಬುಕ್ಕರ್ ಪ್ರಶಸ್ತಿ ವಿಜೇತ ಲೇಖಕಿ ಮತ್ತು ರಾಜಕೀಯ ಕಾರ್ಯಕರ್ತೆ ಅರುಂಧತಿ ರಾಯ್ ಜನಿಸಿದರು.

 • 1983: ಬಾಲಿವುಡ್ ನಟಿ ಯಾಮಿ ಗುಪ್ತಾ ಜನಿಸಿದರು.

 • 2005: ಹಿಂದಿ ಚಿತ್ರರಂಗದ ಖ್ಯಾತ ನಟಿ ಜಮುನಾ ಬರುವಾ ನಿಧನರಾದರು.

 • 2014: ಭಾರತೀಯ ವ್ಯವಹಾರಗಳ ಸಚಿವರಾಗಿದ್ದ ಮುರಳಿ ದೇವರಾ ನಿಧನರಾದರು.