ಪ್ರಮುಖ ಘಟನಾವಳಿಗಳು:

 • 1715: ಭಾರತೀಯ ಜೋಳವನ್ನು ಸ್ವಚ್ಚಗೊಳಿಸುವ ಮತ್ತು ಸಂಸ್ಕರಿಸುವ ಪ್ರಕ್ರಿಯೆಗೆ ಸಿಬಿಲ್ಲಾ ಥಾಮಸ್ ಪೇಟೆಂಟ್ ಪಡೆದರು.

 • 1837: ವಿಲಿಯಂ ಕ್ರಾಮ್ಟನ್ ವಿದ್ಯುತ್ ಶಕ್ತಿಯ ರೇಷ್ಮೆ ಮಗ್ಗಗಳಿಗೆ ಪೇಟೆಂಟ್ ಪಡೆದರು.

 • 1839: ದಕ್ಷಿಣದ ಪೂರ್ವ ಭಾರತವನ್ನು ಚಂಡಮಾರುತ ನಾಶಪಡಿಸಿ ಸುಮಾರು 20,000 ಹಡಗುಗಳು ಮತ್ತು 3,00,000 ಜನರು ಮೃತ ಪಟ್ಟರು.

 • 1867: ಡೈನಮೈಟಿಗೆ ಆಲ್ಫ್ರೆಡ್ ನೋಬೆಲ್ ಪೇಟೆಂಟ್ ಪಡೆದರು.

 • 1884: ಆವಿಯಾದ ಹಾಲಿಗೆ ಜೆ.ಬಿ.ಮೆಯನ್ ಬರ್ಗ್ ಪೇಟೆಂಟ್ ಪಡೆದರು.

 • 1983: ವಿಶ್ವದ ಅತಿ ದೊಡ್ಡ ದರೋಡೆ 25,000,000 ಪೌಂಡ್ ಚಿನ್ನವನ್ನು ಇಂಗ್ಲೆಂಡಿನಲ್ಲಿ ದೋಚಲಾಯಿತು.

ಪ್ರಮುಖ ಜನನ/ಮರಣ:

 • 1898: ಭಾರತೀಯ ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ ದೆಬಾಕಿ ಬೊಸ್ ಜನಿಸಿದರು.

 • 1926: ಭಾರತದ 21ನೇ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಜನಿಸಿದರು.

 • 1940: ಪಶ್ಚಿಮ ಬಂಗಾಲದ 21ನೇ ರಾಜ್ಯಪಾಲರಾಗಿದ್ದ ಶ್ಯಾಮಲ್ ಕುಮಾರ್ ಸೆನ್ ಜನಿಸಿದರು.

 • 1948: ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಜನಿಸಿದರು.

 • 1964: ಖ್ಯಾತ ವೈಯಲಿನ್ ವಾದಕ ದ್ವಾರಂ ವೆಂಕಟಸ್ವಾಮಿ ನಾಯ್ಡು ನಿಧನರಾದರು.

 • 1981: ಚಲನಚಿತ್ರಗಳ ಸಂಗೀತ ಸಂಯೋಜಕ ರೈಚಂದ್ ಬೋರಲ್ ನಿಧನರಾದರು.

 • 1983: ಕ್ರಿಕೆಟ್ ಆಟಗಾರ ಝುಲಾನ್ ಗೋಸ್ವಾಮಿ ಜನಿಸಿದರು.

 • 1984: ಭಾರತದ 5ನೇ ಉಪ ಪ್ರಧಾನ ಮಂತ್ರಿ ಯಶವಂತ ರಾವ್ ಚವ್ಹಾಣ್ ಅವರು ನಿಧನರಾದರು.

 • 2014: ಭಾರತದ ನಟಿ, ನೃತ್ಯಗಾರ್ತಿ ಮತ್ತು ನೃತ್ಯ ಸಂಯೋಜಕಿ ಸಿತಾರ ದೇವಿ ನಿಧನರಾದರು.