Categories
e-ದಿನ

ನವೆಂಬರ್-26

 

ಪ್ರಮುಖ ಘಟನಾವಳಿಗಳು:

1716: ಅಮೇರಿಕಾದಲ್ಲಿ ಪ್ರದರ್ಶಿಸಬೇಕಾದ ಮೊದಲ ಸಿಂಹವನ್ನು ಬಾಸ್ಟನ್ನಿನಲ್ಲಿ ಪ್ರದರ್ಶಿಸಲಾಯಿತು.

1867: ಶೈತ್ಯೀಕರಣ ರೈಲ್ ರೋಡ್ ಕಾರಿಗೆ ಜೆ.ಬಿ.ಸುಥೆರ್ಲ್ಯಾಂಡ್ ಪೇಟೆಂಟ್ ಪಡೆದರು.

1895: ಹವಾಯಿಯಲ್ಲಿ ಕಬ್ಬು ಬೆಳೆಗಾರರ ಸಂಘವನ್ನು ಸ್ಥಾಪಿಸಲಾಯಿತು.

1949: ಭಾರತದ ಸಾರ್ವಭೌಮ, ಪ್ರಜಾಪ್ರಭುತ್ವ, ಗಣರಾಜ್ಯವನ್ನು ರೂಪಿಸಿದ ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು.

1998: ಭಾರತದ ಲುಧಿಯಾನದಲ್ಲಿ ಖನ್ನಾ ರೈಲು ದುರಂತದಿಂದ 212 ಜನ ಮೃತ ಪಟ್ಟರು.

2008: ಭಾರತದ ಮುಂಬೈಯಲ್ಲಿ ಭಯೋತ್ಪಾದನೆ ಧಾಳಿ ನಡೆಯಿತು.

ಪ್ರಮುಖ ಜನನ/ಮರಣ:

1904: ಭಾರತೀಯ ಕವಿ, ವಿದ್ವಾಂಸ, ಬರಹಗಾರ, ತತ್ವಜ್ಞಾನಿ ಮತ್ತು ಸಾಂಸ್ಕೃತಿಕ ವಿಮರ್ಶಕ ಕೆ.ಡಿ.ಸೇತ್ನಾ ಜನಿಸಿದರು.

1919: ಇತಿಹಾಸಕಾರ ಮತ್ತು ಶಿಕ್ಷಣತಜ್ಞ ರಾಮ್ ಶರಣ್ ಶರ್ಮಾ ಜನಿಸಿದರು.

1921: ಅಮೂಲ್ ಸಂಸ್ಥೆಯ ಸಂಸ್ಥಾಪಕ, ಉದ್ಯಮಿ ವರ್ಗೀಸ್ ಕುರಿಯನ್ ಜನಿಸಿದರು.

1923: ಭಾರತ ಚಲನಚಿತ್ರಗಳ ಛಾಯಾಗ್ರಾಹಕ ವಿ.ಕೆ.ಮೂರ್ತಿ ಜನಿಸಿದರು.

1924: ಭಾರತದ ಕ್ರಿಕೆಟ್ ಆಟಗಾರ ಜಸು ಪಟೇಲ್ ಜನಿಸಿದರು.

1926: ಭಾರತದ ಕಾರ್ಯಕರ್ತ, ರಾಜಕಾರಣಿ ಮತ್ತು ಲೋಕಸಭೆಯ 10ನೇ ಸ್ಪೀಕರ್ ರಬಿ ರೇ ಜನಿಸಿದರು.

1961: “ಕೋಬ್ರಾ ಬೀರ್” ಸಂಸ್ಥೆಯ ಸಂಸ್ಥಾಪಕ ಕರಣ್ ಮತ್ತು ಬರಣ್ ಬಿಲ್ಲಿಮೋರಿಯಾ ಜನಿಸಿದರು.

1972: ಬಾಲಿವುಡ್ ಚಿತ್ರರಂಗದ ನಟ, ಮತ್ತು ನಿರ್ಮಾಪಕ ಅರ್ಜುನ್ ರಾಮ್ಪಾಲ್ ಜನಿಸಿದರು.

2005: ನಾಥುರಾಮ್ ಗೋಡ್ಸೆ ಅವರ ಅಣ್ಣ ಮತ್ತು ಗಾಂಧಿ ಹತ್ಯೆಯ ಆರೋಪಿ ಗೋಪಾಲ್ ಗೋಡ್ಸೆ ನಿಧನರಾದರು.

2012: ಲೇಖಕ ಮತ್ತು ಭಾಷಾಂತರಕಾರ ಎಂ.ಸಿ.ನಂಬೂದರಿಪಾದ್ ನಿಧನರಾದರು.